Tag: Appreciation

  • ಕ್ರಿಕೆಟಿಗ ರಿಂಕು ಸಿಂಗ್ ಬಗ್ಗೆ ಅಮೆರಿಕಾದ ನೀಲಿ ಚಿತ್ರತಾರೆ ಹೇಳಿದ್ದೇನು?

    ಕ್ರಿಕೆಟಿಗ ರಿಂಕು ಸಿಂಗ್ ಬಗ್ಗೆ ಅಮೆರಿಕಾದ ನೀಲಿ ಚಿತ್ರತಾರೆ ಹೇಳಿದ್ದೇನು?

    ಕ್ರಿಕೆಟ್ (Cricket) ಆಟಗಾರರ ಮೇಲೆ ಸಿನಿಮಾ ನಟಿಯರು ಒಲವು ವ್ಯಕ್ತಪಡಿಸುವುದು ಹೊಸದೇನೂ ಅಲ್ಲ. ಡೇಟಿಂಗ್, ಲವ್, ಫ್ರೆಂಡ್ ಶಿಪ್ ಹೀಗೆ ಆಟಗಾರರಿಗೂ ಮತ್ತು ಸಿನಿಮಾ ತಾರೆಯರಿಗೆ ಹಲವು ವರ್ಷಗಳಿಂದ ನಂಟಿದೆ. ಅನೇಕ ನಟಿಯರು ಕ್ರಿಕೆಟ್ ಆಟಗಾರರನ್ನು ಮದುವೆ ಕೂಡ ಆಗಿದ್ದಾರೆ. ಇದೇ ಕಾರಣಕ್ಕಾಗಿಯೇ ಈಗ ರಿಂಕು ಸಿಂಗ್ (Rinku Singh) ಸುದ್ದಿಗೆ ಸಿಕ್ಕಿದ್ದಾರೆ.

    ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಕ್ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ ಮನ್ ರಿಂಕು ಸಿಂಗ್ ಗುಜರಾತ್ ಟೈಟಾನ್ಸ್ ವಿರುದ್ಧದ ಆಟದಲ್ಲಿ ರೋಚಕವಾಗಿ ಬ್ಯಾಟ್ ಮಾಡಿದರು. ಅದರಲ್ಲಿ ಕೊನೆಯ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗಿಸಿದ್ದರು. ಈ ಆಟವೇ ರಿಂಕು ಬಗ್ಗೆ ಪ್ರೀತಿ ಮೂಡುವಂತೆ ಮಾಡಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

    ರಿಂಕು ಸಿಂಗ್ ಬ್ಯಾಟಿಂಗ್ ಆರ್ಭಟವನ್ನು ಕಣ್ತುಂಬಿಕೊಂಡಿರುವ ಅಮೆರಿಕಾದ (America) ನೀಲಿ ಚಿತ್ರಗಳ ಖ್ಯಾತ ತಾರೆ ಕೇಂದ್ರ ಲಸ್ಟ್ (Kendra Lust) ಕ್ರಿಕೆಟಿಗನ ಕುರಿತು ಹಾಡಿಹೊಗಳಿದ್ದಾರೆ. ರಿಂಕು ಮೇಲೆ ಅಭಿಮಾನ ವ್ಯಕ್ತ ಪಡಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ರಿಂಕು ದಿ ಕಿಂಗ್’ ಎಂದು ಬರೆಯುವ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

    ಕೇಂದ್ರ ಲಸ್ಟ್ ಟ್ವೀಟ್ ಮಾಡುತ್ತಿದ್ದಂತೆಯೇ ರಿಂಕು ಅಭಿಮಾನಿಗಳು ಪ್ರತಿಯಾಗಿ ಧನ್ಯವಾದ ತಿಳಿಸಿದ್ದಾರೆ. ಆಟದಲ್ಲೇ ಹೆಚ್ಚು ಗಮನ ಕೊಡು ಎಂದು ರಿಂಕುವನ್ನು ಎಚ್ಚರಿಸಿದ್ದಾರೆ. ರಿಂಕುಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಶುಭ ನುಡಿದಿದ್ದಾರೆ. ಕೇಂದ್ರ ಲಸ್ಟ್ ಟ್ವೀಟ್ ಕುರಿತಾಗಿಯೂ ಚರ್ಚೆ ಮಾಡಿದ್ದಾರೆ.

  • ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೆಸರು ಉಲ್ಟಾ ಹಾಕಿದ ರಶ್ಮಿಕಾ ಮಂದಣ್ಣ

    ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೆಸರು ಉಲ್ಟಾ ಹಾಕಿದ ರಶ್ಮಿಕಾ ಮಂದಣ್ಣ

    ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಪೇಜ್ ನೋಡಿದವರು ಅಚ್ಚರಿ ಮತ್ತು ಕುತೂಹಲದಿಂದ ಆ ಪೋಸ್ಟ್ ಅನ್ನು ನೋಡಿದ್ದರು. ರಶ್ಮಿಕಾ ತಮ್ಮ ಹೆಸರನ್ನು ಉಲ್ಟಾ ಬರೆಯುವುದರ ಮೂಲಕ ಎಲ್ಲರಲ್ಲೂ ಪ್ರಶ್ನೆ ಮೂಡಿಸಿದ್ದರು. ಈ ರೀತಿ ಪೋಸ್ಟ್ ಮಾಡಲು ಕಾರಣ ಏನಿರಬಹುದು ಎನ್ನುವ ಚರ್ಚೆ ಕೂಡ ನಡೆಯಿತು. ಒಪ್ಪಿಕೊಂಡ ಸಿನಿಮಾಗಳು ದಬ್ಬಾಕಿಕೊಂಡವು ಅಂತ ಹಾಗೆ ಮಾಡಿದ್ರಾ ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಇನ್ನೂ ಕೆಲವರು ಟ್ರೋಲ್‍ ಗೆ ವ್ಯಂಗ್ಯ ಮಾಡಲು ಆ ರೀತಿ ಮಾಡಿದ್ರಾ ಎಂದು ಹೇಳಲಾಗಿತ್ತು.

    ಆದರೆ, ರಶ್ಮಿಕಾ ತಮ್ಮ ಹೆಸರನ್ನು ಉಲ್ಟಾ ನೇತು ಹಾಕಿದ್ದಕ್ಕೆ ಕಾರಣ ಬೇರೆ ಇದೆ. ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೇಳುವ ಅಭಿಯಾನವನ್ನು ಆರಂಭಿಸಿದ್ದು. ಅಕ್ಷರ ಬಾರದ ಹೆಣ್ಣುಮಕ್ಕಳಿಗೆ ಅಕ್ಷರಗಳು ಉಲ್ಟಾ ಕಾಣುತ್ತವೆ ಎಂದು ಹೇಳುವುದಕ್ಕಾಗಿ ಅವರು ತಮ್ಮ ಹೆಸರನ್ನು ಉಲ್ಟಾ ಬರೆದಿದ್ದರು. ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಶ್ಮಿಕಾ ಬಗ್ಗೆ ಟ್ರೋಲ್ ಮಾಡುತ್ತಿದ್ದವರೂ ಈಗ ಮೆಚ್ಚಿಕೊಂಡಿದ್ದಾರೆ.

    ಹೌದು, ಓದು ಬಾರದ ಹೆಣ್ಣು ಮಕ್ಕಳ ಪರ ರಶ್ಮಿಕಾ ಅಭಿಯಾನ ಶುರು ಮಾಡಿದ್ದಾರೆ. ಪ್ರತಿ ಹೆಣ್ಣು ಮಗುವಿಗೂ ಶಿಕ್ಷಣ ಕೊಡಿ ಎಂದು ಸಾರುತ್ತಾರೆ. ಈ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ರಶ್ಮಿಕಾ ಅವರ ಈ ಅಭಿಯಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಕೆಲಸಗಳಿಗಾಗಿ ನಾವು ನಿಮ್ಮನ್ನು ಮೆಚ್ಚಿಕೊಳ್ಳುತ್ತೇವೆ ಎಂದು ವಿರೋಧಿಗಳು ಕೂಡ ಕಾಮೆಂಟ್ ಮಾಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಸಲ್ಲದ ಕಾರಣಕ್ಕಾಗಿ ಟ್ರೋಲ್ ಆಗುತ್ತಿದ್ದರು. ಕಳೆದೊಂದು ತಿಂಗಳಿನಿಂದ ಸಿನಿಮಾ ರಂಗದಿಂದ ಬ್ಯಾನ್ ಮಾಡಿ ಅನ್ನುವ ಒತ್ತಾಯವೂ ಕೇಳಿ ಬಂತು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರು ರಶ್ಮಿಕಾ. ಇದೀಗ ಹೆಣ್ಣು ಮಕ್ಕಳ ಶಿಕ್ಷಣ ಅಭಿಯಾನದ ಮೂಲಕ ಎಲ್ಲರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ’ ಮೆಚ್ಚಿ ರಿಷಬ್ ಶೆಟ್ಟಿ ಹೊಗಳಿದ ಕಮಲ್ ಹಾಸನ್

    ‘ಕಾಂತಾರ’ ಮೆಚ್ಚಿ ರಿಷಬ್ ಶೆಟ್ಟಿ ಹೊಗಳಿದ ಕಮಲ್ ಹಾಸನ್

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಐವತ್ತು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸಿನಿಮಾ ಟೀಮ್ 50ನೇ ಸಂಭ್ರಮದಲ್ಲಿ ಇರುವಾಗ ಕಮಲ್ ಹಾಸನ್ ಚಿತ್ರ ವೀಕ್ಷಿಸಿದ್ದಾರೆ. ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಸಿನಿಮಾದ ಕಥೆ, ಅದನ್ನು ನಿರೂಪಿಸಿದ ರೀತಿ ಹಾಗೂ ರಿಷಬ್ ಶೆಟ್ಟಿ ನಟನೆಯನ್ನು ಮೆಚ್ಚಿಕೊಂಡು ಬೆನ್ನು ತಟ್ಟಿದ್ದಾರೆ. ನವೆಂಬರ್ 18 ರಂದು ಕಾಂತಾರ ಸಿನಿಮಾ ನೋಡಿದ ಕಮಲ್ ಹಾನಸ್ ಅವರು ನಿರ್ದೇಶಕ ರಿಷಬ್ ಶೆಟ್ಟಿಗೆ ಕಾಲ್ ಮಾಡಿ, ಅಭಿನಂದಿಸಿದ್ದಾರೆ.

    ಕಾಂತಾರ ಸಿನಿಮಾ ಐವತ್ತು ದಿನಗಳ ಪೂರೈಸಿದ ನಂತರವೂ ಅದರ ಕ್ರೇಜ್ ಮಾತ್ರ ಇನ್ನೂ ನಿಂತಿಲ್ಲ. ಬಿಡುವಾದಾಗೆಲ್ಲ ಸಿಲೆಬ್ರಿಟಿಗಳು ಸಿನಿಮಾ ನೋಡಿ, ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಕಾಂತಾರದ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನೇ ಮನೆಗೆ ಕರೆಯಿಸಿಕೊಂಡು ಸತ್ಕರಿಸಿದ್ದರು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್ ದಂಪತಿ

    ‘ನಾನು ಕಾಂತಾರ ಸಿನಿಮಾ ನೋಡಿದೆ. ನನಗೆ ಅರಿವಿಲ್ಲದಂತೆ ಕಣ್ಣೀರು ಬಂತು. ತುಂಬಾ ಭಾವುಕನಾಗಿಬಿಟ್ಟೆ. ಯಾಕೆಂದರೆ, ನಾನು ಆ ನೆಲದವನು. ಅಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಕಾಂತಾರ ಸಿನಿಮಾ ನನಗೆ ಬೇಗ ಕನೆಕ್ಟ್ ಆಯಿತು’ ಎಂದು ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆಯ ಬಗ್ಗೆಯೂ ಕೊಂಡಾಡಿದ್ದಾರೆ. ರಿಷಬ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಗ್ರೇಟ್ ಜಾಬ್ ಎಂದು ಹಾಡಿಹೊಗಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನೀಲ್ ಶೆಟ್ಟಿ, ಕನ್ನಡದ ಸಿನಿಮಾ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.

    ‘ಕಾಂತಾರ’ ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸೆ. 30ರಂದು ಬಿಡುಗಡೆಯಾದ ಚಿತ್ರವು ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತರ’, ಅಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಿಷಬ್ ಶೆಟ್ಟಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡ ಸೂಪರ್ ಸ್ಟಾರ್ ರಜನಿ

    ರಿಷಬ್ ಶೆಟ್ಟಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡ ಸೂಪರ್ ಸ್ಟಾರ್ ರಜನಿ

    ಕಾಂತಾರ ಸಿನಿಮಾ ನೋಡಿ ಅಚ್ಚರಿ ಎನ್ನುವಂತೆ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ಅವರಿಗೆ ಕರೆ ಮಾಡಿದ್ದರು ಸೂಪರ್ ಸ್ಟಾರ್ ರಜನಿಕಾಂತ್ (Rajinikanth). ಅದೊಂದು ಅನಿರೀಕ್ಷಿತ ಕರೆ ಆಗಿದ್ದರಿಂದ ರಿಷಬ್ ಕೂಡ ಅಚ್ಚರಿ ಪಟ್ಟಿದ್ದರು. ಸೂಪರ್ ಸ್ಟಾರ್ ಒಬ್ಬರು ಸಿನಿಮಾ ನೋಡಿ, ಕರೆ ಮಾಡಿದ್ದರಿಂದ ಅವರಿಗೆ ಕೃತಜ್ಞತೆ ಹೇಳುವುದಕ್ಕಾಗಿ ರಿಷಬ್ ರೆಡಿಯಾಗಿದ್ದರು. ಅಷ್ಟರಲ್ಲೇ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ ರಜನಿ. ಸ್ವತಃ ರಿಷಬ್ ಅವರನ್ನು ತಮ್ಮ ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ.

    ಕಾಂತಾರ (Kantara) ಮೂಲಕ ನ್ಯಾಷಿನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, ಕೆಲ ಹೊತ್ತು ರಜನಿಕಾಂತ್ ಅವರ ಜೊತೆ ಮಾತನಾಡಿ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೃತಜ್ಞತೆಯನ್ನೂ ಹೇಳಿದ್ದಾರೆ. ಕಾಂತಾರ ಮೇಕಿಂಗ್, ಅದನ್ನು ಹೇಳಿದ ರೀತಿ, ತೋರಿಸಿದ ಕ್ರಮದ ಬಗ್ಗೆ ರಜನಿಕಾಂತ್ ಮೆಚ್ಚುಗೆಯನ್ನು ಈ ಸಂದರ್ಭದಲ್ಲಿ ವ್ಯಕ್ತ ಪಡಿಸಿದ್ದಾರೆ. ರಜನಿ ಮಾತು ಕೇಳಿ ರಿಷಬ್ ಕೂಡ ಖುಷ್ ಆಗಿದ್ದಾರೆ.

    ಈ ಹಿಂದೆ ರಜನಿ ಕರೆ ಮಾಡಿದಾಗ ಥ್ರಿಲ್ ಆಗಿದ್ದ ರಿಷಬ್, ಮಾತಿನ ಮಧ್ಯೆ ರಜನಿ ಸ್ಟೈಲ್ ನಲ್ಲೇ ಸಿಗರೇಟು ತಿರುಗಿಸಿ ಬಾಯಿಗೆ ಹಾಕಿಕೊಂಡ ದೃಶ್ಯವನ್ನು ನೆನಪಿಸಿದ್ದಾರೆ. ಈ ದೃಶ್ಯ ಮಾಡುವಾಗ ನಿಮ್ಮನ್ನೇ ನೆನಪಿಸಿಕೊಂಡು, ನಿಮ್ಮದೇ ಸ್ಟೈಲ್ ನಲ್ಲೇ ಅದನ್ನು ಮಾಡಲು ಪ್ರಯತ್ನಿಸಿದ್ದೇನೆ ಎಂದು ರಿಷಬ್ ಹೇಳಿದ್ದಾರೆ. ಸಿನಿಮಾ, ಮೇಕಿಂಗ್, ಕಥೆ, ನಟನೆ, ಸಂಗೀತ ಸೇರಿದಂತೆ ಹಲವು ವಿಚಾರಗಳನ್ನು ರಜನಿ ಮುಕ್ತವಾಗಿ ರಿಷಬ್ ಜೊತೆ ಮಾತನಾಡಿದ್ದಾರೆ. ಎಲ್ಲಾ ವಿಭಾಗದ ಕೆಲಸವನ್ನೂ ರಜನಿ ಮೆಚ್ಚಿಕೊಂಡಿದ್ದಾರೆ.

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಿನದಿಂದ ದಿನಕ್ಕೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಮೊದಲ ದಿನದಂದು ಈವರೆಗೂ ಹಣ ಗಳಿಕೆಯಲ್ಲಿ ಅದು ಯಾವತ್ತೂ ಹಿಂದೆ ಬಿದ್ದಿಲ್ಲ. 200 ಕೋಟಿಗೂ ಅಧಿಕ ಹಣವನ್ನು ಕಾಂತಾರ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಈವರೆಗೂ ಕರ್ನಾಟಕವೊಂದರಲ್ಲೇ 100 ಕೋಟಿಗೂ ಅಧಿಕ ಹಣ ತಂದುಕೊಟ್ಟಿರುವ ಕಾಂತಾರ, ತೆಲಂಗಾಣ, ಉತ್ತರ ಭಾರತ, ಕೇರಳ, ವಿದೇಶದಿಂದ ಬಂದ ಒಟ್ಟು ಹಣ 80 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

    ದೇಶಾದ್ಯಂತ ಕಾಂತಾರ ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ದೀಪಾವಳಿ ಹಬ್ಬದ ರಜೆಯ ಕಾರಣದಿಂದಾಗಿ ಬಾಕ್ಸ್ ಆಫೀಸ್ ಭರ್ತಿ ಭರ್ತಿ ಆಗಿದೆ. ಇದೊಂದು ಐತಿಹಾಸಿಕ, ಮಹಾ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಈ ಗೆಲುವನ್ನು ರಿಷಬ್ ಶೆಟ್ಟಿ ದೈವಕ್ಕೆ ಅರ್ಪಿಸಿದ್ದಾರೆ. ಈ ಸಿನಿಮಾ ಗೆಲ್ಲಲು ದೈವ ಕಾರಣ, ಜನರಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ ರಿಷಬ್.

