Tag: Anushree marriage

  • ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

    ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

    ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Kannada Anchor Anushree) ಸದ್ಯಕ್ಕೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಸರಳ ವಿವಾಹ ಅಂತ ಅವರು ಹೇಳಿಕೊಂಡಿದ್ದರೂ ಅದ್ಧೂರಿಯಂತೆ ಕಂಡುಬಂದಿತ್ತು. ಬಳಿಕ ಮದುವೆಯ ಒಂದೊಂದೇ ವೀಡಿಯೋಗಳನ್ನ ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡುತ್ತಾ ಬರ್ತಿದ್ದಾರೆ ಅನುಶ್ರೀ.

    ಇದೀಗ ಮದುವೆಯ (AnuShree Marriage) ಶಾಸ್ತ್ರಕ್ಕೆ ಧರಿಸಿದ್ದ ಒಂದು ಸೀರೆ ಬಗ್ಗೆ ಹಾಗೂ ಆ ಸೀರೆಯ ಅಸಲಿ ಬೆಲೆ ಬಗ್ಗೆ ಬಹಿರಂಗವಾಗಿ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್

    ಮುಹೂರ್ತಕ್ಕೂ ಮುನ್ನ ನಡೆಯುವ ದೇವತಾ ಕಾರ್ಯ ಶಾಸ್ತ್ರಕ್ಕಾಗಿ ಅನುಶ್ರೀ ಸಿಲ್ವರ್ ಬಣ್ಣದ ಸೀರೆ ಧರಿಸಿದ್ದರು. ನೋಡೋದಕ್ಕೆ ಬೆಲೆ ಬಾಳುವ ಸೀರೆಯಂತೆ ಕಾಣುತ್ತಿತ್ತು. ಇದೀಗ ಆ ಸೀರೆಯ ಬೆಲೆಯನ್ನ ಹೇಳುವ ಮೂಲಕ ಅಚ್ಚರಿ ಮೂಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಇಲ್ಲದ ರೂಲ್ಸ್ ದರ್ಶನ್‌ಗೆ ಯಾಕೆ?- ವಕೀಲರ ವಾದ

    ಸಿಲ್ವರ್ ಬಣ್ಣದ ಸೀರೆಯ ಫೋಟೋಗಳನ್ನ ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿರುವ ಅನುಶ್ರೀ ʻಎಲ್ಲಾ ಪೋಸ್ಟ್‌ಗಳು ಹೇಳ್ತಿವೆ, ಈ ಸೀರೆ ಬೆಲೆ 2.5 ಲಕ್ಷ ಅಂತ. ಆದ್ರೆ ಈ ಸೀರೆಯ ಅಸಲಿ ಬೆಲೆ 2,700 ರೂಪಾಯಿʼ ಎಂದಿದ್ದಾರೆ. ಜೊತೆಗೆ ʻಈ ಕ್ಷಣದ ನಗು ನಾ ಆರಾಧಿಸುವ ದೇವರು, ಆಶೀರ್ವಾದ ಮಾಡಿದ ಪ್ರೀತಿಯ ಕನ್ನಡಿಗರು ಕೊಟ್ಟ ವರʼ ಎಂದು ಹೇಳುವ ಮೂಲಕ ಮದುವೆಯ ಖುಷಿಯನ್ನ ಮೊದಲ ಬಾರಿ ಪದಗಳಲ್ಲಿ ವರ್ಣಿಸಿದ್ದಾರೆ.  ಇದನ್ನೂ ಓದಿ: ಹಿಂದೆಂದೂ ಕಂಡು ಕೇಳರಿಯದ ರುಕ್ಮಿಣಿ ವಸಂತ್ ಬೋಲ್ಡ್ ಫೋಟೋಶೂಟ್

    ಕುಶಾಲನಗರದ ರೋಷನ್ ಜೊತೆ ಅನುಶ್ರೀ ಕಳೆದ ಆಗಸ್ಟ್ 28 ರಂದು ಸಪ್ತಪದಿ ತುಳಿದಿದ್ದರು. ಅದಕ್ಕವರು ಸರಳ ವಿವಾಹ ಎಂದು ಹೇಳಿದ್ದರು. ಇನ್ನೂ ಸರಳವಾಗಿ ಮಂತ್ರಮಾಂಗಲ್ಯ ಮಾಡಿಕೊಳ್ಳಲು ಅನುಶ್ರೀ ಇಷ್ಟಪಟ್ಟಿದ್ದರಂತೆ. ಆದರೆ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಇದೀಗ ಅನುಶ್ರೀ ಮದುವೆಯಲ್ಲಿ ಉಟ್ಟ ಸೀರೆಯ ಅಸಲಿ ಬೆಲೆ ಹೇಳುವ ಮೂಲಕ ನೀವ್ ಅಂದುಕೊಂಡಿದ್ದೆಲ್ಲ ತಪ್ಪು ಅಸಲಿ ವಿಷಯ ಬೇರೆಯೇ ಇರುತ್ತೆ ಅನ್ನೋದನ್ನ ಮಾರ್ಮಿಕವಾಗಿ ನುಡಿದಿದ್ದಾರೆ.  ಇದನ್ನೂ ಓದಿ: ಕೀನ್ಯಾದಲ್ಲಿ ರಾಜಮೌಳಿ ಗಸ್ತು, ಕೀನ್ಯಾ ಸಚಿವ ಬಿಚ್ಚಿಟ್ಟರು `ಆ’ ರಹಸ್ಯ

  • ಮಾತಿನ ಮಲ್ಲಿ ಅನುಶ್ರೀ ಹೊಸ ಗಾಯನ.. ನವಜೋಡಿಗೆ ಹಾರೈಸಿದ ತಾರಾಗಣ..!

    ಮಾತಿನ ಮಲ್ಲಿ ಅನುಶ್ರೀ ಹೊಸ ಗಾಯನ.. ನವಜೋಡಿಗೆ ಹಾರೈಸಿದ ತಾರಾಗಣ..!

    ನಟಿ ನಿರೂಪಕಿ ಅನುಶ್ರೀ ಬಹುಕಾಲದ ಗೆಳೆಯ ರೋಷನ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರೀ ಬಾಳಲ್ಲಿ ಏಕಾಂಗಿ ನಿರೂಪಣೆಯ ನಂತರ ಹೊಸ ಮನ್ವಂತರ ಶುರುವಾಗಿದೆ. ಅನುಶ್ರೀ-ರೋಷನ್ ಈ ಕ್ಷಣಕ್ಕೆ ಸ್ಯಾಂಡಲ್ ವುಡ್ ನ ನಟರು, ಆಪ್ತರು ಹಾಗೂ ಕುಟುಂಬಸ್ಥರು ಸಾಕ್ಷಿಯಾಗಿದ್ದಾರೆ. ಅನುಶ್ರೀ ಮದುವೆ ಸಂಭ್ರಮ ಸಡಗರ ತುಂಬಾ ಸರಳವಾಗಿ ನಡೆದಿದೆ.

    ನಟಿ, ನಿರೂಪಕಿ ಮಾತಿನ ಮಲ್ಲಿ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರೀ ಬಾಳಲ್ಲಿ ಹೊಸ ಮನ್ವಂತರ ಶುರುವಾಗಿದೆ. ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದಾರೆ. ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ತಾಳಿಕಟ್ಟುವ ಶುಭ ವೇಳೆ ಮಾತಿನಮಲ್ಲಿ ಅನುಶ್ರೀ ಭಾವುಕರಾಗಿದ್ದಾರೆ.ಇದನ್ನೂ ಓದಿ: ಯಾದಗಿರಿ | ಅಪಾಯ ಮಟ್ಟ ಮೀರಿದ ಯರಗೋಳ ಕೆರೆ – ಸೇತುವೆ ದಾಟುತ್ತಿದ್ದ ಹಸು ನೀರುಪಾಲು

    ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಅನುಶ್ರೀ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಹಳದಿ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರ ನೆರವೇರಿತ್ತು. ಈ ವೇಳೆ ಅನುಶ್ರೀ ಆಪ್ತರು ಕುಟುಂಬಸ್ಥರು ಭಾಗಿಯಾಗಿದ್ದರು. ಅನುಶ್ರೀ ಮದುವೆಗೆ ಆಗಮಿಸಿದ ಸ್ಯಾಂಡಲ್ ವುಡ್ ಮಂದಿ ಅನುಶ್ರೀ ಹಾಗೂ ರೋಷನ್ ಗೆ ಶುಭ ಹಾರೈಸಿದ್ದಾರೆ. ನಟ ಶರಣ್, ನಟಿ ಚೈತ್ರಾ ಆಚಾರ್, ರಾಜ್ ಬಿ ಶೆಟ್ಟಿ, ನಟಿ ಪ್ರೇಮಾ, ರಚಿತಾ ರಾಮ್, ಸಂತೋಷ್ ಆನಂದ್ ರಾಮ್, ಲವ್ಲಿಸ್ಟಾರ್ ಪ್ರೇಮ್, ತರುಣ್ ಸುಧೀರ್, ಸೋನಾಲ್ ಮಾಂಥೇರೊ, ತಾರಾ ಅನುಶ್ರೀ-ರೋಷನ್ ಜೋಡಿಗೆ ಹಾರೈಸಿದ್ದಾರೆ.

    ನಟಿ ಅನುಶ್ರೀ ಹಾಗೂ ರೋಷನ್ ಮದುವೆ ಇಂದು ಸರಳವಾಗಿ ನಡೆದಿದೆ. ಅನುಶ್ರೀಯನ್ನ ಸಾಕಷ್ಟು ವರ್ಷಗಳಿಂದ ಬಲ್ಲ ಗೆಳೆಯರು, ಆಪ್ತರು, ಸ್ಯಾಂಡಲ್ ವುಡ್ ಆಪ್ತರು ಹರಸಿ ಖುಷಿ ಪಟ್ಟಿದ್ದಾರೆ. ಅನುಶ್ರೀ ಹೋದ ಕಡೆಗಳೆಲ್ಲ ಎದುರಾಗುತ್ತಿದ್ದ ಮಿಲಿಯನ್ ಡಾಲರ್ ಪ್ರಶ್ನೆಗೆ ಇವತ್ತು ಉತ್ತರ ಸಿಕ್ಕಿದೆ.ಇದನ್ನೂ ಓದಿ: ತಾಂತ್ರಿಕ ದೋಷ ಬಗೆಹರಿಸಲು ಇಂಜಿನಿಯರ್‌ಗಳ ಜೊತೆ‌ 50 ನಿಮಿಷ ಚರ್ಚಿಸಿದ ಪೈಲಟ್ – ಆದ್ರೂ ನೆಲಕ್ಕಪ್ಪಳಿಸಿದ F-35 ಜೆಟ್‌!