Tag: Appu birthday’

  • ರಾಜಕುಮಾರನಂತೆಯೇ ಬಂದ ಪುನೀತ್, ಅಪ್ಪು ಕಲಾಕೃತಿಗೆ ಫ್ಯಾನ್ಸ್ ಫಿದಾ

    ರಾಜಕುಮಾರನಂತೆಯೇ ಬಂದ ಪುನೀತ್, ಅಪ್ಪು ಕಲಾಕೃತಿಗೆ ಫ್ಯಾನ್ಸ್ ಫಿದಾ

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಜನ್ಮದಿನವನ್ನ (ಮಾ.17) ಫ್ಯಾನ್ಸ್‌ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ದಿನ ಅಪ್ಪು (Appu) ಅಭಿಮಾನಿಗಳಿಗೆ (Fans) ವಿಶೇಷ ದಿನವಾಗಿದ್ದು, ಪುನೀತ್ ಮೇಲಿನ ಅಭಿಮಾನದಿಂದ ಅಭಿಮಾನಿಯೊಬ್ಬ ಅಪ್ಪು ಮೇಣದ ಪ್ರತಿಮೆ ಮಾಡಿಸಿದ್ದಾರೆ. ಅಪ್ಪು ಸಮಾಧಿ ಬಳಿ ಪುನೀತ್ ಕಲಾಕೃತಿಯನ್ನ ಇಡಲಾಗಿದೆ.

    ಅಪ್ಪು ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಯೊಬ್ಬರು, ಪುನೀತ್ ತದ್ರೂಪಿ ಕಲಾಕೃತಿ ಕೊಟ್ಟಿರೋದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕೆಂಪು ಸೋಫಾದಲ್ಲಿ ಆಸೀನರಾಗಿರುವ ಅವರ ಮೇಣದ ಪ್ರತಿಮೆ (Statue) ನೋಡಿದರೆ ಮತ್ತೊಮ್ಮೆ ಎದುರಿಗೆ ಬಂದಂತೆ ಭಾಸವಾಗುತ್ತದೆ. ಇದನ್ನೂ ಓದಿ: ಪವನ್ ಕಲ್ಯಾಣ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಆರ್.ಚಂದ್ರು

    ಬೆಂಗಳೂರಿನ ಪೀಣ್ಯದ ಉದ್ಯಮಿ ಅದ್ವಿಕ್ ಅವರು ಅಪ್ಪು ಮೇಣದ ಕಲಾಕೃತಿಯನ್ನ ನೀಡಿದ್ದಾರೆ. ಖ್ಯಾತ ಶಿಲ್ಪ ಕಲಾವಿದರಾದ ಶ್ರೀಧರ್ ಮೂರ್ತಿ ಅವರು ಅಪ್ಪು ಕಲಾಕೃತಿಯನ್ನ ಸಿದ್ಧತೆ ಮಾಡಿದ್ದಾರೆ. 8 ತಿಂಗಳ ಶ್ರಮದಿಂದ ಕಲಾಕೃತಿ ಸಿದ್ಧತೆ ಮಾಡಲಾಗಿದೆ. ಜೀವಂತವಾಗಿ ಅಪ್ಪು ಸೋಫಾದಲ್ಲಿ ಕುಳಿತಿದ್ದಾರೇನೋ ಎನ್ನಿಸುವಷ್ಟು ನೈಜವಾಗಿದೆ. ಇನ್ನೂ ಪುನೀತ್ ಸಮಾಧಿ ಬಳಿ ಬಂದವರು ಕಲಾಕೃತಿ ನೋಡಿ ಕಣ್ತುಂಬಿಕೊಳ್ತಿದ್ದಾರೆ.

