Tag: anushka sharma

  • ನೀವು ಪ್ರೆಗ್ನೆಂಟಾ ಪ್ರಶ್ನೆಗೆ ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ

    ನೀವು ಪ್ರೆಗ್ನೆಂಟಾ ಪ್ರಶ್ನೆಗೆ ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಮದುವೆಯಾಗಿ 1 ವರ್ಷವಾಗುತ್ತಿದ್ದು, ಅಭಿಮಾನಿಗಳು ಅನುಷ್ಕಾಗೆ ನೀವೂ ಪ್ರೆಗ್ನೆಂಟ್ ಆಗಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಅನುಷ್ಕಾ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಅನುಷ್ಕಾ ಶರ್ಮಾ ಈ ನಡುವೆ ತಮ್ಮ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಚಿತ್ರದ ಪ್ರಮೋಶನ್‍ಗೆಂದು ಬಂದಾಗ ಮಾಧ್ಯಮದವರು ನೀವು ಗರ್ಭಿಣಿಯೇ ಎಂದು ಪ್ರಶ್ನಿಸಿದ್ದಾರೆ.

    ಈ ಪ್ರಶ್ನೆಗೆ, ನಿಮಗೆ ಈ ರೀತಿಯ ಸುದ್ದಿಗಳು ಹೇಗೆ ಬರುತ್ತೆ ಎಂಬುದು ನನಗೆ ಗೊತ್ತಿಲ್ಲ. ಇದು ಕೆಲಸಕ್ಕೆ ಬಾರದ ಮಾತುಗಳು. ನೀವು ಮದುವೆಯನ್ನು ಅಡಗಿಸಬಹುದು. ಆದರೆ ಪ್ರೆಗ್ನೆನ್ಸಿಯನ್ನು ಹೇಗೆ ಅಡಗಿಸುತ್ತೀರಾ ಎಂದು ಅನುಷ್ಕಾ ಶರ್ಮಾ ಖಡಕ್ ಆಗಿ ಅನುಷ್ಕಾ ಪ್ರತಿಕ್ರಿಯೆ ನೀಡಿದ್ದಾರೆ.

    ಹಲವು ನಟಿಯರಿಗೆ ಈ ರೀತಿ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನನಗೆ ಇಂತಹ ಸುದ್ದಿ ಮುಖ್ಯವಾಗುವುದಿಲ್ಲ. ಇಲ್ಲಿ ಜನರು ಮದುವೆ ಮೊದಲೇ ನಿಮ್ಮನ್ನು ಮುತ್ತೈದೆ ಮಾಡುತ್ತಾರೆ. ಮಗು ಆಗುವ ಮೊದಲೇ ತಾಯಿ ಮಾಡುತ್ತಾರೆ. ನನಗೆ ಇದರಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಈ ರೀತಿಯ ಸುದ್ದಿ ಕೇಳಿ ನನಗೆ ನಗು ಬರುತ್ತೆ ಎಂದು ಹೇಳಿದ್ದಾರೆ.

    ಅನುಷ್ಕಾ ಶಾರೂಕ್ ನಟನೆಯ ‘ಝೀರೋ’ ಚಿತ್ರದ ನಂತರ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಅನುಷ್ಕಾ ಗರ್ಭಿಣಿಯಾಗಿರುವ ಕಾರಣ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಸ್ವತಃ ಅನುಷ್ಕಾ ಈ ವಿಷಯಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.

    ಕಳೆದ ವರ್ಷದ ಡಿಸೆಂಬರ್ 11ರಂದು ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯ ಒಂದು ವರ್ಷದ ಅನುಭವ ಹಂಚಿಕೊಂಡ ವಿರುಷ್ಕಾ

    ಮದ್ವೆಯ ಒಂದು ವರ್ಷದ ಅನುಭವ ಹಂಚಿಕೊಂಡ ವಿರುಷ್ಕಾ

    ಮುಂಬೈ: ಈ ಹಿಂದೆ ಜಾಹೀರಾತಿನ ಮೂಲಕವೇ ತಮ್ಮ ಪ್ರೀತಿಯನ್ನು ಅನಾವರಣಗೊಳಿಸಿದ್ದ ವಿರುಷ್ಕಾ, ಇಂದು ಅದೇ ಶೈಲಿಯಲ್ಲಿಯೇ ಮದುವೆಯ ಒಂದು ವರ್ಷದ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    2017 ಡಿಸೆಂಬರ್ 11ರಂದು ಇಟಲಿಯಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆ ಆಗಿದ್ದರು. ಮುಂದಿನ ತಿಂಗಳು ಮದುವೆಯ ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಜೋಡಿ ಒಂದು ತಿಂಗಳ ಮೊದಲೇ ತಮ್ಮ ಜೀವನದಲ್ಲಾದ ಬದಲಾವಣೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವ ವಿರುಷ್ಕಾ ಮದುವೆ ಸೆಟ್ ನಲ್ಲಿ ನವಜೋಡಿಗೆ ಸಾಂಸರಿಕ ಸಲಹೆಗಳನ್ನು ನೀಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮದುವೆ ಮುಂಚೆ ತಿಂಗಳಲ್ಲಿ 15 ದಿನ ಅಡುಗೆ ಮಾಡ್ತೀನಿ ಅಂತಾ ಮಾತು ಕೊಡ್ತಾರೆ. ಸರದಿ ಬಂದಾಗ ಹೋಟೆಲ್ ನಿಂದ ಊಟ ಆರ್ಡರ್ ಮಾಡ್ತಾರೆ ಅಂತಾ ಅನುಷ್ಕಾ ಪತಿ ಬಗ್ಗೆ ಆರೋಪ ಮಾಡ್ತಾರೆ. ಇದಕ್ಕೆ ಉತ್ತರಿಸುವ ವಿರಾಟ್, ಮದುವೆ ಆದ ಮೇಲೆ ಟಿವಿ, ಎಸಿ ಮತ್ತು ಜೀವನದ ರಿಮೋಟ್ ಎಲ್ಲವೂ ನಮ್ಮ ಕೈಯಿಂದ ತಪ್ಪಿ ಹೋಗುತ್ತದೆ ಅಂತಾ ಉತ್ತರಿಸಿದ್ದಾರೆ.

    ಬೆಳಗ್ಗೆ 5 ಗಂಟೆಗೆ ಎದ್ದು ಎಲ್ಲೆಂದರಲ್ಲಿ ಟವೆಲ್, ಶೂ ಎಸೆದು, ಅತಿ ಕೆಟ್ಟ ಬೆಡ್ ಕಾಫಿ ಕುಡಿಸ್ತಾನೆ ಅಂತಾ ಅನುಷ್ಕಾ ಹೇಳ್ತಾರೆ. ಕೇರಂನಲ್ಲಿ ಸೋತಾಗ ಅತ್ತು, ನಮಗೆ ಹೊಡಿತಾರೆ. ಆದ್ರೆ ಅಳುವಿನಲ್ಲಿಯೂ ತುಂಬಾ ಕ್ಯೂಟ್ ಆಗಿ ಕಾಣಿಸುತ್ತಾಳೆ ಎಂದು ವಿರಾಟ್ ಪತ್ನಿಯನ್ನ ಮುದ್ದು ಮಾತುಗಳಿಂದ ಓಲೈಸುತ್ತಾರೆ. ಈ ಎಲ್ಲ ತರ್ಲೆ ಮಾಡುತ್ತಾ ನನ್ನನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾನೆ. ಇದಕ್ಕೆ ಪ್ರತಿಯಾಗಿ ವಿರಾಟ್, ಯಾವಾಗಲೂ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

    ವಿರಾಟ್ ಕೊಹ್ಲಿ- ಅನುಷ್ಕಾ ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇಟಲಿಯ ಟಸ್ಕನಿ ನಗರದ ‘ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    https://www.facebook.com/virat.kohli/videos/256851284997026/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿರಾಟ್ ಆಗಲಿದ್ದಾರೆ ಅಪ್ಪ!- ಅನುಷ್ಕಾ ಬೇಬಿ ಬಂಪ್ ಫೋಟೋ ವೈರಲ್

    ವಿರಾಟ್ ಆಗಲಿದ್ದಾರೆ ಅಪ್ಪ!- ಅನುಷ್ಕಾ ಬೇಬಿ ಬಂಪ್ ಫೋಟೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪ್ಪ ಆಗುತ್ತಿದ್ದಾರೆ. ಸದ್ಯ ವಿರಾಟ್ ಪತ್ನಿ, ನಾಯಕಿ ಅನುಷ್ಕಾ ಶರ್ಮಾ ಅವರ ಬೇಬಿ ಬಂಪ್ ಫೋಟೋ ವೈರಲ್ ಆಗಿದ್ದು, ವಿರುಷ್ಕಾ ನಿಜವಾಗಿಯೂ ಅಪ್ಪ- ಅಮ್ಮ ಆಗುತ್ತಿದ್ದಾರಾ ಎಂಬ ಕುತೂಹಲ ಎಲ್ಲರಿಗೂ ಮೂಡಿದೆ.

    ನಟಿ ಅನುಷ್ಕಾ ಅವರ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅನುಷ್ಕಾ ಗರ್ಭಿಣಿ ರೀತಿ ಕಾಣಿಸುತ್ತಿದೆ. ಹಾಗಾಗಿ ಅಭಿಮಾನಿಗಳು ವಿರುಷ್ಕಾ ಅಪ್ಪ-ಅಮ್ಮ ಆಗುತ್ತಿದ್ದಾರೆ ಎಂದು ಖುಷಿಯಲ್ಲಿದ್ದಾರೆ.

    ವಿರಾಟ್‍ಗೆ ಮಕ್ಕಳೆಂದರೆ ತುಂಬಾ ಇಷ್ಟ. ಅವರು ಶಿಖರ್ ಧವನ್ ಮಗ ಜೋರಾವರ್, ಎಂ.ಎಸ್ ಧೋನಿ ಅವರ ಪುತ್ರಿ ಝೀವಾ ಹಾಗೂ ಸುರೇಶ್ ರೈನಾ ಅವರ ಪುತ್ರಿ ಗ್ರೇಸಿಯಾ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಸದ್ಯ ವಿರಾಟ್ ಈಗ ತಮ್ಮ ಸ್ವಂತ ಮಗುವಿನ ಜೊತೆ ಕಾಲ ಕಳೆಯಲು ಇಚ್ಛಿಸುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿಕೊಳ್ಳುತ್ತಿದ್ದಾರೆ.

    ಕಳೆದ ವರ್ಷ ಡಿ. 11ರಂದು ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆಯಿರುವ ಸ್ವರ್ಗದಂಥಹ ತಾಣದಲ್ಲಿ ವಿರುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಸಿಂಪಲ್ ಆಗಿ ಆದರೂ ಪ್ರತಿಯೊಂದು ವಸ್ತುಗಳು ಕೂಡ ತುಂಬಾ ದುಬಾರಿಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಿಮ್ಮಿಬ್ಬರಿಗೂ ನಮ್ಮ ಕ್ಲಬ್‍ಗೆ ಸ್ವಾಗತ- ದೀಪ್‍ವೀರ್ ಗೆ ಅನುಷ್ಕಾ ಸ್ವಾಗತ

    ನಿಮ್ಮಿಬ್ಬರಿಗೂ ನಮ್ಮ ಕ್ಲಬ್‍ಗೆ ಸ್ವಾಗತ- ದೀಪ್‍ವೀರ್ ಗೆ ಅನುಷ್ಕಾ ಸ್ವಾಗತ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಗೆಳೆಯ ರಣ್‍ವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೀಪಿಕಾ ಮದುವೆಯಾದ ಬಳಿಕ ನಟಿ ಅನುಷ್ಕಾ ಶರ್ಮಾ ತಮ್ಮ ಕ್ಲಬ್‍ಗೆ ಸ್ವಾಗತ ಕೋರಿದ್ದಾರೆ.

    ದೀಪ್‍ವೀರ್ ಬುಧವಾರ ಕೊಂಕಣಿ ಸಂಪ್ರದಾಯದಂತೆ ಗುರುವಾರ ಸಿಂಧ್ ಸಂಪ್ರದಾಯದಂತೆ ಮದುವೆಯಾದರು. ಮದುವೆಯಾದ ನಂತರ ಬಾಲಿವುಡ್ ತಾರೆಯರು ಹಾಗೂ ಗಣ್ಯರು ಈ ಜೋಡಿಗೆ ಶುಭಾಶಯ ತಿಳಿಸಿದರು. ಹಾಗೆಯೇ ಅನುಷ್ಕಾ ಕೂಡ ದೀಪಿಕಾ ಅವರಿಗೆ ಶುಭಾಶಯ ತಿಳಿಸಿ ತಮ್ಮ ಕ್ಲಬ್‍ಗೆ ಸ್ವಾಗತಿಸಿದ್ದಾರೆ.

    ಅನುಷ್ಕಾ ಶರ್ಮಾ ತಮ್ಮ ಟ್ವಿಟ್ಟರಿನಲ್ಲಿ, “ನಿಮ್ಮಿಬ್ಬರಿಗೂ ಪ್ರಪಂಚದ ಎಲ್ಲ ಖುಷಿ ಸಿಗಲಿ. ನೀವಿಬ್ಬರು ಯಾವಾಗಲೂ ಜೊತೆಯಾಗಿರಿ. ನೀವಿಬ್ಬರು ಈಗಿರುವ ಹಾಗೇ ಮುಂದೆ ಜೀವನದಲ್ಲೂ ಒಬ್ಬರನೊಬ್ಬರು ಪ್ರೀತಿಸುತ್ತೀರಿ. ನಿಮ್ಮಿಬ್ಬರಿಗೂ ನಮ್ಮ ಕ್ಲಬ್‍ಗೆ ಸ್ವಾಗತ” ಎಂದು ಟ್ವೀಟ್ ಮಾಡಿದ್ದಾರೆ.

    ಇಟಲಿಯಿಂದ ನ.18ಕ್ಕೆ ಭಾರತಕ್ಕೆ ವಾಪಸ್ಸಾಗಲಿರುವ ಬಾಜಿರಾವ್ ಮಸ್ತಾನಿ ದಂಪತಿ ನ.21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆಯವರ ಬಂಧುಗಳು ಮತ್ತು ಆಪ್ತ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ನ.21ರಂದು ಮುಂಬೈಯಲ್ಲಿ ಇನ್ನೊಂದು ರಿಸೆಪ್ಷನ್ ಪಾರ್ಟಿ ನಡೆಯಲಿದ್ದು, ಅದರಲ್ಲಿ ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

     

  • ವಿಮಾನ ನಿಲ್ದಾಣದಲ್ಲೇ ಪತಿಯ ಮೇಲೆ ಅನುಷ್ಕಾ ಗರಂ

    ವಿಮಾನ ನಿಲ್ದಾಣದಲ್ಲೇ ಪತಿಯ ಮೇಲೆ ಅನುಷ್ಕಾ ಗರಂ

    ಮುಂಬೈ: ಕ್ರಿಕೆಟ್ ಅಂಗಳದಲ್ಲಿ ತಮ್ಮ ಬಿರುಸಿನ ಹೊಡೆತಗಳ ಮೂಲಕವೇ ಎದುರಾಳಿಗಳ ಬೆವರು ಇಳಿಸುವ ಆಟಗಾರ ವಿರಾಟ್ ಕೊಹ್ಲಿ. ಆದ್ರೆ ನವೆಂಬರ್ 5ರಂದು ಪತ್ನಿ ಅನುಷ್ಕಾ ಶರ್ಮಾ ಪತಿಯ ಮೇಲೆ ಮುನಿಸಿಕೊಂಡಿದ್ದರು. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.

    ನವೆಂಬರ್ 5ರಂದು ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವಿರಾಟ್ ಕೊಹ್ಲಿ ತಡರಾತ್ರಿ ಮುಂಬೈಗೆ ಬಂದಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಮೊಬೈಲಿನಲ್ಲಿ ವಿರಾಟ್-ಅನುಷ್ಕಾ ಆಗಮಿಸುವ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಅನುಷ್ಕಾ ಯಾವುದೇ ವಿಚಾರದಲ್ಲಿ ಪತಿಯ ಮೇಲೆ ಯಾವುದೋ ಕಾರಣಕ್ಕೆ ಮುನಿಸಿಕೊಂಡಂತೆ ಕಾಣುತ್ತಿತ್ತು.

    ಪತ್ನಿ ಮುನಿಸಿಕೊಂಡಿದ್ದನ್ನ ಅರಿತ ಪತಿ ವಿರಾಟ್ ಅಷ್ಟೇ ಮುದ್ದು ಮಾಡುತ್ತಾ ಅನುಷ್ಕಾರನ್ನು ಸಮಾಧಾನ ಮಾಡುತ್ತಿದ್ದರು. ಕ್ರೀಡಾಂಗಣದಲ್ಲಿ ವಿರಾಟ ರೂಪ ಪ್ರದರ್ಶಿಸುವ ಕೊಹ್ಲಿ, ಅದಕ್ಕೆ ತದ್ವಿರುದ್ಧವಾಗಿ ಪತ್ನಿಯ ಮನವೊಲಿಸುವ ಪತಿಯನ್ನು ಜನರು ನೋಡಿದಂತಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿರುಷ್ಕಾ ಮದುವೆಯಾದ ನಂತರ ವಿರಾಟ್ ಅವರ ಇದು ಮೊದಲನೇ ಹುಟ್ಟುಹಬ್ಬ ಇದಾಗಿತ್ತು. ಹಾಗಾಗಿ ಅನುಷ್ಕಾ ತಮ್ಮ ಪತಿ ಹುಟ್ಟುಹಬ್ಬಕ್ಕೆ ವಿರಾಟ್ ಜೊತೆಗಿರುವ ಫೋಟೋ ಹಾಕಿ ಅದಕ್ಕೆ, “ಈತನನ್ನು ಹುಟ್ಟಿಸಿದ್ದಕ್ಕೆ ಧನ್ಯವಾದಗಳು ದೇವರೇ” ಎಂದು ಟ್ವೀಟ್ ಮಾಡಿ ವಿಭಿನ್ನವಾಗಿ ಶುಭಾಶಯ ತಿಳಿಸಿದ್ದರು.

    https://www.instagram.com/p/BqEXxwXDZ68/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಈತನನ್ನು ಹುಟ್ಟಿಸಿದ್ದಕ್ಕೆ ಧನ್ಯವಾದಗಳು ದೇವರೇ: ಅನುಷ್ಕಾ ಶರ್ಮಾ

    ಈತನನ್ನು ಹುಟ್ಟಿಸಿದ್ದಕ್ಕೆ ಧನ್ಯವಾದಗಳು ದೇವರೇ: ಅನುಷ್ಕಾ ಶರ್ಮಾ

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ತಮ್ಮ ಪತಿಯ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭಾಶಯ ತಿಳಿಸಿದ್ದಾರೆ.

    ವಿರುಷ್ಕಾ ಮದುವೆಯಾದ ನಂತರ ವಿರಾಟ್ ಅವರ ಇದು ಮೊದಲನೇ ಹುಟ್ಟುಹಬ್ಬ. ಹಾಗಾಗಿ ಅನುಷ್ಕಾ ತಮ್ಮ ಪತಿ ಹುಟ್ಟುಹಬ್ಬಕ್ಕೆ ವಿರಾಟ್ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, “ಈತನನ್ನು ಹುಟ್ಟಿಸಿದ್ದಕ್ಕೆ ಧನ್ಯವಾದಗಳು ದೇವರೇ” ಎಂದು ಟ್ವೀಟ್ ಮಾಡಿ ವಿಭಿನ್ನವಾಗಿ ಶುಭಾಶಯ ತಿಳಿಸಿದ್ದಾರೆ.

    ವಿರಾಟ್ ತಮ್ಮ ಹುಟ್ಟುಹಬ್ಬದಂದು ಪತ್ನಿ ಅನುಷ್ಕಾ ಶರ್ಮಾ ಜೊತೆ ಉತ್ತರಾಖಂಡದ ಹರಿದ್ವಾರದ ಆಶ್ರಮದಲ್ಲಿ ಆಚರಿಸಿಕೊಂಡಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಶನಿವಾರ ಡೆಹ್ರಾಡೂನ್‍ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ನರೇಂದ್ರ ನಗರದಲ್ಲಿರುವ ಹೋಟೆಲ್ ಆನಂದಕ್ಕೆ ತೆರಳಿದ್ದಾರೆ.

    ವಿರುಷ್ಕಾ ನವೆಂಬರ್ 7ರ ವರೆಗೂ ಅಲ್ಲಿಯೇ ಇದ್ದು, ರಿವರ್ ರಾಫ್ಟಿಂಗ್ ಹಾಗೂ ರಿಶಿಕೇಶ್‍ನಲ್ಲಿ ಕ್ಯಾಂಪಿಂಗ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಕೊಹ್ಲಿ ಹಾಗೂ ಅನುಷ್ಕಾ ಇಂದು ಅನಂತ್ ಧಾಮ್ ಆತ್ಮಭೋದ್ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಮಹರಾಜ್ ಅನಂತ್ ಬಾಬ ಆಶ್ರಮದ ಮುಖ್ಯಸ್ಥರಾಗಿದ್ದು, ಅನುಷ್ಕಾ ಅವರ ಕುಟುಂಬದ ಆಧ್ಯಾತ್ಮಿಕ ಗುರು ಎನ್ನಲಾಗಿದೆ. ವಿರಾಟ್ ಹಾಗೂ ಅನುಷ್ಕಾಗಾಗಿ ಅಲ್ಲಿ ಎಲ್ಲ ತಯಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ಜೊತೆ ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಕೊಹ್ಲಿ

    ಪತ್ನಿ ಜೊತೆ ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಕೊಹ್ಲಿ

    ನವದೆಹಲಿ: ಭಾರತದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಪತ್ನಿ ಅನುಷ್ಕಾ ಶರ್ಮಾ ಜೊತೆ ಉತ್ತರಾಖಂಡದ ಹರಿದ್ವಾರದ ಆಶ್ರಮದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

    ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಶನಿವಾರ ಡೆಹರಾಡೂನ್‍ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ನರೇಂದ್ರ ನಗರದಲ್ಲಿರುವ ಹೋಟೆಲ್ ಆನಂದಕ್ಕೆ ತೆರಳಿದ್ದಾರೆ. ವಿರುಷ್ಕಾ ನವೆಂಬರ್ 7ರ ವರೆಗೂ ಅಲ್ಲಿಯೇ ಇದ್ದು, ರಿವರ್ ರಾಫ್ಟಿಂಗ್ ಹಾಗೂ ರಿಶಿಕೇಶ್‍ನಲ್ಲಿ ಕ್ಯಾಂಪಿಂಗ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

    ಕೊಹ್ಲಿ ಹಾಗೂ ಅನುಷ್ಕಾ ಇಂದು ಅನಂತ್ ಧಾಮ್ ಆತ್ಮಭೋದ್ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಹರಾಜ್ ಅನಂತ್ ಬಾಬ ಆಶ್ರಮದ ಮುಖ್ಯಸ್ಥರಾಗಿದ್ದು, ಅನುಷ್ಕಾ ಅವರ ಕುಟುಂಬದ ಆಧ್ಯಾತ್ಮಿಕ ಗುರು ಎನ್ನಲಾಗಿದೆ. ವಿರಾಟ್ ಹಾಗೂ ಅನುಷ್ಕಾಗಾಗಿ ಅಲ್ಲಿ ಎಲ್ಲ ತಯಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನುಷ್ಕಾ, ಅನುಷ್ಕಾ ಎಂದು ಕರೆದು ಕೊಹ್ಲಿಯನ್ನು ಚಿಯರ್ ಮಾಡಿದ್ರು ಅಭಿಮಾನಿಗಳು- ವಿಡಿಯೋ

    ಅನುಷ್ಕಾ, ಅನುಷ್ಕಾ ಎಂದು ಕರೆದು ಕೊಹ್ಲಿಯನ್ನು ಚಿಯರ್ ಮಾಡಿದ್ರು ಅಭಿಮಾನಿಗಳು- ವಿಡಿಯೋ

    ಮುಂಬೈ: ವಿಂಡೀಸ್ ವಿರುದ್ಧದ ನಾಲ್ಕನೇಯ ಏಕದಿನ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಅನುಷ್ಕಾ ಶರ್ಮಾ ಹೆಸರನ್ನು ಹೇಳಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಪ್ರೋತ್ಸಾಹಿಸಿದ್ದಾರೆ.

    ಹೌದು. ಅಭಿಮಾನಿಗಳು ಅನುಷ್ಕಾ ಶರ್ಮಾ ಹೆಸರನ್ನು ಹೇಳುತ್ತಿದ್ದಂತೆ ನಕ್ಕ ವಿರಾಟ್ ಕೊಹ್ಲಿ ಕೈ ಎತ್ತಿ ಥಂಪ್ಸ್ ಅಪ್ ಮಾಡಿ ಧನ್ಯವಾದ ಸೂಚಿಸಿದರು.

    ಈ ಹಿಂದೆ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದಾಗ ಅಭಿಮಾನಿಗಳು ಅನುಷ್ಕಾ ವಿರುದ್ಧ ಟ್ರೋಲ್ ಮಾಡಿ ಟೀಕಿಸುತ್ತಿದ್ದರು. ಕೊಹ್ಲಿ ಪ್ರದರ್ಶನ ಕಳಪೆಯಾಗಲು ಅನುಷ್ಕಾ ಕಾರಣ ಎಂದು ಬರೆದು ಟೀಕಿಸುತ್ತಿದ್ದರು. ಇದಕ್ಕೆ ಕಿಡಿಕಾರಿದ್ದ ಕೊಹ್ಲಿ ಅನುಷ್ಕಾ ಪರ ನಿಂತು ಅಭಿಮಾನಿಗಳಿಗೆ ಗರಂ ಆಗಿಯೇ ಉತ್ತರಿಸಿ ನನ್ನ ಆಟದ ವಿಚಾರಕ್ಕೆ ಬೇರೆಯವರನ್ನು ಎಳೆದು ತರಬೇಡಿ ಎಂದು ಗುಡುಗಿದ್ದರು.

    ಅನುಷ್ಕಾ ಮತ್ತು ಕೊಹ್ಲಿ ಈಗ ದಂಪತಿಯಾಗಿದ್ದು, ಅಭಿಮಾನಿಗಳು ಈ ಜೋಡಿಗೆ `ವಿರುಷ್ಕಾ’ ಎಂದು ಹೆಸರನ್ನು ಇಟ್ಟಿದ್ದಾರೆ. ಈಗ ಕ್ರೀಡಾಂಗಣದಲ್ಲಿ ಕೊಹ್ಲಿ ಬದಲು ಅನುಷ್ಕಾ ಎಂದು ಕರೆಯುತ್ತಿದ್ದು, ಕೊಹ್ಲಿ ಸಹ ಅಭಿಮಾನಿಗಳ ಈ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bpi7W2MBuW8/?taken-by=virat.kohlifans

  • ವಿರಾಟ್, ಅನುಷ್ಕಾಗೆ ಬಿಸಿಸಿಐನಿಂದ ಗುಡ್‍ನ್ಯೂಸ್!

    ವಿರಾಟ್, ಅನುಷ್ಕಾಗೆ ಬಿಸಿಸಿಐನಿಂದ ಗುಡ್‍ನ್ಯೂಸ್!

    ಮುಂಬೈ: ವಿದೇಶಿ ಪ್ರವಾಸದ ವೇಳೆ ಆಟಗಾರರೊಂದಿಗೆ ಅವರ ಪತ್ನಿ ಕೂಡ ಬರಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದ ಕೊಹ್ಲಿ ಬೇಡಿಕೆಗೆ ಬಿಸಿಸಿಐ ಸಮ್ಮತಿ ಸೂಚಿಸಿದೆ.

    ಕಳೆದ 15 ದಿನಗಳ ಹಿಂದೆಯಷ್ಟೇ ವಿರಾಟ್ ಕೊಹ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಡಳಿತ ಮಂಡಳಿ ಮುಂದೆ ವಿದೇಶಿ ಪ್ರವಾಸಕ್ಕೆ ಪತ್ನಿಯರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಸದ್ಯ ಕೊಹ್ಲಿ ಮನವಿ ಪುರಸ್ಕರಿಸಿರುವ ಬಿಸಿಸಿಐ ಸರಣಿಯ ಆರಂಭದ 10 ದಿನಗಳನ್ನು ಹೊರತು ಪಡಿಸಿ ಮುಂದಿನ ಹಂತದಲ್ಲಿ ಪತಿಯನ್ನು ಸೇರಿಸಿಕೊಳ್ಳಲು ಅವಕಾಶ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ಹಿಂದೆ ಇದ್ದ ನಿಯಮದಲ್ಲಿ ಸಡಿಲಿಕೆ ಮಾಡಿರುವ ಬಿಸಿಸಿಐ, ಪತ್ನಿಯರು ಆಟಗಾರರೊಂದಿಗೆ ಇರುವುದು ಉತ್ತಮ ಪರಿಣಾಮ ಬೀರುವ ಸಾಧ್ಯತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ. ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ, ರೋಹಿತ್ ಶರ್ಮಾ ರೊಂದಿಗೆ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ನಿರ್ಧಾರ ಕೈಗೊಂಡಿದೆ.

    2015 ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಆಟಗಾರರೊಂದಿಗೆ ಪತ್ನಿಯರು ವಿದೇಶಿ ಪ್ರವಾಸದಲ್ಲಿ ಜೊತೆಗಿರಲು ಅವಕಾಶ ನೀಡಿತ್ತು. ಆದರೆ ಬಳಿಕ ನಡೆದ ಆಶ್ಯಸ್ ಟೂರ್ನಿಯಲ್ಲಿ ತಂಡ ಕಳಪೆ ಪ್ರದರ್ಶನ ನೀಡಿತ್ತು. ಈ ವೇಳೆ ಆಟಗಾರರ ಕಳಪೆ ಪ್ರದರ್ಶನಕ್ಕೆ ಈ ನಿಯಮ ಜಾರಿಯೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು.

    ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್, ಪತ್ನಿಯರು ತಮ್ಮೊಂದಿಗೆ ಸರಣಿಗೆ ಆಗಮಿಸಬೇಕೇ? ಬೇಡವೇ ಎನ್ನುವುದು ಆಟಗಾರರ ಆಯ್ಕೆಯಾಗುತ್ತದೆ. ಬಿಸಿಸಿಐ ಪತ್ನಿಯರು ಆಟಗಾರರೊಂದಿಗೆ ತೆರಳಲು ಅನುಮತಿ ನೀಡಬೇಕು ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಹ್ಲಿ ಹೇಳಿಕೆ ಟ್ವೀಟಿಸಿದ ಪೋರ್ನ್ ನಟಿ-ಟ್ರೋಲ್‍ಗೊಳಗಾದ ಅನುಷ್ಕಾ ಶರ್ಮಾ

    ಕೊಹ್ಲಿ ಹೇಳಿಕೆ ಟ್ವೀಟಿಸಿದ ಪೋರ್ನ್ ನಟಿ-ಟ್ರೋಲ್‍ಗೊಳಗಾದ ಅನುಷ್ಕಾ ಶರ್ಮಾ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಪಡೆದಿರುವುದು ಎಲ್ಲರಿಗೂ ತಿಳಿದ ಸಂಗತಿ. ಕಡಿಮೆ ವಯಸ್ಸಿನಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಕೊಹ್ಲಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿ ತಮ್ಮ ಈ ಸಾಧನೆಗೆ ಆತ್ಮಸ್ಥೈರ್ಯ ಹಾಗೂ ಕಠಿಣ ಪರಿಶ್ರಮ ಕಾರಣ ಎಂದು ತಿಳಿಸಿದ್ದರು. ಇದೇ ಮಾತನ್ನು ಅಮೆರಿಕದ ಅಡಲ್ಟ್ ಸ್ಟಾರ್ ರಿಚೆಲ್ಲೆ ರ‍್ಯಾನ್ ಕೂಡ ತಮ್ಮ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

    ರಿಚೆಲ್ಲೆ ರ‍್ಯಾನ್ ಟ್ವೀಟ್ ಕಂಡ ಹಲವು ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಕೆಲ ನೆಟ್ಟಿಗರು ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಭಿನ್ನ ಸನ್ನಿವೇಶದ ದೃಶ್ಯಗಳು ಹಾಗೂ ಫೋಟೋ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

    ಸೆಪ್ಟೆಂಬರ್ 28ರಂದು ಅನುಷ್ಕಾ ಶರ್ಮಾ ಅಭಿನಯದ ಸೂಯಿಧಾಗ ಚಿತ್ರ ತೆರೆಕಂಡಿತ್ತು. ಇದೇ ಮೊದಲ ಬಾರಿಗೆ ಮಧ್ಯಮ ವರ್ಗದ ಗೃಹಿಣಿಯಾಗಿ ಕಾಣಿಸಿಕೊಂಡಿರುವ ಅನುಷ್ಕಾ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಸೂಯಿಧಾಗಾ ಚಿತ್ರದ ಟ್ರೇಲರ್ ಬಿಡುಗಡೆಗೊಂಡಾಗಲೂ ಅನುಷ್ಕಾರ ‘ಮಮತಾ’ ಪಾತ್ರದ ವಿವಿಧ ಭಂಗಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈಗ ಅದೇ ಸಿನಿಮಾದ ಫೋಟೋಗಳು ರಿಚೆಲ್ಲೆ ಟ್ವೀಟ್‍ಗೆ ಉತ್ತರ ನೀಡುವಂತೆ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ.

    ರಿಚೆಲ್ಲಾ ರ‍್ಯಾನ್ ಅವರ ಟ್ವೀಟ್‍ಗೆ ಹಲವರು ಟ್ವಿಟ್ಟಿಗರು ಅನುಷ್ಕಾರ ಫೋಟೋ ಹಾಕಿ, ಅತ್ತಿಗೆ ಏನಾಗುತ್ತಿದೆ ಎಂದು ನೋಡಿ ಹಾಸ್ಯವಾಗಿ ಬರೆದಿದ್ದಾರೆ. ಮತ್ತೆ ಕೆಲವರು ರಿಚೆಲ್ಲಾ ಹೇಳಿಕೆಗೆ ದ್ವಂಧ್ವ ಅರ್ಥ ನೀಡುವಂತೆ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ರಿಚೆಲ್ಲಾರ ಒಂದು ಟ್ವೀಟ್ ಮತ್ತೊಮ್ಮೆ ಅನುಷ್ಕಾರ ಸೂಯಿಧಾಗ ಸಿನಿಮಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುವಂತೆ ಮಾಡಿವೆ.

    ಏಷ್ಯಾ ಕಪ್ ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದು, ಮೊದಲ ಪಂದ್ಯದಲ್ಲೇ ಭರ್ಜರಿ ಜಯಗಳಿಸಿದ್ದಾರೆ. ಈ ನಡುವೆ ಕೊಹ್ಲಿ ಪತ್ನಿಯ ಸಿನಿಮಾಗಳಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇತ್ತೀಚೆಗೆ ಬಿಡುಗಡೆಯಾಗಿದ್ದ ಸೂಯಿಧಾಗ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕುರಿತು ಟ್ವೀಟ್ ಕೂಡ ಮಾಡಿದ್ದ ಕೊಹ್ಲಿ, `ಎಂತಹಾ ಇಮೋಷನಲ್ ಸಿನಿಮಾ ಇದು. ಮಮತಾ ಪಾತ್ರದ ಅಭಿನಯ ನನ್ನ ಹೃದಯ ಕದ್ದಿತು. ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಯಾರೂ ಮಿಸ್ ಮಾಡಬೇಡಿ’ ಎಂದು ಕೊಹ್ಲಿ ಬರೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

    https://twitter.com/TheBulla_FC/status/1048136110407372800?

    https://twitter.com/BlackaPanther/status/1048111208010735621?