Tag: anushka shetty

  • ಸ್ಯಾಂಡಲ್‌ವುಡ್‌ಗೆ ಕನ್ನಡತಿ ಅನುಷ್ಕಾ ಶೆಟ್ಟಿ ಪಾದಾರ್ಪಣೆ

    ಸ್ಯಾಂಡಲ್‌ವುಡ್‌ಗೆ ಕನ್ನಡತಿ ಅನುಷ್ಕಾ ಶೆಟ್ಟಿ ಪಾದಾರ್ಪಣೆ

    ರಾವಳಿ ಚೆಲುವೆ (Karavali Beauty) ಅನುಷ್ಕಾ ಶೆಟ್ಟಿ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇದೀಗ 3 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಸ್ವೀಟಿ ಅನುಷ್ಕಾ ರೆಡಿಯಾಗಿದ್ದಾರೆ. ಹೊಸ ಚಿತ್ರದ ಟೈಟಲ್ ಜೊತೆ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ.

    `ಬಾಹುಬಲಿ’ (Bahubali) ನಟಿ ಅನುಷ್ಕಾ ಶೆಟ್ಟಿ ಅವರು ಕಡೆಯದಾಗಿ 2020ರಲ್ಲಿ `ನಿಶಬ್ಧಂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಆಗಿರುವ ನಟಿ ಕನ್ನಡಿಗರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅನುಷ್ಕಾ ಶೆಟ್ಟಿ(Anushka Shetty) ಅವರು ಮೂಲತಃ ಕರ್ನಾಟಕದವರು ಹಾಗಾಗಿ ನಮ್ಮ ಕನ್ನಡದ ಹುಡುಗಿ ಕನ್ನಡ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅಪಾರ ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಆ ಆಸೆ ಈಡೇರಿದೆ. ನವೀನ್ ಪೋಲಿಶೆಟ್ಟಿ (Naveen Polishetty) ಜೊತೆಗಿನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅನುಷ್ಕಾ ಶೆಟ್ಟಿ ಪಾದಾರ್ಪಣೆ ಮಾಡ್ತಿದ್ದಾರೆ.  ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ಹ್ಯಾಪಿ ಸಿಂಗಲ್ ಎನ್ನುತ್ತ ನವೀನ್ ಪೋಲಿಶೆಟ್ಟಿಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ಬರುತ್ತಿದ್ದಾರೆ. ಅನ್ವಿತಾ ರಾವಾಲಿ ಶೆಟ್ಟಿಯಾಗಿ ಸ್ವೀಟಿ ಶೆಫ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಯುವಿ ಕ್ರಿಯೇಷನ್ ನಿರ್ಮಾಣದಲ್ಲಿ `Miss Shetty Mrs Polishetty’ ಟೈಟಲ್‌ ಮೂಲಕ ಅನುಷ್ಕಾ ಹೊಸ ಚಿತ್ರ ಮೂಡಿ ಬಂದಿದ್ದು, ಈ ವರ್ಷವೇ ಸಿನಿಮಾ ತೆರೆಗೆ ಬರುತ್ತಿದೆ.

    ಹ್ಯಾಪಿ ಸಿಂಗಲ್ (Happy Single) ಮತ್ತು ರೆಡಿ ಟು ಮಿಂಗಲ್ (Ready To Mingle) ಎನ್ನುವ ಅನುಷ್ಕಾ ಮತ್ತು ನವೀನ್ ಅವರ ಚಿತ್ರದ ಫಸ್ಟ್ ಲುಕ್ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಮೂಲಕ ಕನ್ನಡತಿ ಅನುಷ್ಕಾ ಶೆಟ್ಟಿ ಸ್ಯಾಂಡಲ್‌ವುಡ್‌ಗೆ (Sandalwood) ಪಾದಾರ್ಪಣೆ ಮಾಡ್ತಿದ್ದಾರೆ.

  • ಬೆಂಗಳೂರಿನ ಶಿವನ ದೇವಸ್ಥಾನಕ್ಕೆ ಅನುಷ್ಕಾ ಶೆಟ್ಟಿ ಭೇಟಿ

    ಬೆಂಗಳೂರಿನ ಶಿವನ ದೇವಸ್ಥಾನಕ್ಕೆ ಅನುಷ್ಕಾ ಶೆಟ್ಟಿ ಭೇಟಿ

    `ಬಾಹುಬಲಿ’ (Bahubali) ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಇತ್ತೀಚಿಗೆ ಬೆಂಗಳೂರಿಗೆ ಆಗಮಿಸಿದ್ದರು. ಕುಟುಂಬದ ಜೊತೆ ಶಿವನ ದೇವಸ್ಥಾನಕ್ಕೆ ನಟಿ ಭೇಟಿ ಕೊಟ್ಟಿದ್ದಾರೆ. ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

    ಸೌತ್ ನಟಿ ಸ್ವೀಟಿ ಅನುಷ್ಕಾ ಶೆಟ್ಟಿ ಅವರು ಇತ್ತೀಚಿಗೆ ತಮ್ಮ ಕುಟುಂಬದ ಜೊತೆ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದಾರೆ. ಬೆಂಗಳೂರಿನ ಶಿವನ ದೇವಸ್ಥಾನಕ್ಕೆ ಆಗಮಿಸಿ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಕುಟುಂಬದ ಜೊತೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಟ ಅನಂತ್ ನಾಗ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

    ಬಿಳಿ ಬಣ್ಣದ ಸೆಲ್ವಾರ್ ಚೂಡಿದಾರ್ ಧರಿಸಿ ಅನುಷ್ಕಾ ಶೆಟ್ಟಿ ಮಿಂಚಿದ್ದಾರೆ. ನಟಿಯನ್ನ ನೋಡುತ್ತಿದ್ದಂತೆ ಫ್ಯಾನ್ಸ್ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಇನ್ನೂ ಅನುಷ್ಕಾ ಶೆಟ್ಟಿ ಅವರು ನವೀನ್ ಪೋಲಿಶೆಟ್ಟಿ ಜೊತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ನವೀನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

    ಹೊಸ ಬಗೆಯ ಕಥೆಗಳನ್ನ ನಟಿ ಕೇಳುತ್ತಿದ್ದಾರೆ. ಸೂಕ್ತ ಕಥೆಯ ಜೊತೆ ಮತ್ತೆ ಹೊಸ ಪ್ರಾಜೆಕ್ಟ್‌ಗಳನ್ನ ಅನುಷ್ಕಾ ಸದ್ಯದಲ್ಲೇ ಅನೌನ್ಸ್ ಮಾಡಲಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಮಂತಾ ಬಳಿಕ ವಿಚಿತ್ರ ಕಾಯಿಲೆ ಬಗ್ಗೆ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ

    ಸಮಂತಾ ಬಳಿಕ ವಿಚಿತ್ರ ಕಾಯಿಲೆ ಬಗ್ಗೆ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ

    ಟಾಲಿವುಡ್ (Tollywood) ನಟಿ ಸಮಂತಾ (Samantha) ಇತ್ತೀಚಿಗೆ ತಮಗಿರುವ ಅಪರೂಪದ ಕಾಯಿಲೆಯ ಬಗ್ಗೆ ಹೇಳಿಕೊಂಡಿದ್ದರು. ಮಯೋಸಿಟೀಸ್ (Myosities) ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ಸ್ಯಾಮ್ ರಿವೀಲ್ ಮಾಡಿದ್ದರು. ಇದೀಗ ಸಮಂತಾ ಬಳಿಕ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ʻಬಾಹುಬಲಿʼ ನಟಿ ಅನುಷ್ಕಾ ಶೆಟ್ಟಿ (Anushka Shetty) ಬಹಿರಂಗಪಡಿಸಿದ್ದಾರೆ.

    ಸಿನಿಮಾ ತಾರೆಯರು ಸಾಮಾನ್ಯವಾಗಿ ತಮಗಿರುವ ಆರೋಗ್ಯದ ಸಮಸ್ಯೆ ಹೇಳಿಕೊಳ್ಳುವುದಿಲ್ಲ. ಆದರೆ ಕೆಲ ನಟಿಯರು ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ರಿವೀಲ್ ಮಾಡಿದ್ದಾರೆ. ಸಮಂತಾ ಬಳಿಕ ಅನುಷ್ಕಾ ಶೆಟ್ಟಿ ಕೂಡ ತಮ್ಮ ಆರೋಗ್ಯದ (Health) ಬಗ್ಗೆ ಮಾತನಾಡಿದ್ದಾರೆ. ಸ್ವೀಟಿಗೆ ನಗುವ ಸಮಸ್ಯೆ ಇದೆಯಂತೆ. ಹಾಗಂತ ಸಂದರ್ಶನವೊಂದರಲ್ಲಿ ನಟಿಯೇ ಹೇಳಿಕೊಂಡಿದ್ದಾರೆ.

    ಅನುಷ್ಕಾ ಶೆಟ್ಟಿಗೆ ನಗುವ ಸಮಸ್ಯೆ ಇದೆಯಂತೆ. ನಾನು ಒಮ್ಮೆ ನಗುವುದಕ್ಕೆ ಶುರು ಮಾಡಿದರೆ 15 ರಿಂದ 20 ನಿಮಿಷ ನಗುತ್ತಲೇ ಇರ್ತೀನಿ ಎಂದು ಅನುಷ್ಕಾ ಹೇಳಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಜೋರಾಗಿ ನಗುವುದಕ್ಕೆ ಆರಂಭಿದರೆ ಎಲ್ಲರೂ ತಮ್ಮ ಕೆಲಸಗಳನ್ನು ನಿಲ್ಲಿಸಿ ನನ್ನನ್ನೇ ನೋಡುತ್ತಾ ನಿಂತು ಬಿಡುತ್ತಾರೆ ಎಂದು ನಟಿ ಹೇಳಿದ್ದಾರೆ. ಏನಾದರೂ ಫನ್ನಿ ಘಟನೆ ನೆನಪಿಸಿಕೊಂಡರೆ, ಯಾರಾದರೂ ಜೋಕ್ ಮಾಡಿದರೆ ಕಥೆ ಮುಗೀತು, ನಿರಂತರವಾಗಿ ನಗುತ್ತಲೇ ಇರ್ತೀನಿ ಎಂದಿದ್ದಾರೆ. ಇದನ್ನೂ ಓದಿ: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌

    ಶೂಟಿಂಗ್ ನಡುವೆ ನಾನು ನಗುವುದಕ್ಕೆ ಆರಂಭಿದರೆ ಕೆಲವರು ತಿಂಡಿ ತಿಂದು ಮುಗಿಸಿದರೂ ನನ್ನ ನಗು ಮಾತ್ರ ನಿಂತಿರುವುದಿಲ್ಲ ಎಂದು ಸ್ವೀಟಿ ಹೇಳಿದ್ದಾರೆ. ನನಗೆ ಕೂಡಲೇ ನಗುವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ

    ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ

    ಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಶೂಟಿಂಗ್‌ಗೆ ಬ್ರೇಕ್ ಹಾಕಿ, ಮಂಗಳೂರಿಗೆ ಬಂದಿದ್ದಾರೆ. ತಮ್ಮ ಮನೆಯ ಭೂತಕೋಲದಲ್ಲಿ ನಟಿ ಭಾಗಿಯಾಗಿದ್ದಾರೆ. ಈ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    `ಬಾಹುಬಲಿ 2′ (Bahubali 2) ಸಕ್ಸಸ್ ನಂತರ `ನಿಶಬ್ಧಂ’ ಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಯಾವುದೇ ಚಿತ್ರದಲ್ಲೂ ಕಾಣಿಸಿಕೊಳ್ಳದೇ ಅನುಷ್ಕಾ ಸೈಲೆಂಟ್‌ ಆಗಿದ್ದಾರೆ. ಆದರೆ ಈಗ ಹೊಸ ಪ್ರತಿಭೆ ನವೀನ್ ಪೋಲಿ ಶೆಟ್ಟಿ ಜೊತೆ ಹೊಸ ಚಿತ್ರದ ಮೂಲಕ ಸ್ವೀಟಿ ಕಮ್‌ಬ್ಯಾಕ್ ಮಾಡ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ರಿಲೀಸ್‌ಗೆ ಸಜ್ಜಾಗಿರುವ ಬೆನ್ನಲ್ಲೇ ತಮ್ಮ ಮನೆಯ ಪಂಜುರ್ಲಿ ದೈವಕೋಲಕ್ಕೆ ಅನುಷ್ಕಾ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ದೈವದ ವೀಡಿಯೋ ಮಾಡ್ತಿರುವ ಅನುಷ್ಕಾ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಅನುಷ್ಕಾ ಕುಟುಂಬದಲ್ಲಿ ದೈವದ ಆರಾಧನೆ ಮಾಡಿದ್ದಾರೆ. ನಟಿ ಮೂಲತಃ ಮಂಗಳೂರಿನವರಾಗಿದ್ದು, ಭೂತಕೋಲವನ್ನು ಮಾಡುತ್ತಾರೆ.

    ಇನ್ನೂ ಇತ್ತೀಚೆಗೆ ಕಾಂತಾರ (Kantara) ಸಿನಿಮಾ ನೋಡಿ, ಖುಷಿಯಿಂದ ಚಿತ್ರಕ್ಕೆ ಮತ್ತು ರಿಷಬ್ ಶೆಟ್ಟಿ ನಟನೆಗೆ ಅನುಷ್ಕಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಂತಾರದಲ್ಲಿ ದೈವ ಕಥೆಯನ್ನ ಅಚ್ಚುಕಟ್ಟಾಗಿ ತೆರೆಯ ಮೇಲೆ ತೋರಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ

    ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ

    `ಬಾಹುಬಲಿ’ (Bahubali) ನಟಿ ಅನುಷ್ಕಾ ಶೆಟ್ಟಿ (Anushka Shetty) ಚಿತ್ರರಂಗದಲ್ಲಿ ಮತ್ತೆ ಆಕ್ಟೀವ್‌ ಆಗಿದ್ದಾರೆ. ಸದ್ದಿಲ್ಲದೇ ಸೈಲೆಂಟ್‌ ಆಗಿ ಸಿನಿಮಾ ಮಾಡ್ತಿದ್ದಾರೆ. ಇದೀಗ ಹೊಸ ಸಿನಿಮಾಗೆ ಸ್ವೀಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

    ಕನ್ನಡತಿ ಅನುಷ್ಕಾ ಶೆಟ್ಟಿ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗ್ತಿದ್ದಾರೆ. ಸದ್ಯ ನವೀನ್ ಪೋಲಿಶೆಟ್ಟಿ (Naveen Polishetty) ಅಭಿನಯದ ಚಿತ್ರದಲ್ಲಿ ಅನುಷ್ಕಾ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ತಮಿಳಿನ(Tamil Films) ಹೊಸ ಚಿತ್ರಕ್ಕೆ ನಟಿ ಓಕೆ ಅಂದಿದ್ದಾರೆ.

    ಎ.ಎಲ್ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಅನುಷ್ಕಾ ನಟಿಸೋದು ಫೈನಲ್ ಆಗಿದೆ. ಈ ಕುರಿತು ಡೈರೆಕ್ಟರ್ ವಿಜಯ್ ಅವರೇ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ತಮಿಳು ಮತ್ತು ತೆಲುಗುಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ.ಇದನ್ನೂ ಓದಿ: ಗುರೂಜಿ ಮಾಡಿದ ಆ ಒಂದು ತಪ್ಪಿನಿಂದ, ಮನೆ ಮಂದಿಗೆ ಬಿಗ್ ಬಾಸ್ ಗುನ್ನ

    ಈ ಹಿಂದೆ ಎ.ಎಲ್ ವಿಜಯ್ ಮತ್ತು ಅನುಷ್ಕಾ ಕಾಂಬಿನೇಷನ್‌ನ `ದೈವ ತಿರುಮಗಳ್’ ಮತ್ತು `ತಾಂಡವಂ’ ಚಿತ್ರ ಮೂಡಿ ಬಂದಿತ್ತು. ಇದೀಗ ಮೂರನೇ ಬಾರಿಗೆ ಒಟ್ಟಿಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಅರುಂಧತಿ, ಭಾಗಮತಿಯಂತಹ ಪವರ್‌ಫುಲ್ ರೋಲ್ ಮೂಲಕ ಅನುಷ್ಕಾ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ತಮ್ಮ ಫ್ಯಾನ್ಸ್‌ಗೆ ಸ್ವೀಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹುಟ್ಟುಹಬ್ಬದಂದೇ ಹೊಸ ಚಿತ್ರದ ಬಗ್ಗೆ ಸಿಹಿ ಸುದ್ದಿ ಕೊಟ್ರು ಅನುಷ್ಕಾ ಶೆಟ್ಟಿ

    ಹುಟ್ಟುಹಬ್ಬದಂದೇ ಹೊಸ ಚಿತ್ರದ ಬಗ್ಗೆ ಸಿಹಿ ಸುದ್ದಿ ಕೊಟ್ರು ಅನುಷ್ಕಾ ಶೆಟ್ಟಿ

    ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ (Anushka Shetty) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಶುಭದಿನದಂದೇ ತಮ್ಮ ಅಭಿಮಾನಿಗಳಿಗೆ ಅನುಷ್ಕಾ ಗುಡ್ ನ್ಯೂಸ್ ಕೊಟ್ಟಿದ್ದಾರೆ.  ಕಂಬ್ಯಾಕ್ ಚಿತ್ರದಲ್ಲಿನ ತಮ್ಮ ಲುಕ್ ರಿವೀಲ್ ಮಾಡುವ ಮೂಲಕ ನಟಿ ಗಮನ ಸೆಳೆಯುತ್ತಿದ್ದಾರೆ.

    ಕನ್ನಡತಿ ಅನುಷ್ಕಾ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳಿಗೂ ನಟಿ ತಮ್ಮ ಮುಂಬರುವ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ. ಬರೋಬ್ಬರಿ 3 ವರ್ಷಗಳ ನಂತರ ಮತ್ತೆ ಕಂಬ್ಯಾಕ್ ಆಗುತ್ತಿರುವ ಅನುಷ್ಕಾ ಅವರ ಹೊಸ ಚಿತ್ರದ ಲುಕ್ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಹಿಂದಿ ಬಾಕ್ಸಾಫೀಸ್‌ನಲ್ಲಿ ರಿಷಬ್ ಶೆಟ್ಟಿ ಅಬ್ಬರ: 62 ಕೋಟಿ ರೂ. ಗಳಿಸಿದ ʻಕಾಂತಾರʼ

    ನವೀನ್ ಪೋಲಿ ಶೆಟ್ಟಿಗೆ(Naveen Poli Shetty) ನಾಯಕಿಯಾಗಿ ಅನುಷ್ಕಾ ಶೆಟ್ಟಿ ಹೊಸ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಅನ್ವಿತಾ ರಾವಲಿ ಶೆಟ್ಟಿ ಎಂಬದು ಅವರ ಪಾತ್ರ ಹೆಸರಾಗಿದ್ದು, ಬಾಣಸಿಗ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಯುವಿ ಕ್ರಿಯೇಷನ್ಸ್ (Uv Creations) ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸದ್ಯ ಚಿತ್ರತಂಡ ಅನುಷ್ಕಾ ಪಾತ್ರದ ಲುಕ್ ರಿವೀಲ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ.

    ಮಾಸ್ಟರ್ ಶೆಫ್ ಆಗಿ ನಟಿಸಿರುವ ಸ್ವೀಟಿ ಅನುಷ್ಕಾ ನಟನೆಯ, ಪಿ ಮಹೇಶ್‌ ಬಾಬು ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ಚಿತ್ರಕ್ಕೆ ಭೇಷ್ ಎಂದ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ

    `ಕಾಂತಾರ’ ಚಿತ್ರಕ್ಕೆ ಭೇಷ್ ಎಂದ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ

    ಚಿತ್ರರಂಗದ ದಶದಿಕ್ಕುಗಳಲ್ಲೂ ಕೇಳಿ ಬರುತ್ತಿರೋದು ಒಂದೇ ಹೆಸರು `ಕಾಂತಾರ’ (Kantara Film) ಸಿನಿಮಾ. ಈ ಚಿತ್ರವನ್ನ ನೋಡಿ ಸಿನಿಪ್ರೇಕ್ಷಕರು ಅಷ್ಟೇ ಫಿದಾ ಆಗಿರೋದಲ್ಲ, ಸ್ಟಾರ್ ಕಲಾವಿದರು ಕೂಡ ಚಿತ್ರ ನೋಡಿ ಭೇಷ್ ಎಂದಿದ್ದಾರೆ. ಇದೀಗ ಈ ಸಾಲಿಗೆ ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ (Anushka Shetty) ಕೂಡ ಸೇರಿಕೊಂಡಿದ್ದಾರೆ. ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಚಿತ್ರ ನೋಡಿ ಅನುಷ್ಕಾ ಶೆಟ್ಟಿ ಹಾಡಿ ಹೊಗಳಿದ್ದಾರೆ.

    ಹೊಂಬಾಳೆ ಬ್ಯಾನರ್ (Hombale Banner) ನಿರ್ಮಾಣದ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ `ಕಾಂತಾರಾ’ ಸಿನಿಮಾ ಸದ್ಯ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ತೆರೆಕಂಡ 15 ದಿನಗಳ ನಂತರ ಇದೀಗ ಹಿಂದಿ, ತೆಲುಗಿನಲ್ಲೂ ಸಿನಿಮಾ ಕಮಾಲ್ ಮಾಡುತ್ತಿದೆ. ಈ ಚಿತ್ರವನ್ನು ನೋಡಿ ಪರಭಾಷೆಯ ಸ್ಟರ‍್ಸ್ಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೀಗ ಕನ್ನಡತಿ ಅನುಷ್ಕಾ ಶೆಟ್ಟಿ ಕೂಡ ಕಾಂತಾರ ಸಿನಿಮಾ ನೋಡಿ ಮನಸಾರೆ ಮೆಚ್ಚುಗೆ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ

    ಸಿನಿಮಾವನ್ನು ವೀಕ್ಷಣೆ ಮಾಡಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ನಟಿ ಅನುಷ್ಕಾ ಶೆಟ್ಟಿ, ಕಾಂತಾರ ಸಿನಿಮಾ ವೀಕ್ಷಿಸಿದೆ. ನನಗೆ ಈ ಸಿನಿಮಾ ತುಂಬಾ ತುಂಬಾ ಇಷ್ಟವಾಯಿತು. ಈ ಸಿನಿಮಾದ ಪ್ರತಿಯೊಬ್ಬ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. `ಕಾಂತಾರ’ ಇಡೀ ತಂಡ ಅದ್ಭುತವಾಗಿದೆ. ನಮಗೆ ಈ ಅದ್ಭುತ ಅನುಭವ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ಅದ್ಭುತ. ದಯವಿಟ್ಟು ಥಿಯೇಟರ್‌ನಲ್ಲಿ ಈ ಚಿತ್ರವನ್ನು ನೋಡಿ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.

    ಒಟ್ನಲ್ಲಿ ʻಕಾಂತಾರʼ ಏಲ್ಲೆಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. `ಕೆಜಿಎಫ್ 2′(Kgf 2) ಚಿತ್ರದಂತೆ ʻಕಾಂತಾರʼ (Kantara Film) ಕೂಡ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ದೈವದ ಕಥೆಯನ್ನ ಹೇಳುವ ಮೂಲಕ ರಿಷಬ್ ಶೆಟ್ಟಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಸೆಟ್ ಆಯ್ತು ಅನುಷ್ಕಾ ಶೆಟ್ಟಿ ಕಲ್ಯಾಣ

    ಕೊನೆಗೂ ಸೆಟ್ ಆಯ್ತು ಅನುಷ್ಕಾ ಶೆಟ್ಟಿ ಕಲ್ಯಾಣ

    ಸೌತ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಚೆಲುವೆ ಅನುಷ್ಕಾ ಶೆಟ್ಟಿಗೆ (Anushka Shetty) ನಲವತ್ತು ವರ್ಷವಾಗಿದ್ದರೂ ಆಕೆಯ ಮೇಲಿರುವ ಕ್ರೇಜ್ ಒಂದು ಚೂರು ಕಮ್ಮಿಯಾಗಿಲ್ಲ. ಸ್ವೀಟಿ ಹಸೆಮಣೆ ಏರಲಿದ್ದಾರೆ ಅಂದ್ರೆ ಅನುಷ್ಕಾ ಅಭಿಮಾನಿಗಳು ನಂಬಲು ಸಿದ್ಧರಿಲ್ಲ. ಕರಾವಳಿ ಬ್ಯೂಟಿಗೆ ತೆರೆಮರೆಯಲ್ಲಿ ಮದುವೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.

    ಅರುಂಧತಿ, ಭಾಗಮತಿ, ಬಾಹುಬಲಿ ಅಂತಾ ಸೂಪರ್ ಡೂಪರ್ ಸಿನಿಮಾಗಳನ್ನ ಕೊಟ್ಟಿರುವ ಪ್ರತಿಭಾನ್ವಿತ ನಟಿ ಅನುಷ್ಕಾ, ನವೀನ್ ಪೋಲಿ ಶೆಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಧ್ಯೆ ಕರಾವಳಿ ನಟಿಯ ಮದುವೆ ವದಂತಿ ಕೂಡ ಸಖತ್ ಸೌಂಡ್ ಮಾಡುತ್ತಿದೆ. ಗುರುಹಿರಿಯರು ನಿಶ್ಚಯಿಸಿದ ವರನೊಂದಿಗೆ ಮದುವೆಯಾಗಲು ಅನುಷ್ಕಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇದನ್ನೂ ಓದಿ:ನಟ ವಿಶಾಲ್ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    `ಬಾಹುಬಲಿ’ ನಟಿ ಅನುಷ್ಕಾ ಸದ್ಯದಲ್ಲೇ ಹಸೆಮಣೆ ಏರೋದು ಪಕ್ಕಾ ಎನ್ನಲಾಗುತ್ತಿದೆ. ತಮ್ಮ ಕುಟುಂಬ ನೋಡಿರುವ ವರನೊಂದಿಗೆ ಸ್ವೀಟಿ ಅನುಷ್ಕಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಈ ಕುರಿತ ಗುಡ್ ನ್ಯೂಸ್ ಸದ್ಯದಲ್ಲೇ ಅಧಿಕೃತವಾಗಿ ತಿಳಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್

    ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್

    ಟಾಲಿವುಡ್‌ನ `ಬಾಹುಬಲಿ’ (Bahubali) ಪ್ರಭಾಸ್ ಇದೀಗ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಮ್ಮ ವೈಯಕ್ತಿಕ ವಿಷ್ಯವಾಗಿ ಟಿಟೌನ್‌ನಲ್ಲಿ ಪ್ರಭಾಸ್(Prabhas) ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟಿಯ ಜೊತೆ ಪ್ರಭಾಸ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

    `ಬಾಹುಬಲಿ’ ಸೂಪರ್ ಸ್ಟಾರ್ ಪ್ರಭಾಸ್‌ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಮ್ಮ ಡೇಟಿಂಗ್ ವಿಷ್ಯವಾಗಿ ಸೌಂಡ್ ಮಾಡುತ್ತಿದ್ದಾರೆ. ಈ ಹಿಂದೆ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಹೆಸರು ಕೇಳಿ ಬಂದಿತ್ತು. ಆದರೆ ನಾವಿಬ್ಬರೂ ಫ್ರೆಂಡ್ಸ್ ಎಂದು ತಿಳಿಸಿ ಗಾಸಿಪ್‌ಗೆ ಫುಲ್ ಸ್ಟಾಪ್ ಇಟ್ಟಿದ್ದರು. ಇದೀಗ ಅನುಷ್ಕಾ ಬಳಿಕ ಬಾಲಿವುಡ್ ನಟಿ ಕೃತಿ ಸನೂನ್ (Kriti Sanon) ಜೊತೆ ಪ್ರಭಾಸ್ ಹೆಸರು ಕೇಳಿ ಬಂದಿದೆ.

    ಇತ್ತೀಚೆಗೆ ಬಾಲಿವುಡ್‌ನ ಜನಪ್ರಿಯ ಶೋ ಕಾಫಿ ವಿತ್ ಕರಣ್ (Coffe With Karan) ಕಾರ್ಯಕ್ರಮದಲ್ಲಿ ನಟಿ ಕೃತಿ ಭಾಗವಹಿಸಿದ್ದರು. ಈ ಶೋನಲ್ಲಿ ಸೆಲೆಬ್ರಿಟಿ ಫ್ರೆಂಢ್ಸ್‌ಗೆ ಕರೆಸುವ ನಿಯಮವಿದೆ. ಅದರಂತೆ ಕೃತಿ ಕೂಡ ಶೋನಲ್ಲಿ ಪ್ರಭಾಸ್‌ಗೆ ಕರೆ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಪ್ರಭಾಸ್‌ಗೆ ಕಾಲ್ ಮಾಡಿ ಕರಣ್‌ಗೆ ಹಾಯ್ ಹೇಳುವಂತೆ ಹೇಳಿದ್ದಾರೆ. ಅದರಂತೆ ಪ್ರಭಾಸ್ ಕೂಡ ಮಾತನಾಡಿದ್ದಾರೆ. ನೀವು ಸೂಪರ್ ಆಮೇಲೆ ಕಾಲ್ ಮಾಡುತ್ತೇನೆ ಎಂದಿದ್ದಾರೆ. ಪ್ರಭಾಸ್ ಕೂಡ ಓಕೆ ಟೇಕ್ ಕೇರ್ ಬೈ ಎಂದಿದ್ದಾರೆ. ಶೋನಲ್ಲಿ ಇವರಿಬ್ಬರ ಬಾಂಧವ್ಯ ನೋಡಿ, ಇವರಿಬ್ಬರ ಡೇಟಿಂಗ್ ವಿಚಾರ ಸಖತ್ ಸದ್ದು ಮಾಡುತ್ತಿದೆ.

    ಇನ್ನೂ ಪ್ಯಾನ್ ಇಂಡಿಯಾ ಚಿತ್ರ `ಆದಿಪುರುಷ’ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರ, ಕೃತಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ರೀಲ್‌ನಲ್ಲಿ ಈ ಜೋಡಿಯ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈ ಕಾರಣಕ್ಕಾಗಿ ಅನುಷ್ಕಾ ಶೆಟ್ಟಿ ಕ್ಯಾಮೆರಾ ಕಣ್ಣಿಂದ ದೂರವಿದ್ದಾರೆ

    ಈ ಕಾರಣಕ್ಕಾಗಿ ಅನುಷ್ಕಾ ಶೆಟ್ಟಿ ಕ್ಯಾಮೆರಾ ಕಣ್ಣಿಂದ ದೂರವಿದ್ದಾರೆ

    ಕ್ಷಿಣದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಗಮನ ಸೆಳೆದಿರುವ ಅನುಷ್ಕಾ ಶೆಟ್ಟಿ ಈಗ ನವೀನ್ ಪೋಲಿ ಶೆಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಾಗಿ ಅನುಷ್ಕಾ ಶೆಟ್ಟಿ ಮತ್ತೆ ತೂಕ ಹೆಚ್ಚಿಸಿಕೊಂಡಿದ್ದಾರೆ.

    `ಬಾಹುಬಲಿ’ ನಟಿ ಅನುಷ್ಕಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಪಿ ನಿರ್ದೇಶನದ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿ ಜೀವ ತುಂಬುತ್ತಿದ್ದಾರೆ. ಹೀಗಿರುವಾಗ ಈ ಚಿತ್ರಕ್ಕಾಗಿ ಮತ್ತೆ ತಮ್ಮ ತೂಕವನ್ನ ಹೆಚ್ಚಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅನುಷ್ಕಾ 40 ವರ್ಷದ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಪಾತ್ರಕ್ಕಾಗಿ ಮತ್ತಷ್ಟು ತೂಕವನ್ನ ನಟಿ ಹೆಚ್ಚಿಸಿಕೊಂಡಿಕೊಂಡಿದ್ದಾರೆ. ನಾಯಕಿಗಿಂತ ನಾಯಕ ಚಿಕ್ಕ ವಯಸ್ಸಿನವನಾಗಿದ್ದು, ವಯಸ್ಸಿನ ಅಂತರವಿರುವ ಕಥೆಯಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ʻರಶ್ಮಿಕಾ ನನ್ನ ಡಾರ್ಲಿಂಗ್ʼ ಎಂದ ವಿಜಯ್ ದೇವರಕೊಂಡ

    ಇದೇ ಕಾರಣಕ್ಕಾಗಿ ಅನುಷ್ಕಾ ಕೂಡ ಕ್ಯಾಮೆರಾ ಕಣ್ಣಿಂದ ದೂರವಿದ್ದಾರೆ. ಸದ್ದಿಲ್ಲದೇ ನವೀನ್ ಪೋಲಿ ಶೆಟ್ಟಿ ಚಿತ್ರಕ್ಕೆ `ಬಾಹುಬಲಿ’ ನಟಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೀಗ ತೆರೆಮರೆಯಲ್ಲಿ ಸಿನಿಮಾಗಾಗಿ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]