Tag: Apple company

  • ಕುಂಭಮೇಳದಲ್ಲಿ ಭಾಗಿಯಾಗ್ತಾರೆ ಆ್ಯಪಲ್ ಸಹ-ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ

    ಕುಂಭಮೇಳದಲ್ಲಿ ಭಾಗಿಯಾಗ್ತಾರೆ ಆ್ಯಪಲ್ ಸಹ-ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ

    ಲಕ್ನೋ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ 2025 ರ ಮಹಾ ಕುಂಭಮೇಳದಲ್ಲಿ ದಿವಂಗತ ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಭಾಗವಹಿಸಲಿದ್ದಾರೆ ಎಂದು ಸ್ವಾಮಿ ಕೈಲಾಶಾನಂದ್ ಜಿ ಮಹಾರಾಜ್ ಬುಧವಾರ ದೃಢಪಡಿಸಿದ್ದಾರೆ.

    ಲಾರೆನ್ ಪೊವೆಲ್ ಅವರಿಗೆ ‘ಕಮಲಾ’ ಎಂಬ ಹಿಂದೂ ಹೆಸರನ್ನು ನೀಡಲಾಗಿದೆ. ಅವರು ತನ್ನ ಗುರುಗಳನ್ನು ಭೇಟಿ ಮಾಡಲು ಇಲ್ಲಿಗೆ ಬರುತ್ತಿದ್ದಾರೆ. ನಾವು ಅವರಿಗೆ ಕಮಲಾ ಎಂದು ಹೆಸರಿಟ್ಟಿದ್ದೇವೆ. ಅವರು ನಮಗೆ ಮಗಳಿದ್ದಂತೆ. ಆಕೆ ಭಾರತಕ್ಕೆ ಎರಡನೇ ಬಾರಿ ಬರುತ್ತಿದ್ದಾರೆ. ಕುಂಭಮೇಳಕ್ಕೆ ಎಲ್ಲರಿಗೂ ಸ್ವಾಗತ ಎಂದು ಮಹಾರಾಜ್ ತಿಳಿಸಿದ್ದಾರೆ.

    ಜಗತ್ತಿನ ಹೆಚ್ಚಿನ ಜನರು ಯಾರೋ ಒಬ್ಬ ಗುರುವಿನ ಮಾರ್ಗದರ್ಶನದಲ್ಲಿದ್ದಾರೆ. ಅನೇಕ ಜನರು ಕುಂಭಮೇಳಕ್ಕೆ ಬರುತ್ತಿದ್ದಾರೆ. ಕೆಲವರು ತಮ್ಮ ವೈಯಕ್ತಿಕ ಕಾರ್ಯಕ್ರಮಕ್ಕಾಗಿ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಇದು ಧಾರ್ಮಿಕ ಮೇಳ. ದೇಶ-ವಿದೇಶಗಳಿಂದ ಜನರು ಆಶೀರ್ವಾದ ಪಡೆಯಲು ಮಹಾ ಕುಂಭಕ್ಕೆ ಭೇಟಿ ನೀಡುತ್ತಾರೆ ಎಂದಿದ್ದಾರೆ.

    ಈ ಬಾರಿ ಭಕ್ತರು ದೈವಿಕ ಮತ್ತು ಭವ್ಯವಾದ ಕುಂಭಮೇಳಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭರವಸೆ ನೀಡಿದ್ದಾರೆ. ಪ್ರಯಾಗರಾಜ್‌ನ ದೈವಿಕ, ಭವ್ಯ, ಹಸಿರು ಕುಂಭಕ್ಕೆ ಬಹಳ ದೈವಿಕ ಮತ್ತು ಭವ್ಯವಾದ ಸಿದ್ಧತೆಗಳನ್ನು ಮಾಡಲಾಗಿದೆ. ನಾವು ಜ.13 ಕ್ಕಾಗಿ ಕಾಯುತ್ತಿದ್ದೇವೆ. ಎಲ್ಲರನ್ನು ಸ್ವಾಗತಿಸಲು ಮತ್ತು ಅವರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಂಪೂರ್ಣ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಂದು ತಿಳಿಸಿದ್ದಾರೆ.

  • ಐಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರಿಂದ ಹಲ್ಲೆ

    ಐಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರಿಂದ ಹಲ್ಲೆ

    ನವದೆಹಲಿ: ಆಪಲ್‌ (Apple) ತನ್ನ ಲೇಟೆಸ್ಟ್‌ ಐಫೋನ್‌ 15 ಸೀರೀಸ್‌ ((iPhone 15 Series) ಮಾರಾಟವನ್ನು ಭಾರತದಲ್ಲಿ ಅಧಿಕೃತವಾಗಿ ಪ್ರಾರಂಭಿಸಿದೆ. ಐಫೋನ್‌ ಕೊಳ್ಳಲು ಗ್ರಾಹಕರ ದಂಡೇ ಸ್ಟೋರ್‌ಗಳ ಕಡೆ ಮುಖ ಮಾಡಿದೆ. ಐಫೋನ್‌ ವಿತರಣೆಗೆ ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆಯೇ ಗ್ರಾಹಕರು ಹಲ್ಲೆ ನಡೆಸಿರುವ ಘಟನೆ ನವದೆಹಲಿಯಲ್ಲಿ (New Delhi) ನಡೆದಿದೆ.

    ಉತ್ತರ ದೆಹಲಿಯ ಕಮಲಾ ನಗರ ಮಾರುಕಟ್ಟೆಯಲ್ಲಿ ಘಟನೆ ನಡೆದಿದ್ದು, ದೃಶ್ಯದ ವೀಡಿಯೋ ಇದೀಗ ವೈರಲ್ ಆಗಿದೆ. ಶುಕ್ರವಾರ ಇಬ್ಬರು ಗ್ರಾಹಕರು, ಎಲೆಕ್ಟ್ರಾನಿಕ್ಸ್ ಶೋರೂಮ್‌ನ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದವರನ್ನು ಜಸ್ಕಿರತ್ ಸಿಂಗ್ ಮತ್ತು ಮನದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

    ಐಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರು ರೋಷಗೊಂಡು ಹಲ್ಲೆ ನಡೆಸಿದ್ದಾರೆ. 10 ಕ್ಕೂ ಹೆಚ್ಚು ಇತರೆ ಸಿಬ್ಬಂದಿ ಧಾವಿಸಿದರೂ ಹಲ್ಲೆ ತಪ್ಪಿಸುವುದನ್ನು ಸಾಧ್ಯವಾಗಿಲ್ಲ. ಸಿಬ್ಬಂದಿ ಟೀ-ಶರ್ಟ್‌ ಕೂಡ ಹರಿದು ಹಾಕಲಾಗಿದೆ.

    ನಾನು ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಇಲ್ಲಿದ್ದೇನೆ. ಭಾರತದ ಮೊದಲ ಆಪಲ್ ಸ್ಟೋರ್‌ನಲ್ಲಿ ಮೊದಲ ಐಫೋನ್ ಪಡೆಯಲು ನಾನು 17 ಗಂಟೆಗಳ ಕಾಲ ಸರದಿಯಲ್ಲಿ ಕಾಯುತ್ತಿದ್ದೇನೆ. ನಾನು ಅಹಮದಾಬಾದ್‌ನಿಂದ ಬಂದಿದ್ದೇನೆ ಎಂದು ಗ್ರಾಹಕರೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ‘ನಮೋ’ ಜೆರ್ಸಿ ಗಿಫ್ಟ್ ನೀಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆ್ಯಪಲ್

    ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆ್ಯಪಲ್

    ನವದೆಹಲಿ: ಆ್ಯಪಲ್ ಕಂಪನಿಯು (Apple Company) ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ತನ್ನ ಕಂಪನಿಯ ಕಾರ್ಪೊರೇಟ್ ವಿಭಾಗದ ಉದ್ಯೋಗಿಗಳ ಬೋನಸ್‌ಗಳನ್ನು (Bonus) ವಿಳಂಬಗೊಳಿಸಲು ನಿರ್ಧರಿಸಿದೆ ಹಾಗೂ ಹಲವು ಉದ್ಯೋಗಿಗಳ ಬೋನಸ್ ಕೂಡಾ ಕಡಿಮೆಗೊಳಿಸುತ್ತದೆ ಎಂದು ವರದಿಗಳು ತಿಳಿಸಿವೆ.

    ಈ ವರದಿಗಳು ನಿಜವಾದಲ್ಲಿ ಉದ್ಯೋಗಿಗಳ ಒಂದು ವರ್ಗಕ್ಕೆ ಮುಂದಿನ ತಿಂಗಳು ಬಡ್ತಿ (Promtion) ದೊರೆಯುವುದಿಲ್ಲ. ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಕಂಪನಿಯು ವರ್ಷಕ್ಕೆ ಎರಡು ಬಾರಿ (ಎಪ್ರಿಲ್ ಮತ್ತು ಅಕ್ಟೋಬರ್) ತನ್ನ ಉದ್ಯೋಗಿಗಳಿಗೆ ಬೋನಸ್ ನೀಡುತ್ತದೆ. ಬಡ್ತಿ ಹಾಗು ಬೋನಸ್ ಹೊರತಾಗಿ ಆ್ಯಪಲ್ ಕಂಪನಿಯು ನೇಮಕಾತಿಯನ್ನು (Recruitment) ಸ್ಥಗಿತಗೊಳಿಸುವ ನಿರೀಕ್ಷೆಯಿದೆ. ಇದಕ್ಕೂ ಮೊದಲು 2020ರಲ್ಲಿ ಗೂಗಲ್, ಮೆಟಾ ಹಾಗು ಇನ್ನಿತರೆ ಟೆಕ್ ಕಂಪನಿಗಳು ಲೆಕ್ಕಕ್ಕಿಂತ ಜಾಸ್ತಿ ಉದ್ಯೋಗಿಗಳ ನೇಮಕಾತಿಯನ್ನು ಮಾಡಿಕೊಂಡು ಪ್ರಸ್ತುತ ಸಾವಿರಾರು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿದೆ. ಇದನ್ನೂ ಓದಿ: Infosys ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ 

    ಆ್ಯಪಲ್ ಕಂಪನಿಯ ಹೆಚ್‌ಆರ್ ತಂಡವು ಉದ್ಯೋಗಿಗಳ ಹಾಜರಾತಿಯನ್ನು ಸೂಕ್ಷ್ಮರೀತಿಯಲ್ಲಿ ಗಮನಿಸುತ್ತಿದೆ. ಈ ಕಂಪನಿಯು ಮನೆಯಿಂದ ಕೆಲಸ ಮಾಡುವುದನ್ನು ಕೊನೆಗೊಳಿಸಿ ಉದ್ಯೋಗಿಗಳು ವಾರಕ್ಕೆ ಮೂರು ಸಲ ಕಚೇರಿಗೆ ಬಂದು ಕೆಲಸ ಮಾಡುವಂತೆ ಹೇಳಿದೆ. ಇದನ್ನೂ ಓದಿ: ಕೋವಿಡ್‌ ಬಳಿಕ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಬೆಲೆ ಭಾರೀ ಇಳಿಕೆ

