Tag: anushka shetty

  • ಕೊತ್ತಲವಾಡಿ ನಿರ್ದೇಶಕರ ಜೊತೆಗೆ ಪುಷ್ಪಮ್ಮ ಮತ್ತೊಂದು ಸಿನಿಮಾ

    ಕೊತ್ತಲವಾಡಿ ನಿರ್ದೇಶಕರ ಜೊತೆಗೆ ಪುಷ್ಪಮ್ಮ ಮತ್ತೊಂದು ಸಿನಿಮಾ

    ಕೊತ್ತಲವಾಡಿ (Kottavaldi) ಸಿನಿಮಾ ನಿರ್ಮಾಣ ಮಾಡುವ ಮೂಲಕ ಗಾಂಧಿನಗರಕ್ಕೆ ಪಾದಾರ್ಪಣೆ ಮಾಡಿದ್ದ ಯಶ್ (Yash) ತಾಯಿ ನಿರ್ಮಾಪಕಿ ಪುಷ್ಪ ಅರುಣ್‌ಕುಮಾರ್ (Pushpa Arunkumar) ಮತ್ತೊಂದು ಸಿನಿಮಾವನ್ನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ತಮ್ಮ ಮೊದಲ ಸಿನಿಮಾ ಕೊತ್ತಲವಾಡಿ ಕಳೆದ ಆಗಸ್ಟ್‌ನಲ್ಲಿ ತೆರೆಕಂಡಿತ್ತು. ಬಳಿಕ ಅನುಷ್ಕಾ ಶೆಟ್ಟಿ (Anushka Shetty) ನಟನೆಯ ಘಾಟಿ ತೆಲುಗು ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದ್ದರು.

    ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ತಮ್ಮ ಕೊತ್ತಲವಾಡಿ ಸಿನಿಮಾ ರಿಲೀಸ್ ವೇಳೆ ಹಲವಾರು ಸಮಸ್ಯೆಗಳನ್ನ ಎದುರಿಸಿದ್ದರು. ಅಂದು ಎದುರಿಸಿದ ಸಮಸ್ಯೆಗಳೇ ಅವರು ಸಿನಿಮಾ ವಿತರಣೆ ಮಾಡಲು ಮುಂದಾಗುವಂತೆ ಮಾಡಿತ್ತು. ಇದೀಗ ಆ ಸಿನಿಮಾ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಕಾಣದಿದ್ದರೂ ಛಲಬಿಡದೇ ಮತ್ತೊಂದು ಸಿನಿಮಾವನ್ನ ಅನೌನ್ಸ್ ಮಾಡಿದ್ದಾರೆ. ಅಂದಹಾಗೆ ಕೊತ್ತಲವಾಡಿ ಸಿನಿಮಾದ ನಿರ್ದೇಶಕರಾದ ಶ್ರೀರಾಜ್ ಜೊತೆ ಚಿತ್ರವನ್ನ ಮಾಡುವುದಾಗಿ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ವಿಯೆಟ್ನಾಂ ಬೀದಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ ರೀಲ್ಸ್ ರಾಣಿ ಕಂಬನಿಗೆ ಕಾರಣವೇನು?

     

    ವಿಜಯ ದಶಮಿಯ ಹಬ್ಬದ ಶುಭ ದಿನದಂದು ಶುಭ ಸುದ್ದಿಯನ್ನ ಕೊಟ್ಟಿದ್ದಾರೆ ಯಶ್ ತಾಯಿ. ಮೊದಲ ಸಿನಿಮಾಗಿಂತಲೂ ವಿಭಿನ್ನವಾದ ಕಥೆಯನ್ನ ಈ ಬಾರಿ ನಿರ್ಮಾಣ ಮಾಡಲಿದ್ದಾರಂತೆ ಪುಷ್ಪಮ್ಮ. ಈ ಸಿನಿಮಾದ ಟೈಟಲ್ ಏನು? ಸಿನಿಮಾದ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಬಗ್ಗೆ ಮಾಹಿತಿಯನ್ನ ಸದ್ಯದಲ್ಲೇ ಹಂಚಿಕೊಳ್ಳಲಿದ್ದಾರಂತೆ. ಇದನ್ನೂ ಓದಿ:  ಕಾಂತಾರ ದೃಶ್ಯ ವೈಭೋಗ ಕಣ್ತುಂಬಿಕೊಂಡ ಪ್ರೇಕ್ಷಕರು ಹೇಳಿದ್ದೇನು?

  • ಪತ್ರ ಬರೆದು ಅಭಿಮಾನಿಗಳಿಗೆ ಶಾಕ್ ಕೊಟ್ಟ ಅನುಷ್ಕಾ ಶೆಟ್ಟಿ!

    ಪತ್ರ ಬರೆದು ಅಭಿಮಾನಿಗಳಿಗೆ ಶಾಕ್ ಕೊಟ್ಟ ಅನುಷ್ಕಾ ಶೆಟ್ಟಿ!

    ತ್ತೀಚೆಗಷ್ಟೇ ಘಾಟಿ ಸಿನಿಮಾದ (Ghaati Movie) ಮೂಲಕ ಸೌಂಡ್ ಮಾಡಿದ್ದ ಅನುಷ್ಕಾ ಶೆಟ್ಟಿ (Anushka Shetty) ಇದೀಗ ಸೋಶಿಯಲ್ ಮೀಡಿಯಾ ಫಾಲೋವರ್ಸ್‍ಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಿಂದ (Social Media) ದೂರಾಗುವ ಬಗ್ಗೆ ಹ್ಯಾಂಡ್‍ರೈಟ್ ಲೆಟರ್ ಬರೆದಿದ್ದು, ಕಾರಣ ಏನು ಅನ್ನೋದನ್ನೂ ಅವರೇ ಹಂಚಿಕೊಂಡಿದ್ದಾರೆ.

    ಬೇರೆ ನಟಿಯರಿಗೆ ಹೋಲಿಸಿದರೆ ಅನುಷ್ಕಾ ಶೆಟ್ಟಿ ಸೋಶಿಯಲ್ ಮೀಡಿಯಾಗಳಿಂದ ಅಂತರ ಕಾಯ್ದುಕೊಂಡೇ ಬಂದವರು. ಸಿನಿಮಾಗೆ ಸಂಬಂಧಪಟ್ಟ ಮಾಹಿತಿಯನ್ನಷ್ಟೇ ಆಗಾಗ ಹಂಚಿಕೊಳ್ಳುತ್ತಿದ್ದರು. ವೈಯಕ್ತಿಕ ಪೋಸ್ಟ್ ಹಾಕುವುದು ವಿರಳಾತಿವಿರಳ. ಇದೀಗ ಸೋಶಿಯಲ್ ಮೀಡಿಯಾದಿಂದ ದೂರಾಗುವ ಕುರಿತು ಮಾಹಿತಿ ಹಂಚಿಕೊಂಡಿರುವ ಅನುಷ್ಕಾ “ಸೋಶಿಯಲ್ ಮೀಡಿಯಾದಿಂದ ಸ್ವಲ್ಪ ದೂರ ಸರಿಯುತ್ತಿದ್ದೇನೆ. ಮೊಬೈಲ್ ಸ್ಕ್ರೋಲಿಂಗ್ ಹೊರತಾಗಿಯೂ ಜಗತ್ತಿನ ಜೊತೆ ಸಂಪರ್ಕ ಸಾಧಿಸಬೇಕಾಗಿದೆ.” ಶೀಘ್ರದಲ್ಲೇ ಮತ್ತೆ ನಿಮ್ಮೊಂದಿಗೆ ಸೇರಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಸೊಸೆಗೆ ವರದಕ್ಷಿಣೆ ಕಿರುಕುಳ ಆರೋಪ – ಎಸ್.ನಾರಾಯಣ್, ಪತ್ನಿ, ಪುತ್ರನಿಗೆ ನೋಟಿಸ್

    ಸಾಮಾನ್ಯವಾಗಿ ಅನುಷ್ಕಾ ಸಿನಿಮಾದ ಹೊರತಾಗಿ ಹೆಚ್ಚು ಸುದ್ದಿಯಾಗೋದಿಲ್ಲ. ಇದೀಗ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದೂ ಅಪರೂಪವಾಗಿದೆ. ಮತ್ತೆ ಪ್ರಭಾಸ್ ಜೊತೆ ಜೋಡಿಯಾಗಿ ನಟಿಸುವ ಸುದ್ದಿ ಕೇಳಿಬರುತ್ತಿದೆ. ಆದರೆ ಅಂಥಹ ಯಾವ ಪ್ರಾಜೆಕ್ಟ್ ಕೂಡ ಮುನ್ನಲೆಗೆ ಬಂದಿಲ್ಲ. ಇದೀಗ ಸೋಶಿಯಲ್ ಮೀಡಿಯಾದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುವ ನಿರ್ಧಾರವನ್ನು ಅವರು ಘೋಷಿಸಿದ್ದಾರೆ. ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

  • ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಪ್ರಭಾಸ್-ಅನುಷ್ಕಾ

    ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಪ್ರಭಾಸ್-ಅನುಷ್ಕಾ

    ಟಾಲಿವುಡ್‌ನ ಹಿಟ್ ಜೋಡಿ ಪ್ರಭಾಸ್ (Prabhas) ಹಾಗೂ ಅನುಷ್ಕಾ (Anushka Shetty) ಒಟ್ಟಿಗೆ ನಾಲ್ಕೈದು ಸಿನಿಮಾ ಮಾಡಿದೆ. ಕೆಲ ವರ್ಷಗಳ ಹಿಂದೆ ಈ ಜೋಡಿ ಬಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಇಬ್ಬರೂ ಮದುವೆ ಆಗುತ್ತಾರೆ, ರಿಲೇಷನ್‌ಶಿಪ್‌ನಲ್ಲಿದ್ದಾರೆ ಅಂತೆಲ್ಲಾ ಇಬ್ಬರ ಮಧ್ಯೆ ಒಂದಲ್ಲಾ ಎರಡಲ್ಲಾ ನೂರಾರು ಕಥೆಗಳು ಹುಟ್ಟಿಕೊಂಡಿದ್ದವು. ಆದ್ರೆ ಇಲ್ಲಿಯವರೆಗೂ ಇಬ್ಬರೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಅದರ ಜೊತೆಗೆ ಇಬ್ಬರೂ ಅಂತಹ ಸುದ್ದಿಗಳನ್ನ ನಿರಾಕರಿಸುತ್ತಲೇ ಬಂದಿದ್ದಾರೆ. ಇದೀಗ ಬರೋಬ್ಬರಿ 8 ವರ್ಷಗಳ ನಂತರ ಮತ್ತೆ ಈ ಜೋಡಿ ಒಂದಾಗುತ್ತಿದೆ.

    ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇದೀಗ 8 ವರ್ಷಗಳ ಬಳಿಕ ಒಂದಾಗುತ್ತಿರುವ ಕಾರಣ ಬೇರೆಯೇ ಇದೆ. ಹಾಗಂತ ಸಿನಿಮಾ ಮಾಡುತ್ತಿದ್ದಾರೆ ಅಂದುಕೊಳ್ಳಬೇಡಿ. ಅಥವಾ ಮದುವೆಯಾಗುತ್ತಿದ್ದಾರೆ ಅಂತಾನೂ ಭಾವಿಸಬೇಡಿ. ಅಸಲಿಗೆ ಇಬ್ಬರೂ ಸಿನಿಮಾದ ಪ್ರಚಾರಕ್ಕಾಗಿ ಸಂದರ್ಶವೊಂದರಲ್ಲಿ ಒಂದಾಗ್ತಿದ್ದಾರಂತೆ. ಹೌದು, ಬಾಹುಬಲಿ ಸಿನಿಮಾ 8 ವರ್ಷಗಳ ಬಳಿಕ ರೀ-ರಿಲೀಸ್ ಆಗ್ತಿದೆ. ಹೀಗಾಗಿ ಈ ಸಿನಿಮಾದ ಪ್ರಚಾರಕ್ಕಾಗಿ ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ, ನಿರ್ದೇಶಕ ರಾಜಮೌಳಿ ಸೇರಿದಂತೆ ಎಲ್ಲರೂ ಭಾಗಿಯಾಗಲಿದ್ದಾರಂತೆ.

    ಈ ಸಂದರ್ಶನ ನಾರ್ಮಲ್ ಆಗಿರದೇ ಸಖತ್ ಕಾಮಿಡಿ ಹಾಗೂ ಫುಲ್ ಆಫ್ ಮಸ್ತಿಯಿಂದ ಕೂಡಿರಲಿದ್ದು, ಸದ್ಯದಲ್ಲಿಯೇ ಶೂಟಿಂಗ್ ನಡೆಯಲಿದೆಯಂತೆ. ಈ ಇಂಟರ್‌ವೀವ್ ಅಕ್ಟೋಬರ್ ತಿಂಗಳಿನಲ್ಲಿ ಯೂಟ್ಯೂಬ್ ಹಾಗೂ ಟಿವಿಯಲ್ಲಿ ಪ್ರಸಾರವಾಗಲಿದೆಯಂತೆ. ಅಂದಹಾಗೆ ಅಕ್ಟೋಬರ್‌ನಲ್ಲೇ ಬಾಹುಬಲಿ ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ. ಈ ಸುದ್ದಿ ಕೇಳಿ ಪ್ರಭಾಸ್ ಹಾಗೂ ಅನುಷ್ಕಾ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

  • ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಬ್ಯುಸಿ

    ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಬ್ಯುಸಿ

    ಕುಡ್ಲದ ಬೆಡಗಿ ಅನುಷ್ಕಾ ಶೆಟ್ಟಿ ಅವರು ಬರೋಬ್ಬರಿ 7 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಾವೆಲ್ಲಾ ಸಿನಿಮಾಗಳು ನಟಿಯ ಕೈಯಲ್ಲಿವೆ ಎಂಬುದರ ಮಾಹಿತಿ ಇಲ್ಲಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಶ್ರುತಿ ಹಾಸನ್?

    ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ಅದ್ಭುತ ನಟಿ ಅನುಷ್ಕಾ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಬಾಹುಬಲಿ, ಅರುಂಧತಿ ಅಂತಹ ಸಿನಿಮಾಗಳೇ ಸಾಕ್ಷಿ. ಹಾಗಾಗಿ ಇದೇ ರೀತಿಯ ವಿಭಿನ್ನ ಎಂದೆಸಿದ ಸಿನಿಮಾಗಳಿಗೆ ನಟಿ ಓಕೆ ಎಂದಿದ್ದಾರೆ. ಬರೋಬ್ಬರಿ ಅರ್ಧ ಡಜನ್ ಸಿನಿಮಾ ಅನುಷ್ಕಾ ಕೈಯಲ್ಲಿವೆ. ಇದನ್ನೂ ಓದಿ:ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿ ಶೋಭಾ ಶೆಟ್ಟಿ

    ‘ಘಾಟಿ’ ಸಿನಿಮಾ, ಮತ್ತೊಂದು ಮಲಯಾಳಂನ ‘ಕಥನಾರ್’ ಚಿತ್ರದ ರಿಲೀಸ್‌ಗೆ ಸಜ್ಜಾಗಿದೆ. ತೆಲುಗಿನಲ್ಲಿ 3 ಸಿನಿಮಾ, ತಮಿಳಿನಲ್ಲಿ 2 ಸಿನಿಮಾ, ಮಲಯಾಳಂನ 2 ಚಿತ್ರಗಳಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಪೈಕಿ ಒಂದು ಪ್ರಾಜೆಕ್ಟ್‌ನಲ್ಲಿ ಪ್ರಭಾಸ್ ಜೊತೆ ಮತ್ತೊಮ್ಮೆ ಸ್ವೀಟಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಜೋಡಿಯ ಸಿನಿಮಾಗೆ ಪ್ರತಿಷ್ಠಿತ ಸಂಸ್ಥೆಯೊಂದು ನಿರ್ಮಾಣಕ್ಕೆ ಸಾಥ್ ಕೊಟ್ಟಿದೆ ಎಂದು ಹೇಳಲಾಗ್ತಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಸಿಗಲಿದೆಯಂತೆ. ಈ ಬಗ್ಗೆ ಚಿತ್ರತಂಡ ಸ್ಪಷ್ಟಪಡಿಸುವವರೆಗೂ ಕಾದುನೋಡಬೇಕಿದೆ.

    ಕಡೆಯದಾಗಿ 2023ರಲ್ಲಿ ತೆರೆಕಂಡ ‘ಮಿಸ್‌ ಶೆಟ್ಟಿ ಮಿಸ್ಟರ್‌ ಪೋಲಿಶೆಟ್ಟಿ’ ಚಿತ್ರದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. ಈಗ ಬ್ಯಾಕ್‌ ಟು ಬ್ಯಾಕ್‌ 7 ಚಿತ್ರಗಳು ಒಪ್ಪಿಕೊಂಡಿದ್ದಾರೆ ಎಂದು ಕೇಳಿ ನಟಿಯ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

  • ಮಧೂರು ದೇಗುಲದಲ್ಲಿ ಅನುಷ್ಕಾ ಶೆಟ್ಟಿಯಿಂದ ಅಷ್ಟ ದ್ರವ್ಯ ಮಹಾಗಣಪತಿ ಯಾಗ

    ಮಧೂರು ದೇಗುಲದಲ್ಲಿ ಅನುಷ್ಕಾ ಶೆಟ್ಟಿಯಿಂದ ಅಷ್ಟ ದ್ರವ್ಯ ಮಹಾಗಣಪತಿ ಯಾಗ

    ನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ಅವರು ಕಾಸರಗೋಡಿನ ಮಧೂರು ಮದನಂತೇಶ್ವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟ ದ್ರವ್ಯ ಮಹಾಗಣಪತಿ ನೆರವೇರಿಸಿದ್ದಾರೆ. ಇದನ್ನೂ ಓದಿ:ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, 5 ತಿಂಗಳಲ್ಲಿ ಪರಿಹಾರ: ರಿಷಬ್‌ಗೆ ಪಂಜುರ್ಲಿ ಅಭಯ

    ಕಾಸರಗೋಡಿನ ಮಧೂರು ಮದನಂತೇಶ್ವರ ಶ್ರೀ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಈ ಹಿನ್ನೆಲೆ ಸಿದ್ಧಿವಿನಾಯಕನಿಗೆ ಅನುಷ್ಕಾ ಶೆಟ್ಟಿ ಅವರು ಅಷ್ಟ ದ್ರವ್ಯ ಮಹಾಗಣಪತಿ ಯಾಗ ನೆರವೇರಿಸಿದ್ದಾರೆ. ಕಾರಣಾಂತರಗಳಿಂದ ಪೂಜೆಗೆ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆ ಅನುಷ್ಕಾ ತಮ್ಮ ಹೆಸರಿನಲ್ಲಿ 128 ತೆಂಗಿನಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ನೆರವೇರಿಸಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಗಿಣಿ ದ್ವಿವೇದಿ

    ಅಂದಹಾಗೆ, ಅನುಷ್ಕಾ ನಟನೆಯ ಘಾಟಿ ಮತ್ತು ಮಲಯಾಳಂ ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ.

  • ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ಡಬಲ್ ಧಮಾಕ- ‘ಘಾಟಿ’ ಚಿತ್ರದ ಫಸ್ಟ್ ಲುಕ್ ಔಟ್

    ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ಡಬಲ್ ಧಮಾಕ- ‘ಘಾಟಿ’ ಚಿತ್ರದ ಫಸ್ಟ್ ಲುಕ್ ಔಟ್

    ಕುಡ್ಲದ ಬೆಡಗಿ ಅನುಷ್ಕಾ ಶೆಟ್ಟಿಗೆ (Anushka Shetty) ಇಂದು (ನ.7) ಹುಟ್ಟುಹಬ್ಬದ ಸಂಭ್ರಮ. ಈ ದಿನದಿಂದು ಅವರ ಸಿನಿಮಾಗಾಗಿ ಎದುರು ನೋಡುತ್ತಿರುವ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಇದನ್ನೂ ಓದಿ:‘ಜೈ ಹನುಮಾನ್’ ಸಿನಿಮಾದಲ್ಲಿ ರಾಮನಾಗಿ ರಾಣಾ ದಗ್ಗುಬಾಟಿ?

    ಅಭಿಮಾನಿಗಳಿಗೆ ಡಬಲ್ ಧಮಾಕ ಎಂಬಂತೆ ಎರಡು ಸಿನಿಮಾಗಳ ಹೊಸ ಪೋಸ್ಟರ್ ಅನ್ನು ನಟಿಯ ಹುಟ್ಟುಹಬ್ಬದಂದು ಚಿತ್ರತಂಡ ಅನಾವರಣ ಮಾಡಿದೆ. ಅದರಲ್ಲಿ ಅನುಷ್ಕಾ ನಟನೆಯ ಬಹುನಿರೀಕ್ಷಿತ ‘ಘಾಟಿ’ (Ghaati) ಚಿತ್ರದ ಪೋಸ್ಟರ್ ರಿವೀಲ್ ಆಗಿದೆ. ರಕ್ತ ಮೆತ್ತಿದ ಕೈಗಳಲ್ಲಿ ಚುಟ್ಟಾ ಹಿಡಿದು ಸೇದುತ್ತಾ ಖಡಕ್ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನೋಡಿದ್ರೆ, ಈ ಹಿಂದಿನ ಅರುಂಧತಿ, ಭಾಗಮತಿ ಪಾತ್ರಗಳನ್ನು ನೆನಪಿಸುವಂತಿದೆ.

    ಇನ್ನೂ ಈ ಚಿತ್ರವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ‘ಘಾಟಿ’ ಸಿನಿಮಾ ನಿರ್ಮಾಣ ಮಾಡಿರೋದು ನಟ ಪ್ರಭಾಸ್ ಸಹಭಾಗಿತ್ವದ ಯುವಿ ಕ್ರಿಯೇಶನ್ಸ್. ಸದ್ಯ ನಟಿಯ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಕ್ವೀನ್‌ ಇಸ್‌ ಬ್ಯಾಕ್‌ ಎನ್ನುತ್ತಾ ಫ್ಯಾನ್ಸ್‌ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ:ಉದ್ಯಮಿ ಪ್ರತ್ಯಕ್ಷ್ ಜೊತೆ ಚಂದನಾ ಅನಂತಕೃಷ್ಣ ಮದುವೆ ಡೇಟ್ ಫಿಕ್ಸ್

    ಇದರ ಜೊತೆಗೆ ಅನುಷ್ಕಾ ಶೆಟ್ಟಿ ನಟನೆಯ ಮಲಯಾಳಂ ಸಿನಿಮಾ ‘ಕತನಾರ್’ (Kathanar) ಚಿತ್ರದ ಲುಕ್ ಕೂಡ ರಿವೀಲ್ ಆಗಿದೆ. ನೀಲ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೂತದ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಮಾಲಿವುಡ್‌ಗೆ (Mollywood) ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ.

  • ಅನುಷ್ಕಾ ಶೆಟ್ಟಿ ಬರ್ತ್‌ಡೇಯಂದು ಫ್ಯಾನ್ಸ್‌ಗೆ ಸಿಗಲಿದೆ ಗುಡ್ ನ್ಯೂಸ್- ಏನದು?

    ಅನುಷ್ಕಾ ಶೆಟ್ಟಿ ಬರ್ತ್‌ಡೇಯಂದು ಫ್ಯಾನ್ಸ್‌ಗೆ ಸಿಗಲಿದೆ ಗುಡ್ ನ್ಯೂಸ್- ಏನದು?

    ರಾವಳಿ ಬೆಡಗಿ ಅನುಷ್ಕಾ ಶೆಟ್ಟಿಗೆ (Anushka Shetty) ನವೆಂಬರ್ 7ರಂದು ಹುಟ್ಟುಹಬ್ಬದ (Birthday) ಸಂಭ್ರಮ. ಈ ದಿನವೇ ಸ್ವೀಟಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗಲಿದೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಇದನ್ನೂ ಓದಿ:ಬ್ರೇಕಪ್ ಆಗಿರೋದು ನಿಜ: ಸ್ಪಷ್ಟನೆ ನೀಡಿದ ಜಯಶ್ರೀ ಆರಾಧ್ಯ

    ಅನುಷ್ಕಾ ಅವರು ಸದ್ಯ ತೆಲುಗಿನ ‘ಘಾಟಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೊಂದು ಚಿತ್ರ ಮಲಯಾಳಂನ ‘ಕಟನಾರ್’ ಸಿನಿಮಾದಲ್ಲೂ ಸ್ವೀಟಿ ನಟಿಸಿದ್ದಾರೆ. ಈ ಎರಡು ಚಿತ್ರಗಳ ಅವರ ಪಾತ್ರದ ಪೋಸ್ಟರ್ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದೆ ಚಿತ್ರತಂಡ. ಜೊತೆಗೆ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದ್ದಾರೆ. ಈ ಮೂಲಕ ಸ್ವೀಟಿ ಫ್ಯಾನ್ಸ್‌ಗೆ ನಟಿಯ ನಯಾ ಲುಕ್ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

    ಇನ್ನೂ ‘ಬಾಹುಬಲಿ’ ಸೇರಿದಂತೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಅನುಷ್ಕಾ ಅವರು ಕಳೆದ ವರ್ಷ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಚಿತ್ರದಲ್ಲಿ ನಟಿಸಿದ್ದರು. ಇದೀಗ ಅವರು ಕೈತುಂಬಾ ಸಿನಿಮಾಗಳಿವೆ. ನಟಿಯ ಹುಟ್ಟುಹಬ್ಬದಂದು ಅಫಿಷಿಯಲ್ ಆಗಿ ಸಿನಿಮಾ ಕುರಿತು ಸುದ್ದಿ ಸಿಗಲಿದೆ.

    ಅಂದಹಾಗೆ, ಕಟನಾರ್, ಕಾಂಚೆ, ಘಾಟಿ, ಗೌತಮಿಪುತ್ರ ಶತಕರ್ಣಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಅನುಷ್ಕಾ ಕೈಯಲ್ಲಿವೆ.

  • ಸ್ವೀಟಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್- 2 ಸಿನಿಮಾಗಳ ಶೂಟಿಂಗ್ ಮುಗಿಸಿದ ನಟಿ

    ಸ್ವೀಟಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್- 2 ಸಿನಿಮಾಗಳ ಶೂಟಿಂಗ್ ಮುಗಿಸಿದ ನಟಿ

    ರಾವಳಿ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಅವರು ತೆಲುಗು ಮತ್ತು ಮಲಯಾಳಂ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ನಂತರ ಒಪ್ಪಿಕೊಂಡಿದ್ದ 2 ಬಿಗ್ ಪ್ರಾಜೆಕ್ಟ್‌ಗಳ ಶೂಟಿಂಗ್ ಅನ್ನು ನಟಿ ಮುಗಿಸಿಕೊಟ್ಟಿದ್ದಾರೆ. ಬೆಳ್ಳಿಪರದೆಯಲ್ಲಿ ಅನುಷ್ಕಾ ಸಿನಿಮಾ ನೋಡಲು ಕಾಯುತ್ತಿರುವ ಫ್ಯಾನ್ಸ್‌ಗೆ ಈಗ ಅವರ ಮುಂದಿನ ಸಿನಿಮಾಗಳ ಅಪ್‌ಡೇಟ್‌ ಸಿಕ್ಕಿದೆ. ಇದನ್ನೂ ಓದಿ:ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?

    ಅನುಷ್ಕಾ ಶೆಟ್ಟಿ ಕ್ಯಾಮೆರಾ ಮುಂದೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಕೆಲಸದ ಮೂಲಕ ಅವರು ಉತ್ತರ ಕೊಡೋಕೆ ರೆಡಿಯಾಗಿದ್ದಾರೆ. ತೆಲುಗಿನ ‘ಘಾಟಿ’ ಹಾರರ್ ಮತ್ತು ಮಲಯಾಳಂನಲ್ಲಿ ಜಯಸೂರ್ಯ ಜೊತೆ ಅನುಷ್ಕಾ ನಟಿಸಿದ್ದಾರೆ. ಈ 2 ಪ್ರಾಜೆಕ್ಟ್‌ಗಳ ಶೂಟಿಂಗ್ ಮುಗಿದಿದೆ.

    ಅದರಲ್ಲೂ ಮಲಯಾಳಂ ಸಿನಿಮಾದಲ್ಲಿ ಅವರು ನೀಲಿ ಎಂಬ ಮಾಟಗಾತಿಯ ಪಾತ್ರಕ್ಕೆ ಅನಷ್ಕಾ ಜೀವತುಂಬಿದ್ದಾರೆ. ಈ ಚಿತ್ರ 2 ಭಾಗಗಳಲ್ಲಿ ಮೂಡಿ ಬರಲಿದೆ. ಅನುಷ್ಕಾ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈ ಚಿತ್ರಕ್ಕೆ ರೊಜಿನ್ ಥಾಮಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಅಂದಹಾಗೆ, ಮಲಯಾಳಂ ಸಿನಿಮಾ, ಕಾಂಚೆ, ಘಾಟಿ, ಗೌತಮಿಪುತ್ರ ಶತಕರ್ಣಿ, ಕ್ರಿಷ್ ಜಗರ್ಲಮುಡಿ ನಿರ್ದೇಶನ ಮಹಿಳಾ ಪ್ರಧಾನ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಅನುಷ್ಕಾ ಕೈಯಲ್ಲಿವೆ. ಮುಂದಿನ ವರ್ಷ ಒಂದೊಂದೇ ಸಿನಿಮಾಗಳು ರಿಲೀಸ್ ಆಗಲಿವೆ.

  • ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಅನುಷ್ಕಾ ಶೆಟ್ಟಿ

    ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಅನುಷ್ಕಾ ಶೆಟ್ಟಿ

    ಕುಡ್ಲದ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಎರಡು ವರ್ಷಕೊಮ್ಮೆ ಸಿನಿಮಾ ಮಾಡಿದ್ರೂ ಅವರ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ಇದೀಗ ಅವರ ಬಗ್ಗೆ ಇಂಟ್ರಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ನಗುವಿನ ಕಾಯಿಲೆಯಿಂದ ಬಳಲುತ್ತಿದ್ದಾರಂತೆ ‘ಬಾಹುಬಲಿ’ (Bahubali) ನಟಿ. ಹಾಗಂತ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಮೈಸೂರಿನಲ್ಲಿ ‘ಕೋಟಿ’ ವೀಕ್ಷಿಸಲಿದ್ದಾರೆ ಪ್ರತಾಪ್ ಸಿಂಹ

    ನಗುವಿನ ಕಾಯಿಲೆ ಅದೇನು ದೊಡ್ಡ ಸಮಸ್ಯೆಯಲ್ಲ. ಅದರಿಂದ ಅನೇಕ ಮುಜುಗರಕ್ಕೆ ಒಳಗಾಗಿದ್ದು ಇದೆ. ಅನುಷ್ಕಾ ಒಮ್ಮೆ ನಗಲು ಶುರು ಮಾಡಿದರೆ ನಿಲ್ಲಿಸಲು ಬಹಳ ಸಮಯ ತೆಗೆದುಕೊಳ್ತಾರೆ. ಇದರಿಂದ ಶೂಟಿಂಗ್ ವೇಳೆ ಮುಜುಗರ ಎದುರಿಸಿದ್ದು ಇದೆ ಎಂದು ನಟಿ ಮಾತನಾಡಿದ್ದಾರೆ.

