Tag: apollo hospital

  • ಜಯಾ ಸೀಕ್ರೆಟ್: 75 ದಿನವೂ ಅಪೋಲೋ ಆಸ್ಪತ್ರೆಯ ಸಿಸಿಟಿವಿ ಆಫ್ ಆಗಿತ್ತು!

    ಜಯಾ ಸೀಕ್ರೆಟ್: 75 ದಿನವೂ ಅಪೋಲೋ ಆಸ್ಪತ್ರೆಯ ಸಿಸಿಟಿವಿ ಆಫ್ ಆಗಿತ್ತು!

    ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಅವರು ಅಸ್ವಸ್ಥರಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ 75 ದಿನವೂ ಅಪೋಲೋ ಆಸ್ಪತ್ರೆಯ ಎಲ್ಲಾ ಸಿಸಿಟಿವಿಗಳೂ ಆಫ್ ಆಗಿತ್ತು ಎಂದು ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರತಾಪ್ ರೆಡ್ಡಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾ. ಎ.ಅರ್ಮುಗಂಸ್ವಾಮಿ ಆಯೋಗದ ಮುಂದೆ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳು, ಆಯೋಗಕ್ಕೆ ಸಿಸಿಟಿವಿ ದೃಶ್ಯಾವಳಿಗಳನ್ನೂ ನೀಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಕ್ಷಮಿಸಿ, ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದ 75 ದಿನವೂ ಆಸ್ಪತ್ರೆಯ ಸಿಸಿಟಿವಿ ಸ್ವಿಚ್ ಆಫ್ ಆಗಿತ್ತು. ಜಯಲಲಿತಾ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಐಸಿಯುವನ್ನೂ ಮುಚ್ಚಿದ್ದೆವು. ಜಯಾ ಆಗಮನಕ್ಕೂ ಆಗಮಿಸಿದ್ದ ರೋಗಿಗಳನ್ನು ಬೇರೆ ಐಸಿಯುವಿಗೆ ವರ್ಗಾಯಿಸಿದೆವು. ಒಟ್ಟು 24 ಕೊಠಡಿಯಿರುವ ಐಸಿಯುವಿನಲ್ಲಿ ಜಯಲಲಿತಾಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದೆವು. ಯಾರೂ ಏನೂ ನೋಡಬಾರದು ಎಂದು ಅವರು ಸಿಸಿಟಿವಿಯನ್ನು ಆಫ್ ಮಾಡಿಸಿದ್ದರು. ಜಯಲಲಿತಾ ಭೇಟಿಗೆ ಯಾವುದೇ ಸಂದರ್ಶಕರಿಗೂ ಅವಕಾಶ ನೀಡಿರಲಿಲ್ಲ ಎಂದರು.

    ಜಯಲಲಿತಾರ ಹತ್ತಿರದ ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಿದ್ದೆವು. ಜಯಲಲಿತಾ ಸ್ಥಿತಿ ಗಂಭೀರವಾಗಿದ್ದರಿಂದ ನಾವು ಭೇಟಿಗೆ ಅವಕಾಶ ನೀಡಿರಲಿಲ್ಲ. ಈ ಭೇಟಿಗೆ ಡ್ಯೂಟಿಯಲ್ಲಿದ್ದ ವೈದ್ಯರ ಅನುಮತಿ ಪಡೆಯಬೇಕಿತ್ತು ಎಂದು ಪ್ರತಾಪ್ ರೆಡ್ಡಿ ಹೇಳಿದರು.

    ವಾರ್ಡ್ ಬಾಯ್ ನಿಂದ ತೊಡಗಿ ನರ್ಸ್‍ಗಳು, ವೈದ್ಯರವರೆಗೆ ಎಲ್ಲರೂ ಜಯಲಲಿತಾರನ್ನು ಚೆನ್ನಾಗಿ ನೋಡಿಕೊಂಡರು. ವಿದೇಶದಿಂದಲೂ ವೈದ್ಯರು ಬಂದಿದ್ದರು. ಜಯಲಲಿತಾ ಗುಣಮುಖರಾಗುತ್ತಾರೆ ಎಂಬ ನಿರೀಕ್ಷೆ ನಮ್ಮದಾಗಿತ್ತು. ಈಗಾಗಲೇ ನಾವು ಆಯೋಗಕ್ಕೆ ಎಲ್ಲಾ ದಾಖಲೆ ಸಲ್ಲಿಸಿದ್ದೇವೆ. ಆಯೋಗವು ನಮಗೆ ಸೂಚಿಸಿದರೆ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುತ್ತೇವೆ ಎಂದರು.

  • ಎಚ್‍ಡಿ ಕುಮಾರಸ್ವಾಮಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್

    ಎಚ್‍ಡಿ ಕುಮಾರಸ್ವಾಮಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬೆಂಗಳೂರು: ಕಳೆದ 10 ದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

    ಎರೋಟಿಕ್ ವಾಲ್ವ್ ಅಳವಡಿಕೆ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಎಚ್‍ಡಿ ಕುಮಾರಸ್ವಾಮಿ ಹೃದಯ ಶಸ್ತ್ರ ಚಿಕಿತ್ಸೆ ಸಂಬಂಧ ಸೆಪ್ಟೆಂಬರ್ 23 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಡಾ. ಸತ್ಯಕೀ ಹಾಗೂ ಡಾ.ಮಂಜುನಾಥ ಅವರ ನೇತೃತ್ವದಲ್ಲಿ ಆಪರೇಷನ್ ನಡೆದಿತ್ತು.

    ಇನ್ನು 10ನೇ ದಿನ ಡಿಸ್ಚಾರ್ಜ್ ಆಗುವುದಕ್ಕೆ ವೈದ್ಯರು ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಎಚ್‍ಡಿಕೆ ಗುಣಮುಖರಾಗಲೆಂದು ದೇವರ ಮೊರೆ ಹೋಗಿದ್ದ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ದೇವಾಲಯ, ಚರ್ಚ್ ಹಾಗೂ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

  • ಹೆಚ್‍ಡಿಕೆಗೆ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ-ಐಸಿಯು ನಲ್ಲಿ ಚಿಕಿತ್ಸೆ ಮುಂದುವರಿಕೆ

    ಹೆಚ್‍ಡಿಕೆಗೆ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ-ಐಸಿಯು ನಲ್ಲಿ ಚಿಕಿತ್ಸೆ ಮುಂದುವರಿಕೆ

    ಬೆಂಗಳೂರು: ಬನ್ನೇರುಘಟ್ಟದಲ್ಲಿರೋ ಅಪೋಲೋ ಆಸ್ಪತ್ರೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ನಡೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

    ಹತ್ತು ವರ್ಷದ ಹಿಂದೆ ಹೃದಯನಾಳಕ್ಕೆ ಆಳವಡಿಸಿದ್ದ ಟಿಶ್ಯೂ ವಾಲ್ವ್ ಬದಲಾವಣೆ ಮಾಡಲಾಗಿದೆ. 45 ನಿಮಿಷಗಳ ಕಾಲ ನಡೆದ ಆಪರೇಷನ್ ಪೂರ್ಣ ಪ್ರಮಾಣದಲ್ಲಿ ಮುಗಿದಿದ್ದು, ಕುಮಾರಸ್ವಾಮಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ 12.30ರ ಮೇಲೆ ಕುಮಾರಸ್ವಾಮಿಯವರನ್ನ ವಾರ್ಡ್‍ಗೆ ಶಿಫ್ಟ್ ಮಾಡಲಿದ್ದು ಅಲ್ಲಿವರೆಗೂ ಅವರನ್ನ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗುತ್ತೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

    ಕುಮಾರಸ್ವಾಮಿ ಅವರು ಬೇಗ ಗುಣಮುಖರಾಗಲಿ ಅಂತ ಜೆಡಿಎಸ್ ಕಾರ್ಯಕರ್ತರು ರಾಜ್ಯದ ಹಲವೆಡೆ ಪೂಜೆ ಪುನಸ್ಕಾರ ನಡೆಸಿದ್ರು. ವಿಜಯಪುರದಲ್ಲಿ ಜೆಡಿಎಸ್ ಮುಖಂಡ ದೇವಾನಂದ ಚವ್ಹಾಣ ಹಾಗೂ ಇನ್ನಿತರರು ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.

    ಮಂಡ್ಯದ ವಿದ್ಯಾನಗರದಲ್ಲಿರುವ ವಿದ್ಯಾ ಗಣಪತಿ ದೇವಾಲಯದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಮೊದಲು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಈಗ ದೇವಾಲಯದ ಆವರಣದಲ್ಲಿ ಮೃತ್ಯುಂಜಯ ಹೋಮ ಕೈಗೊಂಡಿದ್ದಾರೆ. ಹಾಗೇ ಮೈಸೂರಿನಲ್ಲಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ನೇತೃತ್ವದಲ್ಲಿ ಮೈಸೂರು ಅರಮನೆ ಬಳಿಯ ಕೋಟೆ ಆಂಜನೇಯಸ್ವಾಮಿ ಹಾಗೂ ವಿನಾಯಕಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

     

  • ಕೊನೆಗೂ ಜಯಲಲಿತಾ ಆರೋಗ್ಯದ ಗುಟ್ಟು ಹೊರ ಬಿತ್ತು

    ಚೆನ್ನೈ:ತಮಿಳುನಾಡಿನ ಅಮ್ಮ ಜಯಲಲಿತಾ ಸಾವಿನ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಸುದ್ದಿಗೋಷ್ಠಿ ನಡೆಸಿದ ಲಂಡನ್ ವೈದ್ಯ ರಿಚರ್ಡ್ ಬಿಲೆ ಅವರು ಅಮ್ಮಾ ಅನಾರೋಗ್ಯದ ಗುಟ್ಟನ್ನು ರಟ್ಟು ಮಾಡಿದ್ದಾರೆ.

    ಜಯಲಲಿತಾಗೆ ದಿಢೀರ್ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಅಲ್ಲದೇ ಅವರ ರಕ್ತದಲ್ಲಿ ಬ್ಯಾಕ್ಟೀರಿಯಾ ತುಂಬಿಕೊಂಡಿತ್ತು. ಅದು ಹೃದಯಕ್ಕೂ ವಿಸ್ತಿರಿಸಿತ್ತು. ಜೊತೆಗೆ ಸಕ್ಕರೆ ಕಾಯಿಲೆಯಿಂದ ಬಹು ಅಂಗಾಂಗ ವೈಫಲ್ಯಕ್ಕೂ ಗುರಿಯಾದರು. ಜಯಲಲಿತಾರನ್ನು ಬದುಕಿಸಲು ಅಂತಿಮ ಕ್ಷಣದವರೆಗೂ ಪ್ರಯತ್ನ ಮಾಡಿದ್ದೆವು. ಕೃತಕ ಉಸಿರಾಟ ಯಂತ್ರ ಅಳವಡಿಸಿದ್ದರೂ ಸಂಜೆ 5 ಗಂಟೆಗೆ ಅವರಿಗೆ ಹೃದಯಸ್ತಂಭನವಾಗಿತ್ತು. ಅದಕ್ಕೆ ನಾವೇ ಸಾಕ್ಷಿ. ನಮ್ಮ ಬಳಿ ಯಾವುದೇ ಸಿಸಿಟೀವಿ ದೃಶ್ಯಗಳಿಲ್ಲ, ದೃಶ್ಯಗಳಿದ್ರೂ ನಾವು ರಿಲೀಸ್ ಮಾಡಲ್ಲ. ರೋಗಿಯ ಖಾಸಗಿತನ ನಮಗೆ ಅತ್ಯಂತ ಮುಖ್ಯ ಎಂದು ವೈದ್ಯ ರಿಚರ್ಡ್ ಬಿಲೆ ಹೇಳಿದ್ರು.

    ಡಿಸೆಂಬರ್ 5 ರಾತ್ರಿ ಎಂಜಿಆರ್ ಅವರಿಗೆ ಎಂಬ್ಲಂ ಮಾಡಿದಂತೆ ಜಯಲಲಿತಾ ಅವರಿಗೂ ಮಾಡಲಾಗಿತ್ತು. ಎಂಬ್ಲಂ ಮಾಡಿ ಜಯಾ ಅವರ ಪಾರ್ಥಿವ ಶರೀರ ಕೆಡದಂತೆ ನೋಡಿಕೊಳ್ಳಲಾಗಿತ್ತು. ಎಂದು ಅಪೋಲೋ ಆಸ್ಪತ್ರೆ ವೈದ್ಯ ಡಾ. ಬಾಲಾಜಿ ಹೇಳಿದ್ರು.

    ಅಮ್ಮಾ ಆರೋಗ್ಯದ ಕ್ಷಣಕ್ಷಣದ ಮಾಹಿತಿಯನ್ನ ಅವರ ಪರಮಾಪ್ತೆ ಶಶಿಕಲಾ ನಟರಾಜನ್, ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಲೋಕಸಭೆ ಡೆಪ್ಯೂಟಿ ಸ್ಪೀಕರ್ ತಂಬಿದೊರೈ ಅವರಿಗೆ ಇಂಚಿಂಚು ಮಾಹಿತಿ ನೀಡಲಾಗ್ತಿತ್ತು. ಸಾವಿಗೂ ಮುನ್ನ ಜಯಲಲಿತಾ ವೈದ್ಯ ರಿಚರ್ಡ್ ಬಿಲೆ ಅವರ ಜೊತೆಯೂ ಮಾತನಾಡಿದ್ದರು. ಇನ್ನೂ ಜಯಲಲಿತಾ ಚಿಕಿತ್ಸೆಗೆ ಖರ್ಚಾಗಿದ್ದು ಬರೋಬ್ಬರಿ 5.5 ಕೋಟಿ ರೂ. ಮೆಡಿಕಲ್ ಬಿಲ್ ಅನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿದ್ದೇವೆ. ಆ ಹಣವನ್ನು ಅವರು ಕೊಡುವ ನಿರೀಕ್ಷೆ ಇದೆ ಎಂದು ವೈದ್ಯ ಬಾಲಾಜಿ ಅವರು ಹೇಳಿದರು.