    ಕಂಪನಿಯು ಕಳೆದ ಎರಡು ವರ್ಷಗಳಿಂದ ಇತರೆ ಕಂಪನಿಗಳ ತರಹ ಅಧಿಕ ನೇಮಕಾತಿಯನ್ನು ಮಾಡಿಕೊಳ್ಳದೆ ಎಚ್ಚರಿಕೆಯಿಂದ ನೇಮಕ ಮಾಡಿಕೊಳ್ಳುವ ಮೂಲಕ ಸಾಮೂಹಿಕ ವಜಾಗೊಳಿಸುವಿಕೆಯನ್ನು (Mass Layoff) ತಪ್ಪಿಸಿದೆ. ಈ ಕಂಪನಿಯು 2020 ಮತ್ತು 2021ರ ನಡುವೆ ಕೇವಲ 7,000 ಸಾವಿರ ಉದ್ಯೋಗಿಗಳನ್ನು ಮಾತ್ರ ನೇಮಕ ಮಾಡಿಕೊಂಡಿದೆ. ವರದಿಗಳ ಪ್ರಕಾರ ಅದೇ ಕಂಪನಿಯು 2022ನೇ ವರ್ಷದ ಸೆಪ್ಟೆಂಬರ್ ತಿಂಗಳ ಒಳಗಾಗಿ 1,64,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಇದು 2021ನೇ ವರ್ಷದ ನೇಮಕಾತಿಯಿಂದ ಶೇ.6.5ರಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ: ಮತ್ತೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ 

    ಆ್ಯಪಲ್ ಕಂಪನಿಯ ಷೇರುದಾರರ ಸಭೆಯ ಸಂದರ್ಭದಲ್ಲಿ ಕಂಪನಿಯ ಕಾರ್ಯ ನಿರ್ವಾಹಕ (CEO) ಟಿಮ್ ಕುಕ್ (Tim Cook) ಅವರು, ಹಣದ ವಿಷಯದಲ್ಲಿ ಕಂಪನಿಯು ವಿಶೇಷವಾದ ಜಾಗರೂಕತೆಯನ್ನು ಮುಂದುವರೆಸಿದೆ. ನಾವು ಹಣಖರ್ಚು ವಿಷಯದಲ್ಲಿ ಬಹಳ ವಿವೇಕವಾಗಿ ಹಾಗೂ ಚಿಂತನಾಶೀಲರಾಗಿದ್ದೇವೆ ಮತ್ತು ನೇಮಕಾತಿ ಮಾಡಿಕೊಳ್ಳುವುದರಲ್ಲಿ ಉದ್ದೇಶಪೂರ್ವಕವಾಗಿ ಮುಂದುವರೆಯುತ್ತೇವೆ ಎಂದು ಷೇರುದಾರರಿಗೆ ಮಾಹಿತಿಯನ್ನು ತಿಳಿಸಿದರು. ಇದನ್ನೂ ಓದಿ: ಚೀನಾದಿಂದ ಬೆಂಗಳೂರಿಗೆ ಶಿಫ್ಟ್ – ಸ್ಥಾಪನೆಯಾಗಲಿದೆ ಐಫೋನ್ ತಯಾರಿಕಾ ಘಟಕ, 1 ಲಕ್ಷ ಮಂದಿಗೆ ಉದ್ಯೋಗ

  • 1.77 ಕೋಟಿಗೆ ಸೇಲ್ ಆಯ್ತು 1970ರ ದಶಕದ ಸ್ಟೀವ್ ಜಾಬ್ಸ್ ಚಪ್ಪಲಿ

    1.77 ಕೋಟಿಗೆ ಸೇಲ್ ಆಯ್ತು 1970ರ ದಶಕದ ಸ್ಟೀವ್ ಜಾಬ್ಸ್ ಚಪ್ಪಲಿ

    ವಾಷಿಂಗ್ಟನ್: ಆಪಲ್ ಕಂಪನಿಯ ಸಹ-ಸಂಸ್ಥಾಪಕ (Apple co-founder) ಸ್ಟೀವ್ ಜಾಬ್ಸ್ (Steve Jobs) ಅವರು ಧರಿಸುತ್ತಿದ್ದ ಕಂದು ಬಣ್ಣದ ಲೆದರ್ ಚಪ್ಪಲಿ 1.77 ಕೋಟಿಗೆ ($218,750) ಮಾರಾಟವಾಗಿದೆ ಎಂದು ಹರಾಜು (Auctions) ಕಂಪನಿ ಜೂಲಿಯನ್ಸ್ (Julien’s) ತಿಳಿಸಿದೆ.

    ನವೆಂಬರ್ 11 ರಿಂದ ನೇರ ಪ್ರಸಾರವಾದ ಹರಾಜು ಪ್ರಕ್ರಿಯೆ ನವೆಂಬರ್ 13ಕ್ಕೆ ಮುಕ್ತಾಯವಾಯಿತು. ಒಂದು ಜೊತೆ ಕಂದು ಬಣ್ಣದ (Brown Suede) ಸ್ಯೂಡ್ ಲೆದರ್ ಬರ್ಕೆನ್‍ಸ್ಟಾಕ್ ಅರಿಜೋನಾ ಚಪ್ಪಲಿಯನ್ನು (Leather Birkenstock Arizona sandals) ಸ್ಟೀವ್ ಜಾಬ್ಸ್ ಅವರು ಧರಿಸುತ್ತಿದ್ದರು. 1970ರ ಮತ್ತು 1980ರ ದಶಕದಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಯನ್ನು ಧರಿಸುತ್ತಿದ್ದರು. ಈ ಒಂದು ಜೊತೆ ಚಪ್ಪಲಿ, ಹಿಂದೆ ಸ್ಟೀವ್ ಜಾಬ್ಸ್ ಅವರ ಮನೆ ನಿರ್ವಾಹಕ ಆಗಿದ್ದ ಮಾರ್ಕ್ ಶೆಫ್ ಅವರ ಬಳಿ ಇತ್ತು.

    ಹರಾಜು ಮನೆಯ ವೆಬ್‍ಸೈಟ್‍ನಲ್ಲಿನ ವಿವರಗಳ ಪ್ರಕಾರ, ಆಪಲ್ ಕಂಪನಿಯ ಇತಿಹಾಸದಲ್ಲಿ ಅನೇಕ ಪ್ರಮುಖ ಕ್ಷಣಗಳಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಗಳನ್ನು ಧರಿಸಿದ್ದರು. 1976ರಲ್ಲಿ ಲಾಸ್ ಆಲ್ಟೋಸ್ ಗ್ಯಾರೇಜ್‍ನಲ್ಲಿ ಆಪಲ್ ಕಂಪ್ಯೂಟರ್ ಅನ್ನು ಆನ್ ಮಾಡುವ ಸಂದರ್ಭದಲ್ಲಿ ಸ್ಟೀವ್ ಜಾಬ್ಸ್ ಇದೇ ಚಪ್ಪಲಿಯನ್ನು ಧರಿಸಿದ್ದರು. ಜಾಬ್ಸ್ ಬಿರ್ಕೆನ್‍ಸ್ಟಾಕ್ಸ್‌ನ ಜಾಣ್ಮೆ ಮತ್ತು ಪ್ರಾಯೋಗಿಕತೆಯನ್ನು ಕಂಡು ಜನ ಬೆರಗಾಗಿದ್ದರು. ಇದನ್ನೂ ಓದಿ: ಯಾರಿಗೂ ನಂಬಿಕೆ ದ್ರೋಹ ಮಾಡ್ಬೇಡಿ- ಗೆಳತಿಯ ಕತ್ತು ಸೀಳಿ ವೀಡಿಯೋ ಹಂಚಿಕೊಂಡ ಕ್ರೂರಿ

