Tag: app

  • ಕೇರಳ | 16ರ ಬಾಲಕನ ಮೇಲೆ LGBTQ ಆ್ಯಪ್‌ನಲ್ಲಿ ಪರಿಚಯವಾದ 14 ಮಂದಿಯಿಂದ ಲೈಂಗಿಕ ದೌರ್ಜನ್ಯ

    ಕೇರಳ | 16ರ ಬಾಲಕನ ಮೇಲೆ LGBTQ ಆ್ಯಪ್‌ನಲ್ಲಿ ಪರಿಚಯವಾದ 14 ಮಂದಿಯಿಂದ ಲೈಂಗಿಕ ದೌರ್ಜನ್ಯ

    ತಿರುವನಂತಪುರಂ: 16 ವರ್ಷದ ಆಪ್ರಾಪ್ತನ ಮೇಲೆ 2 ವರ್ಷಗಳ ಕಾಲ 14 ಮಂದಿ ಲೈಂಗಿಕ ದೌರ್ಜನ್ಯ ಎಸಗಿರುವುದು ಕೇರಳದ (Kerala) ಕಾಸರಗೋಡು (Kasaragod) ಜಿಲ್ಲೆಯಲ್ಲಿ ನಡೆದಿದೆ. ಬಾಲಕನಿಗೆ 14 ಮಂದಿ LGBTQ ಮೊಬೈಲ್ ಆ್ಯಪ್‌ನಲ್ಲಿ ಪರಿಚಯವಾಗಿದ್ದರು ಎಂದು ತಿಳಿದುಬಂದಿದೆ.

    ಇಲ್ಲಿಯವರೆಗೂ ದೌರ್ಜನ್ಯ ಎಸಗಿದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಇಬ್ಬರು ಸರ್ಕಾರಿ ನೌಕರರು ಸೇರಿದ್ದಾರೆ. ಬಾಲಕನ ಮನೆಯಲ್ಲಿ, ಕಣ್ಣೂರು ಮತ್ತು ಕೋಝಿಕ್ಕೋಡ್ ಜಿಲ್ಲೆಗಳ ಇತರ ಸ್ಥಳಗಳಲ್ಲಿ 14 ಪುರುಷರು ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 2 ವರ್ಷಗಳಿಂದ ಅತ್ಯಾಚಾರ ಎಸಗಿದ ಆರೋಪ – RCB ಸ್ಟಾರ್‌ ಯಶ್‌ ದಯಾಳ್‌ ವಿರುದ್ಧ ಪೋಕ್ಸೊ ಕೇಸ್‌

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಬಾಲಕನ ತಾಯಿ ಅವರ ಮನೆಯಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿದ್ದರು. ಅವರು ನೋಡುತ್ತಿದ್ದಂತೆ ಆತ ಅಲ್ಲಿಂದ ಓಡಿಹೋಗಿದ್ದ. ಈ ಬಗ್ಗೆ ಮಗನನ್ನು ಕೇಳಿದಾಗ ಆತ ವಿಚಾರವನ್ನು ಅಮ್ಮನ ಮುಂದೆ ಹೇಳಿಕೊಂಡಿದ್ದ. ಬಳಿಕ ಬಾಲಕನ ತಾಯಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಲ್ಲಿಂದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ತನಿಖೆಗೆ ಎಸ್‌ಐಟಿ ರಚನೆ 
    ಬಾಲಕ ನೀಡಿದ ಹೇಳಿಕೆಯ ಆಧಾರದ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಅಡಿಯಲ್ಲಿ 14 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಂಬಂಧ ಡಿವೈಎಸ್ಪಿ ಮತ್ತು ನಾಲ್ವರು ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

    ಆರು ಪ್ರಕರಣಗಳನ್ನು ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ಈ ಪ್ರಕರಣದಲ್ಲಿ 14 ಆರೋಪಿಗಳು 25 ರಿಂದ 51 ವರ್ಷ ವಯಸ್ಸಿನವರಾಗಿದ್ದು, ಅದರಲ್ಲಿ ಒಬ್ಬ ರೈಲ್ವೆ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: 7 ವರ್ಷದ ಬಾಲಕಿ ಮೇಲೆ ಅಪ್ರಾಪ್ತರಿಂದಲೇ ಅತ್ಯಾಚಾರ – ಇಬ್ಬರು ಬಾಲಕರು ಅರೆಸ್ಟ್‌

  • ತಂದೆ ಬಗ್ಗೆ ಬಿಜೆಪಿ ನಾಯಕನ ಆಕ್ಷೇಪಾರ್ಹ ಹೇಳಿಕೆ – ಕಣ್ಣೀರಿಟ್ಟ ದೆಹಲಿ ಸಿಎಂ ಅತಿಶಿ

    ತಂದೆ ಬಗ್ಗೆ ಬಿಜೆಪಿ ನಾಯಕನ ಆಕ್ಷೇಪಾರ್ಹ ಹೇಳಿಕೆ – ಕಣ್ಣೀರಿಟ್ಟ ದೆಹಲಿ ಸಿಎಂ ಅತಿಶಿ

    ನವದೆಹಲಿ: ಬಿಜೆಪಿ ನಾಯಕ ರಮೇಶ್ ಬಿಧೂರಿ ಅವರು ತಮ್ಮ ತಂದೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ಕಣ್ಣೀರು ಹಾಕಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯ ಕಲ್ಕಾಜಿ ಕ್ಷೇತ್ರದ ಅಭ್ಯರ್ಥಿ ಬಿಧೂರಿ ಅವರ ಆಕ್ಷೇಪಾರ್ಹ ಹೇಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ತೀವ್ರ ಭಾವುಕರಾಗಿ ಮಾತನಾಡಿದ ಅವರು, ನನ್ನ ತಂದೆ ಅವರು ಜೀವನದುದ್ದಕ್ಕೂ ಬಡ ಮತ್ತು ಕೆಳ ಮಧ್ಯಮ ವರ್ಗದ ಸಾವಿರಾರು ಮಕ್ಕಳಿಗೆ ಪಾಠ ಮಾಡಿದ್ದಾರೆ. ಅವರಿಗೆ ಈಗ 80 ವರ್ಷ ವಯಸ್ಸಾಗಿದೆ. ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಬೇರೊಬ್ಬರ ಸಹಾಯವಿಲ್ಲದೆ ನಡೆಯಲು ಸಹ ಸಾಧ್ಯವಿಲ್ಲ. ಚುನಾವಣೆ ಅಥವಾ ರಾಜಕೀಯದ ಕಾರಣಕ್ಕೆ ಅಂತಹ ವೃದ್ಧರನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

    ‘ನಮ್ಮ ರಾಜಕಾರಣ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದು ಹೇಗೆ? 10 ವರ್ಷ ಸಂಸದರಾಗಿದ್ದಾಗ ಕಲ್ಕಾಜಿ ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಬಿಧೂರಿ ತೋರಿಸಬೇಕು. ಅವರು ನನ್ನ ತಂದೆಯನ್ನು ನಿಂದಿಸದೆ ತಮ್ಮ ಕೆಲಸದ ಆಧಾರದ ಮೇಲೆ ಮತ ಕೇಳಬೇಕು ಎಂದು ಸವಾಲು ಹಾಕಿದ್ದಾರೆ.

    ಭಾನುವಾರ ರೋಹಿಣಿಯಲ್ಲಿ ನಡೆದ ಬಿಜೆಪಿಯ ರ‍್ಯಾಲಿಯಲ್ಲಿ ಮಾತನಾಡಿದ ರಮೇಶ್ ಬಿಧೂರಿ, ದೆಹಲಿ ಮುಖ್ಯಮಂತ್ರಿ ಅತಿಶಿ ತಮ್ಮ ತಂದೆಯನ್ನೇ ಬದಲಾಯಿಸಿಕೊಂಡಿದ್ದಾರೆ. ಅತಿಶಿ ತಮ್ಮ ಸರ್​ನೇಮ್ ಅನ್ನು ಮರ್ಲೆನಾನಿಂದ ಸಿಂಗ್ ಎಂದು ಬದಲಾಯಿಸಿಕೊಂಡಿದ್ದಾರೆ. ಕೇಜ್ರಿವಾಲ್ ಭ್ರಷ್ಟ ಕಾಂಗ್ರೆಸ್ ಜೊತೆ ಹೋಗಲ್ಲ ಎಂದು ಮಕ್ಕಳ ಮೇಲೆ ಆಣೆ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದ್ದರು.

  • ಸರ್ಕಾರಿ ನಿವಾಸ ತೊರೆದು ಆಪ್ ಸಂಸದನ ಮನೆಗೆ‌ ತೆರಳಿದ ಕೇಜ್ರಿವಾಲ್

    ಸರ್ಕಾರಿ ನಿವಾಸ ತೊರೆದು ಆಪ್ ಸಂಸದನ ಮನೆಗೆ‌ ತೆರಳಿದ ಕೇಜ್ರಿವಾಲ್

    ನವದೆಹಲಿ: ದೆಹಲಿಯ (Delhi) ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಫ್ಲಾಗ್‌ಸ್ಟಾಫ್ ರಸ್ತೆಯ ಸರ್ಕಾರಿ ನಿವಾಸವನ್ನು ತೆರವು ಮಾಡಿ ದೆಹಲಿ ಲುಟ್ಯೆನ್ಸ್‌ ವಲಯದಲ್ಲಿರುವ ತಮ್ಮ ಪಕ್ಷದ (Aam Aadmi Party) ನಾಯಕ ಅಶೋಕ್ ಮಿತ್ತಲ್ ಅವರ ಮನೆಗೆ ತೆರಳಿದ್ದಾರೆ.

    ಕೇಜ್ರಿವಾಲ್ ತಮ್ಮ ಪೋಷಕರು, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮನೆಯಿಂದ ತೆರಳಿದ್ದಾರೆ. ತೆರಳುವ ಮುನ್ನ ಮನೆಯ ಕೆಲಸದ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಅವರ ಕುಟುಂಬವು ಮಂಡಿ ಹೌಸ್ ಬಳಿಯ ಫಿರೋಜ್‌ಶಾ ರಸ್ತೆಯಲಿರುವ ಪಕ್ಷದ ಸದಸ್ಯ, ಅಶೋಕ್ ಮಿತ್ತಲ್ ಅವರ ಅಧಿಕೃತ ನಿವಾಸಕ್ಕೆ ತೆರಳಿತು. ಮಿತ್ತಲ್ ಅವರು ಪಂಜಾಬ್‌ನ ಸಂಸದರಾಗಿದ್ದಾರೆ.

    ಗುರುವಾರದಿಂದ ಆರಂಭವಾದ ಮಂಗಳಕರ ನವರಾತ್ರಿ ಅವಧಿಯಲ್ಲಿ ಮುಖ್ಯಮಂತ್ರಿ ನಿವಾಸವನ್ನು ಖಾಲಿ ಮಾಡುವುದಾಗಿ ಅವರು ಈ ಹಿಂದೆ ಹೇಳಿದ್ದರು.

    ಕೇಜ್ರಿವಾಲ್ ಕಳೆದ ತಿಂಗಳು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಫೆಬ್ರವರಿಯಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ದೆಹಲಿಯ ಜನರಿಂದ ʻಪ್ರಾಮಾಣಿಕತೆಯ ಪ್ರಮಾಣಪತ್ರʼ ಪಡೆದ ನಂತರವೇ ಮತ್ತೆ ಹುದ್ದೆಯನ್ನು ಅಲಂಕರಿಸುವುದಾಗಿ ಅವರು ಘೋಷಿಸಿದ್ದರು.

    ಅಬಕಾರಿ ನೀತಿಯಲ್ಲಿ ಮತ್ತು ಮುಖ್ಯಮಂತ್ರಿ ಬಂಗಲೆಯ ಪುನರ್‌ನಿರ್ಮಾಣದಲ್ಲಿ ಕೇಜ್ರಿವಾಲ್ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಅವರು ಅಬಕಾರಿ ನೀತಿ ಪ್ರಕರಣದಲ್ಲಿ ಐದು ತಿಂಗಳ ನಂತರ ಸುಪ್ರೀಂ ಕೋರ್ಟ್‌ನಿಂದ ಜಾಮೀನಿನ ಮೇಲೆ ಸೆ.13 ರಂದು ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು.

  • ಇಂದು ಮಧ್ಯಾಹ್ನ ದೆಹಲಿಗೆ ನೂತನ ಮುಖ್ಯಮಂತ್ರಿ ಘೋಷಣೆ

    ಇಂದು ಮಧ್ಯಾಹ್ನ ದೆಹಲಿಗೆ ನೂತನ ಮುಖ್ಯಮಂತ್ರಿ ಘೋಷಣೆ

    ನವದೆಹಲಿ: ಮಧ್ಯಾಹ್ನ 12 ಗಂಟೆಗೆ ದೆಹಲಿಗೆ (Delhi) ನೂತನ ಮುಖ್ಯಮಂತ್ರಿ ಘೋಷಣೆ ಮಾಡಲಾಗುವುದು ಎಂದು ಆಪ್‌ (APP) ಘೋಷಿಸಿದೆ ಎಂದು ಮೂಲಗಳು ತಿಳಿಸಿದೆ.

    ಶಾಸಕಾಂಗ ಪಕ್ಷದ ಸಭೆ ಬಳಿಕ ನೂತನ ಸಿಎಂ ಹೆಸರು ಘೋಷಣೆ ಮಾಡಲಾಗುತ್ತದೆ. ಸಿಎಂ ಹೆಸರು ಘೋಷಿಸುವ ಬಗ್ಗೆ ಪಕ್ಷದ ಮೂಲಗಳು ಮಾಹಿತಿ ನೀಡಿವೆ ಎಂದು ವರದಿಯಾಗಿದೆ.

    ಸೆ. 15 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (Arvind Kejriwal) ಅವರು ಮುಂದಿನ 48 ಗಂಟೆಗಳ ಒಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

    ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (Liquor Policy Case) ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಇದೇ ಸೆಪ್ಟೆಂಬರ್‌ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿಂದ ರಿಲೀಸ್‌ ಆದ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

  • ಚುನಾವಣೆ ಮುಂಚಿತವಾಗಿ ಕೇಜ್ರಿವಾಲ್ ಬಂಧನ ಮಾಡಿದ್ಯಾಕೆ – ಇಡಿಗೆ ಸುಪ್ರೀಂ ಪ್ರಶ್ನೆ

    ಚುನಾವಣೆ ಮುಂಚಿತವಾಗಿ ಕೇಜ್ರಿವಾಲ್ ಬಂಧನ ಮಾಡಿದ್ಯಾಕೆ – ಇಡಿಗೆ ಸುಪ್ರೀಂ ಪ್ರಶ್ನೆ

    ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ (Delhi liquor Policy)  ತಮ್ಮ ಬಂಧನದ ಅವಧಿಯನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಮುಂದಿನ ವಿಚಾರಣೆ ವೇಳೆಗೆ ಐದು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿ ಬರುವಂತೆ ಇಡಿ ಪರ ವಕೀಲರಿಗೆ ಸೂಚನೆ ನೀಡಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ, ಪ್ರಕರಣದಲ್ಲಿ ಕೇಜ್ರಿವಾಲ್ ಹೇಗೆ ಸಂಬಂಧ ಹೊಂದಿದ್ದಾರೆ? ಮನೀಶ್ ಸಿಸೋಡಿಯಾ ಪ್ರಕರಣದಲ್ಲಿ ಎರಡು ಭಾಗಗಳಿವೆ. ಆ ಪೈಕಿ ಒಂದು ಅವರ ಪರವಾಗಿ ಮತ್ತೊಂದು ಅವರ ವಿರುದ್ಧವಾಗಿದೆ. ಇದರ ಯಾವ ಭಾಗದಲ್ಲಿ ಕೇಜ್ರಿವಾಲ್ ಇದ್ದಾರೆ ಇದಕ್ಕೆ ಉತ್ತರಿಸಬೇಕು ಎಂದು ಪೀಠ ಸೂಚಿಸಿದೆ. ಇದನ್ನೂ ಓದಿ: ವಿದೇಶದ ಮತದಾರರಿಗೆ ಭಟ್ಕಳ ಜಮಾತ್‍ಗಳಿಂದ ಗಾಳ- ವಿಮಾನ ಟಿಕೆಟ್ ಆಫರ್

    ಜಾಮೀನಿಗೆ ಅರ್ಜಿ ಸಲ್ಲಿಸುವ ಬದಲು ಕೇಜ್ರಿವಾಲ್ ಬಂಧನ ಮತ್ತು ರಿಮಾಂಡ್ ವಿರುದ್ಧ ಬರುತ್ತಿರುವ ಕಾರಣ ಪಿಎಂಎಲ್‍ಎ ಕಾಯ್ದೆಯ ಸೆಕ್ಷನ್ 19 ಅನ್ನು ಹೇಗೆ ಅರ್ಥೈಸಬೇಕು? ವಿಶೇಷವಾಗಿ ಸೆಕ್ಷನ್ 8ರ ತೀರ್ಪು ಪ್ರಕ್ರಿಯೆಗೆ 365 ದಿನಗಳ ಗರಿಷ್ಠ ಸಮಯದ ಮಿತಿಯನ್ನು ಸೂಚಿಸುತ್ತದೆ. ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ. ನಾವು ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಈ ಬಗ್ಗೆ ನಿಲುವೇನು? ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆ ಮುಂಚಿತವಾಗಿ ಅವರನ್ನು ಬಂಧಿಸಿದ್ದೇಕೆ ಎಂದು ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಪ್ರಶ್ನಿಸಿದೆ.

    ಇಡಿ ಪ್ರಶ್ನೆಗಳಿಗೂ ಮುನ್ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಕೇಜ್ರಿವಾಲ್ ಪರ ಎರಡು ಗಂಟೆಗೂ ಅಧಿಕ ಕಾಲ ಸುಧೀರ್ಘವಾಗಿ ವಾದ ಮಂಡಿಸಿದರು. ವಾದ ಆಲಿಸಿದ ಬಳಿಕ ನ್ಯಾಯಾಲಯ ಶುಕ್ರವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?

  • ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಕೊನೆಗೂ ಚಾಲನೆ – ಆ್ಯಪ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ

    ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಕೊನೆಗೂ ಚಾಲನೆ – ಆ್ಯಪ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ

    ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ನೋಂದಣಿಗೆ ರಾಜ್ಯ ಸರ್ಕಾರ ಕಡೆಗೂ ಚಾಲನೆ ನೀಡಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಬುಧವಾರ ಗೃಹಲಕ್ಷ್ಮಿ ಆ್ಯಪ್ ಬಿಡುಗಡೆ ಮಾಡಿದ್ದಾರೆ.

    ಗುರುವಾರದಿಂದ ಅಧಿಕೃತವಾಗಿ ಅರ್ಜಿ ಸ್ವೀಕಾರ ಆರಂಭ ಆಗಲಿದೆ. ಇದಕ್ಕಾಗಿ ಸರ್ಕಾರ ನಿಗದಿ ಮಾಡಿದ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಯಾವಾಗ ಎಂಬುದು ಮೊಬೈಲ್‌ಗಳಿಗೆ ಸಂದೇಶ ಬರಲಿದೆ. ಆಗ ನಿಗದಿತ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಬೇಕು. ಈ ನೋಂದಣಿಗೆ ಯಾವುದೇ ಶುಲ್ಕವಿಲ್ಲ.

    ಆದರೆ ಆ್ಯಪ್‌ಗಳಿಂದಾಗಿ ಅನಕ್ಷರಸ್ತರಿಗೆ ತೊಂದರೆಯಾಗುವ ಬಗ್ಗೆ ‘ಪಬ್ಲಿಕ್ ಟಿವಿ’ಯಲ್ಲಿ ಪ್ರಸ್ತಾಪವಾಗಿತ್ತು. ಇದನ್ನು ಸರ್ಕಾರ ಪರಿಗಣಿಸಿದೆ. ಮೊಬೈಲ್ ಬಳಕೆ ಯಾರಿಗೆ ಬರುವುದಿಲ್ಲವೋ ಅಂಥವರ ನೋಂದಣಿಗೆ ಅಂಗನವಾಡಿ ಕಾರ್ಯಕರ್ತೆಯರು ನೆರವಾಗಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಇದನ್ನೂ ಓದಿ: ಮಸೂದೆಗಳ ಪ್ರತಿ ಹರಿದು ಡೆಪ್ಯುಟಿ ಸ್ಪೀಕರ್‌ನತ್ತ ತೂರಿದ ವಿಪಕ್ಷಗಳು – ಬಿಜೆಪಿಯ 10 ಶಾಸಕರು ಅಮಾನತು

    ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಪ್ರಮುಖದ್ದಾಗಿದೆ. ಕುಟುಂಬದ ಮನೆ ಯಜಮಾನಿ ಖಾತೆಗೆ ತಿಂಗಳಿಗೆ 2,000 ರೂ. ನೀಡುವುದು ಯೋಜನೆಯ ಉದ್ದೇಶವಾಗಿದೆ. ಯಜಮಾನಿಯಾಗಲಿ ಅಥವಾ ಆಕೆ ಪತಿಯಾಗಲಿ ತೆರಿಗೆ ಪಾವತಿದಾರರಾಗಿದ್ದಲ್ಲಿ, ಅವರಿಗೆ ಈ ಯೋಜನೆ ಸೌಲಭ್ಯ ಸಿಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ತಳ್ಳಾಟ ನೂಕಾಟದಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದ ಯತ್ನಾಳ್ – ಆಸ್ಪತ್ರೆಗೆ ರವಾನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ವಿಟ್ಟರ್‌ಗೆ ಸೆಡ್ಡು – ಪರ್ಯಾಯ ಆ್ಯಪ್ ರಚಿಸಿದ ಟ್ವಿಟ್ಟರ್ ಸಂಸ್ಥಾಪಕ ಜಾಕ್ ಡಾರ್ಸೆ

    ಟ್ವಿಟ್ಟರ್‌ಗೆ ಸೆಡ್ಡು – ಪರ್ಯಾಯ ಆ್ಯಪ್ ರಚಿಸಿದ ಟ್ವಿಟ್ಟರ್ ಸಂಸ್ಥಾಪಕ ಜಾಕ್ ಡಾರ್ಸೆ

    ವಾಷಿಂಗ್ಟನ್: ಟ್ವಿಟ್ಟರ್‌ನ (Twitter) ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜಾಕ್ ಡಾರ್ಸೆ (Jack Dorsey) ಮೈಕೋಬ್ಲಾಗಿಂಗ್ ಸೈಟ್‌ಗೆ ಪರ್ಯಾಯವಾಗಿ ಹೊಸ ಆ್ಯಪ್ ರಚನೆ ಮಾಡಿದ್ದು, ಇದೀಗ ಆ್ಯಪ್ ಪರೀಕ್ಷಾ ಹಂತದಲ್ಲಿದೆ ಎಂದು ವರದಿಯಾಗಿದೆ.

    ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಮಾಜಿ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಉನ್ನತ ಅಧಿಕಾರಿಗಳನ್ನೇ ವಜಾಗೊಳಿಸಲಾಗಿದೆ. ಈ ಬದಲಾವಣೆಯ ನಡುವೆಯೇ ಡಾರ್ಸೆ ಟ್ವಿಟ್ಟರ್‌ಗೆ ಪರ್ಯಾಯವಾಗಿ ಬ್ಲೂಸ್ಕೈ (Bluesky) ಹೆಸರಿನ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿತ್ತು.

    ವರದಿಗಳ ಪ್ರಕಾರ ಬ್ಲೂಸ್ಕೈ ಅಪ್ಲಿಕೇಶನ್ ಐಒಎಸ್‌ನ ಆ್ಯಪ್ ಸ್ಟೋರ್‌ನಲ್ಲಿ ಬೀಟಾ ಪರೀಕ್ಷೆಗಾಗಿ ಬಿಡುಗಡೆ ಮಾಡಲಾಗಿದೆ. ಇದು ಮೊದಲ ಬಾರಿ ಫೆಬ್ರವರಿ 17 ರಂದು ಆ್ಯಪ್ ಸ್ಟೋರ್‌ನಲ್ಲಿ ಕಾಣಿಸಿಕೊಂಡಿತ್ತು. ಪರೀಕ್ಷಾ ಹಂತದಲ್ಲಿ ಇದನ್ನು 2,000 ಬಾರಿ ಇನ್‌ಸ್ಟಾಲ್ ಮಾಡಲಾಗಿದೆ ಎಂದು ಎಂದು ವರದಿಯಾಗಿದೆ.

    ಬ್ಲೂಸ್ಕೈ ಆ್ಯಪ್‌ನ ಇಂಟರ್ಫೇಸ್ ಅನ್ನು ಸರಳವಾಗಿ ವಿನ್ಯಾಸಗೊಳಿಸಲಾಗಿದೆ. ಅಪ್ಲಿಕೇಶನ್‌ನಲ್ಲಿರುವ ಪ್ಲಸ್ ಬಟನ್ ಅನ್ನು ಕ್ಲಿಕ್ ಮಾಡಿದರೆ ಬಳಕೆದಾರರು ಫೋಟೋಗಳನ್ನು ಒಳಗೊಂಡಂತೆ 256 ಅಕ್ಷರಗಳ ಪೋಸ್ಟ್ಅನ್ನು ಸುಲಭವಾಗಿ ರಚಿಸಬಹುದು. ಟ್ವಿಟ್ಟರ್‌ನಂತೆಯೇ ಬ್ಲೂಸ್ಕೈನಲ್ಲಿ ಲೈಕ್ಸ್, ರೀಪೋಸ್ಟ್, ಫಾಲೋ, ಹಾಗೂ ರಿಪ್ಲೈ ಮಾಡಬಹುದಾದ ಫೀಚರ್‌ಗಳಿವೆ. ಆದರೆ ಇದರಲ್ಲಿ ವ್ಯಕ್ತಿಗಳಿಗೆ ನೇರ ಸಂದೇಶ ಕಳುಹಿಸುವ ಫೀಚರ್ ಇಲ್ಲ. ಇದನ್ನೂ ಓದಿ: ಚೀನಾದಿಂದ ತೈಲಕ್ಕೆ ಭಾರೀ ಬೇಡಿಕೆ – ಆದ್ರೂ ರಷ್ಯಾಗೆ ಭಾರತದ ಕಡೆ ಒಲವೇಕೆ?

