Tag: apia

  • ಇನ್ನು ಮುಂದೆ ಪತ್ನಿಯ ಹುಟ್ಟುಹಬ್ಬ ಮರೆತರೆ ಪತಿಗೆ ಜೈಲೇ ಗತಿ!

    ಇನ್ನು ಮುಂದೆ ಪತ್ನಿಯ ಹುಟ್ಟುಹಬ್ಬ ಮರೆತರೆ ಪತಿಗೆ ಜೈಲೇ ಗತಿ!

    ಸಮೋವಾ: ಪತ್ನಿಯರಿಗೆ ಪತಿ ಪ್ರೀತಿ ತೋರಿಸಬೇಕು, ತಮ್ಮನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಅನಿಸುವುದು ಸಹಜ. ಅದೇ ರೀತಿ ತನ್ನ ಹುಟ್ಟುಹಬ್ಬ ನೆನಪಿನಲ್ಲಿ ಇಟ್ಟುಕೊಂಡು ಅದ್ದೂರಿಯಿಂದ ಆಚರಿಸಬೇಕು ಎಂದು ಅನಿಸುತ್ತೆ. ಆದರೆ ಇಲ್ಲಿ ರೂಪಿಸಿರುವ ಕಾನೂನಿನ ಪ್ರಕಾರ ಒಂದು ವೇಳೆ ಪತಿ ಏನಾದರೂ ಹೆಂಡತಿಯ ಹುಟ್ಟುಹಬ್ಬ ಮರೆತರೆ ಆತ ಡೈರೆಕ್ಟ್ ಜೈಲು ಪಾಲು.

    ಹೌದು, ಇದು ನಿಜ. ಏನಿದು ಗಂಡ ಹೆಂಡತಿಯ ಹುಟ್ಟುಹಬ್ಬ ಮರೆತೆರೆ ಜೈಲಾ! ಎಂದು ಹುಬ್ಬೆರಿಸುತ್ತಿದ್ದೀರಾ, ಈ ಕಾನೂನು ಜಾರಿಯಾಗಿರುವುದು ನಿಜ. ಪೆಸಿಫಿಕ್ ಮಹಾಸಾಗರದ ಪಾಲಿನೇಷನ್ ಪ್ರದೇಶದ ಸಮೋವಾ ದ್ವೀಪದಲ್ಲಿ ಇಂತಹದ್ದೊಂದು ಕಾನೂನು ಜಾರಿಯಲ್ಲಿದೆ. ಪತ್ನಿಯ ಹುಟ್ಟುಹಬ್ಬವನ್ನು ಪತಿ ಆಚರಿಸಲೇ ಬೇಕು ಎಂಬ ನಿಯಮ ಇಲ್ಲಿ ಕಡ್ಡಾಯವಾಗಿದೆ. ಒಂದು ವೇಳೆ ಪತಿ ಏನಾದರೂ ಅಸಡ್ಡೆ ತೋರಿಸಿದರೆ ಆತನಿಗೆ ಜೈಲು ಗ್ಯಾರಂಟಿ.

    ಹಾಗಾದರೆ ಗಂಡನ ಹುಟ್ಟುಹಬ್ಬವನ್ನು ಹೆಂಡತಿ ಅಷ್ಟೇ ಗಮನಕೊಟ್ಟು ಮಾಡಬೇಕಾ! ಎಂಬುದಕ್ಕೆ ಉತ್ತರ ಇಲ್ಲ. ಏಕೆಂದರೆ ಇಲ್ಲಿ ಗಂಡ ಮಾತ್ರ ಹೆಂಡತಿಯ ಹುಟ್ಟುಹಬ್ಬಕ್ಕೆ ಹೆಚ್ಚು ಗಮನಕೊಟ್ಟು ಮಾಡಬೇಕು. ಒಂದು ವೇಳೆ ಪತಿಯ ಮೇಲೆ ಪತ್ನಿಗೆ ಅಷ್ಟು ಪ್ರೀತಿ ಇದ್ದರೆ ಆತನಿಗೆ ಇಷ್ಟವಾದ ಯಾವುದಾದರೂ ತಿಂಡಿ ಮಾಡಿದರೆ ಸಾಕು. ಅದು ಇಲ್ಲ ಎಂದರೆ ಆತ ಪತ್ನಿ ಏನು ಮಾಡುತ್ತಾಳೋ  ಅದನ್ನು ತಿಂದು ಮಲಗಬಹುದು. ಇದನ್ನೂ ಓದಿ:  ಜನವರಿಯಿಂದ ಮಕ್ಕಳಿಗೂ ಸಿಗಲಿದೆ ಲಸಿಕೆ?

    ಒಂದು ವೇಳೆ ಗಂಡ ಏನಾದರೂ ಹೆಂಡತಿಯ ಹುಟ್ಟುಹಬ್ಬದ ಸಮಯದಲ್ಲಿ ಮೈಮರೆತರೆ ಅಥವಾ ದುಡ್ಡಿಲ್ಲವೆಂದು ಸುಮ್ಮನಾದರೆ ಆತನ ಕಥೆ ಮುಗಿಯಿತು ಎಂದೇ ಅರ್ಥ. ಆತ ಮಾತ್ರ ಹೆಂಡತಿ ಯಾವ ರೀತಿ ಹುಟ್ಟುಹಬ್ಬ ಆಚರಿಸಬೇಕು ಎಂದು ಕೇಳುತ್ತಾಳೆ ಅಂದೇ ರೀತಿ ಆಕೆಯ ಹುಟ್ಟುಹಬ್ಬ ಆಚರಿಸಬೇಕು. ಒಂದು ವೇಳೆ ಹಣವಿಲ್ಲವೆಂದು ಬಿಟ್ಟರೆ ಆತನನ್ನು ಪೊಲೀಸರು ಬಂದು ಕರೆದುಕೊಂಡು ಹೋಗುತ್ತಾರೆ.

    ಮೊದಲ ಬಾರಿ ಈ ರೀತಿ ತಪ್ಪು ಆದರೆ ಆತನನ್ನು ಕ್ಷಮಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ. ಮತ್ತೊಮ್ಮೆ ತಪ್ಪು ಪುನಾರವರ್ತನೆಯಾದರೆ ಹೆಂಡತಿಯ ಕೆಂಗಣ್ಣಿಗೆ ಗುರಿಯಾಗಿ ಪತಿರಾಯ ಜೈಲು ಸೇರುತ್ತಾನೆ. ಇದನ್ನೂ ಓದಿ: ಐಎಎಫ್ ಗ್ರೂಪ್ ಕ್ಯಾಪ್ಟನ್ ಅಭಿನಂದನ್‍ಗೆ ವೀರ ಚಕ್ರ ಪ್ರಶಸ್ತಿ

    ಈ ರೀತಿಯ ವಿಚಿತ್ರ ಕಾನೂನುಗಳು ಕೇಳಲು ಹಾಸ್ಯವೆನಿಸಿದರೂ ಅದನ್ನು ಅನುಭವಿಸುತ್ತಿರುವವರಿಗೇ ಅದರ ಕಷ್ಟ ಗೊತ್ತಿರುತ್ತೆ. ಇದೇ ರೀತಿ ಹಲವು ವಿಚಿತ್ರವಾದ ಕಾನೂನುಗಳನ್ನು ನಾವು ವಿವಿಧ ದೇಶಗಳಲ್ಲಿ ನೋಡಬಹುದು. ಉತ್ತರ ಕೋರಿಯಾದಲ್ಲಿ ನೀಲಿ ಬಣ್ಣದ ಜೀನ್ಸ್ ಧರಿಸಿ ಮನೆಯಿಂದ ಹೊರ ಬಂದರೆ ಅವರಿಗೆ ಶಿಕ್ಷೆ ಕಾಯಂ. ಪೂರ್ವ ಅಫ್ರಿಕಾದಲ್ಲಿ ಜಾಗಿಂಗ್ ಮಾಡುವಂತಿಲ್ಲ. ಸಿಂಗಾಪುರದಲ್ಲಿ ಚೂಯಿಂಗ್ ಗಂ ಜಗಿಯುವುದೇ ನಿಷಿಧವಾಗಿದೆ. ಇದೇ ರೀತಿ ಹಲವು ದೇಶ-ವಿದೇಶಗಳಲ್ಲಿ ಚಿತ್ರ-ವಿಚಿತ್ರವಾದ ಕಾನೂನುಗಳಿದ್ದು, ಕೇಳುಗರಿಗೆ ಹಾಸ್ಯವೆನಿಸಿದರೆ ಅನುಭವಿಸುವವರಿಗೆ ಪ್ರಾಣ ಸಂಕಟವಾಗಿರುತ್ತೆ.