Tag: anushka sharma

  • ಅನುಷ್ಕಾ ಶರ್ಮಾಗೆ ಡಿವೋರ್ಸ್ ಕೊಡಿ- ಕೊಹ್ಲಿಗೆ ಬಿಜೆಪಿ ಶಾಸಕ ಸಲಹೆ

    ಅನುಷ್ಕಾ ಶರ್ಮಾಗೆ ಡಿವೋರ್ಸ್ ಕೊಡಿ- ಕೊಹ್ಲಿಗೆ ಬಿಜೆಪಿ ಶಾಸಕ ಸಲಹೆ

    ನವದೆಹಲಿ: ಅನುಷ್ಕಾ ಶರ್ಮಾಗೆ ಡಿವೋರ್ಸ್ ಕೊಡಿ ಎಂದು ಬಿಜೆಪಿ ಶಾಸಕರೊಬ್ಬರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಸಲಹೆ ನೀಡಿದ್ದಾರೆ.

    ಅನುಷ್ಕಾ ಶರ್ಮಾ ನಿರ್ಮಾಣ ಮಾಡಿರುವ ಮೊದಲ ವೆಬ್ ಸೀರಿಸ್ ‘ಪಾತಾಳ್ ಲೋಕ್’ನಲ್ಲಿ ಜಾತಿ ನಿಂದನೆ ಮತ್ತು ನೇಪಾಳಿ ಸಮುದಾಯವೊಂದನ್ನು ಅವಮಾನಿಸಲಾಗಿದೆ ಎಂದು ಹೇಳಲಾಗಿದೆ. ಈ ವಿಚಾರವಾಗಿ ಅನುಷ್ಕಾಗೆ ನೋಟಿಸ್ ಕೂಡ ನೀಡಲಾಗಿದೆ. ಈಗ ಬಿಜೆಪಿ ಎಂಎಲ್‍ಎ ನಂದಕಿಶೋರ್ ಗುರ್ಜರ್ ಅನುಷ್ಕಾ ಶರ್ಮಾ ಅವರ ವಿರುದ್ಧ ದೂರು ನೀಡಿದ್ದಾರೆ.

    ಉತ್ತರ ಪ್ರದೇಶದ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್, ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ನನ್ನ ಅನುಮತಿ ಇಲ್ಲದೇ ನನ್ನ ಫೋಟೋವನ್ನು ವೆಬ್ ಸೀರಿಸ್‍ನಲ್ಲಿ ಬಳಸಲಾಗಿದೆ. ಈ ಮೂಲಕ ಅವರು ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ನನ್ನ ತೇಜೋವಧೆ ಮಾಡಿದ್ದಾರೆ. ಹಾಗಾಗಿ ಅನುಷ್ಕಾ ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

    ಅನುಷ್ಕಾ ನಿರ್ಮಾಣ ಮಾಡಿರುವ ವೆಬ್ ಸೀರಿಸ್ ಪಾತಾಳ್ ಲೋಕ್‍ನಲ್ಲಿ ನಂದಕಿಶೋರ್ ಗುರ್ಜರ್ ಅವರ ಒಂದು ಫೋಟೋವನ್ನು ಬಳಸಲಾಗಿದೆ. ಯಾವುದೋ ಕಾರ್ಯಕ್ರಮದಲ್ಲಿ ನಂದಕಿಶೋರ್ ಭಾಗವಹಿಸಿದ್ದ ನ್ಯೂಸ್‍ಪೇಪರ್ ಕಟಿಂಗ್‍ವೊಂದನ್ನು ತೋರಿಸಲಾಗಿದೆ. ಇದರಿಂದ ಕೋಪಗೊಂಡಿರುವ ನಂದಕಿಶೋರ್, ಈ ವೆಬ್ ಸರಣಿಯನ್ನು ಬ್ಯಾನ್ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಕೂಡ ಬರೆದಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಂದಕಿಶೋರ್, ಅನುಷ್ಕಾ ಶರ್ಮಾ ಅವರು ಈ ರೀತಿ ಮಾಡಿರುವುದು ಸರಿಯಲ್ಲ. ಅವರೇ ಈ ವೆಬ್ ಸೀರಿಸ್ ಅನ್ನು ಬ್ಯಾನ್ ಮಾಡಬೇಕು. ಜೊತೆಗೆ ಅವರ ಪತಿ ವಿರಾಟ್ ಕೊಹ್ಲಿ ದೇಶಕ್ಕಾಗಿ ಆಡುವ ರಾಷ್ಟ್ರೀಯವಾದಿ, ಅವರು ಅನುಷ್ಕಾ ಶರ್ಮಾಗೆ ವಿಚ್ಛೇದನ ನೀಡಬೇಕು ಎಂದು ಸಲಹೆ ನೀಡುತ್ತೇನೆ ಎಂದು ಹೇಳಿದ್ದಾರೆ.

    ಈ ಹಿಂದೆ ಅನುಷ್ಕಾ ಶರ್ಮಾ ನಿರ್ಮಾ ಮಾಡಿರುವ ವೆಬ್ ಸೀರಿಸ್‍ನಲ್ಲಿ ಜಾತಿ ನಿಂದನೆ ಮಾಡಲಾಗಿದೆ. ವೆಬ್ ಸರಣಿಯ ಎರಡನೇ ಭಾಗದಲ್ಲಿ ನೇಪಾಳಿ ಸಮುದಾಯವನ್ನು ನಿಂದಿಸುವ ಡೈಲಾಗ್ ಇದೆ. ಎರಡನೇ ಸಂಚಿಕೆಯ ದೃಶ್ಯವೊಂದರಲ್ಲಿ ಮಹಿಳಾ ಪೊಲೀಸ್ ನೇಪಾಳಿ ವ್ಯಕ್ತಿಯ ಪಾತ್ರದ ವಿಚಾರಣೆ ವೇಳೆ ಜಾತಿಯನ್ನು ಗುರುತಿಸೋ ಪದ ಬಳಕೆ ಮಾಡಲಾಗುತ್ತದೆ. ನೇಪಾಳಿ ಪದಗಳ ಜೊತೆ ಮುಂದೆ ಬಳಸುವ ಡೈಲಾಗ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅನುಷ್ಕಾ ಶರ್ಮಾರ ನಿರ್ಮಾಣದಲ್ಲಿ ವೆಬ್ ಸೀರೀಸ್ ಮೂಡಿ ಬಂದಿರೋದರಿಂದ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ ಎಂದು ಗಿಲ್ಡ್ ಸದಸ್ಯ ಮತ್ತು ಪ್ರಣಾಯ್ ರಾಯ್ ಅಸೋಸಿಯೇಟ್ಸ್ ಚೇಂಬರ್ ವಕೀಲ ವೀರೆನ್ ಶ್ರೀ ಗುರೂಂಗಾ ಹೇಳಿದ್ದರು.

  • ಅನುಷ್ಕಾ ಶರ್ಮಾಗೆ ಲೀಗಲ್ ನೋಟಿಸ್

    ಅನುಷ್ಕಾ ಶರ್ಮಾಗೆ ಲೀಗಲ್ ನೋಟಿಸ್

    ಮುಂಬೈ: ಬಾಲಿವುಡ್ ಪರಿ ಅನುಷ್ಕಾ ಶರ್ಮಾಗೆ ಲೀಗಲ್ ನೋಟಿಸ್ ನೀಡಲಾಗಿದೆ.

    ಅನುಷ್ಕಾ ಶರ್ಮಾ ನಿರ್ಮಾಣದ ವೆಬ್ ಸೀರಿಸ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಅದರಲ್ಲಿ ಬಳಸಲಾಗಿರುವ ಜಾತಿ ನಿಂದನಾತ್ಮಕ ಪದವುಳ್ಳ ಡೈಲಾಗ್ ತೆಗೆಯುವಂತೆ ಸೂಚಿಸಲಾಗಿದೆ. ಗಿಲ್ಡ್ ಸದಸ್ಯ ಮತ್ತು ಪ್ರಣಾಯ್ ರಾಯ್ ಅಸೋಸಿಯೇಟ್ಸ್ ಚೇಂಬರ ವಕೀಲ ವೀರೆನ್ ಶ್ರೀ ಗುರೂಂಗಾ ನೋಟಿಸ್ ಕಳುಹಿಸಿದ್ದಾರೆ. ವಕೀಲ ಗುರೂಂಗಾ, ವೆಬ್ ಸೀರೀಸ್ ಎರಡನೇ ಸಂಚಿಕೆಯಲ್ಲಿ ನೇಪಾಳಿ ಸಮುದಾಯವನ್ನು ಅವಮಾನಿಸುವ ಡೈಲಾಗ್ ಇದೆ ಎಂದು ಹೇಳಿದ್ದಾರೆ.

    ವೆಬ್ ಸೀರೀಸ್ ಎರಡನೇ ಸಂಚಿಕೆಯ ದೃಶ್ಯವೊಂದರಲ್ಲಿ ಮಹಿಳಾ ಪೊಲೀಸ್ ನೇಪಾಳಿ ವ್ಯಕ್ತಿಯ ಪಾತ್ರದ ವಿಚಾರಣೆ ವೇಳೆ ಜಾತಿಯನ್ನು ಗುರುತಿಸೋ ಪದ ಬಳಕೆ ಮಾಡಲಾಗುತ್ತದೆ. ನೇಪಾಳಿ ಪದಗಳ ಜೊತೆ ಮುಂದೆ ಬಳಸುವ ಡೈಲಾಗ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅನುಷ್ಕಾ ಶರ್ಮಾರ ನಿರ್ಮಾಣದಲ್ಲಿ ವೆಬ್ ಸೀರೀಸ್ ಮೂಡಿ ಬಂದಿರೋದರಿಂದ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ಇದುವರೆಗೂ ಅನುಷ್ಕಾ ಶರ್ಮಾರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಕೀಲ ವೀರೆನ್ ಶ್ರೀ ಗುರೂಂಗಾ ತಿಳಿಸಿದ್ದಾರೆ.

    ಗೊರಖಾ ಸಮುದಾಯ ಸಹ ವೆಬ್ ಸೀರೀಸ್ ನಲ್ಲಿರೋ ಡೈಲಾಗ್ ಬಗ್ಗೆ ಅಸಮಾಧಾನ ಹೊರ ಹಾಕಿದೆ. ವಿವಾದಾತ್ಮಕ ಡೈಲಾಗ್ ಗೆ ಕತ್ತರಿ ಹಾಕಬೇಕೆಂದು ಮೇ 18ರಂದು ಆನ್‍ಲೈನ್ ಪಿಟಿಶನ್ ಸಲ್ಲಿಸಲಾಗಿದೆ.

    ಅನುಷ್ಕಾ ಶರ್ಮಾ ನಿರ್ಮಾಣದ ವೆಬ್ ಸೀರೀಸ್ ನಲ್ಲಿ ಗೊರಖಾ ಸಮುದಾಯದ ಮಹಿಳೆಯರನ್ನು ನಿಂದಿಸಲಾಗಿದೆ. ಹಾಗಾಗಿ ಆ ಡೈಲಾಗ್‍ನ್ನು ಮ್ಯೂಟ್ ಮತ್ತು ಸಬ್ ಟೈಟಲ್ ಬ್ಲರ್ ಮಾಡಬೇಕು ಎಂದು ಪಿಟಿಶನ್ ನಲ್ಲಿ ಉಲ್ಲೇಖಿಸಲಾಗಿದೆ.

