Tag: anushka shetty

  • ಅನುಷ್ಕಾ ಶೆಟ್ಟಿಗೆ ಕಂಕಣ ಭಾಗ್ಯ: ಮುಂದಿನ ವರ್ಷ ಮದುವೆ ಫಿಕ್ಸ್

    ಅನುಷ್ಕಾ ಶೆಟ್ಟಿಗೆ ಕಂಕಣ ಭಾಗ್ಯ: ಮುಂದಿನ ವರ್ಷ ಮದುವೆ ಫಿಕ್ಸ್

    ನ್ನಡತಿ ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. ಸಿನಿಮಾಗಳಲ್ಲಿ ಯಶಸ್ಸು ಕಂಡಿರುವ ನಟಿ ಅದ್ಯಾವ ಮದುವೆ ಆಗುತ್ತಾರೆ ಅಂತಾ ಕಾಯ್ತಿದ್ದ ಅಭಿಮಾನಿಗಳಿಗೆ ಅನುಷ್ಕಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ವರ್ಷ ಹಸೆಮಣೆ ಏರೋದಕ್ಕೆ ಸ್ವೀಟಿ ಸಜ್ಜಾಗಿದ್ದಾರೆ.

    ಅರುಂಧತಿ, ಮಿರ್ಚಿ, ಬಾಹುಬಲಿ, ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಅನುಷ್ಕಾ ಈಗ ವೃತ್ತಿರಂಗದಲ್ಲಿ ಅದ್ಯಾಕೋ ಸೈಲೆಂಟ್ ಆಗಿದ್ದಾರೆ. ಸಿನಿಮಾ ವಿಚಾರದಲ್ಲಿ ಸೆಲೆಕ್ಟೀವ್ ಆಗಿದ್ದಾರೆ. ಸದ್ಯ ನವೀನ್ ಪೋಲಿ ಶೆಟ್ಟಿ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಚಿತ್ರರಂಗಕ್ಕೆ ಬಂದು 17 ವರ್ಷ ಆಗಿರುವ ಖುಷಿಯಲ್ಲಿ ಹೊಸ ಸಿನಿಮಾದ ಸೆಟ್‌ನಲ್ಲಿ ಕೇಕ್ ಮಾಡಿ, ಸಂಭ್ರಮಿಸಿದ್ದರು. ಈಗ ಹಸೆಮಣೆ ಏರುವ ವಿಚಾರವಾಗಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ

    ಅನುಷ್ಕಾಗೆ 40 ವರ್ಷ ಸಮೀಪಿಸುತ್ತಿರುವ ವೇಳೆಯಲ್ಲಿ, ಖ್ಯಾತ ಜ್ಯೋತಿಷಿ ಮದುವೆ ಬಗ್ಗೆ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯದ ಪ್ರಕಾರ ಅನುಷ್ಕಾ ಅವರು ಚಿತ್ರರಂಗದ ವ್ಯಕ್ತಿಯನ್ನು ಮದುವೆಯಾಗಿಲ್ಲ ಎಂದಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಸಂಬಂಧವೇ ಇಲ್ಲದವರನ್ನು ಅನುಷ್ಕಾ ಮದುವೆಯಾಗುವುದು ಖಂಡಿತ ಎಂದಿದ್ದಾರೆ. 2023ರ ಮೊದಲು ಅನುಷ್ಕಾ ಮದುವೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಅನುಷ್ಕಾ ಬೆಂಗಳೂರಿನ ಕೈಗಾರಿಕೋದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರಂತೆ. ಗುರು ಹಿರಿಯರು ನಿಗದಿಪಡಿಸಿದ ವರನನ್ನೇ ಅನುಷ್ಕಾ ಮದುವೆ ಆಗೋದು ಖಚಿತವಂತೆ.

    ಮುಂದಿನ ದಿನಗಳಲ್ಲಿ ಅನುಷ್ಕಾ ಮದುವೆ ವಿಚಾರ ನಿಜವಾಗುತ್ತಾ ಅಂತಾ ಅನುಷ್ಕಾ ಕುಟುಂಬದಿಂದ ಅಧಿಕೃತ ಮಾಹಿತಿ ನೀಡುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕೇಕ್ ಕತ್ತರಿಸುವ ಮೂಲಕ 17 ವರ್ಷದ ಸಿನಿಪಯಣದ ಸಂಭ್ರಮ ಆಚರಿಸಿದ ಅನುಷ್ಕಾ ಶೆಟ್ಟಿ

    ಕೇಕ್ ಕತ್ತರಿಸುವ ಮೂಲಕ 17 ವರ್ಷದ ಸಿನಿಪಯಣದ ಸಂಭ್ರಮ ಆಚರಿಸಿದ ಅನುಷ್ಕಾ ಶೆಟ್ಟಿ

    ಕ್ಷಿಣದ ಸಿನಿಮಾರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಬದುಕಿಗೆ ಇಂದು 17 ವರ್ಷಗಳ ಸಂಭ್ರಮ. ನಾಯಕಿಯಾಗಿ ಹಲವು ಬಗೆಯ ಪಾತ್ರಗಳ ಮೂಲಕ ರಂಜಿಸಿರುವ ಸ್ವೀಟಿ ಸಿನಿಪಯಣಕ್ಕೆ 17 ವರ್ಷವಾಗಿದೆ. ಇದೇ ಖುಷಿಯಲ್ಲಿ ಅನುಷ್ಕಾ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    17 ವರ್ಷಗಳಿಂದ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ, ಭಿನ್ನ ಪಾತ್ರಗಳ ಮೂಲಕ ಮನರಂಜಿಸಿದ್ದಾರೆ. ಮಹಾನ್‌ ನಟಿ ಅನುಷ್ಕಾ ಸದ್ಯ ತಮ್ಮ ಹೊಸ ಚಿತ್ರತಂಡದೊಂದಿಗೆ 17 ವರ್ಷದ ಸಿನಿ ಬದುಕನ್ನ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.

    ಪುರಿ ಜಗನ್ನಾಥ್ ನಿರ್ದೇಶನದ `ಸೂಪರ್’ ಚಿತ್ರದ ಮೂಲಕ ಟಾಲಿವುಡ್ ಅಂಗಳಕ್ಕೆ ನಾಯಕಿಯಾಗಿ ಪರಿಚಿತರಾದ್ದರು. ತೆಲುಗು ಮತ್ತು ತಮಿಳು ಚಿತ್ರಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಸ್ವೀಟಿ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

    `ಬಾಹುಬಲಿ’ ಚಿತ್ರದ ದೇವಸೇನಾ ಆಗಿ ವರ್ಲ್ಡ್ ವೈಡ್ ಗುರುತಿಸಿಕೊಂಡ ನಟಿ, ಸದ್ಯ ನವೀನ್ ಪೋಲಿ ಶೆಟ್ಟಿಗೆ ನಾಯಕಿಯಾಗಿ ಹೊಸ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಇದೇ ಚಿತ್ರತಂಡದ ಜತೆ ಕೇಕ್ ಕತ್ತರಿಸಿ 17 ವರ್ಷದ ಸಿನಿಬದುಕಿನ ಪಯಣವನ್ನ ನಟಿ ಅನುಷ್ಕಾ ಶೆಟ್ಟಿ ಸ್ಮರಿಸಿದ್ದಾರೆ. ನೆಚ್ಚಿನ ನಟಿಯ ಸಿನಿ ಬದುಕಿಗೆ ಫ್ಯಾನ್ಸ್‌ ಕೂಡ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಭಾಸ್, ಅನುಷ್ಕಾ ಶೆಟ್ಟಿ ಕೊಟ್ರು ಗುಡ್‌ನ್ಯೂಸ್: ಮತ್ತೆ ಒಂದಾದ ‘ಬಾಹುಬಲಿ’ ಜೋಡಿ

    ಪ್ರಭಾಸ್, ಅನುಷ್ಕಾ ಶೆಟ್ಟಿ ಕೊಟ್ರು ಗುಡ್‌ನ್ಯೂಸ್: ಮತ್ತೆ ಒಂದಾದ ‘ಬಾಹುಬಲಿ’ ಜೋಡಿ

    ಬಾಹುಬಲಿ ಸಿನಿಮಾ ವೇಳೆಯಲ್ಲಿ ತೆಲುಗು ಸಿನಿಮಾ ರಂಗದಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರದ್ದೇ ಮಾತು. ಸಿನಿಮಾಗೆ ಸಂಬಂಧಿಸಿದ ಸುದ್ದಿ ಮಾತ್ರವಲ್ಲ, ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಗಾಸಿಪ್ ಗಳು ಹರಿದಾಡಿದವು. ಇಬ್ಬರೂ ಒಟ್ಟಾಗಿ ಓಡಾಡುತ್ತಿದ್ದಾರೆ ಎಂದು ಶುರುವಾದ ಮಾತುಗಳು ಇನ್ನೇನು ಮದುವೆ ಕೂಡ ಆಗಲಿದ್ದಾರೆ ಎಂದು ದೊಡ್ಡ ಸುದ್ದಿ ಆಯಿತು. ಆನಂತರ ಈ ಜೋಡಿ ಮತ್ತೆ ಬಹಿರಂಗವಾಗಿ ಕಾಣಿಸಿಕೊಳ್ಳಲೇ ಇಲ್ಲ.

    ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾದರೆ, ಅನುಷ್ಕಾ ಶೆಟ್ಟಿ ಸಿನಿಮಾ ರಂಗದಿಂದಲೇ ದೂರವಾದರು. ಅವರು ಅಷ್ಟೇನೂ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಅಲ್ಲದೇ, ಪ್ರಭಾಸ್ ಅವರಿಂದ ಅಂತರವನ್ನೂ ಕಾಪಾಡಿಕೊಂಡರು. ಇದೀಗ ಈ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಕೂಡ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    ತೆಲುಗಿನ ಖ್ಯಾತ ನಿರ್ದೇಶಕ ಮಾರುತಿ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದು,  ಈ ಸಿನಿಮಾದಲ್ಲಿ ಪ್ರಭಾಸ್ ನಾಯಕನಾದರೆ, ಅನುಷ್ಕಾ ಶೆಟ್ಟಿ ನಾಯಕಿಯಂತೆ. ಈಗಾಗಲೇ ಇಬ್ಬರಿಗೂ ಸಿನಿಮಾದ ಕಥೆಯನ್ನು ಹೇಳಿದ್ದಾರಂತೆ ನಿರ್ದೇಶಕರು. ಈ ಚಿತ್ರದಲ್ಲಿ ನಟಿಸಲು ಈ ಜೋಡಿ ಕೂಡ ಒಪ್ಪಿಕೊಂಡಿದೆ ಎನ್ನುವ ಸುದ್ದಿಯಿದೆ. ಅಧಿಕೃತವಾಗಿ ಇವರಾರೂ ಹೇಳದೇ ಇದ್ದರೂ, ತೆರೆ ಮರೆಯಲ್ಲಿ ಎಲ್ಲವೂ ನಡೆಯುತ್ತಿದೆಯಂತೆ. ಸದ್ಯ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ತೊಡಗಿಕೊಂಡಿದ್ದರಿಂದ, ಕೆಲವೇ ದಿನಗಳಲ್ಲಿ ಅಧಿಕೃತ ಸುದ್ದಿ ಸಿಗಬಹುದು ಎನ್ನಲಾಗುತ್ತಿದೆ.

    Live Tv

  • ಕೊಲೆ ಸ್ಕೆಚ್‌ಗೆ ರಾಂಗ್ ಪರ್ಸನ್ ಚೂಸ್ ಮಾಡಿದ್ದಾರೆ: ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್

    ಕೊಲೆ ಸ್ಕೆಚ್‌ಗೆ ರಾಂಗ್ ಪರ್ಸನ್ ಚೂಸ್ ಮಾಡಿದ್ದಾರೆ: ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್

    ಮಂಗಳೂರು: ಕೆಲ ವಾರಗಳ ಹಿಂದೆ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಉದ್ಯಮಿ ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಿದ್ದ ವಿಚಾರ ಭಾರೀ ಸುದ್ದಿಯಾಗಿತ್ತು. ಆದರೆ ಈ ಸ್ಕೆಚ್ ಯಾರು ಹಾಕಿದ್ದಾರೆ ಎಂಬುದು ಸ್ವತಃ ಗುಣರಂಜನ್ ಶೆಟ್ಟಿಗೂ ಗೊತ್ತಿರಲಿಲ್ಲ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವರಿಗೆ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗುಣರಂಜನ್ ಶೆಟ್ಟಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ಗೃಹ ಇಲಾಖೆ ಈ ಪ್ರಕರಣದ ತನಿಖೆಯನ್ನು ಮಂಗಳೂರು ಪೊಲೀಸರಿಗೆ ವಹಿಸಿದ್ದು, ಮಂಗಳೂರು ಪೊಲೀಸರು ಈ ದೂರಿನ ಬಗ್ಗೆ ಹೆಚ್ಚಿನ ವಿವರಣೆ ಪಡೆಯಲು ಗುಣರಂಜನ್ ಶೆಟ್ಟಿಗೆ ನೋಟಿಸ್ ನೀಡಿ ಕರೆಸಿಕೊಂಡಿದ್ದಾರೆ.

    ಪ್ರಾರಂಭದಲ್ಲಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದು, ಬಳಿಕ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಗುಣರಂಜನ್ ಶೆಟ್ಟಿಯಿಂದ ಹೆಚ್ಚಿನ ಮಾಹಿತಿ ಪಡೆದಿದ್ದಾರೆ. ವಿಚಾರಣೆ ಬಳಿಕ ಗುಣರಂಜನ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಈ ಸಂಚಿನ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ಯಾರಾದರೂ ಹತ್ಯೆಗೆ ಸ್ಕೆಚ್ ಹಾಕಿದ್ದರೆ ಅವರು ರಾಂಗ್ ಪರ್ಸನ್ ಅನ್ನು ಚೂಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊರೊನಾ ಸ್ಫೋಟ – ಬೆಂಗ್ಳೂರು, ಮೈಸೂರು, ದ.ಕ ಜಿಲ್ಲೆಗಳಲ್ಲಿ ಭಾರೀ ಏರಿಕೆ

    ಪ್ರಾರಂಭದಲ್ಲಿ ಮುತ್ತಪ್ಪ ರೈ ಸಂಬಂಧಿ ಮನ್ವಿತ್ ರೈ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ನಡೆಸಿದ್ದಾರೆ ಎಂಬ ವದಂತಿ ಹಬ್ಬಿತ್ತು. ಹೀಗಿದ್ದರೂ ಮನ್ವಿತ್ ರೈ ತಾನು ಉದ್ಯಮದ ವಿಚಾರವಾಗಿ ವಿದೇಶದಲ್ಲಿದ್ದು, ಈ ಹತ್ಯೆ ಸಂಚಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದರು. ಇಂದು ಪೊಲೀಸ್ ವಿಚಾರಣೆ ಸಂದರ್ಭದಲ್ಲಿಯೂ ಗುಣರಂಜನ್ ಶೆಟ್ಟಿ ಇಂತಹ ವಿಚಾರಕ್ಕೆ, ಇಂತಹ ನಿರ್ದಿಷ್ಟ ವ್ಯಕ್ತಿಗಳಿಂದ ಸಂಚು ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲವಾದರೂ ಪೊಲೀಸರು ಸಂಕ್ಷಿಪ್ತ ಮಾಹಿತಿ ಕಲೆ ಹಾಕುವ ಕಾರ್ಯ ಮಾಡಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪಿಟಿಷನ್ ತೆಗೆದುಕೊಂಡು ಯಾರನ್ನು ವಿಚಾರಣೆ ಮಾಡಬೇಕು ಅವರನ್ನು ವಿಚಾರಣೆ ನಡೆಸಿ, ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಅಗಲಿದ ಶ್ವಾನಕ್ಕೆ ಎಸ್‌ಪಿ ಕಚೇರಿ ಆವರಣದಲ್ಲೇ ಆಂತ್ಯಕ್ರಿಯೆ

    Live Tv

  • ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಕೋಲ್ಡ್ ವಾರ್ – ನಟಿ ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸ್ಕೆಚ್

    ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಕೋಲ್ಡ್ ವಾರ್ – ನಟಿ ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸ್ಕೆಚ್

    ಬೆಂಗಳೂರು: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ದಿವಂಗತ ಮುತ್ತಪ್ಪ ರೈ ಅಪ್ತ ಬಳಗದಲ್ಲಿ ಕೋಲ್ಡ್ ವಾರ್ ಆರಂಭವಾಗಿರುವ ಬಗ್ಗೆ ವದಂತಿ ಹರಡಿದ್ದು, ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿದೆ.

    ಮನ್ಮಿತ್ ರೈ, ಮುತ್ತಪ್ಪ ರೈ ಹತ್ತಿರದ ಸಂಬಂಧಿಯಾಗಿದ್ದು, ಗುಣರಂಜನ್ ಶೆಟ್ಟಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ. ಗುಣರಂಜನ್ ಶೆಟ್ಟಿ ಹಾಗೂ ಮನ್ಮಿತ್ ರೈ ಇಬ್ಬರು ಮುತ್ತಪ್ಪ ರೈ ಜೊತೆಗೆ ಇದ್ದರು. ನಂತರ ಮುತ್ತಪ್ಪ ರೈ ಜೊತೆಯಿಂದ ಮನ್ಮಿತ್ ರೈ ಹೊರಬಂದಿದ್ದರು. ಇದೀಗ ತನಗೆ ಕೊಲೆ ಬೆದರಿಕೆ ಇದೆ ಎಂದು ಗುಣರಂಜನ್ ಶೆಟ್ಟಿ ಆರೋಪಿಸಿದ್ದಾರೆ. ಈ ಬಗ್ಗೆ ಜಯ ಕರ್ನಾಟಕ ಸಂಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ದೂರು ನೀಡಿದೆ. ಇದನ್ನೂ ಓದಿ: ಬೂದಿಮುಚ್ಚಿದ ಕೆಂಡದಂತೆ ಭಾರತ – ಯುಪಿಯಲ್ಲಿ 250ಕ್ಕೂ ಗಲಭೆಕೋರರು ಅರೆಸ್ಟ್

    ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ವದಂತಿ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮನ್ಮಿತ್ ರೈ, ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಎಂಬ ವದಂತಿಗಳು ಕೇಳಿ ಬರುತ್ತಿವೆ. ಇದು ಎಷ್ಟು ಸತ್ಯ ಎಂಬುದನ್ನು ಪೊಲೀಸರು ತನಿಖೆ ಮಾಡ್ತಾರೆ. ಆದರೆ ಈ ವಿಚಾರದಲ್ಲಿ ನನ್ನ ಹೆಸರು ಯಾಕೆ ಬರ್ತಾ ಇದೆ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ತನಿಖೆ ಆಗ್ತಾ ಇದ್ರೆ ಯಾರ ಹೆಸರು ಇದೆಯೋ ಅದು ಹೊರಗೆ ಬರುತ್ತೆ. ಆದರೆ ಅದಕ್ಕೂ ಮೊದಲೇ ನನ್ನ ಹೆಸರು ಯಾಕೆ ಬಳಸುತ್ತಿದ್ದಾರೆ ಗೊತ್ತಿಲ್ಲ. ನನ್ನ ಮೇಲೆ ಇದುವೆರಗೂ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ಯಾವ ಸ್ಟೇಷನ್‍ನಲ್ಲೂ ಎಫ್‍ಐಆರ್ ದಾಖಲಾಗಿಲ್ಲ. ಯಾವುದೇ ಅಪರಾಧ ಪ್ರಕರಣಗಳಲ್ಲಿ ಇಲ್ಲದೆ ಇರುವಾಗ ಯಾಕೆ ನನ್ನ ವಿರುದ್ಧ ಆರೋಪ ಬರುತ್ತಿದೆ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಫೀರ್ ಪಾಶಾ ದರ್ಗಾ, ಮೂಲ ಅನುಭವ ಮಂಟಪ ವಿವಾದ – 770 ಮಠಾಧೀಶರಿಂದ ಇಂದು ಬೃಹತ್ ಸಮಾವೇಶ

    ಮುತ್ತಪ್ಪ ರೈ ಮರಣ ಹೊಂದಿದ ಬಳಿಕ ಅಪ್ತ ಬಳಗದಲ್ಲಿ ಗಲಾಟೆ ಆರಂಭವಾಗಿರುವ ಬಗ್ಗೆ ಈ ಹಿಂದೆಯೂ ಹಲವು ಬಾರಿ ವದಂತಿಗಳು ಹರಡಿತ್ತು. ಇದೀಗ ಆಪ್ತ ಒಡನಾಡಿಗಳಾಗಿದ್ದ ಇಬ್ಬರ ನಡುವೆ ಜಟಾಪಟಿಯಾಗುತ್ತಿರುವ ಬಗ್ಗೆ ಮತ್ತೊಮ್ಮೆ ಆರೋಪ ಕೇಳಿಬರುತ್ತಿದೆ.

  • ಇಂಟರ್‌ನ್ಯಾಷನಲ್ ಶೆಫ್ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ?

    ಇಂಟರ್‌ನ್ಯಾಷನಲ್ ಶೆಫ್ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ?

    ಟಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ `ಬಾಹುಬಲಿ’ ಸೂಪರ್ ಸಕ್ಸಸ್ ನಂತರ ಕಡೆಯದಾಗಿ ಕಾಣಿಸಿಕೊಂಡ ಚಿತ್ರ `ನಿಶಬ್ದಂ’.  ಇದೀಗ ಎರಡು ವರ್ಷಗಳ ನಂತರ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಅನುಷ್ಕಾ ಸಜ್ಜಾಗಿದ್ದಾರೆ. ಈ ಬಾರಿ ಇಂಟರ್‌ನ್ಯಾಷನಲ್ ಶೆಫ್‌ ಪಾತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ತೆಲುಗಿನ `ಲೈಫ್ ಇಸ್ ಬ್ಯೂಟಿಫುಲ್’ ಚಿತ್ರದ ಮೂಲಕ ಸಿನಿರಂಗಕ್ಕೆ ಪರಿಚಿತರರಾದ ನಟ ನವೀನ್ ಪೋಲಿಶೆಟ್ಟಿ ಜತೆ ಸೂಪರ್ ಸ್ಟಾರ್ ಅನುಷ್ಕಾ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಸಾಯಿ ಶ್ರೀನಿವಾಸ್ ಅಥ್ರೇಯ ನಿರ್ದೇಶನದ ಹೆಸರಿಡದ ಹೊಸ ಚಿತ್ರಕ್ಕೆ ಸ್ವೀಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಯಸ್ಸಿನ ಅಂತರಯಿರೋ ವಿಭಿನ್ನ ಪ್ರೇಮಕಥೆಯನ್ನ ತೋರಿಸಲು ಹೊರಟಿದ್ದಾರೆ ನಿರ್ದೇಶಕರು.

    `ಬಾಹುಬಲಿ’, `ಭಾಗಮತಿ’, `ನಿಶಬ್ಧಂ’ ಚಿತ್ರದ ನಂತರ ಡಿಫರೆಂಟ್ ಕಥೆಯನ್ನೇ ಅನುಷ್ಕಾ ಆಯ್ಕೆ ಮಾಡಿಕೊಂಡಿದ್ದಾರೆ. ನಾಯಕಿಗೆ 40 ವರ್ಷ ವಯಸ್ಸು, ಹೀರೋ 20 ವರ್ಷ ಇವರಿಬ್ಬರ ನಡುವೆ ಲವ್ ಹೇಗೆ ಆಗುತ್ತೆ ಮುಂದೆ ಎನೆಲ್ಲಾ ಟ್ವಿಸ್ಟ್ ಇದೇ ಅನ್ನೋ ಕಥೆಯ ತಿರುಳು. ಚಿತ್ರದಲ್ಲಿ ಸ್ವೀಟಿ ಇಂಟರ್‌ನ್ಯಾಷನಲ್ ಶೆಫ್ ಪಾತ್ರಕ್ಕೆ ಜೀವತುಂಬ್ತಿದ್ದಾರೆ. ಡಿಫರೆಂಟ್ ಲೆಯರ್‌ನಲ್ಲಿ ಪಾತ್ರ ಮೋಡಿ ಮಾಡಲಿದೆಯಂತೆ. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ

    ಮೊದಲ ಬಾರಿಗೆ ಅನುಷ್ಕಾ ಮತ್ತು ನವೀನ್ ತೆರೆಯ ಮೇಲೆ ಒಂದಾಗ್ತಿದ್ದಾರೆ. ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ಸಿನಿಮಾ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನೆಚ್ಚಿನ ನಟಿ ಅನುಷ್ಕಾ ಇಂಟರ್‌ನ್ಯಾಷನಲ್ ಶೇಫ್ ಪಾತ್ರದಲ್ಲಿ ಕಾಣಿಸಿಕೊಳ್ತಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಜೇಜಮ್ಮ : ಅನುಷ್ಕಾ ಶೆಟ್ಟಿ

    ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಜೇಜಮ್ಮ : ಅನುಷ್ಕಾ ಶೆಟ್ಟಿ

    ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬ್ಲಾಕ್ ಬಾಸ್ಟರ್ ಹಿಟ್ ಅರುಂಧತಿ ಸಿನಿಮಾ ರಿಲೀಸ್ ಆಗಿ ಜನವರಿ ೧೬ಕ್ಕೆ 13 ವರ್ಷ ಕಳೆದಿದ್ದು, ಈ ಚಿತ್ರದ ಪೋಸ್ಟ್‌ವೊಂದನ್ನು ಅನುಷ್ಕಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ಅನುಷ್ಕಾ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅರುಂಧತಿ ಸಿನಿಮಾದ ಫೋಟೋವೊಂದನ್ನು ಹಂಚಿಕೊಂಡಿದ್ದು, ಫೋಟೋದಲ್ಲಿ ಅನುಷ್ಕಾ ಕತ್ತಿ ಹಿಡಿದು ಖಡಕ್ ಲುಕ್ ನೀಡಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ಜೊತೆಗೆ ಅರುಧಂತಿ ಸಿನಿಮಾ ಬಿಡುಗಡೆಗೊಂಡು 13 ವರ್ಷ ಕಳೆದಿದೆ. ಜೇಜಮ್ಮ – ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಇದಾಗಿದ್ದು, ನಾನು ಬಹಳ ಪುಣ್ಯಮಾಡಿದ್ದೇನೆ. ಈ ಸಿನಿಮಾ ನೀಡಿದ್ದಕ್ಕಾಗಿ ಕೋಡಿ ರಾಮಕೃಷ್ಣ, ಶ್ಯಾಮ್ ಪ್ರಸಾದ್ ರೆಡ್ಡಿ ಗುರು ಅವರಿಗೆ ಮತ್ತು ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ಅದರಲ್ಲಿಯೂ ಅಭಿನಮಾನಿಗಳು ನೀಡಿದ ಬೆಂಬಲ ಹಾಗೂ ಪ್ರೀತಿಗೆ ಬಹಳ ಧನ್ಯವಾದಗಳು. ಜೊತೆಗೆ ಇದು ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಸಿನಿಮಾ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Happy Birthday To My Love – ಬಾಲಿವುಡ್ ನಟನಿಗೆ ಸುದೀಪ್ ಪುತ್ರಿ ವಿಶ್

    2009ರಲ್ಲಿ ಹಾರರ್, ಥ್ರಿಲ್ಲರ್ ಸಿನಿಮಾ ಅರುಂಧತಿ ಟಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸಿನಿಮಾಕ್ಕೆ ನಿರ್ದೇಶಕ ಕೋಡಿ ರಾಮಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದರು ಮತ್ತು ಶ್ಯಾಮ್ ಪ್ರಸಾದ್ ರೆಡ್ಡಿ ಅವರ ಬ್ಯಾನರ್ ಅಡಿ ಚಿತ್ರ ಸೊಗಸಾಗಿ ಮೂಡಿಬಂದಿತ್ತು. ಸೋನು ಸೂದ್, ದೀಪಕ್, ಸಯಾಜಿ ಶಿಂಧೆ, ಮನೋರಮಾ ಮತ್ತು ಕೈಕಲಾ ಸತ್ಯನಾರಾಯಣ ಸೇರಿದಂತೆ ಹಲವಾರು ಕಲಾವಿದರೂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾಕ್ಕೆ ಕೋಟಿ ಹಿನ್ನೆಲೆ ಸಂಗೀತ ಸಂಯೋಜಿಸಿದ್ದು, ಕೆ.ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವಿತ್ತು. ಇದನ್ನೂ ಓದಿ: ಪಂಡಿತ್ ಬಿರ್ಜೂ ಮಹಾರಾಜ್ ನನ್ನ ಗುರುಗಳು ಮಾತ್ರವಲ್ಲ, ಸ್ನೇಹಿತರು ಹೌದು: ಮಾಧುರಿ ದೀಕ್ಷಿತ್

    ಅನುಷ್ಕಾ ಶೆಟ್ಟಿ ಅದ್ಭುತವಾಗಿ ಅಭಿನಯಿಸಿರುವ ಅರುಂಧತಿ ಸಿನಿಮಾಕ್ಕೆ ಎರಡು ಫಿಲ್ಮ್‍ಫೇರ್ ಪ್ರಶಸ್ತಿಗಳು ಲಭಿಸಿದ್ದು, ಎಲ್ಲೆಡೆ ಪ್ರಶಂಸೆ ಗಿಟ್ಟಿಸಿಕೊಂಡಿತ್ತು. 2014ರಲ್ಲಿ ಅರುಂಧತಿ ಚಿತ್ರವನ್ನು ಬಂಗಾಳಿ ಭಾಷೆಯಲ್ಲಿ ರೀಮೇಕ್ ಸಹ ಮಾಡಲಾಗಿತ್ತು.

  • ವಿಜಯ್ ಸೇತುಪತಿ ಜೊತೆ ನಟಿಸಲು ಸೈ ಎಂದ ಸ್ವೀಟಿ

    ವಿಜಯ್ ಸೇತುಪತಿ ಜೊತೆ ನಟಿಸಲು ಸೈ ಎಂದ ಸ್ವೀಟಿ

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ವಿಜಯ್ ಸೇತುಪತಿ ಅವರೊಂದಿಗೆ ಹೊಸ ಸಿನಿಮಾದಲ್ಲಿ ನಟಿಸಲು ಸೈ ಎಂದಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

    ‘ನಿಶ್ಯಬ್ದಂ’ ಸಿನಿಮಾದ ನಂತರ ಸಖತ್ ಚ್ಯೂಸಿಯಾಗಿರುವ ಸ್ವೀಟಿ ತಮ್ಮ ಮುಂದಿನ ಪ್ರಾಜೆಕ್ಟ್ ಗಾಗಿ ಸಖತ್ ವರ್ಕ್ ಮಾಡುತ್ತಿದ್ದಾರೆ. ಇನ್ನೂ ಪ್ಯಾನ್ ಇಂಡಿಯಾದಲ್ಲಿ ವಿಜಯ್ ಸೇತುಪತಿ ಮತ್ತು ಅನುಷ್ಕಾ ಶೆಟ್ಟಿ ಕಳೆದ ದಶಕಗಳಿದ್ದ ಆಕರ್ಷಣೆಯನ್ನು ಹೊಂದಿದವರು. ಇಬ್ಬರು ಸೂಪರ್ ಸ್ಟಾರ್ ಆಗಿದ್ದು, ಒಟ್ಟಿಗೆ ಇಬ್ಬರನ್ನು ತೆರೆಯ ಮೇಲೆ ನೋಡಬೇಕೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಅಣ್ಣ-ತಮ್ಮಂದಿರೂ ಎಲ್ಲರೂ ಒಂದೇ ಎಂಬ ಮನಸ್ಥಿತಿಯಿಂದ ಹೊರಗೆ ಬನ್ನಿ: ಸತೀಶ್ ಜಾರಕಿಹೊಳಿ

    2020ರಲ್ಲಿ ವೆಲ್ಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಿಸುತ್ತಿದ್ದ ಹೊಸ ಚಿತ್ರಕ್ಕೆ ವಿಜಯ್ ಸೇತುಪತಿ ಮತ್ತು ಅನುಷ್ಕಾ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಆದರೆ ಇಬ್ಬರು ಅದನ್ನು ಸುಳ್ಳು ಎಂದು ಸ್ಪಷ್ಟನೆಯನ್ನು ನೀಡಿದ್ದರು. ಈಗ ಮತ್ತೆ ಈ ಸುದ್ದಿ ಕೇಳಿ ಬರುತ್ತಿದ್ದು, ಎ.ಎಲ್.ವಿಜಯ್ ನಿರ್ದೇಶಿಸುತ್ತಿದ್ದಾರೆ. ಎ.ಎಲ್.ವಿಜಯ್ ಅವರು ಈ ಹಿಂದೆ ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಅವರ ಜೀವನಚರಿತ್ರೆಯನ್ನು ಆಧಾರಿಸಿ ‘ತಲೈವಿ’ ಸಿನಿಮಾವನ್ನು ನಿರ್ದೇಶನವನ್ನು ಮಾಡಿದ್ದರು. ಈ ಸಿನಿಮಾದಲ್ಲಿ ಕಂಗನಾ ರಣಾವತ್ ಮತ್ತು ಅರವಿಂದ್ ಸ್ವಾಮಿ ಅಭಿನಯಿಸಿದ್ದರು.

    ವಿಜಯ್-ಅನುಷ್ಕಾ ಅಭಿನಯದ ಈ ಸಿನಿಮಾವನ್ನು ಜನವರಿಯಲ್ಲಿ ಚಿತ್ರೀಕರಿಸಲು ವಿಜಯ್ ಯೋಜನೆಯನ್ನು ಮಾಡಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 7, ಜೈಪುರದಲ್ಲಿ 9 ಜನರಿಗೆ ಓಮಿಕ್ರಾನ್- 21ಕ್ಕೆ ಏರಿದ ಕೇಸ್ 

    ಈ ಹಿಂದೆ ಅನುಷ್ಕಾ ಅವರು ಎ.ಎಲ್.ವಿಜಯ್ ಅವರೊಂದಿಗೆ ‘ತಾಂಡವಂ’ ಮತ್ತು ‘ದೈವ ತಿರುಮಗಳು’ ಎಂಬ ಎರಡು ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಮಾಡಿದರೆ ಇವರಿಬ್ಬರ ಮೂರನೇ ಸಿನಿಮಾವಾಗುತ್ತದೆ. ಸೇತುಪತಿ ಮತ್ತು ಅನುಷ್ಕಾ ಇದೇ ಮೊದಲು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಅಧಿಕೃತ ಸುದ್ದಿಗಾಗಿ ಕಾಯುತ್ತಿದ್ದಾರೆ.

  • ಮತ್ತೆ ನಾಗವಲ್ಲಿಯಾಗ್ತಾಳಾ ಸ್ವೀಟಿ?

    ಮತ್ತೆ ನಾಗವಲ್ಲಿಯಾಗ್ತಾಳಾ ಸ್ವೀಟಿ?

    ಚೆನ್ನೈ: ಸ್ವೀಟಿ ಅನುಷ್ಕಾ ಶೆಟ್ಟಿ ಮತ್ತೆ ನಾಗವಲ್ಲಿಯಾಗುತ್ತಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

    ಬಾಹುಬಲಿ ನಂತರ ಅನುಷ್ಕಾ ಸಿನಿಮಾಗಳು ಯಶಸ್ಸನ್ನು ಕಾಣದ ಕಾರಣ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ. ಸ್ವೀಟಿ ಮುಂದೆ ಯಾವ ರೀತಿಯ ಸಿನಿಮಾದಲ್ಲಿ ಬಣ್ಣ ಹಂಚುತ್ತಾರೆ ಎಂದು ಅವರ ಅಭಿಮಾನಿಗಳಲ್ಲಿ ಕುತೂಹಲ ಇದ್ದೇ ಇದೆ. ಅದಕ್ಕೆ ತೆರೆ ಎಳೆಯುವಂತೆ ರಾಘವ ಲಾರೆನ್ಸ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.

    ಈ ಹಿಂದೆ 2006ರಲ್ಲಿ ತಮಿಳಿನಲ್ಲಿ ತೆರೆಕಂಡ ‘ಚಂದ್ರಮುಖಿ’ ಸಿನಿಮಾ ತೆಲುಗಿಗೂ ಡಬ್ ಆಗಿದ್ದು, ಆ ಸಿನಿಮಾದಲ್ಲಿ ಅನುಷ್ಕಾ ನಾಗವಲ್ಲಿಯಾಗಿ ಸಖತ್ ಮಿಂಚಿದ್ದರು. ಈಗ ಮತ್ತೆ ರಾಘವ ಲಾರೆನ್ಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಾಗವಲ್ಲಿ ಪಾತ್ರವಿದ್ದು, ಅದಕ್ಕೆ ಅನುಷ್ಕಾ ಅವರೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

    ಈ ಕುರಿತು ಲಾರೆನ್ಸ್ ಅವರು ಅನುಷ್ಕಾ ಜೊತೆ ಮಾತುಕತೆಯನ್ನು ಮಾಡಿದ್ದು, ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಅವರನ್ನು ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾಗಳಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

    2018ರಲ್ಲಿ ಅನುಷ್ಕಾರ ‘ಭಾಗವತಿ’ ಸಿನಿಮಾ ತೆರೆಕಂಡಿತ್ತು. ನಂತರ ‘ನಿಶ್ಯಬ್ದಂ’ ಸಿನಿಮಾ ಒಟಿಟಿಗೆ ಸೀಮಿತವಾಗಿದ್ದು, ಮೂಕಿ ಪಾತ್ರದಲ್ಲಿ ಸ್ವೀಟಿ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಆದರೆ ಆ ಸಿನಿಮಾ ಕೂಡ ಅಷ್ಟು ಸದ್ದು ಮಾಡಲಿಲ್ಲ. ಅದಕ್ಕೆ ಅನುಷ್ಕಾ ತಮ್ಮ ಮುಂದಿನ ಪ್ರಾಜ್ಜೆಕ್ಟಲ್ಲಿ ಸಖತ್ ಕೇರ್ ಫುಲ್ ಆಗಿದ್ದಾರೆ.

  • ಮಹೇಶ್ ಬಾಬು, ಅನುಷ್ಕಾ ಶೆಟ್ಟಿಗೆ ಇಂದು ವಿಶೇಷ ದಿನ

    ಮಹೇಶ್ ಬಾಬು, ಅನುಷ್ಕಾ ಶೆಟ್ಟಿಗೆ ಇಂದು ವಿಶೇಷ ದಿನ

    – ಟ್ವೀಟ್ ಮಾಡುವ ಮೂಲಕ ಖುಷಿ ಹಂಚಿಕೊಂಡ್ರು

    ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಸ್ವೀಟಿ ಅನುಷ್ಕಾ ಶೆಟ್ಟಿಗೆ ಇಂದು ವಿಶೇಷವಾದ ದಿನವಾಗಿದೆ. ಹೀಗಾಗಿ ಇಬ್ಬರು ಸೋಶಿಯಲ್ ಮೀಡಿಯಾದ ಮೂಲಕ ಬಗ್ಗೆ ತಮ್ಮ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.

    ಹೌದು, ಇಂದು ಮಹೇಶ್ ಬಾಬು ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಸೂಪರ್ ಹಿಟ್ ‘ಖಲೇಜಾ’ ಸಿನಿಮಾ ರಿಲೀಸ್ ಆದ ದಿನ. ಇಂದಿಗೆ ಈ ಸಿನಿಮಾ ರಿಲೀಸ್ ಆಗಿ 10 ವರ್ಷಗಳಾಗಿದೆ. ಅಕ್ಟೋಬರ್ 7, 2010ರಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬಂದಿದ್ದು, ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಮೂಲಕ ಮೊದಲ ಬಾರಿಗೆ ಮಹೇಶ್ ಬಾಬು ಮತ್ತು ಅನುಷ್ಕಾ ಇಬ್ಬರು ಅಭಿಮಾನಿಗಳ ಮುಂದೆ ಬಂದಿದ್ದು, ಇಬ್ಬರ ಕಾಂಬಿನೇಷನ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ಸಿನಿಮಾದ ಆಕ್ಷನ್ ಮತ್ತು ಹಾಸ್ಯ ದೃಶ್ಯಗಳು ಸಿನಿಮಾ ಪ್ರಿಯರ ಮನಗೆದ್ದಿತ್ತು. ‘ಖಲೇಜಾ’ ಸಿನಿಮಾ ನಿರ್ದೇಶಕ ತ್ರಿವಿಕ್ರಮ್ ಸಾರಥ್ಯದಲ್ಲಿ ಮೂಡಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ‘ಖಲೇಜಾ’ ಸಿನಿಮಾದ 10 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. ಈ ಸಂತಸವನ್ನು ನಟ ಮಹೇಶ್ ಬಾಬು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

    “ಖಲೇಜಾ ಸಿನಿಮಾ ಬಿಡುಗಡೆಯಾಗಿ 10 ವರ್ಷ ಪೂರೈಸಿದೆ. ನಟನಾಗಿ ನನ್ನನ್ನು ಮರುಶೋಧಿಸಿದ ಸಿನಿಮಾವಿದು. ಹೀಗಾಗಿ ಈ ಚಿತ್ರ ವಿಶೇಷವಾಗಿ ಉಳಿಯುತ್ತದೆ. ನನ್ನ ಸ್ನೇಹಿತ ಮತ್ತು ನಿರ್ದೇಶಕ ತ್ರಿವಿಕ್ರಮ್‍ಗೆ ಧನ್ಯವಾದಗಳು. ಮುಂದಿನ ಸಿನಿಮಾಗಾಗಿ ಎದುರು ನೋಡುತ್ತಿದ್ದೇನೆ. ಶೀಘ್ರದಲ್ಲೇ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಿನಿಮಾದ ವಿಡಿಯೋ ಶೇರ್ ಮಾಡಿದ್ದಾರೆ. ಈ ಮೂಲಕ ಮಹೇಶ್ ಬಾಬು ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಅಂದರೆ ನಿರ್ದೇಶಕ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುವ ಸುಳಿವನ್ನು ನೀಡಿದ್ದಾರೆ.

    ನಟಿ ಅನುಷ್ಕಾ ಶೆಟ್ಟಿ ಕೂಡ ಮಹೇಶ್ ಬಾಬು ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದು, “ಈ ಸಿನಿಮಾದ ಸಾಕಷ್ಟು ನೆನಪುಗಳಿವೆ. ಮಹೇಶ್ ಬಾಬು, ತ್ರಿವಿಕ್ರಮ್ ಅವರಿಗೆ ಧನ್ಯವಾದಗಳು” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಸದ್ಯಕ್ಕೆ ಮಹೇಶ್ ಬಾಬು ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ನಟಿ ಅನುಷ್ಕಾ ಇತ್ತೀಚಿಗೆ ‘ನಿಶಬ್ದಂ’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈಗ ವಿಜಯ್ ದೇವರಕೊಂಡ ಮತ್ತು ಅನುಷ್ಕಾ ಮುಂದಿನ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.