Tag: anushka shetty

  • ಬಾಹುಬಲಿ-2 ಚಿತ್ರದಿಂದ ಕರ್ನಾಟಕಕ್ಕೆ ಕೋಟಿ ಕೋಟಿ ಆದಾಯ

    ಬಾಹುಬಲಿ-2 ಚಿತ್ರದಿಂದ ಕರ್ನಾಟಕಕ್ಕೆ ಕೋಟಿ ಕೋಟಿ ಆದಾಯ

    ಬೆಂಗಳೂರು: ಕರ್ನಾಟಕದಲ್ಲಿ ಬಾಹುಬಲಿ-2 ಚಿತ್ರ ಪ್ರದರ್ಶನದಿಂದ ಕೋಟ್ಯಾಂತರ ರೂಪಾಯಿ ಮನರಂಜನಾ ತೆರಿಗೆ ಸಂಗ್ರಹವಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆ ಫುಲ್ ಖುಷ್ ಆಗಿದೆ.

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ರಾಜ್ಯದಲ್ಲಿ ಬಾಹುಬಲಿ-2 ಪ್ರದರ್ಶನದಿಂದ 17 ಕೋಟಿ ರೂಪಾಯಿ ತೆರಿಗೆ ಬಂದಿದೆ. ಬೆಂಗಳೂರು ಒಂದರಲ್ಲೇ 13 ಕೋಟಿ 50 ಲಕ್ಷ ರೂಪಾಯಿ ತೆರಿಗೆ ಸಂಗ್ರಹವಾದ್ರೆ, ಬೆಂಗಳೂರೇತರ 3.50 ಕೋಟಿ ರೂಪಾಯಿ ತೆರಿಗೆ ಕಲೆಕ್ಷನ್ ಆಗಿದೆ. ಅಚ್ಚರಿ ಅಂದ್ರೆ ಬೆಂಗಳೂರಲ್ಲಿ ಚಿತ್ರ ಬಿಡುಗುಡೆಯಾದ ನಾಲ್ಕೇ ದಿನಕ್ಕೆ 7 ಕೋಟಿ 72 ಲಕ್ಷ ರೂಪಾಯಿ ಟ್ಯಾಕ್ಸ್ ಬಂದಿದೆ.

    ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ

    ಮಲ್ಟಿಪ್ಲೆಕ್ಸ್ ಶೋಗಳಿಂದ 5 ಕೋಟಿ 63 ಲಕ್ಷ ರೂ. ತೆರಿಗೆ ಸಂಗ್ರಹವಾದರೆ, ಥಿಯೇಟರ್‍ಗಳಿಂದ 2 ಕೋಟಿ 8 ಲಕ್ಷ ರೂಪಾಯಿ ಸಂಗ್ರವಾಗಿದೆ. `ಬಾಹುಬಲಿ-ದಿ ಬಿಗಿನಿಂಗ್’ ನಿಂದ 8 ಕೋಟಿ 94 ಲಕ್ಷ ರೂಪಾಯಿ ಸಂಗ್ರವಾಗಿದ್ರೆ, `ಬಾಹುಬಲಿ – ದಿ ಕನ್‍ಕ್ಲೂಷನ್’ ನಿಂದ ಬರೋಬ್ಬರಿ 17 ಕೋಟಿ ರೂಪಾಯಿ ತೆರಿಗೆ ಕಲೆಕ್ಟ್ ಆಗಿದೆ.

    ಇದನ್ನೂ ಓದಿ: ಬಾಹುಬಲಿ ಪ್ರಭಾಸ್‍ಗೆ ವಧುಬೇಕಾಗಿದೆ!- ಈ ಅರ್ಹತೆ ನಿಮಗಿದ್ರೆ ನೀವು ಟ್ರೈ ಮಾಡಬಹುದು!

    ಇದನ್ನೂ ಓದಿ: ಬಾಹುಬಲಿ ಸಕ್ಸಸ್:  ಕೊಲ್ಲೂರು, ಬಪ್ಪನಾಡು ಕ್ಷೇತ್ರಕ್ಕೆ ಅನುಷ್ಕಾ ಶೆಟ್ಟಿ ಭೇಟಿ
    ಇದನ್ನೂ ಓದಿ: ಮಿರ್ಚಿಗೆ 5 ಕೋಟಿ, ಬಾಹುಬಲಿಗೆ 25 ಕೋಟಿ: ಈಗ ಪ್ರಭಾಸ್ ಕಾಲ್ ಶೀಟ್ ಬೇಕಾದ್ರೆ ನೀವು ಇಷ್ಟು ಕೊಡ್ಬೇಕು

  • ಬಾಹುಬಲಿ ಪ್ರಭಾಸ್‍ಗೆ ವಧುಬೇಕಾಗಿದೆ!- ಈ ಅರ್ಹತೆ ನಿಮಗಿದ್ರೆ ನೀವು ಟ್ರೈ ಮಾಡಬಹುದು!

    ಬಾಹುಬಲಿ ಪ್ರಭಾಸ್‍ಗೆ ವಧುಬೇಕಾಗಿದೆ!- ಈ ಅರ್ಹತೆ ನಿಮಗಿದ್ರೆ ನೀವು ಟ್ರೈ ಮಾಡಬಹುದು!

    ಬೆಂಗಳೂರು: ಬಾಹುಬಲಿ ಭಾಗ- 2 ರಿಲೀಸ್ ಆದ ಬಳಿಕ ಡಾರ್ಲಿಂಗ್ ಪ್ರಭಾಸ್ ಯಾವಾಗ ಮದುವೆ ಆಗ್ತಾರೆ ಅನ್ನೋದೇ ದೊಡ್ಡ ಸುದ್ದಿಯಾಗ್ಬಿಟ್ಟಿದೆ. ಇತ್ತ ಬಾಹುಬಲಿಗೊಂದು ಹುಡುಗಿ ಹುಡುಕಿಕೊಡಿ ಅಂತಾ ರಾಣಾ ದಗ್ಗುಬಾಟಿ ಮ್ಯಾಟ್ರಿಮೋನಿಯಲ್ ಜಾಹೀರಾತು ಕೊಟ್ಟಿದ್ದಾರೆ.

    36 ವರ್ಷದ ಗೌರವಾನ್ವಿತ ಕುಟುಂಬದ ಸೇನಾನಾಯಕ. ಮನೆ ಕೆಲಸದಲ್ಲಿ ಎಲ್ಲಾ ರೀತಿಯ ಸಹಾಯ ಮಾಡುತ್ತಾನೆ. ಮದುವೆಯ ಸಂಬಂಧ ಕಂಡುಬಂದರೆ ಬೆಟ್ಟವನ್ನೂ ಹತ್ತುವ ಸಮರ್ಥ. ಮೇಕ್ ಅಪ್ ಮಾಡುವುದು ಚೆನ್ನಾಗಿ ಗೊತ್ತು. ವಧುವಿಗೂ ಮೇಕ್ ಅಪ್ ಮಾಡಬಲ್ಲ ಎಂದು ಗೆಳೆಯನ ಗುಣಗಾನ ಮಾಡಿದ್ದಾರೆ.


    ವರ ಗುಡ್ಡ, ಬೆಟ್ಟ ಹತ್ತಿ ಓಡಿ ಬರುವಷ್ಟು ವಧುವಿಗೆ ಸೌಂದರ್ಯವಿರಬೇಕು. ಶತ್ರುಗಳನ್ನು ಹೊಡೆದೋಡಿಸುವ ಸೇನಾ ಸಾಮರ್ಥ್ಯವಿರಬೇಕು. ತನ್ನ ಅತ್ತೆ ವನವಾಸಕ್ಕೆ ಕಳಿಸಿದ್ರೂ ಆಕೆಯನ್ನ ಗೌರವಿಸಬೇಕು. ಮನೆಗೆಲಸದ ಜತೆಗೆ ಮಿಲಿಟರಿ ತರಬೇತಿ ಹೊಂದಿರಬೇಕು ಎಂದು ಬೇಡಿಕೆಗಳ ಪಟ್ಟಿ ಮಾಡಿದ್ದಾರೆ. ಈ ಜಾಹೀರಾತನ್ನು ರಾಣಾ 2016ರಲ್ಲೇ ಪೋಸ್ಟ್ ಮಾಡಿದ್ದಾರೆ.

    ಈ ಮೂಲಕ ಆನ್ ಸ್ಕ್ರೀನ್ ನಲ್ಲಿ ಎದುರು ಬದುರಾಗಿ ಜಿದ್ದಿಗೆ ಬಿದ್ದವರಂತೆ ನಟಿಸಿ ಪ್ರೇಕ್ಷಕರನ್ನು ಸೂರೆ ಮಾಡಿದ್ದ ಬಾಹುಬಲಿ ನಟರಾದ ಪ್ರಭಾಸ್ ಮತ್ತು ರಾಣಾ ದಗ್ಗುಬಾತಿ ಆಫ್ ಸ್ಕ್ರೀನ್ ನಲ್ಲಿ ಬೆಸ್ಟ್ ಫ್ರೆಂಡ್ಸ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಒಟ್ಟಿನಲ್ಲಿ ಸಿನಿಮಾದಲ್ಲಿ ಬಾಹುಬಲಿ ಪ್ರಭಾಸ್ ಪತ್ನಿಯ ಮೇಲೆ ಕಣ್ಣು ಹಾಕಿದ್ದ ರಾಣಾ ನಿಜ ಜೀವನದಲ್ಲಿ ಪ್ರಭಾಸ್ ಗೊಂದು ಹೆಣ್ಣು ಕೊಡಿ ಎಂದು ಟ್ವಿಟರ್ ನಲ್ಲಿ ತಮಾಷೆಯ ಜಾಹೀರಾತು ನೀಡಿರುವುದನ್ನು ಓದಿ ಅಭಿಮಾನಿಗಳು ನಗುತ್ತಿದ್ದಾರೆ.

  • ಬಾಹುಬಲಿ ಸಕ್ಸಸ್: ನಿನ್ನೆ ಕೊಲ್ಲೂರು, ಇಂದು ಬಪ್ಪನಾಡು ಕ್ಷೇತ್ರಕ್ಕೆ ಅನುಷ್ಕಾ ಶೆಟ್ಟಿ ಭೇಟಿ

    ಬಾಹುಬಲಿ ಸಕ್ಸಸ್: ನಿನ್ನೆ ಕೊಲ್ಲೂರು, ಇಂದು ಬಪ್ಪನಾಡು ಕ್ಷೇತ್ರಕ್ಕೆ ಅನುಷ್ಕಾ ಶೆಟ್ಟಿ ಭೇಟಿ

    ಮಂಗಳೂರು: ಟಾಲಿವುಡ್ ಬೆಡಗಿ ಅನುಷ್ಕಾ ಶೆಟ್ಟಿ ಇಂದು ಮಂಗಳೂರಿನ ಮೂಲ್ಕಿಯಲ್ಲಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ಅನುಷ್ಕಾ ಶೆಟ್ಟಿ ಜೊತೆ ತಾಯಿ, ಸಹೋದರ ಹಾಗು ಉದ್ಯಮಿ ಮುತ್ತಪ್ಪ ರೈ ದಂಪತಿ ಸಾಥ್ ನೀಡಿದ್ದು, ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

    ಬಾಹುಬಲಿ ಸಿನಿಮಾದ ಯಶಸ್ಸಿನ ನಂತರ ನಿನ್ನೆ ಕೊಲ್ಲೂರಿಗೆ ಭೇಟಿ ನೀಡಿದ್ದೆವು. ಹೋಗುವಾಗ ಬಪ್ಪನಾಡು ತಾಯಿಯ ದರ್ಶನ ಪಡೆಯಲು ಬಂದಿದ್ದೇವೆ ಎಂದು ಅನುಷ್ಕಾ ಶೆಟ್ಟಿ ಹೇಳಿದರು.

    ಶುಕ್ರವಾರ ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೂ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಯಾವ ಮುನ್ಸೂಚನೆಯೂ ನೀಡದೇ ಕೊಲ್ಲೂರಿಗೆ ಭೇಟಿ ನೀಡಿದ್ದ ಅನುಷ್ಕಾ ಸಾಮನ್ಯ ಜನರಂತೆ ಸರತಿ ಸಾಲಿನಲ್ಲಿ ನಿಂತು ತಾಯಿ ಮುಕಾಂಭಿಕೆಯ ದರ್ಶನ ಪಡೆದಿದ್ದರು. ಬಾಹುಬಲಿ ಸಿನಿಮಾ ಯಶಸ್ಸಿನ ನಂತರ ನಾಡಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

    https://www.youtube.com/watch?v=ewO7vD8euaw

     

    https://www.youtube.com/watch?v=98Lv8rjXlFI

     

  • ಬಾಹುಬಲಿ ಸಕ್ಸಸ್: ಕೊಲ್ಲೂರು ದೇವಾಲಯಕ್ಕೆ ಅನುಷ್ಕಾ ಶೆಟ್ಟಿ ಭೇಟಿ

    ಬಾಹುಬಲಿ ಸಕ್ಸಸ್: ಕೊಲ್ಲೂರು ದೇವಾಲಯಕ್ಕೆ ಅನುಷ್ಕಾ ಶೆಟ್ಟಿ ಭೇಟಿ

    ಉಡುಪಿ:ಖ್ಯಾತ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ದೇವಾಲಯದ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡದೇ ದಿಢೀರ್ ಆಗಿ ಶುಕ್ರವಾರ ಸಂಜೆ ವೇಳೆ ಅನುಷ್ಕಾ ಶೆಟ್ಟಿ ತಮ್ಮ ಸಂಬಂಧಿಕರ ಜೊತೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.

    ಅನುಷ್ಕಾ ಶೆಟ್ಟಿ ಜೊತೆ ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಕುಟುಂಬವೂ ಇತ್ತು. ರೈ ಅಪ್ತ ಸಂಬಂಧಿಕರ ಜೊತೆ ಅನುಷ್ಕಾ ಸಾರ್ವಜನಿಕರ ಜೊತೆ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದು ವಿಶೇಷವಾಗಿತ್ತು.

    ಬಾಹುಬಲಿ- 2 ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅನುಷ್ಕಾ ಶೆಟ್ಟಿ ಕೊಲ್ಲೂರಿಗೆ ಭೇಟಿ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಬಾಹುಬಲಿ- 1 ರಿಲೀಸ್ ಸಂದರ್ಭದಲ್ಲಿ ಕೂಡಾ ಅನುಷ್ಕಾ ಶೆಟ್ಟಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದರು.

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಇಒ ಕೃಷ್ಣಮೂರ್ತಿ, ಕೊಲ್ಲೂರಿನ ಅರ್ಚಕರು ಉಪಸ್ಥಿತರಿದ್ದು ನಟಿಗೆ ಗೌರವ ಸಲ್ಲಿಸಿದರು.

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ಇದನ್ನೂ ಓದಿ: 19 ದಿನದಲ್ಲಿ ಬಾಹುಬಲಿಯ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ತಲುಪಿದೆ ಗೊತ್ತಾ?

    https://www.youtube.com/watch?v=98Lv8rjXlFI

  • ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ಬೆಂಗಳೂರು: ಬಾಹುಬಲಿಯಲ್ಲಿ ದೇವಸೇನಾ ಪಾತ್ರದಲ್ಲಿ ಅಭಿನಯಿಸಿ ವೀಕ್ಷಕರ ಮೆಚ್ಚುಗೆ ಪಾತ್ರವಾಗಿರುವ ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ ಕನ್ನಡ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

    ಕನ್ನಡ ಸಿನಿಮಾದಲ್ಲಿ ನೀವು ನಟಿಸ್ತಾರ ಅಭಿಮಾನಿಯೊಬ್ಬರ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಅನುಷ್ಕಾ ಶೆಟ್ಟಿ ಸ್ಕ್ರಿಪ್ಟ್ ಚೆನ್ನಾಗಿದ್ದರೆ ಖಂಡಿತ ನಟಿಸುತ್ತೇನೆ ಎಂದು ಹೇಳಿದ್ದಾರೆ.

    ಬಾಹುಬಲಿ ಚಿತ್ರದ ತಂಡದ ಜೊತೆ ಅಭಿಮಾನಿಗಳ ಪ್ರಶ್ನೆಗೆ ಅನುಷ್ಕಾ ಶೆಟ್ಟಿ, ಪ್ರಭಾಸ್, ರಾಣಾ ದಗ್ಗುಬಾಟಿ ಮತ್ತು ತಮನ್ನಾ ಭಟಿಯಾ ಉತ್ತರಿಸುತ್ತಿದ್ದರು. ಆನ್‍ಲೈನ್ ನಲ್ಲಿ ತಮ್ಮ ನೆಚ್ಚಿನ ನಟರಿಗೆ ಬಾಹುಬಲಿ ಸಿನಿಮಾದ ಕುರಿತಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಅನುಷ್ಕಾ ಕನ್ನಡದಲ್ಲಿ ಈ ಮೇಲಿನಂತೆ ಉತ್ತರಿಸಿದ್ದಾರೆ.

    ಮೂಲತಃ ಕನ್ನಡ ಕರಾವಳಿಯ ಹುಡುಗಿಯಾಗಿರುವ ಅನುಷ್ಕಾ ಹುಟ್ಟಿ ಬೆಳದಿದ್ದು ಬೆಂಗಳೂರು ಮಹಾನಗರದಲ್ಲಿ. ಹಾಗಾಗಿ ಅನುಷ್ಕಾ ಶೆಟ್ಟಿಯವರ ಅಭಿಮಾನಿಗಳುನ ಕನ್ನಡ ಸಿನಿಮಾಗಳಲ್ಲಿ ನೋಡಲು ಕಾತುರರಾಗಿದ್ದಾರೆ. ಅನುಷ್ಕಾ ಟಾಲಿವುಡ್‍ನಲ್ಲಿ ಬೇಡಿಕೆಯ ನಟಿಯಾಗಿದ್ದು ಪೌರಾಣಿಕ, ಗ್ಲ್ಯಾಮರ್ ಸಿನಿಮಾಗಳಲ್ಲಿ ನಟಿಸಿರುವ ಇವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅರುಂಧತಿ, ಮಿರ್ಚಿ, ಬಾಹುಬಲಿ, ರುದ್ರಮಾದೇವಿ, ಜೀರೋ ಸೈಜ್ ಮುಂತಾದ ಹಿಟ್ ಚಿತ್ರಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.

    ಈ ವೀಡಿಯೋ 2015 ರಲ್ಲಿ ಅಪ್ಲೋಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಸ್ತುತ ಬಾಹುಬಲಿ- ದಿ ಕನ್‍ಕ್ಲೂಷನ್ ಸಿನಿಮಾ ತೆರೆಕಂಡಿದ್ದು, ಭಾರತೀಯ ಸಿನಿಮಾ ರಂಗದ ದಾಖಲೆಗಳನ್ನು ಮುರಿದು 1 ಸಾವಿರ ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ.

     

     

     

  • ಮೊದಲ ದಿನವೇ ನೂರು ಕೋಟಿ ಬಾಚಿದ ಬಾಹುಬಲಿ: ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್? ಉಳಿದ ಕಡೆ ಎಷ್ಟು?

    ಮೊದಲ ದಿನವೇ ನೂರು ಕೋಟಿ ಬಾಚಿದ ಬಾಹುಬಲಿ: ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್? ಉಳಿದ ಕಡೆ ಎಷ್ಟು?

    ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ 2 ಎಲ್ಲ ಕಲೆಕ್ಷನ್ ದಾಖಲೆಯನ್ನು ಪುಡಿಮಾಡಿದೆ. ಶುಕ್ರವಾರ ಒಂದೇ ದಿನ ಭಾರತದಲ್ಲೇ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಇಂಡಿಯಾ ವರದಿ ಮಾಡಿದೆ.

    ಭಾರತದಲ್ಲಿ 6,500 ಸ್ಕ್ರೀನ್, ವಿಶ್ವದಲ್ಲೆಡೆ ಸೇರಿ ಒಟ್ಟು 9 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಾಹುಬಲಿ ಪ್ರದರ್ಶನ ಕಾಣುತ್ತಿದ್ದು ಮೊದಲ ದಿನವೇ 100 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ.

    ಹಿಂದಿಗೆ ಡಬ್ ಆಗಿರುವ ಬಾಹುಬಲಿ 35 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಬಾಲಿವುಡ್ ಫಿಲ್ಮ್ ಗಳನ್ನು ದಾಖಲೆಯನ್ನು ಬ್ರೇಕ್ ಮಾಡಿದೆ.

    ಎಲ್ಲಿ ಎಷ್ಟು?
    ಹಿಂದಿ – 35 ಕೋಟಿ ರೂ.
    ನಿಜಾಮ್/ ಆಂಧ್ರ -45 ಕೋಟಿ ರೂ.
    ತಮಿಳುನಾಡು – 14 ಕೋಟಿ ರೂ.
    ಕರ್ನಾಟಕ – 10 ಕೋಟಿ ರೂ.
    ಕೇರಳ – 4 ಕೋಟಿ ರೂ.
    ಒಟ್ಟು – 108 ಕೋಟಿ. ರೂ.

    ಇಲ್ಲಿ ಸಿಕ್ಕಿರುವ ಮಾಹಿತಿ ಪೂರ್ಣ ಮಾಹಿತಿ ಅಲ್ಲ. ಎಲ್ಲ ಲೆಕ್ಕವನ್ನು ಹಾಕಿದ್ರೆ ಮೊದಲ ದಿನವೇ ಅಂದಾಜು 120 ಕೋಟಿ ರೂ.ಗಳಿಸಬಹುದು ಎಂದು ಬಾಕ್ಸ್ ಆಫೀಸ್ ಇಂಡಿಯಾ ಹೇಳಿದೆ. ಇದು ಭಾರತದ ಲೆಕ್ಕಾಚಾರ. ವಿದೇಶದಲ್ಲಿ ಎಷ್ಟು ಕಲೆಕ್ಷನ್ ಆಗಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ.

    ಸಾಧಾರಣವಾಗಿ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಹಬ್ಬಗಳ ದಿನ ಬಿಡುಗಡೆಯಾಗುತ್ತದೆ. ಆದರೆ ಬಾಹುಬಲಿ ಯಾವುದೇ ಹಬ್ಬದ ದಿನ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲದೇ ಈ ವಾರ ದೊಡ್ಡ ಸ್ಟಾರ್‍ಗಳ ಯಾವೊಂದು ಫಿಲ್ಮ್ ರಿಲೀಸ್ ಆಗಿಲ್ಲ. ಹೀಗಾಗಿ ಶುಕ್ರವಾರ ಒಂದೇ ದಿನ ಇಷ್ಟು ಸಂಗ್ರಹಿಸಿದರೆ ಶನಿವಾರ, ಭಾನುವಾರ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಇದರ ಜೊತೆಗೆ ಸೋಮವಾರವೂ ಕಾರ್ಮಿಕರ ದಿನಾಚರಣೆಗೆ ರಜೆ ಇರುವ ಕಾರಣ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಮಾರುಕಟ್ಟೆ ವಿಶ್ಲೇಷಕರು ಬಾಹುಬಲಿ ಮೊದಲ ದಿನ 100 ಕೋಟಿ ರೂ. ಕಲೆಕ್ಷನ್, ವಾರಾಂತ್ಯಕ್ಕೆ ಒಟ್ಟು 300-350 ರೂ. ಕಲೆಕ್ಷನ್ ಮಾಡಬಹುದು. ಮೊದಲ ವಾರದಲ್ಲಿ ಒಟ್ಟು 500 ಕೋಟಿ ರೂ. ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಿದ್ದಾರೆ.

    ಶುಕ್ರವಾರವೇ ಚಿತ್ರ ಬಿಡುಗಡೆಯಾದರೂ ಭಾರತದ ಮಹಾನಗರಗಳಲ್ಲಿ ಗುರುವಾರ ರಾತ್ರಿಯೇ ಬಾಹುಬಲಿ ರಿಲೀಸ್ ಆಗಿತ್ತು. ಅಮೆರಿಕದಲ್ಲಿ ಅತಿಹೆಚ್ಚು ಸಂಖ್ಯೆಯ ಸ್ಕ್ರೀನ್ ನಲ್ಲಿ ರಿಲೀಸ್ ಆಗಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಗೆ ಬಾಹುಬಲಿ ಪಾತ್ರವಾಗಿದ್ದು, ಮಾಹಿತಿಗಳ ಪ್ರಕಾರ ತಮಿಳು, ತೆಲುಗು, ಹಿಂದಿ ಸೇರಿ ಒಟ್ಟು 1,100 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದೆ. ಕೆನಡಾದಲ್ಲಿ 80ಕ್ಕೂ ಹೆಚ್ಚು ಸ್ಥಳಗಳಲ್ಲಿ 150 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಲಿದೆ. ಐ ಮ್ಯಾಕ್ಸ್ ಮಾದರಿಯಲ್ಲೂ ಬಾಹುಬಲಿ ಬಂದಿದ್ದು, ಈ ಮಾದರಿಯ ಫಿಲ್ಮ್ ಗಳು 40-45 ಸ್ಥಳಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಮೆರಿಕ, ಕೆನಡದಲ್ಲಿ ವಿತರಣೆ ಹಕ್ಕು ಪಡೆದಿರುವ ಗ್ರೇಟ್ ಇಂಡಿಯಾ ಫಿಲ್ಮ್ ಸಂಸ್ಥೆ ತಿಳಿಸಿತ್ತು.

    ಹಿಂದಿ ಭಾಷೆಯಲ್ಲಿರುವ ಬಾಹುಬಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಫಿಜಿಯಲ್ಲಿ ಬಿಡುಗಡೆಯಾಗಿದ್ದರೆ, ಮಲೇಷ್ಯಾದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ತಮಿಳು ಡಬ್ ಆವೃತ್ತಿ ಬಿಡುಗಡೆಯಾಗಿದೆ.

    2015 ಜುಲೈ 10 ರಂದು 4 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ `ಬಾಹುಬಲಿ ದಿ ಬಿಗ್‍ನಿಂಗ್’ ಬಿಡುಗಡೆಯಾಗಿತ್ತು. 180 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣಗೊಂಡಿದ್ದ ಈ ಫಿಲ್ಮ್ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಈ ಮೂಲಕ ಬಾಲಿವುಡ್ ಹೊರತು ಪಡಿಸಿ ಅತಿಹೆಚ್ಚು ಹಣವನ್ನು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕಗೆ ಪಾತ್ರವಾಗಿದೆ. ಬಾಹುಬಲಿ1 ಮೊದಲ ದಿನ 50.5 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

    ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವೀಕ್ಷಣೆಯಾದ ಟ್ರೇಲರ್ ಎಂಬ ದಾಖಲೆಯನ್ನು ಬಾಹುಬಲಿ ಬರೆದಿದಿದೆ. ಬಿಡುಗಡೆಯಾದ 6 ಗಂಟೆಯಲ್ಲಿ 4 ಭಾಷೆಯಲ್ಲಿರುವ ಟ್ರೇಲರ್ 1 ಕೋಟಿ ವೀಕ್ಷಣೆ ಕಂಡರೆ, 24 ಗಂಟೆಯಲ್ಲಿ 2.5 ಕೋಟಿ ವ್ಯೂ ಕಂಡಿತ್ತು.

    ಕರ್ನಾಟಕ ಬಜೆಟ್ ನಲ್ಲಿ ಘೋಷಣೆಯಾಗಿರುವಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂ. ಆಗಬೇಕಿತ್ತು. ಆದರೆ ಈ ಘೋಷಣೆ ಇನ್ನು ಅನುಷ್ಠಾನಕ್ಕೆ ಬಂದಿಲ್ಲ. ಹೀಗಾಗಿ ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಮಾಲೀಕರು ತಮಗೆ ಇಷ್ಟ ಬಂದ ದರವನ್ನು ಫಿಕ್ಸ್ ಮಾಡಿದ್ದು, ಬಾಹುಬಲಿಯ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚಾಗಲು ಸಹಕಾರಿಯಾಗಿದೆ.

    ಇದನ್ನೂ ಓದಿ: ಬೆಂಗ್ಳೂರಿನಲ್ಲಿ 1200 ರೂ, ಆಂಧ್ರದಲ್ಲಿ ಬಾಹುಬಲಿ-2 ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರ

    ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?

    ಇದನ್ನೂ ಓದಿ: ಕಲ್ಪನಾ ಲೋಕಕ್ಕೆ ಹೊಸ ಭಾಷ್ಯ ಬರೆದ ಬಾಹುಬಲಿ-2 ಚಿತ್ರದ ಫಸ್ಟ್ ರಿಪೋರ್ಟ್ 

    ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