Tag: anushka sharma

  • ಫ್ಯಾಮಿಲಿಗಾಗಿ ನಟಿ ಅನುಷ್ಕಾ ಶರ್ಮಾ ಗಟ್ಟಿ ನಿರ್ಧಾರ

    ಫ್ಯಾಮಿಲಿಗಾಗಿ ನಟಿ ಅನುಷ್ಕಾ ಶರ್ಮಾ ಗಟ್ಟಿ ನಿರ್ಧಾರ

    ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಸಿನಿಮಾ- ಕುಟುಂಬದ ಜವಾಬ್ದಾರಿ ಎರಡನ್ನು ಕೂಡ ಬ್ಯಾಲೆನ್ಸ್ ಮಾಡ್ತಿದ್ದಾರೆ. ಬೆಸ್ಟ್ ತಾಯಿ, ಪತ್ನಿಯಾಗಿ ಅನುಷ್ಕಾ ಸೈ ಎನಿಸಿಕೊಂಡಿದ್ದಾರೆ. ಬೆಳ್ಳಿತೆರೆಯಲ್ಲಿ ಬೆಸ್ಟ್ ನಟಿಯಾಗಿ ಗಮನ ಸೆಳೆದ ಅನುಷ್ಕಾ ನಡೆಗೆ ಇದೀಗ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತಹದ್ದು, ಏನಾಯ್ತು ಅಂತೀರಾ.? ಇಲ್ಲಿದೆ ಉತ್ತರ

    ಶಾರುಖ್ ಖಾನ್, ಆಮೀರ್ ಖಾನ್, ರಣ್‌ಬೀರ್ ಕಪೂರ್ ಜೊತೆ ತೆರೆಹಂಚಿಕೊಂಡಿದ್ದ ನಟಿ ಅನುಷ್ಕಾ, ತಮಗೆ ಬೇಡಿಕೆ ಇರುವಾಗಲೇ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಜೊತೆ ಹಸೆಮಣೆ (Wedding) ಏರಿದ್ದರು. ಮದುವೆಯ ನಂತರವೂ ಸಿನಿಮಾದಲ್ಲಿ ನಟಿ ಅಭಿನಯಿಸಿದ್ದರು. ಆದರೆ ಮಗಳ ಜನನ ನಂತರ ಕೊಂಚ ಅನುಷ್ಕಾ ತೆರೆಮರೆಗೆ ಸರಿದರು. ಮಗಳ ಆರೈಕೆಯಲ್ಲಿ ಬ್ಯುಸಿಯಾದರು. ಇದನ್ನೂ ಓದಿ:‘ಮೇಮ್ ಫೇಮಸ್’ ಮೆಚ್ಚಿದ ರಾಜಮೌಳಿ : ಲಹರಿ ಫಿಲ್ಮ್ಸ್ ನಿರ್ಮಾಣದ ತೆಲುಗಿನ 2ನೇ ಚಿತ್ರವೂ ಹಿಟ್

    ಈಗ ಮತ್ತೆ ಸಿನಿಮಾ- ಕುಟುಂಬ ಎರಡನ್ನು ನಿಭಾಯಿಸುತ್ತಾ ಆಕ್ಟೀವ್ ಆಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಯಾಕೆ ಹೆಚ್ಚು ಸಿನಿಮಾಗಳನ್ನ ಒಪ್ಪಿಕೊಳ್ಳಲ್ಲ ಎಂದು ನಟಿ ಮಾತನಾಡಿದ್ದಾರೆ. ಪುತ್ರಿ ವಮಿಕಾ (Vamika) ಇನ್ನೂ ಚಿಕ್ಕವಳು, ಅವಳಿಗೆ ನನ್ನ ಸಮಯ ಹೆಚ್ಚು ಕೊಡಬೇಕಾಗುತ್ತದೆ. ವಿರಾಟ್ ಶೇಷ್ಠ ತಂದೆ, ಮಗಳಿಗಾಗಿ ಸಮಯ ಮೀಸಲಿಡುತ್ತಾರೆ. ಮಗಳಿಗೆ ನನ್ನ ಅಗತ್ಯ ಹೆಚ್ಚಿದೆ. ಹಾಗಾಗಿ ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಸಿನಿಮಾ ಮಾಡೋಕೆ ನಾನು ಇಷ್ಟ ಪಡೋದಿಲ್ಲ ಎಂದು ನಟಿ ಮಾತನಾಡಿದ್ದಾರೆ. ಅನುಷ್ಕಾ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.

    ಇದೀಗ ಅನುಷ್ಕಾ ಸಹೋದರನ ನಿರ್ಮಾಣದಲ್ಲಿ ಹೊಸ ವೆಬ್ ಸೀರಿಸ್‌ವೊಂದು ಮೂಡಿ ಬರಲಿದೆ. ಸಮಂತಾ- ಅನುಷ್ಕಾ ಒಟ್ಟಿಗೆ ನಟಿಸಲಿದ್ದಾರೆ. ಈ ಬಗ್ಗೆ ಇತ್ತೀಚಿಗೆ ಬಿಗ್ ಅಪ್‌ಡೇಟ್ ನೀಡಲಾಗಿತ್ತು.

  • ಹೆಚ್ಚು ಸಿನಿಮಾ ಮಾಡಲಾರೆ ಎಂದು ಶಾಕಿಂಗ್ ನ್ಯೂಸ್ ಕೊಟ್ಟ ಅನುಷ್ಕಾ ಶರ್ಮಾ

    ಹೆಚ್ಚು ಸಿನಿಮಾ ಮಾಡಲಾರೆ ಎಂದು ಶಾಕಿಂಗ್ ನ್ಯೂಸ್ ಕೊಟ್ಟ ಅನುಷ್ಕಾ ಶರ್ಮಾ

    ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

    ಮಗುವಾದ ನಂತರ ಅನುಷ್ಕಾ ಬಹುತೇಕ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಟ್ಟಿದ್ದಾರೆ. ಜೊತೆಗೆ ಪತಿ ವಿರಾಟ್ ಕೊಹ್ಲಿ (Virat Kohli) ಜೊತೆ ಸಾಕಷ್ಟು ಪ್ರವಾಸವನ್ನು ಮಾಡಿದ್ದಾರೆ. ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ತಾವು ಹೀಗೆಯೇ ಇರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

    ನನಗೆ ಒಪ್ಪುವಂತಹ ಮತ್ತು ಪಾತ್ರವನ್ನು ನಾನೇ ಮಾಡಬೇಕು ಅನ್ನುವಂತಹ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಪರವಾಗಿಲ್ಲ. ಒಪ್ಪಿಕೊಂಡ ಪಾತ್ರಗಳು ಅಭಿಮಾನಿಗಳಿಗೆ ಹಿಡಿಸಬೇಕು. ನಟಿಸಲು ನನಗೇನೂ ಅವಸರವಿಲ್ಲ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.

    ಬಾಲಿವುಡ್ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಅನುಷ್ಕಾ, ಅನೇಕ ಹಿಟ್ ಚಿತ್ರಗಳನ್ನು ಕೊಟ್ಟವರು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದವರು. ಇದೀಗ ಸಿನಿಮಾ ರಂಗದಿಂದ ಕ್ರಮೇಣ ದೂರವಾಗುವ ಕುರಿತು ಮಾತನಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

  • ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನದಲ್ಲಿ ಅನುಷ್ಕಾ ಸವಾರಿ: ಪೊಲೀಸರು ದಂಡ ಹಾಕಿದ್ದೆಷ್ಟು?

    ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನದಲ್ಲಿ ಅನುಷ್ಕಾ ಸವಾರಿ: ಪೊಲೀಸರು ದಂಡ ಹಾಕಿದ್ದೆಷ್ಟು?

    ಮೊನ್ನೆಯಷ್ಟೇ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಲ್ಮೆಟ್ ಇಲ್ಲದೇ ದ್ವಿಚಕ್ರ (Bike) ವಾಹನದಲ್ಲಿ ಸವಾರಿ ಮಾಡಿದರು ಎನ್ನುವ ಕಾರಣಕ್ಕಾಗಿ ಸಖತ್ ಟ್ರೋಲ್ ಆಗಿದ್ದರು. ಅಲ್ಲದೇ, ಕೆಲವರು ಮುಂಬೈ ಪೊಲೀಸರಿಗೆ ಆ ಫೋಟೋ ಟ್ಯಾಗ್ ಮಾಡಿ, ಕ್ರಮ ತಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇಂಥದ್ದೇ ಕಾರಣಕ್ಕಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಕೂಡ ಟ್ರೋಲ್ ಆಗಿದ್ದರು. ಅನುಷ್ಕಾಗೂ ದಂಡ (Penalty) ಹಾಕಿ ಎಂದು ಹಲವರು ಹೇಳಿದ್ದರು.

    ಹೆಲ್ಮೆಟ್ ಹಾಕದೇ ಪ್ರಯಾಣ ಮಾಡಿದ್ದಕ್ಕಾಗಿ ಅಮಿತಾಭ್ ಮತ್ತು ಅನುಷ್ಕಾ ಮೇಲೆ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿದ್ದಂತೆಯೇ ಅಮಿತಾಭ್ ಜಾಣತನ ಮೆರೆದುಬಿಟ್ಟರು. ನಾನು ಸವಾರಿ ಮಾಡಿಲ್ಲ. ಅದು ಶೂಟಿಂಗ್ ಸ್ಥಳದಲ್ಲಿ ಆಗಿರುವಂಥದ್ದು. ನಲವತ್ತು ಮೀಟರ್ ಕೂಡ ವಾಹನ ಚಲಿಸಿಲ್ಲ ಎಂದು ಹೇಳುವ ಮೂಲಕ ಸಮಜಾಯಿಸಿ ನೀಡಿದ್ದರು. ಬೈಕ್ ಏರುವಂತಹ ಸಂದರ್ಭ ಬಂದರೆ ಹೆಲ್ಮೆಟ್ ಹಾಕುತ್ತೇನೆ ಎಂದೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಜನಾರ್ದನ್ ರೆಡ್ಡಿಗೂ ‘ಆದಿಕೇಶವ’ ಸಿನಿಮಾ ಕಥೆಗೂ ಸಂಬಂಧ ಇದೆಯಾ?

    ಆದರೆ, ಅನುಷ್ಕಾ ಶರ್ಮಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ಬೈಕ್ ಓಡಿಸಿದ್ದ ಅವರ ಬಾಡಿ ಗಾರ್ಡ್ (Bodygard) ಮೇಲೆ ಕ್ರಮ ತಗೆದುಕೊಳ್ಳಲಾಗಿದೆ. ಅನುಷ್ಕಾ ಅವರ ಬಾಡಿ ಗಾರ್ಡ್ ಅವತ್ತು ಬೈಕ್ ಓಡಿಸಿದ್ದರಿಂದ ಅವರಿಗೆ 10500 ರೂಪಾಯಿ ದಂಡವನ್ನು ಹಾಕಲಾಗಿದೆ. ಇಬ್ಬರಿಗೂ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

  • ಹೊಸ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಸಮಂತಾ- ಅನುಷ್ಕಾ ಶರ್ಮಾ

    ಹೊಸ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಸಮಂತಾ- ಅನುಷ್ಕಾ ಶರ್ಮಾ

    ಮಂತಾ- ಅನುಷ್ಕಾ ಶರ್ಮಾ (Anushka Sharma) ಅಭಿಮಾನಿಗಳಿಗೆ ಇದು ನಿಜಕ್ಕೂ ಗುಡ್ ನ್ಯೂಸ್. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆಕ್ಟೀವ್ ಆಗಿರುವ ಸ್ಯಾಮ್- ಅನುಷ್ಕಾ ಇದೀಗ ವೆಬ್ ಸರಣಿಯೊಂದರಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಹೊಸ ಪ್ರಾಜೆಕ್ಟ್‌ಗೆ ಅನುಷ್ಕಾ ಶರ್ಮಾ ಜೊತೆ ಸಮಂತಾ ಕೈಜೋಡಿಸಲಿದ್ದಾರೆ. ಇದನ್ನೂ ಓದಿ:‘ಶಾಕುಂತಲಂ’ ಸಿನಿಮಾ ಸೋಲೊಪ್ಪಿಕೊಂಡ ನಿರ್ಮಾಪಕ ದಿಲ್ ರಾಜು

    ಬ್ಯೂಟಿ ಕ್ವೀನ್ ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ ಫೇಮಸ್ ಆಗಿದ್ರೆ, ಸಮಂತಾ (Samanatha) ಸೌತ್‌ನಲ್ಲಿ ಬೇಡಿಕೆಯಿರುವ ನಟಿ. ಇವರಿಬ್ಬರೂ ಒಟ್ಟಾಗಿ ಕೆಲಸ ಮಾಡಿದ್ರೆ ಹೇಗಿರುತ್ತೆ ಅಲ್ವಾ? ಇದೀಗ ಅಂತಹದ್ದೇ ಭಿನ್ನ ಪ್ರಯತ್ನಕ್ಕೆ ಈ ಜೋಡಿ ರೆಡಿಯಾಗಿದ್ದಾರೆ. ಮಹಿಳಾ ಪ್ರಧಾನ (Women Centric) ವೆಬ್ ಸರಣಿಯಲ್ಲಿ ಅನುಷ್ಕಾಗೆ ಸಮಂತಾ ಸಾಥ್ ನೀಡಲಿದ್ದಾರೆ. ಈಗಾಗಲೇ ಅನುಷ್ಕಾ- ಸ್ಯಾಮ್ ಇಬ್ಬರೂ ಹಲವು ಬಾರಿ ಭೇಟಿಯಾಗಿದ್ದು, ವೆಬ್ ಸರಣಿ (Web Series)  ಬಗ್ಗೆ ಮಾತುಕತೆ ಆಗಿದೆ.

    ಸಮಂತಾ ಕೂಡ ಕಥೆ ಇಷ್ಟವಾಗಿ ಟೀಂಗೆ ಓಕೆ ಎಂದಿದ್ದಾರೆ. ಅನುಷ್ಕಾ- ಸಮಂತಾ ಒಟ್ಟಾಗಿ ಕೆಲಸ ಮಾಡ್ತಿರುವ ಈ ವೆಬ್ ಸರಣಿಗೆ ಅನುಷ್ಕಾ ಸಹೋದರ ಕರ್ಣೇಶ್ ಶರ್ಮಾ (Karnesh Sharma) ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಪಾತಾಳ್ ಲೋಕ್, ಬುಲ್ ಬುಲ್, ಪರಿ ವೆಬ್ ಸರಣಿಯನ್ನ ಡೈರೆಕ್ಷನ್ ಮಾಡಿ ಕರ್ಣೇಶ್ ಸೈ ಎನಿಸಿಕೊಂಡಿದ್ದಾರೆ.

    ಸಮಂತಾ ಅವರು ಈಗಾಗಲೇ ‘ದಿ ಫ್ಯಾಮಿಲಿ ಮೆನ್ 2’ ವೆಬ್ ಸರಣಿ ಮೂಲಕ ಮನಗೆದ್ದಿದ್ದಾರೆ. ಬಾಲಿವುಡ್‌ನ ‘ಸಿಟಾಡೆಲ್’ (Citadel) ವೆಬ್ ಸರಣಿಯಲ್ಲಿ ಸ್ಯಾಮ್ ನಟಿಸುತ್ತಿದ್ದಾರೆ. ಸದ್ಯ ಅನುಷ್ಕಾ- ಸಮಂತಾ ಒಟ್ಟಾಗಿ ನಟಿಸೋ ಪ್ರಾಜೆಕ್ಟ್ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗಿದೆ. ಇಬ್ಬರ ಕಾಂಬಿನೇಷನ್‌ ವೆಬ್‌ ಸರಣಿ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ಜೈಸ್ವಾಲ್ ಕ್ಯಾಚ್ ಹಿಡಿದು ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ

    ಜೈಸ್ವಾಲ್ ಕ್ಯಾಚ್ ಹಿಡಿದು ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ರೋಚಕತೆಯಿಂದ ಕೂಡಿದ್ದ ಆರ್‌ಸಿಬಿ (RCB) ಹಾಗೂ ರಾಜಸ್ಥಾನ್ ರಾಯಲ್ಸ್ (Rajasthan Royals) ನಡುವಿನ IPL ಪಂದ್ಯದ ವೇಳೆ ಕೊಹ್ಲಿಯ (Virat Kohli) ಫ್ಲೈಯಿಂಗ್ ಕಿಸ್‍ಗೆ ಅನುಷ್ಕಾ ಶರ್ಮಾ (Anushka Sharma) ರೋಮಾಂಚನಗೊಂಡ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‍ನಿಂದ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯದ ಸಮಯದಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೆಡೆಗೆ ಹಾರಿಸಿದ ಪ್ರಣಯ ಸೂಚಕ ಸಿಹಿಮುತ್ತು ಕೊಹ್ಲಿ ಪ್ರೇಮಿಗಳ ಹೃದಯಗಳನ್ನು ಗೆದ್ದಿತು. ಯಶಸ್ವಿ ಜೈಸ್ವಾಲ್ (Jaiswal) ಅವರು ಬ್ಯಾಟ್ ಬೀಸಿದಾಗ ಕೊಹ್ಲಿಯ ಕೈಗೆ ನೇರವಾಗಿ ಕ್ಯಾಚ್ ಹೋಯಿತು. ಅದೇ ಸಂಭ್ರಮದಲ್ಲಿ ಕೊಹ್ಲಿ, ಅನುಷ್ಕಾ ಅವರೆಡೆಗೆ ಆನ್‍ಫೀಲ್ಡ್‌ನಿಂದಲೇ ಸಿಹಿ ಮುತ್ತು ರವಾನಿಸಿದರು.

    ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 7 ರನ್‍ಗಳ ರೋಚಕ ಗೆಲುವು ಸಾಧಿಸಲು ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ (Maxwell) ಇಬ್ಬರಿಂದ ದಾಖಲಾದ ಶತಕ ಪ್ರಮುಖ ಪಾತ್ರವಹಿಸಿತು.

    ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. 190 ರನ್‍ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: BCCIಗೆ ಲಕ್ಷ ಲಕ್ಷ ನಷ್ಟ – ಅರ್ಷ್‌ದೀಪ್‌ ಮುರಿದ 2 ಸ್ಟಂಪ್ಸ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..

  • ಕರಣ್ ಜೋಹಾರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಂಗನಾ

    ಕರಣ್ ಜೋಹಾರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಂಗನಾ

    ಬಾಲಿವುಡ್ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹಾರ್ (Karan Johar) ವಿರುದ್ಧದ ವಾಗ್ದಾಳಿಯನ್ನು ನಟಿ ಕಂಗನಾ ರಣಾವತ್ (Kangana Ranaut) ಮುಂದುವರೆಸಿದ್ದಾರೆ. ನಿರಂತರವಾಗಿ ಕರಣ್ ವಿರುದ್ಧ ಪೋಸ್ಟ್ ಮಾಡುತ್ತಿರುವ ಅವರು, ಇದೀಗ ‘ಚಾಚಾ ಚೌಧರಿ’ ಎಂದು ಜರಿದಿದ್ದಾರೆ. ನಾನು ನಿರ್ಮಾಪಕಿಯಾಗಿ ಯಶಸ್ವಿಯಾದರೆ ನಿನ್ನ ಮುಖಕ್ಕೆ ಉಜ್ಜುತ್ತೇನೆ ಎಂದು ಗುಡುಗಿದ್ದಾರೆ.

    ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಂಗನಾ, ನೇರವಾಗಿ ಬಾಲಿವುಡ್ ಮಾಫಿಯಾ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಕರಣ್ ಕೂಡ ಇದ್ದಾರೆ ಎಂದಿದ್ದಾರೆ. ಈ ಮಾತು ಸಾಕಷ್ಟು ವಿವಾದವನ್ನು (controversy) ಎಬ್ಬಿಸಿತ್ತು. ಅಲ್ಲಿಂದ ಕಂಗನಾ ಮತ್ತು ಕರಣ್ ಹಾವು ಮುಂಗಸಿ ರೀತಿಯಲ್ಲಿ ಕಿತ್ತಾಡುವುದಕ್ಕೆ ಶುರು ಮಾಡಿದರು. ಕರಣ್ ಬಗ್ಗೆ ಯಾರೇ ನೆಗೆಟಿವ್ ಕಾಮೆಂಟ್ ಮಾಡಿದರೂ, ಕಂಗನಾ ಅವರ ಪರವಾಗಿ ನಿಂತುಕೊಳ್ಳುತ್ತಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಮೊನ್ನೆಯಷ್ಟೇ ಕರಣ್ ವಿಚಾರವಾಗಿ ಅನುಷ್ಕಾ ಶರ್ಮಾ ಬೆನ್ನಿಗೆ ನಿಂತಿದ್ದರು ಕಂಗನಾ.  2016ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಶರ್ಮಾ (Anushka Sharma) ಮತ್ತು ಕರಣ್ ಜೋಹಾರ್ ವೇದಿಕೆಯ ಮೇಲಿದ್ದರು. ಆ ಸಮಯದಲ್ಲಿ ಕರಣ್ ಮಾತನಾಡುತ್ತಾ, ‘ಅನುಷ್ಕಾಳ ಕರಿಯರ್  ನಾಶ ಮಾಡಬೇಕು ಎಂದುಕೊಂಡಿದ್ದೆ’ ಎನ್ನುತ್ತಾರೆ. ಅದಕ್ಕೆ ಅವರು ಕಾರಣವನ್ನೂ ಕೊಡುತ್ತಾರೆ. ಅನುಷ್ಕಾ ನಟನೆಯ ಚೊಚ್ಚಲು ಚಿತ್ರಕ್ಕೆ ಆಯ್ಕೆ ಆಗುವ ಮುನ್ನ, ಅವರ ಫೋಟೋವನ್ನು ನಿರ್ದೇಶಕರು ನನ್ನ ಬಳಿ ತಂದಿದ್ದರು. ಅನುಷ್ಕಾ ಫೋಟೋ ನೋಡಿ, ಇವರು ಬೇಡ ಅಂದಿದ್ದೆ. ನನ್ನ ಹತ್ತಿರವೇ ಒಬ್ಬಳು ನಾಯಕಿ ಇದ್ದಾಳೆ ಎಂದೂ ಹೇಳಿದ್ದೆ. ಕೊನೆಗೂ ಅನುಷ್ಕಾ ಅವರೇ ಆಯ್ಕೆಯಾದರು’ ಎಂದಿದ್ದರು.

    ಈ ವಿಚಾರವಾಗಿ ಕಂಗನಾ ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದರು. ‘ಕರಣ್ ಜೋಹಾರ್ ಇಂತಹ ಕೆಲಸಗಳನ್ನು ಮಾಡಲು ಫೇಮಸ್. ಯಾರದ್ದೆಲ್ಲ ಕರಿಯರ್ ನಾಶ ಮಾಡಿದ್ದಾರೆ ಎನ್ನುವ ಪಟ್ಟಿ ನನ್ನ ಬಳಿ ಇದೆ. ಇಂತಹ ಕೆಲಸ ಮಾಡಲೆಂದು ಅವರು ಇರುವುದು’ ಎಂದು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದರು.

    ಕಂಗನಾ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರಣ್ ಜೋಹಾರ್ ಬಗ್ಗೆ ಮತ್ತಷ್ಟು ನೆಗೆಟಿವ್ ಕಾಮೆಂಟ್ ಗಳನ್ನು ಬರೆಯಲಾಗುತ್ತಿದೆ. ಯಾರಿಗೆಲ್ಲ ಕರಣ್ ತೊಂದರೆ ಕೊಟ್ಟಿದ್ದಾರೆ ಎನ್ನುವ ಒಂದೊಂದೇ ಹೆಸರುಗಳನ್ನು ನೆಟ್ಟಿಗರು ಹಾಕುತ್ತಿದ್ದಾರೆ. ಅಲ್ಲಿಗೆ ಕಂಗನಾ ಹೊಡೆದ ಕಲ್ಲು ಹಲವು ದಿಕ್ಕುಗಳನ್ನು ಆವರಿಸುತ್ತಿದೆ.

  • ಕರಣ್ ಜೋಹಾರ್ ವಿರುದ್ಧ ಮತ್ತೆ ಕೆಂಡಕಾರಿದ ಕಂಗನಾ ರಣಾವತ್

    ಕರಣ್ ಜೋಹಾರ್ ವಿರುದ್ಧ ಮತ್ತೆ ಕೆಂಡಕಾರಿದ ಕಂಗನಾ ರಣಾವತ್

    ಬಾಲಿವುಡ್ (Bollywood) ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹಾರ್ (Karan Johar) ಕಂಡರೆ ಕಂಗನಾ ರಣಾವತ್ (Kangana Ranaut) ಗೆ ಅದೇನಾಗತ್ತೋ ಗೊತ್ತಿಲ್ಲ. ಕರಣ್ ಹೆಸರು ಕೇಳಿ ಬಂದಾಗೆಲ್ಲ ಕಂಗನಾ ಕೆಂಡವಾಗುತ್ತಾರೆ. ಅದರಲ್ಲೂ ಕರಣ್ ಬಗ್ಗೆ ಯಾರಾದರೂ ನೆಗೆಟಿವ್ ಮಾತನಾಡಿದರೆ, ಅವರ ಬೆನ್ನಿಗೆ ನಿಲ್ಲುತ್ತಾರೆ. ಇದೀಗ ಹಳೆ ವಿಡಿಯೋ ವಿಚಾರವಾಗಿ ಮತ್ತೆ ಗುಡುಗಿದ್ದಾರೆ ಬಿಟೌನ್ ಅಂದಗಾತಿ ಕಂಗನಾ.

    2016ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಶರ್ಮಾ (Anushka Sharma) ಮತ್ತು ಕರಣ್ ಜೋಹಾರ್ ವೇದಿಕೆಯ ಮೇಲಿದ್ದರು. ಆ ಸಮಯದಲ್ಲಿ ಕರಣ್ ಮಾತನಾಡುತ್ತಾ, ‘ಅನುಷ್ಕಾಳ ಕರಿಯರ್  ನಾಶ ಮಾಡಬೇಕು ಎಂದುಕೊಂಡಿದ್ದೆ’ ಎನ್ನುತ್ತಾರೆ. ಅದಕ್ಕೆ ಅವರು ಕಾರಣವನ್ನೂ ಕೊಡುತ್ತಾರೆ. ಅನುಷ್ಕಾ ನಟನೆಯ ಚೊಚ್ಚಲು ಚಿತ್ರಕ್ಕೆ ಆಯ್ಕೆ ಆಗುವ ಮುನ್ನ, ಅವರ ಫೋಟೋವನ್ನು ನಿರ್ದೇಶಕರು ನನ್ನ ಬಳಿ ತಂದಿದ್ದರು. ಅನುಷ್ಕಾ ಫೋಟೋ ನೋಡಿ, ಇವರು ಬೇಡ ಅಂದಿದ್ದೆ. ನನ್ನ ಹತ್ತಿರವೇ ಒಬ್ಬಳು ನಾಯಕಿ ಇದ್ದಾಳೆ ಎಂದೂ ಹೇಳಿದ್ದೆ. ಕೊನೆಗೂ ಅನುಷ್ಕಾ ಅವರೇ ಆಯ್ಕೆಯಾದರು’ ಎಂದಿದ್ದರು.

    ಈ ವಿಚಾರವಾಗಿ ಕಂಗನಾ ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ‘ಕರಣ್ ಜೋಹಾರ್ ಇಂತಹ ಕೆಲಸಗಳನ್ನು ಮಾಡಲು ಫೇಮಸ್. ಯಾರದ್ದೆಲ್ಲ ಕರಿಯರ್ ನಾಶ ಮಾಡಿದ್ದಾರೆ ಎನ್ನುವ ಪಟ್ಟಿ ನನ್ನ ಬಳಿ ಇದೆ. ಇಂತಹ ಕೆಲಸ ಮಾಡಲೆಂದು ಅವರು ಇರುವುದು’ ಎಂದು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಕಂಗನಾ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರಣ್ ಜೋಹಾರ್ ಬಗ್ಗೆ ಮತ್ತಷ್ಟು ನೆಗೆಟಿವ್ ಕಾಮೆಂಟ್ ಗಳನ್ನು ಬರೆಯಲಾಗುತ್ತಿದೆ. ಯಾರಿಗೆಲ್ಲ ಕರಣ್ ತೊಂದರೆ ಕೊಟ್ಟಿದ್ದಾರೆ ಎನ್ನುವ ಒಂದೊಂದೇ ಹೆಸರುಗಳನ್ನು ನೆಟ್ಟಿಗರು ಹಾಕುತ್ತಿದ್ದಾರೆ. ಅಲ್ಲಿಗೆ ಕಂಗನಾ ಹೊಡೆದ ಕಲ್ಲು ಹಲವು ದಿಕ್ಕುಗಳನ್ನು ಆವರಿಸುತ್ತಿದೆ.

  • ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?

    ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?

    ಬಾಲಿವುಡ್ (Bollywood) ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಈಗಾಗಲೇ ಸಾಕಷ್ಟು ಟೀಕೆಗಳನ್ನ ಎದುರಿಸುತ್ತಿದ್ದಾರೆ. ನೆಪೋಟಿಸಂ ವಿಷ್ಯ ಸೇರಿದಂತೆ ಹಲವು ವಿಚಾರಗಳಿಗೆ ಕರಣ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಪ್ರಿಯಾಂಕಾ ಚೋಪ್ರಾ ವಿವಾದದ ಬೆನ್ನಲ್ಲೇ ಅನುಷ್ಕಾ ಶರ್ಮಾ (Anushka Sharma) ಸಿನಿಮಾ ಕೆರಿಯರ್ (Career) ನಾಶ ಮಾಡಿಬಿಡುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಕರಣ್‌ ಜೋಹರ್ ಒಪ್ಪಿಕೊಂಡಿದ್ದಾರೆ.

    Rab Ne Bana Di Jodi ಸಿನಿಮಾ 2008ರಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಶಾರುಖ್ ಖಾನ್- ಅನುಷ್ಕಾ ಶರ್ಮಾ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ಆದರೆ ತೆರೆಯ ಹಿಂದೆ, ಈ ಸಿನಿಮಾ ಶೂಟಿಂಗ್‌ಗಿಂತ ಮುಂಚೆ ನಿರ್ದೇಶಕ ಆದಿತ್ಯಾ ಚೋಪ್ರಾಗೆ ತಮ್ಮ ಸಿನಿಮಾದಿಂದ ಅನುಷ್ಕಾರನ್ನು ಕೈ ಬಿಡುವಂತೆ ಸಲಹೆ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಅನುಷ್ಕಾ ಬೇಡ ಎಂದಿದ್ದೇಕೆ? ಬೇರೆ ಯಾವ ನಟಿಯ ಹೆಸರನ್ನು ಸೂಚಿಸಿದ್ದರು? ಅಸಲಿ ವಿಚಾರವೇನು ಎಂಬುದನ್ನ ಕರಣ್ ಜೋಹರ್ ಬಾಯ್ಬಿಟ್ಟಿದ್ದಾರೆ.

    ನಿರ್ದೇಶಕ ಆದಿತ್ಯ ಚೋಪ್ರಾ ‘ರಬ್ ನೆ ಬನಾ ದಿ ಜೋಡಿ’ ಸಿನಿಮಾ ಮಾಡಲು ಹೊರಟಿದ್ದರು. ಶಾರುಖ್ ಖಾನ್‌ಗೆ (Sharukh Khan) ಲೀಡ್ ರೋಲ್‌ಗೆ ಆಯ್ಕೆ ಮಾಡಲಾಗಿತ್ತು. ಇತ್ತ ಹೀರೊಯಿನ್ ಹುಡುಕಾಟ ನಡೆಯುತ್ತಿತ್ತು. ಈ ವೇಳೆ ಆದಿತ್ಯ ಚೋಪ್ರಾ, ಕರಣ್ ಬಳಿ ಅನುಷ್ಕಾ ಶರ್ಮಾ ಫೋಟೊ ತೋರಿಸಿ ಅಭಿಪ್ರಾಯ ಕೇಳಿದ್ದರು. ಆಗ ಕರಣ್ ಮತ್ತೊಬ್ಬ ನಟಿ ಸೋನಮ್ ಕಪೂರ್ (Sonam Kapoor) ಹೆಸರನ್ನು ಸೂಚಿಸಿದ್ದರು. ಇದನ್ನೂ ಓದಿ:ರಾಜಕೀಯಕ್ಕೆ ಶುಭಾ ಪೂಂಜಾ ಎಂಟ್ರಿ ಕೊಡ್ತಾರಾ? ಸ್ಪಷ್ಟನೆ ನೀಡಿದ ನಟಿ

    ಬೇಡ ಬೇಡ.. ಅನುಷ್ಕಾರನ್ನ ಸಿನಿಮಾಗೆ ಹಾಕಿಕೊಳ್ಳೋಕೆ ಹುಚ್ಚು ಹಿಡಿದಿದೆಯಾ? ಈ ಸಿನಿಮಾಗಾಗಿ ಅನುಷ್ಕಾ ಜೊತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದೆ ಈ ಬಗ್ಗೆ ಕರಣ್ ಜೋಹರ್ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅನುಷ್ಕಾ ಶರ್ಮಾ ಸಿನಿಮಾ ಬದುಕು ನಾಶವಾಗುತ್ತಿತ್ತು ಎಂದು ಮಾತನಾಡಿದ್ದಾರೆ. ರಿಲೀಸ್ ಸಮಯದಲ್ಲಿ ಒಲ್ಲದ ಮನಸ್ಸಿನಿಂದ ಸಿನಿಮಾ ನೋಡಿದ್ದೆ, ಆ ಚಿತ್ರದ ಯಶಸ್ಸನ್ನ ತಡೆಯಲಾಗಲಿಲ್ಲ. ಈ ವಿಚಾರವಾಗಿ ಅನುಷ್ಕಾ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಕರಣ್ ಜೋಹರ್ ಹೇಳಿದ್ದಾರೆ.

    ‘ರಬ್ ನೆ ಬನಾ ದಿ ಜೋಡಿ’ ಸಿನಿಮಾ ಬಳಿಕ ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದಲ್ಲಿ ಅನುಷ್ಕಾ ಶರ್ಮಾ ನಟನೆ ನೋಡಿ ಮೆಚ್ಚಿಕೊಂಡರು. ಮುಂದೆ ತಮ್ಮದೇ ನಿರ್ಮಾಣದ ‘ಏ ದಿಲ್ ಹೇ ಮುಷ್ಕಿಲ್’ ಚಿತ್ರಕ್ಕೆ ಅನುಷ್ಕಾ ಶರ್ಮಾರನ್ನ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ರಣ್‌ಬೀರ್ ಕಪೂರ್, ಐಶ್ವರ್ಯ ರೈ ಜೊತೆ ಅನುಷ್ಕಾ ಶರ್ಮಾ ಅದ್ಭುತವಾಗಿ ನಟಿಸಿದರು.

  • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ವಿರುಷ್ಕಾ ಜೋಡಿ ಭೇಟಿ

    ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ವಿರುಷ್ಕಾ ಜೋಡಿ ಭೇಟಿ

    ಬಾಲಿವುಡ್‌ನ (Bollywood) ಸ್ಟಾರ್ ಕಪಲ್ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ (Viraat Kohli) ಜೋಡಿ ಇತ್ತೀಚಿಗೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನಕ್ಕೆ (Mahakaleshwara Temple) ವಿರುಷ್ಕಾ ಜೋಡಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಚಂದನವನಕ್ಕೆ ಎಂಟ್ರಿ ಕೊಟ್ಟ ವರ್ಲ್ಡ್ ಚಾಂಪಿಯನ್ ದಿ ಗ್ರೇಟ್ ಖಲಿ

    ನಟಿ ಅನುಷ್ಕಾ (Anushka Sharma) ಅವರು ಪಿಂಕ್ ಬಣ್ಣದ ಸೆಲ್ವಾರ್ ಧರಿಸಿದ್ದರೆ, ವಿರಾಟ್ ಧೋತಿ ಧರಿಸಿದ್ದಾರೆ. ಇತ್ತೀಚಿಗೆ ಭಾರತ -ಆಸ್ಟ್ರೇಲಿಯಾ ತಂಡದ ನಡುವೆ ಮೂರನೇ ಟೆಸ್ಟ್ ಮ್ಯಾಚ್ ಇಂದೋರ್‌ನಲ್ಲಿ ನಡೆಯಿತು. ಅಲ್ಲಿಂದ ಉಜ್ಜಯಿನಿಗೆ ಹತ್ತಿರವಿರುವ ಕಾರಣ, ಅನುಷ್ಕಾ ಜೋಡಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಇನ್ನೂ ನಟಿ ಅನುಷ್ಕಾ ಮುದ್ದು ಮಗಳ ಆರೈಕೆಯ ಜೊತೆಗೆ ಸಿನಿಮಾಗಳತ್ತ ಕೂಡ ಗಮನ ಕೊಡುತ್ತಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿ ಆಕ್ಟೀವ್ ಆಗುತ್ತಿದ್ದಾರೆ.

  • ಅನುಷ್ಕಾಳೇ ನನ್ನ ಸ್ಫೂರ್ತಿ ಎಂದು ಪತ್ನಿಯನ್ನು ಹಾಡಿ ಹೊಗಳಿದ ವಿರಾಟ್ ಕೊಹ್ಲಿ

    ಅನುಷ್ಕಾಳೇ ನನ್ನ ಸ್ಫೂರ್ತಿ ಎಂದು ಪತ್ನಿಯನ್ನು ಹಾಡಿ ಹೊಗಳಿದ ವಿರಾಟ್ ಕೊಹ್ಲಿ

    ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರಾಟ್ ಕೊಹ್ಲಿ (Virat Kohli) ಅವರು ಕ್ರಿಕೆಟ್ (Cricket) ಜಗತ್ತಿನಲ್ಲಿ ಮಾಡಿರುವ ಸಾಧನೆ ಅದೆಷ್ಟೋ ಜನರಿಗೆ ಸ್ಫೂರ್ತಿ. ಒಬ್ಬ ವ್ಯಕ್ತಿಯಾಗಿಯೂ ಕೂಡ ಅನೇಕರಿಗೆ ವಿರಾಟ್ ಮಾದರಿಯಾಗಿದ್ದಾರೆ. ಹೀಗಿರುವಾಗ ತನ್ನ ಜೀವನದಲ್ಲಿ ಸ್ಫೂರ್ತಿ ಯಾರು ಎಂಬುದರ ಬಗ್ಗೆ ವಿರಾಟ್ ಕೊಹ್ಲಿ ರಿವೀಲ್ ಮಾಡಿದ್ದಾರೆ.

    ಕ್ರಿಕೆಟಿಗ ವಿರಾಟ್ ಕೊಹ್ಲಿ- ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಇಬ್ಬರು ಹಲವು ವರ್ಷಗಳ ಡೇಟಿಂಗ್ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸ್ಟಾರ್ ಜೋಡಿಗಳಲ್ಲಿ ಒಬ್ಬರಾಗಿರುವ ವಿರುಷ್ಕಾ ಜೋಡಿಗೆ ಅಪಾರ ಅಭಿಮಾನಿಗಳಿದ್ದಾರೆ.

    ಇತ್ತೀಚಿಗೆ ಸಮಾರಂಭವೊಂದರಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಮಾತನಾಡಿದ್ದಾರೆ. ನಮ್ಮಿಬ್ಬರ ಮೊದಲ ಭೇಟಿ ಹೇಗಿತ್ತು ಎಂಬುದನ್ನ ವಿರಾಟ್ ಬಿಚ್ಚಿಟ್ಟಿದ್ದಾರೆ. ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ಬಗೆಯ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೆಯೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಯಿಸಿಕೊಳ್ಳಲು ಸಹಕರಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಮ್ಯಾಗಿಂತ ಸಾನ್ಯಗೆ ವಯಸ್ಸಾಯ್ತಾ? ಕಾಲೆಳೆದ ನೆಟ್ಟಿಗರು

    ನೀವು ಒಬ್ಬ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಬಿದ್ದಾಗ, ನಿಮ್ಮೊಳಗೆ ಆ ಬದಲಾವಣೆಗಳನ್ನ ಪ್ರತಿಕ್ರಿಯೆಗೊಳಿಸಲು ಪ್ರಾರಂಭಿಸುತ್ತೀರಿ. ಇನ್ನೂ ತಾಯಿಯಾಗಿ ಅನುಷ್ಕಾ ಮಾಡಿರುವ ತ್ಯಾಗಗಳು ದೊಡ್ಡವು. ಅವಳನ್ನು ನೋಡಿದಾಗ, ನನಗೆ ಏನೇ ಸಮಸ್ಯೆಗಳಿದ್ದರೂ ಏನೂ ಅಲ್ಲ ಎಂದು ಅನಿಸಿಬಿಡುತ್ತದೆ. ನನ್ನ ಪತ್ನಿ ಅನುಷ್ಕಾಳೇ ನನ್ನ ಜೀವನದ ಸ್ಫೂರ್ತಿ ಎಂದು ವಿರಾಟ್ ಕೊಹ್ಲಿ ಅವರು ಪತ್ನಿ ಬಗ್ಗೆ ಮಾತನಾಡಿದ್ದಾರೆ.