Tag: Appu fans

  • ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

    ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

    ದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಬ್ಯಾನರ್ ಕಟ್ಟಿದ ಸಲುವಾಗಿ ಗ್ರಾಮಸ್ಥರು ಮತ್ತು ಅಪ್ಪು ಫ್ಯಾನ್ಸ್ ನಡುವೆ ಗಲಾಟೆ ನಡೆದಿದೆ. ಈ ಘಟನೆಯ ಕುರಿತಂತೆ ಅನೇಕ ಅಪ್ಪು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್

    ಪುನೀತ್ ರಾಜ್ ಕುಮಾರ್ ಸಾವಿನ ನಂತರ ದೇಶಾದ್ಯಂತ ಅವರ ಫೋಟೋ ಮತ್ತು ಬ್ಯಾನರ್ಸ್ ಕಟ್ಟಿ ಅಭಿಮಾನ ತೋರಲಾಯಿತು. ಅನೇಕ ಕಡೆ ಪುನೀತ್ ಅವರ ಪುತ್ಥಳಿಗಳು ತಲೆಯೆತ್ತಿವೆ. ಪುನೀತ್ ಅವರಿಗಾಗಿ ದೇವಸ್ಥಾನ ಕಟ್ಟಿದ ಉದಾಹರಣೆ ಕೂಡ ಇದೆ. ರಸ್ತೆ, ಸೇತು, ವಾರ್ಡ್ ಹೀಗೆ ಅನೇಕ ಕಡೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಇಷ್ಟೊಂದು ಪ್ರೀತಿ, ಅಭಿಮಾನ ತೋರುತ್ತಿರುವಾಗ ಆ ಗ್ರಾಮದಲ್ಲಿ ಬ್ಯಾನರ್ ಗಾಗಿ ಗಲಾಟೆ ನಡೆದು ಬಿಟ್ಟಿದೆ. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ

    ಪುನೀತ್ ಜೀವಂತವಿರುವಾಗಲೇ ಯಾವತ್ತೂ ಬ್ಯಾನರ್ ಕಟ್ಟಿ, ಹಾಲಿನ ಅಭಿಷೇಕ ಮಾಡಿ ಎಂದು ಹೇಳಿದವರಲ್ಲ. ಎಷ್ಟೋ ಬಾರಿ ಆ ಹಣವನ್ನು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಕೊಡಿ ಎಂದು ಹೇಳಿದ್ದೂ ಇದೆ. ಆದರೆ, ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರಿಸುತ್ತಾ ಬಂದಿದ್ದಾರೆ. ಹಾಗೆಯೇ ಈ ಗ್ರಾಮದ ಅಭಿಮಾನಿಗಳು ಕೂಡ ಅದೇ ರೀತಿಯಲ್ಲಿ ಅಭಿಮಾನ ತೋರಿಸಿದ್ದಾರೆ. ಆದರೆ, ಅಲ್ಲೊಂದು ಯಡವಟ್ಟು ಆಗಿ ಬಿಟ್ಟಿದೆ. ಇದನ್ನೂ ಓದಿ: ಬಾಲಿವುಡ್‌ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್‌ ಮಾಡಿದ ʻಕೆಜಿಎಫ್‌ 2ʼ

    ಭಾನುವಾರ (ಏ.17) ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಸಲುವಾಗಿ ಬೆಂಗಳೂರಿನ ಯಲಹಂಕದ ಅರಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೈರಾಪುರದಲ್ಲಿ ಗಲಾಟೆ ನಡೆದಿದ್ದು, ಊರಿಗ ಗ್ರಾಮಸ್ಥರು ಮತ್ತು ಅಪ್ಪು ಅಭಿಮಾನಿಗಳು ರಾಡ್ ಹಿಡಿದುಕೊಂಡು ಕೈ ಕೈ ಮಿಲಾಯಿಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸ್ ಸಮ್ಮುಖದಲ್ಲಿ ಬ್ಯಾನರ್ ತೆರೆವುಗೊಳಿಸಿದ್ದು, ಮತ್ತೆ ಬ್ಯಾನರ್ ಹಾಕುವಂತೆ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

