Tag: Appaji Canteen

  • 4ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಅಪ್ಪಾಜಿ ಕ್ಯಾಂಟೀನ್- ಪೌಷ್ಟಿಕಾಂಶವುಳ್ಳ ಆಹಾರ ವಿತರಣೆ

    4ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಅಪ್ಪಾಜಿ ಕ್ಯಾಂಟೀನ್- ಪೌಷ್ಟಿಕಾಂಶವುಳ್ಳ ಆಹಾರ ವಿತರಣೆ

    ಬೆಂಗಳೂರು: ಮೂರು ವರ್ಷ ಪೂರ್ಣಗೊಂಡು 4ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದ ಹಿನ್ನೆಲೆಯಲ್ಲಿ ಹನುಮಂತನಗರದಲ್ಲಿ ಇರುವ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಇಂದು ಒಂದು ರೂಪಾಯಿಗೆ ಊಟವನ್ನು ವಿತರಣೆ ಮಾಡಲಾಯಿತು.

    ಈ ಸಂಬಂಧ ಮಾತನಾಡಿರುವ ಮಾಜಿ ಶಾಸಕ ಟಿ.ಎ ಶರವಣ, ಆಗಸ್ಟ್ 17 ರಂದು ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಲೋಕಾರ್ಪಣೆ ಮಾಡಲಾಯಿತು. ಅಂದಿನಿಂದ ಸತತವಾಗಿ ನಿಮ್ಮೆಲ್ಲರ ಪ್ರೀತಿ ಆಶೀರ್ವಾದದೊಂದಿಗೆ ನನ್ನ ಸ್ವಂತ ಶಕ್ತಿಯಿಂದ ಶುಚಿ ಮತ್ತು ರುಚಿಯಾದ ಆಹಾರವನ್ನು ಜನರಿಗೆ ನೀಡುತ್ತಾ ಬಂದಿದ್ದೇನೆ. ಪ್ರತಿದಿನ ಬೆಳಗ್ಗಿನ ಉಪಹಾರಕ್ಕೆ ಇಡ್ಲಿ, ವಡೆ, ಖಾರಾಬಾತ್, ಕೇಸರಿಬಾತ್ ಜೊತೆಗೆ ಮಧ್ಯಾಹ್ನದ ಊಟಕ್ಕೆ ರಾಗಿ ಮುದ್ದೆ, ಅನ್ನ ಸಾಂಬಾರ್, ರೈಸ್ ಬಾತ್ ನೀಡುತ್ತಾ ಬಂದಿದೆ. ದಿನನಿತ್ಯ ಸಾವಿರಾರು ಜನ ಇದರ ಸದುಪಯೋಗವನ್ನು ಪಡೆಯುತ್ತಾ ಬಂದಿದ್ದಾರೆ ಎಂದರು.

    ಪ್ರಸ್ತುತ ಕೋವಿಡ್ 19 ಬೆಂಗಳೂರು ಆವರಿಸಿರುವ ಹಿನ್ನೆಲೆಯಲ್ಲಿ ಬಹಳಷ್ಟು ಜನರಿಗೆ ಪೌಷ್ಟಿಕಾಂಶವುಳ್ಳ ಊಟದ ವ್ಯವಸ್ಥೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ವಿಟಮಿನ್ ಎ,ಬಿ,ಚಿ ಹಾಗೂ ಕಬ್ಬಿಣಾಂಶ ಗುಣಗಳುಳ್ಳ ನವಣೆ, ತರಕಾರಿ ಹಾಗೂ ಸೊಪ್ಪಿನ ಅಂಶಗಳ ತಿಂಡಿ ಹಾಗೂ ಊಟವನ್ನು ಜನರಿಗೆ ನೀಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇಂದು ಒಂದು ದಿನ ಮಾತ್ರ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ 1 ರೂಪಾಯಿಗೆ ಊಟವನ್ನು ನೀಡಲಾಗಿದೆ ಎಂದು ತಿಳಿಸಿದರು.

    ಪ್ರತಿದಿನವೂ ಶುಚಿ ಮತ್ತು ರುಚಿಯಾದ ಕಷಾಯ, ತಿಂಡಿ ಹಾಗೂ ಊಟವನ್ನು ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ನೀಡುವಂತಹ ಕೆಲಸವನ್ನು ಪ್ರಾರಂಭಿಸಲಿದ್ದೇವೆ. ಇದರ ಸದುಪಯೋಗವನ್ನು ಬೆಂಗಳೂರಿನ ಮಹಾಜನರು ಸಾಮಾಜಿಕ ಅಂತರವನ್ನು ಕಾಯ್ದಿರಿಸಿಕೊಂಡು ಪಡೆದುಕೊಳ್ಳಬೇಕು ಎಂದು ಇದೇ ವೇಳೆ ಶರವಣ ವಿನಂತಿಸಿಕೊಂಡರು.

  • ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್ – ಶರವಣ ಹೇಳಿದ್ದು ಏನು?

    ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್ – ಶರವಣ ಹೇಳಿದ್ದು ಏನು?

    ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡ ಅವರ ಹೆಸರಿನಲ್ಲಿ ನಗರದ ಜೆಪಿ ಭವನದಲ್ಲಿ ಆರಂಭವಾಗಿದ್ದ ಅಪ್ಪಾಜಿ ಕ್ಯಾಂಟೀನ್ ಕ್ಲೋಸ್ ಆಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಟೀನಿಗೆ ಆಗಮಿಸದೆ ಇರುವುದೇ ಮುಚ್ಚಲು ಕಾರಣ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ತಿಳಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಶರವಣ ಅವರು, ಜೆಡಿಎಸ್ ಕಚೇರಿಯ ಆವರಣದಲ್ಲಿ ಆರಂಭವಾಗಿದ್ದ ಕ್ಯಾಂಟೀನ್ ಬರೋಬ್ಬರಿ 1 ವರ್ಷ ನಡೆದಿದ್ದು, ಆದರೆ ಕ್ಯಾಂಟೀನ್‍ಗೆ ಹೆಚ್ಚಿನ ಜನರು ಬಾರದ ಕಾರಣ ಆಹಾರ ವ್ಯರ್ಥವಾಗುತ್ತಿದೆ. ದಿನಕ್ಕೆ ಕೇವಲ 50 ರಿಂದ 100 ಜನರು ಮಾತ್ರ ಬರುತ್ತಿದ್ದರು. ಆದ್ದರಿಂದ 20 ದಿನಗಳ ಹಿಂದೆಯೇ ಕ್ಯಾಂಟೀನ್ ಮುಚ್ಚುವ ತೀರ್ಮಾನ ಮಾಡಲಾಗಿತ್ತು ಎಂದರು.

    ಇದೇ ವೇಳೆ ಕ್ಯಾಂಟೀನ್ ಮುಚ್ಚಲು ದೇವೇಗೌಡ ಅವರೊಂದಿನ ಅಸಮಾಧಾನ ಕಾರಣ ಎಂಬುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಿರಿಯರಾಗಿದ್ದು, ಅವರೊಂದಿಗೆ ಯಾವುದೇ ಅಸಮಾಧಾನ ಇಲ್ಲ. ಈ ಬಗ್ಗೆ ರೇವಣ್ಣ ಅವರಿಗೆ ತಿಳಿಸಿಯೇ ತೀರ್ಮಾನ ಕೈಗೊಂಡಿದ್ದೇನೆ. ಆದರೆ ನಗರದ ಬೇರೆ ಕಡೆ ಮಾಡಲು ಚಿಂತನೆ ಇದೆ. ಊಟ ವ್ಯರ್ಥವಾಗುತ್ತಿದ್ದ ಕಾರಣವಾಗಿ ಕ್ಲೋಸ್ ಮಾಡಿದ್ದೇನೆ. ಬಸವನಗುಡಿಯಲ್ಲಿ ಇರುವ ಕ್ಯಾಂಟೀನ್‍ನಲ್ಲಿ ಪ್ರತಿ ದಿನ 3,500 ಮಂದಿ ಊಟ ಸೇವಿಸುತ್ತಾರೆ. ದಿನಕ್ಕೆ 100 ಜನರು ಹೆಚ್ಚಾಗುತ್ತಿದ್ದಾರೆ. ಅದ್ದರಿಂದ ಹಸಿದವರಿಗೆ ಊಟ ನೀಡುವ ನನ್ನ ಉದ್ದೇಶ ಮುಂದುವರೆಯುತ್ತದೆ ಎಂದರು.

    ಸಚಿವ ಸ್ಥಾನದ ಆಕಾಂಕ್ಷೀಯಾಗಿದ್ದೆ. ಆದರೆ ಈ ಹಂತದಲ್ಲಿ ನನಗೆ ಅವಕಾಶ ನೀಡಲು ಸಾಧ್ಯವಾಗಿಲ್ಲ. ಈ ಬಗ್ಗೆ ನನ್ನ ಸಮಾಜದ ಹಲವರು ಪ್ರಶ್ನೆ ಮಾಡುತ್ತಾರೆ. ಇತ್ತ ಸಿಎಂ ಕುಮಾರಸ್ವಾಮಿ ಅವರಿಗೆ ಸರ್ಕಾರ ನಡೆಸೋದು ಕಷ್ಟ ಆಗುತ್ತಿದೆ. ಸಚಿವ ಸ್ಥಾನ ಬಗ್ಗೆ ದೇವೇಗೌಡರಿಗೂ ತಿಳಿದಿದೆ. ಆದರೆ ಅವರಿಗೂ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಚಿನ ಒತ್ತಡ ಇದೆ. ಪಕ್ಷದ ವಿಚಾರದಲ್ಲಿ ಈ ಕುರಿತು ಚರ್ಚೆ ನಡೆಸಿ ಮುಂದಿನ ಹಂತದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಆದರೆ ನಮ್ಮ ಸಮುದಾಯದ ಜನರು ಈ ಬಗ್ಗೆ ಪ್ರಶ್ನೆ ಮಾಡಿದ ವೇಳೆ ನೋವಾಗುತ್ತದೆ. ಆದರೆ ಕಿತ್ತಾಟ ನಡೆಸಿ ಸಚಿವ ಸ್ಥಾನ ಪಡೆಯುವುದು ಜೆಡಿಎಸ್ ಪಕ್ಷದಲ್ಲಿ ಇಲ್ಲ. ಅದ್ದರಿಂದ ಮುಂದೇ ಸೂಕ್ತ ಸ್ಥಾನಮಾನ ಸಿಗುವ ಬಗ್ಗೆ ವಿಶ್ವಾಸ ಇದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದಿರಾ ಕ್ಯಾಂಟೀನ್​ಗೆ ಸೆಡ್ಡು ಹೊಡೆದ ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್!

    ಇಂದಿರಾ ಕ್ಯಾಂಟೀನ್​ಗೆ ಸೆಡ್ಡು ಹೊಡೆದ ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್!

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಲ್ಲಿ ಪ್ರಾರಂಭವಾದ ಅಪ್ಪಾಜಿ ಕ್ಯಾಂಟೀನ್ ಸದ್ದಿಲ್ಲದೆ ಕ್ಲೋಸ್ ಆಗಿದೆ. ದೆಹಲಿವರೆಗೆ ತೆಗೆದುಕೊಂಡು ಹೋದ ರಾಗಿ ಮುಂದೆ ನಮ್ಮ ಜನಕ್ಕೂ ಸಿಗಲಿ ಅಂತ ದೇವೇಗೌಡರ ಮೇಲಿನ ಪ್ರೀತಿಗೆ ಪರಿಷತ್ ಸದಸ್ಯ ಶರವಣ ಪ್ರಾರಂಭ ಮಾಡಿದ ಅಪ್ಪಾಜಿ ಕ್ಯಾಂಟೀನ್ ಸದ್ದಿಲ್ಲದೆ ಕ್ಲೋಸ್ ಆಗಿದೆ. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಲಾಭದಲ್ಲೆ ನಡೆಯುತ್ತಿದ್ದ ಅಪ್ಪಾಜಿ ಕ್ಯಾಂಟೀನ್ ಜೆಡಿಎಸ್ ಸರ್ಕಾರ ಅಸ್ವಿತ್ವಕ್ಕೆ ಬಂದ ಮೇಲೆ ಸದ್ದಿಲ್ಲದೆ ಮುಚ್ಚಿ ಹೋಗಿದೆ. ಜೆಪಿ ಭವನಕ್ಕೆ ಜನರೇ ಬಾರದೇ ಇರೋದ್ರೀಂದ ಕ್ಲೋಸ್ ಮಾಡಿರೋದಾಗಿ ಶರವಣ ಹೇಳ್ತಾರೆ.

    ಹನುಮಂತನಗರ ಹಾಗೂ ಜೆಪಿ ಭವನದಲ್ಲಿ ಶರವಣ ಈ ಕ್ಯಾಂಟೀನ್ ಓಪನ್ ಮಾಡಿದ್ದರು. ಹಸಿದವರ ಹೊಟ್ಟೆಗೆ ಅನ್ನ ಅನ್ನೋ ವಾಕ್ಯದೊಂದಿಗೆ ಪ್ರಾರಂಭವಾದ ಈ ಕ್ಯಾಂಟೀನ್ ಮುಚ್ಚೋಕೆ ಕಾರಣವೇ ಬೇರೆ ಅಂತಿದೆ ಮೂಲಗಳು. ಸರ್ಕಾರ ಬರೋ ಮುನ್ನ ಜೆಡಿಎಸ್ ಗೆ ಇಂದಿರಾ ಕ್ಯಾಂಟೀನ್ ಗೆ ಸೆಡ್ಡು ಹೊಡೆಯಲು ಶರವಣ ಕ್ಯಾಂಟೀನ್ ಪ್ರಾರಂಭ ಮಾಡಿದ್ರು. ಸರ್ಕಾರ ಬಂದ ಮೇಲೆ ನಮಗೆ ಯಾವುದಾದ್ರು ಒಂದು ಸ್ಥಾನ ಸಿಗುವ ಆಶಯದಲ್ಲಿ ಶರವಣ ಇದ್ದರು. ಹೀಗಾಗಿ ಹಣ ಕಡಿಮೆ ಆದರು ಇವ್ರೆ ಹಣ ಹಾಕಿಕೊಂಡು ಕ್ಯಾಂಟೀನ್ ನಡೆಸುತ್ತಿದ್ದರು. ಸರ್ಕಾರ ಬಂದ ಮೇಲೆ ದೊಡ್ಡಗೌಡ್ರ ಫ್ಯಾಮಿಲಿ ನಿಷ್ಠಾವಂತರನ್ನ ದೂರ ತಳ್ಳಿದ್ದಾರಂತೆ. ಎಲ್ಲಾ ಲಾಸ್ ಮಾಡಿಕೊಂಡು ನಾವ್ಯಾಕೆ ಇಷ್ಟು ರಿಸ್ಕ್ ತಗೋಬೇಕು ಅಂತ ಜೆಪಿ ಭವನದ ಕ್ಯಾಂಟೀನ್ ಕ್ಲೋಸ್ ಮಾಡಿ ಪರೋಕ್ಷವಾಗಿ ಅಸಮಾಧಾನ ತೋರಿಸಿದ್ದಾರಂತೆ. ಹನುಮಂತ ನಗರದ ಕ್ಯಾಂಟೀನ್ ಸದ್ಯಕ್ಕೆ ನಡೆಯುತ್ತಿದೆ ಅಂತೆ.

    ಗೌಡ್ರ ಫ್ಯಾಮಿಲಿ ಮೇಲೆ ಕೋಪಕ್ಕೆ ಮಾಡಿದ್ರೋ, ಅಥವಾ ಲಾಸ್ ಆಗುತ್ತೆ ಅಂತ ಮಾಡಿದ್ರೋ ಗೊತ್ತಿಲ್ಲ. ಒಟ್ಟಿನಲ್ಲಿ ಕಡಿಮೆ ಹಣಕೊಟ್ಟು ಮುದ್ದೆ ಸವಿಯುತ್ತಿದ್ದ ಜನರಿಗೆ ಮಾತ್ರ ಅಪ್ಪಾಜಿ ಕ್ಯಾಂಟೀನ್ ಕ್ಲೋಸ್ ಆಗಿರೋದು ನೋವು ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುದ್ದೆ ತಿನ್ನಿ ಊಟ ಗೆಲ್ಲಿ- ಅಪ್ಪಾಜಿ ಕ್ಯಾಂಟೀನ್‍ನಲ್ಲಿ ಇಂದು ಸ್ಪರ್ಧೆ

    ಮುದ್ದೆ ತಿನ್ನಿ ಊಟ ಗೆಲ್ಲಿ- ಅಪ್ಪಾಜಿ ಕ್ಯಾಂಟೀನ್‍ನಲ್ಲಿ ಇಂದು ಸ್ಪರ್ಧೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಗಿ ಮುದ್ದೆ ಸ್ಪರ್ಧೆಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಭಾರೀ ಸಿದ್ಧತೆ ನಡೆಸಿದ್ದಾರೆ.

    ಅಪ್ಪಾಜಿ ಕ್ಯಾಂಟೀನ್ ಮೊದಲ ವರ್ಷದ ಆಚರಣೆ ನಿಮಿತ್ತ ‘ಮುದ್ದೆ ತಿನ್ನಿ ಊಟ ಗೆಲ್ಲಿ’ ಎನ್ನುವ ವಿಶಿಷ್ಟ ಸ್ಪರ್ಧೆಯನ್ನು ಟಿ.ಎ.ಶರವಣ ಆಯೋಜಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ನಗರದ ಬಸವನಗುಡಿಯಲ್ಲಿರುವ ಅಪ್ಪಾಜಿ ಕ್ಯಾಂಟೀನ್ ಬಳಿ ಸ್ಪರ್ಧೆ ನಡೆಯಲಿದೆ.

    ಬಹುಮಾನ ಏನು?
    ಪಂದ್ಯದಲ್ಲಿ ಜಯ ಸಾಧಿಸಿದ ಮೂವರಿಗೆ ಬಂಪರ್ ಗಿಫ್ಟ್ ನೀಡಲಾಗುತ್ತದೆ. ಅದು ಏನು ಅಂದರೆ, ಮೊದಲ ಬಹುಮಾನ ಒಂದು ತಿಂಗಳು ಟಿಫನ್, ಮಧ್ಯಾಹ್ನದ ಊಟ ಉಚಿತ. ಇನ್ನು ಎರಡನೇ ಬಹುಮಾನ 20 ದಿನ ಟಿಫನ್, ಊಟ ಮತ್ತು ಮೂರನೇ ಸ್ಥಾನ ಪಡೆದವರಿಗೆ 10 ದಿನ ಟಿಫನ್ ಹಾಗೂ ಊಟ ಉಚಿತವಾಗಿ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಪ್ಪಾಜಿ-ಇಂದಿರಾ ಕ್ಯಾಂಟೀನ್ ನಡುವೆ ಪೈಪೋಟಿ – ಗೌಡರ ರಾಗಿ ಮುದ್ದೆಗೆ ಹೆಚ್ಚಾಯ್ತು ಬೇಡಿಕೆ!

    ಅಪ್ಪಾಜಿ-ಇಂದಿರಾ ಕ್ಯಾಂಟೀನ್ ನಡುವೆ ಪೈಪೋಟಿ – ಗೌಡರ ರಾಗಿ ಮುದ್ದೆಗೆ ಹೆಚ್ಚಾಯ್ತು ಬೇಡಿಕೆ!

    ಬೆಂಗಳೂರು: ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್‍ನ ರಾಗಿ ಮುದ್ದೆ, ಈಗ ಇಂದಿರಾ ಕ್ಯಾಂಟೀನ್ ರೈಸ್ ಬಾತ್‍ನ್ನ ಸೈಡ್ ಹೊಡೆಯೋಕೆ ತಯಾರಿ ನಡೆಸ್ತಿದೆಯಾ..? ಇದೇ ಪ್ರಶ್ನೆ ಈಗ ಮೈತ್ರಿ ಸರ್ಕಾರದ ಅಂಗಳದಲ್ಲಿದೆ. ಬಿಬಿಎಂಪಿಯಲ್ಲಿದ್ದ ಮೈತ್ರಿ ದೋಸ್ತಿ ರಾಜ್ಯ ಸರ್ಕಾರದಲ್ಲಿ ಮುಂದುವರೆದಿದೆ.

    ಈ ಹಿಂದೆ ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರದಲ್ಲೆಡೆ ಇಂದಿರಾ ಕ್ಯಾಂಟೀನ್ ತೆರೆಯುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದಿತ್ತು. ಇದನ್ನು ನೋಡಿದ ಜೆಡಿಎಸ್ ಮುಖಂಡ ಶರವಣ, ಅಪ್ಪಾಜಿ ಕ್ಯಾಂಟೀನ್ ಮಾಡಿದ್ದು. ಇದೀಗ ಕುಮಾರಸ್ವಾಮಿ ಸಿಎಂ ಆಗುತ್ತಿದ್ದಂತೆ ನಗರದೆಲ್ಲೆಡೆ ಅಪ್ಪಾಜಿ ಕ್ಯಾಂಟೀನ್ ತೆರೆಯಬೇಕು ಎಂಬ ಒತ್ತಡಗಳು ಹೆಚ್ಚಾಗಿವೆ.

    ಜೆಡಿಎಸ್‍ನ ಎಲ್ಲಾ ಬಿಬಿಎಂಪಿ ಸದಸ್ಯರು ಅಪ್ಪಾಜಿ ಕ್ಯಾಂಟೀನ್‍ನ ಮೆನುವಿಗೆ ಮೊರೆ ಹೋಗಿದ್ದಾರಂತೆ. ಊಟಕ್ಕೆ ಮುದ್ದೆ, ಬಸ್ಸಾರು, ಸೊಪ್ಪಿನ ಸಾರು, ಮೊಳಕೆ ಕಾಳಿನ ಸಾಂಬಾರ್ ನೀಡುವ ಅಪ್ಪಾಜಿ ಕ್ಯಾಂಟೀನ್‍ಗಳನ್ನ ತೆರೆಯಬೇಕು ಅಂತಾ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಎರಡೂ ಕಡೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಆಡಳಿತ ನಡೆಯುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಪ್ಪಾಜಿ ಕ್ಯಾಂಟೀನ್‍ಗಳನ್ನ ತೆರೆಯುವ ಸಂಬಂಧ, ಜೆಡಿಎಸ್ ಸದಸ್ಯರ ಆಗ್ರಹದ ಬಗ್ಗೆ ಪಾಲಿಕೆ ಮೇಯರ್ ಸಂಪತ್ ರಾಜ್‍ರನ್ನು ಕೇಳಿದ್ರೆ, ಈ ಬಗ್ಗೆ ಮಾಹಿತಿ ಬಂದಿಲ್ಲ. ಆ ವಿಚಾರ ಬಂದಾಗ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳುತ್ತಾರೆ.

  • ಅಪ್ಪಾಜಿ ಕ್ಯಾಂಟೀನ್ ರಾಗಿ ಮುದ್ದೆಗೆ ಬಹುಪರಾಕ್-ಇಂದಿರಾ ಕ್ಯಾಂಟೀನ್‍ನಲ್ಲೂ ಶುರುವಾಗಲಿದೆ ಹೊಸ ಮೆನು !

    ಅಪ್ಪಾಜಿ ಕ್ಯಾಂಟೀನ್ ರಾಗಿ ಮುದ್ದೆಗೆ ಬಹುಪರಾಕ್-ಇಂದಿರಾ ಕ್ಯಾಂಟೀನ್‍ನಲ್ಲೂ ಶುರುವಾಗಲಿದೆ ಹೊಸ ಮೆನು !

    ಬೆಂಗಳೂರು: ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್ ರಾಗಿ ಮುದ್ದೆ, ಇಂದಿರಾ ಕ್ಯಾಂಟೀನ್ ರೈಸ್ ಬಾತ್‍ಗೆ ಸೈಡ್ ಹೊಡೆದು ಬಿಡ್ತಾ..? ಅಪ್ಪಾಜಿ ಕ್ಯಾಂಟೀನ್‍ನ ರಾಗಿ ಮುದ್ದೆಗೆ ಬೆಂಗಳೂರು ಜನ ಫುಲ್ ಮಾರ್ಕ್ಸ ಕೊಟ್ಟಿದ್ದಾರೆ. ಈ ವಿಚಾರ ಬಿಬಿಎಂಪಿಗೂ ಗೊತ್ತಾಗಿದೆ ಅನಿಸುತ್ತೆ. ಹಾಗಾಗಿ ಇಂದಿರಾ ಕ್ಯಾಂಟೀನ್‍ಗೂ ಸದ್ಯದಲ್ಲೇ ರಾಗಿ ಮುದ್ದೆ ಎಂಟ್ರಿ ಕೊಡಲಿದೆ.

    198 ವಾರ್ಡ್ ಗಳಲ್ಲಿ ಸರ್ಕಾರ ಶುರು ಮಾಡಿರೋ ಇಂದಿರಾ ಕ್ಯಾಂಟೀನ್‍ಗಳಿಗಿಂತ ಬೆಂಗಳೂರಿನ ನಾಗರೀಕರ ಮನ ಗೆದ್ದಿರೋದು ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್‍ನ ಮುದ್ದೆ ಬಸ್ಸಾರು. ಇದೀಗ ಬಿಬಿಎಂಪಿ ಸಹ ಅಪ್ಪಾಜಿ ಕ್ಯಾಂಟೀನ್ ಸ್ಟ್ರಾಟಜಿಗೆ ಮೊರೆ ಹೋಗಿದ್ದು, ಮಧ್ಯಾಹ್ನದ ಊಟಕ್ಕೆ ಮುದ್ದೆ ಬಸ್ಸಾರು, ಸೊಪ್ಪಿನ ಸಾರು, ಮೊಳಕೆ ಕಾಳಿನ ಸಾಂಬಾರ್ ನೀಡೋಕೆ ಚಿಂತನೆ ನಡೆಸಿದೆ. ಇದೇ ಮಾರ್ಚ್ ಒಂದರಿಂದ ಇಂದಿರಾ ಕ್ಯಾಂಟೀನ್‍ನಲ್ಲಿ ಬಿಸಿ ಬಿಸಿ ರಾಗಿ ಮುದ್ದೆಯನ್ನ ಸಾರ್ವಜನಿಕರು ಸವಿಯಬಹುದಾಗಿದೆ.

    ಬೆಳಗಿನ ಉಪಹಾರದ ಮೆನುನಲ್ಲೂ ಬದಲಾವಣೆ ಆಗ್ತಿದ್ದು, ಬಿಬಿಎಂಪಿ ಇಡ್ಲಿ, ಉಪ್ಪಿಟ್ಟಿನ ಜೊತೆ ಕೇಸರಿ ಬಾತ್, ಶಾವಿಗೆ ಬಾತ್ ನೀಡೋ ತಯಾರಿಯಲ್ಲಿದೆ. ಈಗಾಗಲೇ ಇಂದಿರಾ ಕ್ಯಾಂಟೀನ್ ಮುಂಭಾಗ ಜನರ ಸಂಖ್ಯೆ ಕಡಿಮೆಯಾಗಿದೆ. ಕ್ಯಾಂಟೀನ್‍ಗಾಗಿ ದೊಡ್ಡ ದೊಡ್ಡ ಕಟ್ಟಡಗಳಿದ್ರೂ ಆಹಾರದ ವಿಚಾರವಾಗಿ ಶುಚಿ ರುಚಿ ಎರಡು ಮುಖ್ಯ ಅನ್ನೋದು ಬಿಬಿಎಂಪಿಗೆ ಅರ್ಥವಾದಂತಿದೆ. ಈ ಹೊಸ ಮೆನ್ಯೂ ಇಂದಿರಾ ಕ್ಯಾಂಟೀನ್ ಕಡೆ ಸಾರ್ವಜನಿಕರನ್ನು ಸೆಳೆಯೋದ್ರಲ್ಲಿ ಯಶಸ್ವಿಯಾಗುತ್ತಾ ಕಾದು ನೋಡಬೇಕಿದೆ.

  • ತಾಲೂಕು ಕೇಂದ್ರಕ್ಕೂ ವಿಸ್ತರಿಸಿದ ಅಪ್ಪಾಜಿ ಕ್ಯಾಂಟೀನ್

    ತಾಲೂಕು ಕೇಂದ್ರಕ್ಕೂ ವಿಸ್ತರಿಸಿದ ಅಪ್ಪಾಜಿ ಕ್ಯಾಂಟೀನ್

    ಮಂಡ್ಯ: ಬೆಂಗಳೂರು, ಮಂಡ್ಯ ನಗರದಲ್ಲಿ ಅಪ್ಪಾಜಿ ಕ್ಯಾಂಟೀನ್ ಉದ್ಘಾಟನೆಯಾಗಿದ್ದು ನಿಮಗೆ ಗೊತ್ತೆ ಇದೆ. ಈಗ ತಾಲೂಕು ಕೇಂದ್ರಗಳಲ್ಲಿಯೂ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭವಾಗಿದೆ.

    ಮಾಜಿ ಪ್ರಧಾನಿ ದೇವೇಗೌಡರ ಅಭಿಮಾನಿ ನಾಗೇಶ್ ಅಪ್ಪಾಜಿ ಕ್ಯಾಂಟೀನ್ ತೆರೆದಿದ್ದು, ನಗರದ, ಮಹಾವೀರ ಸರ್ಕಲ್‍ನಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದಾರೆ. ಜಿಲ್ಲೆಯ ಪಾಂಡವಪುರದಲ್ಲಿ ಸಂಸದ ಪುಟ್ಟರಾಜು ಅವರು ಅಪ್ಪಾಜಿ ಕ್ಯಾಂಟೀನ್‍ನನ್ನು ಉದ್ಘಾಟಿಸಿದರು.

    ಅಪ್ಪಾಜಿ ಕ್ಯಾಟೀನ್ ನಲ್ಲಿ ಕಡಿಮೆ ದರದಲ್ಲಿ ಊಟ, ತಿಂಡಿ ದೊರೆಯಲಿದ್ದು, ಟೀ, ಕಾಫಿ 5 ರೂ. ಮತ್ತು ತಿಂಡಿಗೆ 10 ರೂ. ದರವನ್ನು ನಿಗದಿ ಪಡಿಸಲಾಗಿದೆ. ಇಡ್ಲಿ, ವಡೆ, ಚಿತ್ರಾನ್ನ, ಬಿಸಿಬೇಳೆ ಬಾತ್, ಖಾಲಿದೋಸೆ, ಸೆಟ್ ದೋಸೆ, ಮಸಾಲೆ ದೋಸೆ, ಚಪಾತಿ, ಮುದ್ದೆ, ಅನ್ನಸಾಂಬಾರ್ ಕ್ಯಾಂಟೀನ್‍ನಲ್ಲಿ ದೊರೆಯುತ್ತದೆ.

    ಈ ಹಿಂದೆ ಜಿಲ್ಲೆಯಲ್ಲಿ ಇದೇ ರೀತಿ ಅಪ್ಪಾಜಿ ಕ್ಯಾಂಟೀನ್, ರಮ್ಯಾ ಕ್ಯಾಂಟೀನ್, ಅಣ್ಣಾ ಕ್ಯಾಂಟೀನ್‍ಗಳನ್ನ ತೆರೆಯಲಾಗಿದ್ದು, ಇದು ಎಲೆಕ್ಷನ್ ಗಿಮಿಕ್ ಇರಬಹುದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ ಮತ್ತೊಂದು ಕಡೆ ಕಡಿಮೆ ಬೆಲೆಗೆ ಉತ್ತಮ ಊಟ ತಿಂಡಿ ಸಿಗುತ್ತದೆ. ಇದರಿಂದ ನಮಗೆ ಉಪಯೋಗವಾಗುತ್ತದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.

  • ಇಂದಿರಾ ಆಯ್ತು.. ಅಪ್ಪಾಜಿ ಆಯ್ತು ಈಗ ಶೆಟ್ಟಿ ಕ್ಯಾಂಟೀನ್-ಬೆಳಗ್ಗೆ ಇಲ್ಲಿ ಉಪಹಾರ ಉಚಿತ

    ಇಂದಿರಾ ಆಯ್ತು.. ಅಪ್ಪಾಜಿ ಆಯ್ತು ಈಗ ಶೆಟ್ಟಿ ಕ್ಯಾಂಟೀನ್-ಬೆಳಗ್ಗೆ ಇಲ್ಲಿ ಉಪಹಾರ ಉಚಿತ

    ಕೋಲಾರ: ಕರ್ನಾಟಕದಲ್ಲಿ ಕ್ಯಾಂಟೀನ್ ಪಾಲಿಟಿಕ್ಸ್ ಸದ್ದು ಜೋರಾಗಿದೆ. ಕಾಂಗ್ರೆಸ್ ಇಂದಿರಾ ಕ್ಯಾಂಟೀನ್ ಆಯ್ತು. ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್ ಆಯ್ತು. ಈಗ ಬಿಜೆಪಿ ಮುಖಂಡ ಕೃಷ್ಣಯ್ಯ ಶೆಟ್ಟಿ ಕ್ಯಾಂಟೀನ್ ಶುರು ಮಾಡಿದ್ದಾರೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕು ಟೇಕಲ್ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಕೃಷ್ಣಯ್ಯ ಶೆಟ್ಟಿ ಅವರು, ತಮ್ಮದೇ ಹೆಸರಿನಲ್ಲಿ ಕ್ಯಾಂಟೀನ್ ಶುರು ಮಾಡಿದ್ದಾರೆ. ಕ್ಷೇತ್ರದಿಂದ ದೂರ ಉಳಿದಿದ್ದ ಕೃಷ್ಣಯ್ಯಶೆಟ್ಟಿ ಈಗ ಎಲೆಕ್ಷನ್ ಹೊತ್ತಲ್ಲಿ ಟಿಕೆಟ್ ಪಡೆಯೋಕೆ ಹೊಸ ಪ್ಲ್ಯಾನ್ ಮಾಡಿದ್ದಾರೆ. ಪ್ರತಿ ದಿನ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆವರೆಗೆ ಉಚಿತವಾಗಿ ಉಪಹಾರ ನೀಡುತ್ತಿದ್ದಾರೆ. ಸದ್ಯ ಮಾಲೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಕೃಷ್ಣಯ್ಯ ಶೆಟ್ಟಿ ಈಗ ಮತ್ತೆ ಕ್ಷೇತ್ರದಲ್ಲಿ ಅಖಾಡಕ್ಕಿಳಿದಿದ್ದಾರೆ.

     

    ಇನ್ನು ಕೃಷ್ಣಯ್ಯಶೆಟ್ಟಿಯವರು ಹೀಗೆ ಟೇಕಲ್ ರೈಲು ನಿಲ್ದಾಣದ ಬಳಿ ಕ್ಯಾಂಟೀನ್ ಆರಂಭ ಮಾಡುತ್ತಿರುವುದು ಸ್ಥಳೀಯ ಕೆಲವು ಹೋಟೆಲ್ ಮಾಲೀಕರುಗಳಿಂದ ಅಸಮದಾನ ವ್ಯಕ್ತವಾಗಿದೆ. ಹಲವಾರು ವರ್ಷಗಳಿಂದ ಟೇಕಲ್ ರೈಲು ನಿಲ್ದಾಣದ ಬಳಿ ಸುಮಾರು ಐದಾರು ಕುಟುಂಬಗಳು ಸಣ್ಣ ಪುಟ್ಟ ಹೋಟೆಲ್ ನಡೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ರೆ ಈಗ ಕೃಷ್ಣಯ್ಯ ಶೆಟ್ಟಿಯವರು ಉಚಿತ ಶೆಟ್ಟಿ ಕ್ಯಾಂಟೀನ್ ಆರಂಭ ಮಾಡಿರುವುದು ಹೋಟೆಲ್‍ಗಳಿಗೆ ಬೀಗ ಹಾಕುವ ಪರಿಸ್ಥಿತಿ ಬಂದಿದೆ.