    ಈ ಚಪ್ಪಲಿಯನ್ನು ಇಟಲಿಯ ಮಿಲಾನೊದಲ್ಲಿನ ಸಲೋನ್ ಡೆಲ್ ಮೊಬೈಲ್‍ನಲ್ಲಿ ಮಾತ್ರವಲ್ಲದೇ, 2017 ರಲ್ಲಿ ಜರ್ಮನಿಯ ರಹ್ಮ್ಸ್‍ನಲ್ಲಿರುವ ಬರ್ಕೆನ್‍ಸ್ಟಾಕ್ ಪ್ರಧಾನ ಕಚೇರಿಯಲ್ಲಿ, ನ್ಯೂಯಾರ್ಕ್‍ನ ಸೋಹೋದಲ್ಲಿನ ಬಿರ್ಕೆನ್‍ಸ್ಟಾಕ್‍ನಲ್ಲಿ, ಯುನೈಟೆಡ್ ಸ್ಟೇಟ್ಸ್ ಶಾಪ್ಸ್‍ಗಳು ಸೇರಿದಂತೆ ಹಲವೆಡೆ ಪ್ರದರ್ಶನಕ್ಕೆ ಇಡಲಾಗಿತ್ತು. ಕೊಲ್ನ್, ಜರ್ಮನಿಯ ಕಲೋನ್‍ನಲ್ಲಿ ಪೀಠೋಪಕರಣ ಮೇಳ, 2018 ರಲ್ಲಿ ಡೈ ಝೀಟ್ ಮ್ಯಾಗಜೀನ್‍ಗಾಗಿ ಝೀಟ್ ಈವೆಂಟ್ ಬರ್ಲಿನ್ ಮತ್ತು ಇತ್ತೀಚೆಗೆ ಜರ್ಮನಿಯ ಸ್ಟಟ್‍ಗಾರ್ಟ್‍ನಲ್ಲಿರುವ ಹಿಸ್ಟರಿ ಮ್ಯೂಸಿಯಂನಲ್ಲೂ ಇಡಲಾಗಿತ್ತು. ಇದನ್ನೂ ಓದಿ: ಮೆಟ್ಟಿಲು ಹತ್ತುವಾಗ ಎಡವಿದ ಜೋ ಬೈಡನ್ – ಮುಂದೇನಾಯ್ತು ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ಇಂದಿನಿಂದ ಪ್ರಧಾನಿ ಮೋದಿ ನಾಲ್ಕು ದಿನ ಅಮೆರಿಕ ಪ್ರವಾಸ

    ಇಂದಿನಿಂದ ಪ್ರಧಾನಿ ಮೋದಿ ನಾಲ್ಕು ದಿನ ಅಮೆರಿಕ ಪ್ರವಾಸ

    ವಾಷಿಂಗ್ಟನ್: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿನಿಂದ ನಾಲ್ಕುದಿನಗಳ ಕಾಲ ಅಮೆರಿಕ ಪ್ರವಾಸ ಮಾಡಲಿದ್ದು, ಸೆಪ್ಟೆಂಬರ್ 24ರಂದು ನಡೆಯಲಿರುವ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

    ಇಂದು ಮಧ್ಯಾಹ್ನ ನರೇಂದ್ರ ಮೋದಿ ಅಮೆರಿಕಕ್ಕೆ ತೆರಳಲಿದ್ದು, ಕೊರೊನಾ ಬಳಿಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರವಾಸ ಇದಾಗಿದೆ. ಇಂದು ದೆಹಲಿಯಿಂದ ವಾಷಿಂಗ್ಟನ್ ಡಿಸಿಗೆ ಪ್ರಯಾಣ ಮಾಡಲಿರುವ ಮೋದಿ ನಾಳೆ ಅಮೆರಿಕಾದ ಉನ್ನತ ಸಂಸ್ಥೆಗಳ ಸಿಇಓಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಪ್ರಮುಖವಾಗಿ ಆ್ಯಪಲ್ ಸಂಸ್ಥೆ ಮುಖ್ಯಸ್ಥರಾದ ಟಿಮ್ ಕುಕ್ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