    ಪುನೀತ್ ರಾಜ್ ಕುಮಾರ್ ಬ್ಯಾನರ್ ಅನ್ನು ಭೈರಾಪುರದಲ್ಲಿ ಹಾಕಲಾಗಿತ್ತು. ಅದು ಜನರಿಗೆ ಓಡಾಡಲು ತೊಂದರೆ ಮಾಡುತ್ತಿದೆ ಎನ್ನುವ ಕಾರಣಕ್ಕಾಗಿ ಪೋಸ್ಟರ್ ತಗೆಯುವಂತೆ ಗ್ರಾಮಸ್ಥರು ಕೇಳಿದ್ದಾರೆ. ಅದಕ್ಕೆ ಅಭಿಮಾನಿಗಳು ಒಪ್ಪಿಲ್ಲ. ಹೀಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

  • ಕರ್ನಾಟಕದ ಮಧ್ಯ ಭಾಗದಲ್ಲಿ ಪುನೀತ್ ಅಭಿಮಾನಿಗಳಿಗೆ ಕಾರ್ಯಕ್ರಮ

    ಕರ್ನಾಟಕದ ಮಧ್ಯ ಭಾಗದಲ್ಲಿ ಪುನೀತ್ ಅಭಿಮಾನಿಗಳಿಗೆ ಕಾರ್ಯಕ್ರಮ

    ಬೆಂಗಳೂರು: ಪುನೀತ್ ಅಭಿಮಾನಿಗಳಿಗೆ ಮತ್ತೊಂದು ಬಾರಿ ಕರ್ನಾಟಕದ ಮಧ್ಯದ ಭಾಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ ಎಂದು ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಗಣೇಶ್ ಅವರು ತಿಳಿಸಿದ್ದಾರೆ.

    ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 19ನೇ ದಿನ. ಅಪ್ಪು ನೆನಪಿನಾರ್ಥ ಇಂದು ಫಿಲಂ ಚೇಂಬರ್ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ `ಪುನೀತ ನಮನ’ ಹೆಸರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದನ್ನೂ ಓದಿ: ಪುನೀತ್ ದೇವರ ಸ್ವರೂಪದಲ್ಲಿದ್ದರು, ಆದ್ರೆ ನಮಗೆ ತಿಳಿಯಲಿಲ್ಲ: ಸೋನು ಗೌಡ

    ಈ ಕಾರ್ಯಕ್ರದಲ್ಲಿ ಸುಮಾರು 2,000 ಸಾವಿರ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕನ್ನಡದ 150 ಕಲಾವಿದರು, ದಕ್ಷಿಣ ಭಾರತದ ನಾಲ್ಕು ರಾಜ್ಯದ ಖ್ಯಾತ ನಟರು, ಕ್ರೀಡಾ, ಸಾಹಿತ್ಯ ಕ್ಷೇತ್ರದ ಗಣ್ಯರಿಗೆ ಆಹ್ವಾನ ಕೊಡಲಾಗಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ – ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು

    ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗಣೇಶ್ ಅವರು, ಈ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಾರಾ ಗೋವಿಂದ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 2,000 ಮಂದಿಗೆ ಆಹ್ವಾನಿಸಲಾಗಿದೆ. ಕರ್ನಾಟಕದಿಂದ 150 ಮಂದಿ ಕಲಾವಿದರು ಈ ಕಾರ್ಯಕ್ರದಲ್ಲಿ ಭಾಗವಹಿಸಬಹುದಾಗಿದೆ. ಸುಮಾರು 10-11 ಮಂದಿ ಹೊರಗಿನಿಂದ ಬರಬಹುದು ಎಂಬ ನಿರೀಕ್ಷೆ ಇದೆ. ಸೌತ್ ಇಂಡಿಯಾ ಫಿಲ್ಮ್ ಚೇಂಬರ್ ಫೇಡರೇಷನ್ ಆಫ್ ಇಂಡಿಯಾ, ಕೇರಳ ಫಿಲ್ಮ್ ಚೇಂಬರ್, ಆಂದ್ರ ಫಿಲ್ಮ್ ಚೇಂಬರ್, ತೆಲಂಗಾಣ ಫಿಲ್ಮ್ ಚೇಂಬರ್, ತಮಿಳುನಾಡು ಫಿಲ್ಮ್ ಚೇಂಬರ್ ನ ನಿರ್ಮಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಡೀ ಚಿತ್ರರಂಗದಲ್ಲಿರುವ ಎಲ್ಲ ಅಂಗ ಸಂಸ್ಥೆಗಳು ಈ ಕಾರ್ಯಕ್ರದಲ್ಲಿ ಭಾಗವಹಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುನೀತ ನಮನ ಕಾರ್ಯಕ್ರಮ – ಯಾರೆಲ್ಲ ಗಣ್ಯರು ಬರುತ್ತಿದ್ದಾರೆ?

    ಇದೇ ವೇಳೆ ಕೋವಿಡ್-19 ಹಿನ್ನೆಲೆ ಮತ್ತು ಸಮಯ ಅಭಾವ ಇರುವುದರಿಂದ ಈ ಕಾರ್ಯಕ್ರಮಕ್ಕೆ ಕೇವಲ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದೆ. ಮುಂದಿನ ಬಾರಿ ಸುಮಾರು 1 ಲಕ್ಷ ಅಭಿಮಾನಿಗಳನ್ನು ಸೇರಿಸಿ ಕರ್ನಾಟಕದ ಮದ್ಯದ ಭಾಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ಸಾರಾ ಗೋವಿಂದ್ ಅವರು ಮತ್ತು ಎಲ್ಲಾ ಪಾದಾಧಿಕಾರಿಗಳು ತೀರ್ಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಅದ್ಭುತವಾದಂತಹ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ನೇರವಾಗಿ ನೋಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

  • ಅಭಿಮಾನಿಗಳ ಊರು ದೂರ ಇದ್ರೂ ಮನಸ್ಸು ಹತ್ತಿರವಿದೆ: ರಾಘವೇಂದ್ರ ರಾಜ್‍ಕುಮಾರ್

    ಅಭಿಮಾನಿಗಳ ಊರು ದೂರ ಇದ್ರೂ ಮನಸ್ಸು ಹತ್ತಿರವಿದೆ: ರಾಘವೇಂದ್ರ ರಾಜ್‍ಕುಮಾರ್

    ಬೆಂಗಳೂರು: ಪುನೀತ್ ರಾಜ್‍ಕುಮಾರ್ ಸವಿ ನೆನಪಿನಲ್ಲಿ ಆಯೋಜಿಸಿರುವ ಅನ್ನಸಂತರ್ಪಣ ಕಾರ್ಯಕ್ರಮಕ್ಕೆ ದೂರದ ಊರುಗಳಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳ ಊರು ದೂರ ಇದೆ, ಆದರೆ ಮನಸ್ಸು ಹತ್ತಿರವಿದೆ ನಟ ರಾಘವೇಂದ್ರ ರಾಜ್‍ಕುಮಾರ್ ಹೇಳಿದ್ದಾರೆ.

    ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 12 ದಿನ. ಈ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಇಂದು ಅಭಿಮಾನಿಗಳಿಗೆ ಹಾಗೂ ಗಣ್ಯರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರೆ. ಇದೇ ವೇಳೆ ಅಭಿಮಾನಿಗಳಿಗೆ ನಟ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ಪತ್ನಿ ಅಶ್ವಿನಿ ಅಭಿಮಾನಿಗಳಿಗೆ ಊಟ ಬಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್ ಅವರು, ಎಲ್ಲವನ್ನು ಅಭಿಮಾನಿಗಳೇ ಮಾಡುತ್ತಿದ್ದಾರೆ. ಅಭಿಮಾನಿಗಳು ಇಟ್ಟಿರುವ ಪ್ರೀತಿಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು. ಅಪ್ಪು ಅಭಿಮಾನಿಗಳ ಊರು ತುಂಬಾ ದೂರ ಇದ್ದರೂ, ಅವರ ಮನಸ್ಸು ತುಂಬಾ ಹತ್ತಿರ ಇದೆ. ಹಾಗಾಗಿ ದೂರದಲ್ಲಿದ್ದರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಎಲ್ಲರೂ ಚೆನ್ನಾಗಿ ಊಟ ಮಾಡಿ ನಿಮ್ಮ ಊರುಗಳಿಗೆ ಜೋಪಾನವಾಗಿ ಹೋಗಿ ಸೇರಿ ಎಂದು ನುಡಿದರು. ಇದನ್ನೂ ಓದಿ: ಖುದ್ದು ರಕ್ತದಾನ ಮಾಡಿ ಮಾದರಿಯಾದ ನಟ ಶಿವರಾಜ್ ಕುಮಾರ್

    ಇಲ್ಲಿಯವರೆಗೂ ಎಲ್ಲ ಕಾರ್ಯವನ್ನು ನೀವೇ ನಡೆಸಿಕೊಟ್ಟಿದ್ದೀರಾ. ಇದನ್ನು ಸಹ ನೀವೇ ನಡೆಸಿಕೊಡಿ. ನನ್ನ ತಮ್ಮ ಹೋಗುವಾಗ ತನ್ನ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಒಳ್ಳೆಯ ವಿಚಾರವನ್ನು ಬಿಟ್ಟು ಹೋಗಿದ್ದಾನೆ. ಅಭಿಮಾನಿಗಳು ಅದನ್ನು ಪಾಲಿಸಬೇಕು. ಅವರ ಗುಣ ಹಾಗೂ ಸಂದೇಶದ ಹಿಂದೆ ಹೋಗಬೇಕೆ ಹೊರತು ಅವರ ಹಿಂದೆ ಅಲ್ಲ. ಅವರಿಲ್ಲ ಅಂದರೂ ನಾಲ್ಕು ಜನರ ಮೂಲಕ ಅವರ ಕಣ್ಣುಗಳು ಇದೆಲ್ಲವನ್ನು ನೋಡುತ್ತಿದೆ. ನೇತ್ರದಾನ ನಾವು ಮಾಡುತ್ತಿದ್ದೇವೆ. ನೀವು ಮಾಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ಶಿವಣ್ಣ ಭಾವುಕ

  • ಕೈಮುಗಿದು ಕೇಳಿಕೊಳ್ಳುತ್ತೇನೆ, ಯಾರು ಆತ್ಮಹತ್ಯೆ ಮಾಡ್ಕೋಬೇಡಿ: ವಿಜಯ್ ರಾಘವೇಂದ್ರ

    ಕೈಮುಗಿದು ಕೇಳಿಕೊಳ್ಳುತ್ತೇನೆ, ಯಾರು ಆತ್ಮಹತ್ಯೆ ಮಾಡ್ಕೋಬೇಡಿ: ವಿಜಯ್ ರಾಘವೇಂದ್ರ

    ಮಡಿಕೇರಿ: ಅಪ್ಪು ಅವರು ಯಾವಾಗಲೂ ಎಲ್ಲರಿಗೂ ಸ್ಫೂರ್ತಿ ಧೈರ್ಯ ತುಂಬುತಿದ್ದವರು. ಅವರು ಇದ್ದಿದ್ದರೆ ಇದನ್ನೆಲ್ಲ ಒಪ್ಪುತ್ತಿರಲಿಲ್ಲ. ಕೈಮುಗಿದು ಕೇಳಿಕೊಳ್ಳುತ್ತೇನೆ, ದಯವಿಟ್ಟು ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ನಟ ವಿಜಯ್ ರಾಘವೇಂದ್ರ ಮನವಿ ಮಾಡಿದ್ದಾರೆ.

    ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆಯುತ್ತಿರುವ ಸಿನಿಮಾ ಶೂಟಿಂಗ್‍ವೊಂದರಲ್ಲಿ ಬ್ಯುಸಿಯಾಗಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಅಪ್ಪು ಅವರು ಯಾವಾಗಲೂ ನಗು ಮೊಗದಿಂದಲೇ ಎಲ್ಲರಿಗೂ ಪಾಸಿಟಿವ್ ವಿಚಾರ ಹೇಳುತ್ತಿದ್ದರು. ಹೀಗಿರುವಾಗ ಅವರಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ಅಪ್ಪು ಅವರಿಗಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರಾ ಅದು ಗೊತ್ತಿಲ್ಲ. ಆದರೆ ಅವರಿಗಾಗಿಯೇ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುದ್ದಿ ಹರಡುತ್ತಿದೆ. ದಯವಿಟ್ಟು ಅದು ಆಗಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:  ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ

    ಇದೇ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಮನೆಯವರಿಗೆ ಸಾಂತ್ವನ, ಧೈರ್ಯ ಹೇಳುವುದಾಗಿ ತಿಳಿಸಿದ್ದಾರೆ. 11 ನೇ ದಿನದ ಕಾರ್ಯ ಇರುವುದರಿಂದ ನಾನೂ ಕೂಡ ಅಲ್ಲಿ ಇರಬೇಕಾಗಿತ್ತು. ಆದರೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ಹೋಗಲಾಗಲಿಲ್ಲ. ಏನೆಲ್ಲಾ ನಾನು ಹೇಳಬೇಕಾಗಿತ್ತೋ ಅದನ್ನೆಲ್ಲಾ ಫೋನ್ ಮೂಲಕವೇ ಹೇಳಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಮಾಡಿಕೊಂಡು ಬಂದ ವೃದ್ಧೆ

  • ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ – ಮಧ್ಯಾಹ್ನವರೆಗೆ ಅಭಿಮಾನಿಗಳಿಗೆ ಸಮಾಧಿಗೆ ನಿರ್ಬಂಧ

    ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ – ಮಧ್ಯಾಹ್ನವರೆಗೆ ಅಭಿಮಾನಿಗಳಿಗೆ ಸಮಾಧಿಗೆ ನಿರ್ಬಂಧ

    ಬೆಂಗಳೂರು: ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ ಇರುವುದರಿಂದ ಅಭಿಮಾನಿಗಳಿಗೆ ಮಧ್ಯಾಹ್ನದವರೆಗೂ ಅಪ್ಪು ಸಮಾಧಿ ನಿರ್ಬಂಧ ಹೇರಲಾಗಿದೆ.

    ದೊಡ್ಮನೆ ಹುಡುಗ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದೆ. ಇಂದು ಪುನೀತ್ 11ನೇ ದಿನ ಪುಣ್ಯಸ್ಮರಣೆಯಾಗಿದ್ದು, ಸದಾಶಿವನಗರದ ಅಪ್ಪು ನಿವಾಸದ ಪುನೀತ್ ಫೋಟೋಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ

    ಪುನೀತ್ 11ನೇ ದಿನದ ಪುಣ್ಯಾರಾಧನೆಯ ವಿಧಿವಿಧಾನವನ್ನು ವಿನಯ್ ರಾಜ್‍ಕುಮಾರ್ ನೆರವೇರಿಸಲಿದ್ದು, 11 ಗಂಟೆ ಬಳಿಕ ಅಪ್ಪು ಸಮಾಧಿಗೆ ಎಡೆ ಅರ್ಪಣೆ ಮಾಡಲಾಗುತ್ತದೆ. ಇನ್ನೂ ಈ ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರಷ್ಟೇ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    puneeth

    ಮಧ್ಯಾಹ್ನ 12 ಗಂಟೆವರೆಗೆ ಅಭಿಮಾನಿಗಳಿಗೆ ಸಮಾಧಿ ದರ್ಶನವನ್ನು ನಿಷೇಧಿಸಲಾಗಿದ್ದು, ಕಂಠೀರವ ಸ್ಟುಡಿಯೋ ಸುತ್ತ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಪುನೀತ್ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಎಲ್ಲರಿಗೂ ಅಶ್ವಿನಿ ಧನ್ಯವಾದ

  • ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ

    ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ

    ದಾವಣಗೆರೆ: ದೊಡ್ಮನೆ ಹುಡುಗ, ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಂದ ಪ್ರೇರಣೆ ಪಡೆದು ಒಂದೇ ಗ್ರಾಮದ 60ಕ್ಕೂ ಹೆಚ್ಚು ಮಂದಿ ನೇತ್ರದಾನ ಮಾಡಲು ಮುಂದಾಗಿದ್ದಾರೆ.

    ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡದಲ್ಲಿ ನೆಚ್ಚಿನ ನಟ ಅಪ್ಪುಗೆ ಗೌರವ ಸಲ್ಲಿಸಲು ಬಂಜಾರ ಸಮುದಾಯದ 60ಕ್ಕೂ ಅಧಿಕ ಯುವಕರು ನೇತ್ರದಾನ ಮಾಡಲು ನೋಂದಯಿಸಿ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಸಿದ್ಧತೆ

    ಪುನೀತ್ ಅಗಲಿಕೆಯಿಂದ ಒಂದು ವಾರದಿಂದ ಶೋಕ ಸಾಗರದಲ್ಲಿ ಮುಳುಗಿದ್ದ ಚಟ್ಟೋಬನಹಳ್ಳಿ ಗ್ರಾಮಸ್ಥರು, ಅವರ ಆದರ್ಶವನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿಯಲ್ಲಿಯೇ ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ಅಪ್ಪು ಅನೇಕ ಜನರಿಗೆ ಸಹಾಯ ಮಾಡಿದ್ದಲ್ಲದೇ ಕಣ್ಣು ದಾನ ಮಾಡಿದ್ದರು. ಅವರು ನೇತ್ರದಾನ ಮಾಡಿದಕ್ಕೆ ಅವರ ದಾರಿಯಲ್ಲಿಯೇ ಅವರ ಅಭಿಮಾನಿಗಳು ಕಣ್ಣನ್ನು ದಾನ ಮಾಡುವ ಮೂಲಕ ಬೇರೆಯವರಿಗೆ ಆದರ್ಶರಾಗಿದ್ದಾರೆ. ಒಟ್ಟಾರೆ ಈ ಸಾಮಾಜಿಕ ಕಾರ್ಯ ಮಾಡುವ ಮೂಲಕ ಚಟ್ಟೋಬನಹಳ್ಳಿ ತಾಂಡ ರಾಜ್ಯಕ್ಕೆ ಮಾದರಿಯಾಗಿದೆ.

  • ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು

    ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು

    ಬೆಂಗಳೂರು: ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿಯೇ ಮದುವೆಯಾಗಲು ಜೋಡಿಯೊಂದು ಆಗಮಿಸಿದೆ.

    ಗುರು ಪ್ರಸಾದ್ ಹಾಗೂ ಗಂಗಾ ಎಂಬವರು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಬಳ್ಳಾರಿಯಿಂದ ಮದುವೆಯಾಗಲು ತಾಳಿ ಸಮೇತ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಬಂದಿದ್ದಾರೆ. ಇದನ್ನೂ ಓದಿ: ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು, ಆದ್ರೆ ಅಪ್ಪು ಬರಲ್ಲ: ರಮೇಶ್ ಅರವಿಂದ್

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಈ ಜೋಡಿ, ಪುನೀತ್ ಅಂದರೆ ನಮಗೆ ತುಂಬಾ ಇಷ್ಟ. ಕುಟುಂಬಸ್ಥರಿಂದ ನಮ್ಮ ಮದುವೆಗೆ ಯಾವುದೇ ಅಡ್ಡಿಯಿಲ್ಲ. ನಮ್ಮಿಬ್ಬರ ಕುಟುಂಬದವರ ಒಪ್ಪಿಗೆ ಇದೆ ಎಂದು ಡಾ. ರಾಜ್ ಕುಮಾರ್ ಅವರ ಕುಟುಂಬಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

    ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ 9 ದಿನ ಕಳೆದಿದೆ. ಕಳೆದ 4 ದಿನಗಳಿಂದ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ ಹರಿದು ಬರುತ್ತಿದೆ. ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ದರ್ಶನ ಪಡೆದರು. ಮಳೆ ಸುರಿಯುತ್ತಿದ್ದರು ಮಳೆಯನ್ನು ಸಹ ಲೆಕ್ಕಿಸದೇ ಅಗಲಿದ ಕಲಾವಿದನಿಗೆ ಗೌರವ ಅರ್ಪಿಸಿದರು.

