Tag: APMC Act

  • APMC ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲ – ಶಿವಾನಂದ ಪಾಟೀಲ

    APMC ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲ – ಶಿವಾನಂದ ಪಾಟೀಲ

    – ಬೆಂಬಲ ಬೆಲೆ ಯೋಜನೆ ಅಡಿ ಏಕಕಾಲಕ್ಕೆ 4 ಬೆಳೆಗಳ ಖರೀದಿ

    ಬೆಂಗಳೂರು: ಎಪಿಎಂಸಿ ಕಾಯ್ದೆ (APMC Act) ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ 4 ಬೆಳೆಗಳನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ (Shivananda Patil) ಹೇಳಿದರು.

    ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರುಕಾಳು, ಸೂರ್ಯಕಾಂತಿ, ಸೋಯಾಬಿನ್ ಮತ್ತು ಉದ್ದಿನಕಾಳನ್ನು ಬೆಂಬಲ ಬೆಲೆ (MSP) ಯೋಜನೆ ಅಡಿ ಖರೀದಿ ಮಾಡಲಾಗುತ್ತಿದೆ. ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿ ಪ್ರಕ್ರಿಯೆ ಆರಂಭಿಸಲು ಗುರುವಾರ (ಆ.5) ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆರ್ಥಿಕ ಅವ್ಯವಹಾರಗಳ ಸಿಬಿಐ ತನಿಖೆ ಪ್ರಶ್ನಿಸಿ ಸಂದೀಪ್ ಘೋಷ್ ಸಲ್ಲಿಸಿದ್ದ ಅರ್ಜಿ ವಜಾ

    ಈಗಾಗಲೇ ಹೆಸರುಕಾಳು ಮತ್ತು ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ರಾಜ್ಯ ಸರ್ಕಾರ ಖರೀದಿ ಏಜನ್ಸಿಗಳನ್ನು ನೇಮಕ ಮಾಡಿದೆ. ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಸೂರ್ಯಕಾಂತಿ ಮತ್ತು 10 ಕ್ವಿಂಟಲ್ ಹೆಸರುಕಾಳು ಖರೀದಿ ಮಾಡಲಿದೆ. ಎಫ್.ಎ.ಕ್ಯೂ (FAQ) ಗುಣಮಟ್ಟದ ಸೋಯಾಬಿನ್‌ಗೆ ಕ್ವಿಂಟಲ್‌ಗೆ 4,892 ರೂ. ಹಾಗೂ ಉದ್ದಿನ ಕಾಳಿಗೆ ಕ್ವಿಂಟಲ್‌ಗೆ 7,400 ರೂ. ಬೆಲೆ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಸುಮಾರು 10 ಲಕ್ಷ ಕ್ವಿಂಟಲ್ ಸೋಯಾಬಿನ್ ಮತ್ತು 2 ಲಕ್ಷ ಕ್ವಿಂಟಲ್ ಉದ್ದಿನಕಾಳು ಖರೀದಿ ಮಾಡಲಾಗುವುದು. 2024-25ನೇ ಸಾಲಿನಲ್ಲಿ 4.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 4.72 ಲಕ್ಷ ಮೆಟ್ರಿಕ್ ಟನ್ ಸೋಯಾಬಿನ್ ಹಾಗೂ 0.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 0.40 ಲಕ್ಷ ಮೆಟ್ರಿಕ್ ಟನ್ ಉದ್ದಿನಕಾಳು ಇಳುವರಿ ನಿರೀಕ್ಷೆ ಮಾಡಲಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್‌ ಪೇರಿಸಿದ ಭಾರತ-ಬಿ ತಂಡ!

    ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್‌ಗೆ 8,682 ರೂ. ಹಾಗೂ ಸೂರ್ಯಕಾಂತಿಗೆ 7,280 ರೂ. ನಿಗದಿಪಡಿಸಲಾಗಿದೆ. ಹೆಸರುಕಾಳು ಖರೀದಿಗೆ 172 ಖರೀದಿ ಕೇಂದ್ರ ಗುರುತಿಸಲಾಗಿದ್ದು, 1982 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸೂರ್ಯಕಾಂತಿ ಖರೀದಿಗೆ 19 ಖರೀದಿ ಕೇಂದ್ರ ಗುರುತಿಸಲಾಗಿದ್ದು, 461 ರೈತರು ನೋಂದಣಿ ಮಾಡಿಕೊಂಡಿದ್ದಾರೆ‌. ಕೊಬ್ಬರಿ ಖರೀದಿಯಲ್ಲೂ ಈ ಬಾರಿ ಪ್ರಮುಖ ಪಾತ್ರ ವಹಿಸಲಾಗಿದ್ದು, ಇದೇ ಮೊದಲ ಬಾರಿಗೆ ಮಿಲ್ಲಿಂಗ್ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.

    ಎಪಿಎಂಸಿ ಯಾರ್ಡ್‌ಗಳಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 14ರಿಂದ 15 ಶೀಥಲ ಗೃಹಗಳನ್ನು ಎಪಿಎಂಸಿಗಳಲ್ಲಿ ನಿರ್ಮಾಣ ಮಾಡಲಾಗುವುದು. ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ವಿಭಾಗಾವಾರು ವಿಜಿಲೆನ್ಸ್ ಸೆಲ್‌ಗಳನ್ನು ರಚಿಸಲಾಗಿದೆ. ವಿಜಿಲೆನ್ಸ್ ರಚನೆ ಪರಿಣಾಮ ಎಪಿಎಂಸಿ ಆದಾಯ ಕೂಡ ಹೆಚ್ಚಾಗಿದೆ, ಈ ವರ್ಷ ರೂ 380 ರಿಂದ 400 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದ್ದು, ಆರ್ಥಿಕ ವರ್ಷದ 5 ತಿಂಗಳಲ್ಲಿ 133.15 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 77.42 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

  • ರಾಜ್ಯದಲ್ಲಿ ಯಾವುದೇ ಕಾರಣಕ್ಕೂ APMC ಕಾಯ್ದೆ ರದ್ದು ಮಾಡೋದಿಲ್ಲ- ಎಸ್.ಟಿ ಸೋಮಶೇಖರ್

    ರಾಜ್ಯದಲ್ಲಿ ಯಾವುದೇ ಕಾರಣಕ್ಕೂ APMC ಕಾಯ್ದೆ ರದ್ದು ಮಾಡೋದಿಲ್ಲ- ಎಸ್.ಟಿ ಸೋಮಶೇಖರ್

    ಬೆಂಗಳೂರು: ರಾಜ್ಯದಲ್ಲಿ ಯಾವ ರೈತರು (Farmers) ಎಪಿಎಂಸಿ (APMC) ಕಾಯ್ದೆ ವಾಪಸ್‌ ಪಡೆಯುವಂತೆ ಮನವಿ ಮಾಡಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿ ಆಗಿರೋ ಎಪಿಎಂಸಿ ಕಾಯ್ದೆ ರದ್ದು ಮಾಡೋದಿಲ್ಲ ಅಂತ ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್ (ST Somashekar) ‌ಸ್ಪಷ್ಟಪಡಿಸಿದ್ದಾರೆ‌.

    ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ನ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ (APMC Act) ರದ್ದು ಮಾಡಬೇಕು, ಈ ಕಾಯ್ದೆಯಿಂದ ರೈತರಿಗೆ ಅನ್ಯಾಯ ಆಗುತ್ತದೆ. ಕೇಂದ್ರ ಸರ್ಕಾರ ಈಗಾಗಲೇ ಕಾಯ್ದೆ ರದ್ದು ಮಾಡಿದೆ. ಡಬಲ್ ಎಂಜಿನ್ ಸರ್ಕಾರ ಇಲ್ಲಿ ಬೇರೆ ನಿರ್ಧಾರ ಮಾಡಿದೆ. ಕೂಡಲೇ ಕಾಯ್ದೆ ರದ್ದು ಮಾಡಬೇಕೆಂದು ಒತ್ತಾಯಿಸಿದರು.

    ಇದಕ್ಕೆ ಉತ್ತರಿಸಿದ ಎಸ್‌.ಟಿ ಸೋಮಶೇಖರ್‌, ಯಾವುದೇ ಕಾರಣಕ್ಕೂ ಎಪಿಎಂಸಿ ಕಾಯ್ದೆ ರಾಜ್ಯದಲ್ಲಿ ವಾಪಸ್ ಪಡೆಯಲ್ಲ‌ (ರದ್ದು ಮಾಡುವುದಿಲ್ಲ) ಎಂದು ಪುನರುಚ್ಚರಿಸಿದರು. ಇದನ್ನೂ ಓದಿ: ಅಕ್ಟೋಬರ್ 2 ರಿಂದ ಯಶಸ್ವಿನಿ ಯೋಜನೆ ಜಾರಿ: ಎಸ್.ಟಿ.ಸೋಮಶೇಖರ್

    ST SOMASHEKAr2

    ಕೇಂದ್ರದ ಕಾಯ್ದೆ ಬೇರೆ ನಮ್ಮ ಕಾಯ್ದೆ ಬೇರೆ. ರೈತರಿಗೆ ಅನುಕೂಲ ಮಾಡಲು ಕಾಯ್ದೆ ತಿದ್ದುಪಡಿ ಮಾಡಿದ್ದೇವೆ. ರೈತರು ತಮ್ಮ ಬೆಳೆ (Crop) ಎಪಿಎಂಸಿಯಲ್ಲಿ ಬೇಕಾದರೂ ಮಾರಾಟ ಮಾಡಬಹುದು ಅಥವಾ ಎಲ್ಲಿ ಬೇಕಾದ್ರು ಖಾಸಗಿಯಾಗಿ ಬೇಕಾದ್ರು ಮಾರಾಟ ಮಾಡಬಹುದು. ಅದಕ್ಕಾಗಿಯೇ ನಾವು ಕಾಯ್ದೆ ತಂದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಣ್ಣಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮನ ನೆರವಿಗೆ ನಿಂತ ಸಚಿವೆ ಜೊಲ್ಲೆ

    ಇದಲ್ಲದೆ ರೈತ ಎಪಿಎಂಸಿ ಬಿಟ್ಟು ಹೊರಗೆ ಮಾರಾಟ ಮಾಡಿದರೆ ಮೊದಲು ದಂಡ ಇತ್ತು. ಅದನ್ನ ಈ ಕಾಯ್ದೆ ಮೂಲಕ ತೆಗೆದು ಹಾಕಲಾಗಿದೆ. ರಾಜ್ಯದ ಯಾವ ರೈತರು ಕಾಯ್ದೆ ವಾಪಸ್ ಪಡೆಯುವಂತೆ ಮನವಿ ಮಾಡಿಲ್ಲ‌. ಈ ಕಾಯ್ದೆ ರೈತರ ಪರವಾದ ಕಾಯ್ದೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎಪಿಎಂಸಿ ಕಾಯ್ದೆ ವಾಪಸ್ ಪಡೆಯೊಲ್ಲ ಅಂತ ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ APMC ಕಾಯ್ದೆ ವಾಪಸ್ ಇಲ್ಲ: ಸೋಮಶೇಖರ್

    ರಾಜ್ಯದಲ್ಲಿ APMC ಕಾಯ್ದೆ ವಾಪಸ್ ಇಲ್ಲ: ಸೋಮಶೇಖರ್

    ಬೆಳಗಾವಿ: ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಇಲ್ಲ ಎಂದು ಸಹಕಾರ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

    ಎಪಿಎಂಸಿ ಕಾಯ್ದೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕಾಯ್ದೆಯಿಂದ ರೈತರಿಗೆ ಯಾವುದೇ ಅನಾನುಕೂಲ ಇಲ್ಲ. ರೈತರು ಎಲ್ಲಿ ಬೇಕಾದ್ರು ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಲು ಈ ಕಾಯ್ದೆಯಲ್ಲಿ ಅವಕಾಶ ಇರುತ್ತೆ. ಇದರಿಂದ ರೈತನಿಗೆ ಅನುಕೂಲ ಆಗುತ್ತೆ. ಈ ಮೊದಲು ಎಪಿಎಂಸಿ ಬಿಟ್ಟು ಹೊರಗೆ ಮಾರಾಟ ಮಾಡಿದ್ರೆ ದಂಡ, ಜೈಲು ಶಿಕ್ಷೆ ಇತ್ತು. ಈಗ ಹೊಸ ಕಾಯ್ದೆಯಲ್ಲಿ ಅದನ್ನ ತೆಗೆಯಲಾಗಿದೆ ಎಂದು ತಿಳಿಸಿದರು.

    ಕರ್ನಾಟಕದಲ್ಲಿ ರೈತ ತಾನು ಬೆಳೆದ ಬೆಳೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರಿಂದ ರೈತರಿಗೆ ಯಾವುದೇ ಧಕ್ಕೆ ಆಗೊಲ್ಲ. ಹೀಗಾಗಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯೊಲ್ಲ. ಎಪಿಎಂಸಿಗಳನ್ನ ಯಾವುದೇ ಕಾರಣಕ್ಕೂ ಮುಚ್ಚೋದಿಲ್ಲ. ಎಪಿಎಂಸಿ ಲಾಭದಲ್ಲಿ ನಡೆಯುತ್ತಿದೆ. ಲಾಭದಿಂದ ನಡೆಯೋ ಸಂಸ್ಥೆಯನ್ನ ಯಾಕೆ ಮುಚ್ಚೋಣ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

    ಕಾಂಗ್ರೆಸ್ ನಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋ ವಿಚಾರವಾಗಿ ಮಾತನಾಡಿದ ಅವರು, 7-8 ವರ್ಷಗಳಿಂದ ನಾವು ಅಧಿವೇಶನ ನೋಡುತ್ತಿದ್ದೇನೆ. ವಿರೋಧ ಪಕ್ಷದವರು ಇರೋದು ವಿರೋಧ ಮಾಡೋಕೆ. ವಿರೋಧ ಮಾಡೋದು ಬಿಟ್ಟು ಸಾರ್ವಜನಿಕ ಕುಂದು ಕೊರತೆ ಸರ್ಕಾರದ ಗಮನಕ್ಕೆ ತಂದು ಅದಕ್ಕೆ ಪರಿಹಾರ ಕೊಡಿಸೋ ಕೆಲಸ ವಿಪಕ್ಷ ಮಾಡಲಿ. ಇತ್ತೀಚೆಗೆ ಅಧಿವೇಶನದಲ್ಲಿ ಸಾರ್ವಜನಿಕ ವಿಷಯಗಳು ಚರ್ಚೆ ಆಗ್ತಿಲ್ಲ. ಈ ಬಗ್ಗೆ ನಾವು ಅರ್ಥ ಮಾಡಿಕೊಂಡು ಚರ್ಚೆ ಮಾಡಬೇಕು. ಬೆಳಗಾವಿ ಅಧಿವೇಶನ ಈ ಭಾಗದ ಸಮಸ್ಯೆ ಪರಿಹಾರಕ್ಕೆ ಮಾಡ್ತಿರೋದು. ಹೀಗಾಗಿ ವಿಪಕ್ಷಗಳು ವಿರೋಧ ಮಾಡೋದು ಬಿಟ್ಟು ಸಾರ್ವಜನಿಕ ವಿಷಯಗಳ ಬಗ್ಗೆ ಚರ್ಚೆ ಮಾಡಲಿ ಎಂದು ತಿರುಗೇಟು ನೀಡಿದರು.

    BJP - CONGRESS

    40% ಸರ್ಕಾರ ಎಂಬ ಕಾಂಗ್ರೆಸ್ ಆರೋಪ ಬಗ್ಗೆ ಮಾತನಾಡಿದ ಅವರು, 40% ಸರ್ಕಾರ ಅಂತ ಯಾರು ಸಾಬೀತು ಮಾಡಿದ್ದಾರೆ. ಯಾರ ಕಾಲದಲ್ಲಿ ಎಷ್ಟು ಇತ್ತು ಅಂತ ಎಲ್ಲರಿಗೂ ಗೊತ್ತಿದೆ. ಸುಮ್ಮನೆ ಆರೋಪ ಮಾಡಿದ್ರೆ ಆಗುತ್ತಾ ಸಾಬೀತು ಮಾಡಬೇಕು. ಸುಮ್ಮನೆ ಪ್ರಧಾನಿಗೆ ಪತ್ರ ಬರೆದರೆ ಆಗೊಲ್ಲ. ವಿಪಕ್ಷಗಳು ಏನೇ ಆರೋಪ ಮಾಡಲಿ, ದಾಖಲಾತಿ ಬಿಡುಗಡೆ ಮಾಡಲಿ. ನಾವು ಎಲ್ಲದ್ದಕ್ಕೂ ಸಿದ್ಧರಾಗಿದ್ದೇವೆ. ಕಾಂಗ್ರೆಸ್ ಏನು ಆರೋಪ ಮಾಡಿದ್ರು ಅದಕ್ಕೆ ಉತ್ತರ ಕೊಡೋದು ಸರ್ಕಾರ 100% ಸಿದ್ಧವಾಗಿದೆ. ಸುಮ್ಮನೆ ಆರೋಪ ಮಾಡಿದ್ರೆ ಒಪ್ಪಲು ಸಾಧ್ಯವಿಲ್ಲ. ಚರ್ಚೆ ಮಾಡಲಿ ಸರ್ಕಾರ ಸಮರ್ಥವಾಗಿ ಉತ್ತರ ನೀಡುತ್ತೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪರೀಕ್ಷೆ ಬರೆದು ಬರುತ್ತಿದ್ದ ನಾಲ್ವರು ವಿದ್ಯಾರ್ಥಿಗಳ ಮೇಲೆ ಚಾಕು ಇರಿತ

  • ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ ಭರವಸೆ- ಹಠ ಬಿಡದ ಅನ್ನದಾತರಿಂದ ಹೋರಾಟ ತೀವ್ರ

    ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ ಭರವಸೆ- ಹಠ ಬಿಡದ ಅನ್ನದಾತರಿಂದ ಹೋರಾಟ ತೀವ್ರ

    ನವದೆಹಲಿ: ಕೇಂದ್ರ ಒಪ್ತಿಲ್ಲ – ರೈತರು ಪಟ್ಟು ಸಡಿಲಿಸ್ತಿಲ್ಲ. ಕೇಂದ್ರ ಕಳಿಸಿದ ಲಿಖಿತ ಭರವಸೆಯನ್ನು ಕೂಡ ರೈತರು ಒಪ್ಪಿಲ್ಲ. ಪರಿಣಾಮ, ಸತತ 14ನೇ ದಿನವೂ ದೆಹಲಿ ಹೊರ ವಲಯದಲ್ಲಿ ಅನ್ನದಾತರ ಪ್ರತಿಭಟನೆ ಮುಂದುವರಿದಿದೆ.

    ಮಂಗಳವಾರ ರಾತ್ರಿ ಅಮಿತ್ ಶಾ ಜೊತೆಗಿನ ಸಂಧಾನ ಸಭೆ ವಿಫಲವಾದ ಬಳಿಕ ಇವತ್ತಿನ ಸಭೆ ರದ್ದು ಮಾಡಿದ ಕೇಂದ್ರ ಸರ್ಕಾರ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇರುತ್ತೆ ಎಂಬ ಭರವಸೆ ಸೇರಿ ಹಲವು ತಿದ್ದುಪಡಿಗಳಿಗೆ ಸಮ್ಮತಿ ಸೂಚಿಸಿ ಲಿಖಿತ ಪ್ರಸ್ತಾವನೆಯನ್ನು ಧರಣ ನಿರತ ಅನ್ನದಾತರ ಬಳಿಗೆ ಕಳಿಸಿತ್ತು. ಆದರೆ ಅನ್ನದಾತರು ಮಾತ್ರ ಇದನ್ನು ಒಪ್ಪೋಕೆ ರೆಡಿ ಇಲ್ಲ. ಸಿಂಘು ಗಡಿಯಲ್ಲಿ ಇಂದು ಸಭೆ ಸೇರಿದ್ದ ರೈತರು, ತಮ್ಮ ಹಳೆಯ ನಿಲುವಿಗೆ ಅಂಟಿಕೊಂಡಿರಲು ತೀರ್ಮಾನಿಸಿದ್ದಾರೆ.

    ಸಭೆಯ ಬಳಿಕ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡೋವರೆಗೂ ಹೋರಾಟದಿಂದ ವಿರಮಿಸಲ್ಲ ಎಂದು ಘೋಷಿಸಿದ್ದಾರೆ. ಸೋಮವಾರ ದೆಹಲಿಯಲ್ಲಿ ದೊಡ್ಡಮಟ್ಟದ ಸಮಾವೇಶ, ಡಿಸೆಂಬರ್ 12ರವರೆಗೂ ಜೈಪುರ-ದೆಹಲಿ, ಆಗ್ರಾ-ದೆಹಲಿ ಹೈವೇ ತಡೆ ನಡೆಸೋದಾಗಿ ಎಚ್ಚರಿಸಿದ್ದಾರೆ. ದೇಶಾದ್ಯಂತ ಎಲ್ಲಾ ಟೋಲ್‍ಗಳ ಬಳಿ ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಿದ್ದಾರೆ.

    ಡಿಸೆಂಬರ್ 13ರಿಂದ ಬಿಜೆಪಿ ನಾಯಕರಿಗೆ ಕಂಡಕಂಡಲ್ಲಿ ಘೇರಾವ್ ಹಾಕೋದಾಗಿ ರೈತರು ಪ್ರಕಟಿಸಿದ್ದು, ಡಿಸೆಂಬರ್ 14ರಂದು ದೇಶಾದ್ಯಂತ ಚಳವಳಿ ನಡೆಡುವ ಸಂದೇಶವನ್ನ ಕೇಂದ್ರಕ್ಕೆ ರವಾನಿಸಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಬೇಡಿಕೆಗೆ ಒಪ್ಪಿದ್ರೇ ನಾಳೆಯೇ ಕೇಂದ್ರದ ಜೊತೆ ಮಾತುಕತೆ ಸಿದ್ಧ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.

    ಈ ಮಧ್ಯೆ, ಸಂಜೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ವಿಪಕ್ಷ ನಿಯೋಗ, ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಮನವಿ ಪತ್ರ ಸಲ್ಲಿಸಿದ್ರು. ರಾಹುಲ್ ಗಾಂಧಿ, ಶರದ್ ಪವಾರ್ ಸೇರಿ ಹಲವರು ಈ ವೇಳೆ ಉಪಸ್ಥಿತರಿದ್ದರು.

  • ಕಾಂಗ್ರೆಸ್-ಜೆಡಿಎಸ್ ಹೋರಾಟ ರೈತ ಪರವಲ್ಲ, ದಲ್ಲಾಳಿಗಳ ಪರ : ಸಿ.ಟಿ.ರವಿ

    ಕಾಂಗ್ರೆಸ್-ಜೆಡಿಎಸ್ ಹೋರಾಟ ರೈತ ಪರವಲ್ಲ, ದಲ್ಲಾಳಿಗಳ ಪರ : ಸಿ.ಟಿ.ರವಿ

    -ನಾನು ರೈತ ಚಳುವಳಿಯಿಂದ ಬಂದವನು
    -ರೈತರ ತಾಕತ್ತೇನೆಂದು ನನಗೆ ಗೊತ್ತು

    ಚಿಕ್ಕಮಗಳೂರು: ಕಾಂಗ್ರೆಸ್, ಜೆಡಿಎಸ್ ಹೋರಾಟ ರೈತರ ಪರವೆಂದು ಅನ್ನಿಸೋದಿಲ್ಲ. ಅವರದ್ದು ದಲ್ಲಾಳಿಗಳ ಪರ ಹೋರಾಟ. ಕೇರಳದಲ್ಲಿ ಎಪಿಎಂಸಿಯೇ ಇಲ್ಲ. ಇಲ್ಲಿ ಕಮ್ಯುನಿಸ್ಟ್ರು ಕೂಗಾಡ್ತಾರೆ. ಅವರ ರಾಜ್ಯವಿರುವ ತ್ರಿಪುರದಲ್ಲಿ ಎಪಿಎಂಸಿಯೇ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂದ್ ಜನರು ತಿರಸ್ಕರಿಸಿದ್ದಾಹರೆ. ರೈತರು ನಮ್ಮ ಜತೆಯೇ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ. ರೈತರಿಗೆ ಹಾಕಿದ್ದ ಬೇಡಿಯನ್ನ ಕಳಚುವ ಕೆಲಸ ಎಪಿಎಂಸಿ ಕಾಯ್ದೆ ಮೂಲಕ ಆಗಿದೆ. ರೈತ ದೇಶದಲ್ಲಿ ಎಲ್ಲಿ ಬೇಕಾದ್ರು ತಾವು ಬೆಳೆದ ಬೆಳೆಯನ್ನ ಮಾರಬಹುದು ಎಂಬ ಅನುಮತಿ ಕೊಟ್ಟಿದೆ. ಮೊದಲು ಎಪಿಎಂಸಿಯಲ್ಲೇ ಮಾರಬೇಕು ಎಂದು ಮಾಡಿದ್ದರು. ಈಗ ದೇಶದಲ್ಲಿ ಎಲ್ಲಿ ಬೇಕಾದರೂ ಮಾರಬಹುದು. ಎಲ್ಲಿ ಬೆಲೆ ಜಾಸ್ತಿ ಇರುತ್ತೋ ಅಲ್ಲಿಗೆ ಹೋಗಿ ಮಾರುತ್ತಾರೆ. ಅದರಿಂದ ರೈತರ ಶೋಷಣೆ ತಪ್ಪಿದೆ. ಸ್ಫರ್ದೆ ಬರುತ್ತೆ ಜೊತೆಗೆ ರೈತ ಬೆಳೆದ ಬೆಳೆಗಳಿಗೆ ಹೆಚ್ಚಿನ ಬೆಲೆ ಬರುತ್ತೆ ಎಂದರು. ಊರಲ್ಲಿ ಒಬ್ಬನೇ ಕೊಳ್ಳುವವನಿದ್ದರೆ ಅವನು ಹೇಳಿದ್ದೇ ದರ. ಆದರೆ 10 ಜನ ಬಂದರೆ ಸ್ಪರ್ಧೆ ಬರುತ್ತೆ. ಲಾಭ ಬರುತ್ತೆ. ರೈತ ವಿಚಾರಿಸುತ್ತಾನೆ. ಯಾರಿಗೆ ಮಾರಿದರೆ ಲಾಭ ಬರುತ್ತೋ, ಯಾರು ಜಾಸ್ತಿ ರೇಟ್ ಕೊಡ್ತಾರೋ ಅವನಿಗೆ ಮಾರುತ್ತಾರೆ ಎಂದಿದ್ದಾರೆ.

    ಎಲ್ಲದಕ್ಕೂ ವಿರೋಧ ಮಾಡಬೇಕು. ಬಿಜೆಪಿ-ಮೋದಿ ವಿರೋಧಿಸಬೇಕು. ಅದಕ್ಕೆ ಮುಖವಾಡ ತೊಟ್ಟಿಕೊಂಡು ಈ ಕೆಲಸ ಮಾಡುತ್ತಾರೆ ಅಷ್ಟೆ. ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದಿದ್ದಾರೆ. ಈಗಿರೋ ಎಪಿಎಂಸಿ ಕಾಯ್ದೆಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನ ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂದು ಇದೆ. ಬೆಳೆದಿರೋನು ರೈತ, ಬೆವರು ಸುರಿಸಿರೋನು ರೈತ. ಅವನಿಗೆ ಇಷ್ಟ ಬಂದೆಡೆ ಮಾರಾಟ ಮಾಡುತ್ತಾನೆ. ತಿದ್ದುಪಡಿ ಮಾಡಿರೋ ಕಾಯ್ದೆ ದೇಶದಲ್ಲಿ ಎಲ್ಲಿ ಬೇಕಾದ್ರು ಮಾರಬಹುದು. ಈ ಕಾಯ್ದೆ ರೈತನಿಗೆ ಸ್ವತಂತ್ರ ಕೊಟ್ಟಿರೋದು. ಅವನಿಗೆ ಸಹಾಯ ಮಾಡಿರೋ ಕಾಯ್ದೆ ಇದು ಎಂದಿದ್ದಾರೆ. ಮುಂಚೆ ಮೋಸ ಮಾಡಿರೋ ಕಾಯ್ದೆ ಇತ್ತು. ದಲ್ಲಾಳಿಗಳು ಬಲಿತಿದ್ರು. ಈಗ ರೈತ ಬಲಿಯುತ್ತಾನೆ. ತಾತ್ಕಾಲಿಕವಾಗಿ ಸುಳ್ಳು ಹೇಳಿಕೊಂಡು ತಿರುಗಬಹುದು. ಮುಂದೆ ಹೋಗ್ತಾ-ಹೋಗ್ತಾ ಸತ್ಯ ಏನು ಅಂತ ಗೊತ್ತಾಗುತ್ತಲ್ಲ ಎಂದರು. ನಾವು ಜನಜಾಗೃತಿ ಮಾಡ್ತೀವಿ. 90 ಪರ್ಸೆಂಟ್ ರೈತರು ನಮ್ಮ ಜೊತೆ ಇದ್ದಾರೆ. ಅದಕ್ಕೆ ಯಾರೂ ರೈತರು ಬೀದಿಗೆ ಇಳಿದಿಲ್ಲ.

    ನಾನು ರೈತ ಚಳುವಳಿಯಿಂದ ಬಂದವನು : ನಾನು ರೈತ ಚಳುವಳಿಯಿಂದ 1983, 84, 85ರವರೆಗೂ ರೈತ ಚಳುವಳಿಯಲ್ಲಿದ್ದು, ಅಲ್ಲಿಂದ ರಾಜಕೀಯ ಜೀವನ ಪ್ರಾರಂಭ ಮಾಡಿದೋನು. ರೈತರ ತಾಕತ್ತೇನು ಅಂತ ನನಗೆ ಗೊತ್ತು. ರೈತರು ಬೀದಿಗೆ ಇಳಿದರೆ ಯಾವ ಸರ್ಕಾರನೂ ಉಳಿಯಲ್ಲ. ಇವರ ಜೊತೆ ಯಾರು ಬೀದಿಗೆ ಇಳಿದವರು. ದಿನಾ ಬಿಜೆಪಿ ವಿರೋಧಿಸುವ ಒಂದು ಸೆಟ್ ಜನ ಮಾತ್ರ ಇಂದು ಬೀದಿಗೆ ಇಳಿದವರು. ಅವರು ದಿನಾ ಬೈಯೋರು. ಚೀನಾ-ಭಾರತ ಯುದ್ಧವಾದರೆ ಭಾರತವನ್ನ ಬೈಯೋರು. ಭಾರತ-ಪಾಕಿಸ್ತಾನ ಜಗಳ ಮಾಡಿದರೆ ಭಾರತವನ್ನೇ ಬೈಯೋರು. ಈ ಜನ ಮಾತ್ರ ಇಂದು ಬೀದಿಗೆ ಇಳಿದವರು. ರೈತರು ನಮ್ಮ ಜೊತೆಯೇ ಇದ್ದಾರೆ ಎಂದಿದ್ದಾರೆ.

  • ರಾಜ್ಯ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ- ಬಿಸಿಲನಾಡು ಸ್ತಬ್ಧ

    ರಾಜ್ಯ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ- ಬಿಸಿಲನಾಡು ಸ್ತಬ್ಧ

    ರಾಯಚೂರು: ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗೆ ವಿರೋಧಿಸಿ ರೈತ, ಕಾರ್ಮಿಕ ಸಂಘಟನೆಗಳಿಂದ ಕರೆ ನೀಡಲಾದ ಕರ್ನಾಟಕ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಅಂಗಡಿ ಮುಗ್ಗಟ್ಟು, ತರಕಾರಿ ಮಾರಾಟ, ಹೋಟೆಲ್ ವ್ಯಾಪಾರ, ಸಾರಿಗೆ ಬಸ್ ಸಂಚಾರ, ಎಂಪಿಎಂಸಿ ಎಲ್ಲವೂ ಸ್ಥಬ್ಧವಾಗಿತ್ತು. ರೈತ ಹೋರಾಟಕ್ಕೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಸಾಥ್ ನೀಡಿದರು.

    ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಯ್ದೆ ಹಿಂಪಡೆಯಲು ಆಗ್ರಹಿಸಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆ ಕಾರ್ಯಕರ್ತರು, ಕಾಂಗ್ರೆಸ್, ಜೆಡಿ ಎಸ್ ಮುಖಂಡರು ಭಾಗವಹಿಸಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

    ರಾಯಚೂರು ನಗರ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲೂ ಬಂದ್ ಜೋರಾಗಿತ್ತು. ಪ್ರತಿಭಟನಾ ಮೆರವಣಿಗೆ ಹಾಗೂ ನಿರಂತರ ಹೋರಾಟಗಳು ನಡೆದವು. ಕೇಂದ್ರ ಸರ್ಕಾರ ರೈತನಿಗೆ ಅನ್ನದಾತ ಅಂತ ಹೇಳುತ್ತಲೇ ಬೆನ್ನಿಗೆ ಚೂರಿ ಹಾಕುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಾದ್ಯಂತ ಬಂದ್ ಯಶಸ್ವಿಯಾಗಿದ್ದು ಎಲ್ಲೂ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲಾಯಿತು.

  • ಗದ್ದಲದ ನಡ್ವೆ ಕೃಷಿ ಮಸೂದೆಗಳು ವಿಧಾನಸಭೆಯಲ್ಲಿ ಪಾಸ್

    ಗದ್ದಲದ ನಡ್ವೆ ಕೃಷಿ ಮಸೂದೆಗಳು ವಿಧಾನಸಭೆಯಲ್ಲಿ ಪಾಸ್

    -ವಿಧೇಯಕದ ಪ್ರತಿ ಹರಿದು ಸಿದ್ದರಾಮಯ್ಯ ಆಕ್ರೋಶ
    -ರಾಜ್ಯ ಸರ್ಕಾರಕ್ಕೆ ರೈತರಿಂದ ಹಿಡಿ ಶಾಪ

    ಬೆಂಗಳೂರು: ವಾರದ ಹಿಂದೆ ಕೃಷಿ ಬಿಲ್ ಬಿಲ್ ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಮಸೂದೆ ಪ್ರತಿ ಹರಿದು ಆಕ್ರೋಶ ಹೊರ ಹಾಕಿದ್ದರು. ಇದೀಗ ವಿಧಾನಸಭೆಯಲ್ಲೂ ಇದೇ ರೀತಿಯ ಘಟನೆ ಮರುಕಳಿಸಿದೆ. ವಿಪಕ್ಷ ಸದಸ್ಯರು ಭೂ ಸೂಧಾರಣಾ ತಿದ್ದುಪಡಿ ವಿಧೇಯಕದ ಪ್ರತಿಗಳು ಹರಿದು ಹಾಕಿದರು. ವಿಪಕ್ಷಗಳ ಗದ್ದಲ ಗಲಾಟೆ, ರೈತರ ಪ್ರತಿಭಟನೆಗಳ ನಡುವೆ ಅಧಿವೇಶನದ ಕೊನೆಯ ದಿನವಾದ ಇಂದು ಭೂಸುಧಾರಣಾ ತಿದ್ದುಪಡಿ ವಿಧೇಯಕ ಮತ್ತು ಎಪಿಎಂಸಿ ಬಿಲ್‍ಗಳಿಗೆ ವಿಧಾನಸಭೆಯ ಒಪ್ಪಿಗೆಯನ್ನು ಸರ್ಕಾರ ಪಡೆದುಕೊಂಡಿದೆ.

    ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಪೋರೇಟ್ ಕಂಪನಿಗಳ ಲಾಬಿಗೆ ಮಣಿದಿರೋ ಸರ್ಕಾರ ಇದನ್ನು ಜಾರಿಗೆ ತರಲು ಮುಂದಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆಪಾದಿಸಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಈ ಕಾಯ್ದೆಯನ್ನ ತಂದರೆ 1964ರ ಹಿಂದಕ್ಕೆ ಹೋಗ್ತೇವೆ. ಇಲ್ಲಿಯವರೆಗೆ ಉಳುವವನೇ ಭೂ ಒಡೆಯ ಅನ್ನುವಂತಿತ್ತು. ಆದರೆ ಈಗ ಅದು ಉಲ್ಟಾ ಆಗಲಿದೆ. ಎಪಿಎಂಸಿಗಳು ಮುಚ್ಚಬಹುದಾದ ಆತಂಕವಿದೆ ಅಂತಾ ಆಕ್ಷೇಪ ವ್ಯಕ್ತಪಡಿಸಿದರು.

    ವಿಪಕ್ಷಗಳಿಗೆ ಸ್ಪಷ್ಟನೆ ಕೊಟ್ಟ ಸಿಎಂ ಬಿ.ಎಸ್.ಯಡಿಯೂರಪ್ಪ, ಸಣ್ಣ ಹಿಡುವಳಿದಾರರ ಹಿತ ಕಾಯಲು ಸರ್ಕಾರ ಬದ್ಧ. ಯಾವುದೇ ಆತಂಕ ನಿಮಗೆ ಬೇಡ ಎಂದರು. ಸಚಿವ ಅಶೋಕ್ ಮಾತನಾಡಿ, ಈ ತಿದ್ದುಪಡಿ ಕಾಯ್ದೆ ತಂದಿದ್ದು ನಾವಲ್ಲ. 2004ರಲ್ಲಿ ಕಂದಾಯ ಸಚಿವರಾಗಿದ್ದವರು ಅಂದ್ರು. ಇನ್ನು ರೈತರನ್ನು ಕೇಳಿ ಎಪಿಎಂಸಿ ಬಿಲ್ ತಂದ್ರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಕೌಂಟರ್ ಕೊಟ್ಟ ಸಚಿವ ಸಿಟಿ ರವಿ, ಲೋಕಸಭೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಸ್ತಾಪಿಸಿದ್ದನ್ನು ಎತ್ತಿ ತೋರಿಸಿದರಿ. ಈ ವೇಳೆ ಭಾರೀ ಗದ್ದಲ ನಡೀತು.

    ಸಿದ್ದರಾಮಯ್ಯನವರು ಸೇರಿ ಹಲವರು ವಿಧೇಯಕ ಪ್ರತಿ ಹರಿದು ಹಾಕಿ, ಸಭಾತ್ಯಾಗ ಮಾಡಿದರು. ಇದರ ಮಧ್ಯೆಯೇ ಧ್ವನಿಮತದ ಮೂಲಕ ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆಯಿತು. ಪರಿಷತ್‍ನಲ್ಲಿಯೂ ಭೂಸುಧಾರಣೆ ಬಿಲ್‍ಗೆ ಸರ್ಕಾರ ಒಪ್ಪಿಗೆ ಪಡೆದಿದೆ. ಎಪಿಎಂಸಿ ಬಿಲ್ ಮೇಲೆ ಚರ್ಚೆ ನಡೆಯುತ್ತಿದೆ.

  • ಎಪಿಎಂಸಿ ಕಾಯ್ದೆ ವಿರೋಧಿಸುವವರು ಚರ್ಚೆಗೆ ಬರಲಿ: ಸಚಿವ ಸಿ.ಟಿ.ರವಿ

    ಎಪಿಎಂಸಿ ಕಾಯ್ದೆ ವಿರೋಧಿಸುವವರು ಚರ್ಚೆಗೆ ಬರಲಿ: ಸಚಿವ ಸಿ.ಟಿ.ರವಿ

    – ಕಾಯ್ದೆಯಿಂದ ನಷ್ಟ ಯಂಕ-ನಾಣಿ-ಸೀನನಿಗೆ, ರೈತರಿಗಲ್ಲ

    ಚಿಕ್ಕಮಗಳೂರು: ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುವವರಿಗೆ ಸಚಿವ ಸಿ.ಟಿ.ರವಿ ಸಾರ್ವಜನಿಕ ಚರ್ಚೆಗೆ ಆಹ್ವಾನ ನೀಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವಿರೋಧಕ್ಕಾಗಿ ವಿರೋಧ ಮಾಡೋದು ಅರ್ಥಹೀನ. 2003ರಲ್ಲಿ ಡ್ರಾಫ್ಟ್ ಆಯ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಆ ಡ್ರಾಫ್ಟ್ ನ ಪರಿಷ್ಕರಣೆ ಮಾಡಿ ಮಾಡೆಲ್ ಡ್ರಾಫ್ಟ್ ಆದ ಬಳಿಕ 16 ರಾಜ್ಯಗಳು ಅದನ್ನು ಒಪ್ಪಿಕೊಂಡವು. ಈಗ ಅದನ್ನು ಇನ್ನಷ್ಟು ಸುಧಾರಣೆ ಮಾಡಿ ರೈತ ಸ್ನೇಹಿಯಾಗಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ. ಅದನ್ನು ವಿರೋಧ ಮಾಡುವವರಿಗೆ ನಾನು ಸಾರ್ವಜನಿಕ ಚರ್ಚೆಗೆ ಆಹ್ವಾನ ಮಾಡುತ್ತೇನೆ ಎಂದಿದ್ದಾರೆ.

    ಈ ಕಾಯ್ದೆಯಿಂದ ರೈತರಿಗೆ ಏನು ತೊಂದರೆ ಆಗುತ್ತೆ ಹೇಳಿ ಎಂದು ವಿರೋಧಿಸುವವರಿಗೆ ಪ್ರಶ್ನಿಸಿದ್ದಾರೆ. ಹೆಚ್ಚು ಜನ ಖರೀದಿದಾರರು ಹುಟ್ಟಿಕೊಂಡರೆ ರೈತರಿಗೆ ಲಾಭ ಹೆಚ್ಚೋ ವಿನಃ ನಷ್ಟವಲ್ಲ. ಯಾರು ಹೆಚ್ಚು ಬೆಲೆ ಕೊಡುತ್ತಾರೆ. ಎಲ್ಲಿ ಹೆಚ್ಚು ಲಾಭ ಸಿಗುತ್ತೆ ರೈತರು ಅಲ್ಲಿ ಹೋಗಿ ಮಾರಬಹುದು. ಸ್ಪರ್ಧೆ ಬೆಳೆಯುತ್ತೆ, ಅವಕಾಶ ಹೆಚ್ಚಾದಾಗ ರೈತರು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಸಿಗುತ್ತೆ ಎಂದು ತಿಳಿಸಿದರು.

    ಹೋಗಿ ಬೀದಿಗೆ ಸುರಿಯಬೇಕು. ಇಲ್ಲ ಕೇಳಿದಷ್ಟು ದರಕ್ಕೆ ಕೊಡುವ ವ್ಯವಸ್ಥೆ ಹೋಗಿ ಹಲವು ಮಾರ್ಗ, ಮಾರುಕಟ್ಟೆಗಳು ಹುಟ್ಟಿಕೊಂಡಾಗ ಮಾರುವ ಅವಕಾಶ ಹೆಚ್ಚಿರುತ್ತೆ. ಎಲ್ಲಿ ಲಾಭ ಸಿಗುತ್ತೊ ಅಲ್ಲಿಗೆ ರೈತರು ಮಾರುತ್ತಾರೆ. ಇದನ್ನು ವಿರೋಧ ಮಾಡೋದು ಅರ್ಥಹೀನ ಎಂದು ವಿರೋಧಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ತೊಂದರೆಯಾಗುತ್ತೆ. ಯಾರಿಗೆ ಅಂದರೆ ತಮ್ಮದೆ ವಿಂಗ್ ಮಾಡಿಕೊಂಡು ರೇಟ್ ರೈಸ್ ಆಗದಂತೆ ನೋಡಿಕೊಳ್ಳುತ್ತಿದ್ದ ಯಂಕ, ನಾಣಿ, ಸೀನರ ಆಟ ಬಂದ್ ಆಗಲಿದೆ ಎಂದಿದ್ದಾರೆ. ಅಂದರೆ ಈ ಕಾಯ್ದೆಯಿಂದ ರೈತರಿಗೆ ಅನುಕೂಲವಾಗಲಿದ್ದು, ಮಧ್ಯವರ್ತಿಗಳಿಗೆ ತೊಂದರೆಯಾಗಲಿದೆ. ಹಾಗಾಗಿ ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವವರು ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.