Tag: AQI

  • ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ ; GRAP ಹಂತ IIರ ನಿಯಮಗಳು ಜಾರಿ

    ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ ; GRAP ಹಂತ IIರ ನಿಯಮಗಳು ಜಾರಿ

    – ಮುಂದಿನ ಒಂದು ವಾರದಲ್ಲಿ AQI 600ರ ಗಡಿ ದಾಟುವ ಎಚ್ಚರಿಕೆ

    ನವದೆಹಲಿ : ದೀಪಾವಳಿ (Diwali) ಮೊದಲ ದಿನವೇ ದೆಹಲಿಯಲ್ಲಿ ವಾಯು ಮಾಲಿನ್ಯ (Air Pollution) ಹೆಚ್ಚಿದೆ. ಕಳೆದ ಏಳು ದಿನಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಸದ್ಯ AQI 400ರ ಗಡಿ ದಾಟಿದೆ. ಮುಂದಿನ ಒಂದು ವಾರದಲ್ಲಿ ಈ ಪ್ರಮಾಣ AQI 600 ಗಡಿ ದಾಟಬಹುದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಎಚ್ಚರಿಕೆ ನೀಡಿದೆ.

    ದೆಹಲಿಯ 38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 24 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ʼತುಂಬಾ ಕಳಪೆʼ ಮಟ್ಟವನ್ನು ದಾಖಲಿಸಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಸೋಮವಾರ ಬೆಳಗ್ಗೆ, ಆನಂದ್ ವಿಹಾರ್ ನಗರದಲ್ಲಿ ಅತ್ಯಂತ ವಿಷಕಾರಿ ಗಾಳಿಯನ್ನು ವರದಿ ಮಾಡಿದೆ, AQI 417 ರೊಂದಿಗೆ, ಇದು ʼತೀವ್ರ ಕಳಪೆʼ ವರ್ಗಕ್ಕೆ ಇಳಿದಿದೆ. ಇದನ್ನೂ ಓದಿ: ಕುಣಿಗಲ್‌ ಫ್ಲೈಓವರ್‌ನಲ್ಲಿ ಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ

    ವಜೀರ್‌ಪುರ (364), ವಿವೇಕ್ ವಿಹಾರ್ (351), ದ್ವಾರಕಾ (335), ಮತ್ತು ಆರ್‌ಕೆ ಪುರಂ (323) ಸೇರಿದಂತೆ 12 ನಿಲ್ದಾಣಗಳು ಗಾಳಿಯ ಗುಣಮಟ್ಟವನ್ನು ʼತುಂಬಾ ಕಳಪೆʼ ವ್ಯಾಪ್ತಿಯಲ್ಲಿ ವರದಿ ಮಾಡಿವೆ. ಸಿಪಿಸಿಬಿ ದತ್ತಾಂಶದ ಪ್ರಕಾರ, ಸಿರಿ ಫೋರ್ಟ್, ದಿಲ್ಶಾದ್ ಗಾರ್ಡನ್ ಮತ್ತು ಜಹಾಂಗೀರ್‌ಪುರಿ ಮುಂತಾದ ಇತರ ಪ್ರದೇಶಗಳು 318 ಎಕ್ಯೂಐ ದಾಖಲಿಸಿವೆ. ಪಂಜಾಬಿ ಬಾಗ್ 313, ನೆಹರು ನಗರ 310, ಅಶೋಕ್ ವಿಹಾರ್ 305 ಮತ್ತು ಬವಾನಾ 304ರ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿವೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

    ದೆಹಲಿಯಲ್ಲಿ ಮಾಲಿನ್ಯ ಹೆಚ್ಚುತ್ತಿರುವ ಹಿನ್ನಲೆ GRAP ಹಂತ IIರ ನಿಯಮಗಳನ್ನು ಜಾರಿ ಮಾಡಿದೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ II ಆಕ್ಷನ್ ಕ್ವಾಲಿಟಿ ಇಂಡೆಕ್ಸ್ (AQI) 301 ರಿಂದ 400ರವರೆಗಿನ ʼಅತ್ಯಂತ ಕಳಪೆʼ ವರ್ಗಕ್ಕೆ ಸೇರಿದಾಗ ಜಾರಿಗೊಳಿಸಲಾಗುತ್ತದೆ. ಇದು ಹಂತ I ನ ನಿಯಮಗಳನ್ನು ಸೇರಿಸಿ ಜಾರಿಯಲ್ಲಿರುತ್ತದೆ. ಇದನ್ನೂ ಓದಿ: ಹಾಸನಾಂಬೆ ದರ್ಶನ ಪಡೆದು ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಇಬ್ಬರು ದುರ್ಮರಣ

    ಈ ನಿಯಮಗಳ ಪ್ರಕಾರ ಮಾಲಿನ್ಯ ನಿಯಂತ್ರಣಕ್ಕೆ ಬರುವವರೆಗೂ ಕಟ್ಟಡ ನಿರ್ಮಾಣ ಕಾಮಗಾರಿಗಳ ನಿಲ್ಲಿಸಬೇಕಾಗುತ್ತದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಓಪನ್ ಈಟರಿಗಳಲ್ಲಿ ತಂದೂರ್‌ಗಳಲ್ಲಿ ಕಲ್ಲಿದ್ದಲು ಬಳಕೆ ನಿಷೇಧ ಮಾಡಲಾಗುತ್ತದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಡೀಸೆಲ್ ಜನರೇಟರ್‌ಗಳ ಬಳಕೆಯನ್ನು ನಿರ್ಬಂಧಿಸಲಾಗುತ್ತದೆ. ಇದನ್ನೂ ಓದಿ: ನಾಡಿನಾದ್ಯಂತ ದೀಪಾವಳಿ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ

    ಅಂತರ್ ರಾಜ್ಯ ಬಸ್‌ಗಳ ಪ್ರವೇಶವನ್ನು CNG, ಎಲೆಕ್ಟ್ರಿಕ್ ಅಥವಾ BS-VI ಡೀಸೆಲ್ ಇಂಧನದ್ದಕ್ಕೆ ಮಾತ್ರ ಸೀಮಿತಗೊಳಿಸುವುದು. ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು, CNG ಮತ್ತು ಎಲೆಕ್ಟ್ರಿಕ್ ಬಸ್‌ಗಳನ್ನು ಹೆಚ್ಚಿಸುವುದು, ಮೆಟ್ರೋ ಸೇವೆಗಳ ಆಪರೇಷನ್ ಫ್ರೀಕ್ವೆನ್ಸಿಯನ್ನು ಹೆಚ್ಚಿಸುವುದು, ಖಾಸಗಿ ವಾಹನಗಳನ್ನು ತಡೆಯಲು ಪಾರ್ಕಿಂಗ್ ಶುಲ್ಕಗಳನ್ನು ಹೆಚ್ಚಿಸಲಾಗುವುದು. ಇದನ್ನೂ ಓದಿ: ಊರಿಗೆ ತೆರಳಿದ ಜನ – ಮೆಜೆಸ್ಟಿಕ್‌ ಬಸ್‌ನಿಲ್ದಾಣ ಖಾಲಿ ಖಾಲಿ

    ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ದೀಪಾವಳಿಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ನಿವಾಸಿಗಳಿಗೆ ಶುಭ ಹಾರೈಸಿದರು ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲರೂ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಬ್ರೇಕ್‌

    ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಪಟಾಕಿಗಳನ್ನು ಬೆಳಿಗ್ಗೆ 6ರಿಂದ 7ರವರೆಗೆ ಮತ್ತು ನಂತರ ರಾತ್ರಿ 8ರಿಂದ ರಾತ್ರಿ 10ರವರೆಗೆ ಮಾತ್ರ ಮಾರಾಟ ಮಾಡಲು ಅವಕಾಶವಿರುತ್ತದೆ ಮತ್ತು ಅಕ್ಟೋಬರ್ 18 ರಿಂದ 20ರವರೆಗೆ ಮಾರಾಟ ಮಾಡಲಾಗುತ್ತದೆ. ದೀಪಗಳನ್ನು ಬೆಳಗಿಸುವ ಮೂಲಕ, ರಂಗೋಲಿ ಬಿಡಿಸುವ ಮೂಲಕ ಮತ್ತು ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲು  ಜನರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

  • ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ದಟ್ಟ ಮಂಜು – 100ಕ್ಕೂ ಅಧಿಕ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ

    ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ದಟ್ಟ ಮಂಜು – 100ಕ್ಕೂ ಅಧಿಕ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ

    ನವದೆಹಲಿ: ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ದಟ್ಟ ಮಂಜು (Dense fog) ಆವರಿಸಿದ್ದು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಅಲ್ಲದೇ ಕಡಿಮೆ ಗೋಚರತೆಯಿಂದಾಗಿ 100ಕ್ಕೂ ಅಧಿಕ ವಿಮಾನಗಳ (Flights) ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ.

    ದಟ್ಟ ಮಂಜಿನಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಸಂಭವಿಸಿದೆ. CAT-III ಸಾಮರ್ಥ್ಯದ ವಿಮಾನಗಳು ಮಾತ್ರ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಹಾಗೂ ಟೇಕಾಫ್ ಆಗುತ್ತಿವೆ. ವಿಮಾನ ಕಾರ್ಯಾಚರಣೆಯ ಸ್ಥಿತಿಗತಿ ಬಗ್ಗೆ ತಿಳಿದುಕೊಂಡು ಏರ್‌ಪೋರ್ಟ್‌ಗೆ ಹೋಗಿ ಎಂದು ಇಂಡಿಗೊ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು | ದರ್ಶನಕ್ಕೆ ಪಾಸ್‌ ಸಿಗದಿದ್ದಕ್ಕೆ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ ಭಕ್ತ!

    ಇನ್ನೂ Flightradar.com ಮಾಹಿತಿ ಪ್ರಕಾರ 100ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆಯಲ್ಲಿ ಏರುಪೇರಾಗಿದೆ. ಈ ನಡುವೆ ವಿಮಾನಗಳ ಕಾರ್ಯಾಚರಣೆ ಬಗ್ಗೆ ವಿಮಾನಯಾನ ಕಂಪನಿಗಳ ಜೊತೆ ಸಂಪರ್ಕದಲ್ಲಿರಿ ಎಂದಿರುವ ದೆಹಲಿ ವಿಮಾನ ನಿಲ್ದಾಣವು, ಉಂಟಾದ ಸಮಸ್ಯೆಗೆ ಪ್ರಯಾಣಿಕರ ಕ್ಷಮೆ ಕೋರಿದೆ. ಇದನ್ನೂ ಓದಿ: ಬೈಕ್ ನಿಲ್ಲಿಸಲು ಮೆಟ್ರೋ ಪಾರ್ಕಿಂಗ್‌ ಬಳಸುತ್ತಿದ್ದರೆ ಹುಷಾರಾಗಿರಿ!

    ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ ಸುಮಾರು 1,300 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ಇದನ್ನೂ ಓದಿ: Tirupati Stampede: ಗಾಯಗೊಂಡ ಗಾಯಾಳುಗಳಿಗೆ ವಿಶೇಷ ದರ್ಶನ, ಅಧಿಕಾರಿಗಳು ಅಮಾನತು

  • ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ – GRAP-III ನಿರ್ಭಂಧ ತೆರವು

    ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ – GRAP-III ನಿರ್ಭಂಧ ತೆರವು

    ನವದೆಹಲಿ: ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟದಲ್ಲಿ (Delhi Air Quality) ಸುಧಾರಣೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ ವಿಧಿಸಲಾಗಿದ್ದ 3ನೇ ಹಂತದ ನಿರ್ಬಂಧಗಳನ್ನು‌ ತೆರವುಗೊಳಿಸಲಾಗಿದೆ. ಜೊತೆಗೆ BS-III ಪೆಟ್ರೋಲ್ ಮತ್ತು BS-IV ಡೀಸೆಲ್ ವಾಹನಗಳ ಓಡಾಟದ ಮೇಲಿನ ನಿರ್ಬಂಧಗಳನ್ನೂ ಸಡಿಲಗೊಳಿಸಲಾಗಿದೆ.

    ಭಾನುವಾರ (ಇಂದು) ದೆಹಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಅಂಕಿ – ಅಂಶಗಳ ಪ್ರಕಾರ, ಮಧ್ಯಾಹ್ನ 2 ಗಂಟೆ ವೇಳೆ ದೆಹಲಿಯ ಎಕ್ಯೂಐ 348 ಆಗಿತ್ತು, ಇದು ಮಧ್ಯಾಹ್ನ 3 ಗಂಟೆ ವೇಳೆಗೆ 343 ಹಾಗೂ ಸಂಜೆ 5 ಗಂಟೆ ಸುಮಾರಿಗೆ 335 ದಾಖಲಾಗಿದೆ. ಇದು ಸುಧಾರಣೆಯ ಸ್ಪಷ್ಟ ಸಂಕೇತ ಎಂದು ವರದಿ ಹೇಳಿದೆ.

