Tag: anushka sharma

  • ಎಲ್ಲರ ಮುಂದೆ ರಣ್‌ವೀರ್‌ಗೆ ಬೈದ ಅನುಷ್ಕಾ- ಕ್ಷಮೆ ಕೇಳಿದ ನಟ: ವಿಡಿಯೋ

    ಎಲ್ಲರ ಮುಂದೆ ರಣ್‌ವೀರ್‌ಗೆ ಬೈದ ಅನುಷ್ಕಾ- ಕ್ಷಮೆ ಕೇಳಿದ ನಟ: ವಿಡಿಯೋ

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಾರ್ಯಕ್ರಮವೊಂದರಲ್ಲಿ ನಟ ರಣ್‌ವೀರ್‌ಗೆ ಎಲ್ಲರ ಮುಂದೆ ಬೈದಿದ್ದಾರೆ. ಬಳಿಕ ರಣ್‍ವೀರ್, ಅನುಷ್ಕಾ ಬಳಿ ಕ್ಷಮೆ ಕೇಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಇತ್ತೀಚೆಗೆ ಅನುಷ್ಕಾ ಶರ್ಮಾ ಹಾಗೂ ರಣ್‍ವೀರ್ ಸಿಂಗ್ ‘ಎಲ್ ಬ್ಯೂಟಿ ಅವಾರ್ಡ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಣ್‍ವೀರ್ ಅವರು ವೇದಿಕೆ ಮೇಲೆ ನಿಂತು ಯಶಸ್ಸಿನ ಅರ್ಥ ಮತ್ತು ಬೇರೆ ಬೇರೆ ಜನರಿಗೆ ಅದು ಹೇಗೆ ಮಹತ್ವ ಆಗುತ್ತದೆ ಎಂದು ಮಾತನಾಡುತ್ತಾರೆ. ಬಳಿಕ ಕೈಯಲ್ಲಿ ಮೈಕ್ ಹಿಡಿದುಕೊಂಡು ವೇದಿಕೆಯಿಂದ ಇಳಿದು ಅನುಷ್ಕಾ ಅವರ ಬಳಿ ಹೋಗುತ್ತಾರೆ. ಈ ಬಗ್ಗೆ ಬ್ಯೂಟಿಫುಲ್ ಹಾಗೂ ಟ್ಯಾಲೆಂಟೆಡ್ ಅನುಷ್ಕಾ ಶರ್ಮಾ ಅವರ ಬಳಿ ಕೇಳೋಣ ಎಂದು ಹೇಳುತ್ತಾರೆ.

    ರಣ್‍ವೀರ್ ಮೈಕ್ ತೆಗೆದುಕೊಂಡು ಹೋಗುತ್ತಿದ್ದಂತೆ ಅನುಷ್ಕಾ, “ರಣ್‍ವೀರ್, ನೀನು ಈ ಕಾರ್ಯಕ್ರಮದ ನಿರೂಪಕ ಅಲ್ಲ” ಎಂದು ಹೇಳುತ್ತಾರೆ. ಇದನ್ನು ಕೇಳಿದ ತಕ್ಷಣ ರಣ್‍ವೀರ್ ‘ಸಾರಿ’ ಎಂದು ಹೇಳಿ ವೇದಿಕೆಗೆ ಹಿಂತಿರುಗುತ್ತಾರೆ. ಈ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಅಲ್ಲದೆ ರಣ್‍ವೀರ್ ಅವರನ್ನು ಬೈದು ಅನುಷ್ಕಾ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ವಿಡಿಯೋಗೆ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ‘ಬ್ಯಾಂಡ್ ಭಾಜಾ ಭಾರತ್’ ಚಿತ್ರದ ಮೂಲಕ ರಣ್‍ವೀರ್ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದಲ್ಲಿ ರಣ್‍ವೀರ್‍ಗೆ ಅನುಷ್ಕಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಮೂಲಕ ಇಬ್ಬರು ರಿಲೇಷನ್‍ಶಿಪ್‍ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದಾದ ಬಳಿಕ ಅನುಷ್ಕಾ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಮದುವೆಯಾದರೆ, ರಣ್‍ವೀರ್ ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಅನುಷ್ಕಾ ನಮ್ಮ ಕೆಲಸ ಕಸಿದುಕೊಂಡಿದ್ದಾರೆ- ನಟಿ ವಿರುದ್ಧ ದೂರು

    ಅನುಷ್ಕಾ ನಮ್ಮ ಕೆಲಸ ಕಸಿದುಕೊಂಡಿದ್ದಾರೆ- ನಟಿ ವಿರುದ್ಧ ದೂರು

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಮ್ಮ ಕೆಲಸ ಕಸಿದುಕೊಳ್ಳುತ್ತಿದ್ದಾರೆ ಎಂದು ಸೆಲೆಬ್ರಿಟಿ ಫೋಟೋಗ್ರಾಫರ್ ಕಮೆಂಟ್ ಮಾಡುವ ಮೂಲಕ ದೂರು ನೀಡಿದ್ದಾರೆ.

    ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ವಿರಾಟ್ ಫೋಟೋ ಪೋಸ್ಟ್ ಮಾಡಿ ಅನುಷ್ಕಾ ಶರ್ಮಾ ಅವರಿಗೆ ಪಿಕ್ ಕ್ರೆಡಿಟ್ ಕೊಡುತ್ತಿದ್ದರು. ಇದನ್ನು ನೋಡಿ ಸೆಲೆಬ್ರಿಟಿ ಫೋಟೋಗ್ರಾಫರ್ ವಿರಾಟ್ ಪೋಸ್ಟ್ ನಲ್ಲಿ ಅನುಷ್ಕಾ ವಿರುದ್ಧ ದೂರು ನೀಡಿದ್ದಾರೆ.

    ಸೆಲೆಬ್ರಿಟಿ ಫೋಟೋಗ್ರಾಫರ್ ಅತುಲ್ ಕೆಸ್ಬಕರ್ ವಿರಾಟ್ ಅವರ ಪೋಸ್ಟ್ ನಲ್ಲಿ ‘ಅನುಷ್ಕಾ ತಮ್ಮ ಕೆಲಸವನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ಕಮೆಂಟ್ ಮಾಡುವ ಮೂಲಕ ಅನುಷ್ಕಾ ಅವರನ್ನು ದೂರಿದ್ದಾರೆ. ಅತುಲ್ ಕಮೆಂಟ್ ನೋಡಿದ ಜನರು, ‘ಹೌದು, ನಿಜ’ ಎಂದು ರಿಪ್ಲೈ ಮಾಡುತ್ತಿದ್ದಾರೆ.

     

    View this post on Instagram

     

    ????❄️. Pic credit once again @anushkasharma ????❤️

    A post shared by Virat Kohli (@virat.kohli) on

    ಇತ್ತೀಚೆಗೆ ವಿರಾಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅನುಷ್ಕಾ ಕಪ್ಪು ಬಣ್ಣದ ಸನ್ ಗ್ಲಾಸ್ ಮತ್ತು ಬಿಕಿನಿ ಧರಿಸಿದ್ದರೆ, ವಿರಾಟ್ ಶರ್ಟ್ ಲೆಸ್ ಆಗಿ ಪತ್ನಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ವಿರಾಟ್ ಈ ಫೋಟೋವನ್ನು ಟ್ವೀಟ್ ಮಾಡಿ ಹಾರ್ಟ್ ಎಮೋಜಿ ಹಾಕಿದ್ದರು.

     

    View this post on Instagram

     

    Caught in the moment. Pic credit @anushkasharma ❤️

    A post shared by Virat Kohli (@virat.kohli) on

    ಇತ್ತ ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದರು. ವಿರಾಟ್ ಅವರು ಅನುಷ್ಕಾ ಅವರ ಫೋಟೋಗೆ ಹಾರ್ಟ್ ಎಮೋಜಿ ನೀಡುವ ಮೂಲಕ ಕಮೆಂಟ್ ಮಾಡಿದ್ದರು.

  • ಮತ್ತೆ ಪ್ರೀತಿಯಲ್ಲಿ ಬಿದ್ದ ವಿರಾಟ್

    ಮತ್ತೆ ಪ್ರೀತಿಯಲ್ಲಿ ಬಿದ್ದ ವಿರಾಟ್

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಭಾರತೀಯ ಕ್ರಿಕೆಟ್ ತಂಡದ ನಾಯಕ, ಅನುಷ್ಕಾ ಅವರ ಪತಿ ವಿರಾಟ್ ಕೊಹ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

    ಅನುಷ್ಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬ್ಯಾಕ್ ಟು ಬ್ಯಾಕ್ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅವರು ಮಂಚದ ಮೇಲೆ ಕುಳಿತು ಏನೋ ತಿನ್ನುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಅನುಷ್ಕಾ ನಗುತ್ತಿರುವುದು ಕಂಡು ಬಂದಿದೆ. ಮೂರನೇ ಫೋಟೋದಲ್ಲಿ ಅನುಷ್ಕಾ ಸುಮ್ಮನೆ ಕುಳಿತು ಯಾವುದೋ ವಸ್ತುವನ್ನು ನೋಡುತ್ತಿದ್ದಾರೆ. ಈ ಮೂರು ಫೋಟೋಗಳಲ್ಲಿ ಅನುಷ್ಕಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    लिटिल मी

    A post shared by AnushkaSharma1588 (@anushkasharma) on

    ಇನ್‍ಸ್ಟಾಗ್ರಾಂನಲ್ಲಿ ಅನುಷ್ಕಾ ಪೋಸ್ಟ್ ಮಾಡಿದ ಬಾಲ್ಯದ ಫೋಟೋಗೆ ಹೃದಯದ ಎಮೋಜಿ ನೀಡುವ ಮೂಲಕ ಕಮೆಂಟ್ ಮಾಡಿದ್ದಾರೆ. ವಿರಾಟ್ ಅಲ್ಲದೆ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಕೂಡ ಅನುಷ್ಕಾ ಅವರ ಪೋಸ್ಟ್‍ಗೆ “ಸೋ ಸ್ವೀಟ್” ಎಂದು ಕಮೆಂಟ್ ಮಾಡುವ ಮೂಲಕ ಹೃದಯ ಎಮೋಜಿ ಹಾಕಿದ್ದಾರೆ. ಸದ್ಯ ಅನುಷ್ಕಾ ಅವರ ಬಾಲ್ಯದ ಫೋಟೋ ನೋಡಿ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

     

    View this post on Instagram

     

