Tag: anushka sharma

  • ಕೊಹ್ಲಿಗಾಗಿ ಫೋಟೋ ಸಮೇತ ಸ್ಪೆಷಲ್ ಸಂದೇಶ ಕಳುಹಿಸಿದ ಅನುಷ್ಕಾ ಶರ್ಮಾ

    ಕೊಹ್ಲಿಗಾಗಿ ಫೋಟೋ ಸಮೇತ ಸ್ಪೆಷಲ್ ಸಂದೇಶ ಕಳುಹಿಸಿದ ಅನುಷ್ಕಾ ಶರ್ಮಾ

    ಬೆಂಗಳೂರು: ಇಂದೋರ್ ನಲ್ಲಿ ಸೋಮವಾರದ ಆರ್ ಸಿಬಿ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಪತಿ ಕೊಹ್ಲಿ ಹೆಸರು ಹೊಂದಿರುವ ಟೀ ಶರ್ಟ್ ಧರಿಸಿರುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಬೆಂಬಲ ನೀಡಿದ್ದಾರೆ.

    ಇಂದೋರ್ ನಲ್ಲಿ ನಡೆಯುತ್ತಿರುವ ಪಂದ್ಯ ಆರ್ ಸಿಬಿ ತಂಡಕ್ಕೆ ಬಹುಮುಖ್ಯವಾದ ಪಂದ್ಯವಾಗಿದ್ದು, ಉತ್ತಮ ಪ್ರದರ್ಶನ ನೀಡಲು ಬೆಂಬಲ ಸೂಚಿಸಿ ಫೋಟೋ ಪೋಸ್ಟ್ ಮಾಡಿದ್ದಾರೆ.

    https://www.instagram.com/p/BiwpAjPAaa9/?utm_source=ig_embed

    ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವು ಪಡೆದಿದ್ದ ಆರ್ ಸಿಬಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿತ್ತು. ಪಂಜಾಬ್ ವಿರುದ್ಧ ಪಂದ್ಯದಲ್ಲೂ ಗೆಲ್ಲಲೇ ಬೇಕಾದ ಒತ್ತಡ ಎದುರಿಸುತ್ತಿದೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ಪರ ಉತ್ತಮ ಜೊತೆಯಾಟ ನೀಡಿದ ನಾಯಕ ಕೊಹ್ಲಿ ಹಾಗೂ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ತಂಡಕ್ಕೆ ಸ್ಫೂರ್ತಿ ನೀಡಿದೆ. ಸರಣಿಯಲ್ಲಿ ಸತತ ಸೋಲುಗಳ ಮೂಲಕ ನೀರಸ ಪ್ರದರ್ಶನ ನೀಡಿದ ಆರ್ ಸಿಬಿ ತಂಡದ ಡೆಲ್ಲಿ ವಿರುದ್ಧ ಗೆಲುವಿನ ಬಳಿಕ ಆಡಿರುವ 11 ಪಂದ್ಯದಲ್ಲಿ 4 ರಲ್ಲಿ ಗೆಲುವು ಪಡೆದು 8 ಅಂಕಗಳೊಂದಿಗೆ 7ನೇ ಸ್ಥಾನ ಪಡೆದಿದೆ.

  • ‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಢೀರ್ ರಜೆ ತೆಗೆದುಕೊಂಡ ಅನುಷ್ಕಾ!

    ‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಢೀರ್ ರಜೆ ತೆಗೆದುಕೊಂಡ ಅನುಷ್ಕಾ!

    ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಡೀರ್ ಅಂತಾ ರಜೆ ತೆಗೆದುಕೊಂಡಿದ್ದಾರೆ.

    ವರುಣ್ ಧವನ್ ಮತ್ತು ಅನುಷ್ಕಾ ನಟನೆಯ ‘ಸುಯಿ ಧಾಗಾ’ ಸಿನಿಮಾದ ಶೂಟಿಂಗ್ ನವದೆಹಲಿ ಯಲ್ಲಿ ನಡೆಯುತ್ತಿದ್ದು, ಅದಕ್ಕೆ ಅನುಷ್ಕಾ ತನ್ನ ಪತಿ ಜೊತೆ ಸಮಯ ಕಳೆಯಲು 2 ದಿನ ರಜೆ ತೆಗೆದುಕೊಂಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿರುಷ್ಕಾರ ಬಿಡುವಿಲ್ಲದ ವೇಳಾಪಟ್ಟಿಯಿಂದ ದಂಪತಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅನುಷ್ಕಾ ಅವರು ಎರಡು ದಿನ ರಜೆ ತೆಗೆದುಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ.

    ವಿರುಷ್ಕಾ ಪರಸ್ಪರ ದೂರದಲ್ಲಿದ್ದರೂ ಇವರು ನಿರಂತರವಾಗಿ ಸಾಮಾಜಿಕ ಜಾಲಾತಾಣದಲ್ಲಿ ಫೋಟೋಗಳನ್ನು ಮತ್ತು ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈ ಜೋಡಿಯ ಭಾನುವಾರ ಪೇಂಟಿಂಗ್ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಮತ್ತೊಂದೆಡೆ, ವರದಿಗಳ ಪ್ರಕಾರ ‘ಕರಣ್ ಜೋಹರ್ ಕಾಫಿ ವಿಥ್ ಕರಣ್’ ಶೋ ನಲ್ಲಿ ಈ ದಂಪತಿಗಳು ಕಾಣಿಸಿಕೊಳ್ಳುತ್ತಾರೆಂಬ ಸುದ್ದಿ ಹರಿದಾಡುತ್ತಿದೆ.

    ವಿಶ್ರಾಂತಿ ಪಡೆದ ನಂತರ, ವಿರಾಟ್ ಕೊಹ್ಲಿ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಲಿದ್ದಾರೆ. ಅನುಷ್ಕಾ ಶರ್ಮಾ ಪ್ರಸ್ತುತ ನವ ದೆಹಲಿಯಲ್ಲಿ ವರುಣ್ ಧವನ್ ಜೊತೆ `ಸುಯಿ ಧಾಗಾ’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಆನಂದ್ ಎಲ್. ರಾಯ್ ಅವರ `ಜೀರೋ’ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆ ಅನುಷ್ಕಾ ನಟಿಸುತ್ತಿದ್ದಾರೆ.

    `ಸುಯಿ ಧಾಗಾ’ ಸಿನಿಮಾದಲ್ಲಿ ಅನುಷ್ಕಾ ಸೀರೆಯುಟ್ಟ ಚಿತ್ರಗಳು ವೈರಲ್ ಆಗಿತ್ತು. ಈ ಸಿನಿಮಾವನ್ನು ಶರತ್ ಕಟಾರಿಯಾ ಅವರು ನಿರ್ದೇಶನ ಮಾಡುತ್ತಿದ್ದು, ಇದು ಸೆಪ್ಪೆಂಬರ್ 29 ರಂದು ರಿಲೀಸ್ ಆಗಲಿದೆ ಅಂತಾ ಚಿತ್ರತಂಡ ತಿಳಿಸಿದೆ.

    2017 ಡಿಸೆಂಬರ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲಂಡನ್ ನಲ್ಲಿ ವಿವಾಹವಾಗಿದ್ದರು. ಈ ದಂಪತಿ ಮದುವೆಯಾದ ನಂತರ ಹೊಸ ವರ್ಷವನ್ನು ಆಚರಿಸಲು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದರು. ಭಾರತಕ್ಕೆ ಮರಳಿದ ಬಳಿಕ ಇಬ್ಬರು ತಮ್ಮ ವೃತ್ತಿಯತ್ತ ಗಮನ ಹರಿಸಿದ್ದರು.

     

  • ಪ್ರಿಯಾಂಕ, ದೀಪಿಕಾರನ್ನು ಹಿಂದಿಕ್ಕಿ ಅತ್ಯಂತ ಪ್ರಭಾವಿ ಆನ್‍ಲೈನ್ ಸ್ಟಾರ್ ಎನಿಸಿಕೊಂಡ ಅನುಷ್ಕಾ ಶರ್ಮ

    ಪ್ರಿಯಾಂಕ, ದೀಪಿಕಾರನ್ನು ಹಿಂದಿಕ್ಕಿ ಅತ್ಯಂತ ಪ್ರಭಾವಿ ಆನ್‍ಲೈನ್ ಸ್ಟಾರ್ ಎನಿಸಿಕೊಂಡ ಅನುಷ್ಕಾ ಶರ್ಮ

    ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಭಾವಶಾಲಿ ಸ್ಟಾರ್ ನಟಿಯಾಗಿದ್ದಾರೆಂದು ಸ್ಕೋರ್ ಟ್ರೆಂಡ್ಸ್ ಸಮೀಕ್ಷೆ ಮೂಲಕ ತಿಳಿದು ಬಂದಿದೆ.

    ಸ್ಕೋರ್ ಟ್ರೆಂಡ್ ಸಮೀಕ್ಷೆಗಾಗಿ ಭಾರತದ 14 ಭಾಷೆಗಳ ಫೇಸ್ ಬುಕ್, ಟ್ವಿಟರ್, ಮುದ್ರಣ ಪ್ರಕಟಣೆಗಳು, ಸೋಷಿಯಲ್ ಮೀಡಿಯಾಗಳಲ್ಲಿನ ವೈರಲ್ ಸುದ್ದಿಗಳು, ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳ ಮಾಹಿತಿ ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ.

    ಈ ಮಾಹಿತಿಯ ಆಧಾರದ ಮೇಲೆ ಅನುಷ್ಕಾ ಶರ್ಮ 71.90 ಅಂಕಗಳಿಸಿ ಅಗ್ರ ಸ್ಥಾನದಲ್ಲಿದ್ದು, ಪ್ರಿಯಾಂಕ ಚೋಪ್ರಾ 50.34 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದ್ದಾರೆ. ಪದ್ಮಾವತ್ ನಟಿ ದೀಪಿಕಾ ಪಡುಕೋಣೆ(40.09) ಮೂರನೇ ಸ್ಥಾನ ಮತ್ತು ಕಂಗನಾ ರನಾವತ್(31.78) ನಾಲ್ಕನೇ ಸ್ಥಾನದಲ್ಲಿದ್ದಾರೆ.

    ಸ್ಕೋರ್ ಟ್ರೆಂಡ್ ಸಹ-ಸಂಸ್ಥಾಪಕ ಅಶ್ವನಿ ಕೌಲ್ ಈ ಕುರಿತು ಪ್ರತಿಕ್ರಿಯಿಸಿದ್ದು, ಈ ಅಂಕಿಅಂಶಗಳನ್ನು ದೃಢೀಕರಿಸಲಾಗಿದೆ. ಸಂಶೋಧನೆಯಿಂದ ಈ ಮಾಹಿತಿ ಸಂಗ್ರಹಿಸಲು ಸಹಾಯಕವಾಗಿದೆ. ಈ ಮಾಹಿತಿ ಸಂಗ್ರಹದ ಮೂಲಕ ಬಾಲಿವುಡ್ ತಾರೆಯರ ಶ್ರೇಯಾಂಕವನ್ನ ನಿರ್ಧರಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

    ಟಾಪ್ ಟೆನ್ ಪಟ್ಟಿಯಲ್ಲಿ ಸನ್ನಿ ಲಿಯೋನ್, ಸೋನಮ್ ಕಪೂರ್, ಶ್ರದ್ಧಾ ಕಪೂರ್, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್ ಮತ್ತು ತಾಪ್ಸಿ ಪನ್ನು ಕೂಡ ಇದ್ದಾರೆ.

    ಅನುಷ್ಕಾ ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ `ಪರಿ’ ಸಿನಿಮಾದಲ್ಲಿ ನಟಿಸಿದ್ದು, ಯಶಸ್ಸು ಕಂಡಿದ್ದಾರೆ. ಸದ್ಯ ವರುಣ್ ಧವನ್ ಅವರ ಜೊತೆ `ಸೂಯಿ ಧಾಗಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಅನುಷ್ಕಾ `ಝೀರೊ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂವರು ಮೊದಲು `ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

  • 34 ಕೋಟಿ ರೂ. ಫ್ಲಾಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ ವಿರಾಟ್

    34 ಕೋಟಿ ರೂ. ಫ್ಲಾಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ ವಿರಾಟ್

    ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 34 ಕೋಟಿ ರೂ. ನ ಫ್ಲಾಟ್‍ಗೆ ಮಾಡಿದ್ದ ಬುಕ್ಕಿಂಗ್ ರದ್ದುಗೊಳಿಸಿದ್ದಾರೆಂದು ವರದಿಯಾಗಿದೆ.

    2016 ರ ಜೂನ್ ನಲ್ಲಿ ಕೊಹ್ಲಿ ನಗರದ ವರ್ಲಿ ಪ್ರದೇಶದ ಓಂಕಾರ್ 1973 ಅಪಾರ್ಟ್ ಮೆಂಟ್ ನಲ್ಲಿ 7,171 ಚದರ ಅಡಿಯ ಸೀ-ವ್ಯೂವ್ ಫ್ಲಾಟ್ ಬುಕ್ ಮಾಡಿದ್ದರು. 35ನೇ ಮಹಡಿಯಲ್ಲಿ ಈ ಐಷರಾಮಿ ಫ್ಲಾಟ್ ಇತ್ತು. ಇದು ಓಂಕರ್ ರಿಯಾಲ್ಟರ್ಸ್ ಅಂಡ್ ಡೆವಲಪರ್ಸ್ ಅವರ ಯೋಜನೆಯಾಗಿದ್ದು, ಕೊಹ್ಲಿ ಅವರು ಫ್ಲಾಟ್ ಬುಕ್ಕಿಂಗ್ ರದ್ದು ಮಾಡಿದನ್ನು ಓಂಕರ್ ಡೆವಲಪರ್ಸ್ ಮೂಲಗಳು ದೃಢಿಪಡಿಸಿವೆ.

    ಇತ್ತೀಚಿಗೆ ಕೊಹ್ಲಿ ಡಾ. ಅನ್ನಿ ಬೆಸೆಂಟ್ ರಸ್ತೆಯ ರಹೇಜಾ ಲೆಜೆಂಡ್ ಅಪಾರ್ಟ್ ಮೆಂಟ್ ನಲ್ಲಿ ತಿಂಗಳಿಗೆ 15 ಲಕ್ಷ ರೂ. ಬಾಡಿಗೆಗೆ 2,675.07 ಚದರ ಅಡಿಯ ಸೀ-ವ್ಯೂವ್ ಫ್ಲಾಟ್ ತೆಗೆದುಕೊಂಡಿದ್ದಾರೆ. ಇದು 40 ನೇ ಮಹಡಿಯಲ್ಲಿದೆ.

    ಕೊಹ್ಲಿ ಅವರು ನಟಿ ಅನುಷ್ಕಾ ಶರ್ಮಾ ಅವರನ್ನು ಕಳೆದ ವರ್ಷ ಡಿಸೆಂಬರ್ ನಲ್ಲಿ ಮದುವೆಯಾಗಿದ್ದರು.

  • ಗೆಳೆಯನ ಮದ್ವೆಯಲ್ಲಿ ಕುಣಿದು ಕುಪ್ಪಳಿಸಿದ ಕೊಹ್ಲಿ!

    ಗೆಳೆಯನ ಮದ್ವೆಯಲ್ಲಿ ಕುಣಿದು ಕುಪ್ಪಳಿಸಿದ ಕೊಹ್ಲಿ!

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ತವರಿಗೆ ಹಿಂದಿರುಗಿದ್ದು, ವಿರಾಟ್ ತಮ್ಮ ಬಿಡುವಿನ ಸಮಯದಲ್ಲಿ ಸ್ನೇಹಿತನ ಮದುವೆ ಸಮಾರಂಭದಲ್ಲಿ ಸಿಕ್ಕಾಪಟ್ಟೆ ಕುಣಿದು ಕುಪ್ಪಳಿಸಿದ್ದಾರೆ.

    ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪತ್ನಿ ಅನುಷ್ಕಾ ಶರ್ಮಾರನ್ನು ಬರಮಾಡಿಕೊಂಡ ಪತಿ ವಿರಾಟ್, ಪತ್ನಿಯ ಜೊತೆ ಸ್ಥಳೀಯ ಟ್ಯಾಟೂ ಪಾರ್ಲರ್  ಗೆ ಹೋಗಿ, ವಿಶೇಷ ಟ್ಯಾಟೂ ಹಾಕಿಸಿಕೊಂಡರು.

    ಗೆಳೆಯನ ಮದುವೆಯಲ್ಲಿ ವಿರಾಟ್ ಕೊಹ್ಲಿ ಪಂಜಾಬಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾಟ್‍ಗೆ ಶಿಖರ್ ಧವನ್ ಕೂಡ ಸಾಥ್ ನೀಡಿದ್ದು, ಮದುಮಗನ ಜೊತೆ ಇಬ್ಬರೂ ಕುಣಿದು ಕುಪ್ಪಳಿಸಿದ್ದಾರೆ.

    ವಿರಾಟ್ ಕೊಹ್ಲಿ ಅವರ ಡಾನ್ಸ್ ವಿಡಿಯೋವನ್ನ ಇನ್‍ಸ್ಟಾಗ್ರಾಂನ ಫ್ಯಾನ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದೆ. ವಿರಾಟ್ ಕೊಹ್ಲಿ ಭಾಂಗ್ರ ಶೈಲಿಯ ಸ್ಟೆಪ್ ಹಾಕಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ.

    ವಿರಾಟ್ ಕೊಹ್ಲಿ ಅವರ ನೃತ್ಯ ಯಾರಿಗೆ ತಾನೆ ಇಷ್ಟ ಆಗೊಲ್ಲ ಹೇಳಿ? ಕೇವಲ ಕ್ರಿಕೆಟಿಗನಾಗದೇ ತಮ್ಮ ಇನ್ನಿತರ ಕಲೆಗಳ ಸಾಮರ್ಥ್ಯ ವನ್ನ ಯಾವಾಗಲು ತೋರಿಸುತ್ತಾ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಅಭಿಮಾನಿಗಳು ಇವರ ಡಾನ್ಸ್ ನೋಡಲು ಕಾತುರರಾಗಿರುತ್ತಾರೆ.

    https://www.instagram.com/p/Bf5zZI0FsgK/?utm_source=ig_embed&utm_campaign=embed_profile_upsell_test

    https://www.instagram.com/p/Bf5dne_FURm/?utm_source=ig_embed&utm_campaign=embed_profile_upsell_test

  • ಅನುಷ್ಕಾ ಶರ್ಮಾ ಪರಿ ಚಿತ್ರದ ಬಿಹೈಂಡ್ ದಿ ಸೀನ್ಸ್ ಫೋಟೋ ವೈರಲ್

    ಅನುಷ್ಕಾ ಶರ್ಮಾ ಪರಿ ಚಿತ್ರದ ಬಿಹೈಂಡ್ ದಿ ಸೀನ್ಸ್ ಫೋಟೋ ವೈರಲ್

    ಮುಂಬೈ: ಪರಿ ಸಿನಿಮಾದಲ್ಲಿ ಅನುಷ್ಕಾಗೆ ಮಾಡಿದ ಮೇಕಪ್ ನಿಜಕ್ಕೂ ಎಷ್ಟು ಅದ್ಭುತವಾಗಿದೆ ಎಂದು ಸಿನಿರಸಿಕರು ಹೊಗಳಿದ್ದಾರೆ. ಇದೀಗ ಅನುಷ್ಕಾ ಸೆಟ್‍ನಲ್ಲಿ ತೆಗೆಸಿಕೊಂಡ ಕೆಲವು ಫೋಟೋಗಳು ವೈರಲ್ ಆಗಿವೆ.

    ಬ್ರಿಟನ್ ಮೂಲದ ಮೇಕಪ್ ಕಲಾವಿದೆ ಕ್ಲೂವರ್ ವೂಟನ್ ಪರಿ ಚಿತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಹಾಲಿವುಡ್‍ನಲ್ಲಿ ಬರುವ ಹಾರರ್ ಚಿತ್ರಗಳಲ್ಲಿ ಮುಖ್ಯವಾಗಿ ಕಾಣುವುದು ಅಲ್ಲಿಯ ಕಲಾವಿದರ ಮೇಕಪ್. ಅವರು ಎಷ್ಟು ಚೆನ್ನಾಗಿ(ಭಯಂಕರವಾಗಿ) ಕಾಣಿಸುತ್ತಾರೋ ಅದೇ ರೀತಿ ಅವರ ಪಾತ್ರಗಳು ಸಹ ವಿಭಿನ್ನ ಮತ್ತು ಆಕರ್ಷಕವಾಗಿ ಕಾಣಿಸುತ್ತದೆ. ಇದೇ ರೀತಿಯ ಹೊಸ ಪ್ರಯತ್ನವನ್ನ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ತಮ್ಮ ಪರಿ ಚಿತ್ರದಲ್ಲಿ ಮಾಡಿದ್ದಾರೆ.

    ಚಿತ್ರದ ಕಥೆಯಲ್ಲಿ ಬರುವ ರುಖ್ಸಾನ ಮತ್ತು ಕಾಲಾಪೋರಿ ಪಾತ್ರಗಳು ವೀಕ್ಷಕರ ಎದೆ ಬಡಿತ ಹೆಚ್ಚಿಸಿದ್ದು, ಇವರ ಪಾತ್ರಕ್ಕೆ ತಕ್ಕಂತೆ ಬ್ರಿಟಿಷ್ ಮೇಕಪ್ ಕಲಾವಿದೆ ಕ್ಲೂವರ್ ವೂಟನ್ ಅದ್ಭುತವಾಗಿ ಮೇಕಪ್ ಮಾಡಿದ್ದಾರೆ. ಚಿತ್ರದಲ್ಲಿ ಬರುವ ಕಾಲಾಪೋರಿ ಪಾತ್ರಕ್ಕೆ ಪ್ರೋಸ್ಥೆಟಿಕ್ಸ್ (ಕೃತಕ ಚರ್ಮ ಮತ್ತು ಅಂಗಗಳು) ಬಳಸಿದ್ದು, ಇದರಿಂದ ಕಾಲಾಪೋರಿ ಪಾತ್ರಕ್ಕೆ ಜೀವ ಬಂದಿದೆ.

    ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗೆಡೆ ಮಾಡಿದ್ದು, ಇದು ಮುಖವಾಡ ಅಲ್ಲ, ನೈಜ ಮತ್ತು ಸತ್ಯ. ಕೇವಲ ಮುಖವಾಡ ಧರಿಸಿರುವವರಿಗೆ ಮಾತ್ರ ಇದು ಮುಖವಾಡದ ರೀತಿ ಕಾಣಿಸುತ್ತದೆ ಎಂದು ವಿಡಿಯೋ ಕೊನೆಯಲ್ಲಿ ಹೇಳಲಾಗಿದೆ.

    ಚಿತ್ರತಂಡದ ಜೊತೆ ತಮ್ಮ ಅನುಭವನ್ನು ಹಂಚಿಕೊಂಡ ಕ್ಲೂವರ್ ವೂಟನ್, ಅನುಷ್ಕಾ ಶರ್ಮಾ ಅವರನ್ನು ನಾನು ರಣಬೀರ್ ಸೆಟ್ ನಲ್ಲಿ ಭೇಟಿ ಮಾಡಿದ್ದೆ. ನನ್ನ ಕೆಲಸವನ್ನ ಮೆಚ್ಚಿದ ಅವರು ಪರಿ ಚಿತ್ರದ ನಿದೇರ್ಶಕರ ನಂಬರ್ ಕೊಟ್ಟರು ಎಂದರು. ಅನುಷ್ಕಾ ಅವರಿಗೆ ಮೇಕಪ್ ಮಾಡುವುದಕ್ಕೆ ತುಂಬಾ ಖುಷಿಯಾಗುತ್ತೆ. ಮೇಕಪ್‍ಗೂ ಮೊದಲು ಅವರು ಯಾವುದೇ ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಅಂತ ನೋಡಬೇಕಿತ್ತು. ಈ ಚಿತ್ರದಲ್ಲಿ ಅವರು ನೈಜವಾಗಿ ಕಾಣಿಸಿದ್ದು, ಅವರ ಸ್ಕಿನ್ ಸುಕೋಮಲವಾಗಿದೆ ಎಂದು ಹೇಳಿದರು.

    https://www.instagram.com/p/BfvZQJKgnkr/?hl=en&taken-by=anushkasharma

    https://www.instagram.com/p/BfkgVrggwuT/?hl=en&taken-by=anushkasharma

  • ಪರಿ ಸಿನಿಮಾ ನೋಡಿ ಹೆದರಿದ್ರಂತೆ ಕೊಹ್ಲಿ- ಹೆಂಡ್ತಿ ಅಭಿನಯದ ಬಗ್ಗೆ ಪ್ರಶಂಸೆ

    ಪರಿ ಸಿನಿಮಾ ನೋಡಿ ಹೆದರಿದ್ರಂತೆ ಕೊಹ್ಲಿ- ಹೆಂಡ್ತಿ ಅಭಿನಯದ ಬಗ್ಗೆ ಪ್ರಶಂಸೆ

    ಮುಂಬೈ: ಕ್ರಿಕೆಟರ್ ವಿರಾಟ್ ಕೊಹ್ಲಿ ತನ್ನ ಮಡದಿ ಅನುಷ್ಕಾ ಶರ್ಮಾ ಅವರನ್ನ ಹಾಡಿ ಹೊಗಳಿದ್ದಾರೆ.

    ಇಂದು ಅನುಷ್ಕಾ ಶರ್ಮಾ ಅಭಿನಯದ ಹಾರರ್ ಸಿನಿಮಾ ಪರಿ ಬಿಡುಗಡೆಯಾಗಿದ್ದು, ಕೊಹ್ಲಿ ಚಿತ್ರವನ್ನ ವೀಕ್ಷಿಸಿದ್ದಾಗಿ ತಿಳಿಸಿದ್ದಾರೆ. ಇದು ನನ್ನ ಹೆಂಡತಿ ಮಾಡಿರುವ ಅತ್ಯುತ್ತಮ ಚಿತ್ರ ಎಂದು ಕೊಹ್ಲಿ ಅನುಷ್ಕಾ ಶರ್ಮಾ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರೋ ಕೊಹ್ಲಿ, ಕಳೆದ ರಾತ್ರಿ ಪರಿ ಸಿನಿಮಾ ನೋಡಿದೆ. ಇದು ಈವರೆಗಿನ ನನ್ನ ಹೆಂಡತಿಯ ಅತ್ಯುತ್ತಮ ಚಿತ್ರ. ನಾನು ದೀರ್ಘ ಸಮಯದ ಬಳಿಕ ನೋಡಿದ ಬೆಸ್ಟ್ ಸಿನಿಮಾ. ಸ್ವಲ್ಪ ಹೆದರಿಕೆ ಆಯ್ತು. ಆದರೂ ನಿನ್ನ ಬಗ್ಗೆ ಹೆಮ್ಮೆಪಡುತ್ತೇನೆ ಅನುಷ್ಕಾ ಎಂದು ಬರೆದುಕೊಂಡಿದ್ದಾರೆ.

    ಭಯ ಹುಟ್ಟಿಸುವಂತಹ ಟ್ರೇಲರ್ ಹಾಗೂ ಪೋಸ್ಟರ್‍ಗಳಿಂದಲೇ ಪರಿ ಚಿತ್ರ ಸಾಕಷ್ಟು ನಿರೀಕ್ಷೆಯನ್ನ ಹುಟ್ಟಿಸಿತ್ತು. ಈ ಚಿತ್ರವನ್ನ ಪ್ರೋಸಿತ್ ರಾಯ್ ನಿರ್ದೇಶಿಸಿದ್ದು, ಅನುಷ್ಮಾ ಶರ್ಮಾ ಅವರ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಹಾಗೂ ಕ್ರಿಆರ್ಜ್ ಎಂಟರ್‍ಟೈನ್‍ಮೆಂಟ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣ ಮಾಡಲಾಗಿದೆ. ಎನ್‍ಹೆಚ್10 ಹಾಗೂ ಫಿಲೌರಿ ಚಿತ್ರಗಳ ನಂತರ ಅನುಷ್ಕಾ ಶರ್ಮಾ ಅವರ ಬ್ಯಾನರ್ ಅಡಿ ನಿರ್ಮಾಣವಾದ ಚಿತ್ರ ಇದಾಗಿದೆ. ಚಿತ್ರದಲ್ಲಿ ಬೆಂಗಾಲಿ ನಟ ಪರಂಬ್ರತಾ ಚಟರ್ಜಿ ಕೂಡ ಕಾಣಿಸಿಕೊಂಡಿದ್ದಾರೆ.

     

    ಅನುಷ್ಮಾ ಶರ್ಮಾ ಸದ್ಯ ಸೂಯಿಧಾಗಾ ಚಿತ್ರದ ಶೂಟಿಂಗ್‍ನಲ್ಲಿ ತೊಡಗಿದ್ದು, ಈ ಚಿತ್ರದಲ್ಲಿ ವರುಣ್ ಧವನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

  • ನೆಚ್ಚಿನ ಮಡದಿಗೆ ಎಲ್ಲರೆದರು ‘ಥ್ಯಾಂಕ್ ಯು’ ಅಂದ್ರು ವಿರಾಟ್ ಕೊಹ್ಲಿ

    ನೆಚ್ಚಿನ ಮಡದಿಗೆ ಎಲ್ಲರೆದರು ‘ಥ್ಯಾಂಕ್ ಯು’ ಅಂದ್ರು ವಿರಾಟ್ ಕೊಹ್ಲಿ

    ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮಗೆ ಬೆಂಬಲವಾಗಿ ನಿಂತ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

    ಸರಣಿಯ ಅಂತಿಮ ಪಂದ್ಯದ ಗೆಲುವಿನ ನಂತರ ಮಾತನಾಡಿದ ಕೊಹ್ಲಿ, ಈ ಸಾಧನೆಗೆ ಪ್ರೇರಣೆಯಾದ ಆತ್ಮೀಯರೆಲ್ಲರಿಗೂ ಧನ್ಯವಾದ ತಿಳಿಸಿದರು. ಸರಣಿಯ ಉದ್ದಕ್ಕೂ ಪತ್ನಿ ತನಗೆ ಬೆಂಬಲವಾಗಿ ನಿಂತರು. ತಂಡವನ್ನು ಮುಂದೆ ನಿಂತು ನಡೆಸುವುದೇ ಒಂದು ಅದ್ಭುತ ಭಾವನೆ ಎಂದು ಎಂದರು.

    ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇನ್ನು 8 ರಿಂದ 9 ವರ್ಷಗಳು ಉಳಿದಿದೆ. ಅದ್ದರಿಂದ ನಾನು ಪ್ರತಿ ಸನ್ನಿವೇಶವನ್ನು ಉತ್ತಮವಾಗಿ ಬಳಸಿಕೊಳ್ಳಬೇಕಿದೆ. ಟೀಂ ಇಂಡಿಯಾ ನಾಯಕನಾಗಿ ಆಡುವುದು ನನ್ನ ಅದೃಷ್ಟ. ತಂಡದ ನಾಯಕನಾಗಿ ಶುಕ್ರವಾರ ನಡೆದ ಪಂದ್ಯದಲ್ಲಿ ಉತ್ತಮ ಫಾರ್ಮ್ ನಲ್ಲಿದೆ. ಈ ಸ್ಥಳದಲ್ಲಿ ಲೈಟ್ಸ್ ಕೆಳಗೆ ಬ್ಯಾಟಿಂಗ್ ನಡೆಸುವುದು ಹೆಚ್ಚು ಖುಷಿಕೊಡುತ್ತದೆ. ಅದ್ದರಿಂದಲೇ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಲಾಯಿತು. ನಂತರದಲ್ಲಿ ಲೈಟ್ಸ್ ನಡುವೆ ಬ್ಯಾಟಿಂಗ್ ನಡೆಸಲು ಪಿಚ್ ಉತ್ತಮವಾಗಿತ್ತು ಎಂದು ಹೇಳಿದರು.

    ಇದೇ ವೇಳೆ ಟೀಂ ಇಂಡಿಯಾದ ಆರಂಭಿಕರಾದ ಶಿಖರ್ ಧವನ್ ಹಾಗೂ ರೋಹಿತ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಆರಂಭಿಕರು ಬ್ಯಾಟಿಂಗ್ ನಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ಸರಣಿಯಲ್ಲಿ ಮುಂದಿನ ಟಿ20 ಪಂದ್ಯಗಳ ಕಡೆಗೆ ಹೆಚ್ಚಿನ ಗಮನ ನೀಡುವುದಾಗಿ ತಿಳಿಸಿದರು.

    ಆಫ್ರಿಕಾ ವಿರುದ್ಧ ಅಂತಿಮ ಪಂದ್ಯದಲ್ಲಿ ಕೊಹ್ಲಿ 96 ಎಸೆತಗಳಿಗೆ 129 ರನ್ ಸಿಡಿಸಿ ಭಾರತದ ಗೆಲುವಿಗೆ ಕಾರಣರಾದರು. ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಒಟ್ಟಾರೆ 558 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಪರ ಸರಣಿಯೊಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ನಾಯಕ ಎಂಬ ಹೆಗ್ಗಳಿಕೆ ಪಡೆದರು.

     

  • ‘ಮೇರೆ ರಶ್ಕೆ ಕಮರ್’ ಹಾಡಿಗೆ ವಿರುಷ್ಕಾ ರೊಮ್ಯಾಂಟಿಕ್ ಡ್ಯಾನ್ಸ್- ವಿಡಿಯೋ ವೈರಲ್

    ‘ಮೇರೆ ರಶ್ಕೆ ಕಮರ್’ ಹಾಡಿಗೆ ವಿರುಷ್ಕಾ ರೊಮ್ಯಾಂಟಿಕ್ ಡ್ಯಾನ್ಸ್- ವಿಡಿಯೋ ವೈರಲ್

    ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಿ ಎರಡು ತಿಂಗಳುಗಳೇ ಕಳೆದಿವೆ. ಇಟಲಿಯಲ್ಲಿ ಮದುವೆ ಮಾಡಿಕೊಂಡ ಜೋಡಿ, ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ರು. ಆರತಕ್ಷತೆಯಲ್ಲಿ ‘ಮೇರೆ ರಶ್ಕೆ ಕಮರ್’ ಹಿಂದಿ ಹಾಡಿಗೆ ವಿರಾಟ್ ಮತ್ತು ಅನುಷ್ಕಾ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.

    ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆಯಾಗುವ ಮೂಲಕ ವಿರುಷ್ಕಾ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇಟಲಿಯಿಂದ ಬಂದ ನಂತರ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ದೆಹಲಿಯಲ್ಲಿ ನಡೆದ ಆರತಕ್ಷತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸಿದ್ದರು. ದೆಹಲಿ ಬಳಿಕ ಮುಂಬೈನ ಸೆಂಟ್ ರೀಜಿಸ್ ನಲ್ಲಿ ಮಗದೊಮ್ಮೆ ಆರತಕ್ಷತೆ ಆಯೋಜನೆ ಮಾಡಲಾಗಿತ್ತು. ಮುಂಬೈನಲ್ಲಿ ಬಾಲಿವುಡ್ ತಾರೆಯರು ಮತ್ತು ಕೊಹ್ಲಿ ಸ್ನೇಹಿತರು ಆಗಮಿಸಿ ವಧು-ವರರಿಗೆ ಶುಭ ಕೋರಿದ್ರು. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

    ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಲಾರಾ ದತ್ತ, ಶಾರೂಖ್ ಖಾನ್ ಹಾಗೂ ಅವರ ಕುಟುಂಬದವರು, ಎ.ಆರ್ ರೆಹಮಾನ್, ಬೋಮನ್ ಇರಾನಿ, ರೇಖಾ, ಮಾಧುರಿ ದೀಕ್ಷಿತ್, ಶ್ರೀದೇವಿ, ಸಿದಾರ್ಥ್ ಮಲ್ಹೋತ್ರ, ರಣ್‍ಬೀರ್ ಕಪೂರ್, ವರುಣ್ ಧವನ್, ಕತ್ರಿನಾ ಕೈಫ್, ವಾಣಿ ಕಪೂರ್, ಪ್ರಿಯಾಂಕಾ ಚೋಪ್ರಾ, ಕಂಗನಾ ರಣೌತ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಆಗಮಿಸಿ ನವಜೋಡಿಗೆ ಶುಭಹಾರೈಸಿದ್ದರು. ಇದನ್ನೂ ಓದಿ: ಆರತಕ್ಷತೆಯಲ್ಲಿ ಶಾರುಖ್ ಜೊತೆ ಸ್ಟೆಪ್ ಹಾಕಿದ ಅನುಷ್ಕಾ ಶರ್ಮಾ

    ಕ್ರೀಡಾ ತಾರೆಗಳಾದ ಎಂ.ಎಸ್ ಧೋನಿ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಸುನೀಲ್ ಗವಾಸ್ಕರ್, ಸೈನಾ ನೆಹ್ವಾಲ್, ಉಮೇಶ್ ಯಾದವ್, ಜಸ್‍ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜ, ಸೌರವ್ ಗಂಗೂಲಿ, ಅಶೀಶ್ ನೆಹೆರಾ ಆರತಕ್ಷತೆಗೆ ರಂಗು ತಂದಿದ್ದರು. ಇದನ್ನೂ ಓದಿ: ಮದ್ವೆ ಬಳಿಕ ಕೇಪ್‍ಟೌನ್ ನಲ್ಲಿ ವಿರುಷ್ಕಾ ಮೋಜು ಮಸ್ತಿ- ವಿರಾಟ್, ಅನುಷ್ಕಾ ಡ್ಯಾನ್ಸ್ ಮೋಡಿ

    ಸದ್ಯ ಅನುಷ್ಕಾ ಶರ್ಮಾ ವರುಣ್ ಧವನ್‍ಗೆ ನಾಯಕಿಯಾಗಿ ‘ಸೂಯಿಧಾಗಾ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅನುಷ್ಕಾ ಅಭಿನಯದ ಹಾರರ್ ಸಿನಿಮಾ ‘ಪರಿ’ ಮಾರ್ಚ್ 3ರಂದು ತೆರೆಕಾಣಲಿದೆ. ಪರಿ ತನ್ನ ವಿಭಿನ್ನ ಟೀಸರ್ ಗಳ ಮೂಲಕ ಸಿನಿ ಅಂಗಳದಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಸೂಯಿಧಾಗಾ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    https://www.instagram.com/p/BfEUGkMFx1U/?taken-by=_virat_18_lovers

    https://www.instagram.com/p/BfBlWpplbNV/?taken-by=_virat_18_lovers

  • ಅಳಿಯ ಕೊಹ್ಲಿಗೆ ಸ್ಪೆಷಲ್ ಗಿಫ್ಟ್ ನೀಡಿದ ಅನುಷ್ಕಾ ಶರ್ಮಾ ತಂದೆ

    ಅಳಿಯ ಕೊಹ್ಲಿಗೆ ಸ್ಪೆಷಲ್ ಗಿಫ್ಟ್ ನೀಡಿದ ಅನುಷ್ಕಾ ಶರ್ಮಾ ತಂದೆ

    ಮುಂಬೈ: ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಯಾದಾಗಿನಿಂದ ಅವರ ಪ್ರೇಮ ದಿನದಿಂದ ದಿನಕ್ಕೆ ಇಮ್ಮಡಿಗೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿರುಷ್ಕಾ ದಂಪತಿ ಹಾಕುವ ಪೋಸ್ಟ್ ಗಳೇ ಇದಕ್ಕೆ ಸಾಕ್ಷಿ. ಇದೀಗ ಅನುಷ್ಮಾ ಶರ್ಮಾ ಅವರ ತಂದೆ, ಅಳಿಯ ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆಯೊಂದನ್ನ ನೀಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಅನುಷ್ಕಾ ತಂದೆ ನಿವೃತ್ತ ಕರ್ನಲ್ ಅಜಯ್ ಕುಮಾರ್ ಶರ್ಮಾ, ಕೊಹ್ಲಿಗೆ ಪ್ರೇಮ ಕವನಗಳ ಪುಸ್ತಕವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ತೇಜಸ್ವಿನಿ ದಿವ್ಯಾ ನಾಯ್ಕ್ ಬರದಿರುವ 42 ಪದ್ಯಗಳಿರುವ ‘ಸ್ಮೋಕ್ಸ್ ಅಂಡ್ ವಿಸ್ಕಿ’ ಎಂಬ ಪುಸ್ತವನ್ನ ಗಿಫ್ಟ್ ಆಗಿ ನೀಡಿದ್ದಾರೆಂದು ವರದಿಯಾಗಿದೆ.

    ಅನುಷ್ಕಾ ಪೋಷಕರು ಕಳೆದ ವಾರ ತೇಜಸ್ವಿನಿ ದಿವ್ಯಾ ನಾಯ್ಕ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಅನುಷ್ಕಾ ತಂದೆಗೆ ನಾಯ್ಕ್ ಅವರ ಕೃತಿ ಇಷ್ಟವಾಗಿ ಕೊಹ್ಲಿಗಾಗಿ ಪುಸ್ತಕದ ಪ್ರತಿಯೊಂದನ್ನ ತಂದಿದ್ದಾರೆ ಎಂದು ವರದಿಯಾಗಿದೆ. ಈ ಪುಸ್ತಕದಲ್ಲಿ ಪ್ರೀತಿ ಹಾಗೂ ಸಂಬಂಧಗಳು, ಅದರ ಏರಿಳಿತಗಳ ಬಗೆಗಿನ ಪದ್ಯಗಳಿದ್ದು, ಫೆಬ್ರವರಿ 3ರಂದು ಮುಂಬೈನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ.

    ವಿರುಷ್ಕಾ ದಂಪತಿ ಕೂಡ ಪ್ರೇಮ ಪದ್ಯಗಳನ್ನ ಇಷ್ಟಪಡುವವರಾಗಿದ್ದು, ಮದುವೆ ಆರತಕ್ಷತೆಗೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಕವಿ ರೂಮಿಯ ಕವನ ಸಂಕಲವನ್ನ ಉಡುಗೊರೆಯಾಗಿ ನೀಡಿದ್ದರು.

    ಅನುಷ್ಕಾ ಸದ್ಯ ತಮ್ಮ ಪರಿ ಚಿತ್ರದ ಬಿಡುಗಡೆಗಾಗಿ ಕಾಯ್ತಿದ್ದಾರೆ. ಈ ಚಿತ್ರಕ್ಕೆ ಸ್ವತಃ ಅನುಷ್ಮಾ ನಿರ್ಮಾಪಕರಾಗಿದ್ದಾರೆ. ಮುಂದೆ ರಾಜ್‍ಕುಮಾರ್ ಹಿರಾನಿ ಅವರ ಸಂಜಯ್ ದತ್ ಜೀವನಾಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಣ್‍ಬೀರ್ ಕಪೂರ್ ನಾಯಕರಾಗಿ ನಟಿಸಿದ್ದಾರೆ.