  • ಪುನೀತ್ ವೀಡಿಯೋ ಫೂಟೇಜ್ ರಿವೀಲ್ ಮಾಡಿ – ಡಾ. ರಮಣ್ ರಾವ್ ವಿರುದ್ಧ ಅಪ್ಪು ಅಭಿಮಾನಿ ಕಿಡಿ

    ಪುನೀತ್ ವೀಡಿಯೋ ಫೂಟೇಜ್ ರಿವೀಲ್ ಮಾಡಿ – ಡಾ. ರಮಣ್ ರಾವ್ ವಿರುದ್ಧ ಅಪ್ಪು ಅಭಿಮಾನಿ ಕಿಡಿ

    ಬೆಂಗಳೂರು: ಬರೀ ಮಾತಿನಲ್ಲಿ ಹೇಳಿದರೆ ಸಾಲುವುದಿಲ್ಲ. ವೀಡಿಯೋ ಫೂಟೇಜ್ ರಿವೀಲ್ ಮಾಡಿ. ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ಡಾ. ರಮಣ್ ರಾವ್ ವಿರುದ್ಧ ಅಪ್ಪು ಅಭಿಮಾನಿ ಪರಮೇಶ್ವರ್ ಕಿಡಿ ಕಾರಿದ್ದಾರೆ.

    ಪುನೀತ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂರು ನೀಡಿದ್ದ ಅಪ್ಪು ಅಭಿಮಾನಿ ಅರುಣ್ ಪರಮೇಶ್ವರ್ ಇಂದು ಕಂಠೀರವ ಸ್ಟುಡಿಯೋ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಕಂಪ್ಲೇಂಟ್ ಕೊಟ್ಟ ನಂತರ ಡಾ. ರಮಣ್ ರಾವ್ ಹೇಳಿಕೆ ನೋಡಿದ್ದೀನಿ. ವೈದ್ಯ ರಮಣ್ ರಾವ್ ವಿರುದ್ಧ ಇದೀಗ ಇನ್ನೂ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

    ಪುನೀತ್ ಯಾವಾಗ ಬಂದರು, ಯಾವಾಗ ಕ್ಲಿನಿಕ್ ಇಂದ ಹೊರಗೆ ಹೋದರು ಎಂಬುವುದು ಗೊತ್ತಾಗಬೇಕು. ಪುನೀತ್ ಗೋಲ್ಡನ್ ಟೈಂ ಯಾಕೆ ಮಿಸ್ ಆಯಿತು ಎಂಬುವುದು ನಮ್ಮ ಪ್ರಶ್ನೆ. 15 ನಿಮಿಷ ಯಾಕೆ ಲೇಟ್ ಆಗಿದೆ ಅಂತ ಗೊತ್ತಾಗಬೇಕು. ನೀವು ಮುಚ್ಚಿಟ್ಟಿರುವುದರಿಂದ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಮಾಧ್ಯಮಗಳಿಗೆ ಸಿಸಿಟಿವಿ ಫೂಟೇಜ್‍ಗಳನ್ನ ರಿವೀಲ್ ಮಾಡಲಿ. ಅಭಿಮಾನಿಗಳಿಗಿರುವ ಎಲ್ಲಾ ಅನುಮಾನಗಳನ್ನು ಬಗೆಹರಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಈ ಕುರಿತಂತೆ ನಾನು ಸದಾಶಿವನಗರ ಪೋಲೀಸರಿಗೆ ದೂರು ನೀಡಿದ್ದೇನೆ. ಬರೀ ಮಾತಲ್ಲೇ ಹೇಳೋದಲ್ಲ, ವೀಡಿಯೋ ಫೂಟೇಜ್ ರಿವೀಲ್ ಮಾಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ: ಇಮ್ರಾನ್ ಸರ್ದಾರಿಯಾ