Tag: anushka shetty

  • ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕರಾವಳಿ ಸುಂದರಿಯರು!

    ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕರಾವಳಿ ಸುಂದರಿಯರು!

    ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮತ್ತು ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ ಇಬ್ಬರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಐಶ್ವರ್ಯ ಮತ್ತು ಅನುಷ್ಕಾ ಇಬ್ಬರು ಕರ್ನಾಟಕದ ಕರಾವಳಿ ಭಾಗದವರು ಆಗಿದ್ದಾರೆ. ಇವರಿಬ್ಬರು ಇದುವರೆಗೂ ಯಾವ ಸಿನಿಮಾದಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದ್ರೆ ಇದೀಗ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯನ್ ಸೆಲ್ವಾನ್’ ಸಿನಿಮಾದಲ್ಲಿ ಐಶ್ವರ್ಯ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಪೊನ್ನಿಯನ್ ಸೆಲ್ವಾನ್’ ಸಿನಿಮಾದಲ್ಲಿ ಈಗಾಗಲೇ ಐಶ್ವರ್ಯ ರೈ ಅಭಿನಯಿಸುತ್ತಿರುವುದು ಪಕ್ಕವಾಗಿದೆ.

    ಈ ಸಿನಿಮಾದಲ್ಲಿ ಮೊದಲು ಅನುಷ್ಕಾ ಶೆಟ್ಟಿ ಅಭಿನಯಿಸಬೇಕಾಗಿದ್ದ ಪಾತ್ರಕ್ಕೆ ನಟಿ ನಯನತಾರಾ ಆಯ್ಕೆಯಾಗಿದ್ದರು. ಆದರೆ ಅವರು ಕಾರಣಾಂತರಗಳಿಂದ ಈ ಸಿನಿಮಾದಿಂದ ಹೊರ ಹೋಗಿದ್ದಾರೆ. ಹೀಗಾಗಿ ಆ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯಕ್ಕೆ ಅನುಷ್ಕಾ ‘ಸೈಲೆನ್ಸ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ‘ಪೊನ್ನಿಯನ್ ಸೆಲ್ವಾನ್’ ಚಿತ್ರತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

    ಈ ಸಿನಿಮಾದಲ್ಲಿ ಐಶ್ಚರ್ಯ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅವರು ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದರೆ ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಖಳನಟಿಯಾಗಿ ಬರಲಿದ್ದಾರೆ. ‘ಪೊನ್ನಿಯನ್ ಸೆಲ್ವಾನ್’ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಐಶ್ವರ್ಯ ರೈ, ಚಿಯಾನ್ ವಿಕ್ರಮ್, ಕೀರ್ತಿ ಸುರೇಶ್, ಕಾರ್ತಿಕ್, ಅಮಿತಾಬ್ ಬಚ್ಚನ್ ಮತ್ತು ಅನುಷ್ಕಾ ಕಾಣಿಸಿಕೊಳ್ಳುತ್ತಿದ್ದಾರೆ.

  • ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದ ಅನುಷ್ಕಾ ಶೆಟ್ಟಿ

    ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದ ಅನುಷ್ಕಾ ಶೆಟ್ಟಿ

    ಹೈದರಾಬಾದ್: ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ರೀ-ಎಂಟ್ರಿ ನೀಡಿದ್ದಾರೆ.

    ಅನುಷ್ಕಾ ಶೆಟ್ಟಿ ಒಂದು ವರ್ಷದ ಹಿಂದೆ ‘ಭಾಗಮತಿ’ ಚಿತ್ರದಲ್ಲಿ ಕೊನೆಯದಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಈಗ ಅನುಷ್ಕಾ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಆಹಾರ ತಜ್ಞ ಆದ ಲ್ಯೂಕ್ ಕೌಟಿನ್ಹೂ ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಅನುಷ್ಕಾ ಶೆಟ್ಟಿ ಅವರ ಜೊತೆಗೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ “ಅತೀ ಶೀಘ್ರದಲ್ಲೇ ಏನೋ ಬರಲಿದೆ” ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋದಲ್ಲಿ ಅನುಷ್ಕಾ ದೇಹದ ತೂಕ ಕಡಿಮೆ ಆಗಿದೆ. ಅನುಷ್ಕಾ ಈ ಹಿಂದೆ ತೆಲುಗಿನ ‘ಸೈಜ್ ಝೀರೋ’ ಚಿತ್ರಕ್ಕಾಗಿ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಬಳಿಕ ಅವರು ತೂಕ ಕಡಿಮೆ ಮಾಡಿಕೊಳ್ಳಲು ಹೆಚ್ಚು ಶ್ರಮವಹಿಸಿದ್ದಾರೆ. ಅನುಷ್ಕಾ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸರ್ಜರಿ ಮೊರೆ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

    ಅನುಷ್ಕಾ ಶೀಘ್ರದಲ್ಲೇ ‘ಸೈಲೆನ್ಸ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದು ಥ್ರಿಲ್ಲರ್ ಸಿನಿಮಾ ಆಗಿದ್ದು, ಈ ಸಿನಿಮಾದಲ್ಲಿ ಆರ್. ಮಾದವನ್ ಹಾಗೂ ಅಂಜಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಹೇಮಂತ್ ಮಧುಕರ್ ನಿರ್ದೇಶನ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಾಗಲು ಚಿತ್ರರಂಗ ಬಿಡುತ್ತಿದ್ದಾರಾ ಅನುಷ್ಕಾ ಶೆಟ್ಟಿ?

    ಮದ್ವೆಯಾಗಲು ಚಿತ್ರರಂಗ ಬಿಡುತ್ತಿದ್ದಾರಾ ಅನುಷ್ಕಾ ಶೆಟ್ಟಿ?

    ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಮದುವೆಯಾಗಲು ಚಿತ್ರರಂಗದಿಂದ ದೂರ ಹೋಗುತ್ತಿದ್ದಾರೆ ಎಂಬ ಮಾತುಗಳು ತೆಲುಗು ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ.

    ಅನುಷ್ಕಾ ಶೆಟ್ಟಿ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಆಗಿದೆ. ಅಲ್ಲದೇ ಅನುಷ್ಕಾ ಈಗ ಯಾವುದೇ ಚಿತ್ರದ ಚಿತ್ರೀಕರಣಕ್ಕೆ ಹೋಗುತ್ತಿಲ್ಲ ಹಾಗೂ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ‘ಬಾಹುಬಲಿ ದಿ ಕನ್‍ಕ್ಲೂಷನ್’ ಸಿನಿಮಾ ನಂತರ ಅನುಷ್ಕಾ ‘ಭಾಗಮತಿ’ ಚಿತ್ರದಲ್ಲಿ ನಟಿಸಿದ್ದರು. ಆದಾದ ಬಳಿಕ ಅವರ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ.

    ಅನುಷ್ಕಾ ಶೆಟ್ಟಿ ಕುಟುಂಬದವರು ತಮ್ಮ ಮಗಳಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದಾರೆ. ಅನುಷ್ಕಾ ಅವರ ಕುಟುಂಬದವರು ಈಗಾಗಲೇ ಮಗಳಿಗೆ ಹುಡುಗವನ್ನು ಹುಡುಕುವ ತಯಾರಿ ನಡೆಸುತ್ತಿದ್ದಾರೆ. ಅಲ್ಲದೇ ಅನುಷ್ಕಾ ತಮ್ಮ ಕುಟುಂಬದ ಜೊತೆ ಕೇದಾರನಾಥ್‍ನಲ್ಲಿ ಕೆಲವು ಶಾಸ್ತ್ರಗಳನ್ನು ಮಾಡಿದ್ದಾರೆ ಎನ್ನುವ ಮಾತುಗಳು ಈಗ ಕೇಳಿ ಬರುತ್ತಿದೆ.

    ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಅನುಷ್ಕಾ ಪ್ರೀತಿಯಲ್ಲಿದ್ದಾರೆ ಎನ್ನುವ ಗಾಸಿಪ್ ಸುದ್ದಿಗಳು ಕೆಲ ವರ್ಷಗಳಿಂದ ಕೇಳಿ ಬರುತ್ತಿವೆ. ಅಲ್ಲದೇ ಅವರಿಬ್ಬರ ನಡವಳಿಕೆಯೂ ಸಹ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ್ದ ಅವರು, ನಾವು ಒಳ್ಳೆಯ ಸ್ನೇಹಿತರು ಎಂದು ಅಭಿಮಾನಿಗಳಲ್ಲಿ ಹೇಳಿದ್ದರು.

    ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ `ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪ್ರಭಾಸ್ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಭಾಸ್ ಜೊತೆ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ನಟ ರಾಣಾ ದಗ್ಗುಬಾಟಿ ಕೂಡ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ನಿರೂಪಕ ಕರಣ್ ಜೋಹರ್ ಅನುಷ್ಕಾ ಬಗ್ಗೆ ಮಾತನಾಡಿದ್ದರು. ಈ ವೇಳೆ ಪ್ರಭಾಸ್, “ನಾನು ಮತ್ತು ಅನುಷ್ಕಾ ಒಳ್ಳೆಯ ಗೆಳೆಯ-ಗೆಳತಿ ಅಷ್ಟೇ. ಆಕೆ ಜೊತೆ ನಾನು ಯಾವತ್ತೂ ಡೇಟಿಂಗ್ ಮಾಡಿಲ್ಲ. ಬಾಹುಬಲಿಯಲ್ಲಿ ಆಕೆ ನನಗೆ ತಾಯಿಯಾಗಿದ್ದಾಳೆ, ಪ್ರೇಯಸಿಯೂ ಆಗಿದ್ದಾಳೆ. ಈಗ ನೀವೇ ಹೇಳಿ ತಾಯಿಯನ್ನು ಯಾರಾದರೂ ಮದುವೆ ಆಗೋಕೆ ಸಾಧ್ಯನಾ? ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದುವೆ ಸಂಭ್ರಮದಲ್ಲಿ ಪ್ರಭಾಸ್- ಅನುಷ್ಕಾ

    ಮದುವೆ ಸಂಭ್ರಮದಲ್ಲಿ ಪ್ರಭಾಸ್- ಅನುಷ್ಕಾ

    ಜೈಪುರ: ಬಾಹುಬಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರು ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಮಗ ಕಾರ್ತಿಕೇಯಾ ಅವರ ಮದುವೆಯ ಸಂಭ್ರಮದಲ್ಲಿದ್ದಾರೆ.

    ರಾಜಮೌಳಿ ಅವರ ಮಗ ಕಾರ್ತಿಕೇಯಾ ಇಂದು ಗಾಯಕಿ ಪೂಜಾ ಪ್ರಸಾದ್ ಅವರ ಜೊತೆ ರಾಜಸ್ಥಾನದ ಜೈಪುರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾರ್ತಿಕೇಯಾ ಹಾಗೂ ಪೂಜಾ ನವೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪೂಜಾ ಗಾಯಕಿ ಆಗಿದ್ದು, ನಟ ಜಗಪತಿ ಬಾಬು ಅವರ ಸೋದರ ಸೊಸೆ ಆಗಿದ್ದಾರೆ.

    ಅನುಷ್ಕಾ, ಪ್ರಭಾಸ್ ಸೇರಿದಂತೆ ಸಿನಿ ರಂಗದ ಹಲವು ಗಣ್ಯರು ಮದುವೆಯ ಸಂಭ್ರಮದಲ್ಲಿ ಭಾಗಿಯಾದರು. ಅಲ್ಲದೇ ತೆಲುಗು ಕಲಾವಿದರಾದ ಜೂ. ಎನ್‍ಟಿಆರ್, ಜಗಪತಿ ಬಾಬು, ರಾಮ್‍ಚರಣ್, ನಾನಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಈ ಮದುವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಕಾರ್ತಿಕೇಯಾ ಅವರ ಸಂಗೀತ್ ಕಾರ್ಯಕ್ರಮದಲ್ಲಿ ರಾಜಮೌಳಿ ಜೊತೆ ಬಾಹುಬಲಿ ಚಿತ್ರತಂಡದ ಕಲಾವಿದರು ಡ್ಯಾನ್ಸ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಲಾವಿದರೆಲ್ಲರೂ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುಷ್ಕಾ ಬಗ್ಗೆ ಯಾರೂ ಊಹಿಸಲಾಗದ ಹೇಳಿಕೆ ಕೊಟ್ಟ ಪ್ರಭಾಸ್

    ಅನುಷ್ಕಾ ಬಗ್ಗೆ ಯಾರೂ ಊಹಿಸಲಾಗದ ಹೇಳಿಕೆ ಕೊಟ್ಟ ಪ್ರಭಾಸ್

    ಮುಂಬೈ: ಬಾಹುಬಲಿ ಪ್ರಭಾಸ್ ಅವರು ನಟಿ ಅನುಷ್ಕಾ ಬಗ್ಗೆ ಯಾರೂ ಊಹಿಸಲಾಗದ ಹೇಳಿಕೆಯೊಂದನ್ನು ಕಾರ್ಯಕ್ರಮದಲ್ಲಿ ನೀಡಿದ್ದಾರೆ.

    ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ `ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪ್ರಭಾಸ್ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಭಾಸ್ ಜೊತೆ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ನಟ ರಾಣಾ ದಗ್ಗುಬಾಟಿ ಕೂಡ ಪಾಲ್ಗೊಂಡಿದ್ದರು.

    ಈ ಕಾರ್ಯಕ್ರಮದಲ್ಲಿ ನಿರೂಪಕ ಕರಣ್ ಜೋಹರ್ ಅನುಷ್ಕಾ ಬಗ್ಗೆ ಮಾತನಾಡಿದ್ದರು. ಈ ವೇಳೆ ಪ್ರಭಾಸ್, “ನಾನು ಮತ್ತು ಅನುಷ್ಕಾ ಒಳ್ಳೆಯ ಗೆಳೆಯ-ಗೆಳತಿ ಅಷ್ಟೇ. ಆಕೆ ಜೊತೆ ನಾನು ಯಾವತ್ತೂ ಡೇಟಿಂಗ್ ಮಾಡಿಲ್ಲ. ಬಾಹುಬಲಿಯಲ್ಲಿ ಆಕೆ ನನಗೆ ತಾಯಿಯಾಗಿದ್ದಾಳೆ, ಪ್ರೇಯಸಿಯೂ ಆಗಿದ್ದಾಳೆ. ಈಗ ನೀವೇ ಹೇಳಿ ತಾಯಿಯನ್ನು ಯಾರಾದರೂ ಮದುವೆ ಆಗೋಕೆ ಸಾಧ್ಯವಾ? ಎಂದು ಹೇಳಿದ್ದಾರೆ.

    ಕರಣ್ ಜೋಹರ್ ರಾಣಾ ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಿದರು. ಬಳಿಕ ಪ್ರಭಾಸ್ ಅವರನ್ನು ಪ್ರಶ್ನೆ ಕೇಳಿದರು. ಈ ವೇಳೆ ತೆಲುಗು ಚಿತ್ರರಂಗದ ಸೆಕ್ಸಿಯೆಷ್ಟ್ ನಟಿ ಯಾರು ಎಂದು ಪ್ರಶ್ನಿಸಿದ್ದಕ್ಕೆ, ಪ್ರಭಾಸ್ ಅನುಷ್ಕಾ, ಸ್ವೀಟಿ ಎಂದು ಉತ್ತರಿಸಿದ್ದಾರೆ. ಬಳಿಕ ನೀವು ಸೆಕ್ಸ್ ಹಾಗೂ ಊಟದಲ್ಲಿ ಏನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಾ ಎಂದು ಹೇಳಿದ್ದಕ್ಕೆ ಊಟ ಎಂದು ಉತ್ತರಿಸಿದ್ದಾರೆ.

    ಅನುಷ್ಕಾ, ಕಾಜಲ್ ಅಥವಾ ತಮನ್ನಾ ಇವರಲ್ಲಿ ಯಾರ ಜೊತೆ ನಟಿಸಲು ಇಷ್ಟಪಡುತ್ತೀರಾ ಎಂದು ಕೇಳಿದ್ದಕ್ಕೆ ಅವರು ಅನುಷ್ಕಾ ಎಂದು ಉತ್ತರಿಸಿ, ಇದಕ್ಕೂ ನನ್ನ ಬಗ್ಗೆ ಹರಿದಾಡುತ್ತಿರುವ ಗಾಸಿಪ್‍ಗೂ ಯಾವುದೇ ಸಂಬಂಧ ಇಲ್ಲ. ಅನುಷ್ಕಾ ಹಾಗೂ ನನ್ನ ಸ್ನೇಹ 8 ವರ್ಷದ್ದು, ಆಕೆ ಬೆಸ್ಟ್ ಫ್ರೆಂಡ್ ಎಂದು ಪ್ರಭಾಸ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುಷ್ಕಾ ಜೊತೆಗಿನ ಸಂಬಂಧದ ರಹಸ್ಯ ಬಿಚ್ಚಿಟ್ಟ ಪ್ರಭಾಸ್: ವಿಡಿಯೋ

    ಅನುಷ್ಕಾ ಜೊತೆಗಿನ ಸಂಬಂಧದ ರಹಸ್ಯ ಬಿಚ್ಚಿಟ್ಟ ಪ್ರಭಾಸ್: ವಿಡಿಯೋ

    ಮುಂಬೈ: ಬಾಹುಬಲಿ ನಟ ಪ್ರಭಾಸ್ ಅವರು ತಮ್ಮ ಗೆಳತಿ ಅನುಷ್ಕಾ ಶೆಟ್ಟಿ ಜೊತೆಗಿನ ಸಂಬಂಧದ ರಹಸ್ಯ ಬಿಚ್ಚಿಟ್ಟಿದ್ದಾರೆ.

    ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪ್ರಭಾಸ್ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಭಾಸ್ ಜೊತೆ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ರಾಣಾ ದಗ್ಗುಬಾಟಿ ಕೂಡ ಪಾಲ್ಗೊಂಡಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ನೀವು ಸಿಂಗಲ್ ಆಗಿದ್ದೀರಾ? ನಿಮ್ಮ ಮತ್ತು ಅನುಷ್ಕಾ ಡೇಟಿಂಗ್ ಸುದ್ದಿ ನಿಜಾವೇ ಎಂದು ಪ್ರಭಾಸ್ ಅವರನ್ನು ಪ್ರಶ್ನಿಸಿದ್ದಾರೆ.

    ಈ ಪ್ರಶ್ನೆಗೆ ಪ್ರಭಾಸ್, ನಾನು ಸಿಂಗಲ್ ಎಂದು ಉತ್ತರಿಸಿದ್ದಾರೆ. ನಂತರ ಕರಣ್ ರ‍್ಯಾಪಿಡ್ ಫೈರ್ ರೌಂಡ್‍ನಲ್ಲಿ ಕರಣ್ ಅವರು ಪ್ರಭಾಸ್ ನೀವು ಈ ಸೋಫಾದಲ್ಲಿ ಕುಳಿತು ಸುಳ್ಳು ಹೇಳಿದ್ದೀರಿ ಅಲ್ಲವೇ ಎಂದು ಪ್ರಶ್ನಿಸಿದರು. ಆಗ ಪ್ರಭಾಸ್ ಹೌದು ಎಂದು ಹೇಳಿ ಎಲ್ಲರ ಮುಂದೆ ಜೋರಾಗಿ ನಕ್ಕಿದ್ದಾರೆ.

    ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ನಟರು ಭಾಗಿಯಾಗಿದ್ದಾರೆ. ಬಾಹುಬಲಿ ಚಿತ್ರತಂಡ ಜೊತೆ ಕರಣ್ ನಡೆಸಿಕೊಟ್ಟ ಈ ಸಂಚಿಕೆ ಡಿಸೆಂಬರ್ ತಿಂಗಳ ಕೊನೆಯಲ್ಲಿ ಪ್ರಸಾರವಾಗಲಿದೆ. ಪ್ರಭಾಸ್ ಅವರಿಗೆ 38 ವರ್ಷವಾಗಿದ್ದು, ಸಲ್ಮಾನ್ ಖಾನ್ ಅವರಂತೆ ಪ್ರಭಾಸ್ ಅವರನ್ನು ಅಭಿಮಾನಿಗಳು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಕರೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈಗ ಅಧಿಕೃತ: ಕರಾವಳಿಯ ಹುಡುಗಿಯೊಂದಿಗೆ ಪ್ರಭಾಸ್ ರೊಮ್ಯಾನ್ಸ್

    ಈಗ ಅಧಿಕೃತ: ಕರಾವಳಿಯ ಹುಡುಗಿಯೊಂದಿಗೆ ಪ್ರಭಾಸ್ ರೊಮ್ಯಾನ್ಸ್

    ಹೈದರಾಬಾದ್: ಟಾಲಿವುಡ್ ಕನ್ನಡದ ನಟಿಯರಿಗೆ ಹೆಚ್ಚಾಗಿ ಪ್ರಾತಿನಿಧ್ಯತೆ ನೀಡುತ್ತಿದೆ. ಅನುಷ್ಕಾ ಶೆಟ್ಟಿ ಬಳಿಕ ಸದ್ಯ ರಶ್ಮಿಕಾ ಮಂದಣ್ಣ ಟಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಈಗ ಮತ್ತೊಬ್ಬ ಕನ್ನಡದ ತುಳು ಬೆಡಗಿ, ಕರಾವಳಿಯ ಪೂಜಾ ಹೆಗ್ಡೆ ತೆಲುಗಿನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದು ಬಾಹುಬಲಿ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳುತ್ತಿರೋದು ವಿಶೇಷ.

    ಪ್ರಭಾಸ್ ಮುಂದಿನ ಚಿತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವುದರ ಬಗ್ಗೆ ಕಳೆದ ಕೆಲವು ತಿಂಗಳನಿಂದ ಭಾರೀ ಚರ್ಚೆಗೆ ಒಳಪಟ್ಟಿತ್ತು. ಇದೇ ಫಿಲ್ಮ್ ನಲ್ಲಿ ಮತ್ತೊಮ್ಮೆ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೆ ಅನುಷ್ಕಾ ಬದಲಾಗಿ ಚಿತ್ರತಂಡ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಿದೆ. ಈ ಮೊದಲು ಪೂಜಾ ಹೆಗ್ಡೆಯೇ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ರೂ ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಪ್ರಭಾಸ್ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಈ ಬಗ್ಗೆ ಈಗ ಬರೆದುಕೊಂಡಿದ್ದಾರೆ.

    ಹಾಯ್ ಗೆಳೆಯರೇ, ನನ್ನ ಮುಂದಿನ ಫಿಲ್ಮ್ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ. ಚಿತ್ರ ಕೆಕೆ ರಾಧಾಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಗೋಪಿ ಕೃಷ್ಣ ಬಂಡವಾಳ ಹಾಕಿದ್ದಾರೆ. ನನಗೆ ಜೊತೆಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಚಿತ್ರೀಕರಣ ಆದಷ್ಟು ಬೇಗ ಆರಂಭವಾಗಲಿದೆ ಎಂದು ಫೇಸ್‍ಬುಕ್‍ನಲ್ಲಿ ಪ್ರಭಾಸ್ ಹೇಳಿದ್ದಾರೆ.

    ಸಿನಿಮಾದ ಶೀರ್ಷಿಕೆ ಇದೂವರೆಗೂ ಅಂತಿಮವಾಗಿಲ್ಲ. ಪ್ರೇಮ ಕಥೆಯನ್ನು ಚಿತ್ರ ಹೊಂದಿದ್ದು, ಯುರೋಪ್ ನಲ್ಲಿ ಚಿತ್ರೀಕರಣ ನಡೆಯಲಿದೆ. 2016ರಲ್ಲಿ ತೆರೆಕಂಡ ಬಾಲಿವುಡ್‍ನ ಹೃತಿಕ್ ರೋಷನ್ ನಟನೆಯ ‘ಮೊಹೆಂಜೋದಾರೋ’ ಚಿತ್ರದ ಮೂಲಕ ಪೂಜಾ ಹೆಗ್ಡೆ ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು.

    ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸಾಹೋ’ ಸಿನಿಮಾದ ಚಿತ್ರೀಕರಣದಲ್ಲಿ ಪ್ರಭಾಸ್ ಬ್ಯೂಸಿಯಾಗಿದ್ದಾರೆ. ಸಾಹೋ ಸಿನಿಮಾದ ಮೂಲಕ ಶ್ರದ್ಧಾ ಕಪೂರ್ ಟಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದಾರೆ. ನೀಲ್ ನಿತಿನ್ ಮುಖೇಶ್, ಜಾಕಿ ಶ್ರಾಫ್, ಚುಂಕಿ ಪಾಂಡ್ಯಾ ಮತ್ತು ಮಂದಿರಾ ಬೇಡಿ ಸೇರಿದಂತೆ ದೊಡ್ಡ ಅನುಭವಿ ಕಲಾವಿದರನ್ನು ಚಿತ್ರ ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಭಾಸ್- ಅನುಷ್ಕಾ ಶೆಟ್ಟಿ ಪ್ರೀತಿಯಲ್ಲಿದ್ದಾರೆ- ಇಲ್ಲಿದೆ ಸಾಕ್ಷಿ

    ಪ್ರಭಾಸ್- ಅನುಷ್ಕಾ ಶೆಟ್ಟಿ ಪ್ರೀತಿಯಲ್ಲಿದ್ದಾರೆ- ಇಲ್ಲಿದೆ ಸಾಕ್ಷಿ

    ಹೈದರಾಬಾದ್: ಟಾಲಿವುಡ್‍ನ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹಾರಿದಾಡುತ್ತಿತ್ತು. ಆದರೆ ಈ ಜೋಡಿ ಇದೆಲ್ಲಾ ಸುಳ್ಳು ಎಂದು ಹೇಳುತ್ತಾ ತಿರುಗುತ್ತಿದ್ದರು. ಈಗ ಈ ಜೋಡಿ ಪ್ರೀತಿಯಲ್ಲಿದ್ದಾರೆ ಎಂಬುದು ಸಾಬೀತಾಗಿದೆ.

    ಅನುಷ್ಕಾ ಮತ್ತು ಪ್ರಭಾಸ್ ಅವರ ಪ್ರೀತಿ ರಿವೀಲ್ ಆಗುತ್ತಿಲ್ಲ. ಈ ನಡುವೆ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಈ ಜೋಡಿ ದಿನೇ ದಿನೇ ಪರಸ್ಪರ ಮಿಸ್ ಮಾಡಿಕೊಳ್ಳುತ್ತಾರೆ ಎನ್ನುವುದು ಈಗ ರಿವೀಲ್ ಆಗಿದೆ.

    ಸಾಹೋ ಚಿತ್ರದಲ್ಲೂ ಪ್ರಭಾಸ್‍ಗೆ ಅನುಷ್ಕಾ ಜೋಡಿಯಾಗಬೇಕಿತ್ತು ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಸಾಹೋ ಚಿತ್ರದಲ್ಲಿ ಅನುಷ್ಕಾ ಬದಲು ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದಾರೆ. ಈ ನಡುವೆ ಅನುಷ್ಕಾ ಮತ್ತು ಪ್ರಭಾಸ್ ಪರಸ್ಪರ ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾದ್ದರು. ಈ ನಡುವೆ ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ರಿವಿಲ್ ಆಗಿದೆ.

    ಇಬ್ಬರ ನಡುವೆ ಇರೋದು ಸ್ನೇಹಾನಾ ಪ್ರೀತಿನಾ ಎನ್ನುವುದು ರಹಸ್ಯವಾಗಿದೆ. ಇಬ್ಬರೂ ಅನುಭವಿಸುತ್ತಿರುವ ವಿರಹ ವೇದನೆ ಈಗಂತೂ ಜಗತ್ತಿನ ಮುಂದೆ ಬಂದಿದೆ. ಪರಸ್ಪರ ಶೂಟಿಂಗ್ ಗಾಗಿ ಬೇರೆ ಬೇರೆ ಸ್ಥಳದಲ್ಲಿರುವಾಗ ಈ ಜೋಡಿ ಬರೀ ಕಾಲ್ ಅಲ್ಲ, ವೀಡಿಯೋ ಕಾಲ್ ಮೂಲಕ ಗಂಟೆಗಟ್ಟಲೆ ಮಾತನಾಡಿಕೊಳ್ಳುತ್ತಾರೆ. ಪ್ರತಿ ದಿನ ಬಿಡುವಿದ್ದರೆ ಸಾಕು ಇಬ್ಬರ ಮೊಬೈಲ್‍ಗಳೂ ವೇಟಿಂಗ್ ನಲ್ಲಿಯೇ ಇರುತ್ತದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

  • ಕೇದಾರನಾಥ ಸನ್ನಿಧಿಯಲ್ಲಿ ಬಾಹುಬಲಿ ಚೆಲುವೆ ಅನುಷ್ಕಾ ಶೆಟ್ಟಿ – ಅಭಿಮಾನಿಗಳು ಗರಂ

    ಕೇದಾರನಾಥ ಸನ್ನಿಧಿಯಲ್ಲಿ ಬಾಹುಬಲಿ ಚೆಲುವೆ ಅನುಷ್ಕಾ ಶೆಟ್ಟಿ – ಅಭಿಮಾನಿಗಳು ಗರಂ

    ಡೆಹ್ರಾಡೂನ್: ಬಾಹುಬಲಿಯ ಚೆಲುವೆ, ಭಾಗಮತಿ ನಟಿ ಅನುಷ್ಕಾ ಶೆಟ್ಟಿ ಅವರು ಉತ್ತರಾಖಂಡದ ಕೇದಾರನಾಥ ಸನ್ನಿಧಿಗೆ ಭೇಟಿ ನೀಡಿ ಶಿವನ ದರ್ಶನ ಪಡೆದಿದ್ದಾರೆ.

    ಬಾಹುಬಲಿ ಸಿನಿಮಾದಲ್ಲಿ ದೇವಾಸೇನ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆ ಪಾತ್ರರಾಗಿರುವ ಅನುಷ್ಕಾ ಶೆಟ್ಟಿ ಕೇದಾರನಾಥ ಶಿವನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಅನುಷ್ಕಾ ಅವರು ತಾವು ಉಳಿದುಕೊಂಡಿದ್ದ ಸ್ಥಳದಿಂದ ಸುಮಾರು 17 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ದೇವಾಸ್ಥಾನಕ್ಕೆ ಹೋಗಿದ್ದಾರೆ.

    ಮುಂಜಾನೆ ಸುಮಾರು 4 ಗಂಟೆಗೆ ನಡೆಯಲು ಆರಂಭಿಸಿದ್ದು, 8 ಗಂಟೆಗೆ ದೇವಾಸ್ಥಾನಕ್ಕೆ ತಲುಪಿದ್ದಾರೆ. ಅಲ್ಲಿ ಶಿವನ ದರ್ಶನ ಪಡೆದಿದ್ದು, ವಿಶೇಷ ಪೂಜೆ ಮಾಡಿಸಿದ್ದಾರೆ.

    ಪೂಜೆ ಮುಗಿಸಿ ಹಿಂದಿರುಗುವಾಗ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಮೊದಮೊದಲು ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ನಂತರ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದನ್ನು ನಿರಾಕರಿಸಿ ಹೊರಟು ಹೋಗಿದ್ದಾರೆ. ಇದರಿಂದ ಅಭಿಮಾನಿಗಳು ಅನುಷ್ಕಾ ಮೇಲೆ ಗರಂ ಆಗಿದ್ದಾರೆ.

    ಕೇದಾರನಾಥ ಸನ್ನಿಧಿಯಲ್ಲಿ ಭದ್ರತೆ ಸಮಸ್ಯೆ ಇದ್ದುದ್ದರಿಂದ ಅನುಷ್ಕಾ ಸೆಲ್ಫಿಗೆ ನಿಕಾರಿಸಿದ್ದಾರೆ. ನಂತರ ಅವರ ಅಲ್ಲಿಂದ ಅರ್ಧದಾರಿಯವರೆಗೆ ನಡೆದುಕೊಂಡು ಹೋಗಿದ್ದಾರೆ. ಇನ್ನು ಅರ್ಧದಾರಿಯಲ್ಲಿ ಕುದುರೆಯನೇರಿ ಹೋಗಿದ್ದಾರೆ.

    ಬಾಹುಬಲಿ ಸಿರೀಸ್ ಚಿತ್ರದ ಬಳಿಕ ಅನುಷ್ಕಾ ಅವರು, ಜಿ. ಅಶೋಕ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿರುವ ಭಾಗಮತಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಒಂದು ಮಹಿಳಾ ಪ್ರಧಾನ ಕಥೆಯ ಚಿತ್ರವಾಗಿದ್ದು, ಥ್ರಿಲ್ಲರ್ ಹಾರರ್ ಹೂರಣವಿದೆ. ವಂಶಿ ಕೃಷ್ಣರೆಡ್ಡಿ ನಿರ್ಮಿಸಿರುವ ಈ ಚಿತ್ರದಲ್ಲಿ ಅನುಷ್ಕಾ ವಿಭಿನ್ನ ಶೇಡ್‍ಗಳಲ್ಲಿ ಕಂಗೊಳಿಸಿದ್ದಾರೆ.

  • ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನ ಹಂಚಿಕೊಂಡ ಅನುಷ್ಕಾ ಶೆಟ್ಟಿ

    ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನ ಹಂಚಿಕೊಂಡ ಅನುಷ್ಕಾ ಶೆಟ್ಟಿ

    ಬೆಂಗಳೂರು: ಟಾಲಿವುಡ್‍ನ ಸ್ವೀಟಿ ಎಂದೇ ಹೆಸರು ಪಡೆದ ಕನ್ನಡತಿ ಅನುಷ್ಕಾ ಶೆಟ್ಟಿ ಸದ್ಯ ಭಾಗಮತಿ ಸಕ್ಸಸ್ ನ ಖಷಿಯಲ್ಲಿದ್ದಾರೆ. ಬಾಹುಬಲಿ ಸಿನಿಮಾದ ಬಳಿಕ ಅನುಷ್ಕಾ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಯಾವಾಗಲೂ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವ ಅನುಷ್ಕಾ ಸೋಮವಾರ ತಮ್ಮ ಖಾಸಗಿ ಜೀವನದ ಅಮೂಲ್ಯ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಟಾಲಿವುಡ್ ಗೆ ಎಂಟ್ರಿ ನೀಡಿದ ಬಳಿಕ ಹೈದರಾಬಾದ್ ನಲ್ಲಿಯೇ ಉಳಿದಿರುವ ಸ್ವೀಟಿ ಕುಟುಂಬದ ಸದಸ್ಯರ ಜೊತೆಗಿರುವ ಬಾಲ್ಯದ ಫೋಟೋವನ್ನ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸ್ವಂತ ಮನೆಗೆ ಹೋದಾಗ ನನ್ನ ಬಾಲ್ಯತನ ನೆನಪಾಗುತ್ತದೆ. ಅಂದು ನಾನು ಕಳೆದ ಬಾಲ್ಯದ ನೆನಪುಗಳು ನನ್ನ ಜೀವನದ ಅಮೂಲ್ಯ ಕ್ಷಣಗಳಾಗಿವೆ. ಇಂದು ಸಹ ನಾನು ಅದೇ ರೀತಿಯಲ್ಲಿ ಇಷ್ಟಪಡುತ್ತೇನೆ ಅಂತಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅನುಷ್ಕಾ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್: ಮತ್ತೊಬ್ಬ ಕನ್ನಡತಿಯೊಂದಿಗೆ ಪ್ರಭಾಸ್ ರೊಮ್ಯಾನ್ಸ್!

    ಬಾಹುಬಲಿ ಸಿನಿಮಾದ ಬಳಿಕ ಅನುಷ್ಕಾ, ನೆಚ್ಚಿನ ಗೆಳಯ ಪ್ರಭಾಸ್ ರನ್ನು ಮದುವೆ ಆಗ್ತಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಆದರೆ ಸದ್ಯ ಚಿರಂಜೀವಿ ಸೋದರನ ಪುತ್ರಿ ನಿಹಾರಿಕಾರನ್ನು ಪ್ರಭಾಸ್ ವರಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿತ್ತು. ಇದನ್ನೂ ಓದಿ: ಪ್ರಭಾಸ್, ನಿಹಾರಿಕಾ ಮದುವೆ ಆಗ್ತಾರಾ: ಸುದ್ದಿಗೆ ಸ್ಪಷ್ಟನೆ ಕೊಟ್ಟ ಮೆಗಾಸ್ಟಾರ್

    https://www.facebook.com/AnushkaShetty/photos/a.452351745192.374596.210302285192/10160432629075193/?type=3&theater