Tag: Appu Samadhi

  • ಅಪ್ಪು ಅಗಲಿ ಇಂದಿಗೆ 2 ತಿಂಗಳು – ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಅಭಿಮಾನಿಗಳ ದಂಡು

    ಅಪ್ಪು ಅಗಲಿ ಇಂದಿಗೆ 2 ತಿಂಗಳು – ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಅಭಿಮಾನಿಗಳ ದಂಡು

    ಬೆಂಗಳೂರು: ಚಂದನವನದ ಯುವರತ್ನ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 2 ತಿಂಗಳು ಕಳೆದಿದ್ದು, ಇಂದು ಅಪ್ಪು ಸಮಾಧಿಗೆ ಕುಟುಂಬಸ್ಥರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ಅಪ್ಪು ಅಗಲಿ ಇಂದಿಗೆ 2 ತಿಂಗಳು ಕಳೆದ ಹಿನ್ನೆಲೆ, ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಯನ್ನು ಹೂಗಳಿಂದ ಸಿಂಗರಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಪೂಜಾ ಕಾರ್ಯದಲ್ಲಿ ಪುನೀತ್ ಪತ್ನಿ ಅಶ್ವಿನಿ, ಮಕ್ಕಳು, ಯುವರಾಜ್ ರಾಘವೇಂದ್ರ ರಾಜ್‍ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಇದನ್ನೂ ಓದಿ:  ಆನೇಕಲ್‍ನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ದೃಢ – ರಾಜ್ಯದಲ್ಲಿ 39ಕ್ಕೇರಿದ ಸಂಖ್ಯೆ

    ಅಶ್ವಿನಿ ಮತ್ತು ಮಕ್ಕಳು ಸಮಾಧಿಗೆ ಪೂಜೆ ಸಲ್ಲಿಸಿದ್ದು, ಅಪ್ಪು ಸಮಾಧಿಯನ್ನು ನೋಡುತ್ತ ಭಾವುಕರಾಗಿದ್ದಾರೆ.

    ಅಪ್ಪು ಅಗಲಿ 2 ತಿಂಗಳಾದರೂ ಅಭಿಮಾನಿಗಳ ದಂಡು ಮಾತ್ರ ಸಮಾಧಿ ಬಳಿ ಕಡಿಮೆಯಾಗಿಲ್ಲ. ಅಪ್ಪು ನಿಧನರಾಗಿ 2 ತಿಂಗಳ ಕಾರ್ಯವಿರುವುದರಿಂದ ಸಾವಿರಾರು ಅಭಿಮಾನಿಗಳು ಅವರ ಸಮಾಧಿ ಬಳಿ ದರ್ಶನಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

  • ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ

    ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ

    – ಆರೋಗ್ಯದ ಕಡೆ ಗಮನಹರಿಸುವಂತೆ ಸೂಚನೆ
    – ಬೆಂಗ್ಳೂರಿಗೆ ಬಂದ ತಕ್ಷಣ ಮಾಹಿತಿ ನೀಡಿ

    ಧಾರವಾಡ: ಅಪ್ಪು ಸಮಾಧಿ ನೋಡಲು ಓಟದ ಮೂಲಕ ಹೊರಟಿರುವ ಧಾರವಾಡದ ಮೂರು ಮಕ್ಕಳ ತಾಯಿಗೆ ನಟ ರಾಘವೇಂದ್ರ ರಾಜ್‍ಕುಮಾರ ಫೋನ್ ಮಾಡಿ ಮಾತನಾಡಿದ್ದಾರೆ.

    ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲ್ ಕಳೆದ ನವೆಂಬರ್ 29 ರಂದು ತನ್ನ ಗ್ರಾಮದಿಂದ ಬೆಂಗಳೂರಿಗೆ ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟಿದ್ದಾರೆ. ಈಗಾಗಲೇ ಈ ಮಹಿಳೆ ಚಿತ್ರದುರ್ಗಕ್ಕೆ ತಲುಪಿದ್ದು, ಈ ಕುರಿತು ಮಾಹಿತಿ ತಿಳಿದ ರಾಘವೇಂದ್ರ ರಾಜ್‍ಕುಮಾರ್ ಅವರು ದ್ರಾಕ್ಷಾಯಿಣಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 418 ಸ್ಥಾನಗಳಿಸುತ್ತೆ: ಚಂದ್ರಕಾಂತ್ ಪಾಟೀಲ್

