ಮಡಿಕೇರಿ: ರಸ್ತೆ ದುರಸ್ತಿ ಬಗ್ಗೆ ಮಾತನಾಡಲು ಹೋದ ಗ್ರಾಮಸ್ಥರಿಗೆ ನನಗೆ ವೋಟು ಹಾಕಬೇಡಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ (Appachchu Ranjan) ಕಿಡಿಕಾರಿದ್ದಾರೆ.

ಹೌದು, ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ (SomavaraPete) ಮತ್ತು ಕುಶಾಲನಗರ (Kushalnagara) ತಾಲೂಕು ನೇರುಗಳಲೆ ಗ್ರಾಮ ಪಂಚಾಯಿತಿ ಮತ್ತು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಲೋಕೋಪಯೋಗಿ ಇಲಾಖೆಯ ಮಸಗೂಡು ಕಣಿವೆಯ ರಸ್ತೆಯು ಸುಮಾರು 18 ಕಿ.ಲೋವರೆಗೂ ಕಳೆದ 10 ವರ್ಷಗಳಿಂದ ಇದೇ ಸ್ಥಿತಿಯಲ್ಲಿದೆ. ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈ ಹಿಂದೆ ಈ ಗ್ರಾಮಕ್ಕೆ 5 ಖಾಸಗಿ ಬಸ್ಸುಗಳು ಸಂಚರಿಸುತ್ತಿತ್ತು. ಆದರೆ ರಸ್ತೆ ಹಾಳಾಗಿರುವುದರಿಂದ ಬಸ್ಸುಗಳ ವ್ಯವಸ್ಥೆ ನಿಲ್ಲಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಸೋಮವಾರಪೇಟೆ ಕೂಡಿಗೆಗೆ ನಡೆದು ಹೋಗುವ ದುಸ್ಥಿತಿಯಾಗಿದೆ.

ಈ ಗ್ರಾಮಕ್ಕೆ ಈ ಹಿಂದೆ ಆಟೋ ಬಾಡಿಗೆ 50-60 ತೆಗೆದುಕೊಳ್ಳುತ್ತಿದ್ದರು. ಆದರೆ ಈಗ 200 ರಿಂದ 300 ರೂ. ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಗ್ರಾಮದಲ್ಲಿ ಕೂಲಿ ಕಾರ್ಮಿಕರು ಸೇರಿದಂತೆ ಸುಮಾರು 5,000 ಜನ ಇದ್ದಾರೆ. ಇದು ಸುಮಾರು 10 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಜನರಿಗೆ ವಯಸ್ಕರಿಗೆ, ಮಕ್ಕಳಿಗೆ ಓಡಾಡಲು ತುಂಬಾ ಕಷ್ಟಕರವಾಗಿದೆ. ಈ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಮಾಡುವುದರಿಂದ ಹೆಚ್ಚು ಲಾರಿಗಳ ಓಡಾಟ ಇರುವುದರಿಂದ ರಸ್ತೆ ಹಾಗೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಅಪಾಯದಲ್ಲಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಅನೇಕ ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ‘ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ನನಗೆ ನೀವು ಕೊಟ್ಟಿರುವ ಪೊಷಿಷನ್ ಸಾಕು, ಇನ್ಯಾವುದೂ ಬೇಡ – ಡಿಕೆಶಿ ರಾಜಕೀಯ ನಿವೃತ್ತಿ ಸುಳಿವು!
ಈ ರಸ್ತೆ ಸಮಸ್ಯೆ ಕಳೆದ ಹತ್ತು ವರ್ಷಗಳಿಂದ ಇದೆ. ಈ ಗ್ರಾಮದಲ್ಲಿ ಕಲ್ಲಿನ ಕೊರೆಗಳು ಇರುವುದರಿಂದ ಸಾಕಷ್ಟು ಲಾರಿಗಳು ಓಡಾಟ ನಡೆಸುತ್ತಿದ್ದು, ಗ್ರಾಮ ಸಂಪೂರ್ಣ ಧೂಳು ಮಯವಾಗಿದೆ. ಸರಿಯಾದ ರಸ್ತೆ ಮಾಡಿ ಶಾಲಾ ಕಾಲೇಜು ಮಕ್ಕಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಧಾನಿ ಮೋದಿ (Prime Minister Narendra Modi) ಅವರ ಕಚೇರಿಗೆ ಪತ್ರ ಮೇಲ್ ಮಾಡಲಾಗಿದೆ. ಅಲ್ಲದೇ ಅಪ್ಪಚ್ಚು ರಂಜನ್ ಅವರಿಗೆ ಪತ್ರ ಕೊಡಲು ಹೋದರೆ, ನಿಮ್ಮ ಗ್ರಾಮಸ್ಥರು ವೋಟು ತನಗೆ ಬೇಡ ಇಲ್ಲಿಂದ ಹೋಗಿ ಎಂದು ಕೊಡಗು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ (B.C.Nagesh) ಅವರ ಮುಂದೆಯೇ ಬೈದು ಕಳಿಸಿದ್ದಾರೆ. ಇದೀಗಾ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?