    लिटिल मी

    A post shared by AnushkaSharma1588 (@anushkasharma) on

    ಇತ್ತೀಚೆಗೆ ವಿರಾಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅನುಷ್ಕಾ ಕಪ್ಪು ಬಣ್ಣದ ಸನ್ ಗ್ಲಾಸ್ ಮತ್ತು ಬಿಕಿನಿ ಧರಿಸಿದ್ದರೆ, ವಿರಾಟ್ ಶರ್ಟ್ ಲೆಸ್ ಆಗಿ ಪತ್ನಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ವಿರಾಟ್ ಈ ಫೋಟೋವನ್ನು ಟ್ವೀಟ್ ಮಾಡಿ ಹಾರ್ಟ್ ಎಮೋಜಿ ಹಾಕಿದ್ದಾರೆ. ಇದುವರೆಗೂ ಫೋಟೋಗೆ 44 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

  • ಕಿಸ್ ಕೊಟ್ಟು ನಕ್ಕ ಅನುಷ್ಕಾ-ಎಲ್ಲರೆದರು ಮುಜುಗರಕ್ಕೊಳಗಾದ ಕೊಹ್ಲಿ

    ಕಿಸ್ ಕೊಟ್ಟು ನಕ್ಕ ಅನುಷ್ಕಾ-ಎಲ್ಲರೆದರು ಮುಜುಗರಕ್ಕೊಳಗಾದ ಕೊಹ್ಲಿ

    ನವದೆಹಲಿ: ಕಾರ್ಯಕ್ರಮವೊಂದರಲ್ಲಿ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಗೆ ಕಿಸ್ ನೀಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಕೊಹ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

    ಹಲವು ಗಣ್ಯರ ಮಧ್ಯೆ ಕುಳಿತಿದ್ದ ವಿರುಷ್ಕಾ ಜೋಡಿ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ಕೈಗೆ ಮುತ್ತು ನೀಡಿದ ಅನುಷ್ಕಾ ಸಮಾಧಾನ ಮಾಡುವಂತೆ ಕಾಣುವಂತಿತ್ತು. ಎಲ್ಲರ ಮಧ್ಯೆ ಕಿಸ್ ನೀಡಿದ್ದರಿಂದ ಒಂದು ಕ್ಷಣ ವಿರಾಟ್ ಕೊಹ್ಲಿ ಮುಜುಗರಕ್ಕೊಳಗಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಗುರುವಾರ ವಿರುಷ್ಕಾ ದಂಪತಿ ದೆಹಲಿಯಲ್ಲಿ ನಡೆದ ಸ್ಟಾರ್ ಜೋಡಿ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಭಾಗಿಯಾಗಿ ನಮನ ಸಲ್ಲಿಸಿದ್ದರು. ನೀಲಿ ಬಣ್ಣದ ಉಡುಪಿನಲ್ಲಿ ಅನುಷ್ಕಾ ಮಿಂಚುತ್ತಿದ್ದರು. ಇತ್ತ ವಿರಾಟ್ ಕೊಹ್ಲಿ ಕಂದು ಮತ್ತು ಬಿಳಿ ಬಣ್ಣದ ಕುರ್ತಾದ ಟ್ರೆಡಿಷನಲ್ ಲುಕ್ ನೋಡುಗರನ್ನು ಅಟ್ರ್ಯಾಕ್ಟ್ ಮಾಡಿತ್ತು.

    https://www.instagram.com/p/B2Voj07l0tn/

    ದೆಹಲಿಯ ಫಿರೋಜ್ ಶಾ ಕೊಟ್ಲಾ ಸ್ಟೇಡಿಯಂ ಮೈದಾನಕ್ಕೆ ಅರುಣ್ ಜೇಟ್ಲಿ ಹೆಸರನ್ನು ನಾಮಕರಣ ಮಾಡುವ ಮೂಲಕ ಗೌರವ ಸೂಚಿಸಲಾಗಿದೆ. ಇದೇ ಸ್ಟೇಡಿಯಂ ವಿಶೇಷ ಸ್ಟ್ಯಾಂಡ್ ಗೆ ವಿರಾಟ್ ಕೊಹ್ಲಿ ಅವರ ಹೆಸರನ್ನು ಇರಿಸಲಾಗಿದೆ. ಎರಡು ದಿನಗಳ ಹಿಂದೆ ವಿರಾಟ್ ಕೊಹ್ಲಿ ಪತ್ನಿಯೊಂದಿಗೆ ಕಳೆದ ರೊಮ್ಯಾಂಟಿಕ್ ಕ್ಷಣಗಳ ಫೋಟೋಗಳನ್ನು ಸೋಶಿಯಲ್ಲಿ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    https://www.instagram.com/p/B2V1f2uFbAb/

  • ಬೀಚ್‍ನಲ್ಲಿ ವಿರುಷ್ಕಾ ಜೋಡಿಯ ಹಾಟ್ ಫೋಟೋ

    ಬೀಚ್‍ನಲ್ಲಿ ವಿರುಷ್ಕಾ ಜೋಡಿಯ ಹಾಟ್ ಫೋಟೋ

    ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬಿಡುವಿನ ವೇಳೆ ತಮ್ಮ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಾರೆ. ಪತ್ನಿ ಅನುಷ್ಕಾ ಜೊತೆ ಸಮಯ ಕಳೆದಿರುವ ಫೋಟೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ.

