Tag: Aquarium

  • ಮೀನು ಮೃತಪಟ್ಟಿದ್ದಕ್ಕೆ ಮನನೊಂದು 13ರ ಬಾಲಕ ಆತ್ಮಹತ್ಯೆ

    ಮೀನು ಮೃತಪಟ್ಟಿದ್ದಕ್ಕೆ ಮನನೊಂದು 13ರ ಬಾಲಕ ಆತ್ಮಹತ್ಯೆ

    ತಿರುವನಂತಪುರಂ: ಮೀನು ಸಾವನ್ನಪ್ಪಿದ್ದಕ್ಕೆ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ (Kerala) ಮಲಪ್ಪುರಂ ಜಿಲ್ಲೆಯ ಪೊನ್ನಾಯಿಯ ಚಂಗರಂಕುಲಂನಲ್ಲಿ ನಡೆದಿದೆ.

    ರೋಷನ್ ಮೆನನ್ (13) ಮೃತ ಬಾಲಕ. ರೋಶನ್ ಮೂಕುತಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದ. ಜೊತೆಗೆ ಆತನಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಅಕ್ವೇರಿಯಂ ಇತ್ತು. ಅಕ್ವೇರಿಯಂಯಲ್ಲಿ (Aquarium) ಸಾಕಿದ್ದ ಮೀನು (Fish) ಹಿಂದಿನ ದಿನ ಸಾವನ್ನಪ್ಪಿತ್ತು. ಇದರಿಂದಾಗಿ ರೋಷನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.

    ಮರುದಿನ ರೋಷನ್ ಪಾರಿವಾಳಕ್ಕೆ ಆಹಾರ ನೀಡಲು ಮನೆಯಿಂದ ಹೊರಗೆ ಬಂದಿದ್ದ. ಅದಾದ ಬಳಿಕ ಒಂದು ಗಂಟೆಯಾದರೂ ರೋಷನ್ ಮನೆಗೆ ಮರಳಿ ಬಂದಿಲ್ಲ. ಜೊತೆಗೆ ಮನೆಯ ಸುತ್ತಮುತ್ತಲೂ ಎಲ್ಲೂ ಕಾಣದ ಹಿನ್ನೆಲೆಯಲ್ಲಿ ಆತಂಕಗೊಂಡು ರೋಷನ್ ಕುಟುಂಬಸ್ಥರು ಹುಡಕಲು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: MLC ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ

    ಅವರ ಕುಟುಂಬವು ಮಹಡಿಗೆ ಹೋದಾಗ ಟೆರೇಸ್‍ನಲ್ಲಿ ರೋಷನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಚಂದದ ಹುಡುಗಿ ಫೋಟೋ ತೋರಿಸಿ 50 ಸಾವಿರಕ್ಕೆ ಬೇಡಿಕೆ- ಬೆಂಗ್ಳೂರಲ್ಲಿ ಹೈಫೈ ವೇಶ್ಯಾವಾಟಿಕೆ

  • ಜನಾಕರ್ಷಣೆ ಕಳೆದುಕೊಂಡು ಬಿಕೋ ಎನ್ನುತ್ತಿದೆ ಶಿವಮೊಗ್ಗದ ಮತ್ಸ್ಯಾಲಯ

    ಜನಾಕರ್ಷಣೆ ಕಳೆದುಕೊಂಡು ಬಿಕೋ ಎನ್ನುತ್ತಿದೆ ಶಿವಮೊಗ್ಗದ ಮತ್ಸ್ಯಾಲಯ

    ಶಿವಮೊಗ್ಗ: ಕಳೆದ 12 ವರ್ಷದ ಹಿಂದೆ ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ನಿರ್ಮಾಣವಾಗಿದ್ದ ಶಿವಮೊಗ್ಗದ ಮತ್ಸ್ಯಾಲಯ ಕಾಲ ಕ್ರಮೇಣ ಕಳೆಗುಂದಿದೆ. ಜನಾಕರ್ಷಣೆಯ ಕೇಂದ್ರ ಬಿಂದುವಾಗಬೇಕಿದ್ದ ಮತ್ಸ್ಯ ಸಂಗ್ರಹಾಲಯ ಇಂದು ಜನರಿಲ್ಲದೇ ಬಿಕೋ ಎನ್ನುತ್ತಿದೆ.

    ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿರುವ ಮತ್ಸ್ಯಾಲಯವನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 2008ರಲ್ಲಿ ಈ ಮತ್ಸ್ಯಾಲಯ ಸ್ಥಾಪಿಸಲಾಗಿದೆ. ಆದರೆ ಇಂದು ಈ ಮತ್ಸ್ಯಾಲಯ ಜನಾಕರ್ಷಣೆ ಕಳೆದುಕೊಳ್ಳುತ್ತಿದೆ. ಮತ್ಸ್ಯಾಲಯವನ್ನು ಆರಂಭದಲ್ಲಿ ನೋಡಲು ಮಕ್ಕಳು, ಸಾರ್ವಜನಿಕರು ಮುಗಿಬೀಳುತ್ತಿದ್ದರು. ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದರು. ಆದರೆ ಇಂದು ಇದನ್ನು ಕೇಳುವವರೇ ಇಲ್ಲದಂತಾಗಿದೆ. ಈ ಸಂಗ್ರಹಾಲಯ ಇರುವ ಗಾಂಧಿ ಪಾರ್ಕ್ ಕೂಡ, ಜನಾಕರ್ಷಣೆ ಕಳೆದುಕೊಂಡಿದೆ.

    ಪ್ರವಾಸೋದ್ಯಮದ ಅಭಿವೃದ್ಧಿ ಆಸೆ ಹೊತ್ತು ನಿರ್ಮಾಣವಾಗಿದ್ದ ಮತ್ಸ್ಯಾಲಯ ಸಮರ್ಪಕವಾದ ನಿರ್ವಹಣೆ ಇಲ್ಲದೆ ಕಳೆಗುಂದಿದೆ. ತರಹೇವಾರಿ ಮೀನುಗಳಿರಬೇಕಾದ ಅಕ್ವೇರಿಯಂಗಳು ಇಂದು ಜಾಳು ಜಾಳಾಗಿದ್ದು, ಇದನ್ನ ನೋಡಲು ಜನರು ಬಾರದೇ ಮತ್ಸ್ಯಾಲಯ ಬಿಕೋ ಎನ್ನುವಂತಾಗಿದೆ.

    ವಿವಿಧ ಜಾತಿಯ, ದೇಶ ವಿದೇಶದ ಮೀನುಗಳನ್ನು ಪರಿಚಯಿಸುವಂತಾಗಬೇಕಿದ್ದ ಮತ್ಸ್ಯಾಲಯದಲ್ಲಿ ಕೇವಲ ಸಾಮಾನ್ಯ ತಳಿಯ ಮೀನುಗಳನ್ನು ಇಡಲಾಗಿದೆ. ಮಕ್ಕಳಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಹಣ ಖರ್ಚು ಮಾಡಿ ಮತ್ಸ್ಯಾಲಯ ನಿರ್ಮಿಸಿದ್ದು, ಸದುಪಯೋಗವಾಗದೇ ಇಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಬಂದು ವೀಕ್ಷಿಸುವಂತಾಗಿದೆ. ದೇಶ-ವಿದೇಶದ ಮೀನುಗಳ ಜೊತೆಯಲ್ಲಿ ಸಮುದ್ರದ ತರಹೇವಾರಿ ಮೀನುಗಳನ್ನು ಇಲ್ಲಿ ಸಂಗ್ರಹಿಸಿ ಆಕರ್ಷಣೆ ಜೊತೆಗೆ ಬೋಧನೆಗೂ ಅವಕಾಶ ಮಾಡಿಕೊಡಬೇಕಾಗಿತ್ತು. ಆದರೆ ಇದ್ಯಾವುದು ಇಲ್ಲಿ ಆಗಿಲ್ಲ.

    ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಇದೇ ಅಭಿವೃದ್ಧಿ ಅಂತಾರೆ. ತಮ್ಮ ಕಾರ್ಯವೈಖರಿಯನ್ನು ಸಮರ್ಥಿಸಿಕೊಳ್ಳುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ಕಾರದ ಪ್ರಮುಖ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಇನ್ನಾದರೂ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಮತ್ಸ್ಯಾಲಯ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.

  • ಮೈಸೂರಿನಲ್ಲಿ ಮತ್ಯ್ಸಲೋಕ- ದೇಶ ವಿದೇಶಿ ತಳಿಗಳ ಕಲರ್ ಕಲರ್ ಮೀನುಗಳು

    ಮೈಸೂರಿನಲ್ಲಿ ಮತ್ಯ್ಸಲೋಕ- ದೇಶ ವಿದೇಶಿ ತಳಿಗಳ ಕಲರ್ ಕಲರ್ ಮೀನುಗಳು

    ಮೈಸೂರು: ಸಾಂಸ್ಕೃತಿಕ ನಗರಿಯ ದಸರಾದಲ್ಲಿ ಮೊದಲ ಬಾರಿಗೆ ಮತ್ಯ್ಸ ಲೋಕವೇ ಅನಾವರಣಗೊಂಡಿದೆ. ದೇಶ ವಿದೇಶ ಕಲರ್ ಕಲರ್ ಮೀನಗಳು ನೋಡುಗರ ಕಣ್ಮನ ಸೆಳೆಯುತ್ತಿದೆ.

    ರೈತರಿಗೆ ಮೀನುಗಾರಿಗೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮತ್ಯ್ಸ ಮೇಳವನ್ನು ಮೀನುಗಾರಿಗೆ ಇಲಾಖೆ ಆಯೋಜನೆ ಮಾಡಿದೆ. ದೇಶ ವಿದೇಶಗಳಿಂದ 100ಕ್ಕೂ ಹೆಚ್ಚು ಬಗೆಯ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಉನ್ನತ ಶಿಕ್ಷಣ ಸಚಿವ ಜಿಟಿ ದೇವೆಗೌಡ ಅವರು ಮತ್ಯ್ಸ ಮೇಳವನ್ನು ಉದ್ಘಾಟನೆ ಮಾಡಿದರು.

    ದೇಶಿಯ ಮೀನುಗಳಾದ ಸಾಮಾನ್ಯ ಗೆಂಡೆ, ಹುಲ್ಲುಗೆಂಡೆ, ಬೆಳ್ಳಿ ಗೆಂಡೆ, ಕಾಟ್ಲಾ, ರೋಹು, ಮೃಗಾಲ್ ಮೀನುಗಳ ಎಲ್ಲರ ಗಮನ ಸೆಳೆದವು. ಅಕ್ವೇರಿಯಂನಲ್ಲಿ ವಿವಿಧ ಬಗೆಯ ಕಲರ್ ಕಲರ್ ಸಾಕು ಮೀನುಗಳನ್ನು ಇಡಲಾಗಿದೆ.

    ಪ್ರಮುಖವಾಗಿ ಅಮೆಜಾನಿನ ಸ್ಟಿಂಗ್ ರೇ, ಏಶಿಯಾದ ಅರೋವಾನ, ಆಫ್ರಿಕಾದ ಚಿಚಿಲಿಡ್ಸ್, ಈಲ್ಸ್, ಬ್ಲೂ ಚನ್ನ, ತೈರೆ ಈಲ್ಸ್, ಹೈಳಿನ್ ಶಾರ್ಕ್, ಜಾಯಿಂಟ್ ಗೌರಮಿ, ಸ್ನೇಕ್‍ಹೆಡ್ಸ್ ಮೀನುಗಳನ್ನು ಇಡಲಾಗಿದೆ. ಮತ್ಯ್ಸ ಮೇಳದಲ್ಲಿ ಮೀನಗಳ ಪ್ರದರ್ಶನ ಅಲ್ಲದೇ ಕೊಡವೆ, ಹರಿಗೋಲು ಹಾಗೂ ವಿವಿಧ ಬಗೆಯ ಬಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv