Tag: Apple Coffee Cake

  • ಮಕ್ಕಳು ಇಷ್ಟಪಡೋ ಆಪಲ್ ಕಾಫಿ ಕೇಕ್ ರೆಸಿಪಿ

    ಮಕ್ಕಳು ಇಷ್ಟಪಡೋ ಆಪಲ್ ಕಾಫಿ ಕೇಕ್ ರೆಸಿಪಿ

    ಕ್ಕಳಿಗೆ ಯಾವಾಗಲೂ ಇಷ್ಟವಾಗುವ ಒಂದು ತಿಂಡಿ ಅದು ಕೇಕ್. ಸ್ವಲ್ಪ ಶ್ರಮವಹಿಸಿದರೆ ಎಂತಹ ಕೇಕ್‌ಗಳನ್ನೂ ಪ್ರತಿಯೊಬ್ಬರೂ ಮನೆಯಲ್ಲಿ ಮಾಡಬಹುದು. ನಾವು ಈಗಾಗಲೇ ಹಲವು ವಿಧಗಳ ಕೇಕ್ ರೆಸಿಪಿಗಳನ್ನು ಹೇಳಿಕೊಟ್ಟಿದ್ದೇವೆ. ಇಂದು ಕೂಡಾ ಒಂದು ಡಿಫರೆಂಟ್ ಆದ ಆಪಲ್ ಕಾಫಿ ಕೇಕ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಇದನ್ನು ಸಿಹಿತಿಂಡಿಯಾಗಿ ಮಾತ್ರ ಏಕೆ? ಉಪಾಹಾರವನ್ನಾಗಿಯೂ ಸವಿಯಬಹುದು. ಆಪಲ್ ಕಾಫಿ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಟಾಪಿಂಗ್ ತಯಾರಿಸಲು:
    ಮೈದಾ ಹಿಟ್ಟು – ಮುಕ್ಕಾಲು ಕಪ್
    ಕಂದು ಸಕ್ಕರೆ – ಅರ್ಧ ಕಪ್
    ದಾಲ್ಚಿನಿ ಪುಡಿ – ಅರ್ಧ ಟೀಸ್ಪೂನ್
    ಬೆಣ್ಣೆ – 6 ಟೀಸ್ಪೂನ್
    ಕೇಕ್ ತಯಾರಿಸಲು:
    ಮೈದಾ ಹಿಟ್ಟು – 2 ಕಪ್
    ಬೇಕಿಂಗ್ ಪೌಡರ್ – 1 ಟೀಸ್ಪೂನ್
    ಅಡುಗೆ ಸೋಡಾ – ಅರ್ಧ ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ದಾಲ್ಚಿನಿ ಪುಡಿ – 1 ಟೀಸ್ಪೂನ್
    ಜಾಯಿಕಾಯಿ ಪುಡಿ – ಕಾಲು ಟೀಸ್ಪೂನ್
    ಬೆಣ್ಣೆ – ಅರ್ಧ ಕಪ್
    ಕಂದು ಸಕ್ಕರೆ – ಅರ್ಧ ಕಪ್
    ಮೊಟ್ಟೆ – 2
    ವೆನಿಲ್ಲಾ ಸಾರ – ಒಂದೂವರೆ ಟೀಸ್ಪೂನ್
    ಮಜ್ಜಿಗೆ – ಮುಕ್ಕಾಲು ಕಪ್
    ಕತ್ತರಿಸಿದ ಆಪಲ್ – ಒಂದೂವರೆ ಕಪ್ ಇದನ್ನೂ ಓದಿ: ಟ್ರೈ ಮಾಡಿ ಮುಂಬೈ ಮಸಾಲ ಸ್ಯಾಂಡ್‌ವಿಚ್….

