Tag: Apple Store

  • iPhone 17 ಖರೀದಿಗೆ ನೂಕುನುಗ್ಗಲು – ಆ್ಯಪಲ್‌ ಸ್ಟೋರ್‌ ಮುಂದೆ ಹೊಡೆದಾಡಿಕೊಂಡ ಗ್ರಾಹಕರು

    iPhone 17 ಖರೀದಿಗೆ ನೂಕುನುಗ್ಗಲು – ಆ್ಯಪಲ್‌ ಸ್ಟೋರ್‌ ಮುಂದೆ ಹೊಡೆದಾಡಿಕೊಂಡ ಗ್ರಾಹಕರು

    ಮುಂಬೈ: ಆ್ಯಪಲ್‌ ಸ್ಟೋರ್‌ನಲ್ಲಿ ಹೊಸ ಐಫೋನ್‌ 17 ಖರೀದಿಗೆ ಉತ್ಸಾಹ ಜೋರಾಗಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಸ್ಟೋರ್‌ನಲ್ಲಿ ಐಫೋನ್‌ ಖರೀದಿಗೆ ಗ್ರಾಹಕರು ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

    ಆ್ಯಪಲ್ ಅಂಗಡಿಯ ಹೊರಗೆ ನೂರಾರು ಗ್ರಾಹಕರು ಜಮಾಯಿಸಿದ್ದಾರೆ. ನೂಕುನುಗ್ಗಲು ಹೆಚ್ಚಾಗಿ ಪರಸ್ಪರರು ಜಗಳ ಮಾಡಿಕೊಂಡಿದ್ದಾರೆ. ಐಫೋನ್‌ಗೆ ನಾ ಮುಂದು ತಾ ಮುಂದು ಅಂತ ಎಲ್ಲರೂ ಪೈಪೋಟಿ ನಡೆಸಿದ್ದಾರೆ.

    ಗಲಾಟೆ ವೇಳೆ ಕೆಂಪು ಶರ್ಟ್‌ ಧರಿಸಿರುವ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಯೊಬ್ಬರು ಹೊರಗಡೆ ಎಳೆದೊಯ್ಯುತ್ತಿರುವ ವೀಡಿಯೋ ಕೂಡ ವೈರಲ್‌ ಆಗಿದೆ. ಒಬ್ಬರ ಮೇಲೆ ಒಬ್ಬರು ಮುಗಿಬಿದ್ದು ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆಗಳು ಸ್ಥಳದಲ್ಲಿ ನಡೆದಿವೆ. ನೂಕುನುಗ್ಗಲಲ್ಲಿ ಕೆಲವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ತಕ್ಷಣ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ಮಾಡುವವರನ್ನು ಹೊರಗೆ ಎಳೆದು ಕಳುಹಿಸಿದ್ದಾರೆ.

    ಆ್ಯಪಲ್ ತನ್ನ ಹೊಸದಾಗಿ ಬಿಡುಗಡೆಯಾದ ಐಫೋನ್ 17 ಮಾರಾಟವನ್ನು ಭಾರತದಾದ್ಯಂತ ಪ್ರಾರಂಭಿಸಿದೆ. ಮುಂಬೈ ಮತ್ತು ದೆಹಲಿಯ ಪ್ರಮುಖ ಅಂಗಡಿಗಳ ಹೊರಗೆ ಜನಸಂದಣಿ ಹೆಚ್ಚಳಕ್ಕೆ ಕಾರಣವಾಗಿದೆ.

    ಆ್ಯಪಲ್ ಕಂಪನಿಯು ಐಫೋನ್ 17 ಮತ್ತು ಹೊಚ್ಚ ಹೊಸ ಐಫೋನ್ ಏರ್ ಜೊತೆಗೆ ಟಾಪ್ ಮಾಡೆಲ್‌ಗಳಾದ ಐಫೋನ್ 17 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಇವುಗಳ ಬೆಲೆ 82,900 ರೂ.ನಿಂದ 2.3 ಲಕ್ಷ ರೂ. ವರೆಗೆ ಇದೆ.

  • ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

    ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

    ನವದೆಹಲಿ: ಆಪಲ್ (Apple) ತನ್ನ ಲೇಟೆಸ್ಟ್ ಐಫೋನ್ 15 ಸೀರೀಸ್ (iPhone 15 Series) ಮಾರಾಟವನ್ನು ಭಾರತದಲ್ಲಿ ಶುಕ್ರವಾರ ಅಧಿಕೃತವಾಗಿ ಪ್ರಾರಂಭಿಸಿದೆ. ಉದ್ಘಾಟನಾ ದಿನದಂದೇ ಐಫೋನ್ ಖರೀದಿಗಾಗಿ ಗ್ರಾಹಕರು ಐಫೋನ್ ಸ್ಟೋರ್‌ಗಳಲ್ಲಿ ತಮ್ಮ ತುದಿಗಾಲಿನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಬೆಳ್ಳಂಬೆಳಗ್ಗೆ ಗ್ರಾಹಕರು ದೆಹಲಿ (Delhi) ಹಾಗೂ ಮುಂಬೈನ (Mumbai) ಸ್ಟೋರ್‌ಗಳಲ್ಲಿ ಕ್ಯೂ ನಿಂತಿದ್ದು, ಅದರ ಫೀಚರ್‌ಗಳನ್ನು ಅನುಭವಿಸಲು ಮೊದಲಿಗರಾಗುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

    ಮುಂಬೈನ ಬಿಕೆಸಿ ಮತ್ತು ನವದೆಹಲಿಯ ಸಾಕೇತ್‌ನಲ್ಲಿರುವ ಆಪಲ್ ಸ್ಟೋರ್‌ಗಳಲ್ಲಿ ಮುಂಜಾನೆಯಿಂದಲೇ ಉದ್ದನೆಯ ಸರದಿ ಸಾಲುಗಳು ಕಂಡುಬಂದಿದೆ. ಮಳಿಗೆಗಳು ತೆರೆಯುವ ಮೊದಲೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನವದೆಹಲಿಯ ಸಾಕೇತ್‌ನ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿನ ಆಪಲ್ ಸ್ಟೋರ್‌ನಲ್ಲಿ ಮೊದಲ ಗ್ರಾಹಕ ರಾಹುಲ್, ನಾನು ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಖರೀದಿಸಿದ್ದು, ನಾನು ಮುಂಜಾನೆ 4 ಗಂಟೆಯಿಂದ ಸರದಿಯಲ್ಲಿದ್ದೆ ಮತ್ತು ನಂತರ ಫೋನ್ ಖರೀದಿಸಿದೆ ಎಂದು ಹೇಳಿದ್ದಾರೆ.

    ಆಪಲ್ ಇಂಡಿಯಾ ಪ್ರಸ್ತುತ ಐಫೋನ್ 15 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಮೇಲೆ 6,000 ರೂ. ಹಾಗೂ ಐಫೋನ್ 15 ಮತ್ತು 15 ಪ್ಲಸ್ ನಲ್ಲಿ 5,000 ರೂ. ರಿಯಾಯಿತಿಯನ್ನು ಪಡೆಯಲು ತಮ್ಮ ವೆಬ್‌ಸೈಟ್‌ನಲ್ಲಿ ಅರ್ಹ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಲು ಸೂಚಿಸಿದೆ.

    ಈ ಮೂಲಕ ಐಫೋನ್ 15ನ ಬೆಲೆ 79,900 ರೂ.ಯಿಂದ 74,900 ರೂ.ಗೆ ಕಡಿಮೆಯಾಗಿದೆ. 89,900 ರೂ.ಯ ಐಫೋನ್ 15 ಪ್ಲಸ್ 84,900 ರೂ.ಗೆ ಲಭ್ಯವಿದೆ. ಐಫೋನ್ 15 ಪ್ರೊ 1,34,900 ರೂ.ಯಿಂದ 1,28,900 ರೂ.ಗೆ ಕಡಿಮೆಯಾಗಿದೆ. ಐಫೋನ್ 15 ಪ್ರೊ ಮ್ಯಾಕ್ಸ್ 1,59,900 ರೂ. ಯಿಂದ 1,53.900 ರೂ. ಗೆ ರಿಯಾಯಿತಿಯಾಗಿದೆ. ಇದನ್ನೂ ಓದಿ: ಐಫೋನ್‌ನಲ್ಲಿದೆ ಭಾರತದ ನಾವಿಕ್ – ಏನಿದು ಸ್ವದೇಶಿ ಜಿಪಿಎಸ್‌ ವ್ಯವಸ್ಥೆ?

    ಗ್ರಾಹಕರು ಇಎಂಐ ಮಾಸಿಕ ಕಂತು ಯೋಜನೆಗಳಿಂದ ಐಫೋನ್ ಖರೀದಿ ಆಯ್ಕೆ ಮಾಡಬಹುದು. ಆಯ್ದ ಬ್ಯಾಂಕ್‌ಗಳಿಂದ 3 ಅಥವಾ 6 ತಿಂಗಳುಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐ ಯೋಜನೆಗಳ ಆಯ್ಕೆಯನ್ನು ಸಹ ಪಡೆಯಬಹುದು. ಗ್ರಾಹಕರು ತಮ್ಮ ಆಪಲ್ ಸಾಧನವನ್ನು ತಮ್ಮ ಪ್ರಸ್ತುತ ಸ್ಮಾರ್ಟ್ಫೋನ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತಷ್ಟು ರಿಯಾಯಿತಿಯನ್ನು ಪಡೆಯುವ ಟ್ರೇಡ್ ಇನ್ ಸ್ಕೀಮ್ ಲಭ್ಯವಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

    ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

    ಮುಂಬೈ: ಆ್ಯಪಲ್ (Apple) ಉತ್ಪನ್ನಗಳು ಎಷ್ಟು ಜನಪ್ರಿವೆಂದರೆ ಭಾರತ (India) ಮಾತ್ರವಲ್ಲದೇ ವಿಶ್ವದ ಬಹತೇಕ ದೇಶಗಳಲ್ಲಿ ಜನರು ಇದನ್ನು ಮುಗಿಬಿದ್ದು ಖರೀದಿಸುತ್ತಾರೆ. ಬೆಲೆ ಹೆಚ್ಚಿದ್ದರೂ ಆ್ಯಪಲ್ ತನ್ನದೇ ಒಂದು ಸ್ಟ್ಯಾಂಡರ್ಡ್ ಅನ್ನು ಕಾಪಾಡಿಕೊಂಡು ಬಂದಿದೆ. ಇದೀಗ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ (Apple Store) ಮುಂಬೈನಲ್ಲಿ (Mumbai) ಉದ್ಘಾಟನೆಯಾಗಿದೆ.

    ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ದೇಶದ ಮೊದಲ ಆ್ಯಪಲ್ ಸ್ಟೋರ್ ಏಪ್ರಿಲ್ 18ರಂದು ಉದ್ಘಾಟನೆಗೊಂಡಿದ್ದು, ಗ್ರಾಹಕರಿಗೆ ಸೇವೆ ನೀಡಲು ಪ್ರಾರಂಭಿಸಿದೆ. ಸ್ಟೋರ್‌ಗೆ ಆಗಮಿಸುವ ಗ್ರಾಹಕರು ಆ್ಯಪಲ್ ಉತ್ಪನ್ನಗಳ ಸಂಪೂರ್ಣ ಮಾಹಿತಿ ಪಡೆಯಬಹುದು. ಈ ಸ್ಟೋರ್‌ಗೆ ಫ್ಯಾಕ್ಟರಿಯಿಂದ ನೇರವಾಗಿ ಉತ್ಪನ್ನಗಳು ಆಗಮಿಸುವುದರಿಂದ ಮಾರುಕಟ್ಟೆಯ ಬೆಲೆಗಿಂತ ಅಗ್ಗದಲ್ಲಿ ಉತ್ಪನ್ನಗಳು ಗ್ರಾಹಕರ ಕೈಗೆಟುಕಲಿದೆ.

    ಆ್ಯಪಲ್ ಸ್ಟೋರ್‌ನ ವಿಶೇಷತೆಗಳೇನು?
    ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನ ಮೂಲೆಯಲ್ಲಿ ಬೃಹತ್ 2 ಅಂತಸ್ತಿನ ಗಾಜಿನಿಂದ ಮಾಡಲಾದ ಸ್ಟೋರ್ ಇದಾಗಿದೆ. ಭಾರತದಲ್ಲಿ ಆನ್‌ಲೈನ್ ಸ್ಟೋರ್‌ಗಳಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲಾ ಆ್ಯಪಲ್ ಉತ್ಪನ್ನಗಳು ಇಲ್ಲಿ ದೊರೆಯಲಿದೆ. ಮ್ಯಾಕ್‌ಬುಕ್, ಐಫೋನ್ (iPhone), ಐಪ್ಯಾಡ್, ವಾಚ್‌ಗಳನ್ನು ಹೊರತುಪಡಿಸಿ ಸ್ಟೋರ್ ಆ್ಯಪಲ್ ಆರ್ಕೇಡ್, ಆ್ಯಪಲ್ ಹೋಮ್‌ಪಾಡ್, ಆ್ಯಪಲ್ ಮ್ಯೂಸಿಕ್ ಹಾಗೂ ಆ್ಯಪಲ್ ಟಿವಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

    ಮುಂಬೈ ಆ್ಯಪಲ್ ಸ್ಟೋರ್‌ನ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ 100 ಸಿಬ್ಬಂದಿಯಿದ್ದಾರೆ. ಅದರಲ್ಲಿ ಶೇ.50 ರಷ್ಟು ಸಿಬ್ಬಂದಿ ಮಹಿಳೆಯರೇ ಇದ್ದಾರೆ. ಮುಖ್ಯವಾಗಿ ಕಂಪನಿ ಸ್ಥಳೀಯ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತದ 18 ಭಾಷೆಗಳನ್ನು ಒಳಗೊಂಡಂತೆ 25 ಭಾಷೆಗಳನ್ನು ಮಾತನಾಡಬಲ್ಲ ಸಿಬ್ಬಂದಿಯನ್ನು ನಿಯೋಜಿಸಿದೆ. ಇದನ್ನೂ ಓದಿ: ಹಾರಾಟಕ್ಕೆ ಕೆಲವೇ ಕ್ಷಣಗಳಿದ್ದಾಗ ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು

    ಇದೀಗ ಅಮೆರಿಕ ಮೂಲದ ಆ್ಯಪಲ್ ಕಂಪನಿಯ ಮೊದಲ ಮಳಿಗೆ ಭಾರತದಲ್ಲಿ ಏಪ್ರಿಲ್ 18ರಂದು ಮುಂಬೈನಲ್ಲಿ ಪ್ರಾರಂಭವಾಗಿದ್ದು, 2ನೇ ಮಳಿಗೆ ಏಪ್ರಿಲ್ 20ರಂದು ದೆಹಲಿಯಲ್ಲಿ (Delhi) ಆರಂಭಗೊಳ್ಳಲಿದೆ. ಈ ಎರಡೂ ಮಳಿಗೆಗಳ ಉದ್ಘಾಟನೆಗೆ ಸಂಸ್ಥೆಯ ಸಿಇಒ ಟಿಮ್ ಕುಕ್ (Tim Cook) ಸ್ವತಃ ಭಾರತಕ್ಕೆ ಆಗಮಿಸಿದ್ದಾರೆ.

    ಆ್ಯಪಲ್ ಕಂಪನಿ ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಮಾರಾಟ ಹಾಗೂ ಸೇವೆಯನ್ನು ನೀಡುತ್ತಿದ್ದರೂ ಕಂಪನಿಯ ಮಾನದಂಡಕ್ಕೆ ಪೂರಕವಾದ ಸ್ವಂತ ಮಳಿಗೆ ದೇಶದಲ್ಲಿ ಹೊಂದರಲಿಲ್ಲ. ಇದೀಗ ಭಾರತದಲ್ಲಿ ಪ್ರಾರಂಭವಾಗುತ್ತಿರುವ ಆ್ಯಪಲ್ ಸ್ಟೋರ್‌ಗಳಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: ಬಿಸಿಲಿನ ಎಫೆಕ್ಟ್‌ನಿಂದ ಹಳಿಯ ರಬ್ಬರ್‌ಗೆ ಬೆಂಕಿ – 20 ನಿಮಿಷ ಮೆಟ್ರೋ ಸಂಚಾರ ಬಂದ್