ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಅವರು 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇ ದಿನ ಅಭಿಮಾನಿಗಳಿಗೆ ಸ್ವೀಟಿ, ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ‘ಮಿಸ್ ಶೆಟ್ಟಿ & ಮಿಸ್ಟರ್ ಪೋಲಿ ಶೆಟ್ಟಿ’ ನಂತರ ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್‌ವೊಂದು ಸಿಕ್ಕಿದೆ.
ಸ್ವೀಟಿ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸ್ವೀಟ್ ನ್ಯೂಸ್ ಸಿಕ್ಕಿದೆ. ‘ಭಾಗಮತಿ’ (Bhaagamathie) ಸಿನಿಮಾದಲ್ಲಿ ಅನುಷ್ಕಾ ನಟಿಸಿ ಎಲ್ಲರ ಮನ ಗೆದ್ದಿದ್ದರು. ಖಡಕ್ ಆಗಿ ಅನುಷ್ಕಾ ನಟಿಸಿದ್ದರು. ಇದೀಗ ಇದರದೇ ಸೀಕ್ವೆಲ್‌ನಲ್ಲಿ ನಟಿಸಲು ಕರಾವಳಿ ಬ್ಯೂಟಿ ತಯಾರಿ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ನಟ್ವರ್ ಲಾಲ್’ ಹಾಡಿಗಾಗಿ ಬಂದ ‘ವರಾಹ ರೂಪಂ’ ಸಿಂಗರ್
ಯಾವುದೇ ಪಾತ್ರ ಕೊಟ್ಟರೂ ಕೂಡ ಆ ಪಾತ್ರವೇ ತಾವಾಗಿ ಅನುಷ್ಕಾ ಶೆಟ್ಟಿ ನಟಿಸುತ್ತಾರೆ. ಹಾಗಾಗಿ ‘ಭಾಗಮತಿ 2’ ಸೀಕ್ವೇಲ್ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾ ಬಗೆಗಿನ ನಿರೀಕ್ಷೆ ಡಬಲ್ ಆಗಿದೆ.
‘ಭಾಗಮತಿ 2’ ಸಿನಿಮಾದಲ್ಲಿ ಯಾವ ರೀತಿಯ ಲುಕ್‌ನಲ್ಲಿ ನಟಿ ಬರುತ್ತಾರೆ? ಯಾವ ರೀತಿಯ ಕಥೆಯಲ್ಲಿ ಸ್ವೀಟಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಬಗ್ಗೆ ಅಧಿಕೃತ ಅಪ್‌ಡೇಟ್ ಯಾವಾಗ ಎಂದು ಎದುರು ನೋಡ್ತಿದ್ದಾರೆ.
ಮೋಸ್ಟ್ ಎಲಿಜಿಬಲ್ ಬ್ಯಾಚುರಲ್ ಪ್ರಭಾಸ್ (Prabhas) ಮದುವೆಗೆ ಒತ್ತಡ ಎದುರಾಗಿದೆ. ಅನುಷ್ಕಾ ಶೆಟ್ಟಿ ಜೊತೆ ಮದುವೆಯಾಗುವಂತೆ (Wedding) ನಟನಿಗೆ ಕುಟುಂಬಸ್ಥರು ಬೇಡಿಕೆಯಿಟ್ಟಿದ್ದಾರೆ.
ಪ್ರಭಾಸ್ ಜೊತೆ ಅನೇಕ ನಟಿಯರ ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲಿ ಅನುಷ್ಕಾ ಶೆಟ್ಟಿ ಹೆಸರಂತೂ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಈಗ ಪ್ರಭಾಸ್‌ಗೆ ಅನುಷ್ಕಾ ಅವರನ್ನ ಮದುವೆಯಾಗುವಂತೆ ಕುಟುಂಬ ಒತ್ತಡ ನೀಡಿದೆಯಂತೆ. ಪ್ರಭಾಸ್- ಅನುಷ್ಕಾ ನಡುವೆ ಒಳ್ಳೆಯ ಒಡನಾಟವಿದೆ. ಇಬ್ಬರು ಜೋಡಿಯಾದರೆ ಚೆನ್ನಾಗಿರುತ್ತೆ ಅನ್ನೋದು ಪ್ರಭಾಸ್ ಕುಟುಂಬದ ಆಸೆ. ಆದರೆ ಪ್ರಭಾಸ್ ಮದುವೆಗೆ ಮನಸ್ಸು ಮಾಡುತ್ತಿಲ್ಲ ಎಂಬುದು ಇನ್‌ಸೈಡ್ ಸ್ಟೋರಿ.
ಸಾಲು ಸಾಲು ಸಿನಿಮಾ ಸೋಲುಗಳನ್ನ ಎದುರಿಸುತ್ತಿರೋ ಪ್ರಭಾಸ್ ಈಗ ಸಿನಿಮಾ ಕೆಲಸಗಳಿಗೆ ಗಮನ ನೀಡುತ್ತಿದ್ದಾರೆ. ಗೆಲುವಿಗಾಗಿ ಪ್ರಭಾಸ್ (Prabhas) ಎದುರು ನೋಡ್ತಿದ್ದಾರೆ. ಹಾಗಾಗಿ ಸದ್ಯಕ್ಕೆ ಮದುವೆಗೆ ಪ್ರಭಾಸ್ ನೋ ಎಂದಿದ್ದಾರೆ. ಇದನ್ನೂ ಓದಿ:KD: ಲಾಂಗ್ ಹಿಡಿದು ಮಾಸ್ ಆಗಿ ಎಂಟ್ರಿ ಕೊಟ್ಟ ರಮೇಶ್ ಅರವಿಂದ್
ಅನೇಕ ಸಿನಿಮಾಗಳಲ್ಲಿ ಅನುಷ್ಕಾ-ಪ್ರಭಾಸ್ ಜೋಡಿಯಾಗಿ ನಟಿಸಿದ್ದಾರೆ. ಇಬ್ಬರೂ ಮದುವೆಯಾದರೆ ಚೆನ್ನಾಗಿರುತ್ತೆ ಅನ್ನೋದು ಕುಟುಂಬದ ಆಸೆ ಮಾತ್ರವಲ್ಲ, ಅಭಿಮಾನಿಗಳ ಆಶಯ ಕೂಡ. ಹಾಗಾದ್ರೆ ಸದ್ಯದಲ್ಲೇ ಈ ಜೋಡಿ ಗುಡ್ ನ್ಯೂಸ್ ಕೊಡುತ್ತಾರಾ ಕಾದುನೋಡಬೇಕಿದೆ.
ಕೆಸರು ಗದ್ದೆಯಲ್ಲಿ ಕಸರತ್ತು ಮಾಡಿ ಮತ್ತೆ ಕೋಣಗಳ ಜೊತೆ ಕಂಬಳದ(Kambala) ಅಂಗಳಕ್ಕೆ ರಿಷಬ್ ಎಂಟ್ರಿ ಕೊಡ್ತಾರ. ರಕ್ಷಿತ್ ಸೆಣಸಾಟದಿಂದ ಕಾಡು ಶಿವನ ಅಬ್ಬರ ಕಟ್ರೋಲ್ ಮಾಡ್ತಾರ? ಈ ಇಬ್ಬರ ನಡುವೆ ಸೀನಿಯರ್ ಉಪ್ಪಿ ಕೈ ಚಳಕಕ್ಕೆ ಕೋಣಗಳು ಕಮಾಲ್ ಮಾಡುತ್ತಾ? ಗುರುಕಿರಣ್ ಸಂಗೀತಕ್ಕೆ ಕೆಸರು ಗದ್ದೆಯಲ್ಲಿ ಅಲೆಗಳು ಏಳುತ್ತಾ? ಏನಿದು ಸೆಲಬ್ರೇಟಿಗಳ ನಡುವಿನ ಹೋರಾಟ?
ಕಾಂತಾರ (Kantara) ಸಿನಿಮಾದಲ್ಲಿ ಕೋಣಗಳ ಜೊತೆ ಕೆಸರು ಗದ್ದೆಗೆ ಇಳಿದು ಸೈ ಅನಿಸಿಕೊಂಡ್ರು ರಿಷಬ್ ಶೆಟ್ಟಿ. ಕರಾವಳಿಯ ಸಾಂಪ್ರದಾಯಕ ಕ್ರೀಡೆ ಕಂಬಳವನ್ನ ಬೆಳ್ಳಿತೆರೆಯಲ್ಲಿ ನೋಡಿ ಸಂಭ್ರಮಿಸಿದ್ರು ಆಡಿಯನ್ಸ್. ಬಾಕ್ಸ್ಆಫೀಸ್‌ನಲ್ಲಿ ಬಂಪರ್ ಬೆಳೆ ಆಯ್ತು. ನಿರ್ಮಾಪಕರಿಗೆ ಒಳ್ಳೆ ಕಾಸು ಹೆಸರು ಎರಡೂ ಬಂತು. ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆ ಗೌರವ ಸಿಕ್ತು. ಈಗ ಕಾಂತರದ ಕಂಬಳದ ಸನ್ನಿವೇಷ ಬೆಂಗಳೂರಿನ ಜನರ ಕಣ್ಣ ಮುಂದೆ ಮೂಡಿ ಬರಲಿದೆ. ಅದಕ್ಕೆ ಕಾರಣ ಬೆಂಗಳೂರು ಕಂಬಳ. ಇದನ್ನೂ ಓದಿ:ಖ್ಯಾತ ಕ್ರಿಕೆಟಿಗನ ಜೊತೆ ಪೂಜಾ ಹೆಗ್ಡೆ ಮದುವೆ
ನೂರಾರು ವರ್ಷಗಳ ಇತಿಹಾಸವಿರುವ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ಕಂಬಳವನ್ನ ಬೆಂಗಳೂರಿನಲ್ಲಿ ನಡೆಸಲು ತಿರ್ಮಾನ ಆಗಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಬೆಂಗಳೂರು ಕಂಬಳ ನಡೆಸಲು ಕೆಲಸ ಶುರುವಾಗಿದೆ. 150ಕ್ಕೂ ಹೆಚ್ಚಿನ ಕೋಣಗಳು ಈ ಪೈಪೋಟಿಯಲ್ಲಿ ಭಾಗಿಯಾಗಲಿದೆ. ಸುಮಾರು 7 ಲಕ್ಷ ಜನ ಈ ಕಂಬಳದಲ್ಲಿ ಭಾಗಿಯಾಗುವ ನಿರೀಕ್ಷೆಯಲ್ಲಿದ್ದಾರೆ ಆಯೋಜಕರು. ಇದಕ್ಕೆ ಈಗಾಗ್ಲೇ ಸಿದ್ದತೆಗಳು ಕೂಡ ಜೋರಾಗಿದೆ. ನವೆಂಬರ್ ಅಂತ್ಯದಲ್ಲಿ ಬೆಂಗಳೂರು ಕಂಬಳ ಶುರು. ಇದನ್ನೂ ಓದಿ:ಪರಿಣಿತಿ ಮದುವೆಗೆ ಪ್ರಿಯಾಂಕಾ ಚೋಪ್ರಾ ಗೈರಾಗಿದ್ದೇಕೆ? ಮಧು ಚೋಪ್ರಾ ಸ್ಪಷ್ಟನೆ
ಇದರ ಜೊತೆಯಲ್ಲಿ ಕಂಬಳದ ಆಯೋಜಕರಿಗೆ ಹೊಸದೊಂದು ಐಡಿಯಾ ಬಂದಿದೆ. ಕಂಬಳವನ್ನ ಇನ್ನೂ ಕುತೂಹಲ ಭರಿತವಾಗಿ ಜನರ ಮುಂದಿಡುವ ಯೋಚನೆ ಮಾಡ್ತಿದೆ. ಐಪಿಎಲ್ ಮಾದರಿಯಲ್ಲಿ ಕಂಬಳವನ್ನ ಆಯೋಜಿಸುವ ಚಿಂತನೆ ಶುರುವಾಗಿದೆ. ಐಪಿಎಲ್ ಆಯೋಜನೆ ಮಾಡಿದ ತಂಡದ ಸದಸ್ಯರ ಜೊತೆ ಕಂಬಳದ ಟೀಮ್ ಮಾತು-ಕತೆ ಕೂಡ ನಡೆಸಿದ್ದಾರೆ. ಕರಾವಳಿಯ ಕಲಾವಿದರ ತಂಡಗಳನ್ನ ಮಾಡಿ ಆ ತಂಡಗಳಿಗೆ ಬಲಿಷ್ಠ ಕೋಣಗಳನ್ನ ಸೇರಿಸಿ ಜನರಿಗೆ ಮತ್ತಷ್ಟು ಹತ್ತಿರವಾಗುವ ಯೋಚನೆಯಲ್ಲಿದ್ದಾರೆ.
ಕಾಂತಾರ ಹೀರೋ ರಿಷಬ್ (Rishab Shetty) ಈಗಾಗ್ಲೇ ಕೋಣಗಳ ಜೊತೆ ಸಿನಿಮಾದಲ್ಲಿ ಕಂಬಳದ ಅಂಗಳಲ್ಲಿ ಇಳಿದು ಸಕ್ಸಸ್ ಆಗಿದ್ದಾರೆ. ರಿಷಬ್ ಕೋಣಗಳಿಗೆ ರಕ್ಷಿತ್ (Rakshit Shetty) ಪೈಪೋಟಿ ಕೊಡೋ ರೀತಿ ಆಯೋಜಕರು ಪ್ಲ್ಯಾನ್ ಮಾಡ್ತಿದ್ದಾರೆ. ಇವರ ಜೊತೆ ರಿಯಲ್ ಸ್ಟಾರ್ ಉಪೇಂದ್ರ (Upendra) ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. ಇನ್ನೂ ಉಪ್ಪಿ ಸುಮ್ಮನೆ ಇರ್ತಾರ ನಾವು ಒಂದು ಕೈ ನೋಡೋಣ ಅಂತ ಅವರೂ ಅಖಾಡಕ್ಕೆ ಇಳಿದು ಫೈಟ್ ಮಾಡದೆ ಬಿಡ್ತಾರ. ಈ ಹೀರೋಗಳ ಜೊತೆ ಬಾಲಿವುಡ್, ಟಾಲಿವುಡ್ ನಟಿಯರೂ ಸೇರಿಕೊಳ್ತಾರೆ.
ಬೆಂಗಳೂರು ಕಂಬಳಕ್ಕೆ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ (Aishwarya Rai) ಕೂಡ ಭಾಗಿಯಾಗಲಿದ್ದಾರೆ. ಬಾಹುಬಲಿ ಬೆಡಗಿ ಕರಾವಳಿ ಹುಡುಗಿ ಅನುಷ್ಕಾ ಶೆಟ್ಟಿ (Anushka Shetty) ಕೂಡ ಕಂಬಳಕ್ಕೆ ಜೊತೆ ಆಗ್ತಾರೆ. ಇದರ ಜೊತೆ ಬೇರೆ ಬೇರೆ ರಾಜ್ಯಗಳಲ್ಲಿ ಹೆಸರು ಮಾಡಿರುವ ಕಲಾವಿದರು ಕೂಡ ಕರಾವಳಿ ಕ್ರೀಡೆಯ ಯಶಸ್ಸಿಗೆ ಕೈ ಜೋಡಿಸಲಿದ್ದಾರೆ. ಈ ಕೆಲಸಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಅವರನ್ನ ನೇಮಿಸಿದ್ದಾರೆ ಕಂಬಳದ ಆಯೋಜಕರು.
ಗುರುಕಿರಣ್ ಕೆಲಸ ಶುರು ಮಾಡಿದ್ದಾರೆ. ಊರು-ಕೇರಿಗಳಲ್ಲಿರುವ ಕಂಬಳದ ಮನಸ್ಸುಗಳನ್ನ ಒಟ್ಟಿಗೆ ಒಂದೇ ವೇದಿಕೆಗೆ ಕರೆಸುವ ಕೆಲಸ ಮಾಡ್ತಿದ್ದಾರೆ. ಆಯೋಜಕರ ಚಿಂತನೆಯಲ್ಲಿ ಐಪಿಎಲ್ ಮಾದರಿಯಲ್ಲಿ ಕಂಬಳ ನಡೆಸಲು ಇಬ್ಬರ ಅನುಮತಿ ಬೇಕಾಗುತ್ತೆ. ಕಂಬಳದ ಮುಖ್ಯ ಫಿಲ್ಲರ್‌ಗಳು ಅಂದ್ರೆ ಅದು ಕೋಣಗಳನ್ನ ಸಾಕಿರುವ ಮಾಲಿಕರು ಮತ್ತು ಅದನ್ನ ನೋಡಿ, ಪ್ರೀತಿಸಿ, ಆರಾಧಿಸುವ ಜನರು ಇವರಿಬ್ಬರೂ ಒಪ್ಪಿಗೆ ಕೊಟ್ರೆ ಕಂಬಳವನ್ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಾವು ರೆಡಿ ಅಂತಿದ್ದಾರೆ ಆಯೋಜಕರು.
ಬಣ್ಣದ ಲೋಕದ ಮಂದಿ ಜೊತೆ ರಾಜಕಾರಣಿಗಳು ಕೂಡ ಅಖಾಡಕ್ಕೆ ಇಳಿಯಲಿದ್ದಾರೆ. ಶಾಸಕ ಹ್ಯಾರಿಸ್, ಅಶ್ವತ್ ನಾರಾಯಣ, ಸಚಿವ ಸುಧಾಕರ್, ಸ್ಪೀಕರ್ ಖಾದರ್ ಸೇರಿದಂತೆ ಹಲವರು ನಮಗೂ ಕೋಣಗಳನ್ನ ಕೋಡಿ ನಾವು ನಮ್ಮ ತಂಡದ ಜೊತೆ ಟಫ್ ಫೈಟ್ ಕೊಡ್ತಿವಿ ಅಂತ ಆಯೋಜಕ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದ್ರೆ ಇನ್ನೂ ಕೋಣಗಳ ಮಾಲಿಕರ ಜೊತೆ ಚರ್ಚೆ ಅಂತಿಮ ಆಗ್ಬೇಕಿದೆ ಆಮೇಲೆ ಉಳಿದ ವಿಚಾರ ಅಂತಿದ್ದಾರೆ ಬೆಂಗಳೂರು ಕಂಬಳದ ಆಯೋಜಕರು.
ಕಲಾವಿದರ ನಡುವೆ ಕಂಬಳದ ಪದಕಕ್ಕಾಗಿ ಪೈಪೋಟಿ ಶುರುವಾಗುತ್ತಾ ಅನ್ನೊ ಪ್ರಶ್ನೆಗೆ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ನವೆಂಬರ್ 24ಕ್ಕೆ ಕಾರ್ಯಕ್ರಮ ಶುಭಾರಂಭ ಆಗಲಿದೆ. 23 ಮತ್ತು 25 ಕೋಣಗಳು ಅಖಾಡದಲ್ಲಿ ಅಬ್ಬರಿಸಲಿದ್ದಾವೆ. ಬೆಂಗಳೂರಿನ ಜನಕ್ಕೆ ಕಂಬಳವನ್ನ ನೋಡಿ ಕಣ್ತುಂಬಿಕೊಳ್ಳುವ ಟೈಮ್ ಹತ್ತಿರ ಬಂದಿದೆ.
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕೊನೆಗೂ ಮಣಿದಿದ್ದಾರೆ. ಒಂದರ ಹಿಂದೊಂದು ಸಿನಿಮಾ ಸೋಲುತ್ತಿವೆ. ಈಗಲೂ ಅದೇ ರೋಮ್ಯಾನ್ಸ್, ಇಬ್ಬಿಬ್ಬರ ನಾಯಕಿಯರ ಜೊತೆ ಸುತ್ತಾಟ ಡ್ಯುಯೇಟ್ ಸಾಂಗ್ ಬೇಕಿಲ್ಲ ಎಂದು ಜನರು ತೀರ್ಮಾನಿಸಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟಿದ್ದಾರೆ ಮೆಗಾಸ್ಟಾರ್. ಹಾಗಿದ್ದರೆ ಅದೇನು ಬದಲಾವಣೆ ಮಾಡಿಕೊಂಡರು ಚಿರಂಜೀವಿ? ರಜನಿಕಾಂತ್ ಹಾಗೂ ಕಮಲ್‌ಹಾಸನ್ ಹಾದಿಯನ್ನೇಕೆ ತುಳಿಯಲು ಮನಸು ಮಾಡಿದರು? ಇಲ್ಲಿದೆ ಮಾಹಿತಿ.
ಒಂದು ಕಾಲದಲ್ಲಿ ಚಿರಂಜೀವಿ ಮುಟ್ಟಿದ್ದೆಲ್ಲ ಚಿನ್ನ. ಮಾಡಿದ ಸಿನಿಮಾಗಳೆಲ್ಲ ಸೂಪರ್‌ಹಿಟ್. ಚಿರಂಜೀವಿ (Chiranjeevi) ಸಿನಿಮಾ ರಿಲೀಸ್ ಆಗಿ ಒಂದು ವಾರ ಆಯ್ತು, ಇನ್ನೂ ನೋಡಿಲ್ವಾ? ಹೀಗೆ ಕೇಳುತ್ತಿದ್ದರು ಅಖಂಡ ಆಂಧ್ರದ ಜನತೆ. ಮೊದಲ ಬಾರಿ ಕೋಟಿ ರುಪಾಯಿ ಸಂಭಾವನೆ ಪಡೆದು ಇಂಡಿಯಾ ಇತಿಹಾಸದಲ್ಲಿ ಹೊಸ ಧಮಾಕಾ ಸೃಷ್ಟಿಸಿದ್ದರು. ಆದರೆ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಆ ಖಬರ್ ಕಾಣುತ್ತಿಲ್ಲ. ಖೈದಿ ನಂ.150 ಹಿಟ್ ಆಯಿತು. ಆದರೆ ಇತ್ತೀಚಿನ ಸಿನಿಮಾ ಮಕಾಡೆ ಮಲಗುತ್ತಿವೆ. ಆಚಾರ್, ವಾಲ್ಟರ್ ವೀರಯ್ಯ, ಗಾಡ್‌ಫಾದರ್ ಮತ್ತು ಭೋಳಾ ಶಂಕರ್. ಇದೆಲ್ಲ ಚಿರಂಜೀವಿ ನಿದ್ದೆ ಕೆಡಿಸಿವೆ. ಪರಿಣಾಮ, ಜೈಲರ್ ರಜನಿಕಾಂತ್ (Rajanikanth)- ವಿಕ್ರಮ್ ಕಮಲ್ ಹಾಸನ್ (Kamal Haasan) ಹಾದಿ ಹಿಡಿದಿದ್ದಾರೆ ಮೆಗಾಸ್ಟಾರ್. ಇದನ್ನೂ ಓದಿ:ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್
ಚಿರಂಜೀವಿ ಅಭಿನಯದ 157 ಸಿನಿಮಾ ಮಹೂರ್ತಕ್ಕೆ ಸಜ್ಜಾಗಿದೆ. ಇದನ್ನು ವಸಿಷ್ಠ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಮೂವರು ನಾಯಕಿಯರಿದ್ದಾರೆ. ಐಶ್ವರ್ಯ ರೈ(Aishwarya Rai), ಅನುಷ್ಕಾ ಶೆಟ್ಟಿ- ಮೃಣಾಲ್ ಠಾಕೂರ್ (Mrunal Thakur) ಸಿನಿಮಾದ ಭಾಗವಾಗ್ತಿದ್ದಾರೆ.
ಆದರೆ ಮೂವರಿದ್ದರೂ ಚಿರು ರೊಮ್ಯಾನ್ಸ್ ಮಾಡಲ್ಲ ಡ್ಯುಯೇಟ್ ಹಾಡಲ್ಲ. ಕಾರಣ ತಮ್ಮ ವಯಸ್ಸಿಗೆ ತಕ್ಕ ಪಾತ್ರ ಮಾಡುತ್ತಿದ್ದಾರೆ. ಫೈಟಿಂಗ್ ಹಾಡು ಇದ್ದರೂ ಅದು ಸಿಂಗಲ್ ಸಿಂಗಲ್. ದಶಕಗಳ ಹಿಂದೆ ಬಂದ ಜಗದೇಕವೀರುಡು ಅತಿಲೋಕ ಸುಂದರಿ ಸಿನಿಮಾದಂತೆ ಫಿಕ್ಷನ್ ಕತೆ. ಅದನ್ನು ಅದ್ದೂರಿಯಾಗಿ ಮಾಡಲಾಗುತ್ತಿದೆ. ಚಿರುಜೀವಿ ಹೊಸ ನಿರ್ಣಯ ಅವರ ಗೆಲುವಿಗೆ ಕಾರಣವಾಗುತ್ತಾ ಕಾಯಬೇಕಿದೆ.
ಕರಾವಳಿ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಸದ್ಯ ನಟಿಸಿದ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ಸಕ್ಸಸ್ ಆಗಿದೆ. ಈ ಬೆನ್ನಲ್ಲೇ ಮೆಗಾ ಪ್ರಾಜೆಕ್ಟ್‌ವೊಂದನ್ನ ನಟಿ ಒಪ್ಪಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿಗೆ (Megastar Chiranjeevi) ನಾಯಕಿಯಾಗಿ ಸ್ವೀಟಿ ಸೆಲೆಕ್ಟ್ ಆಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟಿ ಸಿಹಿಸುದ್ದಿ ಕೊಟ್ಟಿದ್ದಾರೆ.
ವರ್ಷಗಳ ನಂತರ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ (Miss Shetty Mr Polishetty) ಚಿತ್ರದ ಮೂಲಕ ಅನುಷ್ಕಾ ಶೆಟ್ಟಿ ಕಮ್ ಬ್ಯಾಕ್ ಆಗಿ ತೆರೆಯ ಮೇಲೆ ಕಮಾಲ್ ಮಾಡಿದ್ದಾರೆ. ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕೂಡ ಕಾಣುತ್ತಿದೆ. ಇದನ್ನೂ ಓದಿ:ಒಳ ಉಡುಪಿನಲ್ಲಿ ಫೋಟೋಶೂಟ್- ಟ್ರೋಲರ್ಸ್ ಬಳಿ ‘ಕೆಜಿಎಫ್’ ನಟಿ ಮನವಿ
ಸದ್ಯ ಚಿರಂಜೀವಿ ನಟನೆಯ 157 ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಹೀರೋಯಿನ್ ಎಂಬ ಸುದ್ದಿ ಸೌಂಡ್ ಮಾಡ್ತಿದೆ. ಕೆಲ ದಿನಗಳ ಹಿಂದೆ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾವನ್ನು ನೋಡಿ ತಂಡಕ್ಕೆ ಶುಭಕೋರಿದ್ದರು. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈಗ ಮೆಗಾಸ್ಟಾರ್‌ಗೆ ನಾಯಕಿಯಾಗುವ ಮೂಲಕ ಅನುಷ್ಕಾ ಫ್ಯಾನ್ಸ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಈ ಹಿಂದೆ ಸ್ಪಾಲಿನ್ (Stalin Film) ಎಂಬ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ಮೆಗಾಸ್ಟಾರ್ ಜೊತೆ ಅನುಷ್ಕಾ ಹೆಜ್ಜೆ ಹಾಕಿದ್ದರು. ಬಳಿಕ ಸೈರಾ ನರಸಿಂಹ ರೆಡ್ಡಿ (Saira Narasimha Reddy) ಸಿನಿಮಾದಲ್ಲಿ ಝಾನ್ಸಿ ರಾಣಿಯಾಗಿ ನಟಿಸಿದ್ದರು. ಆದರೆ ಚಿರಂಜೀವಿ ಜೊತೆ ತೆರೆ ಹಂಚಿಕೊಂಡಿರಲಿಲ್ಲ. ಈಗ ಮೆಗಾಸ್ಟಾರ್ 157ನೇ ಚಿತ್ರದಲ್ಲಿ ಇಬ್ಬರು ಜೋಡಿಯಾಗಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ವಶಿಷ್ಠ ನಿರ್ದೇಶನ ಮಾಡ್ತಿದ್ದಾರೆ. ಯುವಿ ಕ್ರಿಯೇಷನ್ಸ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಒಟ್ನಲ್ಲಿ ಬಾಹುಬಲಿ (Bahubali) ನಟಿ ಅನುಷ್ಕಾ ಗೆಲುವಿನ ಟ್ರ್ಯಾಕ್‌ನಲ್ಲಿರೋದು, ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ನೇತೃತ್ವದಲ್ಲಿ ನಡೆಯಲಿರುವ ಕರಾವಳಿ ಜಾನಪದೀಯ ಕ್ರೀಡೆ ಕಂಬಳ ಉದ್ಘಾಟನೆಗೆ ಮಂಗಳೂರು ಮೂಲದ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರನ್ನು ಆಹ್ವಾನಿಸಲಾಗಿದೆ. ಈ ಬಾರಿ ಕಂಬಳವನ್ನು (Kambala) ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಕ್ರೀಡೆ ನಡೆಯಲಿದೆ.
ಇದೇ ನವೆಂಬರ್ 25 ಮತ್ತು 26ರಂದು ಕಂಬಳವನ್ನು ಆಯೋಜನೆ ಮಾಡಿದ್ದು, ದಕ್ಷಿಣದ ತಾರೆ ಅನುಷ್ಕಾ ಶೆಟ್ಟಿ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಅಪಾರ ಅಭಿಮಾನಿಗಳನ್ನೂ ಹೊಂದಿರುವ ಮತ್ತು ಮಂಗಳೂರು ಮೂಲದವರು ಆಗಿರುವ ಕಾರಣದಿಂದಾಗಿ ಅನುಷ್ಕಾ ಅವರನ್ನು ಆಹ್ವಾನಿಸಲಾಗಿದೆ.
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾಗಿದ್ದು, ಇದಕ್ಕಾಗಿ ಭಾರೀ ಸಿದ್ಧತೆ ಕೂಡ ಮಾಡಲಾಗುತ್ತಿದೆ. ರಾಜಧಾನಿಗೆ ಬರಲು ಕಂಬಳದ ಕೋಣಗಳು ಕೂಡ ರೆಡಿಯಾಗತ್ತಿವೆ. ಮಂಗಳೂರಿನಿಂದ ಬೆಂಗಳೂರಿಗೆ ಬರಲಿರುವ ಕಂಬಳ ಕೋಣಗಳು, ಇಲ್ಲಿನ ಜನರಿಗೆ ಸಖತ್ ಮನರಂಜನೆ ಕೂಡ ನೀಡಲಿವೆ.
‘ಮಿಸ್ ಶೆಟ್ಟಿ ಮಿಸ್ಟರ್ ಶೆಟ್ಟಿ’ (Miss Shetty Mr Polishetty) ಸಿನಿಮಾ ಮೂಲಕ ಸಂಚಲನ ಮೂಡಿಸುತ್ತಿರುವ ಅನುಷ್ಕಾ ಶೆಟ್ಟಿ (Anushka Shetty) ಇದೀಗ ತಮ್ಮ ಮಹಿಳಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮಹಿಳಾ ಅಭಿಮಾನಿಗಳಿಗಾಗಿ (Fans) ವಿಶೇಷ ವಿಡಿಯೋವೊಂದನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
‘ಜವಾನ್’ (Jawan) ಸಿನಿಮಾ ಮುಂದೆ ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಶೆಟ್ಟಿ’ ರಿಲೀಸ್ ಆಗಿ ಗೆದ್ದು ಬೀಗುತ್ತಿದೆ. ಇದೇ ಖುಷಿಯಲ್ಲಿ ತಮ್ಮ ಫೀಮೇಲ್ ಫ್ಯಾನ್ಸ್‌ಗೆ ಅನುಷ್ಕಾ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಸಿನಿಮಾವನ್ನ ಗೆಲ್ಲಿಸಿದ್ದಕ್ಕೆ ನಟಿ ಧನ್ಯವಾದಗಳನ್ನ ತಿಳಿಸಿದ್ದಾರೆ. ಸೆ.14ರಂದು ಗುರುವಾರ ಬೆಳಿಗ್ಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಚಿತ್ರಮಂದಿರಲ್ಲಿ ಮಹಿಳೆಯರಿಗೆಂದೇ ಸ್ಪೆಷಲ್ ಶೋ ಅರೆಂಜ್ ಮಾಡಿದ್ದಾರೆ. ಅವರ ಅಭಿಮಾನಕ್ಕೆ ಸಾಕ್ಷಿಯಾಗಲು ನಟಿ ಅನುಷ್ಕಾ ಕೂಡ ತಂಡದ ಜೊತೆ ಬರುತ್ತಿದ್ದಾರೆ. ಎಲ್ಲಾ ಮಹಿಳೆಯರು ಬನ್ನಿ ಎಂದು ನಟಿ ಮನವಿ ಮಾಡಿದ್ದಾರೆ.
It is heart warming to see all your love and response to ms shetty mr polishetty.. means the world to us …????????????????????
To celebrate this , we are organising a special morning show on this Thursday just for ladies across andhra pradesh / Telangana…see u all at the… pic.twitter.com/JVMGrjhNVY
ಬಹುದಿನಗಳ ನಂತರ ಈ ವಿಡಿಯೋ ಮೂಲಕ ನಟಿ ದರ್ಶನ ನೀಡಿದಕ್ಕೆ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ವಿಡಿಯೋದಲ್ಲಿ ಮತ್ತಷ್ಟು ಫಿಟ್ ಆಗಿ ಮುದ್ದಾಗಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.
ಸೆ.7ರಂದು ‘ಮಿಸ್ ಶೆಟ್ಟಿ ಮಿಸ್ಟರ್ ಶೆಟ್ಟಿ’ ರಿಲೀಸ್ ಆಗಿತ್ತು. ವರ್ಷಗಳ ನಂತರ ಅನುಷ್ಕಾ ಶೆಟ್ಟಿ ತೆರೆಯ ಮೇಲೆ ಬಂದರು. ನವಪ್ರತಿಭೆ ನವೀನ್ ಪೋಲಿಶೆಟ್ಟಿಗೆ ಜೋಡಿಯಾಗಿ ಸ್ವೀಟಿ ನಟಿಸಿದ್ದರು. ಕಾಮಿಡಿ ವಿತ್ ಲವ್ ಸ್ಟೋರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: ಕಿಚ್ಚನ 50ನೇ ಚಿತ್ರಕ್ಕೆ ‘ಕಾಂತಾರ’ ಹೀರೋ ಆ್ಯಕ್ಷನ್ ಕಟ್
‘ಬಾಹುಬಲಿ’ (Bahubali) ನಟಿ ಅನುಷ್ಕಾ ಶೆಟ್ಟಿ ಯಾವುದೇ ಪಾತ್ರ ಕೊಟ್ಟರು ಆ ಪಾತ್ರವೇ ತಾವಾಗಿ ನಟಿಸುವ ನಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನ ಅವರು ಸಿನಿಮಾದಲ್ಲೂ ಪ್ರೂವ್ ಮಾಡಿದ್ದಾರೆ. ಸದ್ಯ ಈ ಚಿತ್ರದಲ್ಲಿನ ಅನುಷ್ಕಾರ ಶೆಫ್ ಪಾತ್ರಕ್ಕೆ ಫ್ಯಾನ್ಸ್ ಮನಸೋತಿದ್ದಾರೆ.
ಕಳೆದ ಐದು ದಿನಗಳ ಹಿಂದೆಯಷ್ಟೇ ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೋಡಿರುವ ನಟಿ ಸಮಂತಾ (Samantha), ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾರೆ. ಇಂತಹ ಸಿನಿಮಾ ನೋಡಿ ಮತ್ತು ಅಷ್ಟೊಂದು ನಕ್ಕು ತುಂಬಾ ದಿನಗಳು ಆಗಿದ್ದವು. ಇದೊಂದು ಉತ್ತಮ ಮನರಂಜನೆ ಸಿನಿಮಾ ಎಂದು ಪ್ರತಿಕ್ರಿಯಿಸಿದ್ದಾರೆ. ಅನುಷ್ಕಾ ನಟನೆಯ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ 3 ವರ್ಷಗಳ ನಂತರ ಈ ಸಿನಿಮಾದ ಮೂಲಕ ಕಮ್‌ಬ್ಯಾಕ್ ಆಗಿದ್ದಾರೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ (Miss Shetty Mr Poli Shetty) ಸಿನಿಮಾ ಮೂಲಕ ಸ್ವೀಟಿ ಸದ್ದು ಮಾಡ್ತಿದ್ದಾರೆ. ಈ ಹಿಂದೆ ಟೀಸರ್ ಝಲಕ್‌ನಿಂದ ಅನುಷ್ಕಾ ಶೆಟ್ಟಿ (Anushka Shetty) ಹೈಪ್ ಕ್ರಿಯೇಟ್ ಮಾಡಿದ್ದರು. ಇದನ್ನೂ ಓದಿ:ಉಪೇಂದ್ರ ಮನೆಮುಂದೆ ಜಮಾಯಿಸಿದ ಅಭಿಮಾನಿಗಳು: ಉಪ್ಪಿ ಕೊಟ್ಟ ಭರವಸೆ ಏನು?
ಬಾಹುಬಲಿ 2 (Bahubali 2), ನಿಶಬ್ಧಂ ಚಿತ್ರದ ನಂತರ ಸ್ವೀಟಿ, ಅನ್ವಿತಾ ರಾವಲಿ ಶೆಟ್ಟಿಯಾಗಿ ಬಂದಿದ್ದಾರೆ. ಹೋಟೆಲ್‌ವೊಂದರ ಶೆಫ್ ಆಗಿ ಅನುಷ್ಕಾ ನಟಿಸಿದ್ದಾರೆ. ಅನ್ವಿತಾ ರಾವಲಿ ಶೆಟ್ಟಿಗೆ ಮದುವೆ ಅಂದ್ರೆ ಇಷ್ಟ ಇರಲ್ಲ, ಆ ವಿಷಯದಲ್ಲಿ ಫ್ಯಾಮಿಲಿ ಸಪೋರ್ಟ್ ಕೂಡ ಇರುತ್ತದೆ. ಮತ್ತೊಂದು ಕಡೆ ಪೋಷಕರಿಗೆ ಇಷ್ಟವಿಲ್ಲದಿದ್ದರೂ ಸ್ಟ್ಯಾಂಡಪ್ ಕಾಮೆಡಿಯನ್ ಆಗಬೇಕು ಎನ್ನುವ ಕನಸು ಕಾಣುವ ಯುವಕ ನವೀನ್ ಪೋಲಿ ಶೆಟ್ಟಿ. ಆಕಸ್ಮಿಕವಾಗಿ ಇವರಿಬ್ಬರ ನಡುವೆ ಪರಿಚಯ ಆಗಿ ಅದು ಸ್ನೇಹಕ್ಕೆ ತಿರುಗುತ್ತದೆ. ಮುಂದೆ ಆ ಸ್ನೇಹ ಎಲ್ಲಿಗೆ ಹೋಗಿ ತಲುಪುತ್ತದೆ ಅನ್ನೋದೇ ಸಿನಿಮಾ. ಇಬ್ಬರ ನಡುವಿನ ದೃಶ್ಯಗಳು ತುಂಬಾ ಫ್ರೆಶ್ ಆಗಿ ಮೋಡಿ ಬಂದಿವೆ. ವಿಶೇಷವಾಗಿ ರಾವಲಿ ಶೆಟ್ಟಿ, ಪೋಲಿ ಶೆಟ್ಟಿನ ಸಂದರ್ಶನ ಮಾಡುವ ಸನ್ನಿವೇಶ ಮಜವಾಗಿದೆ.
ನವೀನ್‌ನ ನಿನ್ನ ಸ್ಟ್ರೆಂತ್ ಏನು ಎಂದು ಆಕೆ ಕೇಳಿದಾಗ ಅವಕಾಶ ಸಿಕ್ಕಾಗಲೆಲ್ಲಾ ಕಾಮಿಡಿ ಮಾಡ್ತೀನಿ ಅಂತಾನೆ. ವೀಕ್‌ನೆಸ್ ಏನು ಅಂದ್ರೆ ಸಿಚ್ಯುವೇಷನ್‌ಗೆ ಸಂಬಂಧ ಇಲ್ಲದೇ ಕಾಮಿಡಿ ಮಾಡ್ತಿರ್ತೀನಿ ಅಂತಾ ಉತ್ತರ ಕೊಡುತ್ತಾನೆ. ಇನ್ನು ಕೊನೆಗೆ ನಿನ್ನ ಟೈಮಿಂಗ್ ಯಾವಾಗಲೂ ಹೀಗೇನಾ? ಎನ್ನುವ ಪ್ರಶ್ನೆಗೆ ಕಾಮಿಡಿ ಟೈಮಿಂಗ್ ಮಾತ್ರ ಪರ್ಫೆಕ್ಟ್ ಆಗಿ ಇರುತ್ತೆ ಎನ್ನುತ್ತಾನೆ. ಇಡೀ ಸಿನಿಮಾ ಹೊಸ ಫೀಲ್ ಕೊಡುವಂತಿದೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಮಹೇಶ್ ಬಾಬು ಪಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.
ಡಿಫರೆಂಟ್ ಲುಕ್, ಫ್ರೆಶ್ ಕಥೆ ಜೊತೆ ಬಂದಿರುವ ಅನುಷ್ಕಾಳನ್ನ ಅಭಿಮಾನಿಗಳು ಸಂಭ್ರಮದಿಂದ ಎದುರುಗೊಂಡಿದ್ದಾರೆ. ನವೀನ್ ಪೋಲಿ ಶೆಟ್ಟಿ- ಅನುಷ್ಕಾ ನಟನೆಯ ಈ ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ.
ಕನ್ನಡತಿ, ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ (Anushka Shetty) ಇದೀಗ ಮತ್ತೆ ಚಿತ್ರಮಂದಿರಗಳಲ್ಲಿ ಮೋಡಿ ಮಾಡ್ತಿದ್ದಾರೆ. ಮಿಸ್ ಶೆಟ ಮಿಸ್ಟರ್ ಶೆಟ್ಟಿ ಸಿನಿಮಾ ಮೂಲಕ ನಟಿ ಕಮ್‌ಬ್ಯಾಕ್ ಆಗಿದ್ದಾರೆ. ಹೀಗಿರುವಾಗ ‘ಬಾಹುಬಲಿ’ (Bahubali) ಅಂತಹ ಸೂಪರ್ ಸಕ್ಸಸ್‌ಫುಲ್ ಸಿನಿಮಾ ಕೊಟ್ರು ನಟನೆಯಿಂದ ಸ್ವೀಟಿ ದೂರವಾಗಿದ್ದು ಯಾಕೆ? ಎಂಬುದನ್ನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಮಾಡುವಾಗಲೇ ನಾನು ಬ್ರೇಕ್ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಮಾಡಿದ್ದೆ. ಆ ಸಮಯದಲ್ಲಿ ನನಗೆ ಬ್ರೇಕ್ ಎಂಬುದು ಬಹಳ ಅವಶ್ಯಕವಾಗಿತ್ತು. ಬಾಹುಬಲಿ ಸಿನಿಮಾ ಮುಗಿದ ಬಳಿಕ ಈ ಹಿಂದೆಯೇ ಒಪ್ಪಂದ ಆಗಿದ್ದ ‘ಭಾಗಮತಿ’ ಸಿನಿಮಾದ ಕೆಲಸ ಮುಗಿಸಿ ನಾನು ಬ್ರೇಕ್ ತೆಗೆದುಕೊಂಡೆ. ಕೆಲವು ವರ್ಷ ಯಾವೊಂದು ಚಿತ್ರಕತೆಯನ್ನು ಸಹ ನಾನು ಕೇಳಲಿಲ್ಲ. ಚಿತ್ರರಂಗದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡೆ ಎಂದಿದ್ದಾರೆ. ಇದನ್ನೂ ಓದಿ:ಏಳು ಸಲ ಗರ್ಭಪಾತ ಮಾಡಿಸಿದ: ರಾಜಕಾರಣಿ ಸೀಮನ್ ವಿರುದ್ಧ ನಟಿ ಜಯಲಕ್ಷ್ಮಿ ಆರೋಪ
‘ಬಾಹುಬಲಿ’ (Bahubali) ಅಂಥಹಾ ದೊಡ್ಡ ಹಿಟ್ ಸಿನಿಮಾ ನೀಡಿದ ಬಳಿಕ ಅದರ ಲಾಭ ತೆಗೆದುಕೊಳ್ಳಬೇಕು ಎಂದು ಹಲವರು ಬಯಸುವುದು ಸಹಜ. ಆದರೆ ನನಗೆ ಅದರ ಅವಶ್ಯಕತೆ ಇರಲಿಲ್ಲ. ನನಗೆ ನನ್ನ ವೃತ್ತಿ ಜೀವನದಿಂದ ಒಂದು ಬ್ರೇಕ್ ಬೇಕಿತ್ತು ಹಾಗಾಗಿ ಬ್ರೇಕ್ ತೆಗೆದುಕೊಂಡೆ. ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನಿಸಿದಾಗ ‘ನಿಶ್ಯಬ್ಧಂ’ ಮತ್ತು ಈಗ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಅನುಷ್ಕಾ ಶೆಟ್ಟಿ ಮಾತನಾಡಿದ್ದಾರೆ.
ಸಿನಿಮಾಗಳಲ್ಲಿ ನಟಿಸಬೇಕು ಎನಿಸಿದಾಗ ನಾನು ಕತೆಗಳನ್ನು ಕೇಳುತ್ತೇನೆ. ಒಳ್ಳೆಯ ಕತೆ ಸಿಕ್ಕರೆ ಭಾರತದ ಯಾವುದೇ ಭಾಷೆಯಾಗಿದ್ರು ನಟಿಸಲು ಸಿದ್ಧ ಎಂದಿದ್ದಾರೆ. ಪ್ರಸ್ತುತ ನವೀನ್ ಪೋಲಿಶೆಟ್ಟಿ ಜೊತೆ ನಟಿಸಿರುವ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ (Miss Shetty Mr Polishetty) ಸಿನಿಮಾ ಜವಾನ್ (Jawan) ಚಿತ್ರದ ಮುಂದೆ ಸೆ.7ರಂದು ರಿಲೀಸ್ ಆಗಿದ್ದು, ಅನುಷ್ಕಾ ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ಇದೇ ಸೆ.7ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿದ್ದಾರೆ. ಈ ವೇಳೆ, ಮದುವೆ, ಟ್ರೋಲ್ ಮತ್ತು ಪ್ರಭಾಸ್ ಜೊತೆಗಿನ ಸಿನಿಮಾ ಬಗ್ಗೆ ಅನುಷ್ಕಾ ಶೆಟ್ಟಿ ಮುಕ್ತವಾಗಿ ಮಾತನಾಡಿದ್ದಾರೆ.
ತಮ್ಮ ಮದುವೆಯ ವಿಚಾರದ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಮದುವೆ (Wedding) ಪ್ಲ್ಯಾನ್ ಏನಾದರೂ ಇದ್ಯಾ? ಎನ್ನುವ ನಿರೂಪಕಿಯ ಪ್ರಶ್ನೆಗೆ ಸ್ವೀಟ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮದುವೆಗೆ ವಿರುದ್ಧ ಅಲ್ಲ. ನಾನು ಸಂಗಾತಿಯನ್ನು ಹೊಂದಲು ಮತ್ತು ಕುಟುಂಬ ಆರಂಭಿಸಲು ಇಷ್ಟಪಡುತ್ತೇನೆ. ಅದರಲ್ಲಿ ನನಗೆ ನಂಬಿಕೆ ಇದೆ. ಆದರೆ ಅದು ಸ್ವಾಭಾವಿಕವಾಗಿ ಆಗಬೇಕು. ಬರೀ ಸಮಾಜದ ಒತ್ತಡಕ್ಕೆ ಆಗುವುದಲ್ಲ ಎಂದಿದ್ದಾರೆ. ಇದನ್ನೂ ಓದಿ:ರಾಕಿಭಾಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಅಕ್ಟೋಬರ್‌ನಲ್ಲಿ Yash 19ಗೆ ಮುಹೂರ್ತ ಫಿಕ್ಸ್
ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿ ಪ್ರಭಾಸ್ (Prabhas) ಜೊತೆ ನಟಿಸುತ್ತೇನೆ. ಒಳ್ಳೆಯ ಕಥೆ ಬರಬೇಕು ಅಷ್ಟೇ ಎಂದು ಬಾಹುಬಲಿ ನಟಿ ಸ್ಪಷ್ಟನೆ ನೀಡಿದ್ದಾರೆ.
ನವೀನ್ ಪೋಲಿ ಶೆಟ್ಟಿಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಮೊದಲ ಬಾರಿಗೆ ಶೆಫ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಹುಭಾಷೆಗಳಲ್ಲಿ ಸೆ.7ರಂದು ರಿಲೀಸ್ ಆಗುತ್ತಿದೆ. ಜವಾನ್ ಮುಂದೆ ಅನುಷ್ಕಾ ಸಿನಿಮಾ ಬಿಡುಗಡೆ ಆಗುತ್ತಿದೆ.