    ಈ ಸಕಾರಾತ್ಮಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಎನ್‌ಸಿಆರ್‌ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಿಧಿಸಲಾಗಿದ್ದ 3ನೇ ಹಂತದ ನಿರ್ಬಂಧಗಳನ್ನು ಸರ್ಕಾರ ತೆರವುಗೊಳಿಸಿದೆ. ಇದನ್ನೂ ಓದಿ: ಪುರಿಯ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ – ದೇವಾಲಯದ ಸುತ್ತ ಪೊಲೀಸ್ ಬಿಗಿಭದ್ರತೆ

    ಹಂತ-1, ಹಂತ – 2ರ ನಿರ್ಬಂಧಗಳು ಮುಂದುವರಿಯಲಿವೆ. ಇದರೊಂದಿಗೆ ಕೈಗಾರಿಕಾ ಘಟಕಗಳು ಹಾಗೂ ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ವಿಧಿಸಲಾದ ನಿರ್ಬಂಧಗಳು ಮುಂದಿನ ಆದೇಶದವರೆಗೆ ಮುಂದುವರಿಯಲಿವೆ ಎಂದು ಸರ್ಕಾರ ಹೇಳಿದೆ ಎನ್ನಲಾಗಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಕೆನ್ನೆಯಂತೆ ನಯವಾದ ರಸ್ತೆಗಳನ್ನು ನಿರ್ಮಿಸುತ್ತೇನೆ: ಬಿಜೆಪಿ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

  • ಪಾಕಿಸ್ತಾನದ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರ – 1,600ಕ್ಕೆ ತಲುಪಿದ AQI

    ಪಾಕಿಸ್ತಾನದ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರ – 1,600ಕ್ಕೆ ತಲುಪಿದ AQI

    – ಸರ್ಕಾರದ ಯಾವ್ದೇ ಕ್ರಮಗಳೂ ಮಾಲಿನ್ಯ ಕಡಿಮೆ ಮಾಡಲಾಗುತ್ತಿಲ್ಲ
    – ಇನ್ನೂ ಮೂರು ತಿಂಗಳು ಮದುವೆ ಆಗುವಂತಿಲ್ಲ

    ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟದಿಂದ ನಲುಗಿರುವ ಪಾಕ್‌ ಈಗ ವಾಯು ಮಾಲಿನ್ಯ (Pakistan Air Pollution) ಕಂಟಕಕ್ಕೆ ತುತ್ತಾಗಿದೆ. ಪಾಕಿಸ್ತಾನದ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರವಾಗಿ ಮಾರ್ಪಟ್ಟಿದೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕ 1,600ಕ್ಕೆ ತಲುಪಿದೆ. ಎಲ್ಲೆಂದರಲ್ಲಿ ವಿಷಪೂರಿತ ಹೊಗೆಯಿಂದ ಜನರು ಉಸಿರಾಡುವುದಕ್ಕೂ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ವಿಸ್ ಮಾನಿಟರ್ IQAir ಪ್ರಕಾರ, ಶುಕ್ರವಾರ ಬೆಳಿಗ್ಗೆ ಲಾಹೋರ್‌ (Lahore) ವಾಯು ಗುಣಮಟ್ಟ ಸೂಚ್ಯಂಕ 1,587 ನಷ್ಟಿತ್ತು.

    ಅಪಾಯಮಟ್ಟ ಮೀರಿದ ವಾಯು ಮಾಲಿನ್ಯದಿಂದ ಉಸಿರಾಟದ ತೊಂದರೆ, ಅಸ್ತಮಾ ರೋಗಗಳಿಗೆ ಜನ ತುತ್ತಾಗುತ್ತಿದ್ದು, ಈವರೆಗೆ 15,000ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ಕಾಲದಲ್ಲಿ ಹಸಿರು ಉದ್ಯಾನಗಳಿಗೆ ಹೆಸರುವಾಸಿಯಾಗಿದ್ದ ಲಾಹೋರ್‌ ಈಗ ವಿಶ್ವದ ಕಲುಷಿತ ನಗರ (Worldʼs Most Polluted City) ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ವಾಹನಗಳ ಹೊರಸೂಸುವಿಕೆ, ಕಟ್ಟಡ ನಿರ್ಮಾಣಗಳಿಂದ ಬರುವ ಧೂಳು ಹಾಗೂ ಕೈಗಾರಿಕಾ ಮಾಲಿನ್ಯ ಇದಕ್ಕೆ ಕಾರಣ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ವಾಯುಮಾಲಿನ್ಯ ಕಂಟಕ – ಜನರ ಓಡಾಟಕ್ಕೆ ನಿಷೇಧ, ಅಂಗಡಿ-ಮಾರ್ಕೆಟ್‌ ತೆರೆಯಲು ಮಿತಿ

    ಆರೋಗ್ಯ ತಜ್ಞರ ಎಚ್ಚರಿಕೆ ಏನು?
    ವಾಯು ಗುಣಮಟ್ಟ ಅಪಾಯಮಟ್ಟ ಮೀರಿದ ಹಿನ್ನೆಲೆ ಪಾಕ್‌ ಸರ್ಕಾರವು ಈ ವಾರದ ಅಂತ್ಯದವರೆಗೆ ಶಾಲೆಗಳು, ಉದ್ಯಾನವನ ಮತ್ತು ವಸ್ತುಸಂಗ್ರಹಾಲಯಗಳನ್ನು ಮುಚ್ಚಲು ಸ್ಥಳೀಯ ಸರ್ಕಾರಗಳಿಗೆ ಸೂಚನೆ ಕೊಟ್ಟಿದೆ. ಜೊತೆಗೆ ಮಾಸ್ಕ್‌ ಕಡ್ಡಾಯಗೊಳಿಸಿದ್ದು, ಕಚೇರಿ ಕೆಲಸದ ಸಮಯವನ್ನು ಕಡಿತಗೊಳಿಸಿದೆ. ಮೂರು ತಿಂಗಳು ಮದುವೆ ಕಾರ್ಯಕ್ರಮಗಳಿಗೆ ನಿಷೇಧ ಹೇರಿದೆ. ಆದಾಗ್ಯೂ ಸರ್ಕಾರದ ಯಾವುದೇ ಕ್ರಮಗಳೂ ಮಾಲಿನ್ಯ ಕಡಿಮೆ ಮಾಡಲು ಸಹಾಯಕವಾಗುತ್ತಿಲ್ಲ. ಹಾಗಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ

    ಸರ್ಕಾರ ಮಾಲಿನ್ಯದ ಮೂಲಗಳನ್ನು ಗುರುತಿಸಿ ನಿಯಂತ್ರಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕು. ಜೊತೆಗೆ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕು. ಏರ್ ಪ್ಯೂರಿಫೈಯರ್‌ಗಳನ್ನು ಬಳಸುವಂತೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

    ಹೆಚ್ಚಿದ ರೋಗಿಗಳ ಸಂಖ್ಯೆ:
    ವರದಿಗಳ ಪ್ರಕಾರ, ಲಾಹೋರ್‌ನ ಆಸ್ಪತ್ರೆಗಳು ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಮತ್ತು ಎದೆಯ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಂದ ತುಂಬಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮೇಯೊ ಆಸ್ಪತ್ರೆಯಲ್ಲಿ 4,000ಕ್ಕೂ ಹೆಚ್ಚು ರೋಗಿಗಳು, ಜಿನ್ನಾ ಆಸ್ಪತ್ರೆಯಲ್ಲಿ 3,500 ರೋಗಿಗಳು, ಗಂಗಾರಾಮ್ ಆಸ್ಪತ್ರೆಯಲ್ಲಿ 3,000 ರೋಗಿಗಳು ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 2,000ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದಾರೆ. ಅಸ್ತಮಾ ಮತ್ತು ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳು ಮತ್ತು ರೋಗಿಗಳು ಮಾಲಿನ್ಯ ಪ್ರದೇಶದಿಂದ ದೂರ ಉಳಿಯುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಪ್ರಾಣಾಪಾಯಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ವೈದ್ಯಕೀಯ ತಜ್ಞ ಅಶ್ರಫ್ ಜಿಯಾ ಎಚ್ಚರಿಸಿದ್ದಾರೆ.

    ನವೆಂಬರ್ 10 ರಂದು ಪಾಕಿಸ್ತಾನದ ಪಂಜಾಬ್ ಪ್ರದೇಶದ ಕೆಲವು ಭಾಗಗಳಲ್ಲಿ ವಾಯು ಗುಣಮಟ್ಟದ ಸೂಚ್ಯಂಕವು 1,900 ಕ್ಕಿಂತ ಹೆಚ್ಚು ದಾಖಲಾಗಿತ್ತು. ಬಳಿಕ ಕೊಂಚ ಇಳಿಕೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

  • ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ನವದೆಹಲಿ: ಇಡೀ ವಿಶ್ವದಲ್ಲೇ ಮಾಲಿನ್ಯಯುತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ದೆಹಲಿ (Delhi Air Pollution), ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಜನ ಉಸಿರಾಡುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣೆಯ ಆಯೋಗವು (CAQM) ಮಾಲಿನ್ಯ ನಿಯಂತ್ರಣಕ್ಕೆ 3ನೇ ಹಂತದ ಕ್ರಮ (ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP-III) ಜಾರಿಗೆ ಮುಂದಾಗಿದೆ. ನವೆಂಬರ್‌ 15ರ ಶುಕ್ರವಾರದಿಂದಲೇ ಈ ಕಟ್ಟುನಿಟ್ಟಿನ ಕ್ರಮ ಜಾರಿಗೆ ಬರಲಿವೆ.

    ಏನೇನು ಕ್ರಮ ?
    ಜಿಆರ್‌ಎಪಿ-3 (GRAP-III) ಜಾರಿಯಲ್ಲಿರುವವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲೆಯಿಂದ ವಿನಾಯಿತಿ ನೀಡಲಾಗುತ್ತಿದ್ದು, ಆನ್‌ಲೈನ್ ಮೂಲಕ ತರಗತಿ ನಡೆಸಲು ಸೂಚನೆ ನೀಡಲಾಗಿದೆ. BS-3 ಪೆಟ್ರೋಲ್ ಡಿಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗುತ್ತದೆ. ಸಿಎನ್‌ಜಿ, ಇವಿ ಸೇರಿದಂತೆ ಅಂತರರಾಜ್ಯಗಳ BS4 ಡಿಸೇಲ್ ಬಸ್‌ಗಳಿಗೆ ಮಾತ್ರ ದೆಹಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ತುರ್ತು ಅಲ್ಲದ ನಿರ್ಮಾಣ ಮತ್ತು ಕಟ್ಟಡ ತೆರವು ಕಾರ್ಯಕ್ಕೆ ತಡೆ ನೀಡಲಾಗಿದ್ದು, ಸರ್ಕಾರಿ ಕಾಮಗಾರಿ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಟ್ಟಡಗಳ ಕಾಮಗಾರಿಗೆ ಮಾತ್ರ ಅನುಮತಿ ನೀಡಲಾಗಿದೆ. ಜೊತೆಗೆ ರಸ್ತೆಗಳಲ್ಲಿ ನೀರು ಚಿಮುಕಿಸುವುದನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ದೆಹಲಿ ಎನ್‌ಸಿಎಆರ್‌ನಲ್ಲಿ 5ನೇ ತರಗತಿವರೆಗಿನ ಶಾಲೆಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಮುಖ್ಯವಾಗಿ ದೆಹಲಿ ನಿವಾಸಿಗಳು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಕೆಗೆ ಆದ್ಯತೆ ನೀಡಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಹೇಳಿದೆ.

    ಅಪಾಯ ಮಟ್ಟ ಮೀರಿದ ಮಾಲಿನ್ಯ:
    ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ರಾಜಧಾನಿ ಭಾಗದ ಹಲವು ಪ್ರದೇಶಗಳಲ್ಲಿ ಎಕ್ಯೂಐ ಪ್ರಮಾಣ 450 ದಾಟಿದೆ. ಆನಂದ ವಿಹಾರ್, ಅಶೋಕ್ ವಿಹಾರ್, ಬವಾನಾ, ದ್ವಾರಕಾ, ಜಹಾಂಗೀರ್‌ಪುರಿ, ಮುಂಡ್ಕ, ನಜಾಫ್‌ಗಡ, ಲಾಜ್‌ಪತ್ ನಗರ್, ಪತ್ಪರ್‌ಗಂಜ್, ಪಂಜಾಬಿ ಬಾಗ್, ಆರ್‌ಕೆ ಪುರಂ, ರೋಹಿಣಿ, ವಿವೇಕ್ ವಿಹಾರ್ ಮತ್ತು ವಾಜಿರ್‌ಪುರ ಪ್ರದೇಶಗಳನ್ನು ಎಕ್ಯೂಐ ಸರಾಸರಿ ‘ತೀವ್ರ’ ಸ್ವರೂಪದ ವರ್ಗದಲ್ಲಿ ಗುರುತಿಸಲಾಗಿದ್ದು, ಬೆಳಿಗ್ಗೆ 6 ಗಂಟೆ ಸುಮಾರಿಗೆ 450ಕ್ಕಿಂತ ಅಧಿಕವಿತ್ತು.

    ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಎಕ್ಯೂಐ ಮಟ್ಟವು ಶೂನ್ಯದಿಂದ 50 ರಷ್ಟಿದ್ದರೆ ಉಸಿರಾಟಕ್ಕೆ ಯೋಗ್ಯ ಗಾಳಿ, 51 ರಿಂದ 100 ರಷ್ಟಿದ್ದರೆ ಸಮಾಧಾನಕರ, 101 ರಿಂದ 200 ರಷ್ಟಿದ್ದರೆ ಸಾಧಾರಣ, 201 ರಿಂದ 300 ರಷ್ಟಿದ್ದರೆ ಕಳಪೆ ಹಾಗೂ 301 ರಿಂದ 400 ರಷ್ಟಿದ್ದರೆ ಅತ್ಯಂತ ಕಳಪೆ, 401 ರಿಂದ 450ರಷ್ಟು ಕಂಡು ಬಂದರೆ ತೀವ್ರ ಕಳಪೆ ಹಾಗೂ 450ಕ್ಕಿಂತ ಹೆಚ್ಚಾದರೆ ಅತ್ಯಂತ ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ.

    300ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ:
    ಗುರುವಾರ (ನ.14) ಬೆಳಿಗ್ಗೆ ದಟ್ಟನೆಯ ಮಂಜು ಆವರಿಸಿದ್ದನ್ನು ಕಂಡು ದೆಹಲಿಯ ಜನ ಕಂಗಾಲಾಗಿದ್ದಾರೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AIQ) ಮಟ್ಟ ಅಪಾಯಕಾರಿ ಹಂತದತ್ತ ತಲುಪುತ್ತಿದೆ. ಮುಂಜಾನೆ AQI 452ರ ಗಡಿ ದಾಟಿದೆ. ಇದರಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ಗೋಚರತೆ ಕಡಿಮೆಯಾಗಿದ್ದು, 300 ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಫ್ಲೈಟ್‌ರಾಡಾರ್ ತಿಳಿಸಿದೆ.

  • ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ – ಪ್ರಾಥಮಿಕ ಶಾಲೆಗಳಲ್ಲಿ ಆನ್‌ಲೈನ್ ಕ್ಲಾಸ್

    ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ – ಪ್ರಾಥಮಿಕ ಶಾಲೆಗಳಲ್ಲಿ ಆನ್‌ಲೈನ್ ಕ್ಲಾಸ್

    ನವದೆಹಲಿ: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ರಾಷ್ಟ್ರ ರಾಜಧಾನಿ ದೆಹಲಿ (Delhi) ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಮಂಜಿನ ಹೊದಿಕೆ, ಗ್ಯಾಸ್‌ ಚೇಂಬರ್‌ ಆಗಿ ಬದಲಾಗಿವೆ. ಉಸಿರಾಡಲು ಶುದ್ಧ ಗಾಳಿ, ಉತ್ತಮ ವಾತಾವರಣ ಇಲ್ಲದೇ ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ಮತ್ತೆ ಮರುಕಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲೆಯಿಂದ ವಿನಾಯಿತಿ ನೀಡಲಾಗಿದೆ.

    ಈ ಕುರಿತು ದೆಹಲಿ ಸಿಎಂ ಅತಿಶಿ (Atishi) ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಾಯು ಮಾಲಿನ್ಯ ಮಿತಿಮೀರಿದ ಹಿನ್ನೆಲೆಯುಲ್ಲಿ ದೆಹಲಿಯ ಎಲ್ಲಾ ಪ್ರಾಥಮಿಕ ಶಾಲೆಗಳು ಮುಂದಿನ ಆದೇಶದ ವರೆಗೆ ಆನ್‌ಲೈನ್‌ ತರಗತಿಗಳಿಗೆ ಬಲಾಗುವಂತೆ ಆದೇಶಿಸಿದ್ದಾರೆ.

    ಗುರುವಾರ (ನ.14) ಬೆಳಿಗ್ಗೆ ದಟ್ಟನೆಯ ಮಂಜು ಆವರಿಸಿದ್ದನ್ನು ಕಂಡು ದಿಲ್ಲಿಗರು ಕಂಗಾಲಾಗಿದ್ದಾರೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AIQ) ಮಟ್ಟ ಅಪಾಯಕಾರಿ ಹಂತದತ್ತ ತಲುಪುತ್ತಿದೆ. ಮುಂಜಾನೆ AQI 452ರ ಗಡಿ ದಾಟಿದೆ. ಇದರಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ಗೋಚರತೆ ಕಡಿಮೆಯಾಗಿದ್ದು, 300 ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಫ್ಲೈಟ್‌ರಾಡಾರ್ ತಿಳಿಸಿದೆ.

    ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ರಾಜಧಾನಿ ಭಾಗದ ಹಲವು ಪ್ರದೇಶಗಳಲ್ಲಿ ಎಕ್ಯೂಐ ಪ್ರಮಾಣ 450 ದಾಟಿದೆ. ಆನಂದ ವಿಹಾರ್, ಅಶೋಕ್ ವಿಹಾರ್, ಬವಾನಾ, ದ್ವಾರಕಾ, ಜಹಾಂಗೀರ್‌ಪುರಿ, ಮುಂಡ್ಕ, ನಜಾಫ್‌ಗಡ, ಲಾಜ್‌ಪತ್ ನಗರ್, ಪತ್ಪರ್‌ಗಂಜ್, ಪಂಜಾಬಿ ಬಾಗ್, ಆರ್‌ಕೆ ಪುರಂ, ರೋಹಿಣಿ, ವಿವೇಕ್ ವಿಹಾರ್ ಮತ್ತು ವಾಜಿರ್‌ಪುರ ಪ್ರದೇಶಗಳನ್ನು ಎಕ್ಯೂಐ ಸರಾಸರಿ ‘ತೀವ್ರ’ ಸ್ವರೂಪದ ವರ್ಗದಲ್ಲಿ ಗುರುತಿಸಲಾಗಿದ್ದು, ಬೆಳಿಗ್ಗೆ 6 ಗಂಟೆ ಸುಮಾರಿಗೆ 450ಕ್ಕಿಂತ ಅಧಿಕವಿತ್ತು.

    ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಕುರಿತು ಮಾತನಾಡಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಅತಿಶಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು, ನಾವು ಕರ್ತವ್ಯ ಪಥದಲ್ಲಿ ನಿಂತಿದ್ದೇವೆ ಇಲ್ಲಿ AQI 474 ತಲುಪಿದೆ. ನಮಗೆ ಇಂಡಿಯಾ ಗೇಟ್ ಅನ್ನು ಸಹ ನೋಡಲಾಗುತ್ತಿಲ್ಲ, ಎಎಪಿ ಸರ್ಕಾರದ ಅಸಮರ್ಥತೆ ಇದಕ್ಕೆ ಕಾರಣ ಎಂದು ವಾಗ್ದಾಳಿ ನಡೆಸಿದರು.

  • ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಮೊದಲ ಸ್ಥಾನ

    ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಮೊದಲ ಸ್ಥಾನ

    – ಮುಂಬೈ, ಕೊಲ್ಕತ್ತಾದಲ್ಲೂ ಹೆಚ್ಚಿನ ಮಾಲಿನ್ಯ

    ನವದೆಹಲಿ: ವಿಶ್ವದ 121 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಸ್ಥಾನ ಪಡೆದುಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿ (Delhi) ಮಾಲಿನ್ಯಕ್ಕೆ ಪ್ರಪಂಚದಲ್ಲೇ ಮೊದಲ ಸ್ಥಾನ ಪಡೆದುಕೊಂಡರೆ, ಮುಂಬೈ (Mumbai) ಮತ್ತು ಕೋಲ್ಕತ್ತಾ (Kolkata) ಅತಿ ಮಾಲಿನ್ಯಯುತ ನಗರಗಳ ಪಟ್ಟಿಯಲ್ಲಿವೆ.

    ಸ್ವಿಸ್ ಸಂಸ್ಥೆ IQAirನ ಲೈವ್ ಪಟ್ಟಿಯಲ್ಲಿ, ರಾಜಧಾನಿ ದೆಹಲಿಯು 515 ವಾಯು ಗುಣಮಟ್ಟ ಸೂಚ್ಯಂಕ (AQI) ಯೊಂದಿಗೆ ಇಡೀ ಪ್ರಪಂಚದಲ್ಲಿ ಅತ್ಯಂತ ಕಲುಷಿತ ನಗರವಾಗಿದೆ. ಪಾಕಿಸ್ತಾನದ ಲಾಹೋರ್ ಎಕ್ಯೂಐ 432ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕಿನ್ಶಾಸಾ ನಗರ ಎಕ್ಯೂಐ 193ನೊಂದಿಗೆ ಕಲುಷಿತ ನಗರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಬಿಹಾರದ ಕಾರ್ಯಕ್ರಮದಲ್ಲಿ ಮೋದಿ ಪಾದಸ್ಪರ್ಶಕ್ಕೆ ನಿತೀಶ್ ಯತ್ನ – ವೀಡಿಯೋ ವೈರಲ್

    ಈಜಿಪ್ಟ್ನ ಕೈರೋ (AQI 184) ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ವಿಯೆಟ್ನಾಂನ ರಾಜಧಾನಿ ಹನೋಯಿ (AQI 168) ಐದನೇ ಸ್ಥಾನದಲ್ಲಿದೆ. ಕತಾರ್‌ನ ದೋಹಾ ನಗರವು (AQI 166) ಆರನೇ ಸ್ಥಾನದಲ್ಲಿದೆ. ಇದಲ್ಲದೆ ಸೌದಿ ಅರೇಬಿಯಾದ ರಿಯಾದ್ ಏಳನೇ ಸ್ಥಾನದಲ್ಲಿದೆ. ನೇಪಾಳದ ರಾಜಧಾನಿ ಕಠ್ಮಂಡು, ಮಂಗೋಲಿಯಾದ ಉಲಾನ್‌ಬಾತರ್, ಬಾಂಗ್ಲಾದೇಶದ ರಾಜಧಾನಿ ಢಾಕಾ ನಂತರದ ಸ್ಥಾನಗಳಲ್ಲಿದೆ. ಇದನ್ನೂ ಓದಿ: MUDA Scam | ಬ್ಲ್ಯಾಕ್‌ಮೇಲ್‌ ಆರೋಪ – ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್‌

    ದೆಹಲಿಯಲ್ಲಿ ದೀಪಾವಳಿ ಹಬ್ಬದ ಮುನ್ನ ಮಾಲಿನ್ಯದ ಪ್ರಮಾಣ ತೀವ್ರವಾಗುತ್ತದೆ. ಪಟಾಕಿ, ವಾಹನಗಳ ಮಾಲಿನ್ಯ, ಕಟ್ಟಡ ತಾಜ್ಯದ ಧೂಳು ಹಾಗೂ ನೆರೆಯ ರಾಜ್ಯಗಳಲ್ಲಿ ಕೃಷಿ ರಾಜ್ಯ ಸುಡುವುದು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಇತ್ತಿಚಿಗೆ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ವರ್ಷವಿಡೀ ಪಟಾಕಿ ನಿಷೇಧಿಸುವ ಬಗ್ಗೆ ನಿರ್ಧರಿಸಲು ಸೂಚಿಸಿದೆ. ಇದನ್ನೂ ಓದಿ: Chitradurga| ಮನೆ ಕಾಂಪೌಂಡ್ ಒಳಗೆ ನುಗ್ಗಿ ಮಹಿಳೆಯ ಕೊರಳಲ್ಲಿದ್ದ ಸರ ಕದ್ದು ಆರೋಪಿ ಪರಾರಿ

  • ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ

    ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ (Delhi Air Pollution) ತಗ್ಗಿದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿವೆ. ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳನ್ನು (Delhi Schools) ತೆರೆಯಲಾಗಿದ್ದು, ಇದರಲ್ಲಿ ನರ್ಸರಿಯಿಂದ 12ನೇ ತರಗತಿವರೆಗಿನ ಎಲ್ಲಾ ತರಗತಿಗಳನ್ನು ಭೌತಿಕ ಕ್ರಮದಲ್ಲಿ ನಡೆಸಲಾಗುತ್ತಿದೆ. ಆದರೆ, ಕೆಲವು ಖಾಸಗಿ ಶಾಲೆಗಳು ನರ್ಸರಿಯಿಂದ 5ನೇ ತರಗತಿವರೆಗಿನ ತರಗತಿಗಳನ್ನು ಮುಚ್ಚಲು ನಿರ್ಧರಿಸಿವೆ.

    ಮಾಲಿನ್ಯ ಇನ್ನೂ ಕೆಟ್ಟ ಪರಿಸ್ಥಿತಿಯಲ್ಲಿದ್ದು, ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದು ಖಾಸಗಿ ಶಾಲೆಗಳು ಹೇಳಿವೆ. ಈ ಸಂಬಂಧ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದ್ದು, ಒಂದು ವಾರದವರೆಗೆ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಹಾಗೂ ಹೊರಾಂಗಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    ದೆಹಲಿ ವಿಶ್ವವಿದ್ಯಾನಿಲಯವು ವಾಯು ಮಾಲಿನ್ಯದ ದೃಷ್ಟಿಯಿಂದ ನವೆಂಬರ್ 13-19ರ ವರೆಗೆ ಚಳಿಗಾಲದ ರಜೆಯನ್ನು ಘೋಷಿಸಿತ್ತು. ಮಾಲಿನ್ಯ ಕಡಿಮೆಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಎಲ್ಲ ಕಾಲೇಜುಗಳಲ್ಲಿ ತರಗತಿಗಳನ್ನು ಆರಂಭಿಸಿದೆ. ಕಾಲೇಜುಗಳು ಬಹಳ ದಿನಗಳಿಂದ ಮುಚ್ಚಲ್ಪಟ್ಟಿವೆ, ಹೀಗಾಗಿ ಶಿಕ್ಷಣಕ್ಕೆ ನಷ್ಟವಾಗದಂತೆ ಕಾಲೇಜುಗಳನ್ನು ತೆರೆಯುವುದು ಕಡ್ಡಾಯವಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ಗಾಳಿಯ ದಿಕ್ಕು ಮತ್ತು ಗಾಳಿಯ ವೇಗದಲ್ಲಿನ ಬದಲಾವಣೆಯಿಂದಾಗಿ ಗಾಳಿಯ ಗುಣಮಟ್ಟವು ತೀವ್ರ ವರ್ಗದಿಂದ ಕಡಿಮೆಯಾಗಿದೆ ಆದರೆ ಗಾಳಿಯು ಇನ್ನೂ ಅತ್ಯಂತ ಕಳಪೆ ವಿಭಾಗದಲ್ಲಿದೆ. ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ಒಟ್ಟಾರೆ AQI 398 ರೊಂದಿಗೆ ಅತ್ಯಂತ ಕಳಪೆ ವರ್ಗದಲ್ಲಿದೆ. ಬೆಳಗಿನ ಜಾವ ಗಾಳಿ ಬೀಸುತ್ತಿರುವುದರಿಂದ ಮಂಜು ಮತ್ತು ಹೊಗೆಯ ಪ್ರಮಾಣ ಕಡಿಮೆಯಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ – ಪಂಜಾಬ್, ಹರಿಯಾಣ, ಯುಪಿ ಸರ್ಕಾರಕ್ಕೂ ಸುಪ್ರೀಂ ಚಾಟಿ

  • ರಾತ್ರೋರಾತ್ರಿ ದೆಹಲಿಯಲ್ಲಿ ಮಳೆ – ವಿಷಕಾರಿಯಾಗಿದ್ದ ಗಾಳಿ ಗುಣಮಟ್ಟದಲ್ಲಿ ಸುಧಾರಣೆ

    ರಾತ್ರೋರಾತ್ರಿ ದೆಹಲಿಯಲ್ಲಿ ಮಳೆ – ವಿಷಕಾರಿಯಾಗಿದ್ದ ಗಾಳಿ ಗುಣಮಟ್ಟದಲ್ಲಿ ಸುಧಾರಣೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಹಲವು ಭಾಗಗಳಾದ ನೋಯ್ಡಾ, ಗುರುಗ್ರಾಮ, ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ತಡರಾತ್ರಿ ಲಘುವಾದ ಮಳೆ (Rain) ಸುರಿದಿದೆ. ಇದರಿಂದ ದೆಹಲಿಯಾದ್ಯಂತ ವಿಷಕಾರಿ ಎನಿಸಿಕೊಂಡಿದ್ದ ಗಾಳಿಯ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ.

    ಕರ್ತವ್ಯ ಪಥ, ಐಟಿಒ ಮತ್ತು ದೆಹಲಿ-ನೋಯ್ಡಾ ಗಡಿಯ ಪ್ರದೇಶದಲ್ಲಿ ಲಘುವಾಗಿ ಮಧ್ಯಮ ತೀವ್ರತೆಯ ಮಳೆ ಸುರಿದಿರುವುದು ವರದಿಯಾಗಿದೆ. ಇದು ಹವಾಮಾನದಲ್ಲಿ ತ್ವರಿತ ಬದಲಾವಣೆಗೆ ಕಾರಣವಾಗಿದೆ. ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 85 ದಾಖಲಾಗಿದೆ. ಇದು ಗಾಳಿ ಗುಣಮಟ್ಟದ ಸುಧಾರಣೆಯಾಗಿದ್ದು, ಉತ್ತಮ ವಿಭಾಗದಲ್ಲಿ ಬರುತ್ತದೆ.

    ನಗರದಲ್ಲಿ ಉಂಟಾಗಿದ್ದ ತೀವ್ರ ವಾಯುಮಾಲಿನ್ಯವನ್ನು ತಗ್ಗಿಸಲು ನವೆಂಬರ್ 20-21 ರಂದು ಮೋಡ ಬಿತ್ತನೆಯ ಮೂಲಕ ಕೃತಕ ಮಳೆ ಸುರಿಸಲು ದೆಹಲಿ ಸರ್ಕಾರದ ಯೋಜಿಸಿತ್ತು. ಇದೀಗ ಸುರಿದಿರುವ ಮಳೆ ತಾತ್ಕಾಲಿಕ ಪರಿಹಾರ ನೀಡಿದ್ದು, ಜನತೆ ನಿಟ್ಟುಸಿರು ಬಿಡುವಂತಾಗಿದೆ. ಇದನ್ನೂ ಓದಿ: ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ಎಲ್‌ಇಟಿ ಕಮಾಂಡರ್‌ಗೆ ಗುಂಡಿಕ್ಕಿ ಹತ್ಯೆ

    ದೆಹಲಿ-ಎನ್‌ಸಿಆರ್ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಬೆಳಗ್ಗೆ ಭಾಗಶಃ ಮೋಡ ಕವಿದ ವಾತಾವರಣ, ಕೊಂಚ ಮಂಜು ಮುಸುಕಿದ ವಾತಾವರಣವಿರಲಿದೆ. ಒಂದೆರಡು ಪ್ರದೇಶಗಳಲ್ಲಿ ಹಗುರ ಇಲ್ಲವೇ ತುಂತುರು ಮಳೆಯ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ 30 ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ದೆಹಲಿಯ ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ವ್ಯಕ್ತಿ ಬಲಿ

  • ದೆಹಲಿಯಲ್ಲಿ ವಾಯು ಮಾಲಿನ್ಯ – ಪಂಜಾಬ್, ಹರಿಯಾಣ, ಯುಪಿ ಸರ್ಕಾರಕ್ಕೂ ಸುಪ್ರೀಂ ಚಾಟಿ

    ದೆಹಲಿಯಲ್ಲಿ ವಾಯು ಮಾಲಿನ್ಯ – ಪಂಜಾಬ್, ಹರಿಯಾಣ, ಯುಪಿ ಸರ್ಕಾರಕ್ಕೂ ಸುಪ್ರೀಂ ಚಾಟಿ

    ನವದೆಹಲಿ: ಪ್ರತಿ ವರ್ಷವೂ ದೆಹಲಿಯಲ್ಲಿ ವಾಯು ಮಾಲಿನ್ಯದ (Delhi Air Pollution) ಪ್ರಮಾಣ ಹೆಚ್ಚುತ್ತಿದೆ, ತೀವ್ರ ವಾಯು ಮಾಲಿನ್ಯ ಎದುರಿಸಲು ಸಾಧ್ಯವಿಲ್ಲ ಇದಕ್ಕೆ ಪರಿಹಾರವೇನು? ಎಂದು ಸುಪ್ರೀಂ ಕೋರ್ಟ್ (Supreme Court) ಪ್ರಶ್ನೆ ಮಾಡಿದೆ.

    ದೆಹಲಿ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಕೆ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠ ದೆಹಲಿ, ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಕ್ಕೆ (Rajasthan Government)  ಚಾಟೀ ಬೀಸಿದೆ.

    ದೆಹಲಿಯಲ್ಲಿನ ವಾಯುಮಾಲಿನ್ಯ ಸಮಸ್ಯೆಯನ್ನು ರಾಜಕೀಯ ಚರ್ಚೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ, ಮಕ್ಕಳು ಮಾಲಿನ್ಯದಿಂದಾಗಿ ಆರೋಗ್ಯ ಸಮಸ್ಯೆ (Health Problem) ಎದುರಿಸುತ್ತಿದ್ದಾರೆ, ಕೂಡಲೇ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಬೇಕು ಮತ್ತು ಶುಕ್ರವಾರದೊಳಗೆ ಪರಿಸ್ಥಿತಿ ಸುಧಾರಣೆಗೆ ಕ್ರಮವಹಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

    ಕೃಷಿ ತಾಜ್ಯ ಅಥವಾ ಹುಲ್ಲು ಸುಡುವಿಕೆ 20-50 ದಿನಗಳವರೆಗೆ ಮಾತ್ರ ಸಂಭವಿಸುತ್ತದೆ ಎಂದು ಪಂಜಾಬ್ ಎ‌ಜಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನೀವು ಅದನ್ನು ಹೇಗೆ ಮಾಡುತ್ತೀರಿ ಎಂಬುದರ ಬಗ್ಗೆ ನಮಗೆ ಬೇಕಾಗಿಲ್ಲ, ಹುಲ್ಲು ಸುಡುವುದು ಕೂಡಲೇ ನಿಲ್ಲಬೇಕು, ಎಲ್ಲ ರಾಜ್ಯಗಳು ಬೆಂಕಿಯನ್ನು ನಿಲ್ಲಿಸುವ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದೆ. ನಿಮ್ಮ ಸ್ಥಳೀಯ ಠಾಣೆಯ ಎಸ್‌ಎಚ್‌ಒ ಸಹ ಇದಕ್ಕೆ ಜವಾಬ್ದಾರಿಯಾಗಿರಬೇಕು. ಇಂದಿನಿಂದ ಅವರು ಕೆಲಸ ಮಾಡಲು ಪ್ರಾರಂಭಿಸಬೇಕು ಎಂದು ತಾಕೀತು ಮಾಡಿತು.

    ವಿಚಾರಣೆಯ ಸಂದರ್ಭದಲ್ಲಿ, ಅಮಿಕಸ್ ಕ್ಯೂರಿ ಅಪರಾಜಿತಾ ಸಿಂಗ್ ವಾದಿಸಿ, ದೆಹಲಿಯಲ್ಲಿ ಸ್ಥಾಪಿಸಲಾದ ಸ್ಮೋಗ್ ಟವರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಹಿಂದಿನ ನಿರ್ದೇಶನಗಳ ನಂತರ ಅಳವಡಿಸಲಾದ ಸ್ಮೋಗ್ ಟವರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ನಾವು ಟವರ್‌ಗಳು ಕಾರ್ಯನಿರ್ವವಂತೆ ಮಾಡಬೇಕು ಎಂದು ಕೋರ್ಟ್‌ ನಿರ್ದೇಶನ ನೀಡಿತು. ಇದನ್ನೂ ಓದಿ: ಇಸ್ರೇಲ್‌ ದಾಳಿ ನಿಲ್ಲಿಸಲು ನಿಮ್ಮ ಸಾಮರ್ಥ್ಯ ಬಳಸಿ: ಮೋದಿಗೆ ಕರೆ ಮಾಡಿ ಇರಾನ್‌ ಅಧ್ಯಕ್ಷ ಮನವಿ

    ಇನ್ನೂ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಿದ ಪೀಠ, ದೆಹಲಿ ಸರ್ಕಾರದ ಮಾಲಿನ್ಯ ನಿಯಂತ್ರಣ ಕ್ರಮಗಳು, ಅದರಲ್ಲೂ ವಿಶೇಷವಾಗಿ ಬೆಸ-ಸಮ ಯೋಜನೆಗೆ ಎಂದಾದರೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆಯೇ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿತು. ದೀಪಾವಳಿಯ ನಂತರ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ಈ ಯೋಜನೆ ಎಂದಾದರೂ ಯಶಸ್ವಿಯಾಗಿದಿಯೇ? ಎಂದು ಪ್ರಶ್ನಿಸಿತು. ಇದನ್ನೂ ಓದಿ: ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಬೆನ್ನಿಗೆ ಎಟಿಎಂ ಸರ್ಕಾರ ನಿಂತಿದೆ: ಆರೋಪಿ ಟ್ರೋಲ್‌ ಮಿನಿಸ್ಟರ್‌ ಖರ್ಗೆ ಆಪ್ತ ಎಂದ ಬಿಜೆಪಿ

    ದೆಹಲಿ ಸರ್ಕಾರ ಪರ ವಾದ ಮಂಡಿಸಿದ ವಕೀಲರು, ಮೂರು‌ ಹಂತಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು? ಮತ್ತು 4ನೇ ಹಂತದಲ್ಲಿ‌ ಕೈಗೊಳ್ಳಲಿರುವ ಪ್ರಯತ್ನಗಳೇನು? ಎಂದು ಮನವರಿಕೆ ಮಾಡಿದರು‌. ವರ್ಕ್‌ಫ್ರಮ್‌ ಹೋಮ್‌ ವಾಹನಗಳ ನಿರ್ಬಂಧ ಮತ್ತು ಮರಗಳಿಗೆ ನೀರಿನ ಸಿಂಪಡಿಕೆ‌ ಬಗ್ಗೆ ವಿವರಿಸಿದರು. ಶುಕ್ರವಾರ ವಿಚಾರಣೆ ಮುಂದುವರಿಯಲಿದೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗ ವರದಿ ಜಾರಿಗೆ ಸಿಎಂಗೆ ಮನವಿ: ಪರಮೇಶ್ವರ್