Tag: Aor Strike

  • ದಾಳಿ ಬಗ್ಗೆ ಮಾಹಿತಿ ಇಲ್ಲ: ಸಿದ್ದರಾಮಯ್ಯ ಉಡಾಫೆ ಮಾತು

    ದಾಳಿ ಬಗ್ಗೆ ಮಾಹಿತಿ ಇಲ್ಲ: ಸಿದ್ದರಾಮಯ್ಯ ಉಡಾಫೆ ಮಾತು

    ಚಿಕ್ಕಮಗಳೂರು: ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದ್ದು, ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.

    ಜಿಲ್ಲೆಯ ತರೀಕೆರೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, “ದಾಳಿ ಮಾಡಿದವರು ಯಾರು? ದಾಳಿ ನಾವ್ ಮಾಡಿರೋದಾ ಅಥವಾ ಅವರು ಮಾಡಿದ್ದಾರಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ. ಅಲ್ಲದೇ ದಾಳಿ ಬಗ್ಗೆ ಮಾಹಿತಿ ಇಲ್ಲ. ನಾನು ಹೆಲಿಕಾಪ್ಟರ್ ನಲ್ಲಿ ಬಂದಿದ್ದೇನೆ. ಹಾಗಾಗಿ ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದು ಉತ್ತರ ನೀಡುತ್ತೇನೆ” ಎಂದ ಹೇಳಿದ್ದಾರೆ.

    “ಉಗ್ರರ ಕ್ಯಾಂಪ್ ಮೇಲೆ ಸರ್ಜಿಕಲ್ ಸ್ಟ್ರೈಕ್-2 ಮಾಡಿದ ವಾಯು ಸೇನೆಗೆ ನಾನು ಸೆಲ್ಯೂಟ್ ಮಾಡುತ್ತೇನೆ. ಈ ದಾಳಿ ಪಾಕಿಸ್ತಾನಕ್ಕೆ ಒಂದು ಒಳ್ಳೆಯ ಪಾಠ” ಎಂದು ಇಂದು ಬೆಳಗ್ಗೆ 10.08ಕ್ಕೆ ಟ್ವೀಟ್ ಮಾಡಿ ಸೇನೆಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ ಈ ವಿಚಾರದ ಬಗ್ಗೆ ನೇರವಾಗಿ ಪ್ರತಿಕ್ರಿಯೆ ನೀಡುವಾಗ ಉಡಾಫೆಯಾಗಿ ಮಾತನಾಡಿದ್ದಾರೆ.

    ಇಂದು ನಸುಕಿನ ಜಾವ 3.30ರ ಸುಮಾರಿಗೆ ಉಗ್ರರ ನೆಲೆ ಮೇಲೆ ಭಾರತೀಯ ವಾಯು ಸೇನೆ ದಾಳಿ ಮಾಡಿದ್ದು, ಸುಮಾರು 250ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ವಾಯು ಸೇನೆಯ ಏರ್ ಸ್ಟ್ರೈಕ್‍ಗೆ ಇಡೀ ದೇಶ ಮೆಚ್ಚುಗೆ ವ್ಯಕ್ತಪಡಿಸಿ, ಸಂಭ್ರಮ ಪಡುತ್ತಿದ್ದಾರೆ.

    https://www.youtube.com/watch?v=H0Eg3K5n5AQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv