Tag: Apologises

  • ಕತ್ತೆ ಅಂತ ಕರೆದು ವಿವಾದ – ಶಶಿ ತರೂರ್ ಕ್ಷಮೆಯಾಚಿಸಿದ ಕಾಂಗ್ರೆಸ್ ಮುಖ್ಯಸ್ಥ

    ಕತ್ತೆ ಅಂತ ಕರೆದು ವಿವಾದ – ಶಶಿ ತರೂರ್ ಕ್ಷಮೆಯಾಚಿಸಿದ ಕಾಂಗ್ರೆಸ್ ಮುಖ್ಯಸ್ಥ

    ಹೈದರಾಬಾದ್: ಶಶಿ ತರೂರ್ ಅವರನ್ನು ಕತ್ತೆ ಎಂದು ಕರೆದು ವಿವಾದಕ್ಕೀಡಾದ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಅವರು ಕ್ಷಮೆ ಕೇಳಿದ್ದಾರೆ.

    ನಾನು ಈ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ ಮತ್ತು ನನ್ನ ಹಿರಿಯ ಸಹೋದ್ಯೋಗಿಯನ್ನು ಅತ್ಯುನ್ನತ ಗೌರವದಲ್ಲಿರಿಸುವೆ ಎಂದು ಪುನರುಚ್ಚರಿಸುತ್ತೇನೆ ಎಂದು ತಿಳಿಸಲು ಶಶಿ ತರೂರ್ ಅವರೊಂದಿಗೆ ಮಾತನಾಡಿದ್ದೇನೆ . ನನ್ನ ಮಾತುಗಳಿಂದ ಅವರಿಗೆ ಉಂಟಾದ ನೋವಿಗೆ ನಾನು ವಿಷಾದಿಸುತ್ತೇನೆ. ನಾವು ಕಾಂಗ್ರೆಸ್ ಪಕ್ಷದ ಮೌಲ್ಯಗಳು ಮತ್ತು ನೀತಿಗಳಲ್ಲಿ ನಮ್ಮ ನಂಬಿಕೆಯನ್ನು ಇರಿಸಿದ್ದೇವೆ ಎಂದು ರೆಡ್ಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 1 ಸಾಲಿನಲ್ಲಿ ಪ್ರಧಾನಿಗೆ ವಿಶ್ ಮಾಡಿದ ರಾಹುಲ್ ಗಾಂಧಿ

    ರೆಡ್ಡಿಯವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ತರೂರ್, ಪಕ್ಷದ ನಾಯಕನಿಂದ ಕರೆಯನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದರು. ನಾನು ಅವರ ವಿಷಾದದ ಅಭಿವ್ಯಕ್ತಿಯನ್ನು ಸ್ವೀಕರಿಸುತ್ತೇನೆ ಮತ್ತು ಈ ದುರದೃಷ್ಟಕರ ಪ್ರಸಂಗವನ್ನು ಹಿಂದೆ ಸರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:  ಆರ್ಡರ್ ಮಾಡಿದ ಬರ್ಗರ್​ನಲ್ಲಿ ಸಿಕ್ತು ಕೈ ಬೆರಳು

    ರೆಡ್ಡಿ ತರೂರ್ ಅವರನ್ನು ಕತ್ತೆ ಎಂದು ಕರೆದರು ಮತ್ತು ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಹೇಳಿದ್ದರು. ರೆಡ್ಡಿ ಅವರ ಈ ಹೇಳಿಕೆ ವಿವಾದವನ್ನುಂಟುಮಾಡಿದ್ದು, ಹಿರಿಯ ನಾಯಕನ ಬಗ್ಗೆ ಈ ರೀತಿ ಮಾತನಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅವರು ಕ್ಷಮೆ ಕೇಳಿರುವುದು ಸುದ್ದಿಯಾಗಿದೆ.

  • ಸಂಸತ್‍ನಲ್ಲಿ ಚಾಕಲೇಟ್ ತಿಂದಿದ್ದಕ್ಕೆ ಕ್ಷಮೆ ಕೇಳಿದ ಕೆನಡಾ ಪ್ರಧಾನಿ

    ಸಂಸತ್‍ನಲ್ಲಿ ಚಾಕಲೇಟ್ ತಿಂದಿದ್ದಕ್ಕೆ ಕ್ಷಮೆ ಕೇಳಿದ ಕೆನಡಾ ಪ್ರಧಾನಿ

    ಒಟ್ಟಾವಾ: ಭ್ರಷ್ಟಾಚಾರ ಆರೋಪ ಮತದಾನದ ವೇಳೆ ಸಂಸತ್ ಭವನದಲ್ಲಿ ಚಾಕಲೇಟ್ ತಿಂದಿದ್ದಕ್ಕಾಗಿ ಕೆನಡಾ ಪ್ರಧಾನ ಮಂತ್ರಿ ಸಂಸತ್‍ನ ಕ್ಷಮೆ ಕೇಳಿದ್ದಾರೆ.

    ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಹೀಗಾಗಿ ಆರೋಪದ ಕುರಿತು ಸಂಸತ್‍ನಲ್ಲಿ ತಡರಾತ್ರಿಯವರೆಗೂ ಚರ್ಚೆ ಮಾಡಲಾಗಿತ್ತು. ಬಳಿಕ ಮತದಾನ ಪ್ರಕ್ರಿಯೆಗೆ ಅವಕಾಶ ನೀಡಲಾಗಿತ್ತು.

    ಮತದಾನ ಪ್ರಕ್ರಿಯೆ ವೇಳೆ ಜಸ್ಟಿನ್ ಟ್ರುಡೋ ಅವರು ಒಂದು ಚಾಕಲೇಟ್ ಬಾರ್ ತಿಂದಿದ್ದಾರೆ. ಇದನ್ನು ನೋಡಿದ ವಿರೋಧ ಪಕ್ಷದ ಸಂಸದ ಸ್ಕಾಟ್ ರೀಡ್ ಅವರು, ಪ್ರಧಾನಿ ಜಸ್ಟಿನ್ ಟ್ರುಡೋ ಅವರು ತಮ್ಮ ಕೆಸ್ಕ್‍ನಲ್ಲಿ ಚಾಕಲೇಟ್ ಬಚ್ಚಿಟ್ಟಿದ್ದಾರೆ ಎಂದು ಸಂಸತ್ ಗಮನಕ್ಕೆ ತಂದರು.

    ಪ್ರಧಾನಿ ಈಗಾಗಲೇ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಸಂಸತ್‍ನಲ್ಲಿ ಸಂಸದರು ಕೇವಲ ನೀರು ಮಾತ್ರ ಕುಡಿಯಬಹುದಾಗಿದೆ ಎನ್ನುವ ನಿಯಮ ಮೀರಿ ಚಾಕಲೇಟ್ ತಿಂದಿದ್ದಾರೆ ಎಂದು ಸಂಸದ ಸ್ಕಾಟ್ ರೀಡ್ ಆರೋಪಿಸಿದರು.

    ತಕ್ಷಣವೇ ಎಚ್ಚೆತ್ತುಕೊಂಡ ಜಸ್ಟಿನ್ ಟ್ರುಡೋ, ನಾನು ಚಾಕಲೇಟ್ ತಿಂದಿದಕ್ಕೆ ಸಂಸತ್‍ನ ಕ್ಷಮೆ ಯಾಚಿಸುತ್ತೇನೆ ಎಂದು ಎರಡು ಬಾರಿ ಪುನರುಚ್ಚರಿಸಿದರು. ಬಳಿಕ ಸ್ಪೀಕರ್ ಜೆಫ್ ರೇಗರ್, ಸಂಸತ್ ಭವನದ ಒಳಗೆ ಆಹಾರ ಪದಾರ್ಥ ತರಲು ಅವಕಾಶವಿಲ್ಲ ಎಂದು ಮತ್ತೆ ನಿಮಗೆ ತಿಳಿಸಬೇಕೇ ಎಂದು ಬೇಸರ ವ್ಯಕ್ತಪಡಿಸಿದರು.