Tag: anushka sharma

  • ಗಿಫ್ಟ್ ಕೊಟ್ಟು ವಿರುಷ್ಕಾಗೆ ಸರ್ಪ್ರೈಸ್ ನೀಡಿದ ದೀಪಿಕಾ-ರಣವೀರ್

    ಗಿಫ್ಟ್ ಕೊಟ್ಟು ವಿರುಷ್ಕಾಗೆ ಸರ್ಪ್ರೈಸ್ ನೀಡಿದ ದೀಪಿಕಾ-ರಣವೀರ್

    ಮುಂಬೈ: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಯಾರಿಗೂ ತಿಳಿಯದಂತೆ ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ನವಜೀವನಕ್ಕೆ ಕಾಲಿಟ್ಟರು. ಈ ಜೋಡಿಯ ಮದುವೆ ವಿಷಯ ತಿಳಿಯುತ್ತಿದ್ದಂತೆ ಬಾಲಿವುಡ್ ಹಾಗೂ ಕ್ರಿಕೆಟ್ ಮಂದಿ ಟ್ವಿಟ್ಟರಿನಲ್ಲಿ ಶುಭ ಕೋರಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ವಿಭಿನ್ನ ರೀತಿಯಲ್ಲಿ ನವಜೋಡಿಗೆ ಶುಭಕೋರಿದ್ದಾರೆ.

    ವಿರಾಟ್ ಹಾಗೂ ಅನುಷ್ಕಾ ತಮ್ಮ ಮದುವೆಯ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡ ಮೇಲೆ ಅವರ ಮದುವೆಯ ವಿಷಯ ಎಲ್ಲರಿಗೂ ತಿಳಿಯಿತು. ಬಾಲಿವುಡ್ ಮಂದಿ, ಫ್ಯಾನ್ಸ್, ಹಾಗೂ ವಿರುಷ್ಕಾ ಅವರ ಗೆಳೆಯರಿಂದ ಟ್ವಿಟ್ಟರಿನಲ್ಲಿ ಶುಭಾಶಯಗಳ ಮಹಾಪೂರ ಹರಿದು ಬಂದಿತ್ತು. ಆದರೆ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಮಾತ್ರ ವಿರುಷ್ಕಾಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿಲ್ಲ.

    ವರದಿಗಳ ಪ್ರಕಾರ ದೀಪಿಕಾ ಹಾಗೂ ರಣ್‍ವೀರ್ ವಿರುಷ್ಕಾ ಜೋಡಿಗೆ ಶುಭ ಹಾರೈಕೆಯ ಸಂದೇಶದೊಂದಿಗೆ ಕೆಂಪು ಗುಲಾಬಿಯಿರುವ ಹೂಗುಚ್ಛವನ್ನು ಕಳುಹಿಸಿ ವೈಯಕ್ತಿಕವಾಗಿ ಶುಭ ಕೋರಿದ್ದಾರೆ. ದೀಪಿಕಾ ತಾವು ಮಾಡುವ ಕೆಲಸದಲ್ಲಿ ತನ್ನ ಸ್ವಂತಿಕ ತೋರಿಸುತ್ತಾರೆ. ಅದು ಅವರ ತಂಡವೇ ಆಗಲಿ ಅಥವಾ ಸ್ನೇಹಿತರಾಗಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಭಾವನೆಯನ್ನ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದುಕೊಂಡಿದ್ದಾರೆ.

    ವಿರಾಟ್ ಹಾಗೂ ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು, ಡಿಸೆಂಬರ್ 21ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ಇದಾದ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ನಡೆಯಲಿದ್ದು, ಅನುಷ್ಕಾ ತನ್ನ ಪತಿ ವಿರಾಟ್ ಜೊತೆ ದಕ್ಷಿಣ ಆಫ್ರಿಕಾಗೆ ಹೋಗಲಿದ್ದಾರೆ.

    ದಕ್ಷಿಣ ಆಫ್ರಿಕಾಗೆ ಹೋದ ಬಳಿಕ ಕೆಲವು ದಿನಗಳಲ್ಲೇ ಅನುಷ್ಕಾ ಒಬ್ಬರೇ ಭಾರತಕ್ಕೆ ಹಿಂದಿರುಗುತ್ತಿದ್ದು, ವಿರಾಟ್ ತಮ್ಮ ಪಂದ್ಯಕ್ಕಾಗಿ ದಕ್ಷಿಣ ಆಫ್ರಿಕಾದಲ್ಲೇ ಉಳಿದುಕೊಳ್ಳುತ್ತಿದ್ದಾರೆ. ವಿರಾಟ್ ಹಾಗೂ ಅನುಷ್ಕಾ ಮದುವೆ ವಿಷಯ ತಿಳಿಯುತ್ತಿದ್ದಂತೆ ಸೌತ್ ಆಫ್ರಿಕಾ ಹಿಟ್ಟರ್ ಎಬಿ ಡಿವಿಲಿಯರ್ಸ್ ವಿಶ್ ಮಾಡಿದ್ದು, ಹಲವು ಮಕ್ಕಳಾಗಲಿ ಎಂದು ಹರಸಿದ್ದಾರೆ.

  • ಅನುಷ್ಕಾ ಶರ್ಮಾ ಇನ್‍ ಸ್ಟಾಗ್ರಾಂನಲ್ಲಿ ಹಾಕಿದ ಈ ಒಂದು ಸೆಲ್ಫಿಗೆ ಒಂದೇ ದಿನದಲ್ಲಿ ಇಷ್ಟು ಲೈಕ್ಸ್!

    ಅನುಷ್ಕಾ ಶರ್ಮಾ ಇನ್‍ ಸ್ಟಾಗ್ರಾಂನಲ್ಲಿ ಹಾಕಿದ ಈ ಒಂದು ಸೆಲ್ಫಿಗೆ ಒಂದೇ ದಿನದಲ್ಲಿ ಇಷ್ಟು ಲೈಕ್ಸ್!

    ನವದೆಹಲಿ: ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಹನಿಮೂನ್ ನಲ್ಲಿದ್ದಾರೆ.

    ಗುರುವಾರ ವಿರಾಟ್ ಹಾಗೂ ಅನುಷ್ಕಾ ಪೋಷಕರು, ಸ್ನೇಹಿತರು ಇಟಲಿಯಿಂದ ಮುಂಬೈಗೆ ಬಂದಿಳಿದರು. ಆದರೆ ವಿರಾಟ್ ಹಾಗೂ ಅನುಷ್ಕಾ ಮಾತ್ರ ಭಾರತಕ್ಕೆ ಹಿಂದಿರುಗಲಿಲ್ಲ. ಮದುವೆ ಮುಗಿಸಿಕೊಂಡು ಈ ನವದಂಪತಿ ಹನಿಮೂನ್ ಗೆ ಹೋಗಿದ್ದಾರೆ.

    ಮಂಜಿನ ನಡುವೆ ನಿಂತು ತೆಗೆದ ಫೋಟೋವೊಂದನ್ನು ಅನುಷ್ಕಾ ಶರ್ಮಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಜೊತೆಗೆ ನಿಜಕ್ಕೂ ಸ್ವರ್ಗ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಪೋಸ್ಟ್ ಮಾಡಿದ ಒಂದೇ ದಿನ (18 ಗಂಟೆ)ಯಲ್ಲಿ 26.7 ಲಕ್ಷಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿದೆ.

    ವಿರಾಟ್ ಹಾಗೂ ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು, ಡಿಸೆಂಬರ್ 21ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ಇದಾದ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ನಡೆಯಲಿದ್ದು, ಅನುಷ್ಕಾ ತನ್ನ ಪತಿ ವಿರಾಟ್ ಜೊತೆ ದಕ್ಷಿಣ ಆಫ್ರಿಕಾಗೆ ಹೋಗಲಿದ್ದಾರೆ.

    ದಕ್ಷಿಣ ಆಫ್ರಿಕಾಗೆ ಹೋದ ಬಳಿಕ ಕೆಲವು ದಿನಗಳಲ್ಲೇ ಅನುಷ್ಕಾ ಒಬ್ಬರೆ ಭಾರತಕ್ಕೆ ಹಿಂದಿರುಗುತ್ತಿದ್ದು, ವಿರಾಟ್ ತಮ್ಮ ಪಂದ್ಯಕ್ಕಾಗಿ ದಕ್ಷಿಣ ಆಫ್ರಿಕಾದಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಹಾಗೂ ಅನುಷ್ಕಾ ಮದುವೆ ವಿಷಯ ತಿಳಿಯುತ್ತಿದ್ದಂತೆ ಸೌತ್ ಆಫ್ರಿಕಾ ಹಿಟ್ಟರ್ ಎಬಿ ಡಿವಿಲಿಯರ್ಸ್ ವಿಶ್ ಮಾಡಿದ್ದು, ಹಲವು ಮಕ್ಕಳಾಗಲಿ ಎಂದು ಹರಸಿದ್ದಾರೆ.

  • ಭಾರೀ ಟ್ವಿಸ್ಟ್, ಮಧ್ಯೆ ಬ್ರೇಕಪ್ ಸುದ್ದಿ, ಕೊನೆಗೆ ಮದ್ವೆ – ಇಲ್ಲಿದೆ ವಿರುಷ್ಕಾ ಲವ್ ಸ್ಟೋರಿ

    ಭಾರೀ ಟ್ವಿಸ್ಟ್, ಮಧ್ಯೆ ಬ್ರೇಕಪ್ ಸುದ್ದಿ, ಕೊನೆಗೆ ಮದ್ವೆ – ಇಲ್ಲಿದೆ ವಿರುಷ್ಕಾ ಲವ್ ಸ್ಟೋರಿ

    ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಧ್ಯೆ ಲವ್ ಇದ್ಯಾ? ಇಲ್ಲವೋ? ಇಬ್ಬರ ಮದುವೆ ಯಾವಾಗ ಈ ಸುದ್ದಿಗೆ ಈಗ ಪೂರ್ಣ ವಿರಾಮ ಬಿದ್ದಿದೆ. ಇಟಲಿಯಲ್ಲಿ ಇಬ್ಬರು ಮದುವೆಯಾಗುವ ಮೂಲಕ ಎಲ್ಲ ಅಂತೆ ಕಂತೆಗಳ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

    ಈ ಇಬ್ಬರನ್ನು ಆರಂಭದಲ್ಲಿ ಸ್ನೇಹಿತರನ್ನಾಗಿ ಮಾಡಿದ್ದು ಒಂದು ಜಾಹೀರಾತು. ಈ ಜಾಹೀರಾತಿನಿಂದ ಒಂದಾದ ಜೋಡಿ ಕೊನೆಗೆ ಮದುವೆ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಈಗ ಶಾಶ್ವತವಾಗಿ ಒಂದಾಗಿದ್ದಾರೆ.

    ಅದು 2013ರ ಸಮಯ, ಧೋನಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದರೆ, ಕೊಹ್ಲಿಗೆ ಉಪನಾಯಕನ ಪಟ್ಟ ಸಿಕ್ಕಿತ್ತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ 2010 ರಿಂದ 2013ರವರೆಗೆ ಭಾರತದ ಪರ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಗೆ ಕೊಹ್ಲಿ ಪಾತ್ರರಾಗಿದ್ದರು. 2008ರಲ್ಲೇ ‘ರಬ್ ನೆ ಬನಾದಿ ಜೋಡಿ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಅನುಷ್ಕಾ ಮೊದಲ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡರು. ಪಾತ್ರದಿಂದ ಪಾತ್ರಕ್ಕೆ ಉತ್ತಮ ನಿರ್ವಹಣೆ ತೋರಿದ ಪರಿಣಾಮ ಅನುಷ್ಕಾಗೂ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾದಂತೆ, ಇತ್ತ ಭರ್ಜರಿ ಆಟದಿಂದಾಗಿ ಕೊಹ್ಲಿಗೂ ಅಭಿಮಾನಿಗಳು ಹೆಚ್ಚಾದರು.

    ಇಬ್ಬರಿಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಾದಂತೆ ಶಾಂಪೂ ಕಂಪೆನಿಯೊಂದರ ಜಾಹೀರಾತಿಗೆ ಇಬ್ಬರು ಸಹಿ ಹಾಕಿದರು. ಈ ಮೂಲಕ ಮೊದಲ ಬಾರಿಗೆ ಅನುಷ್ಕಾ, ಕೊಹ್ಲಿ ಮುಖಾಮುಖಿ ಭೇಟಿಯಾದರು. ವಿಡಿಯೋ ಜಾಹೀರಾತಿನಲ್ಲಿ ಇಬ್ಬರ ನಟನೆ ಸೂಪರ್ ಆಗಿತ್ತು. ಈ ಜಾಹೀರಾತಿನಲ್ಲಿ ಅಭಿನಯ ನೋಡಿದ ಬಳಿಕ ಸಿನಿಮಾದಲ್ಲಿ ಅವಕಾಶ ಕೊಟ್ಟರೂ ಕೊಹ್ಲಿ ಅಭಿನಯಿಸುವ ಸಾಮರ್ಥ್ಯ  ಹೊಂದಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ಈ ಸ್ಪೆಷಲ್ ರಿಂಗ್ ಗಾಗಿ 3 ತಿಂಗಳು ಅಲೆದಾಡಿದ್ರಂತೆ ಕೊಹ್ಲಿ! ಇದರ ಬೆಲೆ ಎಷ್ಟು ಗೊತ್ತಾ?

    https://youtu.be/FrTywXoVHlA

    ಈ ಜಾಹೀರಾತಿನಲ್ಲಿ ಕಾಣುವುದಕ್ಕೂ ಮೊದಲು ಅನುಷ್ಕಾ ಶರ್ಮಾ ರಣ್‍ವೀರ್ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ, ವಿರಾಟ್ ತೆಲುಗು ನಟಿ ತಮನ್ನಾ ಜೊತೆ ಸ್ನೇಹ ಹೊಂದಿದ್ದಾರೆ ಎನ್ನುವ ಅಂತೆ ಕಂತೆ ಸುದ್ದಿ ಬಾಲಿವುಡ್, ಕ್ರಿಕೆಟ್ ಅಂಗಳದಿಂದ ಕೇಳಿ ಬಂದಿತ್ತು. ಈ ನಡುವೆ ಇಬ್ಬರು ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಜಾಹೀರಾತಿನಲ್ಲಿ ಅಭಿನಯಿಸಿದ ನಂತರ ಅನುಷ್ಕಾ, ವಿರಾಟ್ ಸ್ನೇಹಿತರಾಗಿದ್ದರೆ ವಿನಾಃ ಲವ್ವರ್ ಗಳಾಗಿರಲಿಲ್ಲ. ಹೀಗಾಗಿ ಲವ್ ವದಂತಿ ಯಾವುದೇ ಬಂದಿರಲಿಲ್ಲ. ಆದರೆ ಸಿನಿಮಾ ಸೆಟ್ ನಲ್ಲಿ ಕೊಹ್ಲಿ ಕಾಣಿಸಲು ಆರಂಭಿಸಿದ ಬಳಿಕ ಇಬ್ಬರ ನಡುವೆ ಏನೋ ಇದೆ ಎನ್ನುವ ಮಾತುಗಳು ಕೇಳಿ ಬರಲು ಆರಂಭಗೊಂಡಿತು. ಆದರೆ ಇವರಿಬ್ಬರು ಸಾರ್ವಜನಿಕವಾಗಿ ಎಲ್ಲೂ ಹೇಳಿಕೊಳ್ಳದ ಕಾರಣ ಇದು ವದಂತಿ ಎಂದೇ ಪರಿಗಣಿಸಲಾಗುತಿತ್ತು. ಆದರೆ 2014ರಲ್ಲಿ ಕೊಹ್ಲಿ ಉದಯ್‍ಪುರದಲ್ಲಿ ಅನುಷ್ಕಾ ಶರ್ಮಾ 26ನೇ ಹುಟ್ಟುಹಬ್ಬದ ವೇಳೆ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ಶುಭಾಶಯ ತಿಳಿಸಿದ್ದು ಅಚ್ಚರಿಗೆ ಕಾರಣವಾಗಿತ್ತು. ಕೊಹ್ಲಿ ಸಪ್ರೈಸ್ ಆಗಿ ಭೇಟಿ ಕೊಟ್ಟ ಬಳಿಕ ಇಬ್ಬರ ನಡುವೆ ಲವ್ ಇದೆ ಎನ್ನುವ ಮಾತುಗಳು ಕೇಳಿ ಬರಲು ಆರಂಭವಾಯಿತು.

    ಈ ಮಧ್ಯೆ 2014ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿತ್ತು. ಈ ಪ್ರವಾಸದ ವೇಳೆ ಅನುಷ್ಕಾ ಶರ್ಮಾ ಆಸ್ಟ್ರೇಲಿಯಾಗೆ ತೆರಳಿದ್ದರು. ಇಬ್ಬರು ಜೊತೆಯಾಗಿ ಇರುವ ಫೋಟೋಗಳನ್ನು ನೋಡಿದಾಗ ಇಬ್ಬರ ನಡುವೆ ಪ್ರೀತಿ ಇದೆ ಎನ್ನುವುದಕ್ಕೆ ಪುಷ್ಠಿ ಸಿಕ್ಕಿತ್ತು. ಇದಾದ ಬಳಿಕ ಆ ವರ್ಷದ ನವೆಂಬರ್ ನಲ್ಲಿ ಶ್ರೀಲಂಕಾ ವಿರುದ್ಧ ರಾಂಚಿಯಲ್ಲಿ ನಡೆದ 5ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 6 ಸಾವಿರ ರನ್ ಪೂರ್ಣಗೊಳಿಸಿದರು. 50 ರನ್ ಗಳಿಸಿದ ಬಳಿಕ ಬ್ಯಾಟನ್ನು ಮೇಲಕ್ಕೆ ಎತ್ತಿ ಕೊಹ್ಲಿ ಸ್ಟೇಡಿಯಂನಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ನೋಡಿ ಫ್ಲೈಯಿಂಗ್ ಕಿಸ್ ನೀಡಿದರು. ಈ ದೃಶ್ಯವನ್ನು ನೋಡಿದ ಬಳಿಕ ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವುದು ಪಕ್ಕಾ ಆಯಿತು. ಇದನ್ನೂ ಓದಿ: ಜಗತ್ತಿನ ಈ ಸುಂದರ ತಾಣಕ್ಕೆ ಹನಿಮೂನ್ ಹೋಗಲಿದ್ದಾರೆ ವಿರುಷ್ಕಾ

    https://youtu.be/1NJn4zHwjwo

    ಎಲ್ಲ ಬೆಳವಣಿಗೆಯ ನಂತರ 2015ರಲ್ಲಿ ವಿರಾಟ್ ಫಾರ್ಮ್‍ನಲ್ಲಿ ಇದ್ದರೂ ಕೆಲವು ಪಂದ್ಯಗಳನ್ನು ಬೇಗನೇ ಔಟಾಗುತ್ತಿದ್ದರು. 2015 ವಿಶ್ವಕಪ್ 2016 ಟಿ 20 ವಿಶ್ವಕಪ್ ನಲ್ಲಿ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಕ್ಕೆ ಅನುಷ್ಕಾ ಶರ್ಮಾನೇ ಕಾರಣ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲು ಆರಂಭಿಸಿದರು. ಅಲ್ಲಿಯವರೆಗೆ ಮೌನವಾಗಿದ್ದ ಕೊಹ್ಲಿ 2016ರ ಮಾರ್ಚ್ ನಲ್ಲಿ ಇನ್ ಸ್ಟಾಗ್ರಾಮ್ ನಲ್ಲಿ ‘ಶೇಮ್’ ಎಂದು ದೊಡ್ಡದಾಗಿ ಎಂದು ಬರೆದು ಟೀಕಿಸಿದವರಿಗೆ ದೀರ್ಘ ಉತ್ತರ ನೀಡಿದರು.

    ಅನುಷ್ಕಾ ಶರ್ಮಾ ಮತ್ತು ನಾನು ಇಬ್ಬರು ಉತ್ತಮ ಸ್ನೇಹಿತರು. ನನ್ನ ಆಟದಲ್ಲಿ ಆಕೆಯದ್ದು ಯಾವುದೇ ನಿಯಂತ್ರಣ ಇಲ್ಲ. ಈ ವಿಚಾರದಲ್ಲಿ ಆಕೆಯನ್ನು ಎಳೆದು ತಂದು ಟ್ರೋಲ್ ಮಾಡುವುದು ಸರಿಯಲ್ಲ. ನನಗೆ ನೀವು ಯಾವುದೇ ಗೌರವ ನೀಡುವ ಅಗತ್ಯ ಇಲ್ಲ. ಆದರೆ ಆಕೆಗೆ ಗೌರವ ನೀಡಿ. ನಿಮ್ಮ ವೈಫಲ್ಯಕ್ಕೆ ನಿಮ್ಮ ಸಹೋದರಿ, ಗೆಳತಿ ಅಥವಾ ಪತ್ನಿಯನ್ನು ನೀವು ಹೊಣೆಗರರನ್ನಾಗಿ ಮಾಡುತ್ತಿರಾ ಎಂದು ದೀರ್ಘವಾಗಿ ಬರೆದು ಅನುಷ್ಕಾ ಶರ್ಮಾ ಅವರನ್ನು ಬೆಂಬಲಿಸಿದ್ದರು.ಇದನ್ನೂ ಓದಿ:ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

    ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಅನ್ ಫಾಲೋ ಆಗಿದ್ದ ಕಾರಣ ಇಬ್ಬರ ನಡುವಿನ ಪ್ರೀತಿ ಬ್ರೇಕಪ್ ಆಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ನಾನು ಸಿನಿ ಕ್ಷೇತ್ರದಲ್ಲಿ ಮತ್ತಷ್ಟು ಮೇಲಕ್ಕೆ ಹೋಗಬೇಕು. ಹೀಗಾಗಿ ಮದುವೆಯಾಗುವುದಿಲ್ಲ ಎಂದು ಅನುಷ್ಕಾ ಹೇಳಿದ್ದಕ್ಕೆ ಇಬ್ಬರ ನಡುವಿನ ಲವ್ ಮುರಿದುಬಿದ್ದಿದೆ ಎನ್ನುವ ಗಾಸಿಪ್ ಸುದ್ದಿಗಳು ಕೇಳಿಬಂದಿತ್ತು.

    ಈ ನಡುವೆ ಕೊಹ್ಲಿ ಇನ್ ಸ್ಟಾಗ್ರಾಮ್ ನಲ್ಲಿ ಹಾರ್ಟ್ ಬ್ರೋಕನ್ ಎಂದು ಬರೆದು ಪೋಸ್ಟ್ ಮಾಡಿದ್ದರು. ಇಷ್ಟೆಲ್ಲ ಆದ ಮೇಲೆ ಇವರಿಬ್ಬರು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿರುವುದನ್ನು ಅಭಿಮಾನಿಗಳು ಗಮನಿಸಿದರು. ಹೀಗಾಗಿ ಮತ್ತೆ ಇಬ್ಬರ ನಡುವೆ ಪ್ರೀತಿ ಅರಳಿದ್ಯಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿತ್ತು.

    https://www.youtube.com/watch?v=JQtm7Iy0BNE

    ಸಾಮಾಜಿಕ ಜಾಲತಾಣಗಳಲ್ಲಿ ಈ ಎಲ್ಲ ಪ್ರಹಸನಗಳು ಮುಗಿದ ಬಳಿಕ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. ದೊಡ್ಡ ದೊಡ್ಡ ಸಮಾರಂಭದಲ್ಲಿ ಇಬ್ಬರು ಒಟ್ಟಾಗಿ ಭಾಗವಹಿಸಿದರು. ಕಳೆದ ವರ್ಷದ ಯುವರಾಜ್ ಮತ್ತು ಹೇಜಲ್ ಕೀಚ್ ನಡುವಿನ ಮದುವೆ ಮತ್ತು ಈ ವರ್ಷ ಜಹೀರ್ ಖಾನ್ ಮತ್ತು ಸಾಗರಿಕಾ ಮದುವೆಯಲ್ಲಿ ಕಾಣಿಸಿದರು.

    ಸಾರ್ವಜನಿಕವಾಗಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಫೋಟೋಗಳನ್ನು ಪ್ರಕಟಿಸುತ್ತಿದ್ದರು. ಫೋಟೋಗಳನ್ನು ನೋಡಿದ ನಂತ್ರ ಅಭಿಮಾನಿಗಳು ಮದುವೆ ಯಾವಾಗ ಎಂದು ಇಬ್ಬರಿಗೂ ಪ್ರಶ್ನೆ ಕೇಳುತ್ತಿದ್ದರು. ಈ ನಡುವೆ ಅಕ್ಟೋಬರ್ ನಲ್ಲಿ ಇಬ್ಬರು ವಿಡಿಯೋ ಜಾಹೀರಾತಿನಲ್ಲಿ ಕಾಣಿಸಿಕೊಂಡು ಎಲ್ಲರು ಹುಬ್ಬೇರುವಂತೆ ಮಾಡಿದ್ದರು. ಈ ಜಾಹೀರಾತಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸುವ ಈ ಜೋಡಿ ವಧು-ವರರು ಮಾತನಾಡಿಕೊಳ್ಳುತ್ತಿರುವ ಶೈಲಿಯನ್ನ ಕಾಮಿಕ್ ಆಗಿ ಪ್ರಸ್ತುತಪಡಿಸಿದ್ದರು. ತಿಂಗಳಲ್ಲಿ 15 ದಿನ ವಿರಾಟ್ ಅಡುಗೆ ಮಾಡೋದಾಗಿ ಒಪ್ಪಿಕೊಂಡರೆ ಯಾವುದೇ ಕಂಪ್ಲೇಂಟ್ ಇಲ್ಲದೆ ಅನುಷ್ಕಾ ಸೇವಿಸೋದಾಗಿ ಹೇಳಿದ್ದರು. ಇನ್ನು ವಿರಾಟ್ ಅನುಷ್ಕಾರನ್ನ ಯಾವಾಗಲೂ ಕೈಹಿಡಿದು ಕಾಪಾಡೋದಾಗಿ ಹೇಳಿರುವ ಮಾತು ಇವರಿಬ್ಬರ ಪ್ರೀತಿ ಪ್ರೇಮವನ್ನ ಸಾರಿ ಸಾರಿ ಹೇಳುತ್ತಿತ್ತು. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

    https://youtu.be/ygw4_UFT1rU

    ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ಸರಣಿಯಲ್ಲಿ ತಮಗೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಈ ಹಿಂದೆ ಬಿಸಿಸಿಐಗೆ ಕೊಹ್ಲಿ ಮನವಿಯಲ್ಲಿ ತಿಳಿಸಿದ್ದರು. ಜನವರಿಯಿಂದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲಿದ್ದು, ನಿರಂತರ ಕ್ರಿಕೆಟ್ ಆಡುತ್ತೀರೋ ಕೊಹ್ಲಿ ಅದಕ್ಕೂ ಮೊದಲು ಕೊಂಚ ವಿರಾಮ ಬಯಸಿದ್ದರು. ಹೀಗಾಗಿ ಡಿಸೆಂಬರ್ ನಲ್ಲಿ ಅನುಷ್ಕಾ ಜೊತೆ ಮದುವೆ ಮಾಡಲೆಂದೇ ರಜೆಗೆ ಮನವಿ ಮಾಡಿದ್ದರು ಎನ್ನುವ ಸುದ್ದಿ ಬಾಲಿವುಡ್, ಕ್ರಿಕೆಟ್ ವಲಯದಲ್ಲಿ ಹರಿದಾಡುತಿತ್ತು. ಈ ಸುದ್ದಿ ಹರಿದಾಡುತ್ತಿದ್ದರೂ ಕೊಹ್ಲಿ ಮತ್ತು ಅನುಷ್ಕಾ ಮದುವೆ ವಿಚಾರವನ್ನು ರಹಸ್ಯವಾಗಿಯೇ ಇಟ್ಟಿದ್ದರು.

    ಇವರಿಬ್ಬರೂ ಎಷ್ಟೇ ರಹಸ್ಯವಾಗಿಟ್ಟರೂ ಡಿಸೆಂಬರ್ 6ರ ಸಂಜೆ ರಾಷ್ಟ್ರೀಯ ಮಾಧ್ಯಮಗಳಲ್ಲು ವಿರುಷ್ಕಾ ಜೋಡಿ ಇಟಲಿಯಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬ್ರೇಕ್ ಆಯ್ತು. ಈ ವಿಚಾರ ಬಹಿರಂಗಗೊಂಡ ನಂತರ ಅನುಷ್ಕಾ ವಕ್ತಾರರನ್ನು ಪ್ರಶ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಲ್ಲಿಗೆ ಇಟಲಿಯಲ್ಲಿ ಇಬ್ಬರು ರಹಸ್ಯವಾಗಿ ಮದುವೆಯಾಗಬೇಕೆಂದುಕೊಂಡಿದ್ದ ವಿಚಾರ ಸಾರ್ವಜನಿಕವಾಗಿ ಬಹಿರಂಗಗೊಂಡಿತು. ಅಂತಿಮವಾಗಿ ಡಿಸೆಂಬರ್ 11 ರಂದು ಹಿಂದೂ ಸಂಪ್ರದಾಯದಂತೆ ಕೊಹ್ಲಿ ಅನುಷ್ಕಾರನ್ನು ಸಂಗಾತಿಯನ್ನು ಸ್ವೀಕರಿಸುವ ಮೂಲಕ ಈ ಜೋಡಿ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.

     

    https://youtu.be/gHvF38xCsiY

  • ಈ ಸ್ಪೆಷಲ್ ರಿಂಗ್ ಗಾಗಿ 3 ತಿಂಗಳು ಅಲೆದಾಡಿದ್ರಂತೆ ಕೊಹ್ಲಿ! ಇದರ ಬೆಲೆ ಎಷ್ಟು ಗೊತ್ತಾ?

    ಈ ಸ್ಪೆಷಲ್ ರಿಂಗ್ ಗಾಗಿ 3 ತಿಂಗಳು ಅಲೆದಾಡಿದ್ರಂತೆ ಕೊಹ್ಲಿ! ಇದರ ಬೆಲೆ ಎಷ್ಟು ಗೊತ್ತಾ?

    ನವದೆಹಲಿ: ವಿರಾಟ್ ಕೊಹ್ಲಿ- ಅನುಷ್ಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ನಡೆದ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಗೆಳೆಯರು ಮಾತ್ರ ಭಾಗಿಯಾಗಿದ್ದರು.

    ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದು, ಅನುಷ್ಕಾ ಶರ್ಮಾಗೆ ಇಷ್ಟವಾದ ರೀತಿಯ ಡೈಮಂಡ್ ರಿಂಗ್ ನೀಡಿದ್ದಾರೆ. ಈ ಉಂಗುರಕ್ಕಾಗಿ ಬರೋಬ್ಬರಿ 3 ತಿಂಗಳ ಕಾಲ ಹುಡುಕಾಟ ನಡೆಸಿದ್ದರಂತೆ. ಅಂತಿಮವಾಗಿ ಆಸ್ಟ್ರೇಲಿಯಾದ ಖ್ಯಾತ ಜ್ಯುವೆಲ್ಲರಿ ಎಕ್ಕಾ ಡಿಸೈನರ್‍ರಿಂದ ವಿಶೇಷ ರಿಂಗ್ ವಿನ್ಯಾಸ ಮಾಡಿಸಿದ್ದಾರೆ.

    ಈ ಉಂಗುರ ವಜ್ರ ಖಚಿತವಾಗಿದ್ದು, ನೋಡಲು ತುಂಬಾ ಸುಂದರವಾಗಿದೆ. ಪ್ರತಿ ಬಾರಿ ಈ ರಿಂಗ್ ನೋಡಿದರೆ ವಿಭಿನ್ನ ರೀತಿಯಲ್ಲಿ ಕಾಣಿಸುತ್ತದೆ. ಆಶ್ಚರ್ಯಕರವಾದ ಅಂಶಗಳನ್ನು ಪ್ರತಿಬಿಂಬಿಸುತ್ತದೆ. ಈ ವಿಶೇಷ ಉಂಗುರಕ್ಕೆ ವಿರಾಟ್ ಬರೋಬ್ಬರಿ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅನುಷ್ಕಾ ನಿಶ್ಚಿತಾರ್ಥಕ್ಕಾಗಿ ಖ್ಯಾತ ವಸ್ತ್ರ ವಿನ್ಯಾಸಕಾರ ಸಬ್ಯಸಾಚಿ ವಿನ್ಯಾಸಗೊಳಿಸಿದ್ದ ವೆಲ್ವೆಟ್ ಸೀರೆ ಧರಿಸಿದ್ದರು. ಸೀರೆಯಲ್ಲಿ ಮುತ್ತು ಹಾಗೂ ಅತ್ಯುತ್ತಮ ಗುಣಮಟ್ಟದ ಝರ್ದೋಸಿ, ಮರೋರಿ ಬಳಸಿ ಕೈಯಿಂದ ವಿನ್ಯಾಸ ಮಾಡಲಾಗಿತ್ತು. ವಿರಾಟ್ ಬೂದು ಬಣ್ಣದ ಟೈ ಮತ್ತು ನೀಲಿಬಣ್ಣದ ಸೂಟ್ ಧರಿಸಿದ್ದರು.

    ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ಸೋಮವಾರ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಸಿಂಪಲ್ ಆಗಿ ಆದರೂ ಪ್ರತಿಯೊಂದು ವಸ್ತುಗಳು ಕೂಡ ತುಂಬಾ ದುಬಾರಿಯಾಗಿತ್ತು.

    3 ವರ್ಷಗಳ ಹಿಂದೆ ಅನುಷ್ಕಾ ತಮ್ಮ ಮದುವೆಯ ಕನಸಿನ ಬಗ್ಗೆ ಹೇಳಿದ್ದರು. ಆ ಕನಸಿನಂತೆ ವಿರಾಟ್ ಅವರನ್ನು ಮದುವೆಯಾಗಿದ್ದಾರೆ. ಆದರೆ ಈ ಜೋಡಿ ಮದುವೆ ಫೋಟೋಗಳನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಳ್ಳುವವರೆಗೂ ಅಧಿಕೃತವಾಗಿ ಯಾರಿಗೂ ಹೇಳಿರಲಿಲ್ಲ.

    ಡಿಸೆಂಬರ್ 11 ರಂದು “ಇಂದಿನಿಂದ ನಾವು ಜೀವನ ಪರ್ಯಂತ ಒಂದಾಗಿ ಪ್ರೀತಿಯಿಂದ ಇರುತ್ತೇವೆ. ಹೀಗಾಗಿ ಈ ಸಂತೋಷದ ಸುದ್ದಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಕುಟುಂಬದ ಸದಸ್ಯರು, ಅಭಿಮಾನಿಗಳ ಬೆಂಬಲಿದಿಂದ ಈ ದಿನ ನಮ್ಮ ಪಾಲಿಗೆ ವಿಶೇಷ ದಿನವಾಗಿದೆ. ನಮ್ಮ ಈ ಹೊಸ ಪಯಣಕ್ಕೆ ಶುಭ ಹಾರೈಸಿದ ನಿಮಗೆಲ್ಲ ಧನ್ಯವಾದಗಳು” ಎಂದು ಬರೆದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಟ್ವೀಟ್ ಮಾಡಿದ್ದರು.

    https://www.youtube.com/watch?v=gHvF38xCsiY

    https://www.instagram.com/p/Bcq9v7NnyHB/?hl=en&tagged=virushka

  • ಜಗತ್ತಿನ ಈ ಸುಂದರ ತಾಣಕ್ಕೆ ಹನಿಮೂನ್ ಹೋಗಲಿದ್ದಾರೆ ವಿರುಷ್ಕಾ

    ಜಗತ್ತಿನ ಈ ಸುಂದರ ತಾಣಕ್ಕೆ ಹನಿಮೂನ್ ಹೋಗಲಿದ್ದಾರೆ ವಿರುಷ್ಕಾ

    ಮುಂಬೈ: ಯಾರಿಗೂ ಹೇಳದಂತೆ ಗುಟ್ಟಾಗಿ ವಿರುಷ್ಕಾ ಜೋಡಿ ಮದುವೆ ಆಗಿದೆ. ಮದುವೆ ನಂತರ ಟ್ವೀಟ್ ಮಾಡುವ ಮೂಲಕ ಸಂತಸದ ಸುದ್ದಿಯನ್ನು ಎಲ್ಲರೊಡನೆ ಅನುಷ್ಕಾ ಮತ್ತು ವಿರಾಟ್ ಹಂಚಿಕೊಂಡಿದ್ರು. ನಂತರ ಇಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿದವು.

    ಈಗ ಅಭಿಮಾನಿಗಳಲ್ಲಿ ವಿರುಷ್ಕಾ ಜೋಡಿ ಹನಿಮೂನ್ ಗೆ ಎಲ್ಲಿ ಹೋಗಲಿದ್ದಾರೆ ಎಂಬ ಪ್ರಶ್ನೆಗಳು ಹುಟ್ಟುಕೊಂಡಿದೆ. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಇಬ್ಬರು ಪ್ರಪಂಚದ ಅತಿ ಸುಂದರ ಸ್ಥಳಗಳಲ್ಲೊಂದಾದ ಇಟಲಿ ರೋಮ್‍ಗೆ ತೆರಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಈ ಮೊದಲು ವಿರಾಟ್-ಅನುಷ್ಕಾ ದಕ್ಷಿಣ ಆಫ್ರಿಕಾಗೆ ಹನಿಮೂನ್ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಇದೇ ವೇಳೆ ವಿರಾಟ್ ಸೌಥ್ ಆಫ್ರಿಕಾದಲ್ಲಿ ನಡೆಯುವ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ ಎಂಬ ಒಂದು ವಿಷಯವನ್ನು ಮೂಲವು ಬಹಿರಂಗಪಡಿಸಿತ್ತು. ಹನಿಮೂನ್ ಮುಗಿಸಿ ಬಂದ ಮೇಲೆ ಭಾರತದಲ್ಲಿ ಗೆಳೆಯರಿಗೆ ಮತ್ತು ಬಂಧುಗಳಿಗೆ ವಿಶೇಷ ಔತಣಕೂಟವನ್ನು ವಿರುಷ್ಕಾ ಜೋಡಿ ಏರ್ಪಡಿಸಿದೆ.

    ಇನ್ನು 2018 ಫೆಬ್ರವರಿಯಲ್ಲಿ ವರುಣ್ ಧವನ್ ಜೊತೆ ‘ಸೂಯಿ-ಧಾಗಾ’ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಇತ್ತ ಹೋಮ್ ಪ್ರೊಡಕ್ಷನ್ ನಿರ್ಮಾಣವಾಗುತ್ತಿರುವ ‘ಪರಿ’ ಸಿನಿಮಾದ ಪ್ರಮೋಷನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    https://www.youtube.com/watch?v=gHvF38xCsiY

  • ವಿರಾಟ್ ಕೊಹ್ಲಿ ಮದುವೆಗೆ ಬೇಸರ ವ್ಯಕ್ತಪಡಿಸಿದ್ರು ಈ ನಟಿ

    ವಿರಾಟ್ ಕೊಹ್ಲಿ ಮದುವೆಗೆ ಬೇಸರ ವ್ಯಕ್ತಪಡಿಸಿದ್ರು ಈ ನಟಿ

    ಮುಂಬೈ: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಮದುವೆಯ ವಿಷಯ ತಿಳಿಯುತ್ತಿದ್ದಂತೆ ಕ್ರಿಕೆಟ್ ಮತ್ತು ಬಾಲಿವುಡ್ ಮಂದಿ ಶುಭಾಶಯ ತಿಳಿಸಿದ್ದರು. ಆದರೆ ಬಾಲಿವುಡ್ ನ ರಾಖಿ ಸಾವಂತ್ ಮಾತ್ರ ಬಲು ಬೇಸರ ವ್ಯಕ್ತಪಡಿಸಿದ್ದಾರೆ.

    ಇಟಲಿಯ ಟಸ್ಕನಿ ನಗರದ ‘ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿರಾಟ್ ಮದುವೆಯ ಸುದ್ದಿ ಕೇಳುತ್ತಿದ್ದಂತೆ ನಟಿ ರಾಖಿ ಸಾವಂತ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ರಾಖಿ ಸಾವಂತ್ ತಮ್ಮ ಬೇಸರವನ್ನು ತಮ್ಮ ಇನ್ ಸ್ಟಾಗ್ರಾಂನ ವಿಡಿಯೋ ಮುಖಾಂತರ ವ್ಯಕ್ತಪಡಿಸಿದ್ದಾರೆ. “ಈಗ ನನ್ನ ಕಥೆ ಏನು ವಿರಾಟ್? ಈಗ ನನ್ನ ಕಥೆ ಏನು? ನಾನು ವಾಶ್ ರೂಮಿನಲ್ಲಿದ್ದಾಗ ಗೊತ್ತಾಯಿತು ನಿನಗೆ ಅನುಷ್ಕಾ ಜೊತೆ ಮದುವೆಯಾಗಿದೆ ಎಂದು” ಅಂತ ರಾಖಿ ಸಾವಂತ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಾಕಿದ್ದಾರೆ.

    ಎರಡು ವರ್ಷಗಳ ಹಿಂದೆ ರಾಖಿ ಸಾವಂತ್ ವಿರಾಟ್ ಮೇಲಿರುವ ಪ್ರೀತಿಯ ಬಗ್ಗೆ ಹೇಳಿದ್ದರು. “ನನಗೆ ವಿರಾಟ್ ಎಂದರೆ ಇಷ್ಟ ಹಾಗೂ ಅನುಷ್ಕಾ ಇನ್ನೂ ಎಲ್ಲರ ಮುಂದೆ ತನ್ನ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಆದರೆ ನಾನು ವಿರಾಟ್ ನನ್ನು ಇಷ್ಟಪಡುತ್ತೇನೆ ಹಾಗೂ ಇದು ಎಲ್ಲರ ಮುಂದೆ ಹೇಳುತ್ತೇನೆ. ಅನುಷ್ಕಾ ಇದೂವರೆಗೂ ಸಾರ್ವಜನಿಕವಾಗಿ ವಿರಾಟ್ ಮೇಲಿರುವ ಪ್ರೀತಿಯನ್ನು ಒಪ್ಪಿಕೊಂಡಿಲ್ಲ” ಎಂದು ರಾಖಿ ಮಾಧ್ಯಮಕ್ಕೆ ತಿಳಿಸಿದ್ದರು.

    ವಿರಾಟ್ ಹಾಗೂ ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು, ಡಿಸೆಂಬರ್ 21 ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ಇದಾದ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ನಡೆಯಲಿದ್ದು, ಅನುಷ್ಕಾ ತನ್ನ ಪತಿ ವಿರಾಟ್ ಜೊತೆ ದಕ್ಷಿಣ ಆಫ್ರಿಕಾಗೆ ಹೋಗಲಿದ್ದಾರೆ.

  • ಕೊಹ್ಲಿಗೆ ಅಂದು ಪ್ರಪೋಸ್ ಮಾಡಿದ್ದ ಮಹಿಳಾ ಕ್ರಿಕೆಟರ್ ವಿರುಷ್ಕಾ ಮದ್ವೆ ಬಗ್ಗೆ ಹೇಳಿದ್ದು ಹೀಗೆ

    ಕೊಹ್ಲಿಗೆ ಅಂದು ಪ್ರಪೋಸ್ ಮಾಡಿದ್ದ ಮಹಿಳಾ ಕ್ರಿಕೆಟರ್ ವಿರುಷ್ಕಾ ಮದ್ವೆ ಬಗ್ಗೆ ಹೇಳಿದ್ದು ಹೀಗೆ

    ಮುಂಬೈ: ಟಿಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಈ ಹಿಂದೆ ತನ್ನನ್ನು ಮದುವೆಯಾಗು ಎಂದು ಹೇಳಿದ್ದ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ಢಾಕಾದಲ್ಲಿ ನಡೆದ 2014ರ ಟಿ 20 ವಿಶ್ವಕಪ್ ಸೆಮಿಫೈನಲ್‍ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಕೊಹ್ಲಿ 72 ರನ್(44 ಎಸೆತ, 5 ಬೌಂಡರಿ, 2 ಸಿಕ್ಸರ್) ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಈ ಆಟಕ್ಕೆ ಪಂದ್ಯಶ್ರೇಷ್ಠ ಗೌರವ ಕೊಹ್ಲಿಗೆ ಸಿಕ್ಕಿತ್ತು.

    ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಶೈಲಿಗೆ ಮನಸೋತ ಡೇನಿಯಲ್ ವ್ಯಾಟ್ ಏಪ್ರಿಲ್ 4ರ ರಾತ್ರಿ “ಕೊಹ್ಲಿ ನನ್ನನ್ನು ಮದುವೆಯಾಗು” ಎಂದು ಟ್ವೀಟ್ ಮಾಡಿ ಪ್ರಪೋಸ್ ಮಾಡಿದ್ದರು. ಬಳಿಕ 2014ರಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ ವೇಳೆ ಡೇನಿಯಲ್ ವ್ಯಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದರು. ಇದನ್ನೂ ಓದಿ: ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

    ಈಗ ಕೊಹ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ವ್ಯಾಟ್ ಟ್ವೀಟ್ ಮಾಡಿ ವಿರುಷ್ಕಾ ದಂಪತಿಗೆ ಶುಭಾಶಯ ಹೇಳಿದ್ದಾರೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ವ್ಯಾಟ್ ಕೊಹ್ಲಿ ನೀಡಿದ ಬ್ಯಾಟಿನ ಫೋಟೋವನ್ನು ಟ್ವೀಟ್ ಮಾಡಿ ಕೊಹ್ಲಿಗೆ ಧನ್ಯವಾದ ಹೇಳಿದ್ದರು. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

    https://twitter.com/Ankit55225/status/940286578684858373

     

     

  • ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

    ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

    ಮುಂಬೈ: ವಿರಾಟ್ ಕೊಹ್ಲಿ- ಅನುಷ್ಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ನಡೆದ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಗೆಳೆಯರು ಮಾತ್ರ ಭಾಗಿಯಾಗಿದ್ದರು.

    ಇಟಲಿಯ ಟಸ್ಕನಿ ನಗರದ ‘ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ಸೋಮವಾರ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಮದುವೆಯ ವಿಷಯ ತಿಳಿಯುತ್ತಿದ್ದಂತೆ ಕ್ರಿಕೆಟ್ ಮತ್ತು ಬಾಲಿವುಡ್ ಮಂದಿಯಿಂದ ಶುಭಾಶಯಗಳ ಮಹಾಪೂರ ಹರಿಯುತ್ತಿದೆ.

    3 ವರ್ಷಗಳ ಹಿಂದೆ ಅನುಷ್ಕಾ ತಮ್ಮ ಮದುವೆಯ ಕನಸಿನ ಬಗ್ಗೆ ಹೇಳಿದ್ದರು. ಮಿಲನ್ ಎಂಬ ಈ ಸ್ಥಳ ಮದುವೆ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಈ ಸುಂದರ ತಾಣದಲ್ಲಿ ಮದುವೆ ಕಾರ್ಯಕ್ರಮಗಳು ಮಾತ್ರ ನಡೆಯುತ್ತದೆ.

    ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

    700 ವರ್ಷ ಹಳೆಯಾದ ಈ ರೆಸಾರ್ಟ್ ಟಸ್ಕನಿ ಬೆಟ್ಟದ ಹಿಂದೆ ಇದೆ. ಇದು ಒಂದು ಗ್ರಾಮವಾಗಿದ್ದು, ಅಮೆರಿಕದ ರಾಯಭಾರಿ ಜಾನ್ ಫಿಲಿಪ್ಸ್ ಅವರು 2001ರಲ್ಲಿ ಇದನ್ನು ಖರೀದಿಸಿ ನವೀಕರಿಸಿದ್ದರು. ‘ಬೋಗೋ ಫಿನೊಕಿಯೆಟೊ’ ರೆಸಾರ್ಟ್ ನಲ್ಲಿ 5 ಐಷಾರಾಮಿ ವಿಲ್ಲಾಗಳಿದ್ದು, 22 ಕೋಣೆಗಳಿವೆ. 44 ಮಂದಿಗೆ ತಂಗಲು ವ್ಯವಸ್ಥೆ ಇದೆ. ಈ ಕಾರಣಕ್ಕಾಗಿ ವಿರಾಟ್ ಹಾಗೂ ಅನುಷ್ಕಾ ಹೆಚ್ಚು ಜನರಿಗೆ ಆಹ್ವಾನ ನೀಡಲಿಲ್ಲ ಎಂದು ಹೇಳಲಾಗಿದೆ.

    ಈ ರೆಸಾರ್ಟ್‍ನಲ್ಲಿ ಎಲ್ಲಾ ಸೌಲಭ್ಯಗಳಿದ್ದು, ಸ್ವಿಮ್ಮಿಂಗ್ ಪೂಲ್, ಟೆನಿಸ್ ಕೋರ್ಟ್, ಸ್ಪಾ ಜೊತೆ ರುಚಿಕರವಾದ ಆಹಾರ ನೀಡಲಾಗುತ್ತದೆ. ಫೋರ್ಬ್ಸ್ ಪಟ್ಟಿಯ ಪ್ರಕಾರ ಬೋಗೋ ಫಿನೊಕಿಯೆಟೊ ರೆಸಾರ್ಟ್ ಹಾಲಿಡೇ ಡೆಸ್ಟಿನೇಷನ್ ಗಳಲ್ಲಿ ಇದು ಒಂದಾಗಿದೆ. ಇಲ್ಲಿ ಒಂದು ವಾರ ಉಳಿದರೆ ಒಂದು ಕೋಟಿ ರೂ. ಗಿಂತ ಹೆಚ್ಚು ವೆಚ್ಚವಾಗುತ್ತದೆ. ಒಂದು ರಾತ್ರಿ ಕಳೆಯಲು 6.50 ಲಕ್ಷ ದಿಂದ 14 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    https://youtu.be/gHvF38xCsiY

  • ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

    ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

    ನವದೆಹಲಿ: ವಿರಾಟ್ ಕೊಹ್ಲಿ- ಅನುಷ್ಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಖಾಸಗಿ ಹೋಟೆಲ್‍ನಲ್ಲಿ ಪಂಜಾಬಿ ಸಂಪ್ರದಾಯದಂತೆ ನಡೆದ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಗೆಳೆಯರು ಮಾತ್ರ ಭಾಗಿಯಾಗಿದ್ದರು.

    ಮದುವೆ ಬಳಿಕ ನಾವಿಬ್ಬರೂ ನಮ್ಮ ಪ್ರೀತಿಗೆ ಬದ್ಧರಾಗಿದ್ದು, ಕೊನೆಯವರೆಗೂ ಈ ಪ್ರೀತಿಯನ್ನು ಉಳಿಸಿಕೊಳ್ಳುತ್ತೇವೆ ಎಂದು ವಿರಾಟ್, ಅನುಷ್ಕಾ ಟ್ವೀಟ್ ಮಾಡಿದ್ದಾರೆ. ಡಿಸೆಂಬರ್ 21ರಂದು ನವದೆಹಲಿಯಲ್ಲಿ ತಮ್ಮ ಬಂಧು-ಬಳಗದವರಿಗಾಗಿ ಆದ್ಧೂರಿ ರಿಸೆಪ್ಷೆನ್ ಆಯೋಜಿಸಲಾಗಿದೆ. ಡಿಸೆಂಬರ್ 26ರಂದು ಮುಂಬೈನಲ್ಲಿ ಚಿತ್ರೋದ್ಯಮದ ಗೆಳೆಯರು, ಕ್ರಿಕೆಟರ್‍ಗಳಿಗೆ ಔತಣಕೂತ ಹಮ್ಮಿಕೊಳ್ಳಲಾಗಿದೆ. ಇನ್ನು ಇಟಲಿಯಿಂದ ಬಂದ ಬಳಿಕ ಮುಂಬೈನ ವರ್ಲಿಯಲ್ಲಿರುವ ತಮ್ಮ ನೂತನ ನಿವಾಸದಲ್ಲಿ ವಿರುಷ್ಕಾ ಜೋಡಿ ನವಜೀವನ ಆರಂಭಿಸಲಿದೆ.

    ಇಟಲಿಯ ಟಸ್ಕನಿ ನಗರದ ‘ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೋಗೋ ಫಿನೊಕಿಯೆಟೊ ರೆಸಾರ್ಟ್‍ನಲ್ಲಿ 5 ಐಷಾರಾಮಿ ವಿಲ್ಲಾಗಳಿದ್ದು, 22 ಕೋಣೆಗಳಿವೆ. 44 ಮಂದಿಗೆ ವ್ಯವಸ್ಥೆ ಮಾಡಲಾಗಿದೆ.

    ಇದನ್ನೂ ಓದಿ: ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಕೊಹ್ಲಿ, ಅನುಷ್ಕಾ ಮದುವೆ: ಫೋಟೋಗಳಲ್ಲಿ ನೋಡಿ

    ಹಾರ್ಪರ್ಸ್ ಬಜಾರ್ ಬ್ರೈಡ್ ಮ್ಯಾಗಜೀನ್ ಗೆ ಅನುಷ್ಕಾ ಶರ್ಮ 2014 ರಲ್ಲಿ ಸಂದರ್ಶನ ನೀಡಿದ್ದರು. ಆ ಸಮಯದಲ್ಲಿ ಅನುಷ್ಕಾ ತಮ್ಮ ಮದುವೆಯ ಕಸಸಿನ ಬಗ್ಗೆ ಹೇಳಿದ್ದರು. ಸಾಂಪ್ರದಾಯಿಕವಾಗಿ ಪ್ರಕೃತಿಯ ನಡುವೆ ದ್ರಾಕ್ಷಿ ತೋಟದ ಮಧ್ಯೆ ಮದುವೆಯಾಗಬೇಕೆಂದು ಅನುಷ್ಕಾ ತಿಳಿಸಿದ್ದರು. ಈಗ ಆ ರೀತಿಯೇ ಅನುಷ್ಕಾ ತಮ್ಮ ಮದುವೆಯನ್ನು ಇಟಲಿಯಲ್ಲಿ ಮಾಡಿಕೊಂಡಿದ್ದಾರೆ.

    https://youtu.be/gHvF38xCsiY