Tag: apology letter

  • ರಾಖಿ ಕಟ್ಟಿಕೊಂಡಿದ್ದ ಮಕ್ಕಳಿಗೆ ಕ್ಷಮಾಪಣೆ ಪತ್ರ ಕೇಳಿದ ಮುಖ್ಯಶಿಕ್ಷಕಿ

    ರಾಖಿ ಕಟ್ಟಿಕೊಂಡಿದ್ದ ಮಕ್ಕಳಿಗೆ ಕ್ಷಮಾಪಣೆ ಪತ್ರ ಕೇಳಿದ ಮುಖ್ಯಶಿಕ್ಷಕಿ

    – ಮುಖ್ಯಶಿಕ್ಷಕಿ ವರ್ತನೆಗೆ ಪೋಷಕರು, ವಿಹೆಚ್‌ಪಿ ಮುಖಂಡರ ಆಕ್ರೋಶ

    ಶಿವಮೊಗ್ಗ: ಬುಧವಾರ ನಾಡಿನೆಲ್ಲೆಡೆ ರಾಖಿ (Rakhi) ಹಬ್ಬದ ಸಂಭ್ರಮ. ಅಣ್ಣ ತಂಗಿಯರ ನಡುವೆ ಸಹೋದರ ಭ್ರಾತೃತ್ವ ಗಟ್ಟಿಯಾಗುವ ಸಲುವಾಗಿ ಈ ರಾಖಿ ಹಬ್ಬ ಆಚರಿಸುತ್ತಾರೆ. ಆದರೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರದ (Sagara) ಖಾಸಗಿ ಶಾಲೆಯಲ್ಲಿ ರಾಖಿ ಕಟ್ಟಿಕೊಂಡಿದ್ದೇ ರಾದ್ಧಾಂತಕ್ಕೆ ಕಾರಣವಾಗಿದೆ.

    ಸಾಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ಮಕ್ಕಳು ಬುಧವಾರ ರಾಖಿ ಕಟ್ಟಿಕೊಂಡು ತರಗತಿಗೆ ಬಂದಿದ್ದರು. ರಾಖಿ ಕಟ್ಟಿಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕಿ ಕೋಲನ್ ದೇವಿ ಥೆರೆಸಾ ಅವರು ತರಗತಿಯಿಂದ ಹೊರಗೆ ನಿಲ್ಲಿಸಿ, ಕ್ಷಮಾಪಣೆ ಪತ್ರ (Apology Letter) ಬರೆದುಕೊಡುವಂತೆ ಕೇಳಿದ್ದಾರೆ. ಮುಖ್ಯ ಶಿಕ್ಷಕಿಯ ಈ ವರ್ತನೆ ಪೋಷಕರು ಹಾಗು ವಿಶ್ವ ಹಿಂದು ಪರಿಷತ್ ಮುಖಂಡರನ್ನು ಕೆರಳಿಸಿದೆ. ಇದನ್ನೂ ಓದಿ: ಕಿಡ್ನಿ ವೈಫಲ್ಯ – ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ

    ಶಾಲೆಗೆ ತೆರಳಿದ ಪೋಷಕರು ಹಾಗು ವಿಹೆಚ್‌ಪಿ ಕಾರ್ಯಕರ್ತರು ಮುಖ್ಯ ಶಿಕ್ಷಕಿ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಾಗರ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಲಿನಿಂದ ಹೊಡೆದು ಯುವಕನ ಹತ್ಯೆಗೈದ ದುಷ್ಕರ್ಮಿಗಳು – ಸಿಸಿ ಟಿವಿಯಲ್ಲಿ ಕೃತ್ಯ ಸೆರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಳ್ಳತನ ಮಾಡಿ ಕ್ಷಮಿಸಿ ಎಂದು ಪತ್ರ ಬರೆದ ಕಳ್ಳ

    ಕಳ್ಳತನ ಮಾಡಿ ಕ್ಷಮಿಸಿ ಎಂದು ಪತ್ರ ಬರೆದ ಕಳ್ಳ

    ಭೋಪಾಲ್: ಪೊಲೀಸ್ ಅಧಿಕಾರಿಯ ಮನೆಯಲ್ಲಿ ಬೆಲೆಬಾಳುವ ವಸ್ತು ಕಳ್ಳತನ ಮಾಡಿದ ಕಳ್ಳ ಕ್ಷಮೆ ಪತ್ರ ಬರೆದಿಟ್ಟಿರುವ ಘಟನೆ ಮಧ್ಯಪ್ರದೇಶದ ಭಿಂದ್ ನಗರದಲ್ಲಿ ನಡೆದಿದೆ. ಇದನ್ನೂ ಓದಿ:   15 ದಿನಗಳ ನಂತರ ಮತ್ತೆ ಲಾಕ್‍ಡೌನ್ ಮಾಡಬೇಕಾಗುತ್ತೆ,ಜನರೇ ಎಚ್ಚರ: ಬಿಎಸ್‍ವೈ

    ಕೊತ್ವಾಲ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ (ಎಎಸ್‍ಐ) ಕಮಲೇಶ್ ಕಟಾರೆ, ಛತ್ತೀಸ್‍ಗಢದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬ ಭಿಂಡ್ ನಗರದಲ್ಲಿ ವಾಸಿಸುತ್ತಿದೆ. ಪೊಲೀಸರ ಪತ್ನಿ ಮತ್ತು ಅವರ ಮಕ್ಕಳು ಜೂನ್ 30 ರಂದು ಸಂಬಂಧಿಕರ ಮನೆಗೆ ತೆರಳಿದ್ದರು.

    ಮನೆಗೆ ಮರಳಿ ಬಂದಾಗ ಅವರ ಮನೆಯ ಬೀಗ ಮುರಿದು ಬಿದ್ದಿತ್ತು. ವಸ್ತುಗಳು ಎಲ್ಲೆಡೆ ಹರಡಿದ್ದವು. ಬಳಿಕ ಮನೆಯೊಳಗೆ ಸಿಕ್ಕ ಪತ್ರದಲ್ಲಿ ಕಳ್ಳ, ಕ್ಷಮಿಸಿ ಫ್ರೆಂಡ್, ಇದು ಅನಿವಾರ್ಯವಾಗಿತ್ತು. ನಾನು ಇದನ್ನು ಮಾಡದಿದ್ದರೆ, ನನ್ನ ಸ್ನೇಹಿತನು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದನು. ಚಿಂತಿಸಬೇಡಿ, ನಾನು ಹಣವನ್ನು ಪಡೆದ ತಕ್ಷಣ ಕದ್ದ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಕಳ್ಳ ಬರೆದಿರುವ ಪತ್ರ ಸಿಕ್ಕಿದೆ. ಇದನ್ನೂ ಓದಿ:  ಪೊಲೀಸರಿಂದ ಪರಿಸರ ಪ್ರೇಮ – ಬೀಟ್‍ಗೊಂದು ಮರ ಅಭಿಯಾನ

    ಪೊಲೀಸರ ಪ್ರಕಾರ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಮತ್ತು ಕುಟುಂಬದ ಕೆಲವು ಪರಿಚಯಸ್ಥರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.