Tag: apparel

  • ನೀರಜ್ ಚೋಪ್ರಾ ಬ್ರ್ಯಾಂಡ್‍ನ ಜೆರ್ಸಿ ನೀರಿನ ಬಾಟಲಿ ಮಾರುಕಟ್ಟೆಗೆ

    ನೀರಜ್ ಚೋಪ್ರಾ ಬ್ರ್ಯಾಂಡ್‍ನ ಜೆರ್ಸಿ ನೀರಿನ ಬಾಟಲಿ ಮಾರುಕಟ್ಟೆಗೆ

    – ಸ್ವದೇಶಿ ಉತ್ಪನ್ನಕ್ಕೆ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹೆಸರಿನಲ್ಲಿ ಈಗ ಉಡುಪುಗಳು ಮಾರುಕಟ್ಟೆಗೆ ಬಂದಿವೆ.

    ಭಾರತದ ಒಲಿಂಪಿಕ್ಸ್ ತಂಡಗಳ ಅಧಿಕೃತ ಉಡುಪು ತಯಾರಕ ಕಂಪೆನಿಯು ಭಾರತ ಅಥ್ಲೇಟಿಕ್ಸ್ ಫೆಡರೇಶನ್ ಸಹಯೋಗದೊಂದಿಗೆ ಚೋಪ್ರಾ ಹೆಸರಿನಲ್ಲಿ ಈ ಸರಕುಗಳನ್ನು ತಯಾರಿಸಿವೆ. ನೀರಜ್ ಫೋಟೋ ಜೊತೆಗೆ ಗೋಲ್ಡನ್ ಬಾಯ್ ಎಂದು ಬರೆದಿರುವ ಟೀ ಶರ್ಟ್‍ಗಳು ಹಾಗೂ ನೀರಿನ ಬಾಟಲಿಗಳನ್ನು ತಯಾರಿಸಲಾಗಿದ್ದು, ಗ್ರಾಹಕರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ:  ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ ಪಡುಕೋಣೆ

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಳಿಕ ನೀರಜ್ ಭಾರತೀಯರ ಮನೆಮಾತಾಗಿದ್ದು, ಬ್ರ್ಯಾಂಡ್ ಮೌಲ್ಯವೂ ಹೆಚ್ಚಾಗುವುದರ ಜೊತೆಗೆ ಅವರ ಹೆಸರಲ್ಲಿ ಉಡುಪುಗಳು ತಯಾರಾಗಿದ್ದು, ಚೋಪ್ರಾ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.