    ಅಲ್ಲದೇ ಬೆಂಗಳೂರಿಗೆ ಬಂದು ಅಪ್ಪು ಸಮಾಧಿಗೆ ತಲುಪಿದ ನಂತರ ಸ್ವತಃ ನಾನೇ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಭೇಟಿ ಮಾಡಿಸುವ ಭರವಸೆ ಕೊಟ್ಟಿದ್ದಾರೆ. ಆರಾಮಾಗಿ ಬೆಂಗಳೂರಿಗೆ ಬಂದು ತಲುಪಲು ಹೇಳಿರುವ ರಾಘವೇಂದ್ರ ಅವರು, ಆರೋಗ್ಯದ ಕಡೆ ಗಮನ ಇರಲಿ, ಬೆಂಗಳೂರಿಗೆ ಬಂದ ತಕ್ಷಣ ಮಾಹಿತಿ ನೀಡಲು ತಿಳಿಸಿದ್ದಾರೆ.

    ದ್ರಾಕ್ಷಾಯಿಣಿ ಅವರು ಈಗಾಗಲೇ ರಸ್ತೆಯಲ್ಲಿ ನೇತ್ರದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತ ಬೆಂಗಳೂರು ಕಡೆ ಹೊರಟಿದ್ದಾರೆ. ಇನ್ನು ದಾರಿಯಲ್ಲಿ ದ್ರಾಕ್ಷಾಯಿಣಿ ಅವರಿಗೆ ಹಲವು ಸಂಘಟನೆ ಸನ್ಮಾನ ಮಾಡಿ ಪ್ರೋತ್ಸಾಹವನ್ನು ನೀಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ನೋಡಲು ಓಡುತ್ತ ಹೊರಟ ಮೂರು ಮಕ್ಕಳ ತಾಯಿ

  • ಅಪ್ಪು ಸಮಾಧಿ ನೋಡಲು ಓಡುತ್ತಾ ಹೊರಟ ಮೂರು ಮಕ್ಕಳ ತಾಯಿ

    ಅಪ್ಪು ಸಮಾಧಿ ನೋಡಲು ಓಡುತ್ತಾ ಹೊರಟ ಮೂರು ಮಕ್ಕಳ ತಾಯಿ

    ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ ಒಂದು ತಿಂಗಳು ಕಳೆದಿದೆ. ಅಪಾರ ಅಭಿಮಾನಿ ಸಮೂಹ ಹೊಂದಿದ್ದ ಪುನೀತ್‍ಗೆ ಎಲ್ಲ ಬಗೆಯ ಅಭಿಮಾನಿಗಳಿದ್ದರು. ಅಂಥ ನಟನನ್ನು ಕಳೆದುಕೊಂಡ ನೋವಿನಲ್ಲಿಯೂ ಅನೇಕ ಅಭಿಮಾನಿಗಳು ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆ ಪೈಕಿ ಧಾರವಾಡದ ಈ ಮಹಿಳೆ ವಿಭಿನ್ನ ಜಾಗೃತಿಯೊಂದರ ಮೂಲಕ ಅವರ ಸಮಾಧಿ ಸ್ಥಳಕ್ಕೆ ಹೋಗುತ್ತಿದ್ದಾರೆ.

    ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ 30 ವರ್ಷದ ದ್ರಾಕ್ಷಾಯಿಣಿ ಪಾಟೀಲ್ ಅವರಿಗೆ ಮೊದಲಿನಿಂದಲೂ ಪುನೀತ್ ಅಂದರೆ ಪಂಚಪ್ರಾಣ. ಮೂರು ಮಕ್ಕಳ ತಾಯಿಯಾಗಿರುವ ದ್ರಾಕ್ಷಾಯಿಣಿ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಒಳ್ಳೆಯ ಓಟಗಾರ್ತಿ. ಮದುವೆಯಾದ ಬಳಿಕ ಸಂಸಾರದ ಜಂಜಾಟದಲ್ಲಿ ಸಿಲುಕಿ, ಸಾಧನೆ ಅಲ್ಲಿಗೆ ನಿಂತು ಬಿಟ್ಟಿತು. ಆದರೆ ಮೂರು ಮಕ್ಕಳ ತಾಯಿಯಾಗಿರುವ ಈಕೆ ಮನಗುಂಡಿ ಗ್ರಾಮದಿಂದ ಬೆಂಗಳೂರಿನಲ್ಲಿರುವ ಪುನೀತ್ ಸಮಾಧಿವರೆಗೆ ಓಡುತ್ತಲೇ ಹೋಗಲಿದ್ದಾರೆ. ಇಂದು ಓಟವನ್ನು ಆರಂಭಿಸಿರೋ ದ್ರಾಕ್ಷಾಯಿಣಿ 13 ದಿನಗಳಲ್ಲಿ ಬೆಂಗಳೂರು ತಲುಪಲಿದ್ದಾರೆ.

    ದ್ರಾಕ್ಷಾಯಣಿ ಅವರು ಅಪ್ಪು ಅವರನ್ನು ಒಂದು ಬಾರಿಯಾದರೂ ನೋಡಲು ಆಗಿರಲಿಲ್ಲವಂತೆ. ಆದರೆ ಇದೀಗ ಅವರೇ ಇಲ್ಲ. ಹೀಗಾಗಿ ಅವರ ಸಮಾಧಿ ದರ್ಶನಕ್ಕೆ ಸುಮ್ಮನೆ ಹೋಗುವ ಬದಲಿಗೆ ಅವರ ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸುತ್ತಾ ಸಾಗಿದರೆ ಒಳ್ಳೆಯದು ಎನ್ನುವ ಕಾರಣಕ್ಕೆ ಇಂಥದ್ದೊಂದು ಅಭಿಯಾನ ಆರಂಭಿಸಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ

    ನಿತ್ಯ ಸುಮಾರು 40 ಕಿ.ಮೀ. ಓಡುವ ಗುರಿ ಹೊಂದಿರೋ ದ್ರಾಕ್ಷಾಯಣಿ ಅವರು ದಾರಿ ಮಧ್ಯೆ ನೇತ್ರದಾನ, ರಕ್ತದಾನ, ದೇಹದಾನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಿದ್ದಾರೆ. ಇನ್ನು ಇವರ ಸಾಹಸಕ್ಕೆ ಪತಿ ಉಮೇಶ್ ಪಾಟೀಲ್ ಸಾಥ್ ನೀಡಿದ್ದು, ಅವರ ಜೊತೆ ವಾಹನದೊಂದಿಗೆ ಕುಟುಂಬ ಸಮೇತರಾಗಿ ಹೋಗುತ್ತಿದ್ದಾರೆ. ವಾಹನದಲ್ಲಿ ಮೂರು ಮಕ್ಕಳು ಹಾಗೂ ಅವರ ತಾಯಿ ಸಹ ಇದ್ದಾರೆ.

    ಈಗಾಗಲೇ ಕ್ರೀಡಾ ಚಟುವಟಿಕೆ ಮೂಲಕ ತನ್ನ ಪ್ರತಿಭೆ ಪ್ರದರ್ಶಿಸಿ, ಊರಿಗೆ ಕೀರ್ತಿ ತಂದಿರೋ ಈ ಮಹಿಳೆ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಅಭಿಯಾನಕ್ಕೆ ಬೇಕಾಗುವ ಎಲ್ಲ ರೀತಿಯ ಸಹಾಯವನ್ನು ಮಾಡಿದ್ದಾರೆ. ಇದನ್ನೂ ಓದಿ: ಬುರ್ಖಾ ಧರಿಸದೇ ಫೋಟೋಶೂಟ್ – ಮಾಡೆಲ್ ನೋಡಿ ನೆಟ್ಟಿಗರು ಗರಂ

  • ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

    ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

    ಬೆಂಗಳೂರು: ಅಪ್ಪು ನನ್ನ ಮಗನ ಹಾಗೆ. ಪುನೀತ್ ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದುಕೊಂಡಿದ್ದೇನೆ ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

    ಅಪ್ಪು ಅಗಲಿಕೆಯನ್ನು ಅಭಿಮಾನಿಗಳಿಗೆ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲಿಯೂ ಕುಟುಂಬಸ್ಥರ ನೋವು ಇನ್ನೂ ಅಗಾಧ. ಪ್ರೀತಿಯ ಸಹೋದರನನ್ನು ಕಳೆದುಕೊಂಡು ರಾಘಣ್ಣ ಅಪ್ಪು ನೋಡಲು ಪ್ರತಿದಿನ ಕಂಠೀರವ ಸ್ಟುಡಿಯೋಗೆ ಭೇಟಿ ನೀಡುತ್ತಿದ್ದಾರೆ.

    ಇದೇ ವೇಳೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಂಠೀರವ ಸ್ಟುಡಿಯೋಕ್ಕೆ ಬಂದ್ರೆ ಅಪ್ಪ, ಅಮ್ಮ, ಅಪ್ಪು ನಾ ನೋಡಬಹುದು. ಅಪ್ಪು ನನ್ನ ಮಗನ ಹಾಗೆ. ಪುನೀತ್ ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದುಕೊಂಡಿದ್ದೇನೆ. ಅಪ್ಪು ಮಾಡಿದ ಕೆಲಸಗಳನ್ನು ಕಣ್ಣು, ಕಿವಿ ಮುಚ್ಚಿಕೊಂಡು ಮಾಡ್ತೇವೆ. ಅಪ್ಪು ಸಿನಿಮಾಗಳು 10% ಸೆಳೆದರೆ, 90% ಅಪ್ಪುವಿನ ಸಮಾಜಮುಖಿ ಕೆಲಸಗಳು ಜನರನ್ನು ಮುಟ್ಟಿವೆ. ತುಂಬಾ ಕಣ್ಣುಗಳು ಬ್ಯಾಂಕ್ ಗೆ ಬಂದಿವೆ. ಅಪ್ಪು ನೆಮ್ಮದಿಯಾಗಿ ಹೋದ. ನಾವು ಅವ್ರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ

    ಈ ನಡುವೆ ಇಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಅಪ್ಪು ಬಾಲ್ಯದ ಫೋಟೋಗಳನ್ನು ಕೊಲಾಜ್ ಮಾಡಿರುವ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಈ ವೀಡಿಯೋಗೆ ಅಪ್ಪು ಬಾಲ್ಯದಲ್ಲಿ ಆಡಿರುವ ಬಾನದಾರಿಯಲ್ಲಿ ಹಾಡನ್ನು ಸೆಟ್ ಮಾಡಿದ್ದಾರೆ. ವೀಡಿಯೋ ಜೊತೆಗೆ ನೀನಾಡೋ ಮಾತೆಲ್ಲಾ ಚೆಂದ.. ನಿನ್ನಿಂದ ಈ ಬಾಳೆ ಅಂದ.. ಅಪ್ಪು ಮಗನೆ ಎಂದು ಹಾರ್ಟ್ ಸಿಂಬಲ್ ಹಾಕಿ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಕಾರ್‌ನಲ್ಲೇ ಕುಳಿತು ಸಿನಿಮಾ ನೋಡುವ ಓಪನ್ ಥಿಯೇಟರ್‌ಗೆ ಚಾಲನೆ

    ಪುನೀತ್ ರಾಜ್‍ಕುಮಾರ್ ಅವರು ಸಹೋದರನೇ ಆಗಿದ್ದರೂ, ಮೊದಲಿನಿಂದಲೂ ರಾಘವೇಂದ್ರ ರಾಜ್‍ಕುಮಾರ್ ಅವರು ಅಪ್ಪು ಅವರನ್ನು ಮಗನಂತೆಯೇ ನೋಡುತ್ತಿದ್ದರು. ಅಲ್ಲದೇ ಪ್ರೀತಿಯಿಂದ ಮಗನೆ ಎಂದು ಕರೆಯುತ್ತಿದ್ದರು.

  • ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು

    ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು

    ಬೆಂಗಳೂರು: ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿಯೇ ಮದುವೆಯಾಗಲು ಜೋಡಿಯೊಂದು ಆಗಮಿಸಿದೆ.

    ಗುರು ಪ್ರಸಾದ್ ಹಾಗೂ ಗಂಗಾ ಎಂಬವರು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಬಳ್ಳಾರಿಯಿಂದ ಮದುವೆಯಾಗಲು ತಾಳಿ ಸಮೇತ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಬಂದಿದ್ದಾರೆ. ಇದನ್ನೂ ಓದಿ: ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು, ಆದ್ರೆ ಅಪ್ಪು ಬರಲ್ಲ: ರಮೇಶ್ ಅರವಿಂದ್

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಈ ಜೋಡಿ, ಪುನೀತ್ ಅಂದರೆ ನಮಗೆ ತುಂಬಾ ಇಷ್ಟ. ಕುಟುಂಬಸ್ಥರಿಂದ ನಮ್ಮ ಮದುವೆಗೆ ಯಾವುದೇ ಅಡ್ಡಿಯಿಲ್ಲ. ನಮ್ಮಿಬ್ಬರ ಕುಟುಂಬದವರ ಒಪ್ಪಿಗೆ ಇದೆ ಎಂದು ಡಾ. ರಾಜ್ ಕುಮಾರ್ ಅವರ ಕುಟುಂಬಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

    ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ 9 ದಿನ ಕಳೆದಿದೆ. ಕಳೆದ 4 ದಿನಗಳಿಂದ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ ಹರಿದು ಬರುತ್ತಿದೆ. ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ದರ್ಶನ ಪಡೆದರು. ಮಳೆ ಸುರಿಯುತ್ತಿದ್ದರು ಮಳೆಯನ್ನು ಸಹ ಲೆಕ್ಕಿಸದೇ ಅಗಲಿದ ಕಲಾವಿದನಿಗೆ ಗೌರವ ಅರ್ಪಿಸಿದರು.