  • ಪುನೀತ್ ಹುಟ್ಟು ಹಬ್ಬಕ್ಕೆ ತಮಿಳು ನಟ ವಿಶಾಲ್ ಮೆಚ್ಚುಗೆ ಕೆಲಸ

    ಪುನೀತ್ ಹುಟ್ಟು ಹಬ್ಬಕ್ಕೆ ತಮಿಳು ನಟ ವಿಶಾಲ್ ಮೆಚ್ಚುಗೆ ಕೆಲಸ

    ಪುನೀತ್ ರಾಜ್ ಕುಮಾರ್ ಓದಿಸುತ್ತಿದ್ದ ಅಷ್ಟೂ ಮಕ್ಕಳನ್ನು ನಾನು ದತ್ತು ಪಡೆದುಕೊಳ್ಳುವೆ ಎಂದು ಹೇಳುವ ಮೂಲಕ ಪುನೀತ್ ಅವರ ಕನಸನ್ನು ಜೀವಂತವಾಗಿ ಇಟ್ಟರು ತಮಿಳು ನಟ ವಿಶಾಲ್. ಕನ್ನಡದ ನಟರು ಮೌನವಾಗಿದ್ದ ಆ ಹೊತ್ತಿನಲ್ಲಿ ವಿಶಾಲ್ ಮಾತು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ನಂತರ ಪುನೀತ್ ರಾಜ್ ಕುಮಾರ್ ಅವರ ಮನೆಗೂ ವಿಶಾಲ್ ಬಂದರು. ಪುನೀತ್ ಅವರ ಹೆಸರಿನಲ್ಲಿ ಏನೆಲ್ಲ ಮಾಡಬಹುದು ಎಂಬ ಚರ್ಚೆ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ. ಆ ಕೆಲಸ ಇನ್ನೂ ನಡೆಯುತ್ತಿದೆ. ಅಷ್ಟರಲ್ಲಿ ಪುನೀತ್ ಅವರ ಹೆಸರಿನಲ್ಲಿ ಮತ್ತೊಂದು ಕೆಲಸ ಮಾಡಿದ್ದಾರೆ ವಿಶಾಲ್. ಈ ಮೂಲಕ ಪುನೀತ್ ಹುಟ್ಟು ಹಬ್ಬವನ್ನು ಸಾರ್ಥಕಗೊಳಿಸಿದ್ದಾರೆ. ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

    ಪುನೀತ್ ಅವರಿಗೆ ತಮ್ಮ ಹುಟ್ಟು ಹಬ್ಬದ ದಿನದಂದು ಕೇಕ್ ಕತ್ತರಿಸುವುದು, ಹಾಲಿನ ಅಭಿಷೇಕ, ಕಟೌಟ್ ಸಂಸ್ಕೃತಿ ಇದಾವುದೂ ಇಷ್ಟವಿರಲಿಲ್ಲ. ‘ನನ್ನ ಹುಟ್ಟು ಹಬ್ಬವನ್ನು ಅನಾಥರಿಗೆ, ವೃದ್ಧಾಶ್ರಮಗಳಿಗೆ, ಮಕ್ಕಳಿಗೆ ಸಹಾಯ ಮಾಡುವ ಮೂಲಕ ಆಚರಿಸಿ’ ಎಂದು ಕರೆಕೊಟ್ಟಿದ್ದರು ಅಪ್ಪು. ಅದನ್ನು ವಿಶಾಲ್ ಮಾಡಿದ್ದಾರೆ. ತಮಿಳು ನಾಡಿನ 200ಕ್ಕೂ ಹೆಚ್ಚು ವೃದ್ಧಾಶ್ರಮಗಳಿಗೆ ಅವರು ಅನ್ನದಾನ ಮಾಡಿದ್ದಾರೆ. ಇದೊಂದು ಸಾರ್ಥಕ ಕ್ಷಣವೆಂದು ಅವರು ಸೋಷಿಯಲ್ ಮೀಡಿಯಾದಲ್ಲೂ ಹೇಳಿದ್ದಾರೆ.

    “ಅನ್ನದಾನ ಮಾಡಿದಾಗ ಹಿರಿಯರು ಅಪ್ಪುಗೆ ಆರ್ಶಿವಾದ ಮಾಡಿದರು. ಅವರ ಖುಷಿಯಲ್ಲಿ ನಾನು ಅಪ್ಪುವನ್ನು ಕಂಡಿದ್ದೇನೆ. ಪುನೀತ್ ಅವರಿಗೆ ಗೌರವ ಸೂಚಿಸಲು ಇದ್ದಕ್ಕಿಂತ ಉತ್ತಮ ಕೆಲಸವಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ. ‘ನೀವು ನಮ್ಮೊಂದಿಗೆ ಸದಾ ಜೀವಂತ’ ಎಂದು ಹುಟ್ಟು ಹಬ್ಬಕ್ಕೂ ಹಾರೈಸಿದ್ದಾರೆ ವಿಶಾಲ್.