    ಬ್ಲೂಸ್ಕೈನ ಯೋಜನೆಯನ್ನು 2019ರಲ್ಲಿ ಟ್ವಿಟ್ಟರ್ ಅಭಿವೃದ್ಧಿಪಡಿಸಿತ್ತು. ಆದರೆ ಬಳಿಕ 2022ರಲ್ಲಿ ಅದನ್ನು ಸ್ವತಂತ್ರ್ಯ ಕಂಪನಿಯಾಗಿ ಪ್ರತ್ಯೇಕಗೊಳಿಸಲಾಯಿತು. ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧಿನಪಡಿಸಿಕೊಳ್ಳುವುದಕ್ಕೂ 1 ವಾರ ಮೊದಲೇ ಡಾರ್ಸೆ ಬ್ಲೂಸ್ಕೈಗೆ ಬೀಟಾ ಪರೀಕ್ಷಕರನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

  • ಚೀನಾದೊಂದಿಗೆ ಲಿಂಕ್ – 200ಕ್ಕೂ ಅಧಿಕ ಸಾಲ, ಬೆಟ್ಟಿಂಗ್ ಆ್ಯಪ್‌ಗಳನ್ನು ಬ್ಯಾನ್ ಮಾಡಲಿದೆ ಭಾರತ

    ಚೀನಾದೊಂದಿಗೆ ಲಿಂಕ್ – 200ಕ್ಕೂ ಅಧಿಕ ಸಾಲ, ಬೆಟ್ಟಿಂಗ್ ಆ್ಯಪ್‌ಗಳನ್ನು ಬ್ಯಾನ್ ಮಾಡಲಿದೆ ಭಾರತ

    ನವದೆಹಲಿ: ಚೀನಾದೊಂದಿಗೆ (China) ಸಂಪರ್ಕವಿರುವ 200ಕ್ಕೂ ಅಧಿಕ ಆ್ಯಪ್‌ಗಳನ್ನು (Apps) ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ. ಅವುಗಳಲ್ಲಿ 138 ಬೆಟ್ಟಿಂಗ್ (Betting) ಅಪ್ಲಿಕೇಶನ್‌ಗಳು ಹಾಗೂ 94 ಸಾಲ (Loan) ನೀಡುವ ಅಪ್ಲಿಕೇಶನ್‌ಗಳು ಒಳಗೊಂಡಿವೆ.

    ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ವಾರ ಗೃಹ ವ್ಯವಹಾರಗಳ ಸಚಿವಾಲಯದಿಂದ ಈ ಆದೇಶವನ್ನು ಸ್ವೀಕರಿಸಿದೆ. ಈ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿದೆ.

    ವರದಿಗಳ ಪ್ರಕಾರ ಚೀನಾದೊಂದಿಗೆ ಸಂಪರ್ಕ ಹೊಂದಿರುವ ಸಾಲ ನೀಡುವಂತಹ ಅಪ್ಲಿಕೇಶನ್‌ಗಳು ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸಾಲವನ್ನು ತೆಗೆದುಕೊಳ್ಳುವಂತೆ ಆಮಿಷ ಒಡ್ಡುತ್ತವೆ. ಬಳಿಕ ವಾರ್ಷಿಕವಾಗಿ ಸಾಲದ ಬಡ್ಡಿಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಾಲ ತೀರಿಸಲು ಸಾಧ್ಯವಾಗದೇ ಹೋದಾಗ ಕಿರುಕುಳ ನೀಡಿ, ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಬೆದರಿಕೆ ಹಾಕುತ್ತವೆ ಎಂದು ತಿಳಿದುಬಂದಿದೆ.

    ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕೆಲವರು ಇಂತಹ ಅಪ್ಲಿಕೇಶನ್‌ಗಳಿಂದ ಸಾಲವನ್ನು ತೆಗೆದುಕೊಂಡು ಹಾಗೂ ಬೆಟ್ಟಿಂಗ್‌ನಿಂದ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಹಲವಾರು ರಾಜ್ಯಗಳು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಈ ಅಪ್ಲಿಕೇಶನ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವನ್ನು ಕೇಳಿಕೊಂಡಿವೆ. ಇದನ್ನೂ ಓದಿ: ಕಾಮುಕ ಟೆಕ್ಕಿ ಮೊಬೈಲ್‌ನಲ್ಲಿ ತನ್ನ ಪ್ರಿಯತಮೆಯದ್ದೂ ಸೇರಿ 208 ಖಾಸಗಿ ವೀಡಿಯೊಗಳು ಪತ್ತೆ..!

    ಈ ದೂರುಗಳನ್ನಾಧರಿಸಿ ಗೃಹ ವ್ಯವಹಾರಗಳ ಸಚಿವಾಲಯ 6 ತಿಂಗಳುಗಳ ಹಿಂದೆ 26 ಚೀನೀ ಸಾಲ ನೀಡುವ ಅಪ್ಲಿಕೇಶನ್‌ಗಳ ಮೇಲೆ ಪರಿಶೀಲನೆ ನಡೆಸಿತ್ತು. ಆದರೂ ಇ-ಸ್ಟೋರ್‌ಗಳಲ್ಲಿ ಇಂತಹ 94 ಅಪ್ಲಿಕೇಶನ್‌ಗಳು ಲಭ್ಯವಿದ್ದು, ಇವು ತರ್ಡ್ ಪಾರ್ಟಿ ಲಿಂಕ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ ಎಂಬುದು ಬೆಳಕಿಗೆ ಬಂದಿದೆ.

    ಈ ಹಿಂದೆಯೂ ಕೇಂದ್ರ ಸರ್ಕಾರ ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ ಹಲವಾರು ಚೀನೀ ಆ್ಯಪ್‌ಗಳನ್ನು ನಿಷೇಧಿಸಿತ್ತು. 2020ರ ಜೂನ್‌ನಿಂದ ಟಿಕ್‌ಟಾಕ್, ಶೇರ್‌ಇಟ್, ವೀಚ್ಯಾಟ್, ಹೆಲೋ, ಲೈಕೀ, ಯುಸಿ ನ್ಯೂಸ್, ಬಿಗೊ ಲೈವ್, ಯುಸಿ ಬ್ರೌಸರ್, ಇಎಸ್ ಫೈಲ್ ಎಕ್ಸ್‌ಪ್ಲೋರರ್, ಮಿ ಕಮ್ಯೂನಿಟಿ ಸೇರಿದಂತೆ 200ಕ್ಕೂ ಅಧಿಕ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿತ್ತು. ಇದನ್ನೂ ಓದಿ: ನಕಲಿ ಚಿನ್ನ ಕೊಟ್ಟು ಅಸಲಿ ಆಭರಣದೊಂದಿಗೆ ಅಜ್ಜಿ ಗ್ಯಾಂಗ್‌ ಎಸ್ಕೇಪ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BBMP ಹೊಸ ಪ್ಲಾನ್ – ರಸ್ತೆ ಗುಂಡಿ ಮುಚ್ಚಲು ಆ್ಯಪ್ ಬಳಕೆ

    BBMP ಹೊಸ ಪ್ಲಾನ್ – ರಸ್ತೆ ಗುಂಡಿ ಮುಚ್ಚಲು ಆ್ಯಪ್ ಬಳಕೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (BBMP) ರಸ್ತೆ ಗುಂಡಿಗಳದೇ (Potholes) ಕಾರುಬಾರು. ರಸ್ತೆ (Road) ಗುಂಡಿ ಹೆಸರಲ್ಲಿ ಪ್ರತಿ ವರ್ಷ ಕೋಟಿ, ಕೋಟಿ ರೂ. ಲೂಟಿ ಮಾಡಲಾಗುತ್ತಿದೆ. ಇದೀಗ ಈ ಕೋಟಿ ಗುಂಡಿ ಅಡ್ಡ ದಾರಿ ತಪ್ಪಿಸಲು ಪಾಲಿಕೆ ಹೊಸ ದಾರಿ ಹಿಡಿದಿದೆ.

    BBMP

    ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಸಲುವಾಗಿ ಬರೀ ವಂಚನೆ ಮಾಡುವುದೇ ದೊಡ್ಡ ದಂಧೆ ಮಾಡಿಕೊಂಡಿದೆ. ಅಡ್ಡರಸ್ತೆ, ಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚಿದ್ದೀವಿ ಅಂತಾ ಲೆಕ್ಕ ಕೊಟ್ಟು ಕಾಲ ತಳ್ಳುತ್ತಿದೆ. ಈ ಸಮಸ್ಯೆ ತಪ್ಪಿಸಲು ಈಗ ಪಾಲಿಕೆ ಹೊಸ ದಾರಿ ಹಿಡಿದಿದ್ದು, ಆ್ಯಪ್ (App) ಲೆಕ್ಕಾಚಾರದ ಮೂಲಕ ಗುಂಡಿ ಮುಚ್ಚಲು ಪಾಲಿಗೆ ಮುಂದಾಗಿದೆ. ಇದನ್ನೂ ಓದಿ: ಇಂದು ರಾಷ್ಟ್ರಪತಿಗಳಿಂದ ಮೈಸೂರು ದಸರಾ ಉದ್ಘಾಟನೆ – ಏನೇನು ಕಾರ್ಯಕ್ರಮ ನಡೆಯಲಿದೆ?

    ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ‌(Fixmy Street App) ಮೂಲಕ ಗುಂಡಿಗಳನ್ನು ಪಾಲಿಕೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಗುರುತಿಸಲು ಅವಕಾಶ ಇದೆ. ಈ ಗುಂಡಿಗಳ ಆಳ, ಉದ್ದ ಗುರುತಿಸಿ ಗುಂಡಿ ಮುಚ್ಚುವ ಕಾರ್ಯ ನಡೆದ ಮೇಲೆ ಸಾಕ್ಷಿ ಸಮೇತ ಮಾಹಿತಿ ನೀಡಿದರೆ ಮಾತ್ರ ಹಣ ಬಿಡುಗಡೆಯ ಲೆಕ್ಕಚಾರ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: Training To Be Organised – ಪಿಎಫ್‌ಐ ಪತ್ರ, ಪೊಲೀಸ್‌ ತನಿಖೆ ಚುರುಕು

     

    ನಗರದ ಬಹುತೇಕ ರಸ್ತೆಗಳಲ್ಲಿ ಈ ಗುಂಡಿಯದೇ ದೊಡ್ಡ ಗೋಲ್ ಮಾಲ್. ಯಾವುದೋ ರಸ್ತೆ ತೋರಿಸಿದರು ಪಾಲಿಕೆ ಮುಚ್ಚಿದ್ದೀವಿ  ಅಂತಾರೆ. ಆದ್ರೆ ಸಿಟಿ ಮಧ್ಯಭಾಗದಲ್ಲೇ ಹಲವೆಡೆ ಮುಚ್ಚಿಲ್ಲ. ಇದೆಲ್ಲ ಸುಮ್ಮನೆ ಕಾಲಕಳೆಯುವ ಐಡಿಯಾ ಎಂದು ಆ್ಯಪ್ ಲೆಕ್ಕಾಚಾರದ ಕುರಿತಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಜಾನ್ ವಿವಾದ- ಜುಮಾ ಮಸೀದಿಯಿಂದ ನಮಾಜ್ ನೆನಪಿಸಲು ಆ್ಯಪ್ ಪ್ರಾರಂಭ

    ಆಜಾನ್ ವಿವಾದ- ಜುಮಾ ಮಸೀದಿಯಿಂದ ನಮಾಜ್ ನೆನಪಿಸಲು ಆ್ಯಪ್ ಪ್ರಾರಂಭ

    ಮುಂಬೈ: ನಮಾಜ್ ನೆನಪಿಸಲು ಬಾಂಬೆ ಟ್ರಸ್ಟ್‌ನ ಜುಮಾ ಮಸೀದಿ, ಅಲ್ ಇಸ್ಲಾಹ್ ಎಂಬ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದೆ.

    ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‍ಎಸ್) ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ ನಮಾಜ್ ಸಮಯದಲ್ಲಿ ತಿಳಿಸಲು ಬಾಂಬೆ ಟ್ರಸ್ಟ್ ಈ ಆ್ಯಪ್‍ನ್ನು ಪ್ರಾರಂಭಿಸಿದೆ. ಈ ಆ್ಯಪ್ ದಿನಕ್ಕೆ ಐದು ಬಾರಿ ಪ್ರಾರ್ಥನೆಗೆ ಕರೆ ನೀಡುತ್ತದೆ. ಜೊತೆಗೆ ಪ್ರಾರ್ಥನೆ ಮಾಡಲು ಕರೆಗಳನ್ನು ಲೈವ್ ಸ್ಟ್ರೀಮ್ ಮಾಡಬಹುದಾಗಿದೆ.

    mosque-loudspeakers

    ನಮಾಜ್‍ಗಾಗಿ ಈ ಮೊದಲು ಆ್ಯಪ್‍ಗಳಿದ್ದವು. ಆದರೆ ಆ ಎಲ್ಲಾ ಆ್ಯಪ್‍ಗಳಲ್ಲಿ ರೆಕಾರ್ಡ್ ಮಾಡಿದ್ದನ್ನು ಮಾತ್ರ ಪ್ಲೇ ಮಾಡಬಹುದಾಗಿತ್ತು. ಇದರಿಂದಾಗಿ ಬಾಂಬೆ ಟ್ರಸ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ಈ ಆ್ಯಪ್ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಮಳೆ ಹಾನಿ ಕುರಿತು ಸಿಎಂ‌ ಸಭೆ: ತಕ್ಷಣವೇ ಮನೆ, ಬೆಳೆ ಪರಿಹಾರ ವಿತರಿಸುವಂತೆ ಡಿಸಿಗಳಿಗೆ ಸೂಚನೆ

    loud speaker

    ಈ ಬಗ್ಗೆ ಮಸೀದಿ ಟ್ರಸ್ಟ್‍ನ ಅಧ್ಯಕ್ಷ ಶುಐಬ್ ಖತೀಬ್ ಮಾತನಾಡಿ, ಧ್ವನಿವರ್ಧಕಗಳ ಬಳಕೆಯ ಕುರಿತು ಸುಪ್ರೀಂ ಕೋರ್ಟ್‍ನ ಮಾರ್ಗಸೂಚಿಗಳನ್ನು ಅನುಸರಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಆಜಾನ್ ವಿವಾದದ ಹಿನ್ನೆಲೆಯಲ್ಲಿ ಈ ಮೊದಲು ರೇಡಿಯೋ ತರಂಗಾಂತರದ ಮೂಲಕ ನಮಾಜ್ ಹಾಕಬೇಕು ಎಂದು ಪ್ರಯತ್ನಿಸಿದ್ದೆವು. ಆದರೆ ರೇಡಿಯೋ ತರಂಗಾಂತರವನ್ನು ಪಡೆಯಲು ತೊಂದರೆಯಾಗುತ್ತೆ. ಜೊತೆಗೆ ಕ್ಲಿಯರೆನ್ಸ್ ಇಲ್ಲದಿರುವುದರಿಂದ ಅದನ್ನು ಕೈಬಿಟ್ಟು ಈ ಆ್ಯಪ್‍ನ್ನು ಸಿದ್ಧಪಡಿಸಿದೆವು ಎಂದು ತಿಳಿಸಿದರು. ಇದನ್ನೂ ಓದಿ: ಪ್ರಧಾನಿಗೆ ಕ್ಷಮಾಪಣೆ ಪತ್ರ ನೀಡಿದ್ರೆ ಗುತ್ತಿಗೆದಾರರ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್ – ಮುನಿರತ್ನ

    Live Tv
    [brid partner=56869869 player=32851 video=960834 autoplay=true]