    ಅನುಷ್ಕಾ ಕಪ್ಪು ಬಣ್ಣದ ಸನ್ ಗ್ಲಾಸ್ ಮತ್ತು ಬಿಕಿನಿ ಧರಿಸಿದ್ದರೆ, ವಿರಾಟ್ ಶರ್ಟ್ ಲೆಸ್ ಆಗಿ ಪತ್ನಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಟ್ವೀಟ್ ಮಾಡಿ ಹಾರ್ಟ್ ಎಮೋಜಿ ಹಾಕಿದ್ದಾರೆ. ಇದುವರೆಗೂ ಫೋಟೋಗೆ 44 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

    ಅಭಿಮಾನಿಗಳು ನಿಜವಾದ ಪ್ರೀತಿಗೆ ಮತ್ತೊಂದು ವಿರುಷ್ಕಾ, ರಾಜ ಮತ್ತು ರಾಣಿ, ಅನುಷ್ಕಾ ಸಿನಿಮಾಗಳಲ್ಲಿ ನಟಿಸಬೇಕು. ಅನುಷ್ಕಾವರ ಸಿನಿಮಾಗಳಿಗೆ ಕಾಯುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ಪತ್ನಿ ಅನುಷ್ಕಾರ ಬಿಕಿನಿ ಫೋಟೋಗೆ ಹಾರ್ಟ್ ಎಮೋಜಿ ಹಾಕುವ ಮೂಲಕ ಕಮೆಂಟ್ ನೀಡಿದ್ದರು. ಈಜುಕೊಳದ ಬಳಿ ಶರ್ಟ್ ಲೆಸ್ ಆಗಿ ಕುಳಿತ ವಿರಾಟ್ ಕೊಹ್ಲಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗಿತ್ತು.

    https://twitter.com/imVkohli/status/1169540309648166913

  • ಮೊದಲ ಭೇಟಿಯಲ್ಲಿ ಅನುಷ್ಕಾಗೆ ಹೇಳಿದ್ದನ್ನು ಬಹಿರಂಗಪಡಿಸಿದ ಕೊಹ್ಲಿ

    ಮೊದಲ ಭೇಟಿಯಲ್ಲಿ ಅನುಷ್ಕಾಗೆ ಹೇಳಿದ್ದನ್ನು ಬಹಿರಂಗಪಡಿಸಿದ ಕೊಹ್ಲಿ

    ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾರನ್ನು ಮೊದಲ ಬಾರಿಗೆ ಭೇಟಿಯಾದಾಗ ಹೇಳಿದ ಮಾತುಗಳನ್ನು ಬಹಿರಂಗಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಡಿಸೆಂಬರ್ 2017 ರಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅವರು 2013ರಲ್ಲಿ ಮೊದಲ ಬಾರಿಗೆ ಜಾಹೀರಾತಿನಲ್ಲಿ ನಟಿಸುವ ಮೂಲಕ ಪರಸ್ಪರ ಭೇಟಿಯಾದಾಗ ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಯಿತು.

    ಈಗ ತಮ್ಮ ಮೊದಲ ಭೇಟಿಯ ಬಗ್ಗೆ ಅಮೆರಿಕದ ಟೆಲಿವಿಷನ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿರುವ ಕೊಹ್ಲಿ, ನಾನು ಮೊದಲು ಅನುಷ್ಕಾಳನ್ನು ಭೇಟಿಯಾದಾಗ ಜೋಕ್ ಮಾಡಲು ಹೋಗಿ ನಗೆಪಾಟಲಿಗೆ ಒಳಗಾಗಿದ್ದೆ ಎಂದು ಹೇಳಿದ್ದಾರೆ. ನಾನು ಶಾಂಪೂ ಒಂದರ ಜಾಹೀರಾತು ಶೂಟಿಂಗ್‍ನಲ್ಲಿ ಮೊದಲು ಅನುಷ್ಕಾಳನ್ನು ಭೇಟಿಯಾಗಿದ್ದು, ನನ್ನ ಮ್ಯಾನೇಜರ್ ಬಂದು ನೀವು ಅನುಷ್ಕಾ ಅವರ ಜೊತೆ ನಟನೆ ಮಾಡಬೇಕು ಎಂದು ಹೇಳಿದಾಗ ನಾನು ನರ್ವಸ್ ಆಗಿದ್ದೆ ಎಂದು ಹೇಳಿದ್ದಾರೆ.

    ಮೊದಲು ಸೆಟ್‍ಗೆ ಹೋದಾಗ ಅನುಷ್ಕಾ ಇನ್ನೂ ಬಂದಿರಲಿಲ್ಲ. ಆಕೆ ವೃತ್ತಿಪರ ನಟಿ ನನಗೆ ನಟನೆ ಬರುವುದಿಲ್ಲ. ನಾನು ಹೇಗೆ ಅವರ ಜೊತೆ ನಟಿಸುವುದು ಎಂದು ಭಯಪಟ್ಟಿದೆ. ನಂತರ ಅನುಷ್ಕಾ ಬಂದಾಗ ನಾನು ನನ್ನ ಭಯವನ್ನು ಹೋಗಿಸಲು ಜೋಕ್ ಮಾಡಬೇಕು ಎಂದುಕೊಂಡೆ. ಆ ದಿನ ಅನುಷ್ಕಾ ಹೀಲ್ಸ್ ಹಾಕಿಕೊಂಡು ಬಂದಿದ್ದರು. ಆ ಹೀಲ್ಸ್ ಧರಿಸಿದ್ದರಿಂದ ಆಕೆ ನನಗಿಂತ ಎತ್ತರವಾಗಿ ಕಾಣುತ್ತಿದ್ದರು. ಅದನ್ನು ಕಂಡ ನಾನು ತಮಾಷೆ ಮಾಡಿದೆ ಎಂದು ಹೇಳಿದ್ದಾರೆ.

    ತನ್ನ ಹೀಲ್ಸ್ ಬಗ್ಗೆ ಕಮೆಂಟ್ ಮಾಡಿದ ತಕ್ಷಣ ಅನುಷ್ಕಾ ನನ್ನ ಮೇಲೆ ಗರಂ ಆಗಿದ್ದರು. ನಂತರ ನಾನು ಆ ರೀತಿ ಹೇಳಿದ್ದು, ತಮಾಷೆಗಾಗಿ ಎಂದು ಹೇಳಿದೆ. ಈ ಜೋಕ್ ನನಗೆ ನನ್ನ ಜೀವನದಲ್ಲಿ ವಿಲಕ್ಷಣ ಕ್ಷಣವಾಗಿತ್ತು. ನಾನು ನಿಜವಾಗಿಯೂ ಮೂರ್ಖನಾಗಿದ್ದೆ. ಆಕೆಗೆ ನಟನೆ ಮಾಡುವ ಸಮಯದಲ್ಲಿ ತುಂಬಾ ಆತ್ಮ ವಿಶ್ವಾಸದಲ್ಲಿ ಇರುತ್ತಾಳೆ ಎಂದು ಕೊಹ್ಲಿ ಹೇಳಿದ್ದಾರೆ.

    ಅನುಷ್ಕಾ ತಮ್ಮ ಮದುವೆಯನ್ನು ಇಟಲಿಯಲ್ಲಿ ಯಾವ ರೀತಿ ಆಯೋಜನೆ ಮಾಡಿದ್ದರು ಎಂದು ಹೇಳಿರುವ ಕೊಹ್ಲಿ, ನಾವು ಮದುವೆಯಾಗುವ ಜಾಗದ ಬಗ್ಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಅನುಷ್ಕಾ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರು. ಅವರು ಯಾವ ಮಟ್ಟಕ್ಕೆ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರು ಎಂದರೆ ನಾವು ಮದುವೆಯಾಗುವ ಜಾಗ ಮದುವೆಗೆ ಬರುವ ವಿಐಪಿಗಳಿಗೂ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಈಗ ಯಾವುದೇ ಚಿತ್ರದಲ್ಲಿ ನಟನೆ ಮಾಡದೇ ಇರುವ ಅನುಷ್ಕಾ ಕೊನೆಯ ಬಾರಿಗೆ ನಟನೆ ಮಾಡಿದ್ದು, ಅನಂದ್ ಎಲ್ ರಾಯ್ ನಿರ್ದೇಶನ ಝಿರೋ ಚಿತ್ರದಲ್ಲಿ. ಈ ಚಿತ್ರದಲ್ಲಿ ಅನುಷ್ಕಾ ಜೊತೆ ಕತ್ರಿನಾ ಕೈಫ್ ಮತ್ತು ಶಾರೂಖ್ ಖಾನ್ ಅಭಿನಯ ಮಾಡಿದ್ದರು. ಈ ಚಿತ್ರದ ನಂತರ ಅನುಷ್ಕಾ ಮುಂದಿನ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ.

    ಈಗ ಪ್ರಸ್ತುತ ವಿಂಡೀಸ್ ಪ್ರವಾಸದಲ್ಲಿರುವ ಕೊಹ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದರ ಜತೆಗೆ ಭಾರತ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.  ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಮೊದಲ ಸ್ಥಾನಕ್ಕೇರಿದ್ದಾರೆ.

  • ಕೊಹ್ಲಿಗೆ ಆಟೋಗ್ರಾಫ್ ನೀಡಿದ ಪೋರ: ವಿಡಿಯೋ

    ಕೊಹ್ಲಿಗೆ ಆಟೋಗ್ರಾಫ್ ನೀಡಿದ ಪೋರ: ವಿಡಿಯೋ

    ಜಮೈಕಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟೋಗ್ರಾಫ್ ಪಡೆದುಕೊಳ್ಳಲು ಅನೇಕ ಅಭಿಮಾನಿಗಳು ಮುಗಿಬೀಳುತ್ತಾರೆ. ಆದರೆ ಪುಟ್ಟ ಪೋರನೊಬ್ಬ ಕೊಹ್ಲಿಗೆ ಆಟೋಗ್ರಾಫ್ ನೀಡಿ ಎಲ್ಲರ ಗಮನ ಸೆಳೆದಿದ್ದಾನೆ.

    ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟಿ-20, ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲು ಸಾಧಿಸಿದೆ. ಟೀಂ ಇಂಡಿಯಾ ಮಂಗಳವಾರ ಜಮೈಕಾದಿಂದ ತವರಿಗೆ ವಾಪಸ್ ಆಗುತ್ತಿದ್ದಾಗ ವಿರಾಟ್ ಕೊಹ್ಲಿ ಆಟೋಗ್ರಾಫ್ ಪಡೆದುಕೊಳ್ಳಲು ಮಕ್ಕಳು ಸುತ್ತುವರಿದಿದ್ದರು. ಇದೇ ವೇಳೆ ಅಲ್ಲಿಗೆ ಪೆನ್ನು, ಪೇಪರ್ ಹಿಡಿದು ಬಂದ 7 ವರ್ಷದ ಬಾಲಕನೊಬ್ಬ ಸಹಿ ಮಾಡಿ ಆಟೋಗ್ರಾಪ್ ಅನ್ನು ಕೊಹ್ಲಿ ಕೈಗಿಟ್ಟಿದ್ದಾನೆ.

    ವಿರಾಟ್ ಕೊಹ್ಲಿ ಹಾಗೂ ಪತ್ನಿ, ನಟಿ ಅನುಷ್ಕಾ ಶರ್ಮಾ ಬಾಲಕ ಆಟೋಗ್ರಾಫ್ ನೀಡಿದ್ದನ್ನು ಕಂಡು ಮುಗುಳು ನಗೆ ಬೀರಿದರು. ಈ ದೃಶ್ಯವನ್ನು ಬಾಲಕನ ಮಾವ ಅಮಿತ್ ಲಖಾನಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 18 ಸೆಕೆಂಡ್ ಇರುವ ಬಾಲಕನ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದುಬೀಗಿದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಲ್ಲದೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್.ಧೋನಿ ದಾಖಲೆ ಮುರಿದು ಇತಿಹಾಸ ರಚಿಸಿದ್ದಾರೆ. ಆದರೆ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದು ಕೊಹ್ಲಿ ಅವರ ನಾಲ್ಕನೇ ಗೋಲ್ಡನ್ ಡಕೌಟ್ ಆಗಿದೆ. ಮೊದಲ ಟೆಸ್ಟ್ ಇನ್ನಿಂಗ್ಸ್ ನಲ್ಲಿ 10 ಬೌಂಡರಿ ಸೇರಿದಂತೆ 76 ರನ್ ಕಲೆ ಹಾಕಿದ್ದರು. ಹೀಗಾಗಿ ಕೊಹ್ಲಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ  ಅಗ್ರಸ್ಥಾನದಿಂದ ಕೆಳಗೆ ಇಳಿದಿದ್ದಾರೆ.

    ಆ್ಯಶನ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬ್ಯಾಟ್ಸ್‌ಮನ್‍ಗಳ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ 904 ಅಂಕದೊಂದಿಗೆ ಟಾಪ್‍ನಲ್ಲಿದ್ದಾರೆ. ವಿರಾಟ್ ಕೊಹ್ಲಿ 903 ಅಂಕದಿಂದ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್‍ನ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದು 878 ಅಂಕ ಹೊಂದಿದ್ದಾರೆ. ಅಜಿಂಕ್ಯ ರಹಾನೆ ಟಾಪ್ 10 ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ರಹಾನೆ 4 ಸ್ಥಾನ ಏರಿಕೆ ಕಂಡು ಏಳನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

    ಬೌಲಿಂಗ್ ವಿಭಾಗದಲ್ಲಿ ಬುಮ್ರಾ ನಂಬರ್ 3ನೇ ಸ್ಥಾನಕ್ಕೆ ಏರಿದ್ದಾರೆ. ಬುಮ್ರಾ 835 ಅಂಕ ಪಡೆದರೆ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 908 ಅಂಕಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. 764 ಅಂಕ ಗಳಿಸಿರುವ ರವೀಂದ್ರ ಜಡೇಜಾ 11ನೇ ಸ್ಥಾನಕ್ಕೆ ಇಳಿದಿದ್ದು, ದಕ್ಷಿಣ ಆಫ್ರಿಕಾದ ಕಗಿಸೋ ರಬಡಾ 851 ಅಂಕ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.

  • ಅನುಷ್ಕಾ ಶೆಟ್ಟಿ ನಂತ್ರ ಕನ್ನಡಿಗರ ಮನಸ್ಸು ಗೆದ್ದ ಶರ್ಮಾ: ವಿಡಿಯೋ

    ಅನುಷ್ಕಾ ಶೆಟ್ಟಿ ನಂತ್ರ ಕನ್ನಡಿಗರ ಮನಸ್ಸು ಗೆದ್ದ ಶರ್ಮಾ: ವಿಡಿಯೋ

    ಮುಂಬೈ: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ತನ್ನ ತಾಯಿಗೆ ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಮೂಲಕ ಕನ್ನಡಿಗರ ಮನಸ್ಸು ಗೆದಿದ್ದರು. ಆದರೆ ಈಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಕನ್ನಡದಲ್ಲಿ ಮಾತನಾಡಿದ್ದಾರೆ.

    ಬಾಲಿವುಡ್ ಚಿತ್ರರಂಗದಿಂದ ದೂರವಿರುವ ಅನುಷ್ಕಾ ಶರ್ಮಾ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗಿರುವಾಗ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮಗೆ ಬಂದಂತಹ ಪಾಸಿಟಿವ್ ಟ್ವೀಟ್‍ಗಳನ್ನು ಓದಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಈ ವಿಡಿಯೋ ಹಾಕಿ ಅದಕ್ಕೆ ಅನುಷ್ಕಾ, ಈಗ ಇಂಟರೆನೆಟ್ ಪಾಸಿಟಿವಿಟಿಯ ಸಮಯ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ಹ್ಯಾಪಿ ಟ್ವೀಟ್ಸ್ ಎಂಬ ಹ್ಯಾಶ್‍ಟ್ಯಾಗ್ ಬಳಸಿದ್ದಾರೆ. ವಿಡಿಯೋದಲ್ಲಿ ಅನುಷ್ಕಾ ಇಂಗ್ಲಿಷ್‍ನಲ್ಲೇ ಎಲ್ಲ ಟ್ವೀಟ್‍ಗಳನ್ನು ಓದಿದ್ದಾರೆ. ಬಳಿಕ ವಿಡಿಯೋ ಕೊನೆಯಲ್ಲಿ ಅನುಷ್ಕಾ ‘ಅಷ್ಟೇ’ ಎಂಬ ಪದವನ್ನು ಹೇಳಿದ್ದಾರೆ.

    ಅನುಷ್ಕಾ ಈ ಪದವನ್ನು ಗೊತ್ತಿದ್ದು ಹೇಳಿದ್ದರೋ, ಗೊತ್ತಿಲ್ಲದೆ ಹೇಳಿದ್ದಾರೋ ತಿಳಿದು ಬಂದಿಲ್ಲ. ಆದರೆ ಅನುಷ್ಕಾ ಹೇಳಿದ ಈ ಒಂದು ಪದಕ್ಕೆ ಅಭಿಮಾನಿಗಳು ರೀ-ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಮೂಲತಃ ಉತ್ತರ ಪ್ರದೇಶದವರಾಗಿರುವ ಅನುಷ್ಕಾ ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಓದಿದ್ದರು. ಬಳಿಕ ಅವರು ತಮ್ಮ ಪದವಿಯನ್ನು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಡೆದುಕೊಂಡರು. ಇದಾದ ಬಳಿಕ ಅನುಷ್ಕಾ ಮುಂಬೈಗೆ ಹೋಗಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟರು.

    ಕಳೆದ ತಿಂಗಳು ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ತಮ್ಮ ತಾಯಿ ಪ್ರಫುಲ್ಲಾ ಅವರ ಹುಟ್ಟುಹಬ್ಬದಂದು ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಆ ಫೋಟೋಗೆ “ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಎಂದು ಬರೆದಿದ್ದರು.

  • ಪ್ರೆಗ್ನೆನ್ಸಿ ಬಗ್ಗೆ ನಟಿ ಅನುಷ್ಕಾ ಶರ್ಮಾ ಸ್ಪಷ್ಟನೆ

    ಪ್ರೆಗ್ನೆನ್ಸಿ ಬಗ್ಗೆ ನಟಿ ಅನುಷ್ಕಾ ಶರ್ಮಾ ಸ್ಪಷ್ಟನೆ

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

    ಇತ್ತೀಚೆಗೆ ಅನುಷ್ಕಾ ಶರ್ಮಾ ಫಿಲ್ಮಂಫೇರ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕ ಬಿ-ಟೌನ್‍ನಲ್ಲಿ ಹರಿದಾಡುತ್ತಿದ್ದ ಪ್ರೆಗ್ನೆನ್ಸಿ ಗಾಸಿಪ್ ಬಗ್ಗೆ ಅನುಷ್ಕಾ ಶರ್ಮಾ ಅವರಿಗೆ ಕೇಳಿದ್ದಾರೆ. ಈ ವೇಳೆ ಅನುಷ್ಕಾ ಗರಂ ಆಗಿಯೇ ಉತ್ತರಿಸಿದ್ದಾರೆ.

    ಜನರು ಕಲಾವಿದರಿಗೆ ನೆಮ್ಮದಿಯಿಂದ ಬದುಕಲು ಬಿಡಬೇಕು. ನಟಿಯೊಬ್ಬರು ಮದುವೆಯಾದ ತಕ್ಷಣ ಪ್ರಗ್ನೆನ್ಸಿಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳುತ್ತಾರೆ. ಅಥವಾ ಯಾರನ್ನಾದರೂ ಡೇಟ್ ಮಾಡುತ್ತಿದ್ದರೆ, ಮದುವೆ ಯಾವಾಗ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸುತ್ತಾರೆ. ಇದು ಕೆಲಸಕ್ಕೆ ಬಾರದ ಮಾತುಗಳು. ನೀವು ಕಲಾವಿದರಿಗೆ ಬದುಕಲು ಬಿಡಬೇಕು. ಬಲವಂತವಾಗಿ ಜನರ ಪ್ರಶ್ನೆಗೆ ಉತ್ತರಿಸಬೇಕು ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತೀರಾ. ನನಗೆ ಇಂತಹ ವಿಷಯಗಳು ಇಷ್ಟವಾಗುವುದಿಲ್ಲ ಎಂದರು.

    ಅಲ್ಲದೆ ನನಗೆ ಈ ವಿಷಯಗಳ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವಿದೆಯೇ? ಯಾವ ಯಾವ ನಟಿಯರು ಮದುವೆಯಾಗಿದ್ದಾರೋ ಅವರ ಬಗ್ಗೆ ಕೂಡ ಜನರು ಏನಾದರೂ ಹೇಳಿರುತ್ತಾರೆ. ಯಾವುದಾದರೂ ನಟಿ ಲೂಸ್ ಡ್ರೆಸ್ ಧರಿಸಿದ್ದರೆ ಅವರು ಪ್ರಗ್ನೆಂಟ್ ಎಂದು ಹೇಳುತ್ತಾರೆ. ಆದರೆ ಲೂಸ್ ಡ್ರೆಸ್ ಟ್ರೆಂಡಿ ಆಗಿರುವ ಕಾರಣ ನಟಿಯರು ಅದನ್ನು ಧರಿಸುತ್ತಾರೆ ಹೊರತು ಪ್ರಗ್ನೆಂಟ್ ಎಂದು ಅಲ್ಲ. ನಾವು ಈ ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡಬಾರದು ಎಂದು ಹೇಳಿದ್ದಾರೆ.

    ಈ ಹಿಂದೆ ಮಾಧ್ಯಮದವರು ನೀವು ಗರ್ಭಿಣಿಯೇ ಎಂದು ಅನುಷ್ಕಾರನ್ನು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ, ನಿಮಗೆ ಈ ರೀತಿಯ ಸುದ್ದಿಗಳು ಹೇಗೆ ಬರುತ್ತೆ ಎಂಬುದು ನನಗೆ ಗೊತ್ತಿಲ್ಲ. ಇದು ಕೆಲಸಕ್ಕೆ ಬಾರದ ಮಾತುಗಳು. ನೀವು ಮದುವೆಯನ್ನು ಅಡಗಿಸಬಹುದು. ಆದರೆ ಪ್ರೆಗ್ನೆನ್ಸಿಯನ್ನು ಹೇಗೆ ಅಡಗಿಸುತ್ತೀರಾ. ಇಲ್ಲಿ ಜನರು ಮದುವೆ ಮೊದಲೇ ನಿಮ್ಮನ್ನು ಮುತ್ತೈದೆ ಮಾಡುತ್ತಾರೆ. ಮಗು ಆಗುವ ಮೊದಲೇ ತಾಯಿ ಮಾಡುತ್ತಾರೆ. ನನಗೆ ಇದರಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದರು.

  • ನಾಯಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ – ಅನುಷ್ಕಾ ಶರ್ಮಾ

    ನಾಯಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ – ಅನುಷ್ಕಾ ಶರ್ಮಾ

    ಮುಂಬೈ: ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದೆ. ಈ ಮಳೆಯಿಂದ ಆಶ್ರಯ ಪಡೆಯಲು ಬೀದಿ ನಾಯಿಯೊಂದು ಫ್ಲ್ಯಾಟ್ ಒಳಗೆ ಬಂದಿದೆ ಎನ್ನುವ ಕಾರಣಕ್ಕೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಾರಣಾಂತಿಕವಾಗಿ ನಾಯಿಯನ್ನು ಥಳಿಸಿರುವ ಘಟನೆ ಮುಂಬೈನ ವರ್ಲಿಯಲ್ಲಿ ನಡೆದಿದೆ.

    ಥಳಿತದಿಂದ ನಾಯಿಯ ತಲೆ ಮತ್ತು ಹೊಟ್ಟೆಗೆ ತೀವ್ರವಾದ ಗಾಯಗಳಾಗಿದ್ದು, ನಾಯಿ ಈಗ ಕೋಮಾ ಸ್ಥಿತಿಗೆ ತಲುಪಿದೆ. ನಾಯಿಯನ್ನು ಥಳಿಸುತ್ತಿರುವ ಕೃತ್ಯ ಫ್ಲ್ಯಾಟಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಘಟನೆಯನ್ನು ಹಲವಾರು ಬಾಲಿವುಡ್ ನಟಿಯರು ಖಂಡಿಸಿದ್ದಾರೆ.

    https://www.instagram.com/p/B0eQnm9pDuF/

    ಈ ಘಟನೆ ಜುಲೈ 24 ರಂದು ಟರ್ಫ್ ವ್ಯೂ ಕಟ್ಟಡದಲ್ಲಿ ನಡೆದಿದೆ. ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದವರು ನಾಯಿ ಫ್ಲ್ಯಾಟಿನ ಒಳಗೆ ಬಂದಾಗ ಬೇರೆ ಯಾವ ಪ್ರಾಣಿಯೂ ಮತ್ತೆ ಕಟ್ಟಡದ ಒಳಗೇ ಬಾರದ ರೀತಿಯಲ್ಲಿ ನಾಯಿಗೆ ಹೊಡೆಯುವಂತೆ ಹೇಳಿದ್ದಾರೆ. ಅವರ ಮಾತಿನಂತೆ ವಾಚ್‍ಮ್ಯಾನ್ ನಾಯಿಗೆ ಮನಬಂದಂತೆ ಥಳಿಸಿದ್ದಾನೆ.

    ಶ್ವಾನಕ್ಕೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಜುಲೈ 27 ರಂದು ಮುಂಬೈ ಪ್ರಾಣಿ ದಯಾ ಸಂಘಟನೆಯ ಸದಸ್ಯರು ನಾಯಿಯನ್ನು ಥಳಿಸಿದ ಇಬ್ಬರ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.

    ಇದನ್ನು ಖಂಡಿಸಿ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿರುವ ಪ್ರಾಣಿ ಪ್ರೇಮಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಈ ಅಮಾನವೀಯ ಕೃತ್ಯವನ್ನು ನಮಗೆ ನಂಬಲಸಾಧ್ಯ. ಈಗ ಈ ನಾಯಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.

    ಅನುಷ್ಕಾ ಶರ್ಮಾ ಅವರ ಜೊತೆಗೆ ಬಾಲಿವುಡ್ ನಟಿ ಸೋನಮ್ ಕಪೂರ್ ಸಹ ನಡೆದಿರುವ ಈ ಅಮಾನವೀಯ ಘಟನೆಯನ್ನು ಖಂಡಿಸಿದ್ದಾರೆ. ಈ ಘೋರ ಕೃತ್ಯಕ್ಕೆ ಹಲವಾರು ಬಾಲಿವುಡ್ ಚಿತ್ರರಂಗದವರು ದುಃಖ ವ್ಯಕ್ತಪಡಿಸಿದ್ದಾರೆ.