Tag: anushka sharma

  • ವಿದೇಶಿ ಗಾಯಕಿಯನ್ನು ನೋಡಿ ಕೊಹ್ಲಿ ಅಭಿಮಾನಿಗಳು ಕನ್‍ಫ್ಯೂಸ್

    ವಿದೇಶಿ ಗಾಯಕಿಯನ್ನು ನೋಡಿ ಕೊಹ್ಲಿ ಅಭಿಮಾನಿಗಳು ಕನ್‍ಫ್ಯೂಸ್

    ನವದೆಹಲಿ: ಬಾಲಿವುಡ್ ತಾರೆ ಅನುಷ್ಕಾ ಶರ್ಮ ಅವರು ಇಷ್ಟು ದಿನ ತಮ್ಮ ಪತಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪ್ರವಾಸ ಮಾಡುತ್ತ ಸುದ್ದಿಯಲ್ಲಿದ್ದರು. ಆದ್ರೆ ಈಗ ಅನುಷ್ಕಾ ಶರ್ಮ ಅವರನ್ನೇ ಹೋಲುವ ವಿದೇಶಿ ಗಾಯಕಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿರುವ ಫೋಟೋದಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ.

    https://twitter.com/Yash__Aamirian/status/1091954950106533888?ref_src=twsrc%5Etfw%7Ctwcamp%5Etweetembed%7Ctwterm%5E1091954950106533888&ref_url=https%3A%2F%2Fwww.indiatoday.in%2Ftrending-news%2Fstory%2Fanushka-sharma-s-lookalike-goes-viral-fans-ask-virat-kohli-bhabhi-ne-naam-badal-liya-kya-1446330-2019-02-04

    ಹೌದು, ಇತ್ತಿಚಿಗಷ್ಟೆ ಅಮೆರಿಕಾದ ಗಾಯಕಿ ಜೂಲಿಯಾ ಮೈಕಲ್ಸ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಫೋಟೋದಲ್ಲಿ ಅವರು ಸೇಮ್ ಟು ಸೇಮ್ ಅನುಷ್ಕಾ ಶರ್ಮ ಅವರಂತೆ ಕಾಣಿಸುತ್ತಾರೆ. ಆದರಿಂದ ಈ ಪೋಸ್ಟ್ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೋಸ್ಟ್ ನೋಡಿ ಅನುಷ್ಕಾ ಅತ್ತಿಗೆ ಯಾವಾಗ ಹೆಸರು ಬದಲಾಯಿಸಿಕೊಂಡರು ಅಂತ ಅಭಿಮಾನಿಗಳು ವಿರಾಟ್ ಕೊಹ್ಲಿ ಕಾಲೆಳೆಯುತ್ತಿದ್ದಾರೆ.

    ಅಷ್ಟೇ ಅಲ್ಲದೆ ಪೋಸ್ಟ್ ನೋಡಿದ ಅಭಿಮಾನಿಗಳು ವಿದೇಶಿ ಗಾಯಕಿಯನ್ನು ಅನುಷ್ಕಾ ಶರ್ಮ ಅವರ ವಿದೇಶಿ ಅವತಾರ ಅಂತಾನೂ ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಕೆಲವರು ಅನುಷ್ಕಾ ಶರ್ಮ ತಮ್ಮ ಅವಳಿ ಸಹೋದರಿಯನ್ನು ವಿದೇಶದಲ್ಲಿ ಇದ್ದಾರಾ ಅಂದರೆ, ಇನ್ನೂ ಕೆಲವರು ಅನುಷ್ಕಾ ಶರ್ಮ ಡೂಪ್ಲಿಕೇಟ್ ಕಾಪಿ ಎಂದು ಟ್ರೋಲ್ ಮಾಡುತ್ತಿದ್ದಾರೆ.

    https://www.instagram.com/p/BtXcWlohrqr/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ವ್ಯಾಲೆಂಟೈನ್ ವೀಕ್’ಗೆ ಕಿಕ್ ಕೊಟ್ಟ ವಿರುಷ್ಕಾ ಜೋಡಿ!

    ‘ವ್ಯಾಲೆಂಟೈನ್ ವೀಕ್’ಗೆ ಕಿಕ್ ಕೊಟ್ಟ ವಿರುಷ್ಕಾ ಜೋಡಿ!

    ಮುಂಬೈ: ಫೆಬ್ರವರಿ 14 ಪ್ರೇಮಿಗಳ ದಿನ ಇರುವ ಕಾರಣ ಹಲವು ಪ್ರೇಮಿಗಳು ತಮ್ಮ ಸಂಗಾತಿಗಳಿಗೆ ವಿಶೇಷ ಗಿಫ್ಟ್ ನೀಡಲು ಸಿದ್ಧತೆ ನಡೆಸಿದ್ದಾರೆ. ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ವ್ಯಾಲೆಟೈನ್ಸ್ ವೀಕ್ ಆರಂಭ ಮಾಡಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಟೂರ್ನಿಯಿಂದ ವಿಶ್ರಾಂತಿ ಪಡೆದಿರುವ ನಾಯಕ ಕೊಹ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ಇಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿರುವ ರೊಮ್ಯಾಂಟಿಕ್ ಸನ್ನಿವೇಶವನ್ನು ಕಾಣಬಹುದಾಗಿದೆ.

    ಡಿಸೆಂಬರ್ 11, 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಆಸ್ಟ್ರೇಲಿಯಾದಲ್ಲಿ ತಮ್ಮ ಮೊದಲ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತ್ತು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂಸತ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಸದಾ ಹಂಚಿಕೊಳ್ಳುತ್ತಿದ್ದಾರೆ. ನ್ಯೂಜಿಲೆಂಡ್ ಟೂರ್ನಿಯ ವೇಳೆಯೂ ಕೂಡ ಅನುಷ್ಕಾ ಶರ್ಮಾ ತಮ್ಮ ಕೆಲ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದರು.

    ಟೀಂ ಇಂಡಿಯಾ ತಂಡ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕೆ ಸಿದ್ಧತೆ ನಡೆಸಿದೆ. ಇತ್ತ ಈ ವರ್ಷ ಝೀರೋ ಸಿನಿಮಾದಲ್ಲಿ ಶಾರುಖ್ ಖಾನ್ ರೊಂದಿಗೆ ಜನರ ಮುಂದೆ ಬಂದಿದ್ದ ಅನುಷ್ಕಾ ಶರ್ಮಾ ಅವರ ಚಿತ್ರ ಅಭಿಮಾನಿಗಳನ್ನು ರಂಜಿಸಲು ವಿಫಲವಾಗಿತ್ತು. ಇಬ್ಬರು ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿ ಆಗಿದ್ದರೂ, ಸಮಯ ಸಿಕ್ಕಾಗಲೆಲ್ಲಾ ಖಾಸಗಿ ಜೀವನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    https://www.instagram.com/p/BtXrAUvnfQ0/

    https://www.instagram.com/p/BtC0N6VhEf_/

    https://www.instagram.com/p/BsDanxrAiiI/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಧೋನಿ, ಕೊಹ್ಲಿ ಇಬ್ಬರ ಪತ್ನಿಯರು ಒಂದೇ ಶಾಲೆಯ ವಿದ್ಯಾರ್ಥಿಗಳು – ಫೋಟೋ ವೈರಲ್

    ಧೋನಿ, ಕೊಹ್ಲಿ ಇಬ್ಬರ ಪತ್ನಿಯರು ಒಂದೇ ಶಾಲೆಯ ವಿದ್ಯಾರ್ಥಿಗಳು – ಫೋಟೋ ವೈರಲ್

    ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಎಷ್ಟು ಖ್ಯಾತಿ ಪಡೆದಿದ್ದರೋ ಅವರ ಪತ್ನಿಯರೂ ಕೂಡ ಅಷ್ಟೇ ಹೆಸರು ಪಡೆದಿದ್ದಾರೆ. ಆದರೆ ಈ ಇಬ್ಬರ ಕುರಿತು ವಿಶೇಷ ಫೋಟೋವೊಂದು ವೈರಲ್ ಆಗಿದೆ.

    ಧೋನಿ ಪತ್ನಿ ಸಾಕ್ಷಿ ಹಾಗೂ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ ಇಬ್ಬರು ಒಂದೇ ಶಾಲೆಯ ವಿದ್ಯಾರ್ಥಿಗಳು ಎನ್ನುವ ವಿಚಾರ ಸದ್ಯ ಬಹಿರಂಗವಾಗಿದ್ದು, ಇಬ್ಬರು ಶಾಲೆಯ ದಿನಗಳಲ್ಲಿ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಸದ್ಯ ವೈರಲ್ ಆಗಿರುವ ಫೋಟೋಗಳಲ್ಲಿ ಇಬ್ಬರು ಶಾಲೆಯ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗೆ ತಯಾರಾಗಿರುವುದನ್ನು ಕಾಣಬಹುದು. ಫೋಟೋದಲ್ಲಿ ಅನುಷ್ಕಾ ಶರ್ಮಾ ಪಿಂಕ್ ಗಾಗ್ರ ಚೊಲಿ ಡ್ರೆಸ್ ಧರಿಸಿದ್ದರೆ, ಸಾಕ್ಷಿ ರಾಣಿ ರೀತಿಯಲ್ಲಿ ಡ್ರೆಸ್ ಹಾಕಿದ್ದಾರೆ. ಅಲ್ಲದೇ ಶಾಲೆಯ ಎಲ್ಲಾ ಮಕ್ಕಳ ಗ್ರೂಪ್ ಫೋಟೋ ಕೂಡ ಸದ್ಯ ಲಭ್ಯವಾಗಿದೆ.

    ಒಂದೇ ಶಾಲೆಯಲ್ಲಿ ಓದಿದ ವಿಚಾರದ ಬಗ್ಗೆ ಇದುವರೆಗೂ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ. ಇಬ್ಬರೂ ಅಸ್ಸಾಂನ ಸೇಂಟ್ ಮೇರಿ ಶಾಲೆಯಲ್ಲಿ ಓದಿದ್ದು, 2013 ರಲ್ಲಿ ಇಬ್ಬರು ಪರಸ್ಪರ ಭೇಟಿಯ ವೇಳೆ ಸತ್ಯ ತಿಳಿದುಬಂದಿದೆ. ಅನುಷ್ಕಾ ಶರ್ಮಾ ಮಾತ್ರ ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು ಎಂದು ವರದಿಯಾಗಿದೆ. ಅಂದಹಾಗೇ ಇಬ್ಬರು ಓದಿದ್ದು ಅಸ್ಸಾಂನ ಸಣ್ಣ ಪಟ್ಟಣದಲ್ಲಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅನುಷ್ಕಾ ಜೊತೆಗಿರುವ ಫೋಟೋ ಹಾಕಿ ನಾವು ಹೋಗಿ ಬರುತ್ತೇವೆ ಎಂದ ವಿರಾಟ್ ಕೊಹ್ಲಿ

    ಅನುಷ್ಕಾ ಜೊತೆಗಿರುವ ಫೋಟೋ ಹಾಕಿ ನಾವು ಹೋಗಿ ಬರುತ್ತೇವೆ ಎಂದ ವಿರಾಟ್ ಕೊಹ್ಲಿ

    ಮೌಂಟ್ ಮೌಂಗಾನೆ: ನ್ಯೂಜಿಲೆಂಡ್ ವಿರುದ್ಧ 3-0 ಸರಣಿ ಸಾಧಿಸಿ, ಜಯದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಪ್ರವಾಸ ಆರಂಭಿಸಿದ್ದಾರೆ.

    2 ಏಕದಿನ ಮತ್ತು ಟಿ 20 ಸರಣಿಗೆ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಮುಂದಿನ ಎರಡು ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಸೋಮವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 74 ಎಸೆತ ಎದುರಿಸಿ 6 ಬೌಂಡರಿ, 1 ಸಿಕ್ಸರ್ ಸಿಡಿಸುವ ಮೂಲಕ 60 ರನ್‍ಗಳನ್ನು ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ನ್ಯೂಜಿಲೆಂಡ್ ಗೆಲ್ಲಲು 244 ರನ್ ಗಳ ಗುರಿಯನ್ನು ಪಡೆದ ಭಾರತ 3 ವಿಕೆಟ್ ನಷ್ಟಕ್ಕೆ 245 ರನ್ ಹೊಡೆದು 7 ವಿಕೆಟ್ ಗಳಿಂದ ಗೆದ್ದು ಸಂಭ್ರಮಿಸಿತ್ತು.

    ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಸರಣಿ ಗೆಲುವು ಸಾಧಿಸಿದ್ದರಿಂದ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಹೀಗಾಗಿ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಇರುವ ಫೋಟೋ ಹಾಕಿ, ನಾವು ಹೋಗಿ ಬರುತ್ತೇವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅನುಷ್ಕಾ ಆರತಕ್ಷತೆಗೆ ಆಗಮಿಸಿದ್ದು ನನಗೆ ತುಂಬಾನೇ ಸ್ಪೆಷಲ್: ಮಾಜಿ ಪ್ರೇಯಸಿಯನ್ನು ನೆನೆದ ರಣ್‍ವೀರ್

    ಅನುಷ್ಕಾ ಆರತಕ್ಷತೆಗೆ ಆಗಮಿಸಿದ್ದು ನನಗೆ ತುಂಬಾನೇ ಸ್ಪೆಷಲ್: ಮಾಜಿ ಪ್ರೇಯಸಿಯನ್ನು ನೆನೆದ ರಣ್‍ವೀರ್

    ಮುಂಬೈ: ಅನುಷ್ಕಾ ಶರ್ಮಾ ನನ್ನ ಆರತಕ್ಷತೆಗೆ ಆಗಮಿಸಿದ್ದು ನೋಡಿ ನನಗೆ ತುಂಬಾನೇ ಸ್ಪೆಷಲ್ ಅನಿಸಿತ್ತು ಎಂದು ಬಾಲಿವುಡ್ ನಟ ರಣ್‍ವೀರ್ ಸಿಂಗ್ ತನ್ನ ಮಾಜಿ ಪ್ರೇಯಸಿಯನ್ನು ನೆನೆದಿದ್ದಾರೆ.

    ಇತ್ತೀಚೆಗೆ ರಣ್‍ವೀರ್ ಫಿಲಂಫೇರ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ಸಂರ್ದಶಕ ನಿಮ್ಮ ಆರತಕ್ಷತೆಗೆ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಎಲ್ಲರೂ ಆಗಮಿಸಿ ನಿಮಗೆ ಶುಭಾಶಯ ಕೋರಲು ಬಂದಿದ್ದರು. ಅವರು ನಿಮ್ಮ ಆರತಕ್ಷತೆಗೆ ಬಂದಿದ್ದು ನಿಮಗೆ ಹೇಗೆ ಅನಿಸಿತು ಎಂದು ಪ್ರಶ್ನಿಸಿದ್ದರು. ಆಗ ರಣ್‍ವೀರ್ ಸಿಂಗ್ ಆರತಕ್ಷತೆಗೆ ಎಲ್ಲರು ಆಗಮಿಸಿದ್ದು ಖುಷಿ ಆಯಿತು. ಅದರಲ್ಲೂ ಅನುಷ್ಕಾ ಶರ್ಮಾ ನನ್ನ ಆರತಕ್ಷತೆಗೆ ಬಂದಿದ್ದು ನನಗೆ ತುಂಬಾನೇ ಸ್ಪೆಷಲ್ ಅನಿಸಿತ್ತು ಎಂದು ರಣ್‍ವೀರ್ ಹೇಳಿದ್ದಾರೆ.

    2010ರಲ್ಲಿ ಬಿಡುಗಡೆಯಾದ ‘ಬ್ಯಾಂಡ್ ಬಾಜಾ ಭಾರತ್’ ಸಿನಿಮಾದಲ್ಲಿ ರಣ್‍ವೀರ್ ಸಿಂಗ್ ಹಾಗೂ ಅನುಷ್ಕಾ ಶರ್ಮಾ ನಟಿಸಿದ್ದರು. ಈ ಚಿತ್ರದಿಂದ ಇಬ್ಬರು ಪ್ರೀತಿಸಲು ಶುರು ಮಾಡಿದ ಬಳಿಕ ಯಾವುದೋ ಕಾರಣದಿಂದ ಇಬ್ಬರ ನಡುವಿನ ಪ್ರೀತಿ ಬ್ರೇಕಪ್ ಆಯ್ತು.

    ಅನುಷ್ಕಾ 2017ರಲ್ಲಿ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ದ ದ್ರಾಕ್ಷಿ ತೋಟದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ರಣ್‍ವೀರ್ 2018ರಲ್ಲಿ ಇಟಲಿಯ ಲೇಕ್ ಕೋಮೋದಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ಕೈ ಹಿಡಿದಿದ್ದರು.

    ರಣ್‍ವೀರ್ ಹಾಗೂ ದೀಪಿಕಾ ಮದುವೆ ಆದ ಬಳಿಕ ಅನುಷ್ಕಾ ಶರ್ಮಾ ತಮ್ಮ ಟ್ವಿಟ್ಟರಿನಲ್ಲಿ, “ನಿಮ್ಮಿಬ್ಬರಿಗೂ ಪ್ರಪಂಚದ ಎಲ್ಲ ಖುಷಿ ಸಿಗಲಿ. ನೀವಿಬ್ಬರು ಯಾವಾಗಲೂ ಜೊತೆಯಾಗಿರಿ. ನೀವಿಬ್ಬರು ಈಗಿರುವ ಹಾಗೇ ಮುಂದೆ ಜೀವನದಲ್ಲೂ ಒಬ್ಬರನೊಬ್ಬರು ಪ್ರೀತಿಸುತ್ತೀರಿ. ನಿಮ್ಮಿಬ್ಬರಿಗೂ ನಮ್ಮ ಕ್ಲಬ್‍ಗೆ ಸ್ವಾಗತ” ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದರು. ಅಷ್ಟೇ ಅಲ್ಲದೇ ಮುಂಬೈನಲ್ಲಿ ನಡೆದ ದೀಪ್‍ವೀರ್ ಆರತಕ್ಷತೆಗೆ ಆಗಮಿಸಿ ನೇರವಾಗಿ ಶುಭಾಶಯ ಕೋರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ ಜೊತೆ ಫೋಟೋ ಹಾಕಿ ಟ್ರೋಲ್ ಆದ್ರು ವಿರಾಟ್ ಕೊಹ್ಲಿ

    ಪತ್ನಿ ಜೊತೆ ಫೋಟೋ ಹಾಕಿ ಟ್ರೋಲ್ ಆದ್ರು ವಿರಾಟ್ ಕೊಹ್ಲಿ

    ಸಿಡ್ನಿ: ಪತ್ನಿ ಅನುಷ್ಕಾ ಜೊತೆ ಇದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಕ್ಕೆ ಅಭಿಮಾನಿಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

    ಹೌದು, ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಇದ್ದ ಫೋಟೋವೊಂದನ್ನು ತಮ್ಮ ಟ್ವಿಟರ್ ಖಾತೆಯಿಂದ ಭಾನುವಾರ ಟ್ವೀಟ್ ಮಾಡಿದ್ದಾರೆ. ಆದ್ರೆ ಈ ಟ್ವೀಟ್‍ಗೆ ಸದ್ಯ ಅಭಿಮಾನಿಗಳೇ ರೀ-ಟ್ವೀಟ್ ಮಾಡಿ ಟೀಂ ಟ್ರೋಲ್ ಮಾಡಿದ್ದಾರೆ.

    ಪತ್ನಿಯ ಜೊತೆ ಸುತ್ತುವುದನ್ನು ಕಡಿಮೆ ಮಾಡಿ, ಆಟದ ಕಡೆ ಹೆಚ್ಚಿನ ಗಮನ ಕೊಡಿ ಎಂದು ಕೆಲವರು ಟ್ವೀಟ್ ಮಾಡಿದರೆ ಇನ್ನು ಕೆಲವರು ಬಾಯ್ ಇದೆಲ್ಲ ಬಿಟ್ಟು ಸಿರೀಸ್ ಗೆದ್ದು ಬನ್ನಿ ಅಂದಿದ್ದಾರೆ.

    ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ 34 ರನ್ ಗಳಿಂದ ಗೆದ್ದುಕೊಂಡಿದ್ದು, ಎರಡನೇ ಪಂದ್ಯ ಜನವರಿ ಮಂಗಳವಾರ ಅಡಿಲೇಡ್ ನಲ್ಲಿ ನಡೆಯಲಿದ್ದರೆ, ಕೊನೆಯ ಪಂದ್ಯ ಜನವರಿ 18 ರಂದು ಮೆಲ್ಬರ್ನ್‍ನಲ್ಲಿ ನಡೆಯಲಿದೆ.

    https://twitter.com/sendil_ajith/status/1084443972053786625?ref_src=twsrc%5Etfw%7Ctwcamp%5Etweetembed%7Ctwterm%5E1084443972053786625&ref_url=https%3A%2F%2Fsports.ndtv.com%2Faustralia-vs-india-2018-19%2Findia-vs-australia-virat-kohli-posts-picture-with-wife-anushka-sharma-after-defeat-in-sydney-odi-fan-1977071

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ ಜೊತೆ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ರು ವಿರಾಟ್!

    ಪತ್ನಿ ಜೊತೆ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ರು ವಿರಾಟ್!

    ಸಿಡ್ನಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ನಟಿ ಅನುಷ್ಕಾ ಶರ್ಮಾ ಅವರ ಜೊತೆಗೂಡಿ ಆಸೀಸ್ ವಿರುದ್ಧ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ದಾರೆ.

    ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಮುತ್ತಿಟ್ಟಿತ್ತು. 2-1ರ ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ 71 ವರ್ಷಗಳ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಗೆಲುವನ್ನು ಸಾಧಿಸಿದೆ. ಈ ಸರಣಿ ಗೆದ್ದಿರುವುದರಿಂದ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಫುಲ್ ಖುಷ್ ಆಗಿದ್ದಾರೆ.

    ಆಸ್ಟ್ರೇಲಿಯಾ ನೆಲದಲ್ಲೇ ಕಾಂಗರೂ ವಿರುದ್ಧ ಸರಣಿ ಗೆದ್ದ ಭಾರತದ ಕ್ರಿಕೆಟ್ ತಂಡದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಅಲ್ಲದೆ ಈ ಗೆಲುವನ್ನು ತನ್ನ ತಂಡದವರ ಜೊತೆ ಹಾಗೂ ಅಭಿಮಾನಿಗಳ ಜೊತೆ ಕುಣಿದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಜೊತೆ ಟೀಂ ಇಂಡಿಯಾ ಆಟಗಾರರಿಂದ ಭಾಂಗ್ರ ಡ್ಯಾನ್ಸ್..!

    ಈಗ ತಮ್ಮ ಪ್ರೀತಿಯ ಪತ್ನಿ ಜೊತೆ ತಮ್ಮ ಗೆಲುವನ್ನು ಸಂಭ್ರಮಿಸಿ ಖುಷಿಪಟ್ಟಿದ್ದಾರೆ. ವಿರಾಟ್ ಹಾಗೂ ಅನುಷ್ಕಾ ತಮ್ಮ ಸ್ನೇಹಿತರ ಜೊತೆಗೂಡಿ ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲೂ ಅನುಷ್ಕಾಗೆ ವಿರಾಟ್ ಕೇಕ್ ತಿನ್ನಿಸಿ ಗೆಲುವನ್ನು ಸಂಭ್ರಮಿಸಿದ್ದಾರೆ.

    ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟ್ ತಂಡ ಮಾಡಿರುವ ಸಾಧನೆಗೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಶುಭಾಶಯವನ್ನು ತಿಳಿಸಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ, ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದೆ. ತಂಡದ ಎಲ್ಲಾ ಆಟಗಾರರಿಗೆ, ಕೋಚ್ ಹಾಗೂ ಸಿಬ್ಬಂದಿಗೆ ಶುಭಾಶಯಗಳು. ಯಾವುದು ಮುಖ್ಯವೋ ಅದನ್ನು ಪರಿಗಣಿಸಿ ಬೇಡವಾದ ವಿಚಾರವನ್ನು ಬಿಟ್ಟುಬಿಡಿ. ಈ ಗೆಲುವಿನಿಂದ ನಾನು ತುಂಬಾ ಸಂತೋಷವಾಗಿದ್ದೇವೆ. ನನ್ನ `ಲವ್’ ಬಗ್ಗೆ ನನಗೆ ಹೆಮ್ಮೆಯಾಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/BsUnLapnceH/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ಟ್ರೇಲಿಯಾದಲ್ಲಿ ವಿರುಷ್ಕಾ ದಂಪತಿಯಿಂದ ಹೊಸ ವರ್ಷಾಚರಣೆ

    ಆಸ್ಟ್ರೇಲಿಯಾದಲ್ಲಿ ವಿರುಷ್ಕಾ ದಂಪತಿಯಿಂದ ಹೊಸ ವರ್ಷಾಚರಣೆ

    ಮೆಲ್ಬರ್ನ್: ಟೀಂ ಇಂಡಿಯಾ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಜೊತೆಗಿರುವ ಫೋಟೋಗಳನ್ನು ಹಾಕಿ, ಎಲ್ಲರಿಗೂ ಹೊಸವರ್ಷದ ಶುಭಾಶಯ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

    ಆಸ್ಟೇಲಿಯಾ, ಅಮೆರಿಕ, ನ್ಯೂಜಿಲೆಂಡ್ ಸೇರಿದಂತೆ ಅನೇಕ ದೇಶದ ಜನತೆ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿ ಸಂಭ್ರಮಿಸಿದ್ದಾರೆ. ನ್ಯೂಯಾರ್ಕ್ ನಲ್ಲಿ ಹರಿದು ಹೋಗುವ ಹಡ್ಸನ್ ನದಿ ಸೇತುವೆಯ ಮೇಲೆ ಬಣ್ಣ, ಬಣ್ಣ ಪಟಾಕಿ ಸಿಡಿಸಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲಾಯಿತು. ನಗರ ಹಾಗೂ ಸೇತುವೆ ಲಕರ್ ಫುಲ್ ದೀಪಗಳಿಂದ ಕಂಗೊಳಿಸುತ್ತಿದೆ. ನ್ಯೂಜಿಲೆಂಡ್‍ನ ಆಕ್ಲೆಂಡ್ ಮಹಾನಗರದಲ್ಲಿ ಸಾವಿರಾರು ಜನರು ಸೇರಿ ಪಟಾಕಿಯ ಮೂಲಕ ನಗರವನ್ನು ಜಗಮಗಿಸುವಂತೆ ಮಾಡಿದ್ದಾರೆ.

    ಹೊಸ ವರ್ಷಾಚರಣೆಯಲ್ಲಿ ತೊಡಗಿರುವ ಜನತೆ ತಮ್ಮ ಆಪ್ತರು, ಸಂಬಂಧಿಕರು, ಸಹೋದ್ಯೋಗಿಗಳ ಜೊತೆಗೆ ಸೇರಿ ಮಧ್ಯರಾತ್ರಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ. ನಗರದ ಬೀದಿಗಳು ದೀಪಾಲಂಕಾರದಿಂದ ಜಗಮಗಿಸುತ್ತಿವೆ. ಸೇತುವೆ, ಬಹುಮಹಡಿಯ ಕಟ್ಟಡ, ಟವರ್ ಕಂಬಗಳ ಮೇಲೆ ಪಟಾಕಿಗಳನ್ನು ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಮೋಶನಲ್ ವಿಡಿಯೋ ಹಾಕಿ ಸ್ವರ್ಗ ಎಂದು ಅನುಷ್ಕಾ ಪೋಸ್ಟ್!

    ಎಮೋಶನಲ್ ವಿಡಿಯೋ ಹಾಕಿ ಸ್ವರ್ಗ ಎಂದು ಅನುಷ್ಕಾ ಪೋಸ್ಟ್!

    ಮೆಲ್ಬರ್ನ್: ಮೊದಲ ಮದುವೆಯ ವಾರ್ಷಿಕೋತ್ಸವದಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಪೋಸ್ಟ್ ಮಾಡಿದ್ದಾರೆ. ವಿರಾಟ್ ಮದುವೆಯ ಅಪರೂಪದ ಫೋಟೋ ಪೋಸ್ಟ್ ಮಾಡಿದರೆ, ಅನುಷ್ಕಾ ಎಮೋಶನಲ್ ವಿಡಿಯೋ ಹಾಕಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆಯ ಅಪರೂಪದ ಫೋಟೋಗಳನ್ನು ಹಂಚಿಕೊಂಡು ಅದಕ್ಕೆ, “ಮದುವೆಯಾಗಿ ಒಂದು ವರ್ಷ ಕಳೆದಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇದೆಲ್ಲಾ ನಿನ್ನೆ ಆಗಿರುವ ಹಾಗೇ ಅನಿಸುತ್ತಿದೆ. ಎಷ್ಟು ಬೇಗ ಸಮಯ ಕಳೆದಿದೆ. ನನ್ನ ಆತ್ಮಿಯ ಗೆಳತಿ ಹಾಗೂ ನನ್ನ ಸೋಲ್ ಮೇಟ್‍ಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನೀನು ಯಾವಾಗಲೂ ನನ್ನವಳು” ಎಂದು ವಿರಾಟ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅನುಷ್ಕಾ ಬಂದ ಮೇಲೆ ನಾನು ಹೇಗೆ ಬದಲಾದೆ – ಪತ್ನಿಯನ್ನು ಹೊಗಳಿದ ಕೊಹ್ಲಿ

    ಅನುಷ್ಕಾ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಮೋಶನಲ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಹಾಗೂ ಅನುಷ್ಕಾ ಮದುವೆಯ ಹಾರ ಬದಲಾಯಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ವಿರಾಟ್, ಅನುಷ್ಕಾಳ ಹಣೆಗೆ ಸಿಂಧೂರ ಹಚ್ಚಿ ಹೆಮ್ಮೆಯಿಂದ ನನ್ನ ಪತ್ನಿ ಎಂದು ಕರೆದಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿ ಅನುಷ್ಕಾ “ಸಮಯ ಕಳೆದಿರುವುದು ನೀವು ಗಮನಿಸಿಲ್ಲ ಎಂದರೆ ಇದು ಸ್ವರ್ಗ. ನೀವು ಇಂತಹ ಅದ್ಭುತ ವ್ಯಕ್ತಿಯನ್ನು ಮದುವೆಯಾದರೆ ಇದು ಸ್ವರ್ಗ” ಎಂದು ಪೋಸ್ಟ್ ಮಾಡಿದ್ದಾರೆ.

    ಕಳೆದ ವರ್ಷದ ಡಿಸೆಂಬರ್ 11ರಂದು ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಅನುಷ್ಕಾ ಹಾಗೂ ವಿರಾಟ್ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಸ್ಟ್ರೇಲಿಯಾದಲ್ಲಿ ಆಚರಿಸುತ್ತಿದ್ದಾರೆ.

    https://twitter.com/AnushkaSharma/status/1072359108274081797

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುಷ್ಕಾ ಬಂದ ಮೇಲೆ ನಾನು ಹೇಗೆ ಬದಲಾದೆ – ಪತ್ನಿಯನ್ನು ಹೊಗಳಿದ ಕೊಹ್ಲಿ

    ಅನುಷ್ಕಾ ಬಂದ ಮೇಲೆ ನಾನು ಹೇಗೆ ಬದಲಾದೆ – ಪತ್ನಿಯನ್ನು ಹೊಗಳಿದ ಕೊಹ್ಲಿ

    ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಂದು ತಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವಿರಾಟ್ ತಮ್ಮ ಪತ್ನಿಯ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ.

    ವಿರಾಟ್ ಹಾಗೂ ಅನುಷ್ಕಾ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಸ್ಟ್ರೇಲಿಯಾದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಆಡಮ್ ಗಿಲ್‍ಕ್ರಿಸ್ಟ್ ಅವರು ವಿರಾಟ್ ಕೊಹ್ಲಿಯನ್ನು ಸಂದರ್ಶನ ಮಾಡಿದರು. ಈ ಸಂದರ್ಶನದಲ್ಲಿ ವಿರಾಟ್ ತಮ್ಮ ಪತ್ನಿ ಅನುಷ್ಕಾ ಬಗ್ಗೆ ಮಾತನಾಡಿದ್ದಾರೆ.

    ನಾನು ನನ್ನ ಪತ್ನಿಯನ್ನು ಭೇಟಿ ಮಾಡಿದ್ದಾಗ ನಾನು ಬದಲಾಗಲು ಶುರು ಮಾಡಿದೆ. ನಾನು ಉತ್ತರ ಭಾರತದ ವಿಭಿನ್ನ ಹಿನ್ನೆಲೆಯಿಂದ ಬಂದಿದ್ದೇನೆ. ಸಮಾಜದ ಇತರೆ ಕ್ಷೇತ್ರಗಳಲ್ಲಿ ಅಥವಾ ಇನ್ನೊಬ್ಬರ ಜೀವನದಲ್ಲಿ ಏನಾಗುತ್ತಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಆಕೆಯ ಜೀವನವು ಕೂಡ ತುಂಬ ವಿಭಿನ್ನವಾಗಿತ್ತು. ತನ್ನ ಸ್ವಂತ ಸವಾಲುಗಳಿಂದ ಆಕೆ ಬಂದಿದ್ದಳು ಎಂದು ವಿರಾಟ್ ಹೇಳಿದರು.

    ನನ್ನನ್ನು ನಾನು ನೋಡಿಕೊಳ್ಳಲು ಅದ್ಭುತವೆನ್ನಿಸುತ್ತಿದೆ. ನಾನು ಯೋಚಿಸುವ ರೀತಿಯಲ್ಲಿ ಎಷ್ಟು ವಿಭಿನ್ನವಾದ ವಿಷಯಗಳಿದ್ದವು. ಅನುಷ್ಕಾಳನ್ನು ಭೇಟಿಯಾಗುವ ಮೊದಲು ನಾನು ಪ್ರಾಕ್ಟಿಕಲ್ ಆಗಿ ಇರಲಿಲ್ಲ. ನಂತರ ಆಕೆ ನನ್ನನ್ನು ಬದಲಾಯಿಸಿದ್ದಳು. ನಾನು ಅನುಷ್ಕಾಳಿಂದ ಬಹಳ ವಿಷಯ ಕಲಿತ್ತಿದ್ದೇನೆ. ನೀವು ಪರಸ್ಪರ ಬೆಳೆಯಲು ಸಹಾಯ ಮಾಡಬೇಕು. ಹಾಗೆಯೇ ಅನುಷ್ಕಾ ನನ್ನನ್ನು ಬೆಳೆಸಲು ಸಾಕಷ್ಟು ಸಹಾಯ ಮಾಡಿದ್ದಾಳೆ ಎಂದು ವಿರಾಟ್ ಸಂದರ್ಶನದಲ್ಲಿ ಹೇಳಿದರು.

    ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದೆ. ಇತ್ತ ಅನುಷ್ಕಾ ತನ್ನ ಮುಂಬರುವ ಆನಂದ್ ಎಲ್ ರೈ ನಿರ್ದೇಶನದ ‘ಝೀರೋ’ ಚಿತ್ರವನ್ನು ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದು, ಇದರ ನಡುವೆಯೇ ಅನುಷ್ಕಾ ತಮ್ಮ ಪತಿ ಜೊತೆ ಮೊದಲ ವಿವಾಹ ವಾಷಿಕೋತ್ಸವ ಆಚರಿಸಲು ಆಸ್ಟ್ರೇಲಿಯಾಗೆ ತೆರಳಿದ್ದಾರೆ. ವಿರಾಟ್ ಪಂದ್ಯ ಮುಗಿದ ಬಳಿಕ ತನ್ನ ಪತ್ನಿ ಅನುಷ್ಕಾ ಜೊತೆ ಒಟ್ಟಿಗೆ ಊಟ ಮಾಡಿದ್ದಾರೆ.

    ಅನುಷ್ಕಾ ಹಾಗೂ ನಾನು ಮುಂಬೈನಲ್ಲಿ ವಾಸಿಸುತ್ತಿದ್ದೇವೆ. ಆದರೆ ಇದು ಸ್ವಲ್ಪ ಕಷ್ಟವಾಗಿದೆ. ಏಕೆಂದರೆ ನಾವಿಬ್ಬರು ಹೆಚ್ಚು ಕಾಲ ಕಳೆಯಲು ಸಮಯ ಸಿಗುವುದಿಲ್ಲ. ನಮ್ಮಿಬ್ಬರಿಗೂ ಒಟ್ಟಿಗೆ ಕಾಲ ಕಳೆಯಲು ಸಮಯ ಸಿಕ್ಕರೆ ನಾವು ಮನೆಯಲ್ಲೇ ಕಾಲ ಕಳೆಯುತ್ತೇವೆ ಎಂದು ಗಿಲ್‍ಕ್ರಿಸ್ಟ್ ನಡೆಸಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ತಮ್ಮ ಪತ್ನಿ ಹಾಗೂ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ.

    https://twitter.com/AnushkaSFanCIub/status/1072085087259451393

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv