Tag: Apaharan Cinema

  • ಹಿಂದಿ ಸಿನಿಮಾ ಪ್ರೇರಣೆ – ಸ್ನೇಹಿತನನ್ನೇ ಅಪಹರಿಸಿ ಕೊಂದ್ರು

    ಹಿಂದಿ ಸಿನಿಮಾ ಪ್ರೇರಣೆ – ಸ್ನೇಹಿತನನ್ನೇ ಅಪಹರಿಸಿ ಕೊಂದ್ರು

    ನವದೆಹಲಿ: ಬಾಲಿವುಡ್ ಅಪಹರಣ್ ಸಿನಿಮಾದಿಂದ ಪ್ರೇರಣೆ ಪಡೆದ ಇಬ್ಬರು ಯುವಕರು 10 ಲಕ್ಷ ರೂ. ಹಣದ ಆಸೆಗೆ 18 ವರ್ಷದ ಯುವಕನನ್ನು ಫಿಲ್ಮಿ ಸ್ಟೈಲ್‍ನಲ್ಲಿ ಅಪಹರಿಸಿ ಕೊಂದಿರುವ ಘಟನೆ ಉತ್ತರ ದೆಹಲಿಯ ಬುರಾರಿಯಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ರೋಹನ್ ಎಂದು ಗುರುತಿಸಲಾಗಿದ್ದು, ಇದೀಗ ಪೊಲೀಸರು 18 ವರ್ಷದ ಗೋಪಾಲ್ ಹಾಗೂ ಸುಶೀಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶೋ ರೂಂನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಗೋಪಾಲ್, ರೋಹನ್ ಸ್ನೇಹಿತನಾಗಿದ್ದ. ಜನವರಿ 23ರಂದು ಸಂಜೆ ಹುಟ್ಟುಹಬ್ಬಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ರೋಹನ್‍ನ್ನನ್ನು ಗೋಪಾಲ್ ಅಪಹರಿಸಿದ್ದಾನೆ. ಇದನ್ನೂ ಓದಿ:  ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷಿತ್ ಆಯಂಡ್ ಗ್ಯಾಂಗ್‌ನಿಂದ ರಂಪಾಟ

    ಜನವರಿ 23ರಂದು ರೋಹನ್ ತಂದೆ ಮನೋಜ್ ಮಗ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದಾರೆ. ಅಲ್ಲದೇ ಮನೋಜ್ ಅವರು ರೋಹನ್ ಸ್ನೇಹಿತ ಗೋಪಾಲ್ ಜೊತೆಗೆ ಹುಟ್ಟುಹಬ್ಬದ ಊಟಕ್ಕೆ ಹೋದವನು ಹಿಂತಿರುಗಿಲ್ಲ ಎಂದು ಆರೋಪಿಸಿದ್ದಾರೆ. ಈ ಘಟನೆ ಕುರಿತಂತೆ ತನಿಖೆ ಆರಂಭಿಸಿದ ಪೊಲೀಸರು ಸುಮಾರು 200 ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ ಮತ್ತು ಕಾಣೆಯಾದ ಯುವಕನ ಸ್ನೇಹಿತರ ವಿಳಾಸವನ್ನು ಪತ್ತೆ ಮಾಡಿ ಜನವರಿ 25ರ ಮಧ್ಯ ರಾತ್ರಿ ಗೋಪಾಲ್‍ನನ್ನು ಬಂಧಿಸಿದ್ದಾರೆ. ತಿಳಿಸಿದ್ದಾರೆ. ಇದನ್ನೂ ಓದಿ: ಸಂಗೀತ್ ಕಾರ್ಯಕ್ರಮದಲ್ಲಿ ಸೂರಜ್‍ ಜೊತೆ ಮೌನಿ ರಾಯ್ ಲಿಪ್‍ಲಾಕ್

    ಈ ಕುರಿತಂತೆ ವಿಚಾರಣೆ ವೇಳೆ ಗೋಪಾಲ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಬರ್ತ್‍ಡೇ ಪಾರ್ಟಿ ನಂತರ ರೋಹನ್‍ನನ್ನು ಕೋಣೆಯೊಳಗೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಂದಿರುವುದಾಗಿ ಬಹಿರಂಗಪಡಿಸಿದ್ದಾನೆ. ಅಲ್ಲದೇ ತನ್ನ ಇಬ್ಬರು ಸಹಚರರ ಹೆಸರನ್ನು ಗೋಪಾಲ್ ಹೇಳಿದ್ದು, ಇದೀಗ ಸುಶೀಲ್ ಎಂಬ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.