Tag: Anwar Manpade

  • ರಾಜಕೀಯಗೋಸ್ಕರ ಆತ್ಮ ವಂಚನೆ ಮಾಡಿಕೊಳ್ಳಲ್ಲ: ಬಿಜೆಪಿ ರಾಜ್ಯ ಸಹ ವಕ್ತಾರ ಅನ್ವರ್ ಮಾನ್ಪಡೆ

    ರಾಜಕೀಯಗೋಸ್ಕರ ಆತ್ಮ ವಂಚನೆ ಮಾಡಿಕೊಳ್ಳಲ್ಲ: ಬಿಜೆಪಿ ರಾಜ್ಯ ಸಹ ವಕ್ತಾರ ಅನ್ವರ್ ಮಾನ್ಪಡೆ

    ತುಮಕೂರು : ನಾನು ರಾಜಕೀಯಕ್ಕಾಗಿ ನನ್ನ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಎನ್‍ಆರ್ ಸಿ ಹಾಗೂ ಸಿಎಎ ಕಾಯ್ದೆಯಿಂದ ನನ್ನ ಭಾರತೀಯ ಕುಲ ಬಾಂಧವರಿಗೆ ಯಾವುದೇ ತೊಂದರೆ ಇಲ್ಲ ಎಂದು ಬಿಜೆಪಿ ರಾಜ್ಯ ಸಹ ವಕ್ತಾರ ಅನ್ವರ್ ಮಾನ್ಪಡೆ ಸ್ಪಷ್ಟನೆ ನೀಡಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎನ್‍ಆರ್ ಸಿ ಹಾಗೂ ಸಿಎಎ ಯಿಂದ ಒಳ್ಳೆಯದಾಗುತ್ತದೆಯೇ ಹೊರತು ಕೆಟ್ಟದಾಗಲ್ಲ. ಕಾಂಗ್ರೆಸ್‍ನವರ ಹೇಳಿಕೆಗೆ ಮುಸ್ಮಿಂ ಬಾಂಧವರು ಕಿವಿಗೊಡಬೇಡಿ. ಕಾಂಗ್ರೆಸ್‍ನವರು ಮುಸ್ಲಿಮರಲ್ಲಿ ತಪ್ಪು ಮಾಹಿತಿ ನೀಡುವುದರ ಜೊತೆಗೆ ವಿಷ ತುಂಬುತ್ತಿದ್ದಾರೆ ಎಂದು ಮಾನ್ಪಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಯ್ದೆ ಕುರಿತ ವಿವರವಾದ ಅಂಶ ಗೆಜೆಟ್ ನೋಟಿಫಿಕೇಷನ್‍ನಲ್ಲಿ ಪ್ರಕಟವಾಗಲಿದೆ. ಗೆಜೆಟ್ ಬಂದ ಬಳಿಕ ಎಲ್ಲಾ ಪತ್ರಿಕೆಗಳಲ್ಲೂ ವಿವರವಾದ ಜಾಹೀರಾತನ್ನ ಬಿಜೆಪಿ ನೀಡಲಿದೆ. ಈ ಮೂಲಕ ಜನರಲ್ಲಿರುವ ತಪ್ಪು ಅಭಿಪ್ರಾಯ ಹಾಗೂ ಕಾಂಗ್ರೆಸ್‍ನ ತಪ್ಪು ಆಪಾದನೆಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.

    ದಾಖಲೆ ಇಲ್ಲ ಎಂದು ಭಯಪಡುವುದು ಬೇಡ. ಒಂದಲ್ಲಾ ಒಂದು ಕಡೆ ದಾಖಲೆ ಸಿಕ್ಕೆ ಸಿಗುತ್ತದೆ. ಸ್ವತಃ ಅಧಿಕಾರಿಗಳೇ ತಮ್ಮ ಬಳಿ ಬಂದು ಅರಿವು ಮೂಡಿಸಲಿದ್ದಾರೆ. ಕಾಯ್ದೆ ಬಗ್ಗೆ ಇರುವ ಭಯ ಬಿಟ್ಟು ನೆಮ್ಮದಿಯಿಂದ ಇರುವಂತೆ ಅನ್ವರ್ ಮನ್ಪಾಡೆ ವಿನಂತಿಸಿಕೊಂಡಿದ್ದಾರೆ.