    Live Tv
    [brid partner=56869869 player=32851 video=960834 autoplay=true]

  • Exclusive -‘ಕಾಂತಾರ’ ನೋಡಿದ ರಜನಿಕಾಂತ್: ಕಾಲ್ ಮಾಡಿ ಸರ್ ಪ್ರೈಸ್ ಕೊಟ್ಟ ತಲೈವ

    Exclusive -‘ಕಾಂತಾರ’ ನೋಡಿದ ರಜನಿಕಾಂತ್: ಕಾಲ್ ಮಾಡಿ ಸರ್ ಪ್ರೈಸ್ ಕೊಟ್ಟ ತಲೈವ

    ಕಾಂತಾರ (Kantara) ಸಿನಿಮಾದ ಗೆಲುವು ರಿಷಬ್ ಶೆಟ್ಟಿ ಅವರಿಗೆ ಅಚ್ಚರಿ ಮೇಲೆ ಅಚ್ಚರಿ ನೀಡುತ್ತಿದೆ. ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಈ ಸಿನಿಮಾ ನೋಡಿ, ಮೆಚ್ಚಿಕೊಂಡಿದ್ದಾರೆ. ಅನೇಕ ತಾರೆಯರು ಸ್ವತಃ ರಿಷಬ್ ಶೆಟ್ಟಿಗೆ ಕರೆ ಮಾಡಿ ಮಾತನಾಡಿದ್ದಾರೆ. ಅಂಥದ್ದೇ ಒಂದು ಸರ್ ಪ್ರೈಸ್ ನೀಡಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್. ಕಾಂತಾರ ಸಿನಿಮಾ ನೋಡಿದ ಮೇಲೆ ರಿಷಬ್ ಜೊತೆ ಮಾತನಾಡಿದ ರಜನಿ, ಸಿನಿಮಾದ ಬಗ್ಗೆ ಹಾಡಿ ಹೊಗಳಿದ್ದಾರೆ.

    ರಜನಿ (Rajinikanth) ಕರೆ ಮಾಡಿದಾಗ ಥ್ರಿಲ್ ಆಗಿದ್ದ ರಿಷಬ್, ಮಾತಿನ ಮಧ್ಯೆ ರಜನಿ ಸ್ಟೈಲ್ ನಲ್ಲೇ ಸಿಗರೇಟು ತಿರುಗಿಸಿ ಬಾಯಿಗೆ ಹಾಕಿಕೊಂಡ ದೃಶ್ಯವನ್ನು ನೆನಪಿಸಿದ್ದಾರೆ. ಈ ದೃಶ್ಯ ಮಾಡುವಾಗ ನಿಮ್ಮನ್ನೇ ನೆನಪಿಸಿಕೊಂಡು, ನಿಮ್ಮದೇ ಸ್ಟೈಲ್ ನಲ್ಲೇ ಅದನ್ನು ಮಾಡಲು ಪ್ರಯತ್ನಿಸಿದ್ದೇನೆ ಎಂದು ರಿಷಬ್ ಹೇಳಿದ್ದಾರೆ. ಸಿನಿಮಾ, ಮೇಕಿಂಗ್, ಕಥೆ, ನಟನೆ, ಸಂಗೀತ ಸೇರಿದಂತೆ ಹಲವು ವಿಚಾರಗಳನ್ನು ರಜನಿ ಮುಕ್ತವಾಗಿ ರಿಷಬ್ ಜೊತೆ ಮಾತನಾಡಿದ್ದಾರೆ. ಎಲ್ಲಾ ವಿಭಾಗದ ಕೆಲಸವನ್ನೂ ರಜನಿ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಿನದಿಂದ ದಿನಕ್ಕೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಮೊದಲ ದಿನದಂದು ಈವರೆಗೂ ಹಣ ಗಳಿಕೆಯಲ್ಲಿ ಅದು ಯಾವತ್ತೂ ಹಿಂದೆ ಬಿದ್ದಿಲ್ಲ. ನಿನ್ನೆವರೆಗೂ 180 ಕೋಟಿಗೂ ಅಧಿಕ ಹಣವನ್ನು ಕಾಂತಾರ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಈ ವಾರದ ಕೊನೆಯಲ್ಲಿ ಸಿನಿಮಾ 200 ಕೋಟಿ ಕ್ಲಬ್ ಸೇರಲಿದೆ ಎನ್ನುತ್ತಾರೆ ಟ್ರೇಡ್ ಅನಾಲಿಸಿಸ್.

    ಈವರೆಗೂ ಕರ್ನಾಟಕವೊಂದರಲ್ಲೇ 100 ಕೋಟಿಗೂ ಅಧಿಕ ಹಣ ತಂದುಕೊಟ್ಟಿರುವ ಕಾಂತಾರ, ತೆಲಂಗಾಣ, ಉತ್ತರ ಭಾರತ, ಕೇರಳ, ವಿದೇಶದಿಂದ ಬಂದ ಒಟ್ಟು ಹಣ 80 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ವಾರದ ಒಳಗೆ ಸಲೀಸಾಗಿ ಕಾಂತಾರ ಸಿನಿಮಾ 200 ಕೋಟಿ ಕ್ಲಬ್ ಸೇರಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ.

    ದೇಶಾದ್ಯಂತ ಕಾಂತಾರ ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ದೀಪಾವಳಿ ಹಬ್ಬದ ರಜೆಯ ಕಾರಣದಿಂದಾಗಿ ಬಾಕ್ಸ್ ಆಫೀಸ್ (Box Office) ಭರ್ತಿ ಆಗುತ್ತಿದೆ. ಇದೊಂದು ಐತಿಹಾಸಿಕ, ಮಹಾ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಈ ಗೆಲುವನ್ನು ರಿಷಬ್ ಶೆಟ್ಟಿ ದೈವಕ್ಕೆ ಅರ್ಪಿಸಿದ್ದಾರೆ. ಈ ಸಿನಿಮಾ ಗೆಲ್ಲಲು ದೈವ ಕಾರಣ, ಜನರಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ ರಿಷಬ್.

    Live Tv
    [brid partner=56869869 player=32851 video=960834 autoplay=true]

  • ಮೋಹಕತಾರೆ ರಮ್ಯಾ ಪ್ರಶ್ನೆಗೆ ಉತ್ತರಿಸಿದ ಸುದೀಪ್

    ಮೋಹಕತಾರೆ ರಮ್ಯಾ ಪ್ರಶ್ನೆಗೆ ಉತ್ತರಿಸಿದ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಮೋಹಕತಾರೆ ರಮ್ಯಾ ಅವರು ಸುದೀಪ್‍ಗೆ ಇತ್ತೀಚೆಗೆ ನೇರವಾಗಿ ಒಂದು ಪ್ರಶ್ನೆಯನ್ನು ಕೇಳಿದ್ದರು. ರಮ್ಯಾ ಹೇಳಿಕೆಗ ಕಿಚ್ಚ ಪ್ರತಿಕ್ರಿಯೆ ನೀಡಿದ್ದಾರೆ.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮ್ಯಾ ಅವರು ನಿಮಗೆ ವಯಸ್ಸು ಆಗದೆ ಇಲ್ವಾ ಎಂದು ಹೇಳಿರುವುದರ ಕುರಿತಾಗಿ ಸುದೀಪ್ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ರಮ್ಯಾ ಟ್ವೀಟ್ ಮಾಡಿದ್ದು, ಖುಷಿಯಾಗಿದೆ. ರಾಜಕೀಯ ನಡುವೆ, ಸಾಕಷ್ಟು ವರ್ಷಗಳ ನಂತರ ನನ್ನ ಬಗ್ಗೆ ಟ್ವೀಟ್ ಮಾಡಿರುವುದು ಸಂತಸ ತಂದಿದೆ ಎಂದಿದ್ದಾರೆ. ಇದನ್ನೂ ಓದಿ:   ತಾಯಿ ಆಗಲು ಸಮಂತಾ ಬಯಸಿದ್ರು-ನಿರ್ದೇಶಕರ ಪುತ್ರಿ ಬಿಚ್ಚಿಟ್ಟರು ವಿಚ್ಛೇದನದ ಗುಟ್ಟು

    ಯಾವತ್ತಿದ್ರು ಬಾಸ್ ಬಾಸೇ. ವಿಷ್ಣುವರ್ಧನ್ ಹಾಗೂ ನನ್ನ ತಂದೆ ಇಬ್ಬರು ಆಲದ ಮರ. ಅವರ ನೆರಳಿನಲ್ಲಿಯೇ ನಾವು ಇದ್ದೀವಿ ಎಂದು ಹೇಳುವ ಮೂಲಕ ವಿಷ್ಣು ದಾದಾರನ್ನು ಸುದೀಪ್ ನೆನಪಿಸಿಕೊಂಡರು. ಇದನ್ನೂ ಓದಿ:  ಸುದೀಪ್ ನಿಮಗೆ ವಯಸ್ಸು ಆಗೋದೇ ಇಲ್ವಾ: ರಮ್ಯಾ

    ಅ.14ರಂದು ಅದ್ದೂರಿಯಾಗಿ ಕೋಟಿಗೊಬ್ಬ 3 ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಕ್ರೇಜ್ ಇದೆ. ಅ.7ರಂದು ಟ್ರೇಲರ್ ರಿಲೀಸ್ ಆಗಿದ್ದು, ಅದನ್ನು ನೋಡಿ ರಮ್ಯಾ ಕೂಡ ಮೆಚ್ಚಿಕೊಂಡಿದ್ದಾರೆ. ರಮ್ಯಾ ಮೆಚ್ಚಿಕೊಂಡಿದ್ದು ಮಾತ್ರವಲ್ಲದೆ ಸುದೀಪ್ ಅವರನ್ನು ಹಾಡಿಹೊಗಳಿದ್ದರು. ಇದನ್ನೂ ಓದಿ:  ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ

    ಟ್ರೇಲರ್ ಅದ್ಭುತವಾಗಿದೆ. ಕಿಚ್ಚ ಸುದೀಪ್ ಅವರೇ, ನಿಮಗೆ ವಯಸ್ಸು ಆಗುವುದೇ ಇಲ್ಲವಾ? ಎಂದು ರಮ್ಯಾ ಬರೆದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸುದೀಪ್ ವಯಸ್ಸು ಕಮ್ಮಿ ಆಗುತ್ತಿದೆ ಎಂಬರ್ಥದಲ್ಲಿ ಅವರು ಪ್ರಶಂಸೆ ವ್ಯಕ್ತಪಡಿಸಿ ಇನ್‍ಸ್ಟಾಗ್ರಾಮ್‍ನ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು. ಈ ವಿಚಾರವಾಗಿ ಸುದೀಪ್ ಇಂದು ಪ್ರತಿಕ್ರಿಯೆ ನೀಡಿದ್ದಾರೆ.

    ರಮ್ಯಾ ಸುದೀಪ್ ಅವರ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ರಂಗ ಎಸ್‍ಎಸ್‍ಎಲ್‍ಸಿ, ಜಸ್ಟ್ ಮಾತ್ ಮಾತಲ್ಲಿ, ಮುಸ್ಸಂಜೆ ಮಾತು ಸಿನಿಮಾಗಳಲ್ಲಿ ರಮ್ಯಾ ಮತ್ತು ಸುದೀಪ್ ನಟಿಸಿದ್ದರು. ಮತ್ತೆ ಅವರು ತೆರೆಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

  • ಕೊರೊನಾ ಕಟ್ಟುನಿಟ್ಟಿನ ಕ್ರಮ- ಉಡುಪಿ ಜಿಲ್ಲಾಡಳಿತಕ್ಕೆ ಕೇಂದ್ರ ಪ್ರಶಂಸೆ

    ಕೊರೊನಾ ಕಟ್ಟುನಿಟ್ಟಿನ ಕ್ರಮ- ಉಡುಪಿ ಜಿಲ್ಲಾಡಳಿತಕ್ಕೆ ಕೇಂದ್ರ ಪ್ರಶಂಸೆ

    – ಮೋದಿ ಭಾಷಣದ ಬೆನ್ನಲ್ಲೇ ಖಡಕ್ ರೂಲ್ಸ್!
    – ಬೈಕರ್ ಸವಾರರಿಗೆ ಪೊಲೀಸರ ಲಗಾಮು

    ಉಡುಪಿ: ಮಹಾಮಾರಿ ಕೊರೊನಾ ವೈರಸ್‍ಗೆ ಕಡಿವಾಣ ಹಾಕಿರುವ ಉಡುಪಿ ಜಿಲ್ಲೆಗೆ ಕೇಂದ್ರ ಸಚಿವರಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