    ಒಮ್ಮೊಮ್ಮೆ ನೆಲದ ಮೇಲೆ ಬಿದ್ದು ಸಹ ನಗುವುದಿದೆಯಂತೆ. ಇದರಿಂದ ಶೂಟಿಂಗ್ ನಿಲ್ಲಿಸಲಾಗಿದೆಯಂತೆ. ಯಾವುದಾದರೂ ಕಾಮಿಡಿ ಸೀನ್ ಚಿತ್ರೀಕರಣ ಮಾಡಬೇಕಾದರೆ ಪಳ್ಳನೆ ನಗು ಬಂದು ಬಿಡುತ್ತಿತ್ತಂತೆ. 15-20 ನಿಮಿಷಗಳ ಕಾಲ ನಗು ಕಂಟ್ರೋಲ್‌ಗೆ ಬರುತ್ತಿರಲಿಲ್ಲವಂತೆ. ಆ ನಂತರ ಅನುಷ್ಕಾರ ಈ ಸಮಸ್ಯೆ ತಮ್ಮ ಅನುಕೂಲಕ್ಕೂ ಚಿತ್ರತಂಡ ಬಳಸಿಕೊಂಡಿದ್ದು ಇದೆ. ಅವರಿಗೆ ಬ್ರೇಕ್ ಬೇಕಾದಾಗ ನಗಿಸಿ ಬಿಡುತ್ತಿದ್ದರಂತೆ. ಆ ನಂತರ ಸಿನಿಮಾ ಶೂಟಿಂಗ್ ಶುರು ಮಾಡುತ್ತಿದ್ದರಂತೆ.

    ಕಳೆದ ವರ್ಷ ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಇದೀಗ ತೆಲುಗಿನ ‘ಘಾಟಿ’ ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ. ಜೊತೆಗೆ ಮಾಲಿವುಡ್‌ನಲ್ಲಿ ‘ಕಥನಾರ್’ ಸಿನಿಮಾದಲ್ಲಿಯೂ ಕಾಣಿಸಿಕೊಳ್ತಿದ್ದಾರೆ. ಪ್ರಮುಖ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ.

  • ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

    ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

    ಟಿ ಅನುಷ್ಕಾ ಶೆಟ್ಟಿ (Anushka Shetty) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ವೀಟಿ ಮದುವೆ (Wedding) ಮ್ಯಾಟರ್ ಕೇಳಿ ಫ್ಯಾನ್ಸ್ ಖುಷಿಪಡುತ್ತಿದ್ದಾರೆ.

    ಕನ್ನಡದ ದೊಡ್ಡ ನಿರ್ಮಾಪಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ಎರಡೂ ಕುಟುಂಬಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆ ನಿರ್ಮಾಪಕನಿಗೂ 42 ವರ್ಷ ಎನ್ನಲಾಗಿದೆ. ಇನ್ನೂ ನಟಿ ಮದುವೆಯಾಗುವ ವರನ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಇದನ್ನೂ ಓದಿ:ಬೆಡ್‌ರೂಮ್‌ನಲ್ಲಿ ಹುಟ್ಟುಹಬ್ಬ ಆಚರಿಸಿದ ‘ಪುಷ್ಪ’ ನಟಿ

    ಅನುಷ್ಕಾ ಮದುವೆಗೆ ತಯಾರಿ ಶುರುವಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ಮದುವೆ ಸುದ್ದಿ ಬಗ್ಗೆ ಅನುಷ್ಕಾ ಕುಟುಂಬ ಅಧಿಕೃತ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.

    ಅನುಷ್ಕಾ ಶೆಟ್ಟಿ ಕನ್ನಡದ ನಟಿಯೇ ಆಗಿದ್ದರೂ, ತೆಲುಗು ಸಿನಿಮಾಗಳಿಂದ ವೃತ್ತಿ ಬದುಕನ್ನು ಆರಂಭಿಸಿದ್ದರು. ಅಕ್ಕಿನೇನಿ ನಾಗಾರ್ಜುನ ನಟಿಸಿದ್ದ ‘ಸೂಪರ್’ ಸಿನಿಮಾ ಮೂಲಕ ತೆಲುಗಿಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದರು. ‘ಅರುಂಧತಿ’, ‘ಬಾಹುಬಲಿ’ (Bahubali) ಅಂತಹ ಸಿನಿಮಾ ಅನುಷ್ಕಾ ಶೆಟ್ಟಿ ವೃತ್ತಿ ಬದುಕಿಗೆ ಹೊಸ ತಿರುವನ್ನು ಕೊಟ್ಟಿತ್ತು. ಅದರಲ್ಲೂ ‘ಬಾಹುಬಲಿ’ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡಿತ್ತು.