Tag: Aparna

  • ಪದವಾಗಿ ಸತ್ತರೂ ಪದ್ಯವಾಗಿ ಬದುಕಬಹುದು- ಅಪರ್ಣಾರನ್ನು ನೆನೆದು ಕವನ ಬರೆದ ಪತಿ

    ಪದವಾಗಿ ಸತ್ತರೂ ಪದ್ಯವಾಗಿ ಬದುಕಬಹುದು- ಅಪರ್ಣಾರನ್ನು ನೆನೆದು ಕವನ ಬರೆದ ಪತಿ

    ನಿರೂಪಕಿ ಅಪರ್ಣಾ (Aparna) ನಿಧನ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತವುಂಟು ಮಾಡಿದೆ. ಇದರ ನಡುವೆ  ಅಪರ್ಣಾ ನೆನೆದು ಪತಿ ಕವನ ಬರೆದಿದ್ದಾರೆ. ಪದವಾಗಿ ಸತ್ತರೂ ಪದ್ಯದ ಮೂಲಕ ಬದುಕಬಹುದು ಎಂದು ಅಪರ್ಣಾ ಕುರಿತು ಪತಿ ನಾಗರಾಜ್ ವಸ್ತಾರೆ (Nagaraj Vastarey) ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಪತ್ನಿಯನ್ನು ನೆನೆದು ಬರೆದ ಸಾಲುಗಳು ಹೀಗಿವೆ. ಇದನ್ನೂ ಓದಿ:ನಾನು ಬೆಂಕಿಯ ಹಾದಿಯಲ್ಲಿ ಸಾಗಿದ್ದೇನೆ: ವೈಯಕ್ತಿಕ ಜೀವನದ ಬಗ್ಗೆ ಮೌನ ಮುರಿದ ಸ್ಯಾಮ್

    ಕಚ್ಚುವ ಹಾವಿನ ಹಲ್ಲಡಿಗೇ ಕಡಿತದ ನಂಜು ತೆಗೆಯುವ
    ಮದ್ದುಂಟೆಂದು ಕೇಳಪಟ್ಟಿದ್ದೇನೆ
    ಯಾವುದೋ ದೇಶದ ಎಂಥದೋ ಕೆಲಮಂದಿ
    ಮೈನಂಜಾಗಿ ನರಳುವವರ ಮೇಲೆ ಹಾವು ಹರಿಯಿಸಿ ವಿಷ ತೆಗೆದಿದ್ದುಂಟಂತೆ
    ಇದ್ದರೂ ಇರಬಹುದು
    ಯಾಕೆಂದರೆ ಮದ್ದಿಗೆ ತಕ್ಕ ಮರುಮದ್ದು ಆ ಮದ್ದೊಳಗೇನೆ ಇದ್ದೀತು
    ಉದಾಹರಣೆಗೆ ಕನ್ನಡದ ಮದ್ದನ್ನೇ ತೆಗೆದುಕೊಳ್ಳಿ
    ಅದು ಕೇಡೆಸಗುವ ಮದ್ದೂ ಆಗಬಹುದು
    ಹುಷಾರು ತಪ್ಪಿದರೆ ಮೈಸಂತಯಿಸಿ ಸಲಹುವ ಔಷಧವೂ ಆಗಬಹುದು
    ಅಂದಮೇಲೆ ಮದ್ದು ಮಾಡುವುದೆಂದರೆ ಎರಡೂ ಹವುದು
    ಹಾಗೇ ಹಾವಿನ ವಿಷದೊಳಗೆ ಇವೆರಡೂ ಇರಬಹುದು
    ವಿಷದೊಳಗೇ ಪ್ರತಿವಿಷವುಂಟೆಂದು ಲೋಕರೂಢಿ
    ಪದಕ್ಕೆ ತಕ್ಕ ಪ್ರತಿಪದವಾದರೂ ಪದದೊಳಗೇ ಇರುವುದು
    ಕೆಲವೊಮ್ಮೆ ಪದವೇ ಪದ ಹುಟ್ಟಿಸುವುದು
    ಅಂದರೆ ಪ್ರತಿ ಪದಕ್ಕೂ ಪ್ರತಿಪದವಿರುವುದು
    ಹುಟ್ಟಿಗೆ ಸಾವು ಬಿಚ್ಚಿಗೆ ಕಟ್ಟಿರುವ ಹಾಗೆ ಪಟ್ಟುಪಟ್ಟಿಗೂ
    ಮರುಪಟ್ಟಿರುವುದು ಹವುದು
    ಮುಯಿಗೆ ಮುಯಿ ಅನ್ನುವರಲ್ಲ ಬಹುಶಃ ಹಾಗೇ
    ಇನ್ನು ಪದಪದಕ್ಕು ದಪದಪಕ್ಕೂ ವ್ಯತ್ಯಾಸವೇನು
    ಬರೇ ಪದಪದದಿಂದಲೇ ದಪದಪ ರಾಚಬಹುದು
    ದಪದಪವೆನ್ನುತ್ತಲೇ ಪದಬರೆದು ಚಚ್ಚಬಹುದು
    ಕೊಲ್ಲುವ ಖಡುಗವೇ ಕಾಯಲುಂಟೆಂಬುದು ಹಳೆಯ ಮಾತು
    ಕಚ್ಚಿದ ಹಾವು ನಂಜೊಡನೆ ಮದ್ದೂ ಇಳಿಬಿಡುವುದೆಂದು
    ಇನ್ನೊಂದು ಅಂಬೋಣ
    ಅಂದರೆ ನಂಜೊಳಗಿನ ನಂಜಾಗಿ ಮದ್ದಿರುವುದು
    ಅದನ್ನು ಆಯ್ದು ಸೋಸಿ ಮದ್ದಾಗಿಸಿಕೊಳ್ಳುವುದೂ ವಿದ್ಯೆಯೇ
    ಇದೇ ನೇರಕ್ಕೆ ಸದ್ದೊಳಗಿನ ಸದ್ದಾಗಿ ತುಸು ಮೌನವಿದ್ದೀತು
    ಮೌನವಾದರೂ ಸದ್ದಿಲ್ಲದ ಸದ್ದಿನದೇ ತುಸುತುಣುವು
    ಈ ನಡುವೆ ಬದುಕನ್ನು ಹಾವಿಗೆ ಹೋಲಿಸಬಹುದು
    ತನ್ನ ತಾನೇ ತಿನ್ನಹೊಂಚುವ ಹಾವಿಗೆ
    ಬಾಯೊಳಕ್ಕೆ ಬಾಲವಿರಿಸಿ ಉಣ್ಣಹೊರಟ ಹಾವು
    ಈ ಬದುಕಿನ ವರ್ತುಲವನ್ನೇ ಕುರಿತಾಡೀತು
    ಹುಟ್ಟಿ ಸತ್ತು ಸತ್ತು ಹುಟ್ಟಿ ಹುಟ್ಟಿ ಸತ್ತು ಸತ್ತು ಹುಟ್ಟಿ
    ಹೀಗೆ ಮತ್ತೆ ಮತ್ತೆ ತೆತ್ತು ಇತ್ತು ಇತ್ತು ತೆತ್ತು ತೆತ್ತು ಇತ್ತು ಇತ್ತು ತೆತ್ತು
    ಜೀವ ತೆತ್ತಷ್ಟೇ ಜೀವವಿತ್ತು ಜೀವವಿತ್ತಷ್ಟೇ ಜೀವ ತೆತ್ತು
    ಬದುಕಿನ ಬೇಸಾಯಕ್ಕೆ ಸಾವನ್ನೊತ್ತೆಯಿಟ್ಟು
    ಸಾವಿನ ಸಾಗುವಳಿಗೆ ಬದುಕನ್ನೇ ಕತ್ತೆಯಾಗಿಸಿಬಿಟ್ಟು
    ಕೆಲವೊಮ್ಮೆ ತನಗೂ ಮಿಕ್ಕು ದೊಡ್ಡ ಸಂಗತಿಯನ್ನೇ ನುಂಗಲೆಣಿಸುವ
    ಹಾವು ಸಾವುಬದುಕಿನ ರೂಪಕವಲ್ಲವೇನು
    ಕೆಲವೊಮ್ಮೆ ಪದ್ಯವೂ ತನಗೂ ದೊಡ್ಡದಾದ ರೂಪಕವನ್ನು
    ನುಂಗಿ ತೇಗಬೇಕು
    ಕ್ಯಾನ್ಸರಿರುವ ಮೈಯಿ ತನ್ನನ್ನು ತಾನೇ ನುಂಗಲೆಣಿಸುವುದಿಲ್ಲವೇ
    ಥೇಟು ಹಾಗೆ
    ಇದು ಅದನ್ನೂ ಅದು ಇದನ್ನೂ ಒಂದೇ ಸಮ ಕಬಳಿಸಲೆಣಿಸುವುದಲ್ಲವೇ
    ಥೇಟು ಹಾಗೆ
    ಅದೂ ಇದೂ ಒಂದೇ ಧಾತುವಿನ ಎರಡು ಮೊಹರಂತಲ್ಲವೇ
    ಥೇಟು ಹಾಗೆ
    ಖೀಮೋಥೆರಪಿಯೆಂದು ವಿಷವನ್ನೂಡಿ
    ಮೈಯನ್ನು ಅದರ ಉಳಿಗಾಲಕ್ಕೆಂದು ಅಷ್ಟಿಷ್ಟೇ ಅಳಿಸುವುದಿಲ್ಲವೇ
    ಥೇಟು ಹಾಗೆ
    ಸತ್ತು ಸತ್ತು ಬದುಕುವ ಪರಿಯೇನೆಂದು ಕ್ಯಾನ್ಸರುಮದ್ದು
    ತಿಳಿಹೇಳಬಹುದು
    ಮದ್ದೇ ನಂಜೆಂದು ನಂಜೇ ಮದ್ದೆಂದು ಕಂಡವರಿಗಿಂತ
    ಉಂಡವರು ಹೇಳಬಹುದು
    ಇದ್ದೇನು ಗೆದ್ದೇನೆಂದು ಗೆದ್ದೇನು ಇದ್ದೇನೆಂದು
    ಇದ್ದು ಗೆದ್ದ ಮೇಲೂ ಗೆದ್ದು ಇದ್ದ ಮೇಲೂ ಮಂತ್ರದಂತೆ ಸದಾ
    ಪಿಟಿಪಿಟಿಸಬಹುದು
    ಕೊಲ್ಲುವ ಖಡುಗವೇ ಕಾಯುವ ಸರಕೆಂದು ನಂಬಬಹುದು
    ಪದವಾಗಿ ಸತ್ತರೂ ಪದ್ಯವಾಗಿ ಬದುಕಬಹುದು
    (ಇದು 2023ರ ಜನವರಿಯಲ್ಲಿ ಬರೆದದ್ದು. ಅಪರ್ಣೆಯ ಚಿತ್ರ ಇದೇ 2024ರ ಏಪ್ರಿಲ್ 9ನೇ ತಾರೀಖಿನ ಯುಗಾದಿಯದ್ದು.)

  • ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್‌ ಆಗ್ರಹ

    ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್‌ ಆಗ್ರಹ

    ಬೆಂಗಳೂರು: ಮೆಟ್ರೋ ನಿಲ್ದಾಣಗಳಿಗೆ ನಟ ಶಂಕರ್‌ ನಾಗ್‌ ಮತ್ತು ನಟಿ, ನಿರೂಪಕಿ ಅಪರ್ಣಾ ಹೆಸರು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಒತ್ತಾಯಿಸಿದ್ದಾರೆ.‌

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಕನ್ನಡ ಚಿತ್ರರಂಗದ ಮೇರು ನಟ ಶಂಕರ್ ನಾಗ್ ಹಾಗೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಅಪರ್ಣಾ ಅವರ ಕೊಡುಗೆ ಕರ್ನಾಟಕಕ್ಕೆ ಹಾಗೂ ಕನ್ನಡಕ್ಕೆ ಅಪಾರವಾದುದು. ಶಂಕರ್ ನಾಗ್ (Shankar Nag) ಹಾಗೂ ಅಪರ್ಣಾ (Aparna) ಅವರ ಹೆಸರುಗಳನ್ನು ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಸರ್ಕಾರ ನಾಮಕರಣ ಮಾಡಲಿ ಎಂದು ಎಂದು ಯತ್ನಾಳ್‌ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: ವೀಕೆಂಡ್‌ ಮೋಜು-ಮಸ್ತಿ; ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು

    ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಿರೂಪಕಿ ಅಪರ್ಣಾ ಈಚೆಗೆ ನಿಧನರಾದರು. ಅಪರ್ಣಾ ಅವರ ನಿಧನಕ್ಕೆ ಗಣ್ಯರು, ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮ ಮೆಟ್ರೋ ದನಿಯಾಗಿದ್ದ ನಿರೂಪಕಿಗೆ ಮೆಟ್ರೋ ಕೂಡ ಗೌರವ ಸಲ್ಲಿಸಿತ್ತು.

  • ಕಂಬಳದಲ್ಲಿ ಅಪರ್ಣಾ ಜಾಣ ನಿರೂಪಣೆ – ನೆನಪಿನ ಬುತ್ತಿ ಬಿಚ್ಚಿಟ್ಟ ಸಂಸದ ಕೋಟ

    ಕಂಬಳದಲ್ಲಿ ಅಪರ್ಣಾ ಜಾಣ ನಿರೂಪಣೆ – ನೆನಪಿನ ಬುತ್ತಿ ಬಿಚ್ಚಿಟ್ಟ ಸಂಸದ ಕೋಟ

    – ಅಪರ್ಣಾ ಜಾಗ ಖಾಲಿಯಾಗಿಯೇ ಉಳಿಯಲಿದೆ

    ಉಡುಪಿ: ಅಪರ್ಣಾ (Aparna) ಕೊನೆಯುಸಿರೆಳೆಯುವ ಮೂಲಕ ಸ್ವಚ್ಛ ನಿರೂಪಣೆ, ಸ್ವರಭಾರ, ಕನ್ನಡದ ಧ್ವನಿ ಎಲ್ಲವೂ ಅಡಗಿಹೋಯಿತು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕಂಬನಿ ಮಿಡಿದರು.

    ಉಡುಪಿಯಲ್ಲಿ (Udupi) ಮಾತನಾಡಿದ ಅವರು, ಮಸಣದ ಹೂ ಚಿತ್ರದ ಮೂಲಕ ಅಪರ್ಣಾ ಚಿತ್ರಲೋಕಕ್ಕೆ ಪದಾರ್ಪಣೆ ಮಾಡಿದರು. ನಮ್ಮ ಸರ್ಕಾರ ಇದ್ದಾಗ ಮುಖ್ಯಮಂತ್ರಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳ ನಿರೂಪಣೆಗೆ ಅವರೇ ಬರುತ್ತಿದ್ದರು. ಕರಾವಳಿಯ ಕಂಬಳದ ಬಗ್ಗೆ ನಿರೂಪಣೆ ಮಾಡುವಾಗ, ಕಂಬಳದ ಗುರಿಕಾರ ಪ್ರಶಸ್ತಿ ಸ್ವೀಕರಿಸಲು ಬರಬೇಕು ಎಂದು ಹೇಳಿದ್ದರು. ಕಂಬಳದ ಬಗ್ಗೆ ಅಪರ್ಣಾಗೆ ಕಲ್ಪನೆ ಇರಲಿಲ್ಲ. ಆದರೆ ವಿಚಾರವನ್ನು ತಿಳಿದುಕೊಂಡು ನಿರೂಪಣೆ ಮಾಡುತ್ತಿದ್ದರು ಎಂದು ಹಿಂದಿನ ಅನುಭವವನ್ನು ಬಿಚ್ಚಿಟ್ಟರು.  ಇದನ್ನೂ ಓದಿ: Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್‌ ಪತ್ತೆ!

    ಕನ್ನಡದ ಕಾರ್ಯಕ್ರಮಕ್ಕೆ ಬಂದು ಯಜಮಾನರು ಕಂಬಳ ಕೋಣ ಓಡಿಸುವವರು ಸ್ಥಳದಲ್ಲಿದ್ದ ಎಲ್ಲರನ್ನು ಮಾತನಾಡಿಸಿ, ವಿಚಾರಗಳನ್ನು ಸಂಗ್ರಹಿಸಿ, ವೇದಿಕೆಯಲ್ಲಿ ನಿಂತು ಆಳ ಅಧ್ಯಯನ ಮಾಡಿ ಅರಿತವರಂತೆ ಮಾತನಾಡುವ ಚಾಕಚಕ್ಯತೆ ಅಪರ್ಣಾಗೆ ಇತ್ತು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಭಯಂಕರ ಸರ್ವಾಧಿಕಾರಿ, ಭ್ರಷ್ಟಾಚಾರಿ -‌ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್‍ಗೆ ಸಾಧ್ಯವೇ?: ಜೋಶಿ

    ಅಪರ್ಣಾ ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ನಿರೂಪಣೆಯ ಮೂಲಕ ಮೆರುಗು ನೀಡುತ್ತಿದ್ದರು. ಕನ್ನಡದ ಧ್ವನಿಯೊಂದು ಹುದುಗಿ ಹೋಗಿದೆ. ಅಪರ್ಣಾ ನಿಧನದಿಂದ ಕರ್ನಾಟಕವೇ ದುಃಖದಲ್ಲಿ ಮುಳುಗಿದೆ. ಅವರ ಧ್ವನಿ ಭಾರ ಜನಸಾಮಾನ್ಯರ ಮೇಲೂ ಪರಿಣಾಮ ಬೀರಿದೆ. ಅಪರ್ಣಾ ಕನ್ನಡದ ಮನೆಮಗಳು. ಅರ್ಪಣಾ ಅವರ ಜಾಗ ಖಾಲಿಯಾಗಿಯೇ ಉಳಿಯಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ – ಸಿಎಂ ಖಡಕ್‌‌ ಮಾತು

  • ಪಂಚಭೂತಗಳಲ್ಲಿ ಲೀನರಾದ ನಿರೂಪಕಿ ಅಪರ್ಣಾ

    ಪಂಚಭೂತಗಳಲ್ಲಿ ಲೀನರಾದ ನಿರೂಪಕಿ ಅಪರ್ಣಾ

    ನ್ನಡದ ಖ್ಯಾತ ನಟಿ ಕಮ್ ನಿರೂಪಕಿ ಅಪರ್ಣಾ (Aparna) ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ  ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದೆ. ಇದನ್ನೂ ಓದಿ:ಅಪರ್ಣಾಗೆ ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಎಂದು ಗೊತ್ತಿರಲಿಲ್ಲ: ಮಂಡ್ಯ ರಮೇಶ್

    2 ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಜು.11ರಂದು ಬನಶಂಕರಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗಕ್ಕೆ ಕಳೆದ 3 ದಶಕಗಳಿಂದ ಸೇವೆ ಸಲ್ಲಿಸಿರುವ ನಟಿಗೆ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿದೆ.

    ಈ ವೇಳೆ, ದುಃಖದಲ್ಲಿರುವ ಅಪರ್ಣಾ ಪತಿ ನಾಗರಾಜ್‌ಗೆ ಸೃಜನ್ ಧೈರ್ಯ ತುಂಬಿದ್ದಾರೆ. ಸೃಜನ್ ಲೋಕೇಶ್ ಸೇರಿದಂತೆ ಅನೇಕರು ಅಪರ್ಣಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.

    ಅಂದಹಾಗೆ, ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.

    ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪರ್ಣಾ, 2013 ರಲ್ಲಿ ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲಾಪ್ರಿಯರ ಮನಗೆದ್ದಿದ್ದರು. 2014 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆಗೆ ಧ್ವನಿ ಗೂಡಿಸಿದ್ದರು.

  • ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತದೆ: ಸೃಜನ್ ಲೋಕೇಶ್

    ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತದೆ: ಸೃಜನ್ ಲೋಕೇಶ್

    ನ್ನಡದ ನಿರೂಪಕಿ ಅಪರ್ಣಾ (Aparna) ನಿಧನದ ಬಗ್ಗೆ ನಟ ಸೃಜನ್ ಲೋಕೇಶ್ ಸಂತಾಪ ಸೂಚಿಸಿದ್ದಾರೆ. ನಟಿಯ ಅಂತಿಮ ದರ್ಶನದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತಲೇ ಇರುತ್ತದೆ ಎಂದು ಸೃಜನ್ (Srujan Lokesh) ಮಾತನಾಡಿದ್ದಾರೆ.

    ಅಪರ್ಣಾ ನಿಧನ ನಿಜಕ್ಕೂ ಬೇಸರ ಆಗಿದೆ. ಪುಟ್ಟಣ್ಣ ಕಣಗಲ್ ನಿರ್ದೇಶನದಲ್ಲಿ ಅಪರ್ಣಾ ನಟಿಸಿದ್ದಾರೆ. ನಾವು ಯಾವಾಗಲೂ ಅವರಿಗೆ ರೇಗಿಸುತ್ತಿದ್ವಿ. ಊರು ಹುಟ್ಟೋಕ್ಕೂ ಮುಂಚೆ ಹುಟ್ಟಿದವರು ನೀವು ಅಂತ. ಅಂದಿನ ಕಾಲದಿಂದಲೂ ಆ್ಯಕ್ಟಿಂಗ್ ಮಾಡ್ತಿದ್ದಾರೆ. ಎಷ್ಟೊಂದು ವರ್ಷಗಳ ಸಾಧನೆ ಅವರದ್ದು. ನಮ್ಮ ಚಿತ್ರರಂಗದಲ್ಲಿ ಲೆಜೆಂಡರಿ ಕಲಾವಿದೆ ಅಪರ್ಣಾ ಎಂದು ಸೃಜನ್ ಲೋಕೇಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ

    ಮೆಟ್ರೋದಲ್ಲೂ, ಫೋನ್‌ನಲ್ಲೂ ಎಲ್ಲಾ ಕಡೆ ಅಪರ್ಣಾದೇ ವಾಯ್ಸ್ ಕೇಳಿಸುತ್ತೆ. ಅವರು ಯಾವಾಗಲೂ ನಮ್ಮ ಜೊತೆಯೇ ಇರುತ್ತಾರೆ. ಅವರು ಎಂದಿಗೂ ಲೆಜೆಂಡಿರಿ ಅಭಿನೇತ್ರಿ, ನಿರೂಪಕಿ ಎಂದಿದ್ದಾರೆ. ನಮಗೆಲ್ಲಾ ಮಾರ್ಗದರ್ಶನ ಕೊಟ್ಟವರು. ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಸೃಜನ್‌ ಭಾವುಕರಾಗಿದ್ದಾರೆ.

    ಕಳೆದ ವಾರ ಅಷ್ಟೇ ಅವರ ಜೊತೆ ಮಾತನಾಡಿದ್ದೇ. ನಾನು ಮಜಾ ಟಾಕೀಸ್ ನೋಡಿದಾಗಲೆಲ್ಲಾ ನಾನು ಖುಷಿಯಾಗಿ ಇರುತ್ತೇನೆ ಎಂದು ಅಪರ್ಣಾ ನನ್ನ ಬಳಿ ಹೇಳಿಕೊಂಡಿದ್ದರು. ಅವರು ಇನ್ನಿಲ್ಲ ಅನ್ನೋ ನೋವು ಯಾವಾಗಲೂ ನಮ್ಮನ್ನು ಕಾಡುತ್ತಲೇ ಇರುತ್ತದೆ ಎಂದು ಸೃಜನ್ ಲೋಕೇಶ್ ಮಾತನಾಡಿದ್ದಾರೆ.

    ಅಂದಹಾಗೆ, ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಜು.11ರಂದು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.

  • ಅಪರ್ಣಾ ಎಂದಾಕ್ಷಣ ನೆನಪಾಗೋದು ಕನ್ನಡ: ರಮೇಶ್ ಅರವಿಂದ್

    ಅಪರ್ಣಾ ಎಂದಾಕ್ಷಣ ನೆನಪಾಗೋದು ಕನ್ನಡ: ರಮೇಶ್ ಅರವಿಂದ್

    ನ್ನಡದ ಹೆಸರಾಂತ ನಿರೂಪಕಿ ಅಪರ್ಣಾ (Aparna) ಜು.11ರಂದು ಕ್ಯಾನ್ಸರ್‌ನಿಂದ ವಿಧಿವಶರಾಗಿದ್ದಾರೆ. ಸ್ಯಾಂಡಲ್‌ವುಡ್ ಅನೇಕ ನಟ, ನಟಿಯರು ಅಪರ್ಣಾ ಅಂತಿಮ ದರ್ಶನ ಪಡೆದಿದ್ದಾರೆ. ಇದೀಗ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ನಟ ರಮೇಶ್ ಅರವಿಂದ್ (Ramesh Aravind) ಪ್ರತಿಕ್ರಿಯೆ ನೀಡಿದ್ದಾರೆ.

    ನನಗೆ ಅಪರ್ಣಾ ನಿರೂಪಣೆ ಮಾಡುವಾಗ ಆಶ್ಚರ್ಯ ಆಗುತ್ತಿತ್ತು. ಅಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು. ನಿರೂಪಣೆ ಬಗ್ಗೆ ಅವರದಲ್ಲಿದ್ದ ಆತ್ಮವಿಶ್ವಾಸ ಅದ್ಭುತ ಅನಿಸುತ್ತಿತ್ತು. ಅಪರ್ಣಾರನ್ನು ನೋಡಿದ್ರೆ ಗೌರವ ಬರುತ್ತದೆ. ಎಂದಿಗೂ ಅವರು ಕನ್ನಡದ ಆಸ್ತಿ ಎಂದು ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ. ಇದನ್ನೂ ಓದಿ:ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ

    ನಮ್ಮ ಮನೆಗೂ ಅವರ ಮನೆಗೂ ಒಂದು ಬೀದಿ ಅಷ್ಟೇ ಅಂತರವಿದೆ. ಸದಾ ಟಿವಿಯಲ್ಲಿ ನೋಡ್ತಿದ್ದೆ. ನಿರೂಪಣೆ ಮಾಡುವ ವೇಳೆ, ಸ್ಕ್ರಿಪ್ಟ್‌ನಲ್ಲಿ ಏನೇ ಬದಲಾವಣೆಯಾದರು ಕೂಲ್ ಆಗಿ ರೆಸ್ಪಾನ್ಸ್ ಮಾಡುತ್ತಿದ್ದರು. ನಮಗೆ ಅಪರ್ಣಾ ಅಂದಾಕ್ಷಣ ನೆನಪಾಗೋದು ಅವರ ಕನ್ನಡ ಎಂದು ನಟಿಯ ಬಗ್ಗೆ ರಮೇಶ್‌ ಅರವಿಂದ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅವರಿಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಮೊದಲೇ ಗೊತ್ತಿತ್ತು. ಕ್ಯಾನ್ಸರ್ ಕೊನೆಯ ಸ್ಟೇಜ್ ಆಗಿತ್ತು ಅಂದರು ಅವರ ಮನೆಯವರು. ಆದರೆ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾವು ನೋಡಿದಂತಹ ನಿರೂಪಕರಲ್ಲಿ ಅತೀ ಶ್ರೇಷ್ಠ ನಿರೂಪಕಿಯಾಗಿದ್ದರು ಎಂದು ರಮೇಶ್ ಅರವಿಂದ್ ಮಾತನಾಡಿದ್ದಾರೆ.

    ಅಂದಹಾಗೆ, ಇಂದು (ಜು.12) ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಪರ್ಣಾ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ.

  • ಅಪರ್ಣಾ ಜೊತೆಗಿನ ಒಡನಾಟ ನೆನೆದು ಕಣ್ಣೀರಿಟ್ಟ ಪದ್ಮಜಾ ರಾವ್

    ಅಪರ್ಣಾ ಜೊತೆಗಿನ ಒಡನಾಟ ನೆನೆದು ಕಣ್ಣೀರಿಟ್ಟ ಪದ್ಮಜಾ ರಾವ್

    ನ್ನಡದ ನಟಿ, ನಿರೂಪಕಿ ಅಪರ್ಣಾ (Aparna) ಜು.11ರಂದು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪರ್ಣಾ ಅಂತಿಮ ದರ್ಶನ ಪಡೆದಿರುವ ಪದ್ಮಜಾ ರಾವ್, ಅವರ ಜೊತೆಗಿನ ಆತ್ಮೀಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಟಿಯ ನಿಧನಕ್ಕೆ ಹಿರಿಯ ನಟಿ ಪದ್ಮಜಾ ರಾವ್ (Actress Padmaja Rao) ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದನ್ನೂ ಓದಿ:ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ ಅಪರ್ಣಾ ಅಂತ್ಯಕ್ರಿಯೆ

    ಅಪರ್ಣಾ ಜೊತೆ ಇದ್ದಾಗ ನಾವು ತುಂಬಾ ನಕ್ಕಿದ್ದೇವೆ. ಕೆಲವು ಸಂಬಂಧಗಳು ವೃತ್ತಿಯಲ್ಲಿ ಸಹಕಲಾವಿದರಾಗಿ ಉಳಿದುಕೊಳ್ಳುತ್ತೇವೆ. ಆದರೆ ಕೆಲವರು ಅದನ್ನು ದಾಟಿ ಮುಂದೆ ಹೋಗುತ್ತಾರೆ. ‘ಮೂಡಲ ಮನೆ’ ಮತ್ತು ‘ಪ್ರೀತಿ ಇಲ್ಲದ ಮೇಲೆ’ ಸೀರಿಯಲ್‌ನಲ್ಲಿ ಅಪರ್ಣಾ ಜೊತೆ ಕೆಲಸ ಮಾಡಿದ್ದೇನೆ. 20 ವರ್ಷಗಳ ಗೆಳೆತನ ನಮ್ಮದು. ಕೆಲಸ ಬಿಟ್ಟು ಪ್ರತ್ಯೇಕವಾಗಿ ಸಿಕ್ಕಿದ್ದೇವೆ. ಶಾಪಿಂಗ್ ಮಾಡಿದ್ದೇವೆ, ಜೊತೆಯಾಗಿ ಕಾಲ ಕಳೆದಿದ್ದೇವೆ ಎಂದು ಅಪರ್ಣಾ ನೆನೆದು ಪದ್ಮಜಾ ರಾವ್ ಭಾವುಕರಾಗಿದ್ದಾರೆ.

     

    View this post on Instagram

     

    A post shared by Padmaja Rao (@padmajarao.official)

    ಅಪರ್ಣಾ ನನ್ನ ತಂಗಿ ಹಾಗೆಯೇ ಆದರೆ ಅವಳ ಕೊನೆಯ ದಿನಗಳ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ನನಗೂ ಈ ವಿಚಾರ ತಿಳಿದಿರಲಿಲ್ಲ. ಈಗ ಅನಿಸುತ್ತೆ ಅದರಲ್ಲೂ ಅಪರ್ಣಾದು ದೊಡ್ಡ ಗುಣವಿದೆ. ಹೇಳಿಕೊಂಡರೆ ನಾವು ನೊಂದುಕೊಳ್ಳುತ್ತೇವೆ. ಅವಳ ಸಮಸ್ಯೆಯಂತೂ ನಾವು ಬಗೆಹರಿಸೋಕೆ ಸಾಧ್ಯವಿಲ್ಲ. ಯಾರ ನೋವು ಯಾರು ತೆಗೆದುಕೊಳ್ಳೋಕೆ ಆಗೋದಿಲ್ಲ. ಪಾಪ ಅದಕ್ಕೆ ಅವಳು ಈ ವಿಚಾರ ಯಾರಿಗೂ ತಿಳಿಸಲಿಲ್ಲ ಎಂದು ಪದ್ಮಜಾ ರಾವ್ ಮಾತನಾಡಿದ್ದಾರೆ. ನನ್ನ ಮತ್ತು ಅಪರ್ಣಾ ಸಂಬಂಧದಲ್ಲಿ ಇವತ್ತೇ ನಾನು ಇಷ್ಟು ಕಣ್ಣೀರು ಹಾಕ್ತಿರೋದು. ನಾವು ಯಾವತ್ತು ಅತ್ತು ಕರೆದು ಮಾಡಿಲ್ಲ ಎಂದಿದ್ದಾರೆ ಪದ್ಮಜಾ ರಾವ್.


    ನನಗೆ ಮೆಟ್ರೋದಲ್ಲಿ ಅಪರ್ಣಾ ವಾಯ್ಸ್ ಕೊಟ್ಟಿದ್ದಾರೆ ಅಂತ ಗೊತ್ತಿರಲಿಲ್ಲ. ಎಲ್ಲರೂ ಹೇಳಿದಕ್ಕೆ ನಾನು ಮೆಟ್ರೋದಲ್ಲಿ ಓಡಾಡಿದೆ. ಬಳಿಕ ಅವಳಿಗೆ ಕಾಲ್ ಮಾಡಿದ್ದೆ. ನನಗೆ ಯಾಕೆ ಹೇಳಿಲ್ಲ. ಮೆಟ್ರೋಗೆ ವಾಯ್ಸ್ ಕೊಟ್ಟಿದ್ಯಾ ಅಂತ ಎಂದೆ. ಅದಕ್ಕೆ, ಅದರಲ್ಲಿ ಹೇಳೋಕೆ ಏನಿಲ್ಲ ಪದ್ದು ಅಂದರು. ಅಷ್ಟು ಸರಳ ವ್ಯಕ್ತಿ ಅಪರ್ಣಾ ಎಂದು ಪದ್ಮಜಾ ರಾವ್ ಗಳಗಳನೆ ಅತ್ತಿದ್ದಾರೆ.

  • ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ

    ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ

    ನ್ನಡದ ಖ್ಯಾತ ನಿರೂಪಕಿ ಅಪರ್ಣಾ (Aparna) ಗುರುವಾರದಂದು (ಜು.11) ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಪತ್ನಿಯ ಅಂತಿಮ ದರ್ಶನಕ್ಕೆ ಬರಲಿರುವ ಸಾರ್ವಜನಿಕರಿಗೆ, ಆಪ್ತರಿಗೆ ಹೂವು-ಹಾರ ತರಬೇಡಿ ಎಂದು ಪತಿ ನಾಗರಾಜ್‌ ವಸ್ತಾರೆ ಮನವಿ ಮಾಡಿದ್ದಾರೆ. ಈ ಮೂಲಕ ಪರಿಸರ ಕಾಳಜಿ ತೋರಿಸಿದ್ದಾರೆ. ಇದನ್ನೂ ಓದಿ:ಅಪರ್ಣಾಗೆ ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಎಂದು ಗೊತ್ತಿರಲಿಲ್ಲ: ಮಂಡ್ಯ ರಮೇಶ್

    ಅಪರ್ಣಾ ಅವರ ವಿಡಿಯೋ ಮತ್ತು ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಪತಿ ನಾಗರಾಜ್ ವಸ್ತಾರೆ, ನಮಸ್ಕಾರ. ನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಿಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿಯಿರುವ ಅವಳಿದ್ದ ಮನೆಗೆ ಬರಬಹುದು. ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ. ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆ ಎಂದು ಬರೆದುಕೊಂಡಿದ್ದಾರೆ.

    ಅಂದಹಾಗೆ, ಇಂದು (ಜು.12) ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಪರ್ಣಾ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ. ಇನ್ನೂ ತಾರಾ, ಶ್ರೀನಾಥ್, ಪದ್ಮಜಾ ರಾವ್, ದತ್ತಣ್ಣ, ಗಿರಿಜಾ ಲೋಕೇಶ್, ಮಂಡ್ಯ ರಮೇಶ್ ಸೇರಿದಂತೆ ಅನೇಕರು ಅಪರ್ಣಾ ಅಂತಿಮ ದರ್ಶನ ಪಡೆದಿದ್ದಾರೆ.

  • ಅಪರ್ಣಾ ಅಕ್ಕ ಮುಖದಲ್ಲಿ ಎಂದಿಗೂ ನಗು ಮಾಸುತ್ತಿರಲಿಲ್ಲ: ನಟಿ ರೂಪಿಕಾ

    ಅಪರ್ಣಾ ಅಕ್ಕ ಮುಖದಲ್ಲಿ ಎಂದಿಗೂ ನಗು ಮಾಸುತ್ತಿರಲಿಲ್ಲ: ನಟಿ ರೂಪಿಕಾ

    ನ್ನಡದ ಖ್ಯಾತ ನಿರೂಪಕಿ ಅಪರ್ಣಾ (Aparna) ಜು.11ರಂದು ನಿಧನರಾಗಿದ್ದಾರೆ. ಇದೀಗ ನಟಿಯ ಅಂತಿಮ ದರ್ಶನ ಪಡೆಯಲು ಅವರ ಸ್ವಗೃಹಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಆಗಮಿಸುತ್ತಿದ್ದಾರೆ. ಮಜಾ ಟಾಕೀಸ್ ಶೋನ ಸಹನಟಿ ರೂಪಿಕಾ (Actress Roopika) ಕೂಡ ಅಪರ್ಣಾ ಅಂತಿಮ ದರ್ಶನ ಪಡೆದಿದ್ದು, ಅವರ ನಿಧನಕ್ಕೆ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಿರೂಪಣೆ ನೀವಿಲ್ಲದೇ ಅಪೂರ್ಣ ಅಪರ್ಣಾ ಅಕ್ಕ: ಅನುಶ್ರೀ ಭಾವುಕ

    ಅಪರ್ಣಾ ಅಕ್ಕ ಜೊತೆ ಸುಮಾರು 170 ರಿಂದ 200 ಎಪಿಸೋಡ್ ಮಜಾ ಟಾಕೀಸ್‌ನಲ್ಲಿ ನಟಿಸಿದ್ದೀನಿ. ಅಪರ್ಣಾ ಅಂದರೆ ನನಗೆ ಅಕ್ಕ ಇದ್ದ ಹಾಗೆ ಇದ್ದರು. ಮಜಾ ಟಾಕೀಸ್ ವರ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಆಗಿದ್ದರು. ಅವರು ಬಿಟ್ಟರೇ ಆ ಪಾತ್ರನ ಬೇರೆ ಯಾರು ಮಾಡೋಕೆ ಆಗುತ್ತಿರಲಿಲ್ಲ ಎಂದು ನಟಿ ರೂಪಿಕಾ ಮಾತನಾಡಿದ್ದಾರೆ.

    ಅವರನ್ನು ಮಿಸ್ ಮಾಡಿಕೊಳ್ತೀನಿ ಅಂತಾ ಹೇಳೋಕೆ ಆಗೋಲ್ಲ. ಅವರ ನಟನೆ, ವಾಯ್ಸ್ ನಮ್ಮ ಜೊತೆ ಟ್ರಾವೆಲ್ ಮಾಡುತ್ತಾ ಇರುತ್ತೆ. ಕಲಾವಿದರು ಹೋದ ಮೇಲೂ ಜೀವಂತವಾಗಿ ಇರುತ್ತಾರೆ. ಅದು ನಮಗೆ ವರದಾನ ಎಂದು ನಟಿಯ ಕುರಿತು ರೂಪಿಕಾ ಮಾತನಾಡಿದ್ದಾರೆ. ಅವರ ನಿಧನದ ಸುದ್ದಿ ಕೇಳಿದಾಗ ಶಾಕ್ ಆಯ್ತು. 8 ತಿಂಗಳ ಹಿಂದೆ ಶೋವೊಂದರಲ್ಲಿ ಅವರನ್ನು ಭೇಟಿ ಮಾಡಿದ್ದೆ ಆಗ ನಗುತ್ತಲೇ ಖುಷಿಯಿಂದ ಮಾತನಾಡಿದರು. ಚೆನ್ನಾಗಿ ಡ್ಯಾನ್ಸ್ ಮಾಡಿದೆ ಎಂದು ನನಗೆ ಹೇಳಿದ್ದರು. ಅವರ ಮುಖದಲ್ಲಿ ಎಂದಿಗೂ ನಗು ಮಾಸುತ್ತಿರಲಿಲ್ಲ ಎಂದು ನಟಿ ಸ್ಮರಿಸಿದ್ದಾರೆ.


    ಅಂದಹಾಗೆ, ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.


    ಕಿರುತೆರೆಯಲ್ಲಿ ‘ಮೂಡಲಮನೆ’, `ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪರ್ಣಾ, 2013 ರಲ್ಲಿ ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲಾಪ್ರಿಯರ ಮನಗೆದ್ದಿದ್ದರು. 2014 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆಗೆ ಧ್ವನಿ ಗೂಡಿಸಿದ್ದರು.

  • ಅಪರ್ಣಾಗೆ ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಎಂದು ಗೊತ್ತಿರಲಿಲ್ಲ: ಮಂಡ್ಯ ರಮೇಶ್

    ಅಪರ್ಣಾಗೆ ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಎಂದು ಗೊತ್ತಿರಲಿಲ್ಲ: ಮಂಡ್ಯ ರಮೇಶ್

    ನ್ನಡದ ನಟಿ, ನಿರೂಪಕಿ 3 ದಶಕಗಳ ಕಾಲ ರಂಜಿಸಿದ ಅಪರ್ಣಾ (Aparna) ಇನ್ನಿಲ್ಲ. ಇದೀಗ ನಟಿಯ ಸ್ವಗೃಹಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರು ಭೇಟಿ ನೀಡಿ ಅಪರ್ಣಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸದ್ಯ ಅಪರ್ಣಾ ನಿಧನಕ್ಕೆ ಸಹನಟ ಮಂಡ್ಯ ರಮೇಶ್ (Mandya Ramesh) ಕಂಬನಿ ಮಿಡಿದಿದ್ದಾರೆ.

    ಕನ್ನಡ ಅಂದರೆ ಅಪರ್ಣ ಅಪರ್ಣಾ ಅಂದರೆ ಕನ್ನಡ ಅಂತ ಮಾತಿದೆ. ಅವರ ಕನ್ನಡ ಪ್ರೀತಿ ಮಾಡಿದ ದೊಡ್ಡ ಜನ ಸಮೂಹವಿದೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಗೊತ್ತಾಗುತ್ತದೆ. 5 ವರ್ಷ ಮಜಾ ಟಾಕೀಸ್ ಮೂಲಕ ಇವರ ಜೊತೆ ಒಡನಾಟ ನಮ್ಮದು. ಎಲ್ಲರನ್ನೂ ಅತೀ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಅಪರ್ಣಾ. ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಅಂತ ಗೊತ್ತಿರಲಿಲ್ಲ ಎಂದು ಮಂಡ್ಯ ರಮೇಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ ಅಪರ್ಣಾ ಅಂತ್ಯಕ್ರಿಯೆ

    ಶ್ರೇಷ್ಠವಾದ ಶುದ್ಧ ಕನ್ನಡದ ಚೆಂದದ, ಮನುಷ್ಯತ್ವ ಗುಣಗಳನ್ನ ಮರೆಯದ ನಟಿಯಾಗಿದ್ದರು. ಮಾತೃತ್ವದ ಹೆಣ್ಣು ಮಗು ಅಪರ್ಣಾ ಎಂದಿದ್ದಾರೆ. ಆರೋಗ್ಯ ಸರಿಯಿಲ್ಲ ಅನ್ನೋದಷ್ಟೇ ಗೊತ್ತಿತ್ತು. ಆದರೆ ಇಷ್ಟು ಗಂಭೀರ ಪರಿಸ್ಥಿತಿ ಇದೆ ಎಂದು ಗೊತ್ತಿರಲಿಲ್ಲ. 80 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅವರದ್ದು ಎಂದಿದ್ದಾರೆ. ಇನ್ನೂ ಯಾವಾಗಲೂ ಮಜಾ ಟಾಕೀಸ್‌ನಲ್ಲಿ ರೂಪದ ಬಗ್ಗೆ, ವಯಸ್ಸಿನ ಬಗ್ಗೆ ಕಾಮಿಡಿ ಮಾಡ್ತಿದ್ವಿ ಎಂದು ಸ್ಮರಿಸಿದ್ದರು. ಆಸ್ಟ್ರೇಲಿಯಾಗೆ ನಾವೆಲ್ಲ ಹೋಗಿದ್ದ ದಿನಗಳನ್ನ ಮರೆಯಲು ಆಗಲ್ಲ ಎಂದು ಹಳೆಯ ದಿನಗಳನ್ನು ನೆನೆದು ಮಂಡ್ಯ ರಮೇಶ್ ಭಾವುಕರಾಗಿದ್ದಾರೆ.

    ಅಂದಹಾಗೆ, ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.

    ಕಿರುತೆರೆಯಲ್ಲಿ ‘ಮೂಡಲಮನೆ’, ‘ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪರ್ಣಾ, 2013 ರಲ್ಲಿ ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲಾಪ್ರಿಯರ ಮನಗೆದ್ದಿದ್ದರು. 2014 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆ’ಗೆ ಧ್ವನಿ ಗೂಡಿಸಿದ್ದರು.