Tag: anushree

  • ಮದುವೆಗೆ ಸಜ್ಜಾದ ನಿರೂಪಕಿ ಅನುಶ್ರೀ: ಹುಡುಗ ಯಾರು?

    ಮದುವೆಗೆ ಸಜ್ಜಾದ ನಿರೂಪಕಿ ಅನುಶ್ರೀ: ಹುಡುಗ ಯಾರು?

    ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ ಅನುಶ್ರೀಗೆ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಮದುವೆಯಾಗಲೂ ಇದೀಗ ಮನಸ್ಸು ಮಾಡಿದ್ದಾರೆ. ಹಾಗಂತ ಸ್ವತಃ ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ.

    ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಅನುಶ್ರೀ, ತಮ್ಮ ವಿಭಿನ್ನ ನಿರೂಪಣೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮನೆಮಾತಾಗಿದ್ದಾರೆ. ಚಿತ್ರರಂಗದ ಕಾರ್ಯಕ್ರಮಗಳ ಜೊತೆಗೆ ಟಿವಿ ಶೋ ಮುಖಾಂತರ ಅನುಶ್ರೀ, ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಮತ್ತೆ ನಟಿ ಕಮ್ ನಿರೂಪಕಿ ಅನುಶ್ರೀ ಸುದ್ದಿಯಲ್ಲಿದ್ದಾರೆ. ಈ ಬಾರಿ ಮದುವೆಯ ವಿಚಾರದ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: ಮಾಲ್ಡೀವ್ಸ್ ಪ್ರವಾಸದಲ್ಲಿ `ಲವ್ ಮಾಕ್ಟೈಲ್’ ಜೋಡಿ

    ಅನುಶ್ರೀ ಅವರಿಗೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ. ಮದುವೆ ಆಗುವುದಕ್ಕೆ ಆಸೆಯಾಗುತ್ತಿದೆ ಅಂತೆ ಹಾಗಂತ ಸ್ವತಃ ತಮ್ಮ ಮನದಾಳದ ಮಾತನ್ನ ಖಾಸಗಿ ಶೋವೊಂದರಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ. ಖಾಸಗಿ ವಾಹಿನಿವೊಂದರಲ್ಲಿ ಜೋಡಿಗಳ ರಿಯಾಲಿಟಿ ಶೋ ನಡೆಯುತ್ತಿದ್ದು, ಆ ಜೋಡಿಗಳ ಪ್ರೀತಿ, ಬಾಂಧವ್ಯ ನೋಡಿ ಶೋನಲ್ಲಿ ತಾನು ಕೂಡ ಮದುವೆಯಾಗಬೇಕು ಅಂತಾ ಆಸೆಯಾಗುತ್ತದೆ ಅಂತಾ ಅನುಶ್ರೀ ಮುಕ್ತವಾಗಿ ಹಂಚಿಕೊಂಡಿದ್ದಾರೆ.

    ಹಸೆಮಣೆ ಏರೋದಕ್ಕೆ ಮನಸ್ಸು ಮಾಡಿರುವ ಈ ನಟಿಗೆ ಈಗಾಗಲೇ ಹುಡುಗ ಸಿಕ್ಕಿದ್ದಾನ, ಇಲ್ವಾ ಹಾಗೇ ಮಾತಿಗೆ ಹೇಳಿರೋದಾ ಅಂತಾ ಕಾದುನೋಡಬೇಕಿದೆ. ಒಟ್ನಲ್ಲಿ ನಿರೂಪಕಿ ಅನುಶ್ರೀ ಅವರು ಮದುವೆಯತ್ತ ಮನಸ್ಸು ಮಾಡಿರೋದಕ್ಕೆ ಪಡ್ಡೆಹುಡುಗರು ಖುಷಿಯಾಗಿದ್ದಾರೆ. ಸದ್ಯದಲ್ಲೇ ಅಭಿಮಾನಿಗಳಿಗೆ ಅನುಶ್ರೀ ಗುಡ್ ನ್ಯೂಸ್ ಕೊಡತ್ತಾರಾ ಅಂತಾ ಕಾದುನೋಡಬೇಕಿದೆ.

  • ಭಾವುಕರಾಗಿ ಕಾರ್ಯಕ್ರಮ ಶುರು ಮಾಡಿದ ಅನುಶ್ರೀ

    ಭಾವುಕರಾಗಿ ಕಾರ್ಯಕ್ರಮ ಶುರು ಮಾಡಿದ ಅನುಶ್ರೀ

    ಖ್ಯಾತ ನಿರೂಪಕಿ ಅನುಶ್ರೀ ಇಂದು ‘ಜೇಮ್ಸ್’ ಪ್ರಿ-ರಿಲೀಸ್ ಈವೆಂಟ್ ನಡೆಸಬೇಕಾದರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೆನೆದು ಭಾವುಕರಾಗಿದ್ದಾರೆ.

    ಅಪ್ಪು ನಟನೆಯ ಕೊನೆಯ ಚಿತ್ರ ‘ಜೇಮ್ಸ್’ ಅವರ ಹುಟ್ಟುಹಬ್ಬದ ದಿನವೇ ರಿಲೀಸ್ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ‘ಜೇಮ್ಸ್’ ಸಿನಿಮಾದ ಪ್ರಿ-ರಿಲೀಸ್ ಈವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ದೊಡ್ಮನೆ ಕುಟುಂಬ ಸೇರಿದಂತೆ ವಿವಿಧ ತಾರಾಬಳಗ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಈವೆಂಟ್ ನಿರೂಪಣೆಯನ್ನು ಅನುಶ್ರೀ ವಹಿಸಿದ್ದರು. ಈ ವೇಳೆ ಪುನೀತ್ ಅವರನ್ನು ನೆನೆದು ದುಃಖಿತರಾಗಿದ್ದಾರೆ. ಇದನ್ನೂ ಓದಿ: ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

    ಅಪ್ಪುವಿನ ಅಭಿಮಾನಿಗಳಲ್ಲಿ ಅನುಶ್ರೀ ಸಹ ಒಬ್ಬರಾಗಿದ್ದು, ಅವರೇ ನನ್ನ ನೆಚ್ಚಿನ ನಟ ಎಂದು ಹಲವು ಶೋಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇಂದು ಅವರಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ನೆನೆದು ಕಣ್ಣಿರಿಟ್ಟಿದ್ದಾರೆ.

    ಪವರ್ ಸ್ಟಾರ್‌ನನ್ನು ನೆನೆದರೆ ಎಲ್ಲರ ಕಣ್ಣಲ್ಲಿ ನೀರುಬರುವುದು ಸಹಜ. ಅದರಲ್ಲಿಯೂ ಅವರನ್ನು ಹತ್ತಿರದಿಂದ ನೋಡಿದವರಿಗೆ ಮತ್ತು ಅಭಿಮಾನಿಗಳಿಗೆ ಅಪ್ಪು ಇಲ್ಲ ಎಂಬ ಸುದ್ದಿಯನ್ನು ಇನ್ನೂ ಅರಗಿಸಿಕೊಂಡಿಲ್ಲ. ಅಪ್ಪು ಅಗಲಿದಾಗಿನಿಂದ ಅವರ ಅಭಿಮಾನಿಗಳು ಅವರಿಗಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ.

    ಇಂದು ಸಹ ಈವೆಂಟ್‍ನಲ್ಲಿ ಡ್ಯಾನ್ಸ್ ಕಲಾವಿದರು ಪುನೀತ್ ಅಭಿನಯದ ಹಾಡುಗಳಿಗೆ ಡ್ಯಾನ್ಸ್ ಮಾಡಿ ನಮನ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಬೇಡವೆಂದ ಸಾಂಗ್ ಮತ್ತೆ ಪ್ರೇಕ್ಷಕರ ಮುಂದೆ – ಯಾವುದು ಈ ಸಾಂಗ್?

  • ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?

    ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?

    ಕನ್ನಡದ ಹೆಸರಾಂತ ನಿರೂಪಕಿ ಅನುಶ್ರೀ ‘ಸೈತಾನ್’ ರೂಪ ಪಡೆದಿದ್ದಾರೆ. ಅರರೇ.. ಈ ಮುದ್ದಾದ ಹುಡುಗಿಗೆ ಸೈತಾನ್ ಅನ್ನೋಕೆ ಹೇಗಾದರೂ ಮನಸ್ಸು ಬರತ್ತೆ ಅಂದುಕೊಳ್ಳಬಹುದು. ನಿಜ, ಅವರು ಇದೀಗ ಸೈತಾನ್ ಹೆಸರಿನ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಅಂಥದ್ದೇ ಹೆಸರಿನ ವಿಚಿತ್ರ ಪಾತ್ರ ಎನ್ನುವುದು ಕುತೂಹಲ. ಇದನ್ನೂ ಓದಿ : ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್


    ಉಪ್ಪು ಹುಳಿ ಖಾರ ಸಿನಿಮಾದ ನಂತರ ಅನುಶ್ರೀ ಕಿರುತೆರೆಯಲ್ಲೇ ಬ್ಯುಸಿಯಾಗಿದ್ದರು. ಇದೀಗ ಸೈತಾನ್ ಮೂಲಕ ಮತ್ತೆ ಹಿರಿತೆರೆಗೆ ಆಗಮಿಸಿದ್ದಾರೆ. ಈ ಸಿನಿಮಾದ ಕುರಿತು ಮಾತನಾಡಿದ ಅವರು, “ನಾನು ಈ ಚಿತ್ರದಲ್ಲಿ ಅಭಿನಯಿಸಲು ಕಾರಣ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಅವರೆ ನನಗೆ ನಿರ್ಮಾಪಕ ಕಂ ನಿರ್ದೇಶಕ ಲೋಹಿತ್ ಅವರ ಪರಿಚಯ‌ ಮಾಡಿಸಿದ್ದು. ಈ ಬಗ್ಗೆ ಇಮ್ರಾನ್ ನನಗೆ ಹೇಳಿದಾಗ ನಾನು ಬೇಡ ಅಂದೆ. ಕಿರುತೆರೆಯಲ್ಲಿ ಆರಾಮವಾಗಿದ್ದೀನಿ ಅಂತಲೂ ಹೇಳಿದ್ದೆ. ನಂತರ ಅವರು ಕಥೆ ಕೇಳಿ ಅಂದರು. ಲೋಹಿತ್ ಹೇಳಿದ ಕಥೆ ಕೇಳಿ ಅಭಿನಯಿಸಲು ಒಪ್ಪಿಕೊಂಡೆ. ಉಪ್ಪು ಹುಳಿ ಖಾರ ಚಿತ್ರದ ನಂತರ ಮತ್ತೊಮ್ಮೆ ನನ್ನ ರೀ ಎಂಟ್ರಿ ಅನ್ನಬಹುದು. ಇದರಲ್ಲಿ ಹೀರೋ, ಹೀರೋ ಇನ್ ಅಂತ ಏನು ಇಲ್ಲ. ಕಥೆಯೇ ನಿಜವಾದ ಹೀರೋ ಎನ್ನುತ್ತಾರೆ” ಎಂದರು. ಇದನ್ನೂ ಓದಿ : ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!


    ಈಗಾಗಲೇ ಮಮ್ಮಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಲೋಹಿತ್.ಹೆಚ್, ಈ ಸಿನಿಮಾಗೆ ನಿರ್ಮಾಪಕ. ತಮ್ಮದೇ ತಂಡದಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾಕರ್ ಎನ್ನುವ ಹೊಸ ಹುಡುಗನಿಗೆ ನಿರ್ದೇಶಕನ ಪಟ್ಟ ಕಟ್ಟಿದ್ದಾರೆ. ಸದ್ದಿಲ್ಲದೇ ಮೊದಲ ಹಂತದ ಶೂಟಿಂಗ್ ಕೂಡ ಮುಗಿಸಿದ್ದಾರೆ ನಿರ್ದೇಶಕರು. ಮಾಸಾಂತ್ಯಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆಯಂತೆ.ಇದನ್ನೂ ಓದಿ : ಅಪ್ಪುವಿನಂತೆ ಸಾವಿನಲ್ಲೂ ಸಾರ್ಥಕತೆ ಮೆರೆದ ಮಾವ ರೇವನಾಥ್


    ಗೌತಮ್ ಬಿ.ಎನ್, ಕೃತಿ, ಐಶ್ವರ್ಯ ಶಿಂಧೋಗಿ, ಸಾರಿಕಾ ರಾವ್, ಭಾರ್ಗವ ವೆಂಕಟೇಶ್, ಗ್ರೀಷ್ಮ ಶ್ರೀಧರ್, ಹರ್ಷ್, ಸಾರಿಕಾ ರಾವ್ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

  • ಮತ್ತೆ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಲು ಸಜ್ಜಾದ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ

    ಮತ್ತೆ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಲು ಸಜ್ಜಾದ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ

    ನ್ನಡ ಕಿರುತೆರೆ ಅಂಗಳದ ಸ್ಟಾರ್ ಆಂಕರ್, ಚಿಟಪಟ ಮಾತಿನ ಚಿನಕುರಳಿ ಅನುಶ್ರೀ ಸ್ಯಾಂಡಲ್‍ವುಡ್ ಅಂಗಳಕ್ಕೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ.

    ಉಪ್ಪು ಹುಳಿ ಖಾರ ಸಿನಿಮಾ ನಂತರ ಬೇರೆ ಯಾವುದೇ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಡದೇ ಕಿರುತೆರೆ ನಿರೂಪಣೆಯಲ್ಲಿಯೇ ಬ್ಯುಸಿಯಾಗಿರುವ ಅನುಶ್ರೀ ಹೊಸ ವರ್ಷದ ಆರಂಭದಲ್ಲಿ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿ ಬಳಗಕ್ಕೆ ನೀಡಿದ್ದಾರೆ.

    ಹೌದು, ಹೊಸ ವರ್ಷದ ಆರಂಭದಲ್ಲಿಯೇ ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಮಾಹಿತಿಯನ್ನು ಅನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಭಾಕರನ್ ಎಂಬ ಹೊಸ ಪ್ರತಿಭೆ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾದಲ್ಲಿ ಅನುಶ್ರೀ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಾರಾರ್, ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಸಿನಿಮಾದಲ್ಲಿದ್ದು ಚಿತ್ರದ ಟೈಟಲ್ ಬಗ್ಗೆ ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳಲಾಗುವುದಾಗಿ ಅನುಶ್ರೀ ತಿಳಿದ್ದಾರೆ. ಚಿತ್ರದ ಮುಹೂರ್ತ ಕಾರ್ಯವೂ ಚಿಕ್ಕದಾಗಿ ನೇರವೇರಿದ್ದು, ಎಸ್‍ಎಂಪಿ ಪ್ರೊಡಕ್ಷನ್ ಹಾಗೂ ಲೋಹಿತ್ ಹೆಚ್ ಪ್ರೊಡಕ್ಷನ್ ಜಂಟಿ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರಲಿದೆ. ನಾಲ್ಕು ವರ್ಷದ ಬಳಿಕ ಅನುಶ್ರೀ ಬೆಳ್ಳೆತೆರೆಗೆ ಕಂಬ್ಯಾಕ್ ಮಾಡುತ್ತಿರುವುದು ಅವರ ಅಭಿಮಾನಿ ಬಳಗಕ್ಕೆ ಸಹಜವಾಗಿಯೇ ಸಂತಸ ತಂದಿದೆ. ಇದನ್ನೂ ಓದಿ: ಸೆನ್ಸಾರ್ ಅಂಗಳದಲ್ಲಿರುವ ‘ಪುರುಷೋತ್ತಮ’ ಚಿತ್ರತಂಡದಿಂದ ಸದ್ಯದಲ್ಲೇ ಟ್ರೇಲರ್ ಉಡುಗೊರೆ

    ತಮ್ಮ ವಿಭಿನ್ನ ನಿರೂಪಣೆ ಶೈಲಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಕಳೆದ ಒಂದೂವರೆ ದಶಕದಿಂದ ನಿರೂಪಕರಾಗಿ ಜನಮನ್ನಣೆ ಪಡೆದಿರುವ ಅನುಶ್ರೀ ಸಿನಿಮಾದಲ್ಲೂ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. 2011ರಲ್ಲಿ ತೆರೆಕಂಡ ಭೂಮಿ ತಾಯಿ ಸಿನಿಮಾ ಮೂಲಕ ಸಿಲ್ವರ್ ಸ್ಕ್ರೀನ್‍ಗೆ ಎಂಟ್ರಿಕೊಟ್ಟ ಮಾತಿನ ಮೋಡಿಗಾರ್ತಿ ಬೆಳ್ಳಿ ಕಿರಣ, ಬೆಂಕಿಪಟ್ನ, ರಿಂಗ್ ಮಾಸ್ಟರ್, ಉತ್ತಮ ವಿಲನ್, ಮಾದ ಮತ್ತು ಮಾನಸಿ, ಉಪ್ಪು ಹುಳಿ ಖಾರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಅದಿತಿ ಪ್ರಭುದೇವ ಮದುವೆ ಆಗಲಿರುವ ಹುಡುಗ ಯಾರು ಗೊತ್ತಾ?

    ಉಪ್ಪು ಹುಳಿ ಖಾರ ಸಿನಿಮಾ ನಂತರ ನಾಲ್ಕು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಅನುಶ್ರೀ ಯೂಟ್ಯೂಬ್ ಚಾನೆಲ್ ಆರಂಭಿಸಿ ಸ್ಟಾರ್ ನಟ ನಟಿಯರ ಸಂದರ್ಶನ ಮಾಡುತ್ತಿದ್ದಾರೆ. ಇದೀಗ ನಿರೂಪಣೆ ಜೊತೆಗೆ ವಿಭಿನ್ನ ಕಥಾಶೈಲಿ ಒಳಗೊಂಡ ಸಿನಿಮಾದಲ್ಲೂ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

  •  ಒಳ್ಳೆತನದಲ್ಲಿ ಎಂದಿಗೂ ಜೀವಂತ – ಸೋಶಿಯಲ್ ಮೀಡಿಯಾಕ್ಕೆ ಮರಳಿದ ಅನುಶ್ರೀ

     ಒಳ್ಳೆತನದಲ್ಲಿ ಎಂದಿಗೂ ಜೀವಂತ – ಸೋಶಿಯಲ್ ಮೀಡಿಯಾಕ್ಕೆ ಮರಳಿದ ಅನುಶ್ರೀ

    ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ ಭರ್ತಿ ಒಂದು ತಿಂಗಳಾಗಿದೆ. ತನ್ನ ನೆಚ್ಚಿನ ನಟನ ನಿಧನದ ದುಃಖದಲ್ಲಿದ್ದ ಅನುಶ್ರೀ ಕೆಲಕಾಲ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರು. ಇಂದು ಮತ್ತೆ ಪೋಸ್ಟ್ ಹಾಕಿಕೊಳ್ಳುವ ಮೂಲಕ ಮರಳಿದ್ದಾರೆ.

    ಹೌದು. ಭಾವುಕರಾಗಿಯೇ ಪೋಸ್ಟ್ ಹಾಕಿರುವ ಅನುಶ್ರೀ ನೋವು …ದುಃಖ …ಈಗ ಜೀವನದ ಬಲವಾಗಿ ಬದುಕಬೇಕು ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟನನ್ನು ಇಂದು ನೆನಪಿಸಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ..?
    ಕಾಲ ನೀನು ಮಾಯ.. ಇಲ್ಲ ನಿನಗೆ ನ್ಯಾಯ.. ತಿಂಗಳು ಕಳೆದರು.. ವರ್ಷಗಳು ಉರುಳಿದರೂ.. ಮಾಸುವುದಿಲ್ಲ.. ಮರೆಯುವುದಿಲ್ಲ.. ಅಳಿಯುವುದಿಲ್ಲ.. ಒಳ್ಳೆಯತನದಲ್ಲಿ ಎಂದಿಗೂ ಜೀವಂತ ಎಂದು ಅಪ್ಪು ಹೆಸರು ಹಾಕದೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ಎಂದರೆ ನನಗೆ ಹುಚ್ಚು ಅಭಿಮಾನ: ಅನುಶ್ರೀ

    ಅನುಶ್ರೀ ಈ ರೀತಿ ಪೋಸ್ಟ್ ಹಾಕುತ್ತಿದ್ದಂತೆಯೇ ಅಭಿಮಾನಿಗಳು ಕೂಡ ಕಾಮೆಂಟ್ ಗಳನ್ನು ಮಾಡಿದ್ದಾರೆ. ಹಲವು ಮಂದಿ ಮಿಸ್ ಯೂ ಅಪ್ಪು ಸರ್ ಎಂದು ಹೇಳಿದ್ದಾರೆ. ಅನುಶ್ರೀಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ತುಂಬಾ ಅಭಿಮಾನ, ಗೌರವ. ಅಪ್ಪು ನಮ್ಮನೆಲ್ಲ ಅಗಲಿ ಇಂದಿಗೆ ಒಂದು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಂತೆಯೇ ಅನುಶ್ರೀ ಕೂಡ ಅಪ್ಪು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

    ಅಕ್ಟೋಬರ್ 29ರಂದು ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಸ್ತಂಭನದಿಂದಾಗಿ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಅವರ ಕುಟುಂಬ, ಅಭಿಮಾನಿ ವರ್ಗ ಹಾಗೂ ಇಡೀ ಚಿತ್ರರಂಗಕ್ಕೆ ಬರಸಿಡಿಲು ಬಡಿಂತಾಗಿದ್ದು, ಇಂದಿಗೂ ಜನ ಅಪ್ಪು ಸಮಾಧಿಗೆ ಭೇಟಿ ನೀಡುತ್ತಲೇ ಇದ್ದಾರೆ. ಅಪ್ಪು ನಿಧನದ ಬಳಿಕ ಸನುಶ್ರೀ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಸೋಶಿಯಲ್ ಮೀಡಿಯಾದಿಂದಲೂ ಕೊಂಚ ದೂರ ಉಳಿದಿದ್ದು, ಇಂದು ಮತ್ತೆ ಮರಳಿದ್ದಾರೆ.

  • ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ, ಗೆಳೆಯ ಪ್ರಶಾಂತ್ ಸಂಬರ್ಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ರೊಚ್ಚಿಗೆದ್ದಿದ್ದಾರೆ. ಸಂಬರ್ಗಿಯವರು ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅಂತ ಹೇಳಿಕೊಳ್ಳಲು ಪ್ರೂಫ್ ಏನಿದೆ ಎಂದು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚಂದ್ರಚೂಡ್, ಐತಿಹಾಸಿಕ ಪುರುಷರು, ಸಾಧಕರು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊಡ್ಡ ದೊಡ್ಡ ಹೆಸರು ತಂದುಕೊಟ್ಟವರು ಹಾಗೂ ಮಾಡೆಲ್ ಗಳ ಹೆಸರುಗಳನ್ನು ಹೇಳಿಕೊಂಡು, ಅವರ ಮೊಮ್ಮಗ ಅಂತ ಹೇಳಿಕೊಂಡು ಇವರು ಮಾಡುತ್ತಿರುವ ಕುತಂತ್ರ ಏನು ಎಂದು ಪ್ರಶ್ನಿಸುವ ಮೂಲಕ ಸಂಬರ್ಗಿ ವಿರುದ್ಧ ಗುಡುಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿರುವ ಸಂದರ್ಭದಲ್ಲಿ ಅವರು ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಎಮದು ಹೇಳಿದಾಗ ಮೊದಲು ನಾನು ವಿರೋಧಿಸಿದೆ. ನಂತರ ಅದೊಂದು ಶೋ ಎಂದು ಸುಮ್ಮನಾದೆ. ಆದರೆ ಹೊರಗಡೆ ಬಂದ ಬಳಿಕ ಐತಿಹಾಸಿಕ ಪುರುಷರ, ಸಾಧಕರ ಹೆಸರನ್ನು ಹೇಳಬಾರದು. ಐತಿಹಾಸಿಕವಾಗಿ ರಾಣಿ ಚೆನ್ನಮ್ಮಗೆ ಮೊಮ್ಮಗ ಇರಲು ಸಾಧ್ಯವಿಲ್ಲ. ಇದನ್ನು ಕೇಳಿದ್ರೆ ಜನ ನಕ್ಕು ಬಿಡ್ತಾರೆ. ಈ ವಿಚಾರ ದುರುಪಯೋಗವಾಗುತ್ತೆ. ಈ ರೀತಿ ದುರ್ಬಳಕೆ ಮಾಡಿಕೊಳ್ಳಬೇಡ ಎಂದು ಅವರಿಗೆ ನಾನು ಬುದ್ಧಿವಾದ ಹೇಳಿದ್ದೆ ಎಂದರು. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ಈ ಹಿಂದೆ ನಾನು ಭೂತಾಯಿಯನ್ನು ಮಾರುವುದಾಗಿ ಸಂಬರ್ಗಿ ಹೇಳಿಕೆ ನೀಡಿದ್ದರು. ಇವರು ಒಬ್ಬ ನೆಲೆಹಿಡುಕ, ದಲ್ಲಾಳಿ. ಕಳೆದ ಮೂರು ದಿನಗಳ ಹಿಂದೆ ನಿರೂಪಕಿ ಅನುಶ್ರೀ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಮಂಗಳೂರಲ್ಲಿ 12 ಕೋಟಿ ಹಾಗೂ ಬೆಂಗಳೂರಿನಲ್ಲಿ 4 ಕೋಟಿ ರೂ. ನ ಮನೆ ಕಟ್ಟಿದ್ದಾರೆ, ಐಷಾರಾಮಿ ಕಾರಿದೆ. ಇದು ಡ್ರಗ್ಸ್ ನಿಂದ ಬಂತು ಎಂದು ಹೇಳಿಕೆ ನೀಡಿದ್ದರು. ಆದರೆ ಇವುಗಳಿಗೆ ದಾಖಲೆಗಳನ್ನು ನೀಡಬೇಕಲ್ವ ಎಂದು ಮರು ಪ್ರಶ್ನೆಗೈದ್ರು.

    ಶುಗರ್ ಡ್ಯಾಡಿ ಎಂಬುದು ದೇವರಾಜ ಅರಸು, ಗುಂಡೂರಾವ್ ಹಾಗೂ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ನಮಗೆ ಗೊತ್ತಿರುವ ಪದ. ಇದಕ್ಕೆ ಸಂಬಂಧಪಟ್ಟ ಏನಾದರೂ ದಾಖಲೆಗಳು ಸಂಬರ್ಗಿ ಬಳಿ ಇದೆಯಾ ಎಂದು ಕೇಳಿದರು. ಒಬ್ಬರು ಮಾಜಿ ಮುಖ್ಯಮಂತ್ರಿಯವರು ಇನ್ನೊಬ್ಬ ನಟಿಗೆ ಶುಗರ್ ಡ್ಯಾಡಿ ಆಗಿದ್ದಾರೆ. ಲಕ್ಷಾಂತರ ರೂ. ಹಣ ಕೊಡ್ತಾರೆ. ಡ್ರಗ್ಸ್ ಪೆಡ್ಲಿಂಗ್ ಮಾಡ್ತಾರೆ. ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಡಿಸೆಂಬರ್ ನಲ್ಲಿ ಕೊಡುತ್ತೇನೆ ಅಂತ ನಾನು ಹೇಳಿಕೆ ನೀಡಿದರೆ ನೀವು ಪ್ರಚಾರ ಮಾಡ್ತೀರಾ..?, ಅದೇ ರೀತಿ ದಾಖಲೆಗಳೇ ಇಲ್ಲದೆ ಅನುಶ್ರೀ ಬಗ್ಗೆ ಸಂಬರ್ಗಿ ಹೇಗೆ ಆರೋಪ ಮಾಡಿದ್ರು ಎಂದು ಚಂದ್ರಚೂಡ್ ಪ್ರಶ್ನೆಗಳ ಸುರಿಮಳೆಗೈದ್ರು.

    ಸುಖಾಸುಮ್ಮನೆ ಮಾತನಾಡುತ್ತಿರುವ ಸಂಬರ್ಗಿಯವರು ಒಂದು ಶೀಟ್ ಆದರೂ ದಾಖಲೆ ಕೊಡಲಿ. ಸುಮ್ಮನೆ ಪ್ರಚಾರ ತೆಗೆದುಕೊಂಡು ಬಿಜೆಪಿ ಪಕ್ಷ ಸೇರಿಕೊಳ್ಳಲು ಹವಣಿಸುತ್ತಿದ್ದಾರೆ. ಕುತಂತ್ರಗಾರಿಕೆ ಮಾಡುತ್ತಿದ್ದಾರೆ. ದಾಖಲೆಗಳನ್ನು ಬಿಡುಗಡೆ ಮಾಡಲು ಯಾಕೆ ಇಷ್ಟೊಂದು ಸಮಯ ಬೇಕು..?, ಶೃತಿ ಹರಿಹರನ್ ಅವರ ಮೀಟೂ ವಿಚಾರಕ್ಕೆ ಮೂರು ವರ್ಷವೇ ಆಗೋಯ್ತು. ಇದೀಗ ಕರ್ನಾಟಕದಲ್ಲಿ ಡ್ರಗ್ಸ್ ವಿಚಾರ ಬಂದು ಸುಮಾರು ಎರಡೂವರೆ ವರ್ಷ ಆಗೋಯ್ತು. ಎಲ್ಲಿದೆ ದಾಖಲೆಗಳು..?. ಈ ಪ್ರಕರಣಗಳು ನಾಳೆ ಯಾವ ರೀತಿಯ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತೆ ಗೊತ್ತಿಲ್ಲ. ಆದರೆ ಸಮಾಜಕ್ಕೆ, ಯುವಕರಿಗೆ ಒಳ್ಳೆಯದಾಗಬೇಕು. ಆದರೆ ಈ ರೀತಿ ಆರೋಪಗಳನ್ನು ಮಾಡಿಕೊಂಡು ಕಾಲಹರಣ ಮಾಡಿ ಪ್ರಚಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸಂಬರ್ಗಿ ವಿರುದ್ಧ ಕಿಡಿಕಾರುವ ಮೂಲಕ ದಾಖಲೆಗಳನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಚಂದ್ರಚೂಡ್ ಆಗ್ರಹಿಸಿದರು.

  • ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

    ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

    ಬೆಂಗಳೂರು: ನನ್ನ ತಾಯಿ 60 ವರ್ಷ ಮೇಲ್ಪಟ್ಟವರು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಅದು ಯಾವನೇ ಆಗಲಿ, ಎಂತಹವನೇ ಆಗಲಿ, ಎಷ್ಟು ದೊಡ್ಡವನೇ ಆಗಿರಲಿ ಯಾರನ್ನೂ ಬಿಡುವುದಿಲ್ಲ ಎಂದು ನಟಿ, ನಿರೂಪಕಿ ಅನುಶ್ರೀ ಗುಡುಗಿದ್ದಾರೆ.

    ಡ್ರಗ್ಸ್ ಪ್ರಕರಣದ ಕುರಿತು ಮಹಾಲಕ್ಷ್ಮಿ ಲೇಔಟ್ ನಲ್ಲಿರೋ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಪಲ್ ಲೈಫ್‍ನಲ್ಲಿ ನನ್ನನ್ನು ಯಾರೋ ಟಾರ್ಗೆಟ್ ಮಾಡುತ್ತಿದ್ದಾರೆ. ಯಾಕೆ, ಏನು? ಯಾವುದೂ ನನಗೆ ಗೊತ್ತಿಲ್ಲ. ಆದರೆ ನಾನು ಸತ್ಯವಾಗಿದ್ದೇನೆ, ನಾನು ಹೇಳಿದ್ದೆಲ್ಲ ಸತ್ಯ. ಇದೆಲ್ಲವನ್ನೂ ಮೀರಿ ಟಿವಿಗಳಲ್ಲಿ ಬರುತ್ತಿರುವುದನ್ನು ನಾನು ತುಂಬಾ ಸ್ಟ್ರಾಂಗ್ ಆಗಿ ಹ್ಯಾಂಡಲ್ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಂಡಿಲ್ಲ, 12 ಕೋಟಿ ಮನೆ ಇಲ್ಲ, ಈಗಲೂ ವಿಚಾರಣೆಗೆ ಸಿದ್ಧ: ಅನುಶ್ರೀ

    ಇದೆಲ್ಲವನ್ನೂ ಮೀರಿ ಒಂದು ವಿನಂತಿ. ನನ್ನ ತಾಯಿ 60 ವರ್ಷಕ್ಕೂ ಮೇಲ್ಪಟ್ಟವರು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ, ನನ್ನ ತಾಯಿಯ ಆರೋಗ್ಯಕ್ಕೆ ಏನಾದರೂ ತೊಂದರೆ ಆದರೆ ಅದು ಯಾವನೇ ಆಗಲಿ, ಅವನು ಎಂತಹವನೇ ಆಗಲಿ, ಎಷ್ಟು ದೊಡ್ಡವನೇ ಆಗಲಿ ನಾನು ಯಾರನ್ನೂ ಬಿಡುವುದಿಲ್ಲ ಎಂದು ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ: ಮುಂಬೈನಿಂದಲೇ ವಕೀಲರಿಗೆ ಕರೆ ಮಾಡಿ ಅನುಶ್ರೀ ಮಾತುಕತೆ!

    ನಾನು ತುಂಬಾ ಸಿಂಪಲ್ ವ್ಯಕ್ತಿ, ಕೆಲಸಕ್ಕೆ ಹೋಗುತ್ತೇನೆ, ಮರಳಿ ನೇರವಾಗಿ ಮನೆಗೆ ಬರುತ್ತೇನೆ. ಯಾವುದೇ ರೀತಿಯ ಪಾರ್ಟಿ, ಪಬ್‍ಗಳಿಗೆ ಎಲ್ಲೂ ಹೋಗುವುದಿಲ್ಲ. ನಾನಾಯಿತು, ನನ್ನ ಕೆಲಸ ಆಯ್ತು ಎಂದುಕೊಂಡು ಕೆಲಸ ಮುಗಿಸಿ ನೇರವಾಗಿ ಮನೆಗೆ ಬರುತ್ತೇನೆ. ಬೆಳಗ್ಗೆ ರನ್ನಿಂಗ್, ಜಿಮ್ ಗೆ ಹೋಗುತ್ತೇನೆ ಇಷ್ಟೇ ನನ್ನ ಸಿಂಪಲ್ ಲೈಫ್. ಈ ಸಿಂಪಲ್ ಲೈಫ್‍ನಲ್ಲಿ ನನ್ನನ್ನು ಯಾರೋ ಟಾರ್ಗೆಟ್ ಮಾಡುತ್ತಿದ್ದಾರೆ. ಯಾಕೆ, ಏನು? ಯಾವುದೂ ನನಗೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

  • ಮುಂಬೈನಿಂದಲೇ ವಕೀಲರಿಗೆ ಕರೆ ಮಾಡಿ ಅನುಶ್ರೀ ಮಾತುಕತೆ!

    ಮುಂಬೈನಿಂದಲೇ ವಕೀಲರಿಗೆ ಕರೆ ಮಾಡಿ ಅನುಶ್ರೀ ಮಾತುಕತೆ!

    ಮಂಗಳೂರು: ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಮತ್ತೆ ಡ್ರಗ್ಸ್ ಕಂಟಕ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಅವರು ತಮ್ಮ ವಕೀಲರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

    ಡ್ರಗ್ಸ್ ಪ್ರಕರಣ ಎದುರಿಸುತ್ತಿರುವ ಕಿಶೋರ್ ಅಮನ್ ಶೆಟ್ಟಿ ಅವರು ಸಹಿ ಹಾಕಿರುವ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ನಿನ್ನೆ ಅನುಶ್ರೀ ಎಲ್ಲಿಯೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಲ್ಲದೆ ಬೆಂಗಳೂರಿನ ಮನೆಯಲ್ಲೂ ಇರಲಿಲ್ಲ. ಕೊನೆಗೆ ಅವರು ಮುಂಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

    ಸದ್ಯ ತಮ್ಮ ಆಪ್ತರ ಜೊತೆ ಅನುಶ್ರೀ ಮುಂಬೈನಲ್ಲಿರುವುದು ಖಚಿತವಾಗಿದ್ದು, ಅಲ್ಲಿಂದಲೇ ತಮ್ಮ ವಕೀಲರ ಜೊತೆ ಪ್ರಕರಣ ಸಂಬಂಧ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ

    ಜಾರ್ಜ್ ಶೀಟ್‍ನಲ್ಲಿ ಏನಿತ್ತು..?
    2007-0ರಲ್ಲಿ ನಾನು ಮತ್ತು ತರುಣ್ ಇಬ್ಬರೂ ಕೂಡಿ ಅನುಶ್ರೀಯವರಿಗೆ ಡ್ಯಾನ್ಸ್ ಕೋರಿಯಾಗ್ರಾಫಿ ಮಾಡಿರುತ್ತೇವೆ. ಅನುಶ್ರೀಯವರು ಡ್ಯಾನ್ಸ್ ಕಾಂಪಿಟೇಶನ್‍ಗೆ ಪ್ರ್ಯಾಕ್ಟೀಸ್ ಮಾಡುವ ಸಮಯದಲ್ಲಿ ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿ ತನಕ ಪ್ರ್ಯಾಕ್ಟೀಸ್ ಮಾಡುತ್ತಾ ಕೆಲವು ದಿನ ಇದ್ದರು. ಕೆಲವೊಂದು ದಿನಗಳಲ್ಲಿ ನಾನು ಕೂಡ ತರುಣ್ ಜೊತೆಗೆ ಹೋಗಿದ್ದೆ. ಆ ದಿನಗಳಲ್ಲಿ ನಾವು ಮೂರು ಜನ ತರುಣ್‍ನ ಮನೆಯಲ್ಲೇ ಅಡುಗೆ ಮಾಡಿ ಊಟ ಮಾಡುವ ಸಮಯ ಮಾದಕ ವಸ್ತುಗಳಾದ ಎಕ್ಟಸಿ ಮಾತ್ರೆಗಳನ್ನು ಸೇವನೆ ಮಾಡಿರುತ್ತೇವೆ. ಕೆಲವು ದಿನಗಳಲ್ಲಿ ಅನುಶ್ರೀ ಮತ್ತು ತರುಣ್ ಇಬ್ಬರೇ ರೂಂನಲ್ಲಿ ಉಳಿದುಕೊಳ್ಳುತ್ತಿದ್ದರು.

    ಅನುಶ್ರೀಯವರು ಡ್ಯಾನ್ಸ್ ಕಾಂಪಿಟೇಶನ್‍ನಲ್ಲಿ ವಿನ್ ಆಗಿದ್ದಕ್ಕೆ ನಾನು, ತರುಣ್ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತು ಎಕ್ಟಸಿ ಮಾತ್ರೆಗಳನ್ನು ಸೇವಿಸಿ ಡ್ರಗ್ಸ್, ಡ್ರಿಂಕ್ಸ್ ಪಾರ್ಟಿ ಮಾಡಿರುತ್ತೇವೆ. ಮಾದಕ ಸೇವನೆ, ಖರೀದಿಯಲ್ಲಿ ಅನುಶ್ರೀಯವರು ಭಾಗಿಯಾಗಿರುತ್ತಾರೆ. ನಾವು ಡ್ಯಾನ್ಸ್ ಪ್ರ್ಯಾಕ್ಟೀಸ್ ಮಾಡುವ ಸಮಯ ಮತ್ತು ಅನುಶ್ರೀಯವರಿಗೆ ಕೋರಿಯಾಗ್ರಾಫಿಂಗ್ ಪ್ರ್ಯಾಕ್ಟೀಸ್ ಮಾಡುವ ಸಮಯದಲ್ಲಿ ಹಲವಾರು ಬಾರಿ ಮಾದಕ ವಸ್ತು ಎಕ್ಟಸಿ ಮಾತ್ರೆಗಳನ್ನು ಸೇವಿಸಿರುತ್ತೇವೆ. ಅನುಶ್ರೀಯವರು ಪ್ರ್ಯಾಕ್ಟೀಸ್ ಮಾಡಲು ನಮ್ಮ ರೂಂಗೆ ಬರುವಾಗ ಎಕ್ಟಸಿ ಮಾತ್ರೆಗಳನ್ನು ಖರೀದಿಸಿ ತಂದು ನಮಗೆ ನೀಡಿ ನಮ್ಮ ಜೊತೆ ಸೇವೆನೆಯನ್ನೂ ಮಾಡಿರುತ್ತಾರೆ. ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ

    ಡ್ಯಾನ್ಸ್ ಮಾಡಲು ಇದು ಹೆಚ್ಚು ತಾಕತ್ತು ಕೊಡುತ್ತದೆ, ಡ್ಯಾನ್ಸ್ ಮಾಡಲು ಖುಷಿ ಸಿಗುತ್ತದೆ, ಪ್ರ್ಯಾಕ್ಟೀಸ್ ಮಾಡಲು ಸುಲಭವಾಗುತ್ತದೆ ಎಂದು ನಾವೆಲ್ಲರೂ ಮಾತಾಡಿಕೊಳ್ಳುತ್ತಿದ್ದೆವು. ಡ್ರಗ್ಸ್ ಯಾರು ನೀಡುತ್ತಾರೆ ಎಂದು ಅನುಶ್ರೀಯವರಿಗೆ ನಮಗಿಂತ ಹೆಚ್ಚು ತಿಳಿದಿದೆ. ಅವರಿಗೆ ಡ್ರಗ್ಸ್ ಪೆಡ್ಲರ್‍ಗಳ ಪರಿಚಯ ಇರುತ್ತದೆ. ಅವರು ಸುಲಭವಾಗಿ ಮಾದಕ ವಸ್ತುಗಳನ್ನು ತರಿಸುತ್ತಾರೆ. ಅವರು ಹೇಗೆ ತರಿಸುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದ್ದು, ಇದಕ್ಕೆ ಕಿಶೋರ್ ಅಮನ್ ಶೆಟ್ಟಿ ಸಹಿ ಕೂಡ ಹಾಕಿರುವ ಪ್ರತಿ ಲಭ್ಯವಾಗಿತ್ತು.

    ಆದರೆ ಕಿಶೋರ್ ಶೆಟ್ಟಿ ಮಾತ್ರ ತಾನು ಅನುಶ್ರೀ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಅವರು ತುಂಬಾ ಕಷ್ಟಪಟ್ಟು ಬಂದಿದ್ದು, ಅವರನ್ನು ನಾನು ಗೌರವಿಸುತ್ತೇನೆ. ಅಲ್ಲದೆ ಇತ್ತೀಚೆಗೆ ನಾನು ಅವರನ್ನು ಭೇಟಿಯಾಗಿಲ್ಲ, ಫೋನ್ ನಂಬರ್ ಕೂಡ ಇಲ್ಲ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಕಿಶೋರ್ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

  • ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ

    ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ

    ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ನಲ್ಲಿ ನಿರೂಪಕಿ ಅನುಶ್ರೀ ಆರೋಪಿ ಅಂತ ಉಲ್ಲೇಖ ಆಗಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಕಿಶೋರ್ ಅಮನ್ ಡ್ರಗ್ ಕೇಸ್ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ ಸಂಬಂಧ ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಾರ್ಜ್ ಶೀಟ್ ಬಗ್ಗೆ ಆರೋಪಗಳಿದ್ರೆ ವಕೀಲರ ಮೂಲಕ ಕೋರ್ಟ್ ಗೆ ಹೇಳಬಹುದು. ಜಾರ್ಜ್ ಶೀಟ್ ನಲ್ಲಿ ಅನುಶ್ರೀ ಆರೋಪಿ ಎಂದು ಉಲ್ಲೇಖ ಆಗಿಲ್ಲ. ಕಿಶೋರ್ ಹೇಳಿಕೆಯಲ್ಲಷ್ಟೇ ಅನುಶ್ರೀ ಹೆಸರಿದೆ ಎಂದರು.

    ಕಿಶೋರ್ ಅಮನ್ ಮತ್ತೆ ಕರೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಪ್ರಕರಣದ ಸಂಪೂರ್ಣ ತನಿಖೆ ಪೂರ್ತಿ ಮಾಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದೇವೆ. ಒಂಬತ್ತು ತಿಂಗಳ ಹಿಂದೆಯೇ ಅಂತಿಮ ವರದಿ ಸಲ್ಲಿಸಿದ್ದೇವೆ. ಈಗ ಯಾಕೆ ಈ ವಿಚಾರ ಸುದ್ದಿಯಾಯಿತು ಗೊತ್ತಿಲ್ಲ. ಅನುಶ್ರೀ ಮೇಲೆ ಬಂದ ಆರೋಪಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿಲ್ಲ. ಆರು ಜನ ಆರೋಪಿಗಳ ಮೇಲೆ ಅಂತಿಮ ವರದಿ ಸಲ್ಲಿಸಿದ್ದೇವೆ. ಐದು ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಒಬ್ಬ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. 2020 ಸೆಪ್ಟೆಂಬರ್ 19 ಪ್ರಕರಣ ದಾಖಲು ಆಗಿತ್ತು. 2020ರ ಡಿಸೆಂಬರ್ 11ರಂದು ಅಂತಿಮ ವರದಿ ಸಲ್ಲಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಚಾರ್ಜ್ ಶೀಟ್‍ನಲ್ಲಿ ಏನಿದೆ?:
    2007-0ರಲ್ಲಿ ನಾನು ಮತ್ತು ತರುಣ್ ಇಬ್ಬರೂ ಕೂಡಿ ಅನುಶ್ರೀಯವರಿಗೆ ಡ್ಯಾನ್ಸ್ ಕೋರಿಯಾಗ್ರಾಫಿ ಮಾಡಿರುತ್ತೇವೆ. ಅನುಶ್ರೀಯವರು ಡ್ಯಾನ್ಸ್ ಕಾಂಪಿಟೇಶನ್‍ಗೆ ಪ್ರ್ಯಾಕ್ಟೀಸ್ ಮಾಡುವ ಸಮಯದಲ್ಲಿ ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿ ತನಕ ಪ್ರ್ಯಾಕ್ಟೀಸ್ ಮಾಡುತ್ತಾ ಕೆಲವು ದಿನ ಇದ್ದರು. ಕೆಲವೊಂದು ದಿನಗಳಲ್ಲಿ ನಾನು ಕೂಡ ತರುಣ್ ಜೊತೆಗೆ ಹೋಗಿದ್ದೆ. ಆ ದಿನಗಳಲ್ಲಿ ನಾವು ಮೂರು ಜನ ತರುಣ್‍ನ ಮನೆಯಲ್ಲೇ ಅಡುಗೆ ಮಾಡಿ ಊಟ ಮಾಡುವ ಸಮಯ ಮಾದಕ ವಸ್ತುಗಳಾದ ಎಕ್ಟಸಿ ಮಾತ್ರೆಗಳನ್ನು ಸೇವನೆ ಮಾಡಿರುತ್ತೇವೆ. ಕೆಲವು ದಿನಗಳಲ್ಲಿ ಅನುಶ್ರೀ ಮತ್ತು ತರುಣ್ ಇಬ್ಬರೇ ರೂಂನಲ್ಲಿ ಉಳಿದುಕೊಳ್ಳುತ್ತಿದ್ದರು.  ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ

    ಅನುಶ್ರೀಯವರು ಡ್ಯಾನ್ಸ್ ಕಾಂಪಿಟೇಶನ್‍ನಲ್ಲಿ ವಿನ್ ಆಗಿದ್ದಕ್ಕೆ ನಾನು, ತರುಣ್ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತು ಎಕ್ಟಸಿ ಮಾತ್ರೆಗಳನ್ನು ಸೇವಿಸಿ ಡ್ರಗ್ಸ್, ಡ್ರಿಂಕ್ಸ್ ಪಾರ್ಟಿ ಮಾಡಿರುತ್ತೇವೆ. ಮಾದಕ ಸೇವನೆ, ಖರೀದಿಯಲ್ಲಿ ಅನುಶ್ರೀಯವರು ಭಾಗಿಯಾಗಿರುತ್ತಾರೆ. ನಾವು ಡ್ಯಾನ್ಸ್ ಪ್ರ್ಯಾಕ್ಟೀಸ್ ಮಾಡುವ ಸಮಯ ಮತ್ತು ಅನುಶ್ರೀಯವರಿಗೆ ಕೋರಿಯಾಗ್ರಾಫಿಂಗ್ ಪ್ರ್ಯಾಕ್ಟೀಸ್ ಮಾಡುವ ಸಮಯದಲ್ಲಿ ಹಲವಾರು ಬಾರಿ ಮಾದಕ ವಸ್ತು ಎಕ್ಟಸಿ ಮಾತ್ರೆಗಳನ್ನು ಸೇವಿಸಿರುತ್ತೇವೆ. ಅನುಶ್ರೀಯವರು ಪ್ರ್ಯಾಕ್ಟೀಸ್ ಮಾಡಲು ನಮ್ಮ ರೂಂಗೆ ಬರುವಾಗ ಎಕ್ಟಸಿ ಮಾತ್ರೆಗಳನ್ನು ಖರೀದಿಸಿ ತಂದು ನಮಗೆ ನೀಡಿ ನಮ್ಮ ಜೊತೆ ಸೇವೆನೆಯನ್ನೂ ಮಾಡಿರುತ್ತಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

    ಡ್ಯಾನ್ಸ್ ಮಾಡಲು ಇದು ಹೆಚ್ಚು ತಾಕತ್ತು ಕೊಡುತ್ತದೆ, ಡ್ಯಾನ್ಸ್ ಮಾಡಲು ಖುಷಿ ಸಿಗುತ್ತದೆ, ಪ್ರ್ಯಾಕ್ಟೀಸ್ ಮಾಡಲು ಸುಲಭವಾಗುತ್ತದೆ ಎಂದು ನಾವೆಲ್ಲರೂ ಮಾತಾಡಿಕೊಳ್ಳುತ್ತಿದ್ದೆವು. ಡ್ರಗ್ಸ್ ಯಾರು ನೀಡುತ್ತಾರೆ ಎಂದು ಅನುಶ್ರೀಯವರಿಗೆ ನಮಗಿಂತ ಹೆಚ್ಚು ತಿಳಿದಿದೆ. ಅವರಿಗೆ ಡ್ರಗ್ಸ್ ಪೆಡ್ಲರ್‍ಗಳ ಪರಿಚಯ ಇರುತ್ತದೆ. ಅವರು ಸುಲಭವಾಗಿ ಮಾದಕ ವಸ್ತುಗಳನ್ನು ತರಿಸುತ್ತಾರೆ. ಅವರು ಹೇಗೆ ತರಿಸುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದ್ದು, ಇದಕ್ಕೆ ಕಿಶೋರ್ ಅಮನ್ ಶೆಟ್ಟಿ ಸಹಿ ಕೂಡ ಹಾಕಿರುವ ಪ್ರತಿ ಲಭ್ಯವಾಗಿದೆ.

  • ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಬೆಳಗಾವಿ: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್‍ನಲ್ಲಿ ಯಾವುದೇ ರೀತಿಯ ಒತ್ತಡಗಳು ಕೇವಲ ಊಹಾಪೋಹ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಹಿಂಜರಿಯುವುದಿಲ್ಲ. ಯಾರು ಡ್ರಗ್ಸ್ ಕೇಸ್‍ನಲ್ಲಿ ಭಾಗವಹಿಸಿದ್ದರೋ ಅವರು ಶಿಕ್ಷೆ ಅನುಭವಿಸುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

    ನಟಿ, ನಿರೂಪಕಿ ಅನುಶ್ರೀ ಅವರ ಮೇಲೆ ರಾಜಕೀಯ ಬೆಂಬಲ ಇರುವ ಹಿನ್ನೆಲೆ ಡ್ರಗ್ಸ್ ಕೇಸ್‍ನಲ್ಲಿ ಸಾಫ್ಟ್ ಕಾರ್ನರ್ ತೋರಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹದರಲ್ಲಿ ಯಾರು ಕೂಡ ಒತ್ತಡ ಮಾಡುವುದಿಲ್ಲ. ಡ್ರಗ್ಸ್ ಕೇಸ್‍ನಲ್ಲಿ ಬಹಳ ಕಠಿಣವಾದ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಮುಂದೆಯು ತೆಗೆದುಕೊಳ್ಳುತ್ತದೆ ಎಂದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

    ಯಾವುದೇ ಕಾರಣಕ್ಕೂ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ. ನಿಜವಾದ ಅಪರಾಧಿಗಳಾದರೆ ಅವರು ಶಿಕ್ಷೆಗೆ ಒಳಗಾಗುತ್ತಾರೆ. ಎಷ್ಟೇ ಪ್ರಭಾವಿಗಳಾದರೂ ಖಂಡಿತವಾಗಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಹೆಸರು ಕೇಳಿಬಂದಿರುವ ವಿಚಾರಕ್ಕೆ ಬಿಡುವ ಪ್ರಶ್ನೆಯೇ ಇಲ್ಲ, ಮಾಹಿತಿ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