    ಸೆಪ್ಟೆಂಬರ್ 24ರಂದು ಶ್ವೇತಭವನದಲ್ಲಿ ಜೋ ಬೈಡನ್, ಕ್ವಾಡ್ ನಾಯಕರ ಶೃಂಗಸಭೆಯನ್ನು ಆಯೋಜಿಸಿದ್ದು, ಇದರಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೋದಿ ಜೊತೆ ಕ್ವಾಡ್ ಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮೋರಿಸನ್, ಜಪಾನ್ ಪ್ರಧಾನ ಮಂತ್ರಿ ಯೊಶಿಹಿಡೆ ಸುಗ ಮತ್ತು ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಭಾಗಿಯಾಗಲಿದ್ದಾರೆ.

    ದ್ವಿಪಕ್ಷೀಯ ಸಭೆ:
    ನರೇಂದ್ರ ಮೋದಿ ಮತ್ತು ಜೋ ಬೈಡನ್ ದ್ವಿಪಕ್ಷೀಯ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಯ ಕುರಿತು ಚರ್ಚೆನಡೆಸಲಿದ್ದಾರೆ. ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಮತ್ತು ಭದ್ರತಾ ಸಹಯೋಗ ಮತ್ತು ಶುದ್ಧ ಇಂಧನ ಪಾಲುದಾರಿಕೆಯನ್ನು ಹೆಚ್ಚಿಸುವ ಬಗ್ಗೆ ಪ್ರಮುಖವಾಗಿ ಚರ್ಚಿಸುವ ನಿರೀಕ್ಷೆ ಇದೆ. ಆ ಬಳಿಕ ಮೋದಿಯವರು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೂ ಸಭೆ ನಡೆಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: 5 ಮುಖ್ಯ ನ್ಯಾಯಮೂರ್ತಿಗಳ ವರ್ಗಾವಣೆ, 8 ನ್ಯಾಯಮೂರ್ತಿಗಳ ಪದೋನ್ನತಿಗೆ ಕೊಲಿಜಿಯಂ ಶಿಫಾರಸು

    ಸೆಪ್ಟೆಂಬರ್ 24ರಂದು ಸಂಜೆ ವಾಷಿಂಗ್ಟನ್ ಡಿಸಿಯಿಂದ ನರೇಂದ್ರ ಮೋದಿ ನ್ಯೂಯಾರ್ಕ್ ಪ್ರಯಾಣ ಮಾಡಲಿದ್ದು, ಸೆಪ್ಟೆಂಬರ್ 25ರಂದು ನ್ಯೂಯಾರ್ಕ್‍ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಮೋದಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಸೆಪ್ಟೆಂಬರ್ 26ಕ್ಕೆ ನ್ಯೂಯಾರ್ಕ್‍ನಿಂದ ನವದೆಹಲಿಗೆ ವಾಪಸ್ ಆಗಲಿದ್ದಾರೆ.

  • ನಷ್ಟ ಸರಿದೂಗಿಸಿಕೊಳ್ಳಲು ಆ್ಯಪಲ್ ಕಂಪನಿಯ ಹೊಸ ಪ್ಲಾನ್

    ನಷ್ಟ ಸರಿದೂಗಿಸಿಕೊಳ್ಳಲು ಆ್ಯಪಲ್ ಕಂಪನಿಯ ಹೊಸ ಪ್ಲಾನ್

    ನವದೆಹಲಿ: ಕಳೆದ ಒಂದು ವರ್ಷದಲ್ಲಿ ಭಾರತ ಮತ್ತು ಚೀನಾಗಳಲ್ಲಿ ಐ-ಫೋನ್ ಮಾರುಕಟ್ಟೆ ಕುಸಿತ ಕಾಣುತ್ತಿದೆ. ಈ ಸಂಬಂಧ ಕಂಪನಿ ಸಹ ತನ್ನ ಉತ್ಪನ್ನಗಳಲ್ಲಿ ಬದಲಾವಣೆ ಸೇರಿದಂತೆ ಹಲವು ಮಾರುಕಟ್ಟೆ ತಂತ್ರಗಳ ಬಳಕೆಗೆ ಮುಂದಾಗಿದೆ. ಈಗಾಗಲೇ ಐ-ಫೋನ್ ಚೀನಾದಲ್ಲಿ ತನ್ನ ಉತ್ಪನ್ನ ಖರೀದಿದಾರರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದೆ.

    ಚೀನಾದ ಅಲಿಬಾಬಾ ಗ್ರೂಪ್ ಮಾಲೀಕತ್ವದ ಏಂಟ್ ಫೈನಾನಿಶಿಯಲ್ ಸರ್ವಿಸ್ ಸಹಯೋಗದಿಂದ ಸಾವಿರಾರು ಸರ್ವಿಸ್ ಸೆಂಟರ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಈ ಸಾಲದಿಂದ ಐ-ಫೋನ್ ಖರೀದಿಯಲ್ಲಿ ತಿಂಗಳ ಕಂತು ಕಡಿಮೆಯಾಗಲಿದೆ. ಅತಿ ಹೆಚ್ಚು ಸ್ಮಾರ್ಟ್ ಫೋನ್ ಬಳಕೆದಾರರನ್ನು ಹೊಂದಿರುವ ಚೀನಾದಲ್ಲಿ ಒಂದು ತಿಂಗಳಿನಿಂದ ಐ-ಫೋನ್ ಮಾರುಕಟ್ಟೆ ಕುಸಿತ ಕಾಣಲಾರಂಭಿಸಿತು. ಈ ಹೊಸ ಸ್ಕೀಮ್ ನಿಂದಾಗಿ ಐ-ಫೋನ್ ಚೇತರಿಸಿಕೊಳ್ಳುತ್ತಿದೆ.

    ಐ-ಫೋನ್ ಗಾಗಿ ಬಡ್ಡಿ ರಹಿತ ಸಾಲ ಪಡೆಯಲು ಇಚ್ಛಿಸುವ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸಕೊಳ್ಳಬೇಕೆಂದು ಚೀನಾದ ಮೂರು ದೊಡ್ಡ ಬ್ಯಾಂಕ್ ಗಳು ತಿಳಿಸಿವೆ. 12 ರಿಂದ 24 ಕಂತುಗಳಲ್ಲಿ ಗ್ರಾಹಕರು ಹಣವನ್ನು ಪಾವತಿಸಬೇಕಾಗುತ್ತದೆ.

    24 ತಿಂಗಳು ಕಂತಿನ ಸೌಲಭ್ಯ ಮಾರ್ಚ್ ತಿಂಗಳಿಗೆ ಅಂತ್ಯವಾಗಲಿದೆ. ಇನ್ನು ಐ-ಫೋನ್ ಬಳಕೆ ಮಾಡುತ್ತಿರುವ ಬಳಕೆದಾರರು ತಮ್ಮ ಹಳೆ ಫೋನ್ ಬದಲಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಹಳೆ ಫೋನ್ ಗಳನ್ನು ಬದಲಿಸಿಕೊಳ್ಳುವ ಗ್ರಾಹಕರಿಗೆ ಹೆಚ್ಚುವರಿ ರಿಯಾಯ್ತಿಯನ್ನು ಆ್ಯಪಲ್ ಕಂಪನಿ ನೀಡಲು ಮುಂದಾಗಿದೆ. ಈ ವಿಶೇಷ ಆಫರ್ ನಿಂದ 2018ರ ಡಿಸೆಂಬರ್ ನಲ್ಲಾದ ನಷ್ಟ ಸರಿದೂಗಿಸಿಕೊಳ್ಳಲು ಕಂಪನಿ ಚಿಂತಿಸಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv