Tag: Apoorva

  • ‘ಕಣಂಜಾರು’ ಚಿತ್ರದ ಟೀಸರ್ ಮೆಚ್ಚಿದ ಫ್ಯಾನ್ಸ್

    ‘ಕಣಂಜಾರು’ ಚಿತ್ರದ ಟೀಸರ್ ಮೆಚ್ಚಿದ ಫ್ಯಾನ್ಸ್

    ‘ಕಣಂಜಾರು’ ಕಾರ್ಕಳದ ಹತ್ತಿರ ಇರುವ ಒಂದು ಊರು. ಅಲ್ಲಿ ಒಂದು ಪುಟ್ಟ ಮನೆಯಿದೆ. ಕಾಡಿನ ಮಧ್ಯೆ ಇರುವ ದೈವದ ಮನೆ ಅದು. ಅದಕ್ಕೆ ಯಾರೂ ಬೀಗ ಹಾಕಿಲ್ಲ. ಆ ಮನೆಯ ಒಳಗೆ ಹೋಗುವಾಗ ಚಪ್ಪಲಿ ಬಿಟ್ಟು ಹೋಗುತ್ತಾರೆ. ಅಲ್ಲಿ ಚಿತ್ರೀಕರಣ ನಡೆಸಲು ಯಾರಿಗೂ ಅನುಮತಿ ಕೊಡಲ್ಲ. ಆದರೆ ನಮಗೆ ದೇವರೇ ಹೂ ಕೊಟ್ಟಾಗ ಅನುಮತಿ ನೀಡಿದರು. ಇದು ಕರಾವಳಿ ತೀರದ ಕಥೆಯಾದರೂ ನಾವಿಲ್ಲಿ ಕಂಬಳ, ಕೋಲದ ಕಥೆ ಹೇಳ್ತಿಲ್ಲ ಎಂದು ನಿರ್ದೇಶಕ ಆರ್.ಬಾಲಚಂದ್ರ ‘ಕಣಂಜಾರು’ (Kannanjaru Film) ಚಿತ್ರದ ಟೀಸರ್ ಸಕ್ಸಸ್ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ.

    ಆರ್.ಪಿ. ಫಿಲಂಸ್ ಬ್ಯಾನರ್ ಅಡಿಯಲ್ಲಿ ಆರ್.ಬಾಲಚಂದ್ರ (R. Balachandra) ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವ ಜೊತೆಗೆ ಬಂಡವಾಳ ಹಾಕಿ ನಿರ್ಮಿಸಿರುವ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರ ಕಣಂಜಾರು. ಈ ಚಿತ್ರದ ಟೀಸರ್ 4 ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಈಗಾಗಲೇ ಹನ್ನೆರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಟೈಟಲ್ ಮೋಷನ್ ಪೋಸ್ಟರ್ ಕೂಡ ಮೂರುವರೆ ಲಕ್ಷ ವೀಕ್ಷಣೆಯಾಗುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿತ್ತು. ಇದನ್ನೂ ಓದಿ:ಕ್ರೂರತ್ವ ಇರುವ ವ್ಯಕ್ತಿತ್ವ ಅವರದಲ್ಲ: ದರ್ಶನ್‌ ಪ್ರಕರಣದ ಬಗ್ಗೆ ಸ್ಪೂರ್ತಿ ವಿಶ್ವಾಸ್ ರಿಯಾಕ್ಷನ್

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಆರ್. ಬಾಲಚಂದ್ರ ಟೀಸರ್‌ಗೆ ಎಲ್ಲಾ ಕಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಬಂತು. ನಮಗೆ ಮೊದಲು ಬೇಕಾಗಿರುವುದೇ ಸಕ್ಸಸ್. ‘ಕಣಂಜಾರು’ ಎಂಬ ಸ್ಥಳ ಸಿಗಲಿಕ್ಕೆ ನಾನು ಸಾವಿರಾರು ಕಿಲೋಮೀಟರ್ ಜರ್ನಿ ಮಾಡಿದೆ. ಕೊನೆಗೆ ಕಾರ್ಕಳ ಹತ್ತಿರ ಈ ಲೊಕೇಶನ್ ಸಿಕ್ತು. ಇದೊಂದು ಯೂನಿಕ್ ಕಾನ್ಸೆಪ್ಟ್, ನನ್ನ ಜೊತೆ ಕಲಾವಿದರು ಟೆಕ್ನೀಶಿಯನ್ಸ್ ಸಹಕಾರ ನೀಡಿದ್ದರಿಂದಲೇ ಇಂಥ ಚಿತ್ರ ಮಾಡಲು ಸಾಧ್ಯವಾಯಿತು. ʻಕಣಂಜಾರುʼ ಎಂಬ ಊರಲ್ಲಿ ನಡೆಯುವ ಕಥೆ, ಕಾರ್ಕಳ, ಉಡುಪಿ, ಹೊನ್ನಾವರ ಮತ್ತಿತರ ಲೊಕೇಶನ್‌ಗಳಲ್ಲಿ 60 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಬೆಂಗಳೂರು, ಮಂಗಳೂರು ಭಾಗದ ಭಾಷೆಯನ್ನೇ ಚಿತ್ರದಲ್ಲಿ ಬಳಸಿದ್ದೇವೆ. ಈ ಹಿಂದೆ ‘ಮಹಾನುಭಾವರು’ ಎಂಬ ಚಿತ್ರ ಮಾಡಿದ್ದೆ, ನಾನೊಬ್ಬ ಆಕ್ಟರ್ ಆಗಬೇಕೆಂಬ ಕನಸಿಟ್ಟುಕೊಂಡೇ ಬಂದವನು. ಫೈನಲ್ಲಾಗಿ ನಾನೇ ನಿರ್ದೇಶನ ಮಾಡಬೇಕಾಯ್ತು ಎಂದು ಆರ್. ಬಾಲಚಂದ್ರ ಮಾತನಾಡಿದ್ದಾರೆ.

    ‘ಕೃಷ್ಣ ಟಾಕೀಸ್’ ಖ್ಯಾತಿಯ ನಟಿ ಅಪೂರ್ವ (Apoorva) ಮಾತನಾಡಿ, ಆರಂಭದಲ್ಲಿ ಹೊಸ ತಂಡ ಹೇಗೆ ಮಾಡ್ತಾರೋ ಅನ್ನೋ ಅನುಮಾನ ಖಂಡಿತ ನನಗಿತ್ತು. ಟೀಸರ್ ನೋಡಿದ ನನ್ನ ಸ್ನೇಹಿತೆಯರು ಕಾಲ್ ಮಾಡಿ ಹೇಳಿದಾಗ ಖುಷಿಯಾಯ್ತು. ತುಂಬಾ ಫ್ಯಾಷನ್ ಇರುವ ನಿರ್ದೇಶಕರು, ನಟನೆ, ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನು ಸಹ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ನನ್ನದು ಕ್ಯಾಮಿಯೋ ರೋಲ್ ಆದರೂ ತುಂಬಾ ತೂಕ ಇರುವ, ಚಿತ್ರಕಥೆಗೆ ತಿರುವು ನೀಡುವಂಥ ಪಾತ್ರ ಎಂದು ಹೇಳಿದರು.

    ಚಿತ್ರದಲ್ಲಿ ನಟ ಕಾರ್ತೀಕ್ ಪೂಜಾರಿ, ಶರ್ಮಿತಾ ಗೌಡ, ಹಿರಿಯ ನಟ ರಾಮಕೃಷ್ಣ, ಪಿ.ಎಸ್. ಶ್ರೀಧರ್, ಮೇಘ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಶಾಂಕ್ ಶೇಷಗಿರಿ ಅವರ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ ಅವರ ಸಂಕಲನ, ಮಂಜುನಾಥ್ ಹೆಗ್ಡೆ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ.

  • ಚಿತ್ರೀಕರಣದ ವೇಳೆ ಬೈಕ್ ನಿಂದ ಬಿದ್ದ ನಟ-ನಟಿ: ತಪ್ಪಿದ ಅನಾಹುತ

    ಚಿತ್ರೀಕರಣದ ವೇಳೆ ಬೈಕ್ ನಿಂದ ಬಿದ್ದ ನಟ-ನಟಿ: ತಪ್ಪಿದ ಅನಾಹುತ

    ಳೆದ ಒಂದು ವಾರದಿಂದ   ಉಸಿರೆ ಸಿನಿಮಾದ ಚಿತ್ರೀಕರಣ ಮಡಿಕೇರಿ ಸುತ್ತಮುತ್ತ ನಡೆಯುತ್ತಿದೆ.  ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡ ಇಂದು ಮಕ್ಕಂಧೂರು ಬಳಿ ನಾಯಕ ಸಂತೋಷ್ (Santosh) ಮತ್ತು ನಾಯಕಿ ಅಪೂರ್ವ (Apoorva) ಬೈಕ್ ಓಡಿಸುವ ದೃಶ್ಯ ಚಿತ್ರಿಸುವ ವೇಳೆ ಆಯಾ ತಪ್ಪಿ ಜಾರಿ ಬಿದ್ದಿದ್ದಾರೆ. ಪರಿಣಾಮ ನಾಯಕ ಮತ್ತು ನಾಯಕಿ ಇಬ್ಬರ ಕಾಲುಗಳಿಗೆ ಪೆಟ್ಟಾಗಿದೆ.

    ಬೈಕ್ ಅಪಘಾತವಾಗಿ ಇಬ್ಬರೂ ನೆಲಕ್ಕೆ ಉರುಳಿದ್ದಾರೆ. ಕೂಡಲೇ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹತ್ತಿರದ ಮಾದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ ಮತ್ತು ಇಂದಿನ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಪನೆಮ್ ಪ್ರಭಾಕರ್ ತಿಳಿಸಿದ್ದಾರೆ.

    ಆರ್‌.ಎಸ್‌.ಪಿ. ಪ್ರೊಡಕ್ಷನ್ಸ್  ಮೂಲಕ ಲಕ್ಷ್ಮಿ ಹರೀಶ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಬೇಜವಾಬ್ದಾರಿ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ, ತನ್ನ ತಾಯಿಯನ್ನು ಕೊಂದವರ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಕಥೆಯಾಗಿದೆ.

  • ರವಿಚಂದ್ರನ್ ಸಿನಿಮಾದಲ್ಲಿ ನಟಿಸಿದ 10 ಕೋಟಿ ಬಾಳುವ ಶ್ವಾನ

    ರವಿಚಂದ್ರನ್ ಸಿನಿಮಾದಲ್ಲಿ ನಟಿಸಿದ 10 ಕೋಟಿ ಬಾಳುವ ಶ್ವಾನ

    ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಸದ್ಯ ‘ಗೌರಿ ಶಂಕರ’ (Gauri Shankar) ಸಿನಿಮಾದ ಶೂಟಿಂಗ್  ನಲ್ಲಿ ಬ್ಯುಸಿಯಾಗಿದ್ದಾರೆ. ದಾಂಡೇಲಿಯ ಅರಣ್ಯದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಬರೋಬ್ಬರಿ ಹತ್ತು ಕೋಟಿ ಬೆಲೆಬಾಳುವ ಕಾಕೇಸಿಯನ್ ಶೆಫರ್ಡ್ (Caucasian Shepherd) ತಳಿಯ ಶ್ವಾನವು ಈ ಸಿನಿಮಾದಲ್ಲಿ ನಟಿಸುತ್ತಿದೆ. ಕೇವಲ ಶ್ವಾನ ಮಾತ್ರವಲ್ಲ ಹುಲಿ ಕೂಡ ಸಿನಿಮಾದ ಒಂದು ಭಾಗವಾಗಿದೆ ಎನ್ನುತ್ತಾರೆ ನಿರ್ದೇಶಕರು.

    ಈ ಸಿನಿಮಾದಲ್ಲಿ ರವಿಚಂದ್ರನ್ ಅವರಿಗೆ ವಿಶೇಷ ಗೆಟಪ್ ಕೂಡ ಹಾಕಲಾಗಿದ್ದು, ಅದು ಯಾವ ರೀತಿಯ ಪಾತ್ರ ಎನ್ನುವುದು ಬಹಿರಂಗವಾಗಿಲ್ಲ. ಆದರೆ, ಅವರ ಕಾಸ್ಟ್ಯೂಮ್ ಮತ್ತು ತಲೆಗೆ ಹಾಕಿರುವ ಕಿರೀಟ ಮಾತ್ರ ವಿಶೇಷವಾಗಿದೆ. ಹಾಗಾಗಿ ಈ ಸಿನಿಮಾದಲ್ಲಿಯ ಅವರ ಪಾತ್ರದ ಕುತೂಹಲ ಮೂಡಿದೆ. ಅದೇ ಗೆಟಪ್ ನಲ್ಲೇ ಅವರು ದಾಂಡೇಲಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಮತ್ತು ಆ ಕಾಸ್ಟ್ಯೂಮ್ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಶುಭಾ ಪೂಂಜಾ ಫ್ಯಾಮಿಲಿ ಜೊತೆ ಮಂಜು ಪಾವಗಡ ಟೆಂಪಲ್ ರನ್

    ರವಿಚಂದ್ರನ್ ಜೊತೆ ಈ ಸಿನಿಮಾದಲ್ಲಿ ಅಪೂರ್ವ (Apoorva) ನಾಯಕಿಯಾಗಿ ನಟಿಸುತ್ತಿದ್ದು, ಕ್ರೇಜಿಸ್ಟಾರ್ ಜೊತೆ ಅಪೂರ್ವ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಮೂರೇ ಮೂರು ಪಾತ್ರಗಳಿದ್ದು, ಈ ಜೋಡಿಯ ಜೊತೆ ಪುಟ್ಟ ಮಗುವೊಂದು ನಟಿಸುತ್ತಿದೆ. ಅಲ್ಲದೇ, ಶ್ವಾನ ಮತ್ತು ಹುಲಿ ಕೂಡ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಸಿನಿಮಾಗಳ ವಿಶೇಷಗಳಲ್ಲಿ ಒಂದು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರವಿಚಂದ್ರನ್ ಸಿನಿಮಾದ ಹೆಸರು ಮತ್ತು ನಾಯಕಿ ಬದಲು

    ರವಿಚಂದ್ರನ್ ಸಿನಿಮಾದ ಹೆಸರು ಮತ್ತು ನಾಯಕಿ ಬದಲು

    ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹೊಸ ಸಿನಿಮಾ ಮೊನ್ನೆಯಷ್ಟೇ ಮುಹೂರ್ತವಾಗಿತ್ತು. ಈ ಸಿನಿಮಾಗೆ ಗೌರಿ ಎಂದು ಹೆಸರಿಡಲಾಗಿತ್ತು. ಅಲ್ಲದೇ, ಈ ಸಿನಿಮಾದ ಮೂಲಕ ರೂಪದರ್ಶಿ, ನಟಿ ಬರ್ಖಾ ಸೇನ್ ಗುಪ್ತಾ ಸ್ಯಾಂಡಲ್ ವುಡ್ ಗೆ ಪ್ರವೇಶ ಕೂಡ ಮಾಡಿದ್ದರು. ಇದೀಗ ಈ ಸಿನಿಮಾದಲ್ಲಿ ಭಾರೀ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ನಿರ್ದೇಶಕ ಅನೀಸ್. ಚಿತ್ರಕ್ಕೆ ಹೆಸರು ಹಾಗೂ ನಾಯಕಿಯನ್ನೇ ಬದಲಾಯಿಸಿದ್ದಾರೆ.

    ಈ ಬದಲಾವಣೆಗೆ ಕಾರಣವನ್ನು ಅವರು ತಿಳಿಸದೇ ಇದ್ದರೂ, ಗೌರಿ ಅಂತಿಟ್ಟಿದ್ದ ಹೆಸರನ್ನು ಗೌರಿ ಶಂಕರ ಎಂದು ಬದಲಾಯಿಸಿದ್ದಾರೆ. ಬರ್ಖಾ ಸೇನ್ ಗುಪ್ತಾ ಜಾಗಕ್ಕೆ ಕನ್ನಡದ್ದೇ ಹುಡುಗಿ ಅಪೂರ್ವ ಅವರನ್ನು ಕರೆತಂದಿದ್ದಾರೆ. ಈ ಹಿಂದೆ ರವಿಚಂದ್ರನ್ ನಟನೆಯ ಅಪೂರ್ವ ಸಿನಿಮಾಗೆ ನಾಯಕಿಯಾಗಿದ್ದ ಈ ಹುಡುಗಿಯೇ ಮತ್ತೊಮ್ಮೆ ರವಿಚಂದ್ರನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಪೂರ್ವ ಅಂತ ಈ ನಟಿಗೆ ಹೆಸರಿಟ್ಟಿದ್ದೇ ರವಿಚಂದ್ರನ್ ಎನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್

    ಅಪೂರ್ವ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾಗಿದ್ದ ಈ ನಟಿ ಶರಣ್ ಜೊತೆ ವಿಕ್ಟರಿ 2 ಸಿನಿಮಾದಲ್ಲೂ ನಟಿಸಿದ್ದರು. ಈಗ ಮತ್ತೆ ರವಿಚಂದ್ರನ್ ಅವರಿಗೆ ಜೊತೆಯಾಗಿದ್ದಾರೆ. ಇದೇ ಜನವರಿ 22 ರಿಂದ ನಡೆಯಲಿರುವ ಚಿತ್ರೀಕರಣದಲ್ಲಿ ನಟಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜ.22 ರಂದು ದಾಂಡೇಲಿಯಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ರವಿಚಂದ್ರನ್, ಅಪೂರ್ವ ಜೊತೆ ಕ್ಯಾಡಬೊಮ್ ಹೇಡರ್ ಹೆಸರಿನ ನಾಯಿ ಕೂಡ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಅನ್ನೋದು ಒಂದು ಜವಾಬ್ದಾರಿ: ಎರಡನೇ ಮದುವೆ ಬಗ್ಗೆ ನಟಿ ಅಪೂರ್ವ ಮಾತು

    ಮದುವೆ ಅನ್ನೋದು ಒಂದು ಜವಾಬ್ದಾರಿ: ಎರಡನೇ ಮದುವೆ ಬಗ್ಗೆ ನಟಿ ಅಪೂರ್ವ ಮಾತು

    ಕಿರುತೆರೆ `ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಮನೆ ಮಾತಾಗಿರುವ ಪುಷ್ಪ ಪಾತ್ರಧಾರಿ ಅಪೂರ್ವ ಅವರು ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ವೇಳೆ ಅಮ್ಮ ಮತ್ತು ಮಗಳ ರೌಂಡ್ ನಡೆಯುತ್ತಿದ್ದು, ಅಪೂರ್ವ (Apoorva) ಅವರಿಗೆ ಮಗಳ ಬಿಗ್ ಸರ್ಪ್ರೈಸ್ (Surprise) ಕೊಟ್ಟಿದ್ದಾರೆ. ಮಗಳ ಗಿಫ್ಟ್ ನೋಡಿ ಅಪೂರ್ವ ಖುಷಿಯಾಗಿದ್ದಾರೆ.

    ಸೂಪರ್ ಕ್ವೀನ್ಸ್ (Super Queens) ಮೂಲಕ ತಮ್ಮ ಜೀವನದ ತೆರೆಹಿಂದಿನ ಕಥೆಯನ್ನ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ. ಹಾಗೆಯೇ ನಟಿ ಅಪೂರ್ವ ಅವರ ಜೀವನದ ಕಥೆ ಪ್ರೇಕ್ಷಕರನ್ನು ಕೂಡ ಭಾವುಕರನ್ನಾಗಿಸಿದೆ. ಇನ್ನೂ ಅಮ್ಮ -ಮಗಳ ರೌಂಡ್‌ನಲ್ಲಿ ಮಗಳು, ಕೆಲವು ಪ್ರಶ್ನೆಗಳನ್ನ ತಾಯಿ ಅಪೂರ್ವಗೆ ಕೇಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ನನ್ನ ಮೊದಲ ಪ್ರಶ್ನೆ ಇದು. ಯಾವತ್ತಾದ್ದರೂ ಅನಿಸಿದ್ಯಾ ನನ್ನ ಮಗಳು ಇಲ್ಲದಿದ್ದರೆ ನಾನು ಖುಷಿಯಾಗಿರುತ್ತಿದ್ದೆ ಅಥವಾ ಗಂಡು ಮಗು ಆಗಿದ್ದರೆ ಇನ್ನೂ ಖುಷಿಯಾಗಿರುತ್ತಿದ್ದೆ ಕಷ್ಟ ಪಡುತ್ತಿರಲಿಲ್ಲ ಅನಿಸಿದ್ಯಾ ಎಮದು. ಆಗ 100ರಲ್ಲಿ 1% ನನಗೆ ಈ ರೀತಿ ಅನಿಸಿಲ್ಲ. ಎಷ್ಟೋ ದೇವರಲ್ಲಿ ಹರಿಕೆ ಕಟ್ಟಿಕೊಂಡು ಮೊದಲು ಹೆಣ್ಣು ಮಗು ಆಗಬೇಕು ಎಂದು ಹುಟ್ಟಿರುವ ಮಗು ನೀನು ಎಂದು ಅಪೂರ್ವ ಉತ್ತರಿಸಿದ್ದಾರೆ.

    ಮತ್ತೆ ಮದುವೆ ಆಗಬೇಕು ಎಂದು ಯೋಚನೆ ಕೂಡ ಮಾಡಿಲ್ಲ ಯಾಕೆ ಎಂದು ಅಮ್ಮನಿಗೆ ಕೇಳಿದ್ದಾರೆ. ಮದುವೆ ಅಂದ್ರೆ ಏನು ಅದರ ಮಹತ್ವ ಎಲ್ಲ ಅರ್ಥ ಆಗೋಕು ಮುಂಚೆ ಮದುವೆ ಆಗಿದ್ದು ಎಷ್ಟೊಂದು ಸಮಸ್ಯೆ ನೋಡ್ಬಿಟ್ಟು ಮದುವೆ ಆಗಬೇಕು ಅನಿಸಲಿಲ್ಲ. ಕೈಯಲ್ಲಿ ಒಂದು ಹೆಣ್ಣು ಮಗುವಿಗೆ ಬರುವ ಜನರ ಮೆಂಟಾಲಿಟಿ ಹೇಗೆ ಇರುತ್ತೆ. ಏನೇ ಆಗಲಿ ಫಸ್ಟ್ ತಪ್ಪು ಎಂದು ಹೇಳುವುದು ಹೆಣ್ಣು ಮಕ್ಕಳ ಮೇಲೆ ಹೀಗಾಗಿ ಯೋಚನೆ ಮಾಡಿಲ್ಲ ಮಾಡುವ ಯೋಚನೆ ಮಾಡಲ್ಲ. ಮದುವೆ ಅನ್ನೋದು ಒಂದು ಜವಾಬ್ದಾರಿ ರೀತಿ ಬಂದವರನ್ನು ನಾವು ಚೆನ್ನಾಗಿ ನೋಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ನಟಿ ಅಪೂರ್ವ ಮಾತನಾಡಿದ್ದಾರೆ.

    ಇನ್ನೂ ಈ ವೇಳೆ ಅಮ್ಮನಿಗೆ ಚಿನ್ನದ ಮಾಂಗಲ್ಯ ಗಿಫ್ಟ್ ಮಾಡಿದ್ದಾರೆ. ತನಗೆ ಕಾರು ಖರಿದೀಸಲು ಎಂದು ಇಟ್ಟ ಹಣದಲ್ಲಿ ತಾಯಿಗೆ ಚಿನ್ನದ ಮಾಂಗಲ್ಯ ಕಾಣಿಕೆಯಾಗಿ ನೀಡಿದ್ದಾರೆ. ಮಗಳ ಪ್ರೀತಿಗೆ ನಟಿ ಅಪೂರ್ವ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಂದನ್ ಶೆಟ್ಟಿ ನಟನೆಯ ‘ಸೂತ್ರಧಾರಿ’ ಸಿನಿಮಾಗೆ ಸಿಕ್ತು ಚಾಲನೆ

    ಚಂದನ್ ಶೆಟ್ಟಿ ನಟನೆಯ ‘ಸೂತ್ರಧಾರಿ’ ಸಿನಿಮಾಗೆ ಸಿಕ್ತು ಚಾಲನೆ

    ಗಾಯಕನಾಗಿ, ಗೀತರಚನೆಕಾರನಾಗಿ,‌ ಸಂಗೀತ ನಿರ್ದೇಶಕನಾಗಿ ಜನಪ್ರಿಯತೆ ಪಡೆದಿರುವ ಚಂದನ್ ಶೆಟ್ಟಿ,  ಈಗ ನಾಯಕನಾಗೂ‌ ಚಿರಪರಿಚಿತ. ಪ್ರಸ್ತುತ ಚಂದನ್ ಶೆಟ್ಟಿ (Chandan Shetty) “ಸೂತ್ರಧಾರಿ” ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಇದು ಅವರು ನಾಯಕನಾಗಿ ನಟಿಸುತ್ತಿರುವ ಎರಡನೇ ಚಿತ್ರ. “ಸೂತ್ರಧಾರಿ” ಚಿತ್ರದ ಚಿತ್ರೀಕರಣ ಅಕ್ಟೋಬರ್ 10 ರಿಂದ ಆರಂಭವಾಗಲಿದೆ.‌ ಮೈ ಮೂವೀ ಬಜಾರ್ ನ ನವರಸನ್ ಈ ಚಿತ್ರ ನಿರ್ಮಿಸುತ್ತಿದ್ದು, ಕ್ರಿಯೇಟಿವ್ ಹೆಡ್ ಆಗೂ ಕಾರ್ಯ ನಿರ್ವಹಿಸಲಿದ್ದಾರೆ. ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರಾದ ಕೆ.ಸಿ.ಎನ್ ಕುಮಾರ್, ಗೋವಿಂದರಾಜು, ಸಂಜಯ್ ಗೌಡ,  ಗಿರೀಶ್ ಹಾಗೂ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಮುಂತಾದವರು ಸಮಾರಂಭಕ್ಕೆ ಆಗಮಿಸಿ “ಸೂತ್ರಧಾರಿ”ಗೆ (Sutradhari) ಶುಭ ಕೋರಿದರು. ಇದು ನನ್ನ ನಿರ್ಮಾಣದ ಐದನೇ ಚಿತ್ರ. ಈವರೆಗೂ ನಮ್ಮ ಸಂಸ್ಥೆಯ ಮೂಲಕ 180ಕ್ಕೂ ಹೆಚ್ಚು ಚಿತ್ರಗಳ ಇವೆಂಟ್ ನಡೆಸಿಕೊಟ್ಟಿದ್ದೇನೆ. ನಿರ್ದೇಶನದೊಂದಿಗೆ ವಿತರಕನಾಗೂ ಕಾರ್ಯ ನಿರ್ವಹಿಸಿದ್ದೇನೆ. ಪ್ರಸ್ತುತ “ಸೂತ್ರಧಾರಿ” ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಮ್ಮ‌ ತಂಡದವರೇ ಆದ ಕಿರಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಂದನ್ ಶೆಟ್ಟಿ ನಾಯಕನಾಗಿ, ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ. ‌ಇದೇ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ನವರಸನ್.

    ನಾಯಕನಾಗಿ ನಾನು ಅಭಿನಯಿಸುತ್ತಿರುವ ಮೊದಲ ಚಿತ್ರ “ಎಲ್ರ ಕಾಲೆಳಿಯುತ್ತೆ ಕಾಲ”. ಆ ಚಿತ್ರ ರೆಟ್ರೊ ಶೈಲಿಯಲ್ಲಿ ಇರುತ್ತದೆ.  “ಸೂತ್ರಧಾರಿ” ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ಮರ್ಡರ್ ಮಿಸ್ಟರಿ ಕಥೆ‌ ಅಂತ ಹೇಳಬಹುದು. ಈ ಚಿತ್ರಕ್ಕಾಗಿ ನಾನು ಹನ್ನೆರಡು ಕೆಜಿ ತೂಕ ಇಳಿಸಿಕೊಂಡಿದ್ದೀನಿ. ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ‌ಎಲ್ಲರೂ ಗುನಗುವಂತಹ ಹಾಡುಗಳನ್ನು ಕೊಡುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದರು. ಇದನ್ನೂ ಓದಿ:ಹಾಲಿವುಡ್‌ಗೆ ಯಶ್‌ ಎಂಟ್ರಿ? ವಿಶ್ವದ ಟಾಪ್‌ ರೇಸರ್‌ ಲೇವಿಸ್‌ ಹ್ಯಾಮಿಲ್ಟನ್‌ ಭೇಟಿ

    “ಸೂತ್ರಧಾರಿ” ಎಲ್ಲರಿಗೂ ಮೆಚ್ಚುಗೆಯಾಗುವಂತಹ ಕಥಾಹಂದರ ಹೊಂದಿದೆ. ನಾನು ನವರಸನ್ (Navarasan) ಅವರ ಬಳಿ ಸಹ ನಿರ್ದೇಶಕನಾಗಿ  ಹಾಗೂ ಪಿ.ಕೆ.ಹೆಚ್ ದಾಸ್ ಅವರ ಹತ್ತಿರ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ‌ ಮಾಡಿದ್ದೇನೆ.‌ ನಿರ್ದೇಶಕನಾಗಿ ಇದು ಮೊದಲ ಚಿತ್ರ ಎಂದು ಹೇಳಿದ್ದ ನಿರ್ದೇಶಕ ಕಿರಣ್ ಕುಮಾರ್, ಅವಕಾಶ ಕೊಟ್ಟ ನವರಸನ್ ಅವರಿಗೆ ಧನ್ಯವಾದ ತಿಳಿಸಿದರು.

    ತಮ್ಮ ಪಾತ್ರದ ಬಗ್ಗೆ ‌ನಾಯಕಿ ಅಪೂರ್ವ (Apoorva), ಹಿರಿಯ ನಟ ತಬಲ ನಾಣಿ ಹಾಗೂ ಗಣೇಶ್ ನಾರಾಯಣ್ ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಗೀತರಚನೆ ಮಾಡಿ, ಸಂಭಾಷಣೆ ಬರೆದಿರುವ ಕಿನಾಲ್ ರಾಜ್ ಹಾಗೂ ಸಂಕಲನಕಾರ ಸತೀಶ್ ಚಂದ್ರಯ್ಯ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ರವಿಚಂದ್ರನ್ ಸಿನಿಮಾ ಹಿರೋಯಿನ್ ಈಗ ನಿರ್ದೇಶಕಿ

    ರವಿಚಂದ್ರನ್ ಸಿನಿಮಾ ಹಿರೋಯಿನ್ ಈಗ ನಿರ್ದೇಶಕಿ

    ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಅಪೂರ್ವ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ನಟಿ ಅಪೂರ್ವ ಇದೀಗ ನಿರ್ದೇಶಕಿಯಾಗಿ ಹೊಸ ಕೆಲಸ ಶುರು ಮಾಡಿದ್ದಾರೆ. ವಿಕ್ಟರಿ, ಕೃಷ್ಣ ಟಾಕೀಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಅಪೂರ್ವ ನಿರ್ದೇಶಕಿಯಾಗಬೇಕೆಂದು ಸಿನಿಮಾ ರಂಗಕ್ಕೆ ಬಂದವರಂತೆ. ಆದರೆ, ಆಗಿದ್ದು ನಾಯಕಿ. ಇದನ್ನೂ ಓದಿ : ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2

    ಅಪೂರ್ವ ಸಿನಿಮಾ ಬಂದಾಗ ರವಿಚಂದ್ರನ್ ವಯಸ್ಸಿಗೂ ಈ ಹುಡುಗಿಯ ವಯಸ್ಸಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಸಿನಿಮಾದ ಕಥೆಯೇ ಆ ರೀತಿ ಇದ್ದ ಕಾರಣಕ್ಕಾಗಿ ಅಪೂರ್ವ ಕೂಡ ಹೈಲೈಟ್ ಆದರು. ಅಲ್ಲಿಂದ ಹಲವು ಚಿತ್ರಗಳು ಅವರನ್ನು ಅರಸಿಕೊಂಡು ಬಂದವು. ಸದ್ಯ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದರೂ, ನಿರ್ದೇಶನದ ಮೇಲಿನ ಮೋಹದಿಂದಾಗಿ ಮೊದಲ ಬಾರಿಗೆ ಮಕ್ಕಳ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಆ ಚಿತ್ರಕ್ಕೆ ಓ ನನ್ನ ಚೇತನ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    “ಇದೊಂದು ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿಕೊಂಡು ಐಡ್ಯಾ. ಲಾಕ್ ಡೌನ್ ಆದಾಗ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆದರು. ಮೊಬೈಲ್ ಗೀಳು ಅವರ ಬದುಕನ್ನು ಹೇಗೆಲ್ಲ ಹಾಳು ಮಾಡಿತು ಎನ್ನುವ ಕುರಿತಾದ ಸಿನಿಮಾವಿದು. ಮೊದಲ ಚಿತ್ರದಲ್ಲಿಯೇ ಅಪೂರ್ವ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ” ಅಂತಾರೆ ಚಿತ್ರಕಥೆ ಕಥೆ ಬರೆದಿರುವ ನಿರ್ದೇಶಕ ಹರಿಸಂತು. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಅಪೂರ್ವ ಅವರ ಚೊಚ್ಚಲು ಸಿನಿಮಾಗೆ ಅಂತಾರಾಷ್ಟ್ರೀಯ ಮನ್ನಣೆ ಕೂಡ ದೊರೆತಿದೆ. ಈಗ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೂ ಸಿನಿಮಾ ಆಯ್ಕೆಯಾಗಿದೆ. ಗುರು ಪ್ರಶಾಂತ್ ರೈ ಸಿನಿಮಾಟೋಗ್ರಫಿಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಪ್ರದೀಪ್ ವರ್ಮಾ ಸಂಗೀತ ನೀಡಿದ್ದಾರೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಮಾಸ್ಟರ್ ಪ್ರತೀಕ್, ಬೇಬಿ ಡಿಂಪನಾ, ಮಾಸ್ಟರ್ ಶೌರ್ಯ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.

  • ಎರಡನೇ ವಿಕ್ಟರಿಯಲ್ಲಿ ಡಬಲ್ ಫನ್ ಫಿಕ್ಸ್

    ಎರಡನೇ ವಿಕ್ಟರಿಯಲ್ಲಿ ಡಬಲ್ ಫನ್ ಫಿಕ್ಸ್

    ಬೆಂಗಳೂರು: ಸ್ಯಾಂಡಲ್‍ವುಡ್ ಅಧ್ಯಕ್ಷ ಶರಣ್ ಅಭಿನಯದ ವಿಕ್ಟರಿ-2 ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎರಡು ಲುಕ್ ನಲ್ಲಿ ಕಾಣಿಸಿಕೊಂಡಿರುವ ಶರಣ್ ಪ್ರೇಕ್ಷಕರಲ್ಲಿ ತೀವ್ರ ಕುತೂಹಲವನ್ನು ಹುಟ್ಟು ಹಾಕಿದ್ದಾರೆ.

    ಮೊದಲ ವಿಕ್ಟರಿಯಲ್ಲಿ ಜನರನ್ನು ಹಾಸ್ಯದ ಕಚಗುಳಿಯಲ್ಲಿ ತೇಲಿಸಿದ್ದ ಶರಣ್ ಮತ್ತೊಮ್ಮೆ ಅದೇ ಶೀರ್ಷಿಕೆಯಲ್ಲಿ ರಂಜಿಸಲು ಬರಲಿದ್ದಾರೆ. ಹಾಸ್ಯಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಪ್ರೇಕ್ಷಕರಿಗೆ ಡಬಲ್ ಮನರಂಜನೆಯ ಭರವಸೆಯನ್ನು ಮೂಡಿಸಿದೆ.

    ಫಸ್ಟ್ ಲುಕ್‍ನಲ್ಲಿ ಶರಣ್ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಂದರಲ್ಲಿ ವೈಟ್ ಆ್ಯಂಡ್ ವೈಟ್ ಶರ್ಟ್, ಪಂಚೆ ತೊಟ್ಟು ಮಿಂಚಿದರೆ, ಇನ್ನೊಂದರಲ್ಲಿ ಮಾಸ್ ಲುಕ್‍ನಲ್ಲಿ ಕಂಡಿದ್ದಾರೆ. ಇದನ್ನು ಓದಿ: ಈ ಸಲವಾದರೂ ಸಿಗಲಿದೆಯಾ ಅಪೂರ್ವ ವಿಕ್ಟರಿ?

    ಶರಣ್‍ಗೆ ನಾಯಕಿಯಾಗಿ ಅಪೂರ್ವ, ಅಸ್ಮಿತಾ ಸೂದ್ ಜೊತೆಯಾಗಿದ್ದಾರೆ. ರವಿಶಂಕರ್, ಸಾಧುಕೋಕಿಲಾ, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ವಿಕ್ಟರಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ತರುಣ್ ಸುದೀರ್ ಕಥೆ ಬರೆದಿದ್ದು, ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

  • ಈ ಸಲವಾದರೂ ಸಿಗಲಿದೆಯಾ ಅಪೂರ್ವ ವಿಕ್ಟರಿ?

    ಈ ಸಲವಾದರೂ ಸಿಗಲಿದೆಯಾ ಅಪೂರ್ವ ವಿಕ್ಟರಿ?

    – ಮತ್ತೆ ಬಂದಳು ಮೈಸೂರು ಹುಡುಗಿ!

    ಬೆಂಗಳೂರು: ಈ ಹಿಂದೆ ಗೆಲುವು ಕಂಡಿದ್ದ ವಿಕ್ಟರಿ ಹೆಸರಿನಲ್ಲೇ ಶರಣ್ ನಟಿಸುತ್ತಿರೋ ಮತ್ತೊಂದು ಚಿತ್ರ ವಿಕ್ಟರಿ 2. ಮೊದಲ ಚಿತ್ರದಂಥಾದ್ದೇ ಗೆಲುವೊಂದನ್ನು ಮರಳಿ ಪಡೆಯ ಬೇಕೆಂಬ ಹಂಬಲದಿಂದ ಚಿತ್ರತಂಡ ಶ್ರಮ ವಹಿಸಿ ಚಿತ್ರೀಕರಣ ಮುಗಿಸಿಕೊಂಡಿದೆ. ಅಂದಹಾಗೆ ಇಂಥಾದ್ದೇ ಒಂದು ಗೆಲುವಿನ ತುಡಿತದೊಂದಿಗೆ ಅಪೂರ್ವ ಈ ಚಿತ್ರದ ನಾಯಕಿಯಾಗಿ ರೀ ಎಂಟ್ರಿ ಕೊಟ್ಟಿದ್ದಾಳೆ.

    ವರ್ಷಾಂತರಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ ನಿರ್ದೇಶನ ಮಾಡಿದ್ದ ಅಪೂರ್ವ ಚಿತ್ರ ತೆರೆ ಕಂಡಿತ್ತಲ್ಲಾ? ಆ ಚಿತ್ರದ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಪರಿಚಯವಾಗಿದ್ದವಳು ಈ ಅಪೂರ್ವ. ಈ ಚಿತ್ರದ ಬಗ್ಗೆ ರವಿಚಂದ್ರನ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ತಾಂತ್ರಿಕವಾಗಿಯೂ ಹೊಸ ಪ್ರಯೋಗಗಳ ಮೂಲಕ ಈ ಚಿತ್ರವನ್ನು ರೂಪಿಸಿದ್ದರು. ಆದರೂ ಕೂಡಾ ಅದೇಕೋ ನಿರೀಕ್ಷೆ ಮಾಡಿದ್ದಂಥಾ ಗೆಲುವು ಸಿಕ್ಕಲೇ ಇಲ್ಲ!

    ಒಂದು ವೇಳೆ ಅಪೂರ್ವ ಚಿತ್ರವೇನಾದರೂ ಗೆದ್ದಿದ್ದರೆ ನಾಯಕಿ ಅಪೂರ್ವಾಳ ಲಕ್ಕೂ ಬದಲಾಗುತ್ತಿತ್ತು. ಆದರೆ ಅವಕಾಶಗಳಿಲ್ಲದೆ ಸೊರಗಿದ್ದ ಮೈಸೂರು ಹುಡುಗಿ ಅಪೂರ್ವಾಗೆ ವಿಕ್ಟರಿ 2 ಚಿತ್ರದ ಮೂಲಕ ಎರಡನೇ ಅವಕಾಶ ಸಿಕ್ಕಿದೆ. ಮತ್ತೆ ರವಿಚಂದ್ರನ್ ಅವರ ಜೊತೆಗೇ ನಟಿಸೋ ಅವಕಾಶವೂ ಸಿಕ್ಕಿದೆ. ಅವರ ಮುಂದಿನ ಚಿತ್ರ ರಾಜೇಂದ್ರ ಪೊನ್ನಪ್ಪದಲ್ಲಿಯೂ ಈಕೆಯೇ ನಾಯಕಿ. ಅಂತೂ ವಿಕ್ಟರಿ 2 ಮೂಲಕ ಅಪೂರ್ವಾಗೂ ಒಂದು ಗೆಲುವು ಸಿಗೋ ನಿರೀಕ್ಷೆಗಳಿವೆ!