Tag: Arag Gnanendra

  • ಸಿದ್ದರಾಮಯ್ಯ ಮೈನಾರಿಟಿ ವೋಟಿಗಾಗಿ ಜೊಲ್ಲು ಸುರಿಸುತ್ತಾರೆ – ಅರಗ ಜ್ಞಾನೇಂದ್ರ

    ಸಿದ್ದರಾಮಯ್ಯ ಮೈನಾರಿಟಿ ವೋಟಿಗಾಗಿ ಜೊಲ್ಲು ಸುರಿಸುತ್ತಾರೆ – ಅರಗ ಜ್ಞಾನೇಂದ್ರ

    – ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮಗ ಅರ್ಹತೆ ಇಲ್ಲದೇ ರಾಜಕೀಯಕ್ಕೆ ಬಂದುಬಿಡುತ್ತಾರೆ

    ಕಾರವಾರ: ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮಗ ಅರ್ಹತೆ ಇಲ್ಲದೇ ರಾಜಕೀಯಕ್ಕೆ ಬಂದುಬಿಡುತ್ತಾರೆ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಆರ್‌ಎಸ್‌ಎಸ್ ಬಗ್ಗೆ ಎಷ್ಟು ಕೆಳಮಟ್ಟದಲ್ಲಿ ಮಾತನಾಡಿದರೆ, ಅಷ್ಟು ವೋಟು ಸಿಗುತ್ತದೆ ಎಂದು ಭಾವಿಸಿದ್ದಾರೆ. ಇದು ಅವರ ಭ್ರಮೆ ಅಷ್ಟೇ. ಸಿದ್ದರಾಮಯ್ಯ ಅವರು ಮೈನಾರಿಟಿ ವೋಟಿಗಾಗಿ ಜೊಲ್ಲು ಸುರಿಸುತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಬೆತ್ತಲಾಗಿ ಕಳ್ಳತನ – ಅಂತರಾಜ್ಯ ಕಳ್ಳ ದಂಪತಿ ಅರೆಸ್ಟ್

    ಬಿಜೆಪಿ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುತ್ತಾರೆ. ಕಾಂಗ್ರೆಸ್ ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರ ಮಗನಂತೆ ಯಾವುದೇ ಯೋಗ್ಯತೆ, ಅರ್ಹತೆ ಇಲ್ಲದೇ ರಾಜಕೀಯಕ್ಕೆ ಬಂದು ಬಿಡುತ್ತಾರೆ. ಬಿಜೆಪಿಯಲ್ಲಿ ಅರ್ಹತೆ, ಯೋಗ್ಯತೆ ಇರುವವರು, ಒಬ್ಬರ ಮಗ ಎಂದು ಮೂಲೆಗೆ ಹಾಕಲಾಗುವುದಿಲ್ಲ. ಯಾರಿಗೆ ಸೇವಾ ಮನೋಭಾವನೆ, ಅರ್ಹತೆ ಇರುತ್ತದೆಯೋ ಅವರು ಮೂಲೆಗೆ ಹೋಗಬಾರದು ಎಂದು ತಿಳಿಸಿದರು.

    ಯಾರಿಗೆ ಸೈದ್ಧಾಂತಿಕವಾಗಿ ಪಕ್ಷ ಕಟ್ಟಲು ಯೋಗ್ಯತೆ ಇಲ್ಲವೋ ಅವರು ಜಾತಿಯನ್ನು ಬಂಡವಾಳ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್, ಜೆಡಿಎಸ್ ಜಾತಿವಾದ ಮಾಡುತ್ತಿದೆ. ಜನ ಅವರನ್ನು ತಿರಸ್ಕಾರ ಮಾಡುತ್ತಾರೆ. ಇವರ ಉದ್ದಾರಕ್ಕಾಗಿ ಜಾತಿಯನ್ನು ಮೇಲೆ ಎಬ್ಬಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

    ದಸರಾದಲ್ಲಿ ಪೊಲೀಸರು ಕೇಸರಿ ಬಣ್ಣದ ವಸ್ತ್ರ ಧರಿಸಿದಕ್ಕೆ ಆಕ್ಷೇಪ ತೆಗೆದಿದ್ದಾರೆ. ದೇಶದಲ್ಲಿ ಕೇಸರಿ ಬ್ಯಾನ್ ಆಗಿದೆಯಾ? ಕೇಸರಿ ಬಣ್ಣ ಪಕ್ಷಕ್ಕೆ ಸೀಮಿತವಾಗಿದೆಯಾ? ಎಂದು ಪ್ರಶ್ನೆ ಮಾಡಿದ ಅವರು, ನಾಳೆ ರಾಷ್ಟ್ರಧ್ವಜದ ಕೇಸರಿ ಬಣ್ಣ ತೆಗೆದು ಹಸಿರು ಬಣ್ಣ ಇದ್ರೆ ಸಾಕು ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ಕೂದಲು – ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

  • ಸಿದ್ದರಾಮಯ್ಯ ಸರ್ಕಾರ ಒಂದು ಕಪ್ಪು ಚುಕ್ಕೆ ಇಲ್ಲದೇ ನಡೆದಿದೆ: ಧ್ರುವ ನಾರಾಯಣ

    ಸಿದ್ದರಾಮಯ್ಯ ಸರ್ಕಾರ ಒಂದು ಕಪ್ಪು ಚುಕ್ಕೆ ಇಲ್ಲದೇ ನಡೆದಿದೆ: ಧ್ರುವ ನಾರಾಯಣ

    – ಕಾಂಗ್ರೆಸ್‍ಗೆ ಅಭಿವೃದ್ಧಿಯೇ ಮಾನದಂಡ

    ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ಒಂದು ಕಪ್ಪು ಚುಕ್ಕೆ ಕೂಡ ಇಲ್ಲದೇ ನಡೆದಿದೆ ಎಂದು ಕಾಂಗ್ರೆಸ್ ಮಾಜಿ ಸಂಸದ ಧ್ರುವ ನಾರಾಯಣ ಹೇಳಿದರು.

    ಗೃಹಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರಿಗೆ ಅಭಿವೃದ್ಧಿಯೇ ಮಾನದಂಡ. ಸಿದ್ದರಾಮಯ್ಯ ಅವರ ಸರ್ಕಾರ ಒಂದು ಕಪ್ಪು ಚುಕ್ಕೆ ಕೂಡಾ ಇಲ್ಲದೇ ನಡೆದಿದೆ. ಬಿಜೆಪಿಗೆ ಮೊದಲ ಸಲ ಸರ್ಕಾರ ಬಂದಾಗ 3 ಸಿಎಂ ಬದಲಾವಣೆಯಾದರು. 5 ಜನ ಭ್ರಷ್ಟಾಚಾರದಲ್ಲಿ ಸಿಲುಕಿದ್ದರು. ಈಗ ಬಂದಿರುವ ಸರ್ಕಾರದಲ್ಲಿ ಅವರ ಶಾಸಕರೇ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.ಇದನ್ನೂ ಓದಿ: ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ

    ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಂತರ ನಾವು ಹೆಚ್ಚು ಗೆದ್ದಿದ್ದು. ದಳ ಹಾಗೂ ಕಾಂಗ್ರೆಸ್ ಒಂದಾದರೆ ಮಾತ್ರ ಪಾಲಿಕೆ ಚುಕ್ಕಾಣಿ ಹಿಡಿಯಬಹುದಾಗಿತ್ತು. ಜೆಡಿಎಸ್ ನಮಗೆ ಅಧಿಕಾರ ಕೂಡಬೇಕಿತ್ತು. ಆದರೆ ಅವರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ:ಪೊಲೀಸರಿಗೆ ಒತ್ತಡ ಇದೆ, ಬೆಳಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡ್ತಾರೆ: ಸತೀಶ್ ಜಾರಕಿಹೊಳಿ

    ಜಿ.ಟಿ.ದೇವೆಗೌಡರು ಕಾಂಗ್ರೆಸ್‍ಗೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ಬರುವುದು ವರಿಷ್ಟರಿಗೆ ಬಿಟ್ಟ ವಿಚಾರ. ಈಗಾಗಲೇ ಜಿ.ಟಿ.ದೇವೇಗೌಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದಾರೆ ಎಂದು ತಿಳಿಸಿದರು.