Tag: anvitha sagar

  • ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ‘ಗಟ್ಟಿಮೇಳ’ ನಟಿ ನಿಶಾ

    ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ‘ಗಟ್ಟಿಮೇಳ’ ನಟಿ ನಿಶಾ

    ನ್ನಡ ಕಿರುತೆರೆಯ ಗಟ್ಟಿಮೇಳ (Gattimela) ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಇದೀಗ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ (Kateel Durga Parameshwari) ಭೇಟಿ ನೀಡಿದ್ದಾರೆ. ಕರಾವಳಿ ನಟಿ ಅನ್ವಿತಾ ಸಾಗರ್ (Anvitha Sagar) ಜೊತೆ ನಿಶಾ ದಕ್ಷಿಣ ಕನ್ನಡದ ಕಟೀಲಿಗೆ ಬಂದಿದ್ದಾರೆ.

    ನಿಶಾ ರವಿಕುಮಾರ್ ಮತ್ತು ಅನ್ವಿತಾ ಸಾಗರ್ ಇಬ್ಬರೇ ಕಾರು ಓಡಿಸಿಕೊಂಡು ಮಂಗಳೂರಿಗೆ ಹೋಗಿ ದೇವರ ದರ್ಶನ ಪಡೆದಿದ್ದಾರೆ. ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ:ತುಳು ಭಾಷೆಯಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೇನೆ- ಅನಂತ್ ನಾಗ್

    ಅಲ್ಲಿನ ಆನೆಯ ಜೊತೆ ಸೆಲ್ಫಿ ತೆಗೆದು ಆನೆಯ ಸೊಂಡಿಲಿಗೆ ಕಿಸ್ ಮಾಡಿದ್ದನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಖತ್ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ. ನಟಿಯರ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ನಟಿ ನಿಶಾ, ಕನ್ನಡ ಮತ್ತು ತೆಲುಗು ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾರೆ. ‘ಅಂದೊಂದಿತ್ತು ಕಾಲ’ ಎಂಬ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ (Aditi Prabhudeva) ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅನ್ವಿತಾ, ಗಟ್ಟಿಮೇಳ ಸೀರಿಯಲ್ ಜೊತೆ ತುಳು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಗಜಾನನ ಕ್ರಿಕೆಟರ್ಸ್’ ಚಿತ್ರೀಕರಣ ಮೇ18ರಿಂದ ಶುರು

    ‘ಗಜಾನನ ಕ್ರಿಕೆಟರ್ಸ್’ ಚಿತ್ರೀಕರಣ ಮೇ18ರಿಂದ ಶುರು

    ಪ್ರಜ್ವಲ್ ಫಿಲಂಸ್ ನಿರ್ಮಾಣದ ಕೀರ್ತನ್ ಭಂಡಾರಿ (Keerthan Bhandary) ರಚಿಸಿ ನಿರ್ದೇಶಿಸುತ್ತಿರುವ ‘ಗಜಾನನ ಕ್ರಿಕೆಟರ್ಸ್’ ತುಳು ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಸೋಮವಾರ (ಮೇ 15)ರಂದು ಸಂಜೆ ಲಾಲ್ ಭಾಗ್‌ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.

    ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಂಡರ್ ಆರ್ಮ್ ಕ್ರಿಕೆಟ್ ಜಗತ್ತನ್ನು ತೆರೆದಿಡುವಂತಹ ಪ್ರಯತ್ನವನ್ನು ಈ ಚಿತ್ರತಂಡ ಮಾಡುತ್ತಿದ್ದು, ಚಿತ್ರವು ಹಾಸ್ಯಮಯ ಕಥಾಹಂದರವನ್ನು ಹೊಂದಿದ್ದು ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿರುತ್ತದೆ. ಕ್ರಿಕೆಟ್ ಪ್ರೇಮಿಗಳಿಗೆ ಮನೋರಂಜನೆ ನೀಡುವಂತಹ ಹಲವಾರು ಸನ್ನಿವೇಶಗಳು ಚಿತ್ರದಲ್ಲಿದೆ. ಈ ಚಿತ್ರದ ಚಿತ್ರೀಕರಣವು ಮೇ 18ರಿಂದ ಮಂಗಳೂರಿನಾದ್ಯಂತ ನಡೆಯಲಿದ್ದು, ಅತೀ ಶೀಘ್ರದಲ್ಲಿ ಬೆಳ್ಳಿತರೆಗೆ ಬರಲಿದೆ. ನಾನು ಚಿತ್ರದ ಕಥೆಯನ್ನು ಒಪ್ಪಿಕೊಂಡು ಅದರ ಭಾಗವಾಗಿದ್ದೇನೆ ಎಂದು ತುಳು ರಂಗಭೂಮಿಯ ಹಿರಿಯ ನಟ ಭೋಜರಾಜ್ ವಾಮಂಜೂರ್ ಹೇಳಿದರು. ಇದನ್ನೂ ಓದಿ:ಮುರಿದು ಬಿತ್ತಾ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ?

    ಚಿತ್ರದ ನಾಯಕ ನಟನಾಗಿ ವಿನೀತ್ ಕುಮಾರ್ (Vineeth Kumar) ನಟಿಸುತ್ತಿದ್ದು, ಇವರಿಗೆ ನಾಯಕಿಯರಾಗಿ ಅನ್ವಿತಾ ಸಾಗರ್ – ಸಮತ ಅಮೀನ್ ಜೊತೆಯಾಗಲಿದ್ದಾರೆ. ತಾರಾಗಣದಲ್ಲಿ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ಪ್ರಕಾಶ್ ತುಮಿನಾಡು, ದೀಪಕ್ ರೈ, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಕಾಣಿಸಿಕೊಳ್ಳಲಿದ್ದಾರೆ. ಪ್ರಸನ್ನ ಶೆಟ್ಟಿ ಬೈಲೂರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಮಾಡಲಿಂಗ್ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ 2018ರ ಮಿಸ್ಟರ್ ದುಬೈ ಕಿರೀಟ ಮುಡಿಗೇರಿಸಿಕೊಂಡಿರುವ ಪ್ರಜ್ವಲ್ ಶೆಟ್ಟಿ ಅವರು ಮೊಟ್ಟ ಮೊದಲ ಬಾರಿಗೆ ಖಳನಾಯಕರಾಗಿ ನಟಿಸಲಿದ್ದಾರೆ ಎಂದು ಚಿತ್ರ ನಿರ್ದೇಶಕ ಕೀರ್ತನ್ ಭಂಡಾರಿ ಮಾಹಿತಿ ನೀಡಿದರು.

    ಚಾರ್ಲಿ 777, ಒಂದು ಮೊಟ್ಟೆಯ ಕಥೆ, ಗಿರಿಗಿಟ್ (Girgit) ಹಾಗೂ ಹಲವಾರು ಕನ್ನಡ ಮತ್ತು ತುಳು ಚಿತ್ರಗಳಿಗೆ (Tulu Films) ಸಾಹಿತ್ಯ ಬರೆದಿರುವ ಕೀರ್ತನ್ ಭಂಡಾರಿ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿದ್ದು ಸೃಜನ್ ಕುಮಾರ್ ತೋನ್ಸೆ ಸಂಗೀತ ಸಂಯೋಜನೆ ಮಾಡುತ್ತಿದ್ದು, ಚಿತ್ರಕ್ಕೆ ನಿರಂಜನ್ ದಾಸ್ ಛಾಯಾಗ್ರಹಣ ಇರಲಿದೆ.