Tag: anushka shetty

  • ಪಾರ್ವತಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ: ಶಿವನ ಪಾತ್ರದಲ್ಲಿ ಶಿವಣ್ಣ

    ಪಾರ್ವತಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ: ಶಿವನ ಪಾತ್ರದಲ್ಲಿ ಶಿವಣ್ಣ

    ವಿಷ್ಣು ಮಂಚು ನಟನೆಯ ಕಣ್ಣಪ್ಪ (Kannappa) ಸಿನಿಮಾ ಕುರಿತಂತೆ ದಿನಕ್ಕೊಂದು ಸುದ್ದಿ ಹೊರ ಬರುತ್ತಿವೆ. ಈ ಸಿನಿಮಾದಲ್ಲಿ ಹೆಸರಾಂತ ಕಲಾವಿದರೇ ತುಂಬಿದ್ದು, ಆ ಸಾಲಿಗೆ ಅನುಷ್ಕಾ ಶೆಟ್ಟಿ (Anushka Shetty) ಸೇರಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅನುಷ್ಕಾ ಅವರು ಪಾರ್ವತಿಯ ಪಾತ್ರ ಮಾಡಲಿದ್ದಾರೆ. ಶಿವನಾಗಿ ಕನ್ನಡದ ನಟ ಶಿವರಾಜ್ ಕುಮಾರ್ ನಟಿಸಲಿದ್ದಾರೆ.

    ಅನುಷ್ಕಾ ಶೆಟ್ಟಿ ಮಾತ್ರವಲ್ಲ, ಬಾಲಿವುಡ್ (Bollywood) ಹೆಸರಾಂತ ಹೀರೋ ಅಕ್ಷಯ್ ಕುಮಾರ್‌ ಕೂಡ ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾಗೆ ಸಾಥ್‌ ನೀಡಲಿದ್ದಾರೆ. ಸಹಜವಾಗಿಯೇ ಅಕ್ಷಯ್ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.

    ಸದ್ಯ ವಿಷ್ಣು ಮಂಚು (Vishnu Manchu) ನಟನೆಯ ಸಿನಿಮಾ ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್, ಮೋಹನ್ ಲಾಲ್, ಶರತ್ ಕುಮಾರ್ ಈಗಾಗಲೇ ಚಿತ್ರತಂಡವನ್ನು ಸೇರಿದ್ದಾರೆ. ಅಕ್ಷಯ್ ಕುಮಾರ್ ಕೂಡ ಈ ಪ್ರಾಜೆಕ್ಟ್‌ಗಳಲ್ಲಿ ನಟಿಸಲಿದ್ದಾರೆ. ಬಹುಮುಖ್ಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಪಾತ್ರದ ಕುರಿತು ಮುಂದಿನ ದಿನಗಳಲ್ಲಿ ತಂಡದ ಕಡೆಯಿಂದ ಮಾಹಿತಿ ಸಿಗಲಿದೆ.

     

    ಬಿಗ್ ಬಜೆಟ್‌ನಲ್ಲಿ ಕಣ್ಣಪ್ಪ ಸಿನಿಮಾ ಮೂಡಿ ಬರಲಿದೆ. ಮಲ್ಟಿ ಸ್ಟಾರ್‌ಗಳು ಈ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

  • ರಸ್ತೆ ಅಪಘಾತದಲ್ಲಿ ಅನುಷ್ಕಾ ಶೆಟ್ಟಿ ಚಿತ್ರದ ಹೀರೋಗೆ ಭಾರೀ ಪೆಟ್ಟು

    ರಸ್ತೆ ಅಪಘಾತದಲ್ಲಿ ಅನುಷ್ಕಾ ಶೆಟ್ಟಿ ಚಿತ್ರದ ಹೀರೋಗೆ ಭಾರೀ ಪೆಟ್ಟು

    ನುಷ್ಕಾ ಶೆಟ್ಟಿ (Anushka Shetty) ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನವೀನ್ ಪೊಲಿಶೆಟ್ಟಿ (Naveen Shetty) ಅಮೆರಿಕಾದಲ್ಲಿ (America) ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅಮೆರಿಕಾದ ಟೆಕ್ಸಾಸ್‍ ನ ಡಲ್ಲಾಸ್ ನಲ್ಲಿ ಅವರು ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

    ಬೈಕ್ ನಿಯಂತ್ರಣ ಕಳೆದುಕೊಂಡ ಪರಿಣಾಮ ಸ್ಕಿಡ್ ಆಗಿದೆ. ಹಾಗಾಗಿ ಅಪಘಾತದಲ್ಲಿ (Accident) ಕೈ, ಭುಜ ಹಾಗೂ ದೇಹದ ನಾನಾ ಭಾಗಗಳಿಗೆ ಗಾಯಗಳಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಶೆಟ್ಟಿ ಸ್ಪಂದಿಸಿದ್ದಾರೆ.

     

    ಕಲ್ಯಾಣ್ ಶಂಕರ್ ನಿರ್ದೇಶನದ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನವೀನ್ ಶೆಟ್ಟಿ, ಕಾಮಿಡಿ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡವರು. ಜೊತೆಗೆ ಅನುಷ್ಕಾ ನಂತಹ ಸ್ಟಾರ್ ನಟಿಯ ಜೊತೆಯೂ ಅಭಿನಯಿಸಿದ್ದಾರೆ.

  • ಅನುಷ್ಕಾ ಮುಂದಿಟ್ಟುಕೊಂಡು ರೋಜಾಗೆ ಗುರಿಯಿಟ್ಟ ಪವನ್ ಕಲ್ಯಾಣ್

    ಅನುಷ್ಕಾ ಮುಂದಿಟ್ಟುಕೊಂಡು ರೋಜಾಗೆ ಗುರಿಯಿಟ್ಟ ಪವನ್ ಕಲ್ಯಾಣ್

    ಆಂಧ್ರ ಪ್ರದೇಶದ ರಾಜಕಾರಣದಲ್ಲಿ ನಟ ನಟಿಯರ ಜಿದ್ದಾಜಿದ್ದಿ ಜೋರಾಗುತ್ತಿದೆ. ಅದರಲ್ಲೂ ರೋಜಾ (Roja) ಮತ್ತು ಪವನ್ ಕಲ್ಯಾಣ್ (Pawan Kalyan) ನಡುವಿನ ವೈಮನಸ್ಸು ಮತ್ತಷ್ಟು ಗಟ್ಟಿಯಾಗುತ್ತಿದೆ. ರೋಜಾ ಅವರನ್ನು ಹೇಗಾದರೂ ಬಗ್ಗು ಬಡಿಯುವುದಕ್ಕಾಗಿಯೇ ನಟ ಪವನ್ ಕಲ್ಯಾಣ್ ರಣತಂತ್ರವೊಂದನ್ನು ಹೆಣೆದಿದ್ದಾರಂತೆ. ಅದು ರೋಜಾಗೆ ಮುಳುವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

    ರೋಜಾ ಈಗಾಗಲೇ ಶಾಸಕಿಯಾಗಿ, ಮಂತ್ರಿಯಾಗಿ ಜನಮಾನಸದಲ್ಲಿ ಬೇರೂರಿದ್ದಾರೆ. ಹಾಗಾಗಿಯೇ ಕಳೆದ ಬಾರಿ ಚುನಾವಣೆಯಲ್ಲಿ (Election) ಪವನ್ ಕಲ್ಯಾಣ್ ವಿರುದ್ಧ ಹರಿಹಾಯ್ದಿದ್ದರು. ಪವನ್ ಕಲ್ಯಾಣ್ ಶಾಸಕ ಕೂಡ ಆಗುವುದಿಲ್ಲವೆಂದು ಭವಿಷ್ಯ ನುಡಿದಿದ್ದರು. ಈ ಮಾತು ಪವನ್ ಕಲ್ಯಾಣ್ ಅವರನ್ನು ಕೆರಳಿಸಿತ್ತು.

    ಈ ಬಾರಿ ರೋಜಾ ಅವರು ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಚಿತ್ತೂರು ಜಿಲ್ಲೆಯ ನಗಾರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆ ಕ್ಷೇತ್ರಕ್ಕೆ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರನ್ನು ತಮ್ಮ ಜನಸೇನಾ ಪಕ್ಷದಿಂದ ಕಣಕ್ಕಿಳಿಸಲು ಪವನ್ ಕಲ್ಯಾಣ್ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅನುಷ್ಕಾ ಜೊತೆ ಮಾತು ಕೂಡ ಆಡಿದ್ದಾರಂತೆ.

     

    ರಾಜಕೀಯಕ್ಕೆ ಬರುವ ಕುರಿತಂತೆ ಅನುಷ್ಕಾ ಬಹಿರಂಗವಾಗಿ ಹೇಳಿಕೆ ನೀಡದೇ ಇದ್ದರೂ, ಈ ಕುರಿತಂತೆ ಪವನ್ ಕೂಡ ಮಾತನಾಡದೇ ಇದ್ದರೂ, ತೆರೆ ಮರೆಯಲ್ಲಿ ರಣತಂತ್ರ ಹೆಣದಿದ್ದು ಸುಳ್ಳಲ್ಲಅಂತಿದೆ ಆಂಧ್ರ ರಾಜಕಾರಣ.

  • ತಲೆಗೆ ಸೆರಗು ಸುತ್ತಿಕೊಂಡು ಘಾಟಿಗೆ ಹೊರಟ ಅನುಷ್ಕಾ ಶೆಟ್ಟಿ

    ತಲೆಗೆ ಸೆರಗು ಸುತ್ತಿಕೊಂಡು ಘಾಟಿಗೆ ಹೊರಟ ಅನುಷ್ಕಾ ಶೆಟ್ಟಿ

    ರಾವಳಿ ಅನುಷ್ಕಾ ಶೆಟ್ಟಿ (Anushka Shetty) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚೆಗೆ ನಿರ್ದೇಶಕ ಕ್ರಿಶ್ ಅವರು ಅನುಷ್ಕಾ ಶೆಟ್ಟಿ ಜೊತೆ ಗುಟ್ಟಾಗಿ ಹೊಸ ಸಿನಿಮಾ ಶುರು ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಚಿತ್ರ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ. ಇದನ್ನೂ ಓದಿ:ಇಳಯರಾಜ ಬಯೋಪಿಕ್: ಚಿತ್ರಕ್ಕೆ ಚಾಲನೆ ನೀಡಿದ ಕಮಲ್ ಹಾಸನ್

    ಅನುಷ್ಕಾ ಶೆಟ್ಟಿ ನಟನೆಯ ಚಿತ್ರಕ್ಕೆ ‘ಘಾಟಿ’ ಎನ್ನುವ ಟೈಟಲ್ ಫೈನಲ್ ಮಾಡಲಾಗಿದೆ. ಇದು ತೆಲುಗು ಸಿನಿಮಾ. ಅಷ್ಟೇ ಅಲ್ಲ ಪೋಸ್ಟ್ ಥ್ರಿಯೇಟ್ರಿಕಲ್ ಒಟಿಟಿ ಪಾರ್ಟ್ನರ್ ಕೂಡ ಫಿಕ್ಸ್ ಆಗಿದ್ದಾರೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ನಂತರ ಈಗ ಮತ್ತೆ ಅನುಷ್ಕಾ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    14 ವರ್ಷಗಳ ಹಿಂದೆ ಬಂದಿದ್ದ ‘ವೇದಂ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಕ್ರಿಶ್ ಆಕ್ಷನ್ ಕಟ್ ಹೇಳಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಇದೀಗ ಹೊಸದೊಂದು ಸಿನಿಮಾ ಮೂಡಿ ಬರುತ್ತಿದೆ. ಅನುಷ್ಕಾ ಶತ್ರುಗಳನ್ನು ಸದೆಬಡೆಯುವ ಕ್ರಿಮಿನಲ್‌ ಆಗಿದ್ದು ಹೇಗೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ.

    ‘ಘಾಟಿ’ ಟೈಟಲ್ ಸಮೇತ ನಾಯಕಿ ತಲೆಗೆ ಸೆರಗು ಸುತ್ತಿಕೊಂಡು ಹೊರಟ ಪೋಸ್ಟರ್ ರಿಲೀಸ್ ಆಗಿದೆ. ಚಿಂತಕಿಂಡಿ ಶ್ರೀನಿವಾಸ್ ರಾವ್, ಕ್ರಿಶ್ ಹಾಗೂ ಸಾಯಿಮಾಧವ ಬುರ್ರಾ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಆಂಧ್ರ ಮತ್ತು ಒಡಿಶಾ ಗಡಿಯಲ್ಲಿ ‘ಘಾಟಿ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ ರಮ್ಯಾ ಕೃಷ್ಣನ್ ಕೂಡ ಅನುಷ್ಕಾ ಜೊತೆ ಛತ್ತೀಸ್‌ಗಢದ ತಿರತ್‌ಗಢದಲ್ಲಿ ನಡೆದ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದರು.

    ಬಾಹುಬಲಿ, ಬಾಹುಬಲಿ 2 ಸಿನಿಮಾದಂತಹ ಸಕ್ಸಸ್ ಕೊಟ್ಟಿರುವ ಅನುಷ್ಕಾ ಶೆಟ್ಟಿಗೆ ಮತ್ತೊಂದು ದೊಡ್ಡ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ತೆಲುಗು ಸಿನಿಮಾಗಳ ಜೊತೆಗೆ ಮಲಯಾಳಂ ಚಿತ್ರರಂಗಕ್ಕೆ ಕೂಡ ನಟಿ ಎಂಟ್ರಿ ಕೊಟ್ಟಿದ್ದಾರೆ.

  • ಆತ್ಮವಾಗಿ ಕಾಣಿಸಿಕೊಂಡ ಅನುಷ್ಕಾ ಶೆಟ್ಟಿ

    ಆತ್ಮವಾಗಿ ಕಾಣಿಸಿಕೊಂಡ ಅನುಷ್ಕಾ ಶೆಟ್ಟಿ

    ನ್ನಡದ ಹುಡುಗಿ ಅನುಷ್ಕಾ ಶೆಟ್ಟಿ (Anushka Shetty) 15 ವರ್ಷಗಳಿಂದ ತೆಲುಗು ಚಿತ್ರರಂಗ ಆಳಿದವರು. ಸಾಕಷ್ಟು ಪಾತ್ರಗಳಲ್ಲಿ ನಟಿಸಿ ಆ ಪಾತ್ರವೇ ತಾವಾಗಿ ಜೀವ ತುಂಬಿದವರು. ಇದೀಗ ಮಾಲಿವುಡ್‌ನತ್ತ ನಟಿ ಮುಖ ಮಾಡಿದ್ದಾರೆ. ಯಕ್ಷಿಣಿ ಪಾತ್ರಕ್ಕೆ ಅನುಷ್ಕಾ ಜೀವ ತುಂಬಲಿದ್ದಾರೆ. ಹಾಗಾದ್ರೆ ಯಾವುದು ಆ ಸಿನಿಮಾ? ಇಲ್ಲಿದೆ ಮಾಹಿತಿ.

    ಅನುಷ್ಕಾ ಶೆಟ್ಟಿ ಇದೀಗ ಮೊದಲ ಬಾರಿಗೆ ಮಲಯಾಳಂ (Mollywood) ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂ ಚಿತ್ರರಂಗದ ರೋಜಿನ್ ಥಾಮಸ್ ನಿರ್ದೇಶನದ ಹಾರರ್ ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ. ಸಿನಿಮಾಕ್ಕೆ ‘ಕತನಾರ್; ದಿ ವೈಲ್ಡ್ ಸಾರ್ಸರರ್’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:ವರ್ತೂರು ಸಂತೋಷ್ ಹುಟ್ಟುಹಬ್ಬ: ನಾಲ್ಕು ಸಾವಿರ ಮಂದಿಗೆ ಊಟದ ವ್ಯವಸ್ಥೆ

    ಚಿತ್ರದಲ್ಲಿ ‘ಕಲಿಯಂಕಟ್ಟು ನೀಲಿ’ ಎಂಬ ಕೇರಳದ ಜನಪದ ಕತೆಗಳಲ್ಲಿ ಬರುವ ಯಕ್ಷಿಣಿ ಅಥವಾ ಆತ್ಮದ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ‘ಕತನಾರ್; ದಿ ವೈಲ್ಡ್ ಸಾರ್ಸರರ್’ ಸಿನಿಮಾವು ಒಬ್ಬ ಮಾಂತ್ರಿಕ- ದೆವ್ವದ ನಡುವೆ ನಡೆಯುವ ಕತೆಯಾಗಿದೆ.

    ಹಾರರ್ ಸಿನಿಮಾ ಆಗಿದ್ದರೂ ಸಹ ಭರ್ಜರಿಯಾದ ಆ್ಯಕ್ಷನ್ ಹಾಗೂ ಸಸ್ಪೆನ್ಸ್ ಈ ಸಿನಿಮಾದಲ್ಲಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಅನುಷ್ಕಾ ಪಾತ್ರಕ್ಕೆ ಪ್ರಾಧಾನ್ಯತೆಯಿದೆ. ಚಿತ್ರದ ಕತೆ ವಿಭಿನ್ನ ಎಂದು ಅನಿಸಿದಕ್ಕೆ ಅನುಷ್ಕಾ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಲು ಓಕೆ ಎಂದಿದ್ದಾರೆ.

    ಮಿಸ್‌ ಶೆಟ್ಟಿ ಮಿಸ್ಟರ್‌ ಪೋಲಿ ಶೆಟ್ಟಿ ಚಿತ್ರದ ಸಕ್ಸಸ್‌ ನಂತರ ಇದೀಗ ಪ್ರಭಾಸ್‌ ನಿರ್ಮಾಣ ಸಂಸ್ಥೆಯ ಸಿನಿಮಾವೊಂದರಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ತೆಲುಗು ಸಿನಿಮಾಗಳ ಜೊತೆಗೆ ಮಾಲಿವುಡ್‌ ಚಿತ್ರಗಳಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.

  • ಅನುಷ್ಕಾ ಶೆಟ್ಟಿ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಅನುಷ್ಕಾ ಶೆಟ್ಟಿ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ರಾವಳಿ ನಟಿ ಅನುಷ್ಕಾ ಶೆಟ್ಟಿ (Anushka Shetty) ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೂ ಪ್ರಭಾಸ್ ಬ್ಯಾನರ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ಕುತೂಹಲ ಹೆಚ್ಚಾಗಿದೆ. ಯಾವ ಪಾತ್ರವನ್ನು ಮಾಡಲಿದ್ದಾರೆ ಸ್ವೀಟಿ? ಓಡಿಸ್ಸಾದಲ್ಲಿ ಅದ್ಯಾಕೆ ಹಾಗೆ ಓಡಿ ಹೋದರು? ಮತ್ತೆ ಕಮ್‌ಬ್ಯಾಕ್ ಆಗುತ್ತಾರಾ ಈ ಸಿನಿಮಾದಿಂದ? ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ಸನ್ನಿ ಲಿಯೋನ್‌ ಫೋಟೋ!

    ಕೆಲವು ದಿನಗಳ ಹಿಂದೆ ಅನುಷ್ಕಾ ಶೆಟ್ಟಿ ಓಡಿಸ್ಸಾದಲ್ಲಿ ಕಾಣಿಸಿಕೊಂಡಿದ್ದರು. ಹಲವಾರು ಜನರು ಇವರನ್ನು ಬೆನ್ನು ಬಿದ್ದಿದ್ದರು ತಪ್ಪಿಸಿಕೊಂಡಿದ್ದರು. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ನಂತರ ಈಗ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ (Prabhas) ಹೊಸ ಸಿನಿಮಾಗೆ ಅನುಷ್ಕಾ ನಾಯಕಿ ಎನ್ನಲಾಗಿತ್ತು. ಆದರೆ ಅಸಲಿ ಕಥೆಯೇ ಬೇರೆ. ಪ್ರಭಾಸ್ ಬ್ಯಾನರ್‌ನ ಹೊಸ ಪ್ರಾಜೆಕ್ಟ್‌ನಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ‘ಶೀಲವತಿ’ (Seelavathi) ಟೈಟಲ್ ಫಿಕ್ಸ್ ಮಾಡಲಾಗಿದೆ.

    ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರದ್ದು ವೇಶ್ಯೆ ಪಾತ್ರ. ಹಾಗಂತ ಮೂಲ ಹೇಳುತ್ತಿವೆ. ಇದು ನಿಜವಾ ಸುಳ್ಳಾ ಕಾದುನೋಡಬೇಕಿದೆ. ‘ಸೈಜ್ ಜೀರೋ’ (Size Zero) ಇದು ಅನುಷ್ಕಾ ನಟಿಸಿದ ಸಿನಿಮಾ. ಇದಕ್ಕಾಗಿಯೇ ಅವರು ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಆಮೇಲೆ ಅದರಿಂದ ಹೊರ ಬರಲು ಒದ್ದಾಡಿದರು. ಈ ಕಾಣಕ್ಕಾಗಿಯೇ ಬೆನ್ನು ನೋವಿನ ಸಮಸ್ಯೆಯಿಂದ ಒದ್ದಾಡಿದ್ದರು. ಆಮೇಲೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ಅದ್ಯಾಕೊ ಜನರು ಇಷ್ಟ ಪಡಲಿಲ್ಲ. ಈಗ ಮತ್ತೆ ಪರೀಕ್ಷೆಗೆ ಸಿದ್ದವಾಗಿದ್ದಾರೆ.

    ‘ಶೀಲವತಿ’ ಸಿನಿಮಾ ಅವರಿಗೆ ಬ್ರೇಕ್ ನೀಡುತ್ತಾ ಇಲ್ಲವಾ ಅನ್ನೋದು ಗೊತ್ತಾಗಲ್ಲ. ಸ್ವೀಟಿ ಬದುಕಿನ ಇನ್ನೊಂದು ಮುಖ ನೋಡೋದಕ್ಕೆ ಜನರು ಕಾಯುತ್ತಿದ್ದಾರೆ. ಬಾಹುಬಲಿ ಅಂತಹ ಸಕ್ಸಸ್‌ಫುಲ್ ಸಿನಿಮಾ ಕೊಟ್ಟ ನಟಿ ಅನುಷ್ಕಾ ಮತ್ತೆ ಚಿತ್ರರಂಗದಲ್ಲಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

  • ಒಡಿಶಾದಲ್ಲಿ ಅನುಷ್ಕಾ ಶೆಟ್ಟಿ: ಫ್ಯಾನ್ಸ್ ಕಂಡು ಓಡಿದ ನಟಿ

    ಒಡಿಶಾದಲ್ಲಿ ಅನುಷ್ಕಾ ಶೆಟ್ಟಿ: ಫ್ಯಾನ್ಸ್ ಕಂಡು ಓಡಿದ ನಟಿ

    ನುಷ್ಕಾ ಶೆಟ್ಟಿ (Anushka Shetty) ಇದೀಗ ಬಹಿರಂಗವಾಗಿ ಕಾಣಿಸಿಕೊಳ್ಳೋದು ಅಪರೂಪವಾಗಿದೆ. ಸಿನಿಮಾ ಪ್ರಚಾರ, ಶೂಟಿಂಗ್ (Shooting) ಇದ್ದಾಗ ಮಾತ್ರ ಮನೆಯಿಂದ ಆಚೆ ಬರುವ ಅನುಷ್ಕಾ, ನಂತರದ ದಿನಗಳಲ್ಲಿ ಫ್ಯಾನ್ಸ್ ಕಣ್ಣಿಗೆ ಕಾಣಿಸೋದೇ ಇಲ್ಲ. ಹಾಗಾಗಿ ಬಹಿರಂಗವಾಗಿ ಅನುಷ್ಕಾ ಕಾಣಿಸಿಕೊಂಡಾಗ ಅಭಿಮಾನಿಗಳು ಮುತ್ತಿಕ್ಕಿಕೊಳ್ಳೋದು ಸಹಜವಾಗಿದೆ.

    ಸದ್ಯ ಅನುಷ್ಕಾ ಒಡಿಶಾದಲ್ಲಿ (Odisha) ಇದ್ದಾರೆ. ಅವರು ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ಳೋದಕ್ಕಾಗಿ ಅಲ್ಲಿ ಉಳಿದುಕೊಂಡಿದ್ದಾರೆ. ಅನುಷ್ಕಾ ಒಡಿಶಾಗೆ ಬಂದಿದ್ದಾರೆ ಎನ್ನುವ ಸುದ್ದಿ ತಿಳಿದ ತಕ್ಷಣ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದಾರೆ. ಅಭಿಮಾನಿಗಳನ್ನು ಕಂಡು ಅನುಷ್ಕಾ, ಕಾರಿನಿಂದ ಇಳಿದು ಓಡಿದ್ದಾರೆ.

    ಒಡಿಶಾದ ಜೇಪೋರ್ ನಲ್ಲಿ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ರಮ್ಯಾಕೃಷ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕ್ರಿಶ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಹೊಸ ಸಿನಿಮಾದ ಶೀರ್ಷಿಕೆ ಇನ್ನೂ ಘೋಷಣೆ ಆಗಿಲ್ಲವಾದರೂ, ಚಿತ್ರೀಕರಣ ನಡೆಯುತ್ತಿದೆ.

    ಸದ್ಯ ಒಡಿಶಾದ ಕೋರಾಪುಟ್ ಜಿಲ್ಲೆಯ ಹಲವು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಿದ್ದಾರಂತೆ ನಿರ್ದೇಶಕರು. ಈ ಪ್ರದೇಶದಲ್ಲೇ ಎಂಟು ದಿನಗಳ ಕಾಲ ಚಿತ್ರತಂಡ ಉಳಿದುಕೊಳ್ಳಲಿದೆಯಂತೆ.

  • Kambala: ಬೆಂಗಳೂರಿನ ಕಂಬಳದಲ್ಲಿ ಭಾಗಿಯಾದ ಸಿನಿಮಾ ತಾರೆಯರು

    Kambala: ಬೆಂಗಳೂರಿನ ಕಂಬಳದಲ್ಲಿ ಭಾಗಿಯಾದ ಸಿನಿಮಾ ತಾರೆಯರು

    ತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಡೆದ ಬೆಂಗಳೂರು ಕಂಬಳಕ್ಕೆ(Bengaluru Kambala) ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ. ಎರಡು ದಿನಗಳ ಕಂಬಳದಲ್ಲಿ ಲಕ್ಷಾಂತರ ಜನರು ಕರಾವಳಿಯ ಕಂಬಳವನ್ನ ಕಣ್ತುಂಬಿಕೊಂಡಿದ್ದಾರೆ. ನಿನ್ನೆ ತಡರಾತ್ರಿವರೆಗೆ ಕಂಬಳದಕೋಣಗಳ ಓಟವನ್ನ ಜನರು ಕಣ್ತುಂಬಿಕೊಂಡಿದ್ದಾರೆ. ಈ ಬೆಂಗಳೂರಿನ ಕಂಬಳಕ್ಕೆ ಮತ್ತಷ್ಟು ಕಳೆ ತುಂಬಲು ಚಿತ್ರರಂಗದ ನಟ-ನಟಿಯರು ಕೂಡ ಭಾಗಿಯಾಗಿ ಕಂಬಳಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ದರ್ಶನ್

    ಇಂದಿನ ಕಂಬಳಕ್ಕೆ ಸ್ಯಾಂಡಲ್‌ವುಡ್, ಬಾಲಿವುಡ್ ತಾರೆಯರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಮತ್ತಷ್ಟು ಹೆಚ್ಚಿಸಿದ್ರು. ರಕ್ಷಿತ್ ಶೆಟ್ಟಿ (Rakshit Shetty), ಉಪೇಂದ್ರ, ಪೂಜಾ ಹೆಗ್ಡೆ (Pooja Hegde), ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು, ಬೃಂದಾ ಆಚಾರ್ಯ ಕರಾವಳಿಯ ಕ್ರೀಡೆ ಕಂಡು ಪುಳಕಿತರಾದ್ರು. ಕಂಬಳದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹೊಸ ಹುರುಪು ತುಂಬಿದ್ದರು. ಕಂಬಳದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

    ರಾಜ್ಯ ರಾಜಧಾನಿಯಲ್ಲಿ ಕರಾವಳಿಯ ಕಂಬಳಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ ಆರಂಭವಾದ ಕಂಬಳಕ್ಕೆ ತಡರಾತ್ರಿವರೆಗೂ ಉತ್ಸುಕತೆಯಿಂದ ಲಕ್ಷಾಂತರ ಜನರು ಭಾಗಿಯಾದ್ರೆ, ಇಂದು ಬೆಳಿಗ್ಗೆಯಿಂದಲೇ ಅರಮನೆ ಮೈದಾನಕ್ಕೆ ಬಂದ ಲಕ್ಷಾಂತರ ಜನರು ಕಂಬಳವನ್ನ ಕಣ್ತುಂಬಿಕೊಂಡರು. ಹಗ್ಗದ ಹಿರಿಯ, ಹಗ್ಗದ ಕಿರಿಯ, ಕೆನೆಹಲಗೆ, ಅಡ್ಡ ಪಲಾಯಿ ಹೀಗೆ ಒಂದರ ಹಿಂದೆ ಒಂದರಂತೆ ಸ್ಪರ್ಧೆ ನಡೀತಿದ್ರೆ, ನೆರೆದಿದ್ದ ಜನರು ತಮ್ಮ ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಂಬಿಸಿದ್ರು.

    ರಾಜ, ಮಹಾರಾಜ ಕರೆಯಲ್ಲಿ ಕೋಣಗಳ ಜೋಡಿ ಓಟದ ಮೂಲಕ ಗಮನಸೆಳೆದ್ರೆ, ಅತ್ತ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ನೃತ್ಯತಂಡಗಳು ಜನರ ಮನತಣಿಸಿದ್ವು. ವೀಕೆಂಡ್ ಹಿನ್ನೆಲೆ ಬೆಂಗಳೂರಿನಲ್ಲಿ ನೆಲೆಸಿರೋ ಕರಾವಳಿಯ ಜನರು ಮಾತ್ರವಲ್ಲದೇ ಸಿಲಿಕಾನ್ ಸಿಟಿ ಜನರು ಕೂಡ ಕಂಬಳ ಕಂಡು ಫುಲ್ ಖುಷ್ ಆಗಿದ್ರು.

    ಒಟ್ಟಿನಲ್ಲಿ ಕಂಬಳ ಕೂಟದಲ್ಲಿ ಭಾಗಿಯಾಗಿದ್ದ 178 ಜೋಡಿ ಎಲ್ಲಾ ಬಹುಮಾನ ಗೆಲ್ಲಲು ಸಾಧ್ಯವಾಗದೇ ಇದ್ರೂ ಬೆಂಗಳೂರು ಕಂಬಳದಲ್ಲಿ ನೋಡುಗರ ಮನಸ್ಸು ಗೆದ್ದಿದ್ದಂತೂ ನಿಜ. ‘ಕಾಂತಾರ’ (Kantara) ಚಿತ್ರದಲ್ಲಿ ಸಿನಿ ಪ್ರಿಯರ ಮನಸ್ಸು ಗೆದ್ದಿದ್ದ ಕೋಣಗಳು ಜನರ ಮನಸು ಗೆಲ್ಲುವುದರ ಜೊತೆ ಜೊತೆಗೆ ಕರಾವಳಿಯ ವೈಭವವನ್ನ ಅನಾವರಣ ಮಾಡೋ ಮೂಲಕ ಚಿನ್ನದ ಪದಕವನ್ನ ಸಹ ಪಡೆದಕೊಂಡಿತ್ತು. ಒಂದು ಕಡೆ ಕಂಬಳ ನೋಡೋದಕ್ಕೆ ಜನರ ಸೇರಿದ್ರೆ, ಇನ್ನೊಂದಿಷ್ಟು ಜನ ತಮ್ಮ ನೆಚ್ಚಿನ ಸ್ಟಾರ್‌ಗಳನ್ನ ನೋಡೋಕೆ ಎಂದೇ ಧಾವಿಸಿದ್ದರು.

  • Kambala: ಬೆಂಗಳೂರಿನಲ್ಲಿನ ಕರಾವಳಿ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ ಈ ಕಲಾವಿದರು

    Kambala: ಬೆಂಗಳೂರಿನಲ್ಲಿನ ಕರಾವಳಿ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ ಈ ಕಲಾವಿದರು

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ (Bengaluru Kambala) ನಡೆಯುತ್ತಿದೆ. ಕಂಬಳಕ್ಕಾಗಿ ಅರಮನೆ ಮೈದಾನ ಸಂಪೂರ್ಣವಾಗಿ ಸಿದ್ಧಗೊಂಡಿದೆ. ನವೆಂಬರ್ 25, 26ರಂದು ನಡೆಯಲಿರುವ ಕಂಬಳಕ್ಕೆ ಅನುಷ್ಕಾ ಶೆಟ್ಟಿ (Anushka Shetty), ರಿಷಬ್ ಶೆಟ್ಟಿ, ಪೂಜಾ ಹೆಗ್ಡೆ, ವಿವೇಕ್ ಒಬೆರಾಯ್, ಸೇರಿದಂತೆ ಹಲವು ತಾರೆಯರು ಮೆರಗು ನೀಡಲಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್‌’ ಟ್ರೈಲರ್‌ಗೆ ಪ್ರಭಾಸ್‌ ರಿಯಾಕ್ಷನ್‌

    ಕರಾವಳಿ ಕಂಬಳ ಉತ್ಸವಕ್ಕೆ ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ನಟ ದರ್ಶನ್ ಕಾಂತಾರ ಹೀರೋ ರಿಷಬ್(Rishab Shetty), ರಕ್ಷಿತ್ ಶೆಟ್ಟಿ, ಉಪೇಂದ್ರ, ಶಿವಣ್ಣ, ಆಶಿಶ್ ಬಲ್ಲಾಳ್, ರಾಜ್ ಬಿ ಶೆಟ್ಟಿ, ಮೇಘಾ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗುತ್ತಿದ್ದಾರೆ.

    ನವೆಂಬರ್ 25, 26ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ತಯಾರಿ ಸಲುವಾಗಿ ಬೆಂಗಳೂರಿನ ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ-ಭಾಷಾ ಸಂಘಟನೆಗಳ ಜೊತೆ ನಡೆದ ಬೃಹತ್ ಸಮಾಲೋಚನಾ ಸಭೆ ಮಾಡಲಾಗಿದೆ.

    ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕರಾವಳಿಯ ಸಮಸ್ತ ಸಮುದಾಯದವರು ಒಂದೆಡೆ ಒಗ್ಗಟ್ಟಾಗಿ ಸೇರುವ ಬೃಹತ್ ವೇದಿಕೆ ಇದಾಗಲಿದೆ ಎಂದರು. ಇಂದಿನ ಸಮಾಲೋಚನಾ ಸಭೆಯಲ್ಲಿ ಕರಾವಳಿಯ ವಿವಿಧ ಭಾಷೆ-ಜಾತಿಗಳ 50ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಿದ್ದು, ಅವರೊಂದಿಗೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾತುಕತೆ ನಡೆಸಲಾಗಿದೆ.

    ಬೆಂಗಳೂರು ಕಂಬಳಕ್ಕೆ ಈಗಾಗಲೇ 150ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ನಡೆಯಲಿದೆ ಎಂದು ಬೆಂಗಳೂರಿನ ಕಂಬಳ ತಂಡ ತಿಳಿಸಿದೆ.

  • ಬೆಂಗಳೂರು ಕಂಬಳಕ್ಕೆ ಬರಲಿದ್ದಾರೆ ಅನುಷ್ಕಾ ಶೆಟ್ಟಿ, ಐಶ್ವರ್ಯಾ ರೈ

    ಬೆಂಗಳೂರು ಕಂಬಳಕ್ಕೆ ಬರಲಿದ್ದಾರೆ ಅನುಷ್ಕಾ ಶೆಟ್ಟಿ, ಐಶ್ವರ್ಯಾ ರೈ

    ದೇ ಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆಯಲಿರುವ ‘ಬೆಂಗಳೂರು ಕಂಬಳ’ಕ್ಕೆ (Kambala) ಕನಿಷ್ಠ 3ರಿಂದ 5 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಕಂಬಳ ಸಮಿತಿ (ರಿ.) ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.

    ಈ ಬಾರಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ಬಾಲಿವುಡ್ ನಟಿ ಐಶ್ವರ್ಯಾ ರೈ(Aishwarya Rai), ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಆಗಮಿಸಲಿದ್ದಾರೆ ಎಂದು ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದ್ದಾರೆ.

    ನವೆಂಬರ್ 25, 26ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ತಯಾರಿ ಸಲುವಾಗಿ ಇಂದು ಬೆಂಗಳೂರಿನ ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ-ಭಾಷಾ ಸಂಘಟನೆಗಳ ಜೊತೆ ನಡೆದ ಬೃಹತ್ ಸಮಾಲೋಚನಾ ಸಭೆ ಬಳಿಕ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದರು. ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಾಂಗ್ ಲೀಕ್: ಕೇಡಿಗಳ ಅರೆಸ್ಟ್

    ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕರಾವಳಿಯ ಸಮಸ್ತ ಸಮುದಾಯದವರು ಒಂದೆಡೆ ಒಗ್ಗಟ್ಟಾಗಿ ಸೇರುವ ಬೃಹತ್ ವೇದಿಕೆ ಇದಾಗಲಿದೆ ಎಂದರು. ಇಂದಿನ ಸಮಾಲೋಚನಾ ಸಭೆಯಲ್ಲಿ ಕರಾವಳಿಯ ವಿವಿಧ ಭಾಷೆ-ಜಾತಿಗಳ 50ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಿದ್ದು ಅವರೊಂದಿಗೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದರು.

    ಬೆಂಗಳೂರು ಕಂಬಳಕ್ಕೆ ಈಗಾಗಲೇ 150ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಆ ಎಲ್ಲ ಕೋಣಗಳನ್ನು ನ.23ರಂದು ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ ಮಾಡಿ ಕಳಿಸಿಕೊಡಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದರು. ಅಷ್ಟೂ ಕೋಣಗಳನ್ನು ಹಾಸನ ಹಾಗೂ ನೆಲಮಂಗಲದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಗುವುದು. ಅಲ್ಲದೆ ಪ್ರತಿ ತಾಲೂಕಲ್ಲೂ ಸ್ವಾಗತ-ಬೀಳ್ಕೊಡುಗೆ ಇರಲಿದೆ ಎಂದರು.

    ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ, ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು. ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಎಂಬ ಥೀಮ್ ಸಾಂಗ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಥೀಮ್ ಸಾಂಗ್ ವಿ.ಮನೋಹರ್ ಸಾಹಿತ್ಯ, ಗುರುಕಿರಣ್ ಸಂಗೀತ ಸಂಯೋಜನೆ, ಮಣಿಕಾಂತ್ ಕದ್ರಿ ಪ್ರೋಗ್ರಾಮಿಂಗ್‌ನಲ್ಲಿ ಮೂಡಿ ಬಂದಿದೆ. ಇನ್ನೂ ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1 ಕೋಟಿ ರೂ. ಅನುದಾನ ಘೋಷಿಸಿದ್ದಾರೆ ಎಂದು ಕಂಬಳ ಸಮಿತಿ ಉಪಾಧ್ಯಕ್ಷ ಗುಣರಂಜನ್ ಶೆಟ್ಟಿ ತಿಳಿಸಿದ್ದಾರೆ.