    ಮಾಡುವ ವಿಧಾನ:
    * ಮೊದಲಿಗೆ ಆಪಲ್ ಕಾಫಿ ಕೇಕ್‌ಗೆ ಒರಟಾದ ಟಾಪಿಂಗ್ ತಯಾರಿಸಬೇಕು. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಮೈದಾ, ಕಂದು ಸಕ್ಕರೆ, ದಾಲ್ಚಿನಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಗಟ್ಟಿಯಾದ ತಣ್ಣನೆಯ ಬೆಣ್ಣೆಯನ್ನು ಸೇರಿಸಿ, ಪುಡಿಪುಡಿಯಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಇದನ್ನು ಫ್ರಿಡ್ಜ್‌ನಲ್ಲಿಡಿ.
    * ಈಗ ಓವನ್ ಅನ್ನು 180 ಡಿಗ್ರಿಗೆ ಪೂರ್ವಭಾವಿಯಾಗಿ ಬಿಸಿ ಮಾಡಿಕೊಳ್ಳಿ.
    * ಒಂದು ಪಾತ್ರೆ ತೆಗೆದುಕೊಂಡು, ಮೈದಾ, ಬೇಕಿಂಗ್ ಪೌಡರ್, ಅಡುಗೆ ಸೋಡಾ, ಉಪ್ಪು, ದಾಲ್ಚಿನಿ ಹಾಗೂ ಜಾಯಿಕಾಯಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
    * ಈಗ ಮತ್ತೊಂದು ಬೌಲ್ ತೆಗೆದುಕೊಂಡು, ಅದರಲ್ಲಿ ಬೆಣ್ಣೆ, ಸಕ್ಕರೆ ಪುಡಿ, ಕಂದು ಸಕ್ಕರೆ ಹಾಕಿ ನಯವಾಗಿ 4-5 ನಿಮಿಷಗಳ ವರೆಗೆ ಮಿಕ್ಸ್ ಮಾಡಿ.
    * ಬಳಿಕ ಮೊಟ್ಟೆ, ವೆನಿಲ್ಲಾ ಸಾರ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಮಿಕ್ಸರ್ ಜಾರ್‌ನಲ್ಲಿ ಒಣ ಮಿಶ್ರಣವನ್ನು 3 ಬ್ಯಾಚ್‌ಗಳಾಗಿ ಹಾಕಿ, ಮೂರೂ ಬ್ಯಾಚ್‌ಗೂ ಸಮನಾಗಿ ಮಜ್ಜಿಗೆ ಸೇರಿಸಿ ಕಡಿಮೆ ವೇಗದಲ್ಲಿ ಮಿಶ್ರಣ ಮಾಡಿಕೊಳ್ಳಿ.
    * ಈಗ ಮಿಶ್ರಣಕ್ಕೆ ಕತ್ತರಿಸಿದ ಆಪಲ್ ಸೇರಿಸಿ ಮಿಶ್ರಣ ಮಾಡಿ.
    * ಇದೀಗ ಕೇಕ್ ಬ್ಯಾಟರ್ ತಯಾರಾಗಿದ್ದು, ಇದನ್ನು ಕೇಕ್ ಮೇಕರ್ ಪಾತ್ರೆಗೆ ಹಾಕಿ ಸಮತಟ್ಟುಗೊಳಿಸಿ.
    * ಫ್ರಿಡ್ಜ್ನಲ್ಲಿ ಈ ಮೊದಲೇ ಇಟ್ಟಿದ್ದ ಒರಟು ಟಾಪಿಂಗ್ ಮಿಶ್ರಣ ತೆಗೆದು ಕೇಕ್‌ನ ಮೇಲ್ಭಾಗದಲ್ಲಿ ಹರಡಿಕೊಳ್ಳಿ.
    * ಈಗ ಕೇಕ್ ಅನ್ನು ಸುಮಾರು 45-50 ನಿಮಿಷಗಳ ವರೆಗೆ ಓವನ್‌ನಲ್ಲಿ ಬೇಯಿಸಿಕೊಳ್ಳಿ.
    * ಕೇಕ್ ಸರಿಯಾಗಿ ಬೆಂದಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಅದನ್ನು ಓವನ್‌ನಿಂದ ಹೊರ ತೆಗೆದು 20-30 ನಿಮಿಷ ತಣ್ಣಗಾಗಲು ಬಿಡಿ.
    * ಕೇಕ್ ಸಂಪೂರ್ಣ ತಣ್ಣಗಾದ ಬಳಿಕ ಕತ್ತರಿಸಿ, ಮಕ್ಕಳಿಗೆ ಸವಿಯಲು ನೀಡಿ. ಇದನ್ನೂ ಓದಿ: 15 ನಿಮಿಷ ಸಾಕು – ಟ್ರೈ ಮಾಡಿ ಬಾಳೆಹಣ್ಣು, ಓಟ್ಸ್ ಕುಕ್ಕೀಸ್