Tag: apologies

  • ಮಾಧ್ಯಮ ಪ್ರತಿನಿಧಿಗಳಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಮಾಧ್ಯಮ ಪ್ರತಿನಿಧಿಗಳಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಅಂದುಕೊಂಡಂತೆ ಆಗಿದ್ದರೆ, ಇಂದಿನಿಂದ ಕಿಚ್ಚ ಸುದೀಪ್ ಚೆನ್ನೈ, ಕೊಚ್ಚಿ ಮತ್ತು ಹೈದರಾಬಾದ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿತ್ತು. ವಿಕ್ರಾಂತ್ ರೋಣ ಸಿನಿಮಾಗಾಗಿ ಹಮ್ಮಿಕೊಂಡಿದ್ದ ಈ ಮಾಧ್ಯಮ ಗೋಷ್ಠಿಯಲ್ಲಿ ಕಿಚ್ಚನ ಎದುರುಗೊಳ್ಳಲು ಮಾಧ್ಯಮ ಪ್ರತಿನಿಧಿಗಳು ಸಿದ್ಧರಾಗಿದ್ದಾರೆ. ಆದರೆ, ನಿನ್ನೆ ಸುದೀಪ್ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಹಾಗಾಗಿ ಪತ್ರಿಕಾ ಗೋಷ್ಠಿಗಳನ್ನು ರದ್ದು ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೆ ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ.

    ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿದ್ದಕ್ಕೆ ಕೊಚ್ಚಿ, ಚೆನ್ನೈ ಮತ್ತು ಹೈದರಾಬಾದ್ ಮಾಧ್ಯಮದ ಗೆಳೆಯರಿಗೆ ಕ್ಷಮೆ ಕೇಳುತ್ತೇನೆ. ಹುಷಾರಿಲ್ಲದ ಕಾರಣದಿಂದಾಗಿ ನನಗೆ ಪ್ರಯಾಣ ಮಾಡುವುದು  ಕಷ್ಟಸಾಧ್ಯ. ಹಾಗಾಗಿ ಬರಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ದಿನಾಂಕ ನಿಗದಿಪಡಿಸಿ, ನಿಮ್ಮೊಂದಿಗೆ ಮಾತನಾಡಲು ಉತ್ಸುಕನಾಗಿದ್ದೇನೆ. ಆದಷ್ಟು ಬೇಗ ಸಿಗೋಣ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಮಗನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಸಂಜನಾ ಗಲ್ರಾನಿ

    ನಿನ್ನೆ ಸುದೀಪ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಸುದ್ದಿ ಆಗಿತ್ತು. ತಕ್ಷಣವೇ ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಜಾಕ್ ಮಂಜು, ಈ ಕುರಿತು ಸ್ಪಷ್ಟನೆ ನೀಡಿ, ಅವರಿಗೆ ಜ್ವರ ಬಂದಿದೆ ಅಷ್ಟೇ ಕೋವಿಡ್ ಸೋಂಕು ತಗುಲಿಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದರು. ಬೇಗ ಚೇತರಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಇದೀಗ ಕಿಚ್ಚನ ಆರೋಗ್ಯ ಸುಧಾರಿಸುತ್ತಿದ್ದು, ಮತ್ತೆ ಅತೀ ಶೀಘ್ರದಲ್ಲೇ ಸಿನಿಮಾ ಪ್ರಚಾರದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್

    ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್

    ಬೆಂಗಳೂರು: ಸದನದಲ್ಲಿ ನೀಡಿರುವ ಹೇಳಿಕೆ ವಿರುದ್ಧ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜ್ಯದ ಜನರ ಕ್ಷಮೆಯಾಚಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸ್ಪೀಕರ್, ‘ಅತ್ಯಾಚಾರ’ ಸಂಬಂಧ ಅಧಿವೇಶನದಲ್ಲಿ ನೀಡಿರುವ ನನ್ನ ಹೇಳಿಕೆ ಕುರಿತು ಎಲ್ಲರಿಗೂ ನನ್ನ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಅತ್ಯಂತ ಹೇಯವಾದ ಅಪರಾಧವನ್ನು ಅಲಕ್ಷಿಸುವುದು ನನ್ನ ಉದ್ದೇವಾಗಿರಲಿಲ್ಲ. ಮಾತಿನ ಭರದಲ್ಲಿ ಆ ಮಾತು ಬಂದಿದೆ. ಇನ್ಮುಂದೆ ಮಾತನಾಡುವಾಗ ಎಚ್ಚರಿಕೆ ವಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಗುರುವಾರ ವಿಧಾನಸಭೆಯಲ್ಲಿ ಮಾತನಾಡುತ್ತಾ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಆಗದಿದ್ರೆ ಮಲಗಿ ಆನಂದಿಸಿ ಎಂದು ರಮೇಶ್ ಕುಮಾರ್ ಹೇಳಿಕೆ ನೀಡಿದ್ದರು. ರಮೇಶ್ ಕುಮಾರ್ ಈ ರೀತಿ ಹೇಳುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಮಂದಿ ಸದಸ್ಯರು ಇದನ್ನು ತಮಾಷೆಯಾಗಿ ತೆಗೆದುಕೊಂಡರು. ಇದನ್ನೂ ಓದಿ: ತುಂಬಾ ಜನರು ನನ್ನನ್ನ ಜೈಲಿಗೆ ಕಳುಹಿಸಲು ಸಿದ್ಧರಿದ್ದಾರೆ: ರಮೇಶ್ ಕುಮಾರ್

    ಇತ್ತ ರಮೇಶ್ ಅವರ ಈ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ ಬಿಜೆಪಿ ಶಾಸಕಿಯರೆಲ್ಲರೂ ಈ ಹೇಳಿಕೆ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.