Tag: Apple garland

  • ರೋಡ್ ಶೋ ಕ್ಯಾನ್ಸಲ್ – ಅಮಿತ್ ಶಾಗೆ ತಂದಿದ್ದ 250 ಕೆಜಿ ಸೇಬಿನ ಹಾರ ಕ್ಷಣದಲ್ಲೇ ಚಿಂದಿ

    ರೋಡ್ ಶೋ ಕ್ಯಾನ್ಸಲ್ – ಅಮಿತ್ ಶಾಗೆ ತಂದಿದ್ದ 250 ಕೆಜಿ ಸೇಬಿನ ಹಾರ ಕ್ಷಣದಲ್ಲೇ ಚಿಂದಿ

    ಬೆಂಗಳೂರು: ವಿಧಾನಸಭಾ ಚುನಾವಣೆ (Assembly Election)  ಹಿನ್ನೆಲೆ ಬಿಜೆಪಿ (BJP) ಪ್ರಚಾರ ಕಾರ್ಯಗಳನ್ನು ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯಕ್ಕೆ ಆಗಮಿಸಿದ್ದಾರೆ. ಆದರೆ ಶುಕ್ರವಾರ ನಿಗದಿಪಡಿಸಲಾಗಿದ್ದ ಶಾ ಅವರ ರೋಡ್ ಶೋವನ್ನು (Road Show) ಮಳೆಯ ಹಿನ್ನೆಲೆ ರದ್ದುಗೊಳಿಸಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, ಮಳೆ ಬರುತ್ತಿರುವ ಹಿನ್ನೆಲೆ ರೋಡ್ ಶೋ ಮುಂದೂಡಿಕೆ ಮಾಡಿದ್ದೇವೆ. ಮಳೆ ಇರುವ ಕಾರಣ ತಮಗೆ ತೊಂದರೆ ಆಗಬಹುದು. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಿ ರೋಡ್ ಶೋ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಅಮಿತ್ ಶಾ ಅವರು ಈಗಾಗಲೇ ಬೆಂಗಳೂರಿಗೆ (Bengaluru) ಬಂದಿದ್ದಾರೆ. ಮಳೆ ಹೆಚ್ಚಾದ ಕಾರಣದಿಂದ ಹೈಕಮಾಂಡ್ ನಾಯಕರು ಈ ರೋಡ್ ಶೋ ಕ್ಯಾನ್ಸಲ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕಾರ್ಯಕ್ರಮ ಮಾಡುತ್ತೇವೆ. ಮತ್ತೆ ನಾವು ಇದೇ ಜಾಗದಲ್ಲಿ ಸೇರೋಣ. ವರುಣ ದೇವರು ನಮಗೆ ಆಶೀರ್ವಾದ ಮಾಡಿದ್ದಾರೆ. ಪುನಃ ಕಾರ್ಯಕ್ರಮ ಆಯೋಜಿಸಿ ಘೋಷಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಗೆಲ್ತಾರಾ ತಿಪ್ಪಾ ರೆಡ್ಡಿ – ಚಿತ್ರದುರ್ಗ ಅಖಾಡ ಹೇಗಿದೆ?

    ಅಮಿತ್ ಶಾ ರೋಡ್ ಶೋ ರದ್ದಾಗುತ್ತಿದ್ದಂತೆಯೇ ಅವರಿಗಾಗಿ ತರಿಸಲಾಗಿದ್ದ 250 ಕೆಜಿ ತೂಕದ ಸೇಬಿನ ಹಾರವನ್ನು (Apple Garland) ಜನರು ಚಿಂದಿ ಚಿಂದಿ ಮಾಡಿದ್ದಾರೆ. ಹಾರಕ್ಕೆ ಕೈ ಹಾಕಿ ಸೇಬುಗಳನ್ನು ಜನರು ಕಿತ್ತುಕೊಂಡು ಹೋಗಿದ್ದು, ಕ್ಷಣಾರ್ಧದಲ್ಲೇ ಹಾರದಲ್ಲಿದ್ದ ಸೇಬುಗಳೆಲ್ಲವೂ ಖಾಲಿಯಾಗಿ ಹೋಗಿದೆ. ಇದನ್ನೂ ಓದಿ: ಹಿರಿಯೂರಲ್ಲಿ ಡಿಕೆಶಿ ಆಪ್ತ ಸುಧಾಕರ್, ಬಿಎಸ್‌ವೈ ದತ್ತು ಪುತ್ರಿ ಪೂರ್ಣಿಮಾ ಮಧ್ಯೆ ಜಟಾಪಟಿ

  • ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಅಬ್ಬರದ ಪ್ರಚಾರ- ಸೇಬು, ತುಳಸಿ ಹಾರ ಹಾಕಿ ಸ್ವಾಗತ

    ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಅಬ್ಬರದ ಪ್ರಚಾರ- ಸೇಬು, ತುಳಸಿ ಹಾರ ಹಾಕಿ ಸ್ವಾಗತ

    ಬೆಂಗಳೂರು: ಉಪಚುನಾವಣೆ ಕಣ ರಂಗೇರಿದ್ದು, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಪ್ರಚಾರದ ಅಬ್ಬರ ಜೋರಾಗಿದೆ. ಪ್ರಚಾರದ ವೇಳೆ ಮತದಾರರು ಶರತ್ ಅವರಿಗೆ ಸೇಬಿನ ಹಾರ ಮತ್ತು ತುಳಸಿ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಹೊಸಕೋಟೆ ತಾಲೂಕಿನ ಚಿಕ್ಕನಲ್ಲೂರಹಳ್ಳಿಯಲ್ಲಿ 30 ಅಡಿ ಎತ್ತರದ ತುಳಸಿ ಹಾರ ಹಾಕಿ ಶರತ್ ಅವರನ್ನು ಸ್ವಾಗತಿಸಿದರೆ, ಮಲೆಮಾಕಿನಪುರದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳು, ಜನರು ಅಭಿಮಾನ ಮೆರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರಿಗೆ ಬೃಹತ್ ಸೇಬಿನ ಹಾರಗಳನ್ನು ಹಾಕುವುದು ಟ್ರೆಂಡ್ ಆಗಿ ಹೋಗಿದ್ದು, ದೊಡ್ಡ ದೊಡ್ಡ ಪಕ್ಷಗಳಿಗೆ ಸೀಮಿತವಾಗಿದ್ದ ಬೃಹತ್ ಹಾರಗಳು ಇದೀಗ ಪಕ್ಷೇತರ ಅಭ್ಯರ್ಥಿಗಳಿಗೂ ಹಾಕಲಾಗುತ್ತಿದೆ. ವಿಶೇಷವಾಗಿ ಬೃಹತ್ ತುಳಸಿ ಹಾರ ಹಾಕಿ ಶರತ್ ಬಚ್ಚೇಗೌಡರನ್ನು ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: ಮಾಜಿ ಸಿಎಂಗೆ 500 ಕೆಜಿ ತೂಕದ ಸೇಬು ಹಾರ ಹಾಕಿದ ಅಭಿಮಾನಿಗಳು

    ಶರತ್ ಬಚ್ಚೇಗೌಡರು ತಾಲೂಕಿನಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಬಿಜೆಪಿ ಅವರು ಮತದಾರರಿಗೆ ಕಮಲದ ಗುರುತು ಉಂಗುರ ಕೊಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನೀವೆಲ್ಲಾ ಉಂಗುರವನ್ನು ಹಾಕಿಕೊಳ್ಳುವಾಗ ಹುಷಾರಾಗಿ ಪರೀಕ್ಷೆ ಮಾಡಿ ತೆಗೆದುಕೊಳ್ಳಿ. ಅದು ತಾಮ್ರದ ಉಂಗುರ, ಏನಾದರೂ ಆಗಿದೇಯಾ ಅಂತ ಪರಿಶೀಲಿಸಿ. ಹಾಗೆಯೇ ಬೆರಳಿಗೆ ಹಾಕಿಕೊಂಡರೆ ಚರ್ಮರೋಗ ಬರುತ್ತದೆ ಎಂದು ಉಂಗುರ ಹಂಚಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ಶರತ್ ಬಚ್ಚೇಗೌಡರು ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದು ಸಾವಿರಾರು ಕಾರ್ಯಕರ್ತರು ಅವರಿಗೆ ಬೆಂಬಲ ಸೂಚಿಸಿದ್ದಾರೆ.

  • ಮಾಜಿ ಸಿಎಂಗೆ 500 ಕೆಜಿ ತೂಕದ ಸೇಬು ಹಾರ ಹಾಕಿದ ಅಭಿಮಾನಿಗಳು

    ಮಾಜಿ ಸಿಎಂಗೆ 500 ಕೆಜಿ ತೂಕದ ಸೇಬು ಹಾರ ಹಾಕಿದ ಅಭಿಮಾನಿಗಳು

    ಹಾವೇರಿ: ರಾಣೇಬೆನ್ನೂರು ಉಪಚುನಾವಣೆ ಹಿನ್ನೆಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತಬೇಟೆಗೆ ಇಳಿದಿದ್ದು, ಅಭಿಮಾನಿಗಳು ಬರೋಬ್ಬರಿ 500 ಕೆ.ಜಿ ತೂಕದ ಸೇಬುಹಣ್ಣಿನ ಹಾರವನ್ನು ಹಾಕಿ ತಮ್ಮ ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿದ್ದಾರೆ.

    ಉಪಚುನಾವಣೆ ಹಿನ್ನೆಲೆ ಎಲ್ಲೆಡೆ ಭರ್ಜರಿ ಪ್ರಚಾರ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಇಂದು ರಾಣೆಬೆನ್ನೂರಿನಲ್ಲಿ ಮತಬೇಟೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಪರ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದಾರೆ. ರಾಣೇಬೆನ್ನೂರು ತಾಲೂಕು ಕವಲತ್ತು ಗ್ರಾಮದಲ್ಲಿ ಕೆ.ಬಿ ಕೋಳಿವಾಡ ಜೊತೆಗೆ ಸಿದ್ದರಾಮಯ್ಯ ರೋಡ್ ಶೋ ಮಾಡಿದ್ದು, ಈ ವೇಳೆ ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ಬರೋಬ್ಬರಿ 500 ಕೆಜಿ ತೂಕದ ಸೇಬಿನ ಹಾರ ಹಾಕಿ ಅಭಿಮಾನ ಮೆರೆದರು.  ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ವೋಟ್‍ಗಾಗಿ ಮಾತ್ರವಲ್ಲ ಸೇಬಿಗಾಗಿಯೂ ಫೈಟೋ ಫೈಟು

    ರಾತ್ರಿ ವೇಳೆಯಲ್ಲೂ ಸಿದ್ದರಾಮಯ್ಯ ಅವರು ಬಿರುಸಿನ ಪ್ರಚಾರ ಮಾಡುತ್ತಿದ್ದು, ಅಭಿಮಾನಿಗಳು ಕ್ರೇನ್ ಮೂಲಕ ಸಿದ್ದರಾಮಯ್ಯ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ, ಹೂ ಮಳೆಗೈದು ಅದ್ಧೂರಿಯಾಗಿ ಸ್ವಾಗತಿಸಿದರು. ಅಭಿಮಾನಿಗಳ ಪ್ರೀತಿ, ಬೆಂಬಲ ನೋಡಿ ಸಿದ್ದರಾಮಯ್ಯ ಅವರು ಕೂಡ ಸಂತೋಷಪಟ್ಟರು.

  • ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊತ್ತ ಡಿಕೆಶಿಗೆ 410 ಕೆಜಿ ಸೇಬಿನ ಹಾರ!

    ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊತ್ತ ಡಿಕೆಶಿಗೆ 410 ಕೆಜಿ ಸೇಬಿನ ಹಾರ!

    ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಬಳ್ಳಾರಿಗೆ ಆಗಮಿಸಿದ್ದು, ಅಭಿಮಾನಿಯೊಬ್ಬ 410 ಕೆಜಿ ಸೇಬು ಹಣ್ಣಿನ ಹಾರವನ್ನು ಹಾಕಿ ಸನ್ಮಾನಿಸಿದ್ದಾರೆ.

    ಎನ್‍ಎಸ್‍ಯುಐ ಸಂಘಟನೆಯ ಜಿಲ್ಲಾಧ್ಯಕ್ಷ ಹಳ್ಳೇಗೌಡ ಸೇಬಿನ ಹಾರ ಮಾಡಿಸಿದವರು. 45 ಸಾವಿರ ರೂ. ಮೌಲ್ಯದ 410 ಕೆಜಿ ತೂಕದ ಸೇಬು ಹಣ್ಣುಗಳನ್ನು ಬಳಸಿ, 12 ಅಡಿ ಎತ್ತರ ಹಾಗೂ 2 ಅಡಿ ದಪ್ಪವಿರುವ ಹಾರವನ್ನು ಎರಡು ದಿನಗಳ ಪರಿಶ್ರಮದಲ್ಲಿ ಸಿದ್ಧಪಡಿಸಿದ್ದರು.

    ಸೇಬಿನ ಹಾರವನ್ನು ಹಾಕಿ ಸನ್ಮಾನಿಸಲು ಎನ್‍ಎಸ್‍ಯುಐ ಸದಸ್ಯರು ನಗರದ ಮೋತಿ ವೃತ್ತದ ಬಳಿ ಸಚಿವರಿಗಾಗಿ ಸಂಜೆಯಿಂದ ಕಾಯುತ್ತಿದ್ದರು. ಆದರೆ ಮಳೆಯಿಂದಾಗಿ ಸಚಿವರು ಬರುವುದು ತಡವಾಯಿತು. ರಾತ್ರಿಯಾಗಿದ್ದರೂ ಅಭಿಮಾನಿಗಳಿಗೆ ನಿರಾಸೆ ಮಾಡಬಾರದೆಂದು ಮಳೆಯ ಮಧ್ಯದಲ್ಲಿಯೇ ಡಿ.ಕೆ.ಶಿವಕುಮಾರ್ ವಾಹನದ ಮೇಲೇರಿ ಸೇಬಿನ ಹಾರ ಹಾಕಿಸಿಕೊಂಡರು.

    ಹಾರಕ್ಕಾಗಿ ಮುಗಿಬಿದ್ದ ಅಭಿಮಾನಿಗಳು
    ಡಿಕೆ ಶಿವಕುಮಾರ್ ಮೋತಿ ವೃತ್ತದಿಂದ ಹೊರ ನಡೆಯುತ್ತಿದ್ದಂತೆ, ಸಂಜೆಯಿಂದ ಕಾಯುತ್ತಿದ್ದ ಜನರು ಹಾಗೂ ಅಭಿಮಾನಿಗಳು ಸೇಬು ಹಣ್ಣು ಕಿತ್ತುಕೊಳ್ಳಲು ಮುಗಿಬಿದ್ದರು. ‘ಸಿಕ್ಕಿದ್ದೇ ಸೀರುಂಡೆ’ ಎನ್ನುವಂತೆ ಎಷ್ಟು ಸಾಧ್ಯವೋ ಅಷ್ಟು ಸೇಬು ಹಣ್ಣುಗಳನ್ನು ತೆಗೆದುಕೊಂಡರು. ಒಂದು ಕೆಜಿಗೆ 100 ರೂ. ಕೊಡಬೇಕಾದ ಸೇಬು ಹಣ್ಣುಗಳು ಫ್ರೀ ಸಿಗುತ್ತವೆ ಅಂದರೆ ಯಾರು ಬೇಡ ಅಂತಾರೆ ಎಂಬಂತೆ ಹಾರವನ್ನು ಎಳೆದಾಡಿ, ವಾಹನದಿಂದ ಕೆಳಗೆ ಕೆಡವಿ ಸೇಬು ಹಣ್ಣು ಕಿತ್ತು ಜೇಬು, ಅಂಗಿ, ಟವೆಲ್ ನಲ್ಲಿ ತುಂಬಿಕೊಂಡು ಹೋದರು. ಸೇಬು ಪಡೆಯಲು ಯುವಕರು, ವಯಸ್ಸಾದವರು ಹಾರದ ಮೇಲೆ ಬೀಳುತ್ತಿದ್ದರು. ರಸ್ತೆಯ ಮೇಲೆ ಬಿದ್ದ ಹಣ್ಣಗಳನ್ನು ತಮ್ಮ ಕೈತುಂಬ ಹಿಡಿದು ಅಲ್ಲಿಂದ ಕಾಲ್ಕಿತ್ತರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv