Tag: April

  • ಉಷ್ಣಾಂಶ ಏರಿಕೆ – ಏಪ್ರಿಲ್‌ನಲ್ಲಿ ಎಸಿ ಸಾರ್ವಕಾಲಿಕ ಗರಿಷ್ಠ ಮಾರಾಟ

    ಉಷ್ಣಾಂಶ ಏರಿಕೆ – ಏಪ್ರಿಲ್‌ನಲ್ಲಿ ಎಸಿ ಸಾರ್ವಕಾಲಿಕ ಗರಿಷ್ಠ ಮಾರಾಟ

    ನವದೆಹಲಿ: ದೇಶದದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದಂತೆ ಇತ್ತ ದಾಖಲೆ ಪ್ರಮಾಣದಲ್ಲಿ ಹವಾ ನಿಯಂತ್ರಕ(ಎಸಿ) ಮಾರಾಟವಾಗುತ್ತಿದೆ.

    ಏಪ್ರಿಲ್‌ ತಿಂಗಳಿನಲ್ಲಿ17.5 ಲಕ್ಷ ಏಸಿ ಮಾರಾಟವಾಗಿದೆ. ಇದು ಇವರೆಗಿನ 1 ತಿಂಗಳಿನ ಸಾರ್ವಕಾಲಿಕ ಗರಿಷ್ಠ ಮಾರಾಟವಾಗಿದೆ. ಇದನ್ನೂ ಓದಿ: ಬಿಸಿಲಿನ ತಾಪಕ್ಕೆ 25 ಬಲಿ, 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

    ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ದುಪ್ಪಟ್ಟು ಪ್ರಮಾಣದಲ್ಲಿ ಮಾರಾಟವಾಗಿದೆ. ಈ ವರ್ಷ 90 ಲಕ್ಷ ಘಟಕಗಳು ಮಾರಾಟವಾಗಬಹುದು ಎಂದು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘ ಹೇಳಿದೆ.

    ದೇಶದಲ್ಲಿ ಪ್ರಮುಖವಾಗಿ 15 ಕಂಪನಿಗಳ ಎಸಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದರಲ್ಲೂ ವೋಲ್ಟಾಸ್‌, ಪಾನಾಸೋನಿಕ್‌, ಹಿಟಾಚಿ, ಎಲ್‌ಜಿ, ಹೈಯರ್‌ ಕಂಪನಿಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ.

    2020 ರಲ್ಲಿ ಮೊದಲ ಕೊರೊನಾ ಅಲೆ ಇದ್ದರೆ 2021ರಲ್ಲಿ ಎರಡನೇ ಕೊರೊನಾ ಅಲೆ ಇತ್ತು. ಈ ಕಾರಣಕ್ಕೆ ಎಸಿ ಮಾರಾಟ ಕುಸಿತ ಕಂಡಿತ್ತು.

  • ಏಪ್ರಿಲ್ ತಿಂಗಳಲ್ಲಿ ದಾಖಲೆಯ 1.68 ಕೋಟಿ ರೂ. ಜಿಎಸ್‍ಟಿ ತೆರಿಗೆ ಸಂಗ್ರಹ

    ಏಪ್ರಿಲ್ ತಿಂಗಳಲ್ಲಿ ದಾಖಲೆಯ 1.68 ಕೋಟಿ ರೂ. ಜಿಎಸ್‍ಟಿ ತೆರಿಗೆ ಸಂಗ್ರಹ

    ನವದೆಹಲಿ: 2022ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಸಂಗ್ರಹವು ನೂತನ ದಾಖಲೆ ಬರೆದಿದೆ. ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 1,67,540 ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದೆ.

    ಈ ಮೂಲಕ ಜಿಎಸ್‍ಟಿ ತೆರಿಗೆ ಸಂಗ್ರಹವು ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂ. ದಾಟಿ ನೂತನ ದಾಖಲೆ ಬರೆದಿದೆ. ಅಲ್ಲದೆ ಕಳೆದ ವರ್ಷದ ಏಪ್ರಿಲ್ ತಿಂಗಳಿಗಿಂತ ಶೇ.20 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಲಿಫ್ಟ್‌ನಲ್ಲಿ ಹೋಗುವುದೆಂದರೆ ನನಗೆ ಭಯ: ಅಜಯ್ ದೇವಗನ್

    ಏಪ್ರಿಲ್ 2022ರಲ್ಲಿ ಜಿಎಸ್‍ಟಿ ಆದಾಯವು ಒಟ್ಟು 1,67,540 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್ ಟಿ 33,159 ಕೋಟಿ ರೂಪಾಯಿ, ಎಸ್‍ಜಿಎಸ್ ಟಿ 41,793 ಕೋಟಿ ರೂಪಾಯಿ, ಐಜಿಎಸ್‍ಟಿ 81,939 ಮತ್ತು ಮತ್ತು ಪರಿಹಾರ ಸೆಸ್ 10,649 ಕೋಟಿ ಆಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ಕಳೆದ ಮಾರ್ಚ್‍ನಲ್ಲಿ 1,42,095 ಕೋಟಿ ರೂ. ಸಂಗ್ರಹವಾಗಿ ಈ ಹಿಂದಿನ ದಾಖಲೆ ನಿರ್ಮಿಸಿತ್ತು. ಇದೀಗ ಇನ್ನಷ್ಟು ಏರಿಕೆ ಕಂಡು ಏಪ್ರಿಲ್‍ನಲ್ಲಿ ಅತಿ ಹೆಚ್ಚು ಜಿಎಸ್‍ಟಿ ಸಂಗ್ರಹವಾಗಿದೆ. ಇದನ್ನೂ ಓದಿ: ಶವರ್ಮ ತಿಂದು 16 ವರ್ಷದ ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ

    ಏಪ್ರಿಲ್ ತಿಂಗಳ ಆದಾಯಗಳು ಕಳೆದ ವರ್ಷ ಇದೇ ತಿಂಗಳಿನ ಜಿಎಸ್‍ಟಿನ ಆದಾಯಕ್ಕೆ ಹೋಲಿಕೆ ಮಾಡಿದರೆ ಈ ತಿಂಗಳಲ್ಲಿ ಆಮದು ಸರಕುಗಳಿಂದ ಬರುವ ಆದಾಯವು ಶೇ 30ರಷ್ಟು ಅಧಿಕ ಮತ್ತು ಆಂತರಿಕ ವಹಿವಾಟುಗಳಿಂದ ಬಂದ ಆದಾಯವು ಶೇ 17ರಷ್ಟು ಹೆಚ್ಚಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

    ರಾಜ್ಯಗಳ ಪೈಕಿ ಮಹರಾಷ್ಟ್ರದಲ್ಲಿ 27,495 ಕೋಟಿ ರೂ. ಮತ್ತು ಕರ್ನಾಟಕದಲ್ಲಿ 11,820 ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿ ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಮತ್ತಷ್ಟು ಏರಿಕೆ ಕಂಡಿದೆ.

  • ವಿಧಾನಸಭೆ ಅಧಿವೇಶನದ ವೇಳೆ ಏಪ್ರಿಲ್ ಜ್ವರದ ಕುತೂಹಲ!

    ವಿಧಾನಸಭೆ ಅಧಿವೇಶನದ ವೇಳೆ ಏಪ್ರಿಲ್ ಜ್ವರದ ಕುತೂಹಲ!

    ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಗಮನಿಸಿದ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ಅಲೆ ಶುರುವಾದಂತೆ ಭಾಸವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ವಿಧಾನಸಭೆ ಮೊಗಸಾಲೆಯಲ್ಲಿ ಏಪ್ರಿಲ್ ರಾಜಕೀಯ ಜ್ವರ ಬಿಸಿಬಿಸಿ ಚರ್ಚೆಯಾಗಿದೆ.

    ಏನಿದು ಏಪ್ರಿಲ್ ಜ್ವರ:
    ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗಾರಿ ಬಾರಿಸಿದ ಪರಿಣಾಮ ಇದೀಗ ಕರ್ನಾಟಕದಲ್ಲಿ 2023ರ ಚುನಾವಣೆಗೂ ಮುನ್ನ ರಾಜಕೀಯವಾಗಿ ಭಾರೀ ಬದಲಾವಣೆಯ ಪರ್ವ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಇದೀಗ ನಡೆಯುತ್ತಿರುವ ಬಜೆಟ್ ಅಧಿವೇಶನದ ವಿಧಾನಸಭೆ ಮೊಗಸಾಲೆಯಲ್ಲಿ ಬಿಜೆಪಿ ಶಾಸಕರಲ್ಲಿ ಏಪ್ರಿಲ್ ರಾಜಕೀಯ ಜ್ವರದ ಮಾತುಕತೆ ಕೇಳಿಬಂದಿದೆ. ಪಕ್ಷ ಮತ್ತು ಸರ್ಕಾರ ಎರಡರಲ್ಲೂ ಏಪ್ರಿಲ್‍ನಲ್ಲಿ ಬದಲಾವಣೆಗೆ ಮುಹೂರ್ತ ಫಿಕ್ಸ್ ಆಗುತ್ತೆ ಎಂಬ ಮಾತು ಕೇಳಿ ಬರುತ್ತಿದ್ದು, ಈ ಬಗ್ಗೆ ಸಚಿವರಲ್ಲಿ ಚರ್ಚೆ ಕೂಡ ನಡೆದಿದೆ ಹಾಗಾಗಿ ಏಪ್ರಿಲ್‍ನಲ್ಲಿ ರಾಜಕೀಯ ಜ್ವರ ನಾಯಕರಲ್ಲಿ ಆವರಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: Exclusive -ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಚುನಾವಣೆ?

    ಪಂಚರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳನ್ನು ಗೆದ್ದಿರುವ ಬಿಜೆಪಿ ಅಧಿಕಾರ ಸ್ವೀಕಾರದ ಬಳಿಕ ಕರ್ನಾಟಕದ ಕಡೆ ಮುಖ ಮಾಡಲು ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡುತ್ತಿದೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ, ಪದಾಧಿಕಾರಿಗಳ ಬದಲಾವಣೆ ಬಗ್ಗೆಯೂ ಬಿಜೆಪಿ ಶಾಸಕರ ನಡುವೆ ಗಂಭೀರ ಚರ್ಚೆ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಪಂಚರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ರಾಜ್ಯಕ್ಕೆ ಬರಲಿದ್ದಾರೆ ಮೋದಿ – ಕಲಬುರಗಿಗೆ ಯಾಕೆ?

    ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‍ನಲ್ಲೂ ಡಜನ್ ಗಟ್ಟಲೆ ಬದಲಾವಣೆ ಆಗುತ್ತದೆ. 8 ರಿಂದ 10 ಹಾಲಿ ಸಚಿವರನ್ನು ಕೈ ಬಿಟ್ಟು 12 ರಿಂದ 14 ಹೊಸ ಮುಖಗಳಿಗೆ ಮಣೆ ಹಾಕಬಹುದು. ಏಪ್ರಿಲ್‍ನಲ್ಲೇ ಪಕ್ಷ, ಸರ್ಕಾರ ಎರಡರಲ್ಲೂ ಬದಲಾವಣೆ ಆಗುತ್ತದೆ ಎಂದು ಶಾಸಕರ ನಡುವೆ ಪರಸ್ಪರ ಮಾತುಕತೆ ನಡೆದಿದೆ.

    ಈ ಎಲ್ಲಾ ವಿಷಗಳಿಗೆ ಪೂರಕವೆಂಬಂತೆ ಏಪ್ರಿಲ್‍ನಲ್ಲಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ಬಳಿಕ ಸಮೀಕ್ಷೆ ಮಾಡಲು ಹೈಕಮಾಂಡ್ ಮುಂದಾಗಿದೆ. ಈ ಸಮೀಕ್ಷೆಯಲ್ಲಿ ಬರುವ ಫಲಿತಾಂಶದ ಆಧಾರದಲ್ಲಿ ಚುನಾವಣೆಗೆ ಹೋಗಬೇಕೇ? ಬೇಡವೇ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಮೋದಿ ರಾಜ್ಯಪ್ರವಾಸಕ್ಕೂ ಮುನ್ನ ಕ್ಯಾಬಿನೆಟ್ ಪುನಾರಚನೆ ಆದರೂ ಅಚ್ಚರಿ ಇಲ್ಲ ಎಂಬ ಮಾತು ಕೇಳಿ ಬಂದಿದೆ. ಈ ಮೂಲಕ ಎಲೆಕ್ಷನ್ ಇಯರ್, ಎಲೆಕ್ಷನ್ ಕ್ಯಾಬಿನೆಟ್, ಎಲೆಕ್ಷನ್ ಪಾರ್ಟಿ ಪ್ರೆಸಿಡೆಂಟ್, ಕೊನೆಗೆ ಎಲೆಕ್ಷನ್‍ಗೆ ರೆಡಿ ಎಂಬ ಸಂದೇಶವನ್ನು ರವಾನಿಸುವ ಸಾಧ್ಯತೆಯಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆಯುವ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ.

  • ರಚಿತಾಗೆ ಕಮರ್ಶಿಯಲ್ ಇಮೇಜ್ ಕಳಚಿಕೊಳ್ಳೋ ಬಯಕೆಯಂತೆ!

    ರಚಿತಾಗೆ ಕಮರ್ಶಿಯಲ್ ಇಮೇಜ್ ಕಳಚಿಕೊಳ್ಳೋ ಬಯಕೆಯಂತೆ!

    ಬೆಂಗಳೂರು: ಕಮರ್ಶಿಯಲ್ ಹೀರೋಯಿನ್ ಆಗಿ ಮಿಂಚಬೇಕು, ಅದರಲ್ಲಿಯೇ ನಂಬರ್ ಒನ್ ಆಗಿ ನೆಲೆ ಕಂಡುಕೊಳ್ಳಬೇಕೆಂಬುದು ಬಹುತೇಕ ನಟಿಯರ ಏಕ ಮಾತ್ರ ಕನಸು. ಆದರೆ ನಿಜವಾದ ಕಲಾವಿದೆಯರಿಗೆ ಒಂದೇ ಟ್ರ್ಯಾಕಿನಲ್ಲಿ ಬಹು ದಿನ ನಡೆದರೆ ಮತ್ತೆತ್ತಲೋ ಹೊರಳಿಕೊಳ್ಳಬೇಕೆನ್ನಿಸುತ್ತೆ. ಸದ್ಯ ರಚಿತಾ ರಾಮ್ ಕೂಡಾ ಅದೇ ಮೂಡಿನಲ್ಲಿರೋ ವಿಚಾರ ಅವರದ್ದೇ ಮಾತುಗಳ ಮೂಲಕ ಅನಾವರಣಗೊಂಡಿದೆ.

    ರಚಿತಾ ರಾಮ್ ಆರಂಭದಲ್ಲಿ ಸೀರಿಯಲ್ ನಟಿಯಾಗಿ ಬೆಳಕಿಗೆ ಬಂದವರು. ಸೀರಿಯಲ್ಲಿನಲ್ಲಿ ನಟಿಸುತ್ತಿರುವಾಗಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೋಡಿಯಾಗಿ ನಟಿಸೋ ಮೂಲಕ ರಚಿತಾ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ಕಂಡುಕೊಂಡಿದ್ದರು. ಆ ಬಳಿಕ ಸುದೀಪ್ ಅವರಂಥಾ ನಟರ ಜೊತೆಗೂ ನಟಿಸಿದ ರಚಿತಾ ಈಗ ಕನ್ನಡದ ಮುಖ್ಯ ನಾಯಕಿ. ಆದರೆ ಬಹು ಹಿಂದಿನಿಂದಲೇ ಕಮರ್ಶಿಯಲ್ ಇಮೇಜಿನಾಚೆಗೆ ಗುರುತಿಸಿಕೊಳ್ಳುವ ಬಯಕೆಯೊಂದು ಅವರಲ್ಲಿ ಮೂಡಿಕೊಂಡಿತ್ತಂತೆ. ಅದರ ಫಲವಾಗಿಯೇ ಅವರು ಏಪ್ರಿಲ್ ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರಂತೆ!

    ಮೊನ್ನೆ ರಚಿತಾ ಅವರ ಹುಟ್ಟು ಹಬ್ಬವಿತ್ತಲ್ಲಾ? ಇದಕ್ಕೆ ಏಪ್ರಿಲ್ ಚಿತ್ರತಂಡ ಈ ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿ ಶುಭ ಕೋರಿತ್ತು. ಈ ಸಂದರ್ಭದಲ್ಲಿ ರಚಿತಾ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ. ಈ ಚಿತ್ರ ಮಹಿಳಾ ಪ್ರಧಾನವಾದದ್ದು. ಇದರಲ್ಲಿನ ಏಪ್ರಿಲ್ ಡಿಸೋಜಾ ಎಂಬ ಪಾತ್ರ ಸವಾಲಿನದ್ದಂತೆ. ಅದನ್ನು ಖುಷಿಯಿಂದಲೇ ಸ್ವೀಕರಿಸಿರುವ ರಚಿತಾ ಈ ಮೂಲಕ ತಮ್ಮ ಮನದಾಸೆ ಈಡೇರುವ ಭರವಸೆ ಹೊಂದಿದ್ದಾರೆ. ಕಮರ್ಶಿಯಲ್ ಜಾಡಿನಲ್ಲಿಯೂ ಹೀಗೆಯೇ ಸವಾಲಿನ, ಅಪರೂಪದ ಪಾತ್ರಗಳನ್ನು ಆರಿಸಿಕೊಳ್ಳಲು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಚಿತಾ ರಾಮ್ ಈಗ ಏಪ್ರಿಲ್ ಡಿಸೋಜಾ – ಗುಳಿಕೆನ್ನೆಯಲ್ಲಿ ಅರಳಲಿದೆ ವಸಂತಮಾಸ!

    ರಚಿತಾ ರಾಮ್ ಈಗ ಏಪ್ರಿಲ್ ಡಿಸೋಜಾ – ಗುಳಿಕೆನ್ನೆಯಲ್ಲಿ ಅರಳಲಿದೆ ವಸಂತಮಾಸ!

    ಬೆಂಗಳೂರು: ಸೀರಿಯಲ್ ಗಳಲ್ಲಿ ನಟಿಸುತ್ತಲೇ ಚಿತ್ರರಂಗಕ್ಕೆ ಬಂದು ದರ್ಶನ್ ರಂಥಾ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದವರು ರಚಿತಾ ರಾಮ್. ಆ ನಂತರದಲ್ಲಿ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿರೋ ರಚಿತಾ ಈ ಕ್ಷಣದಲ್ಲಿಯೂ ಸೀತಾರಾಮ ಕಲ್ಯಾಣ, ಅಯೋಗ್ಯ ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಮಹಿಳಾ ಪ್ರಧಾನ ಚಿತ್ರವೊಂದರಲ್ಲಿ ನಟಿಸಲು ರಚಿತಾ ಒಪ್ಪಿಕೊಂಡಿದ್ದಾರೆ.

    ಈ ವಿಚಾರವನ್ನು ಖುಷಿಯಿಂದಲೇ ರಚಿತಾ ಹೇಳಿಕೊಂಡಿದ್ದಾರೆ. ಇದು 8 ಎಂಎಂ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಸತ್ಯ ನಿರ್ದೇಶನದ ಎರಡನೇ ಚಿತ್ರ. ಒಂದು ಹೆಣ್ಣಿನ ಸುತ್ತಾ ನಡೆಯೋ ಥ್ರಿಲ್ಲರ್ ಕತೆ ಹೊಂದಿರೋ ಈ ಚಿತ್ರದಲ್ಲಿ ರಚಿತಾ ಕೇಂದ್ರ ಬಿಂದುವಾಗಿ ನಟಿಸಲಿದ್ದಾರೆ. ಇದುವರೆಗಿನ ಪಾತ್ರಗಳಿಗಿಂತಲೂ ಚಾಲೆಂಜಿಂಗ್ ಆಗಿರೋ ಈ ಪಾತ್ರವನ್ನು ಬಹಳಷ್ಟು ಇಷ್ಟಪಟ್ಟೇ ಅವರು ಒಪ್ಪಿಕೊಂಡಿದ್ದಾರಂತೆ.

    ಈ ಚಿತ್ರಕ್ಕೆ ಏಪ್ರಿಲ್ ಎಂಬ ಹೆಸರಿಡಲಾಗಿದೆಯಂತೆ. ಏಪ್ರಿಲ್ ತಿಂಗಳಿಗೂ ಈ ಚಿತ್ರಕ್ಕೂ ಏನಾದರೂ ಲಿಂಕಿದೆಯಾ ಅಂತ ನೋಡ ಹೋದರೆ, ಈ ಚಿತ್ರದಲ್ಲಿ ರಚಿತಾ ನಟಿಸಲಿರೋ ಪಾತ್ರದ ಹೆಸರೇ ಏಪ್ರಿಲ್ ಡಿಸೋಜಾ ಎಂಬ ಕುತೂಹಲಕಾರಿ ವಿಚಾರವೂ ಬಯಲಾಗುತ್ತದೆ. ಇನ್ನು ವಸಂತ ಮಾಸದ ಎರಡನೇ ತಿಂಗಳಾದ ಏಪ್ರಿಲ್ ಗೆ ಋತುಮಾನದ ವಿಶೇಷ ಗುಣಗಳೂ ಇರೋದರಿಂದ ಅದನ್ನೇ ಈ ಚಿತ್ರದ ಶೀರ್ಷಿಕೆಯಾಗಿಸಲಾಗಿದೆಯಂತೆ.

    ಇದುವರೆಗೂ ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ರಚಿತಾಗೆ ಈ ಚಿತ್ರ ಹೊಸ ಅನುಭವವಾಗಲಿದೆ. ಇಡೀ ಚಿತ್ರ ಇವರ ಪಾತ್ರದ ಸುತ್ತಲೇ ಸುತ್ತೋದರಿಂದ ಈ ಚಿತ್ರಕ್ಕೆ ರಚಿತಾ ಅವರೇ ಹೀರೋ ಕಮ್ ಹೀರೋಯಿನ್. ಈಗಾಲೇ ಬಿಡುಗಡೆಯಾಗಿರೋ ಫಸ್ಟ್ ಲುಕ್ಕಿನಲ್ಲಿ ರಚಿತಾ ಪಾತ್ರದ ತೂಕದ ಅಂದಾಜು ಸಿಕ್ಕಿದೆ.