    ಕೊರೊನಾ ವೈರಸ್ ನಿಯಂತ್ರಣ ಕುರಿತಂತೆ, ಉಡುಪಿ ಜಿಲ್ಲೆಯ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ ಕಳೆದ 2 ವಾರಗಳಿಂದ ಯಾವುದೇ ಸೋಂಕಿತರು ಕಂಡುಬಂದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಮಾರ್ಚ್ 29ರಂದು ಕೊನೆಯದಾಗಿ ಕೊರೊನಾ ಸೋಂಕಿತರೊಬ್ಬರು ಪತ್ತೆಯಾಗಿದ್ದರು. ಅದಾದ ಬಳಿಕ ಜಿಲ್ಲಾಡಳಿತ ಕೈಗೊಂಡ ಸಮರ್ಥ ನಿರ್ಧಾರಗಳಿಂದ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಂಡು ಬಂದಿಲ್ಲ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಂಡು ಬಂದ ಕೂಡಲೇ ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಜೊತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಕಾರಣ ಸೋಂಕು ಹರಡುವುದನ್ನು ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ ಎಂದು ಕೇಂದ್ರ ಪ್ರಶಂಸಿದೆ. ಜಿಲ್ಲೆಯ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದು, ಸರಕು ಸಾಗಾಣಿಕೆ ಮತ್ತು ತುರ್ತು ವೈದ್ಯಕೀಯ ಕಾರಣ ಹೊರತು ಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಜಿಲ್ಲೆಯೊಳಗೆ ಪ್ರವೇಶ ನೀಡಿಲ್ಲ ಎಂದು ಡಿಸಿ ತಿಳಿಸಿದರು.

    ಹೊರ ಜಿಲ್ಲೆಗಳಿಂದ ಸಹ ಸೋಂಕು ಹರಡುವುದನ್ನು ತಪ್ಪಿಸಲಾಗಿದೆ. ಜಿಲ್ಲೆಯೊಳಗೆ ದಿನನಿತ್ಯದ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಸಮಯ ನಿಗಧಿಪಡಿಸಲಾಗಿದ್ದು, ಖರೀದಿ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಅನಗತ್ಯ ವಾಹನ ಸಂಚಾರ ನಿಭಂಧಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿನ ಕಾರ್ಮಿಕರಿಗೆ, ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದು, ಅವರಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವ ಮೂಲಕ ಉಡುಪಿ ಜಿಲ್ಲೆ ಕೊರೊನಾ ಮುಕ್ತವಾಗಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ ಮನವಿ ಮಾಡಿದ್ದಾರೆ.

    ಖಡಕ್ ರೂಲ್ಸ್:
    ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‍ಡೌನ್ ವಿಸ್ತರಿಸಿದ್ದೇ ತಡ ಉಡುಪಿಯಲ್ಲಿ ಚೆಕ್ ಪೋಸ್ಟನ್ನು ಪೊಲೀಸರು ಫುಲ್ ಟೈಟ್ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್ ಹಾಕಲಾಗಿದೆ. ಬೆಳಗ್ಗೆ 11ರ ನಂತರ ಓಡಾಡುವ ಎಲ್ಲಾ ವಾಹನವನ್ನು ಬಿಡದೆ ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ. ಕಾರಣ ಕೇಳಿ, ವಿನಾಯಿತಿ ನಿಯಮಕ್ಕೆ ಅನ್ವಯವಾಗದಿದ್ದರೆ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವ ಬೈಕ್, ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮಣಿಪಾಲ ಉಡುಪಿಯಲ್ಲಿ 10ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ, 247 ಮೆಡಿಕಲ್‍ಗಳು, ಫಾರ್ಮಸಿ ಇರೋದ್ರಿಂದ ಈ ನಗರಗಳ ನಡುವೆ ಸ್ವಲ್ಪ ಸಾರ್ವಜನಿಕರ ಓಡಾಟ ಇದೆ.

    ಮಂಗಳವಾರ ಒಂದೇ ದಿನ 20 ಪ್ರಕರಣಗಳು ಉಡುಪಿ ನಗರ ಠಾಣೆಯಲ್ಲಿ ಪೊಲೀಸರು ದಾಖಲು ಮಾಡಕೊಂಡಿದ್ದಾರೆ. ಈ ನಡುವೆ ಹೊರ ಜಿಲ್ಲೆಗಳಿಗೆ ಹೋಗಲು ಜನ ಪೊಲೀಸ್ ಪಾಸ್‍ಗೆ ಒತ್ತಾಯ ಮಾಡುತ್ತಿದ್ದಾರೆ. ಆರೋಗ್ಯದ ವಿಚಾರ ಬಿಟ್ಟು ಬೇರೆ ಯಾವ ವಿಚಾರಕ್ಕೂ ಪಾಸ್ ಕೊಡಲ್ಲ ಅಂತ ಎಸ್ ಪಿ. ವಿಷ್ಣುವರ್ಧನ್ ಹೇಳಿದ್ದಾರೆ.