Tag: anushka sharma

  • ಐಷಾರಾಮಿ ವಿಲ್ಲಾ ಖರೀದಿಸಿದ ಕೊಹ್ಲಿ, ಅನುಷ್ಕಾ – ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಐಷಾರಾಮಿ ವಿಲ್ಲಾ ಖರೀದಿಸಿದ ಕೊಹ್ಲಿ, ಅನುಷ್ಕಾ – ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಮುಂಬೈ: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಪತ್ನಿ ಅನುಷ್ಕಾ ಶರ್ಮಾ (Anushka Sharma) ಐಷಾರಾಮಿ ವಿಲ್ಲಾವೊಂದನ್ನ (Luxury Villa) ಖರೀದಿಸಿದ್ದಾರೆ. ಈ ವಿಲ್ಲಾದ ಚಿತ್ತಾಕರ್ಷಕ ವಿಹಂಗಮ ನೋಟವನ್ನು ವೀಡಿಯೋ ಸಮೇತ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಕಷ್ಟು ಸದ್ದು ಮಾಡ್ತಿದೆ.

     

    View this post on Instagram

     

    A post shared by Virat Kohli (@virat.kohli)

    ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಕೊಹ್ಲಿ ಈಗಾಗಲೇ ಮುಂಬೈನಲ್ಲಿ (Mumbai) ಐಷಾರಾಮಿ ಮನೆ ಹೊಂದಿದ್ದಾರೆ. ಅಲ್ಲದೇ ಹಲವು ಉದ್ಯಮಗಳಲ್ಲಿಯೂ ಹಣ ಹೂಡಿಕೆ ಮಾಡಿದ್ದಾರೆ. ಆದರೂ ಇದೀಗ ಕೊಹ್ಲಿ, ಅನುಷ್ಕಾ ಜೋಡಿ ಮುಂಬೈನಿಂದ ದೂರದಲ್ಲಿ ಹೊಸ ವಿಲ್ಲಾವೊಂದನ್ನ ಖರೀದಿ ಮಾಡಿದೆ. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    ವಿರಾಟ್ ಕೊಹ್ಲಿ ತಮ್ಮ ಬಿಡುವಿನ ವೇಳೆ ಕಳೆಯಲು ಮುಂಬೈನಿಂದ ದೂರವಿರುವ ಆಲಿಭಾಗ್‌ನಲ್ಲಿ ಹೊಸ ವಿಲ್ಲಾ ಖರೀದಿ ಮಾಡಿದ್ದಾರೆ. ಈ ವಿಲ್ಲಾದ ಒಳಾಂಗಣವನ್ನು ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಮಾಜಿ ಪತ್ನಿ ಸುಸಾನ್ನೆ ಖಾನ್ ವಿನ್ಯಾಸ ಮಾಡಿದ್ದಾರೆ ಅನ್ನೋದೆ ಇದ್ರಲ್ಲಿ ವಿಶೇಷವಾಗಿದೆ.

     

    View this post on Instagram

     

    A post shared by Virat Kohli (@virat.kohli)

    ಸದ್ಯ ವಿರಾಟ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗಾವಾಸ್ಕರ್ ಟ್ರೋಫಿ ಟೆಸ್ಸ್ ಸರಣಿಯಲ್ಲಿದ್ದಾರೆ. ಹಾಗಾಗಿ ಕೊಹ್ಲಿ ಅನುಪಸ್ಥಿತಿಯಲ್ಲಿ ಸಹೋದರ ವಿಕಾಸ್ ಕೊಹ್ಲಿ ಬಂಗಲೆ ಖರೀದಿ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ವಿಲ್ಲಾದ ವೀಡಿಯೋವನ್ನು ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವಿಲ್ಲಾ ನೋಡಿದ ಅಭಿಮಾನಿಗಳೂ ಹರ್ಷಗೊಂಡಿದ್ದಾರೆ.

    ವಿಶೇಷತೆ ಏನೇನಿದೆ?
    ಆಲಿಬಾಗ್‌ನಲ್ಲಿರುವ ಆವಾಸ್ ಗ್ರಾಮದಲ್ಲಿರುವ 6 ಕೋಟಿ ರೂ. ಮೌಲ್ಯದ ವಿಲ್ಲಾ 2,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಆಸ್ತಿಯ ಮುದ್ರಾಂಕ ಶುಲ್ಕವೇ 36 ಲಕ್ಷ ರೂ. ಇದ್ದು, 400 ಚದರಡಿಯ ಸುಸಜ್ಜಿತ ಈಜುಕೊಳ ಸಹ ಹೊಂದಿದೆ. ಇದನ್ನೂ ಓದಿ: TNPL ನಲ್ಲೂ ದುಡ್ಡೋ ದುಡ್ಡು – ದುಬಾರಿ ಬೆಲೆಗೆ ಹರಾಜಾದ IPL ಚಾಂಪಿಯನ್ಸ್ ತಂಡದ ಆಟಗಾರ

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 19.24 ಕೋಟಿ ರೂ.ಗೆ ಫಾರ್ಮ್‌ಹೌಸ್‌ ಸಹ ಖರೀದಿಸಿದ್ದರು. ಅದಕ್ಕಾಗಿ 1.15 ಕೋಟಿ ರೂಪಾಯಿ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದರು.

    ಅವಾಸ್ ಲಿವಿಂಗ್ ಅಲಿಬಾಗ್ ಎಲ್‌ಎಲ್‌ಪಿಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲ ಮಹೇಶ್ ಮ್ಹಾತ್ರೆ ಪ್ರಕಾರ, ಆವಾಸ್ ನೈಸರ್ಗಿಕ ಸೌಂದರ್ಯದಿಂದ ಕೂಡಿದೆ. ಸ್ಪೀಡ್ ಬೋಟ್‌ನಲ್ಲಿ ಮುಂಬೈನಿಂದ ಅಲಿಬಾಗ್‌ಗೆ 15 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ. ಇಲ್ಲಿ ಬೆಲೆ ದುಬಾರಿಯಾಗಿರುವುದರಿಂದ ಪ್ರತಿ ಚದರಡಿಗೆ 3 ಸಾವಿರದಿಂದ 3,500 ರೂ.ಗಳಷ್ಟಿದೆ. ಅನೇಕ ಶ್ರೀಮಂತರು ಇಲ್ಲಿ ಆಸ್ತಿ ಖರೀದಿ ಮಾಡಿದ್ದು, ವಾರಾಂತ್ಯಕ್ಕೆ ವಿಶ್ರಾಂತಿಗಾಗಿ ಬರುತ್ತಾರೆ ಎಂದು ತಿಳಿಸಿದ್ದಾರೆ.

    ವಿರಾಟ್ ಕೊಹ್ಲಿ ಮಾತ್ರವಲ್ಲದೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಅಲಿಬಾಗ್‌ನಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ರೋಹಿತ್ ಶರ್ಮಾ 2021 ರಲ್ಲಿ ಮಹತ್ರೋಲಿ ಗ್ರಾಮದಲ್ಲಿ 4 ಎಕರೆ ಭೂಮಿ ಖರೀದಿಸಿದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಗಳ ಬಟ್ಟೆ ಧರಿಸಿದ್ದೀರಾ ಎಂದು ಅನುಷ್ಕಾ ಶರ್ಮಾಗೆ ನೆಟ್ಟಿಗರಿಂದ ತರಾಟೆ

    ಮಗಳ ಬಟ್ಟೆ ಧರಿಸಿದ್ದೀರಾ ಎಂದು ಅನುಷ್ಕಾ ಶರ್ಮಾಗೆ ನೆಟ್ಟಿಗರಿಂದ ತರಾಟೆ

    ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ಸದಾ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಲೇ ಇರುತ್ತಾರೆ. ಇದೀಗ ತಮ್ಮ ಹೊಸ ಫೋಟೋಶೂಟ್ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ʻಮಗಳ ಡ್ರೆಸ್ ಹಾಕಿದ್ದೀರಾʼ ಎಂದು ನಟಿಯನ್ನ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.

    ಹಿಂದಿ ಸಿನಿಮಾಗಳ ಮೂಲಕ ಹೈಪ್ ಕ್ರಿಯೆಟ್ ಮಾಡಿರುವ ನಟಿ ಅನುಷ್ಕಾ ಶರ್ಮಾ ಸದ್ಯ ಮುದ್ದು ಮಗಳ ಪಾಲನೆಯ ಜೊತೆ ಒಂದಿಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಇತ್ತೀಚಿನ ಹೊಸ ಫೋಟೋವೊಂದು ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

    ನೀಲಿ ಬಣ್ಣದ ಜೀನ್ಸ್‌ಗೆ ಹಳದಿ ಬಣ್ಣದ ಸ್ಲೀವ್ ಲೆಸ್ ಶಾರ್ಟ್ ಟಾಪ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನ ಅನುಷ್ಕಾ ಹಂಚಿಕೊಂಡಿದ್ದರು. ದೇಹ ಪೂರ್ತಿ ಮುಚ್ಚಿರದ ಹಳದಿ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಸಿಕ್ಕಿದ್ದೆ ಚಾನ್ಸ್ ಅಂತಾ ಈ ಫೋಟೋವನ್ನ ಟ್ರೋಲ್ (Troll) ಮಾಡಲಾಗಿತ್ತು. ಇದನ್ನೂ ಓದಿ: ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ‘ವಿಕ್ರಮ್’ ಬೆಡಗಿ ಸ್ವತಿಷ್ಠ ಕೃಷ್ಣನ್

     

    View this post on Instagram

     

    A post shared by AnushkaSharma1588 (@anushkasharma)

    ಮಗಳ ಬಟ್ಟೆ ಹಾಕಿದ್ದೀರಾ ಎಂದು ಕೆಲವರು ಕಾಮೆಂಟ್ ಮಾಡಿದ್ರೆ, ಮದುವೆ ಆಗಿ ಮಗು ಆದ್ರೂ ನಿಮಗೆ ಹೇಗೆ ಬಟ್ಟೆ ಹಾಕಬೇಕು ಎಂಬುದು ಗೊತ್ತಿಲ್ಲ ಎಂದು ಬಗೆ ಬಗೆಯ ರೀತಿ ಕಾಮೆಂಟ್ ಮಾಡಿದ್ದಾರೆ. ನಟಿಯ ಬಟ್ಟೆಯ ವಿಚಾರಕ್ಕೆ ನೆಗೆಟಿವ್ ಕಾಮೆಂಟ್ಸ್ ಹರಿದು ಬಂದಿದ್ರು ಕೂಡ ಯಾವುದಕ್ಕೂ ಅನುಷ್ಕಾ ಪ್ರತಿಕ್ರಿಯೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೆರಿಗೆ ಇಲಾಖೆ ವಿರುದ್ದ ಹೈಕೋರ್ಟ್ ಮೆಟ್ಟಿಲು ಏರಿದ ನಟಿ ಅನುಷ್ಕಾ ಶರ್ಮಾ

    ತೆರಿಗೆ ಇಲಾಖೆ ವಿರುದ್ದ ಹೈಕೋರ್ಟ್ ಮೆಟ್ಟಿಲು ಏರಿದ ನಟಿ ಅನುಷ್ಕಾ ಶರ್ಮಾ

    ಟಿ ಅನುಷ್ಕಾ ಶರ್ಮಾ ತೆರಿಗೆ ಇಲಾಖೆಯ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಇಲಾಖೆಗಳ ನಡೆಗೆ ಬೇಸತ್ತು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಮೇಲೆ ಸುಳ್ಳು ತೆರಿಗೆ ಹಾಕಿ, ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಈ ಹಿಂದೆ ತೆರಿಗೆ ಇಲಾಖೆಯು ಮಾರಾಟಕ್ಕೆ ಸಂಬಂಧಿಸಿದಂತೆ 2012-13 ಹಾಗೂ 2013-14ನೇ ಸಾಲಿನ ತೆರಿಗೆಯನ್ನು ಪಾವತಿಸುವಂತೆ ಮಾರಾಟಾ ತೆರಿಗೆ ಇಲಾಖೆ ಆಯುಕ್ತರು ಸೂಚಿಸಿದ್ದರು. ಇದನ್ನು ಪ್ರಶ್ನೆ ಮಾಡಿ ನಟಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

    ಅನುಷ್ಕಾ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಪಾಲ್ಗೊಂಡಿದ್ದಾರೆ. ನಿರೂಪಣೆ ಮಾಡಿದ್ದಾರೆ. ದೇಶ ವಿದೇಶಗಳ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರೂ, ಮಾರಾಟ ತೆರಿಗೆಯನ್ನು ಪಾವತಿಸಿಲ್ಲ. ಹಾಗಾಗಿ ಕೂಡಲೇ ಪಾವತಿಸಬೇಕು ಎಂದು ಮಾರಾಟ ತೆರಿಗೆ ಆಯುಕ್ತರು ಸೂಚಿಸಿದ್ದರು.

    ಈ ಕಾರ್ಯಕ್ರಮಗಳು ಹಾಗೂ ಸಮಾರಂಭಗಳು ಮಾರಾಟ ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಮತ್ತು ಆಯಾ ಕಾರ್ಯಕ್ರಮಗಳ ಪ್ರಸಾರದ ಹಕ್ಕನ್ನು ಅನುಷ್ಕಾ ಹೊಂದಿಲ್ಲವೆಂದು ಇವರ ತೆರಿಗೆ ಸಲಹೆಗಾರರು ಮೊದಲು ಕೋರ್ಟ್ ಮೆಟ್ಟಿಲು ಏರಿದ್ದರು. ಆದರೆ, ಸ್ವತಃ ಅನುಷ್ಕಾ ಅವರೇ ಅರ್ಜಿ ಸಲ್ಲಿಸಬೇಕು ಎಂದು ಬಾಂಬೆ ಹೈಕೋರ್ಟ್ ಸಲಹೆ ನೀಡಿತ್ತು. ಕೋರ್ಟ್ ಸಲಹೆ ಮೇರೆಗೆ ಅನುಷ್ಕಾ ಅವರೇ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಇದನ್ನೂ ಓದಿ: ಗೆಳೆಯ ವಸಿಷ್ಠ ಸಿಂಹಗೆ ವಿಭಿನ್ನವಾಗಿ ವಿಶ್ ಮಾಡಿದ ಡಾಲಿ ಧನಂಜಯ್

    ತಾವು ಮಾಡಿರುವ ಕಾರ್ಯಕ್ರಮಗಳ ಪ್ರಸಾರದ ಹಕ್ಕನ್ನು ತಾವು ಮಾರಾಟ ಮಾಡಿಲ್ಲ. ಅದರ ಹಕ್ಕುಗಳು ತಮ್ಮ ಬಳಿ ಇಲ್ಲ. ಕಾರ್ಯಕ್ರಮಗಳನ್ನು ಮಾಡಿದ ಸಂಸ್ಥೆಗಳೇ ಅದರ ರೈಟ್ಸ್ ಹೊಂದಿರುವುದರಿಂದ ಸುಖಾಸುಮ್ಮನೆ ತಮಗೆ ನೋಟಿಸ್ ನೀಡಲಾಗಿದೆ. ಈ ನೋಟಿಸ್ ಅನ್ನು ಕೈ ಬಿಡಬೇಕು ಎಂದು ಕೋರ್ಟ್ ಗೆ ಅನುಷ್ಕಾ ಮನವಿ ಮಾಡಿದ್ದಾರೆ. ಈ ಕುರಿತು ಮಾರಾಟ ತೆರಿಗೆ ಇಲಾಖೆಗೆ ಉತ್ತರಿಸುವಂತೆ ಕೋರ್ಟ್ ಸೂಚನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಖಾಸಗಿತನಕ್ಕೆ ಧಕ್ಕೆ ತರಬೇಡಿ – ಹೋಟೆಲ್ ವಿರುದ್ಧ ಕೊಹ್ಲಿ ಕೆಂಡ

    ಖಾಸಗಿತನಕ್ಕೆ ಧಕ್ಕೆ ತರಬೇಡಿ – ಹೋಟೆಲ್ ವಿರುದ್ಧ ಕೊಹ್ಲಿ ಕೆಂಡ

    ಪರ್ತ್: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ ವಿರಾಟ್ ಕೊಹ್ಲಿ (Virat Kohli) ಪರ್ತ್‍ನಲ್ಲಿ (Perth)  ತಂಗಿದ್ದ ಹೋಟೆಲ್ ರೂಂಗೆ (Hotel Room) ನುಗ್ಗಿದ ಅಭಿಮಾನಿಯೋರ್ವ ಅಲ್ಲಿನ ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ವೈರಲ್ ಆಗುವಂತೆ ಮಾಡಿದ್ದಾನೆ.

    ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಪಂದ್ಯಕ್ಕಾಗಿ ಭಾರತ ತಂಡ ಪರ್ತ್‍ಗೆ ಬಂದಿತ್ತು. ಪರ್ತ್‍ನಲ್ಲಿ ವಿರಾಟ್ ಕೊಹ್ಲಿ ತಂಗಿದ್ದ ಹೋಟೆಲ್ ರೂಂಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿ ವೀಡಿಯೋ ಚಿತ್ರೀಕರಿಸಿ ಕೊಹ್ಲಿ ಬಳಸುವ ಎಲ್ಲಾ ವಸ್ತುಗಳು ಸೇರಿದಂತೆ ರೂಂನ ಎಲ್ಲಾ ಕೋಣೆಗಳನ್ನು ವೀಡಿಯೋ ಮಾಡಿ ಟಿಕ್‍ಟಾಕ್‍ನಲ್ಲಿ (TikTok) ಅಪ್ಲೋಡ್ ಮಾಡಿದ್ದ. ಇದನ್ನೂ ಓದಿ: ಟಿ20 ವಿಶ್ವಕಪ್‍ನಲ್ಲೂ ಕಿಂಗ್ ಕೊಹ್ಲಿ ದಾಖಲೆಯ ಸರದಾರ

    ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೊಹ್ಲಿ, ಅಭಿಮಾನಿಗಳು ತಮ್ಮ ಮೆಚ್ಚಿನ ಆಟಗಾರರನ್ನು ನೋಡಲು ಬಯಸುವುದು ಸಂತೋಷ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಹೋಟೆಲ್ ರೂಂನ ವೀಡಿಯೋ ಮಾಡಿ ಹರಿಬಿಟ್ಟಿರುವುದು ಬೇಸರ ತರಿಸಿದೆ. ಇದರಿಂದ ನಮ್ಮ ಖಾಸಗಿತನಕ್ಕೆ ಧಕ್ಕೆ ಆಗಿದೆ. ಈ ಘಟನೆಯಿಂದ ನನಗೆ ಆಘಾತವಾಗಿದೆ. ನಮ್ಮ ಖಾಸಗಿತನವನ್ನು ಗೌರವಿಸಿ ಇದರಿಂದ ನಮಗೆ ಸಮಸ್ಯೆಯನ್ನು ತಂದೊಡ್ಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಹೋಟೆಲ್ ಕ್ರೌನ್ ಟವರ್ ಕೊಹ್ಲಿ ಬಳಿ ಕ್ಷಮೆ ಕೇಳಿದೆ. ಈ ವೀಡಿಯೋ ಮಾಡಿದವರ ಕ್ರೌನ್ ಖಾತೆಯನ್ನು ರದ್ದು ಪಡಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಭಾರತ ವಿರುದ್ಧ ಗೆದ್ದು ಬೀಗಿದ ಆಫ್ರಿಕಾ – ಪಾಕ್‍ಗೆ ಮನೆ ದಾರಿ ಖಚಿತ

     

    View this post on Instagram

     

    A post shared by Virat Kohli (@virat.kohli)

    ಈ ಬಗ್ಗೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ (Anushka Sharma) ಕೂಡ ಬೇಸರ ವ್ಯಕ್ತಪಡಿಸಿದ್ದು, ಇಂತಹ ಘಟನೆಯಿಂದ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ. ಅಭಿಮಾನಿಗಳು ಕೆಲವೊಮ್ಮೆ ತಮ್ಮ ಎಲ್ಲೆಮೀರಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗಳು ವಮಿಕಾ ಜೊತೆ ಕೋಲ್ಕತ್ತಾದಲ್ಲಿ ಅನುಷ್ಕಾ ಜಾಲಿ ರೈಡ್

    ಮಗಳು ವಮಿಕಾ ಜೊತೆ ಕೋಲ್ಕತ್ತಾದಲ್ಲಿ ಅನುಷ್ಕಾ ಜಾಲಿ ರೈಡ್

    ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸಿನಿಮಾ ಕೆಲಸದ ನಿಮಿತ್ತ ಮಗಳು ವಮಿಕಾ ಜೊತೆ ಕೋಲ್ಕತ್ತಾಗೆ ಹಾರಿದ್ದಾರೆ. ಮಗಳ ಜೊತೆ ಅನುಷ್ಕಾ ಟ್ರಾವೆಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹಿಂದಿ ಸಿನಿಮಾಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ನಟಿ ಅನುಷ್ಕಾ, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನ ಮದುವೆಯಾದ ಮೇಲೆ ಕೊಂಚ ಚಿತ್ರರಂಗದಿಂದ ದೂರ ಸರಿದಿದ್ದರು. ಮಗಳ ಆರೈಕೆಯಲ್ಲಿ ಬ್ಯುಸಿಯಾದರು. ಈಗ ಮತ್ತೆ ಚಿತ್ರಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ತಾವು ಮಗಳ ಜೊತೆ ಕೋಲ್ಕತ್ತಾದಲ್ಲಿ ಬೀಡು ಬಿಟ್ಟಿರುವ ಫೋಟೋ ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)


    ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ನಟಿ ಅನುಷ್ಕಾ, ಚಿತ್ರದ ಪ್ರಾಜೆಕ್ಟ್‌ವೊಂದಕ್ಕಾಗಿ ಕೋಲ್ಕತ್ತಾಗೆ ಬಂದಿದ್ದಾರೆ. ತಮ್ಮ ಕೆಲಸದ ಬಳಿಕ ಮಗಳು ವಮಿಕಾ ಜೊತೆ ಕೋಲ್ಕತ್ತಾದ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಈ ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • Love You SO Much – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ

    Love You SO Much – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ

    ಮೆಲ್ಬರ್ನ್: ಟಿ20 ಕ್ರಿಕೆಟ್ ವಿಶ್ವಕಪ್ (T20 WorldCup) ಟೂರ್ನಿಯ ಸೂಪರ್ 12ರ ಹಂತದ ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ (Virat Kohli), ಪಾಕಿಸ್ತಾನ (Pakistan) ವಿರುದ್ಧ ಭಾರತಕ್ಕೆ 4 ವಿಕೆಟ್ ಅಂತರದ ರೋಚಕ ಗೆಲುವು ತಂದುಕೊಟ್ಟರು.

     

    View this post on Instagram

     

    A post shared by AnushkaSharma1588 (@anushkasharma)

    ಈ ಇನಿಂಗ್ಸ್ ಬಗ್ಗೆ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂದ್ಯದ ಬಳಿಕ ಕೊಹ್ಲಿಯ ಚಿತ್ರವನ್ನು ಹಂಚಿಕೊಂಡಿರುವ ಅನುಷ್ಕಾ, ನೀನು ಈ ರಾತ್ರಿ ಜನರಲ್ಲಿ ಸಾಕಷ್ಟು ಸಂತಸವನ್ನು ತಂದಿರುವೆ. ಅದೂ ದೀಪಾವಳಿ ಮುನ್ನಾದಿನ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ!

    `ನೀನು ನನ್ನ ಅದ್ಭುತ. ನಿನ್ನ ಸ್ಥೈರ್ಯ, ತ್ಯಾಗ ಮತ್ತು ವಿಶ್ವಾಸ ಎಂತಹವರನ್ನೂ ಚಕಿತಗೊಳಿಸುತ್ತದೆ. ನಾನು ನನ್ನ ಜೀವನದಲ್ಲೇ ಅತ್ಯುತ್ತಮ ಪಂದ್ಯವನ್ನು ನೋಡಿದೆ ಎಂದು ಹೇಳಬಲ್ಲೆ. ತನ್ನ ತಾಯಿ ಏಕೆ ರೂಮಿನಲ್ಲಿ ಕುಣಿದಾಡುತ್ತಿದ್ದಾಳೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮ್ಮ ಮಗಳು ಇನ್ನೂ ಚಿಕ್ಕವಳು. ಆದರೆ ಆ ರಾತ್ರಿ ಅವಳ ಅಪ್ಪ ಅತ್ಯಂತ ಕಠಿಣ ಸಂದರ್ಭದಲ್ಲಿ, ತನ್ನ ಮೇಲೆ ಅಪಾರ ಹೊರೆ ಇದ್ದಾಗಲೂ ಇಂದೆಂದಿಗಿಂತ ಹೆಚ್ಚು ಪ್ರಬಲವಾಗಿ ಮತ್ತು ಪ್ರಬುದ್ಧವಾಗಿ ಸವಾಲನ್ನು ಮೀರಿ ಹೊರ ಬಂದಿದ್ದರು. ವೃತ್ತಿ ಜೀವನದ ಅತ್ಯುತ್ತಮ ಇನಿಂಗ್ಸ್ ಆಡಿದ್ದರು ಎಂಬುದನ್ನು ಮುಂದೊಂದು ದಿನ ಅರ್ಥ ಮಾಡಿಕೊಳ್ಳುತ್ತಾಳೆ. ನಾನು ತುಂಬಾ ಹೆಮ್ಮೆ ಪಡುತ್ತಿದ್ದೇನೆ’ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ, ಪ್ರತಿಯೊಂದು ಕ್ಷಣದಲ್ಲೂ ನನ್ನ ಜೊತೆಗೆ ಇದ್ದುದ್ದಕ್ಕಾಗಿ ನನ್ನ ಪ್ರೀತಿಗೆ ಧನ್ಯವಾದಗಳು. ನಾನು ತುಂಬಾ ಕೃತಜ್ಞನಾಗಿದ್ದೇನೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: 5 ಬಾರಿ ಗರ್ಭಪಾತ, ಮೂರನೇ ಪತ್ನಿಯಾಗಿರುವಂತೆ ಒತ್ತಡ- ಸಿಪಿಐ ವಿರುದ್ಧ ರೇಪ್ ಕೇಸ್!

    ಮೆಲ್ಬರ್ನ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಇಂಡೋ ಪಾಕ್ ಕದನದಲ್ಲಿ 20 ಓವರ್‌ಗಳಲ್ಲಿ ಪಾಕಿಸ್ತಾನ 8 ವಿಕೆಟ್‌ ನಷ್ಟಕ್ಕೆ 159 ರನ್ ಗಳಿಸಿ, ಭಾರತಕ್ಕೆ 160 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವು ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]

  • ಅನುಷ್ಕಾ ಶರ್ಮಾ ಐರನ್ ಲೇಡಿ, ವಿರಾಟ್ ಕೊಹ್ಲಿ ಮ್ಯಾನ್ ಆಫ್ ಸ್ಟೀಲ್: ಶೋಯೆಬ್ ಅಕ್ತರ್

    ಅನುಷ್ಕಾ ಶರ್ಮಾ ಐರನ್ ಲೇಡಿ, ವಿರಾಟ್ ಕೊಹ್ಲಿ ಮ್ಯಾನ್ ಆಫ್ ಸ್ಟೀಲ್: ಶೋಯೆಬ್ ಅಕ್ತರ್

    ದುಬೈ: ಟೀಂ ಇಂಡಿಯಾದ ರನ್ ಮಿಷಿನ್ ವಿರಾಟ್ ಕೊಹ್ಲಿ (Virat Kohli) 1,021 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಶತಕದ ಬರ ನೀಗಿಸಿದ್ದಾರೆ. ಈ ಸಾಧನೆಯ ಹಿಂದೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರ (Anushka Sharma) ಬೆಂಬಲಕ್ಕೆ ಪಾಕಿಸ್ತಾನ ಮಾಜಿ ಆಟಗಾರ ಶೋಯೆಬ್‌ ಅಕ್ತರ್ (Shoaib Akhtar) ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ನಿನ್ನೆ ನಡೆದ ಏಷ್ಯಾಕಪ್‍ನ (Asia Cup 2022) ಸೂಪರ್ ಫೋರ್‌ ಹಂತದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಟಿ20 ಕ್ರಿಕೆಟ್‍ನ ಚೊಚ್ಚಲ ಶತಕ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‍ನ 71 ಶತಕ ಪೂರೈಸಿದರು. ಬಳಿಕ ಈ ಶತಕವನ್ನು ಈವರೆಗೆ ನನ್ನ ಬೆಂಬಲಕ್ಕೆ ನಿಂತ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾಗೆ ಸಮರ್ಪಿಸುವುದಾಗಿ ಕೊಹ್ಲಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ – ಕಿಂಗ್ ಕೊಹ್ಲಿ ಭಾವುಕ

    ಈ ಬಗ್ಗೆ ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡಿದ ಅಕ್ತರ್ ವಿರಾಟ್ ಕೊಹ್ಲಿಯ ಈ ಕಂಬ್ಯಾಕ್ ಹಿಂದೆ ನಿಂತಿರುವ ಅನುಷ್ಕಾ ಶರ್ಮಾರನ್ನು ನಾನು ಐರನ್ ಲೇಡಿ ಎನ್ನಲು ಬಯಸುತ್ತೇನೆ. ನನ್ನ ಪ್ರಕಾರ ವಿರಾಟ್ ಕೊಹ್ಲಿ ಮ್ಯಾನ್ ಆಫ್ ಸ್ಟೀಲ್ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: 2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

    ವಿರಾಟ್ ಕೊಹ್ಲಿ ವಿಶ್ವಕಂಡ ಶ್ರೇಷ್ಠ ಆಟಗಾರ ಅವರ ಈ ಶಾಧನೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕೊಹ್ಲಿ ವಿಶ್ವಕ್ರಿಕೆಟ್‍ನ ಸಾಧಕರ ಪಟ್ಟಿಯಲ್ಲಿ ಯಾವತ್ತು ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ವಿರಾಟ್ ಕೊಹ್ಲಿ ಅಘ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಜೇಯ 122 ರನ್ (61 ಎಸೆತ, 12 ಬೌಂಡರಿ, 6 ಸಿಕ್ಸ್) ಚಚ್ಚಿ ಟಿ20 ಕ್ರಿಕೆಟ್ ಚೊಚ್ಚಲ ಶತಕದ ಸಂಭ್ರಮ ಪಟ್ಟರು.

    Live Tv
    [brid partner=56869869 player=32851 video=960834 autoplay=true]

  • ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ – ಕಿಂಗ್ ಕೊಹ್ಲಿ ಭಾವುಕ

    ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ – ಕಿಂಗ್ ಕೊಹ್ಲಿ ಭಾವುಕ

    ದುಬೈ: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅಪ್ಘಾನಿಸ್ತಾನದ (Afghanistan) ವಿರುದ್ಧ ನಡೆದ ಏಷ್ಯಾಕಪ್ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಬಳಿಕ ಭಾವುಕರಾಗಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಶತಕವನ್ನು ನನ್ನ ಪತ್ನಿ ಅನುಷ್ಕಾ (anushka sharma) ಹಾಗೂ ಪುತ್ರಿ ವಾಮಿಕಾಗೆ ಅರ್ಪಿಸುವೆ ಎಂದು ನುಡಿದಿದ್ದಾರೆ.

    ಕ್ರಿಕೆಟ್ ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲೂ ನನ್ನೊಂದಿಗೆ ನನ್ನ ತಂಡ ಸಹಕಾರಿಯಾಗಿ ನಿಂತಿದೆ. ಶತಕ ಬಾರಿಸುತ್ತಿಲ್ಲ ಎನ್ನುವ ಬಗ್ಗೆ ಹೊರಗೆ ಸಾಕಷ್ಟು ಚರ್ಚೆಯಾಗುತ್ತಿತ್ತು ಎಂದು ನನಗೆ ಗೊತ್ತು. ನಾನಿಲ್ಲಿ ಇಂದು ನಿಂತಿದ್ದೇನೆ ಎಂದರೆ ಅದಕ್ಕೆ ಒಬ್ಬ ವ್ಯಕ್ತಿ ಪ್ರಮುಖ ಕಾರಣ. ಅದು ನನ್ನ ಪತ್ನಿ ಅನುಷ್ಕಾ. ಈ ಶತಕ ಆಕೆ ಹಾಗೂ ನಮ್ಮ ಪುತ್ರಿ ವಾಮಿಕಾಗೆ ಅರ್ಪಿಸುತ್ತೇನೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅನುಷ್ಕಾ ನನ್ನ ಜೊತೆಗಿದ್ದಾಳೆ. ಆಕೆಯಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ ಎಂದು ಕೊಹ್ಲಿ ಭಾವುಕರಾಗಿದ್ದಾರೆ. ಇದನ್ನೂ ಓದಿ: ಬೌಲರ್‌ಗೆ ಬ್ಯಾಟ್‍ನಲ್ಲಿ ಹೊಡೆಯಲು ಮುಂದಾದ ಆಸಿಫ್ ಅಲಿ – ಜೋರಾದ #BanAsifAli ಕೂಗು

    ಕಿಂಗ್ ಕೊಹ್ಲಿ ಈಗ ಸಿಕ್ಸರ್ ವೀರ: 1,021 ದಿನಗಳ ಬಳಿಕ ಶತಕ ಸಿಡಿಸಿದ ವಿರಾಟ್ ಕೊಹ್ಲಿ 20 ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಯಲ್ಲಿ ಸಿಕ್ಸರ್‌ಗಳ ಶತಕ ಬಾರಿಸಿದ ಸಾಧನೆಗೂ ಹೆಸರಾಗಿದ್ದಾರೆ. ಈ ಮೂಲಕ ಟ್ವೆಂಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಸಿಡಿಸಿದ ಭಾರತದ 2ನೇ ಹಾಗೂ ವಿಶ್ವದ ಟಾಪ್-10 ಆಟಗಾರರಲ್ಲಿ ಒಬ್ಬರಾಗಿದ್ದಾರೆ.

    ಉತ್ತಮ ಬ್ಯಾಟಿಂಗ್ ಲಯಕ್ಕೆ ಮರಳಿರುವ ಕಿಂಗ್ ಕೊಹ್ಲಿ 104 ಪಂದ್ಯಗಳಲ್ಲಿ (96 ಇನ್ನಿಂಗ್ಸ್) 104 ಸಿಕ್ಸರ್ ಸಿಡಿಸಿದ್ದಾರೆ. ಇದನ್ನೂ ಓದಿ: 2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

    ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಗಳಿಸಿರುವ ಬ್ಯಾಟರ್ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಮುಂಚೂಣಿಯಲ್ಲಿದ್ದಾರೆ. ಗಪ್ಟಿಲ್ ಒಟ್ಟು 121 ಪಂದ್ಯ (117 ಇನ್ನಿಂಗ್ಸ್)ಗಳಲ್ಲಿ 172 ಸಿಕ್ಸರ್ ಸಿಡಿಸಿದ್ದಾರೆ.

    ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohith Shrama) 136 ಪಂದ್ಯಗಳಲ್ಲಿ (128 ಇನ್ನಿಂಗ್ಸ್) 171 ಸಿಕ್ಸರ್ ಸಿಡಿಸಿ ವಿಶ್ವದ ಟಾಪ್ 2 ಹಾಗೂ ಭಾರತದ ಮೊದಲ ಆಟಗಾರರಾಗಿದ್ದಾರೆ. ನಂತರದಲ್ಲಿ ಕ್ರಿಸ್ ಗೇಲ್ 124 ಸಿಕ್ಸರ್, ಇಯಾನ್ ಮಾರ್ಗನ್ 120, ಆರನ್ ಫಿಂಚ್ 117, ಪಾಲ್ ಸ್ಟಿರ್ಲಿಂಗ್ 111, ಎವಿನ್ ಲೆವಿಸ್ 110, ಕಾಲಿನ್ ಮನ್ರೊ 107 ಸಿಕ್ಸರ್ ಸಿಡಿಸಿದ್ದಾರೆ. 104 ಪಂದ್ಯಗಳಲ್ಲಿ 104 ಸಿಕ್ಸರ್ ಸಿಡಿಸಿರುವ ವಿರಾಟ್ ಕೊಹ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ಭಾರತದ 2ನೇ ಹಾಗೂ ವಿಶ್ವದ 9ನೇ ಸ್ಥಾನದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 8 ಎಕರೆ ಜಮೀನಿನಲ್ಲಿ ಅನುಷ್ಕಾ-ವಿರಾಟ್ ಫಾರ್ಮ್ ಹೌಸ್: ದುಡ್ಡಿದ್ದೋರ ದುನಿಯಾ ಎಂದ ಫ್ಯಾನ್ಸ್

    8 ಎಕರೆ ಜಮೀನಿನಲ್ಲಿ ಅನುಷ್ಕಾ-ವಿರಾಟ್ ಫಾರ್ಮ್ ಹೌಸ್: ದುಡ್ಡಿದ್ದೋರ ದುನಿಯಾ ಎಂದ ಫ್ಯಾನ್ಸ್

    ಕ್ರಿಕೆಟಿಗ ವಿರಾಟ್ ಕೋಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಮದುವೆಯ ನಂತರ ಭಾರೀ ಮೊತ್ತದ ಜಮೀನು ಖರೀದಿಸಿ, ಅಲ್ಲೊಂದು ಫಾರ್ಮಹೌಸ್ ಕಟ್ಟುತ್ತಿದ್ದಾರೆ. ಸದ್ಯ ಬಿಟೌನ್ ನಲ್ಲಿ ಈ ಮನೆಯದ್ದೇ ಸದ್ದು. ಭಾರೀ ಮೊತ್ತ ಕೊಟ್ಟು ಖರೀದಿಸಿದ ಜಮೀನು ಬರೋಬ್ಬರಿ ಎಂಟು ಎಕರೆ ವಿಸ್ತೀರ್ಣ  ಹೊಂದಿದ್ದು, ಅಲ್ಲಿ ಬೃಹತ್ ಫಾರ್ಮಹೌಸ್ ತಲೆಯೆತ್ತಲಿದೆ. ಅದಕ್ಕಾಗಿ ನೂರು ಕೋಟಿಗೂ ಅಧಿಕ ಖರ್ಚು ಮಾಡಲಿದ್ದಾರಂತೆ ಅನುಷ್ಕಾ ದಂಪತಿ.

    ಈ ಎಂಟು ಎಕರೆ ಜಮೀನಿನಲ್ಲಿ ನಿರ್ಮಿಸಲ್ಪಡುತ್ತಿರುವ ಫಾರ್ಮಹೌಸ್ ಇರುವುದು ಮುಂಬೈನ ಪ್ರತಿಷ್ಠಿತ ಏರಿಯಾ ಬಾಗ್ ಪ್ರದೇಶದಲ್ಲಿ ಎಂದು ವರದಿಯಾಗಿದೆ. ಅಲಿಬಾಗ್ ಪ್ರದೇಶದ ಜಿರಾದ್ ಎಂಬ ಗ್ರಾಮದಲ್ಲಿ ತಮ್ಮ ಕನಸಿನ ಫಾರ್ಮಹೌಸ್ ಕಟ್ಟಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ವಾರಾಂತ್ಯಕ್ಕೆ ಕಳೆಯುವುದಕ್ಕಾಗಿ ಅವರು ಈ ಫಾರ್ಮಹೌಸ್ ಗೆ ಕೋಟಿ ಕೋಟಿ ಸುರಿಯುತ್ತಿದ್ದಾರೆ. ಹಾಗಾಗಿ ದುಡ್ಡಿದ್ದೋರು ದುನಿಯಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಧ್ರುವ ಸರ್ಜಾ

    ಹೆಂಡತಿಗೆ ಗಣಶೋತ್ಸವದ ಉಡುಗೊರೆಯಾಗಿ ಈ ಜಮೀನನನ್ನು ವಿರಾಟ್ ಕೊಟ್ಟಿದ್ದು, ಗಣೇಶ ಚತುರ್ಥಿಯ ಒಂದು ದಿನ ಮುಂಚೆಯೇ ಅದನ್ನು ಖರೀದಿಸಲಾಗಿದೆ. ವಿರಾಟ್ ಸದ್ಯ ದುಬೈನಲ್ಲಿದ್ದರೂ, ರಿಯಲ್ ಎಸ್ಟೇಟ್ ಕಂಪನಿಯ ಈ ವಹಿವಾಟಿನ ಉಸ್ತುವಾರಿ ವಹಿಸಿದೆಯಂತೆ. ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಕೂಡ ಇದೇ ಏರಿಯಾದಲ್ಲೇ ಮನೆ ಹೊಂದಿದ್ದು, ಮತ್ತೊಬ್ಬ ಕ್ರಿಕೆಟಿಗ ಅದೇ ಏರಿಯಾದಲ್ಲಿ ಜಮೀನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಂಬೈ ಬೀದಿಗಳಲ್ಲಿ ಸುತ್ತಾಡಿದ ವಿರಾಟ್-ಅನುಷ್ಕಾ ಜೋಡಿ

    ಮುಂಬೈ ಬೀದಿಗಳಲ್ಲಿ ಸುತ್ತಾಡಿದ ವಿರಾಟ್-ಅನುಷ್ಕಾ ಜೋಡಿ

    ಬಾಲಿವುಡ್‌ನ ಸ್ಟಾರ್ ದಂಪತಿ ವಿರಾಟ್ ಮತ್ತು ಅನುಷ್ಕಾ ಇದೀಗ ಹೊಸ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮುಂಬೈನ ಬೀದಿ ಬೀದಿಗಳಲ್ಲಿ ಸುತ್ತಾಡುತ್ತಿರುವ ಈ ಜೋಡಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

    ವಿರಾಟ್ ಕೊಹ್ಲಿ ಏಕಾಂಗಿಯಾಗಿ ಭಾರತ ತಂಡವನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಆದರೆ ಸದ್ಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ವಿರಾಟ್ ಅನೇಕ ದಿನಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಬಿಸಿಸಿಐ ಕೆಲ ಸರಣಿಗಳಿಂದ ವಿಶ್ರಾಂತಿ ನೀಡಿತ್ತು. ಸದ್ಯ ವಿರಾಟ್, ಅನುಷ್ಕಾ ಶರ್ಮಾ ಜತೆ ಸಮಯ ಕಳೆಯುತ್ತಿದ್ದು, ಇದೀಗ ಮುಂಬೈನ ಬೀದಿಗಳಲ್ಲಿ ಈ ಜೋಡಿ ಒಟ್ಟಾಗಿ ಸುತ್ತಾಡುತ್ತಿದ್ದಾರೆ. ಇದನ್ನೂ ಓದಿ:ದೊಡ್ಮನೆಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪು ಅಂತ ಹೆಸರಿಟ್ಟ ಶಿವಣ್ಣ

     

    View this post on Instagram

     

    A post shared by Viral Bhayani (@viralbhayani)

    ಇತ್ತೀಚೆಗೆ, ಜಾಹೀರಾತು ಚಿತ್ರೀಕರಣದ ನಂತರ ವಿರಾಟ್‌ ಮತ್ತು ಪತ್ನಿ ಅನುಷ್ಕಾ ಶರ್ಮಾ ಮುಂಬೈ ರಸ್ತೆಗಳಲ್ಲಿ ಸ್ಕೂಟರ್ ಮೇಲೆ ಹತ್ತಿ ಸವಾರಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿರಾಟ್ ಸ್ಕೂಟಿ ಓಡಿಸುತ್ತಿದ್ದರೆ, ಅನುಷ್ಕಾ ಶರ್ಮಾ ಅವರ ಹಿಂದೆ ಕುಳಿತಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಫ್ಯಾನ್ಸ್, ಸೆಲೆಬ್ರಿಟಿ ದಂಪತಿಯ ಸ್ಕೂಟರ್ ರೈಡ್ ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]