Tag: apaneer pakoda

  • ಸಂಜೆ ತಿಂಡಿಗೆ ಮಾಡಿ ಪನ್ನೀರ್ ಪಕೋಡ

    ಸಂಜೆ ತಿಂಡಿಗೆ ಮಾಡಿ ಪನ್ನೀರ್ ಪಕೋಡ

    ಸಂಜೆ ತಿಂಡಿಗೆ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಎಂದು ನಾಲಿಗೆ ಬಯಸುತ್ತದೆ. ಬಜ್ಜಿ, ಪಕೋಡ ತಿಂದು ಬೇಜಾರು ಆಗಿರುವ ನೀವು ಇಂದು ಪನ್ನೀರ್ ಪಕೋಡವನ್ನು ಮಾಡಿ ಸಂಜೆ ಟೀ, ಕಾಫಿ ಜೊತೆಗೆ ಸವಿಯಲು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಶುಂಠಿ ಬೆಳ್ಳುಳ್ಳಿ ಪೇಸ್ಟ್- ಅರ್ಧ ಟೀ ಸ್ಪೂನ್
    * ಕೆಂಪು ಮೆಣಸಿನ ಪುಡಿ- 2 ಟೀ ಸ್ಪೂನ್
    * ಚಾಟ್ ಮಸಾಲ- ಅರ್ಧ ಟೀ ಸ್ಪೂನ್
    * ಕಸೂರಿ ಮೆಥಿ
    * ಪನ್ನೀರ್- 1 ಕಪ್
    * ಕಡಲೆ ಹಿಟ್ಟು ಅರ್ಧ ಕಪ್
    * ಅಕ್ಕಿ ಹಿಟ್ಟು- ಅರ್ಧ ಕಪ್
    * ಅರಿಶಿಣ- 1 ಟೀ ಸ್ಪೂನ್
    * ಅಡುಗೆ ಎಣ್ಣೆ- 1ಕಪ್
    * ರುಚಿಗೆ ಉಪ್ಪು

    ಮಾಡುವ ವಿಧಾನ:

    * ಒಂದು ದೊಡ್ಡ ಮಿಕ್ಸಿಂಗ್ ಬೌಲ್‍ನಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಚಾಟ್ ಮಸಾಲ, ಕಸೂರಿ ಮೆಥಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಬೇಕು. ನಂತರ ಅದಕ್ಕೆ ಪನ್ನೀರ್ ತುಂಡುಗಳನ್ನು ಸೇರಿಸಿ, ಮಿಕ್ಸ್ ಮಾಡಿ, ಮುಚ್ಚಿಡಬೇಕು.

    * ಮತ್ತೊಂದು ಬಟ್ಟಲಿನಲ್ಲಿ ಒಂದು ಅರಿಶಿಣ,ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಚಾಟ್ ಮಸಾಲ ಉಪ್ಪು. ಸ್ವಲ್ಪ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.

    * ನಂತರ ಪನೀರ್ ಅನ್ನು ಈ ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಬೇಕು. ಇದೀಗ ಬಿಸಿಬಿಸಿ ಪನ್ನೀರ್ ಪಕೋಡಾ ಚಟ್ನಿಯೊಂದಿಗೆ ಸವಿಯಲು ಸಿದ್ಧವಾಗುತ್ತದೆ.