  • ಡೈನೋಸಾರ್ ಮುಕ್ತವಾಗಿ ತಿರುಗಾಡುವುದನ್ನ ನೋಡಿದೆ- ಅನುಷ್ಕಾ

    ಡೈನೋಸಾರ್ ಮುಕ್ತವಾಗಿ ತಿರುಗಾಡುವುದನ್ನ ನೋಡಿದೆ- ಅನುಷ್ಕಾ

    ಮುಂಬೈ: ಡೈನೋಸಾರ್ ಮುಕ್ತವಾಗಿ ತಿರುಗಾಡುವುದನ್ನು ನಾನು ನೋಡಿದೆ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಕಾಲೆಳೆದಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಪತಿಯೊಂದಿಗೆ ಕಳೆಯುತ್ತಿರುವ ಕೆಲವು ಕ್ಷಣಗಳನ್ನು ಅನುಷ್ಕಾ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಂತಹದ್ದೇ ವಿಡಿಯೋವೊಂದನ್ನು ಇಂದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಡೈನೋಸಾರ್ ರೀತಿ ಮನೆಗೆ ಪ್ರವೇಶಿಸುತ್ತಾರೆ. ಡೈನೋಸಾರ್‍ನಂತೆ ವಿರಾಟ್ ತನ್ನ ಕೈಗಳನ್ನು ಮುಂದಿಡುತ್ತಾರೆ. ಇದರ ನಂತರ ಅವರು ಕ್ಯಾಮೆರಾ ಕಡೆಗೆ ನೋಡಿ ಡೈನೋಸಾರ್‍ನಂತೆ ಶಬ್ದ ಮಾಡುತ್ತಾರೆ. ಈ ವಿಡಿಯೋಗೆ “ಡೈನೋಸಾರ್ ಮುಕ್ತವಾಗಿ ತಿರುಗಾಡುವುದನ್ನು ನಾನು ನೋಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿದ 2 ಗಂಟೆಯಲ್ಲಿ 28 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕೆಲ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    https://www.instagram.com/p/CAZoId4pudl/?utm_source=ig_embed

    ಇದಕ್ಕೂ ಮೊದಲು ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಅನುಷ್ಕಾ ಮತ್ತು ಕೊಹ್ಲಿ ಫ್ಲಾಟ್ ಮುಂದಿನ ಖಾಲಿ ಜಾಗದಲ್ಲಿ ಕ್ರಿಕೆಟ್ ಆಡುತ್ತಿರುವುದು ಕಂಡುಬಂದಿತ್ತು. ಲಾಕ್‍ಡೌನ್ ಮಧ್ಯೆ ಅನುಷ್ಕಾ ಬೌಲರ್ ಆಗಿ ಕೊಹ್ಲಿ ಅಭ್ಯಾಸಕ್ಕೆ ಸಾಥ್ ನೀಡಿದರು.

  • ಷರತ್ತು ಹಾಕಿ ತಮ್ಮ ಬಯೋಪಿಕ್‍ನಲ್ಲಿ ನಟಿಸಲು ಸಿದ್ಧವೆಂದ ಕೊಹ್ಲಿ

    ಷರತ್ತು ಹಾಕಿ ತಮ್ಮ ಬಯೋಪಿಕ್‍ನಲ್ಲಿ ನಟಿಸಲು ಸಿದ್ಧವೆಂದ ಕೊಹ್ಲಿ

    ಮುಂಬೈ: ಷರತ್ತೊಂದನ್ನು ಹಾಕಿ ತಮ್ಮ ಜೀವನಾಧಾರಿತ ಸಿನಿಮಾದಲ್ಲಿ ಖುದ್ದು ತಾವೇ ನಟಿಸಲು ಸಿದ್ದವೆಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಜೊತೆಗೆ ಇನ್‍ಸ್ಟಾಗ್ರಾಮ್ ವಿರಾಟ್ ಲೈವ್ ಚಾಟ್ ಮಾಡಿದ್ದರು. ಈ ವೇಳೆ ತಮ್ಮ ಬಯೋಪಿಕ್‍ನಲ್ಲಿ ತಾವೇ ನಟಿಸಲು ಸಿದ್ಧವೆಂದು ಷರತ್ತೊಂದನ್ನು ಹಾಕಿದ್ದಾರೆ. ತಮ್ಮ ಬಯೋಪಿಕ್‍ನಲ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ನಟಿಸಬೇಕು ಎಂದು ಕೊಹ್ಲಿ ಕಂಡೀಶನ್ ಹಾಕಿದ್ದಾರೆ.

    ಅನುಷ್ಕಾ ಜೊತೆಗೆ ಇದ್ದರೆ ಖಂಡಿತವಾಗಿ ನನ್ನ ಜೀವನಾಧಾರಿತ ಸಿನಿಮಾದಲ್ಲಿ ನಾನೇ ನಟಿಸುತ್ತೇನೆ. ನನ್ನ ವ್ಯಕ್ತಿತ್ವವನ್ನು ರೂಪಿಸಲು ಅನುಷ್ಕಾ ಬಹಳ ನೆರವಾಗಿದ್ದಾರೆ. ನಾನು ಮೊದಲು ಹೀಗೆ ಇರಲಿಲ್ಲ. ಜೀವನದಲ್ಲಿ ಪ್ರತಿಯೊಬ್ಬರು ಕೂಡ ನಮಗೆ ಸರಿ ಹೊಂದುವ ರೀತಿಯಲ್ಲಿ ಇರುತ್ತಾರೆ. ಆದರೆ ಒಬ್ಬ ವ್ಯಕ್ತಿ ನಿಮ್ಮೊಳಗಿನ ಶ್ರೇಷ್ಠತೆಯನ್ನು ಹೊರತರುವ ಪ್ರಯತ್ನ ಮಾಡುತ್ತಾರೆ. ಅನುಷ್ಕಾ ಸಿಕ್ಕ ಮೇಲೆ ಪ್ರತಿಯೊಂದು ವಿಚಾರವೂ ನನ್ನೊಬ್ಬನ ಬಗ್ಗೆ ಮಾತ್ರವಲ್ಲ ಎಂಬುದು ನನಗೆ ತಿಳಿಯಿತು. ಜೀವನದಲ್ಲಿ ಬೇರೆಯವರ ಬಗ್ಗೆ ಕೂಡ ಕಾಳಜಿವಹಿಸಿ ಬದುಕಬೇಕಾಗುತ್ತದೆ ಎಂದು ಲೈವ್ ಚಾಟ್‍ನಲ್ಲಿ ಕೊಹ್ಲಿ ಹೇಳಿಕೊಂಡಿದ್ದಾರೆ.

    ನಾವು ಏನೆಂದು ನಮಗೆ ನಿಜವಾಗಿಯೂ ಅರ್ಥವಾದ ಬಳಿಕ ಆತ್ಮವಿಶ್ವಾಸ ಹೆಚ್ಚಾಗುತ್ತೆ. ನಾನು ಯಾವ ಸ್ಥಿತಿಯಲ್ಲಿ ಇದ್ದೇನೆ ಅನ್ನೋದನ್ನ ನನಗೆ ತಿಳಿಯುವಂತೆ ಮಾಡಿದ್ದು ಅನುಷ್ಕಾ. ನಾನು ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಅನುಷ್ಕಾ ನೆರವಾದರು. ಈಗ ಯಾರಾದರು ನನ್ನ ಬಳಿ ಸಹಾಯ ಕೇಳಿದರೆ, ಅದು ನನ್ನಿಂದ ಮಾಡಲು ಆದರೆ ಖಂಡಿತವಾಗಿಯೂ ಮಾಡುತ್ತೇನೆ ಎಂದು ಪತ್ನಿ ಬಗ್ಗೆ ಮನಬಿಚ್ಚಿ ಕೊಹ್ಲಿ ಮಾತನಾಡಿದ್ದಾರೆ.

    ಈ ಹಿಂದೆ ಅನುಷ್ಕಾ ಶೇರ್ ಮಾಡಿದ್ದ ಸ್ಪೆಷಲ್ ಫೋಟೋವೊಂದು ಎಲ್ಲೆಡೆ ಸಖತ್ ವೈರಲ್ ಆಗಿತ್ತು. ಲಾಕ್‍ಡೌನ್‍ನಲ್ಲಿ ಸದ್ಯ ‘ಪಾತಾಳ್ ಲೋಕ್’ ವೆಬ್ ಸಿರೀಸ್ ಮೂಲಕ ಅಭಿಮಾನಿಗಳನ್ನು ಅನುಷ್ಕಾ ರಂಜಿಸುತ್ತಿದ್ದಾರೆ. ವೆಬ್ ಸಿರೀಸ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಅನುಷ್ಕಾರ ಅಭಿನಯ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಮಧ್ಯೆ ಮನೆಯಲ್ಲಿ ‘ಪಾತಾಳ್ ಲೋಕ್’ನ ಮೊದಲ ಭಾಗ ವೀಕ್ಷಿಸುತ್ತಿರುವ ಫೋಟೋವನ್ನು ಅನುಷ್ಕಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಆದರೆ ಈ ಫೋಟೋದಲ್ಲಿ ಕಂಡುಬಂದಿದ್ದ ಅನುಷ್ಕಾ ಮತ್ತು ವಿರಾಟ್ ಮದುವೆಯ ವ್ಯಂಗ್ಯ ಚಿತ್ರದ ಫೋಟೋ ಎಲ್ಲರ ಗಮನ ಸೆಳೆದಿತ್ತು. ವಧು-ವರರ ಗೆಟಪ್‍ನಲ್ಲಿ ಇದ್ದ ವಿರಾಟ್ ಮತ್ತು ಅನುಷ್ಕಾರ ವ್ಯಂಗ್ಯ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.

  • ಪತ್ನಿಯ ಬೌಲಿಂಗ್‍ಗೆ ಬ್ಯಾಟ್ ಬೀಸಿದ ಕೊಹ್ಲಿ- ವಿಡಿಯೋ ನೋಡಿ

    ಪತ್ನಿಯ ಬೌಲಿಂಗ್‍ಗೆ ಬ್ಯಾಟ್ ಬೀಸಿದ ಕೊಹ್ಲಿ- ವಿಡಿಯೋ ನೋಡಿ

    ಮುಂಬೈ: ಲಾಕ್‍ಡೌನ್‍ನಿಂದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ನೆಟ್‍ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಲು ಸಾಧ್ಯವಾಗದೆ ಇರಬಹುದು. ಆದರೆ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಕ್ರಿಕೆಟ್ ಅಭ್ಯಾಸ ನಡೆಸಿದ್ದಾರೆ.

    ವಿರುಷ್ಕಾ ಜೋಡಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿರಾಟ್ ಮುಂಬೈನ ತಮ್ಮ ಫ್ಲ್ಯಾಟ್ ಮುಂದಿನ ಖಾಲಿ ಜಾಗದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿರುವುದನ್ನು ಕಾಣಬಹುದಾಗಿದೆ. ಅನುಷ್ಕಾ ಬೌಲಿಂಗ್ ಮಾಡುವುದನ್ನು ನೋಡಬಹುದಾಗಿದೆ. ವಿರಾಟ್ ಗ್ಲೌಸ್ ಧರಿಸಿ ಅನುಷ್ಕಾ ಎಸೆದ ಬಾಲ್ ಅನ್ನು ಕವರ್ ಮತ್ತು ಸ್ಟ್ರೈಟ್ ಡ್ರೈವ್ ಮಾಡಿದ್ದನ್ನು ಕಾಣಬಹುದು. ಅಷ್ಟೇ ಅಲ್ಲದೆ ಅನುಷ್ಕಾ ಕೂಡ ವಿರಾಟ್‍ಗೂ ಮುನ್ನ ಸ್ವಲ್ಪ ಸಮಯದವರೆಗೆ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ‘ಹೇ ಕೊಹ್ಲಿ, ಚೌಕಾ ಮಾರ್ ನಾ’- ಅನುಷ್ಕಾ ಪ್ರೇರಣೆಗೆ ವಿರಾಟ್ ಸೈಲಂಟ್

    ಇದಲ್ಲದೆ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ತರಬೇತಿಯ ವಿಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನಿಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಒಂದು ಜೀವನ ವಿಧಾನವಾಗಿದೆ. ಆದರೆ ಪ್ರತಿಯೊಬ್ಬ ವೃತ್ತಿಪರರು ಇದನ್ನು ಮಾಡಬೇಕಾಗಿಲ್ಲ. ಆಯ್ಕೆ ನಿಮ್ಮದು” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಹಾಡು ಕೇಳುತ್ತಾ ಓಡುವುದು ಕಂಡುಬರುತ್ತದೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ, ಮಸ್ತ್ ಭಾಯ್, ಎಂದು ಹೇಳಿದ್ದಾರೆ. ಈ ವಿಡಿಯೋವನ್ನು 20 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಇದನ್ನೂ ಓದಿ: ಬ್ರದರ್, ಇದು ನೀವೇನಾ?- ಕ್ಯಾಪ್ಟನ್ ಕೊಹ್ಲಿ ಕಾಲೆಳೆದ ಪಾಕ್ ಕ್ರಿಕೆಟಿಗ

    https://www.instagram.com/p/CANrpF8ljOW/

    ಕೊರೊನಾ ಲಾಕ್‍ಡೌನ್‍ನಿಂದಾಗಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮಾರ್ಚ್ ನಿಂದ ಮುಂಬೈನಲ್ಲಿದ್ದಾರೆ. ವಿರಾಟ್ 86 ಟೆಸ್ಟ್ ಪಂದ್ಯಗಳಲ್ಲಿ 7,240 ರನ್, 248 ಏಕದಿನ ಪಂದ್ಯಗಳಲ್ಲಿ 11,867 ರನ್ ಮತ್ತು 81 ಟಿ20 ಪಂದ್ಯಗಳಲ್ಲಿ 2,794 ರನ್ ಗಳಿಸಿದ್ದಾರೆ. ಐಪಿಎಲ್‍ನ 177 ಪಂದ್ಯಗಳಲ್ಲಿ ಅವರು 5,412 ರನ್ ಗಳಿಸಿದ್ದಾರೆ.

    ಹೆಮ್ಮಾರಿ ಕೊರೊನಾದಿಂದಾಗಿ ದೇಶಾದ್ಯಂತ ಪರಿಸ್ಥಿತಿ ಕೆಟ್ಟದಾಗಿದೆ. ಮುಂಬೈಯಲ್ಲಿಯೇ 16,000ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದ್ದು, 600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಮೇ 18ರ ನಂತರವೂ ಮಹಾರಾಷ್ಟ್ರದಲ್ಲಿ ಲಾಕ್‍ಡೌನ್ ಮುಕ್ತಾಯವಾಗುವಂತೆ ಕಾಣುತ್ತಿಲ್ಲ. ಮುಂಬೈನಲ್ಲಿ ಲಾಕ್‍ಡೌನ್ ಸಡಿಲಗೊಳ್ಳದಿದ್ದರೆ ಮೇ 18ರ ನಂತರ ತಂಡದ ತರಬೇತಿಯಲ್ಲಿ ವಿರಾಟ್ ಕೊಹ್ಲಿ ಅವರಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

  • ವಿರುಷ್ಕಾರ ಸ್ಪೆಷಲ್ ಫೋಟೋಗೆ ಫ್ಯಾನ್ಸ್ ಫಿದಾ – ಕ್ಯೂಟ್ ಲುಕ್ ಸಖತ್ ವೈರಲ್

    ವಿರುಷ್ಕಾರ ಸ್ಪೆಷಲ್ ಫೋಟೋಗೆ ಫ್ಯಾನ್ಸ್ ಫಿದಾ – ಕ್ಯೂಟ್ ಲುಕ್ ಸಖತ್ ವೈರಲ್

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಆಕ್ಟೀವ್ ಆಗಿರುತ್ತಾರೆ. ಆಗಾಗ ತಮ್ಮ ಕ್ಯೂಟ್ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇತ್ತೀಚಿಗೆ ಅನುಷ್ಕಾ ಶೇರ್ ಮಾಡಿರುವ ಸ್ಪೆಷಲ್ ಫೋಟೋವೊಂದು ಎಲ್ಲೆಡೆ ಸಖತ್ ವೈರಲ್ ಆಗಿದೆ.

    ಲಾಕ್‍ಡೌನ್‍ನಲ್ಲಿ ಸದ್ಯ ‘ಪಾತಾಳ್ ಲೋಕ್’ ವೆಬ್ ಸಿರೀಸ್ ಮೂಲಕ ಅಭಿಮಾನಿಗಳನ್ನು ಅನುಷ್ಕಾ ರಂಜಿಸುತ್ತಿದ್ದಾರೆ. ವೆಬ್ ಸಿರೀಸ್ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಅನುಷ್ಕಾರ ಅಭಿನಯ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಮಧ್ಯೆ ವಿರುಷ್ಕಾರ ಸ್ಪೆಷಲ್ ಫೋಟೋ ಕೂಡ ಸಖತ್ ಸದ್ದು ಮಾಡುತ್ತಿದೆ.

    https://www.instagram.com/p/CALcqFYpAYg/

    ಮನೆಯಲ್ಲಿ ‘ಪಾತಾಳ್ ಲೋಕ್’ನ ಮೊದಲ ಭಾಗ ವೀಕ್ಷಿಸುತ್ತಿರುವ ಫೋಟೋವನ್ನು ಅನುಷ್ಕಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅನುಷ್ಕಾ ವೆಬ್ ಸೀರಿಸ್ ವೀಕ್ಷಿಸುತ್ತಿರುವ ಫೋಟೋದಲ್ಲಿ ಲಿವಿಂಗ್ ಹಾಲ್ ನ ಟಿವಿ ಕೆಳಗೆ ಇಟ್ಟಿರುವ ಅನುಷ್ಕಾ ಮತ್ತು ವಿರಾಟ್ ಮದುವೆ ಫೋಟೋ ಎಲ್ಲರ ಗಮನ ಸೆಳೆದಿದೆ. ಇದೊಂದು ವ್ಯಂಗ್ಯ ಚಿತ್ರವಾಗಿದ್ದು, ವಧು-ವರರ ಗೆಟಪ್‍ನಲ್ಲಿ ವಿರಾಟ್ ಮತ್ತು ಅನುಷ್ಕಾ ಚಿತ್ರವನ್ನು ಬಿಡಿಸಲಾಗಿದೆ. ಈ ವ್ಯಂಗ್ಯ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್‍ಗಳ ಸುರಿಮಳೆ ಸುರಿಸಿದ್ದಾರೆ.

    ಈ ಹಿಂದೆ ಲಾಕ್‍ಡೌನ್‍ನಲ್ಲಿ ವಿರಾಟ್, ಅನುಷ್ಕಾ ಮನೆಯಲ್ಲಿ ಹೇಗೆ ಕಾಲ ಕಳೆಯುತ್ತಿದ್ದಾರೆ ಎಂಬ ಬಗ್ಗೆ ಒಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಅನುಷ್ಕಾ ಅವರು ಕೊಹ್ಲಿಗೆ, `ಕೊಹ್ಲಿ, ಹೇ ಕೊಹ್ಲಿ? ಕೊಹ್ಲಿ? ಚೌಕಾ ಮಾರ್ ನಾ, ಚೌಕಾ. ಕ್ಯಾ ಕರ್ ರಾಹಾ ಹೈ? ಹೇ ಚೌಕಾ ಮಾರ್ (ಹೇ ಕೊಹ್ಲಿ ಬೌಂಡರಿ ಬಾರಿಸಿ. ನೀವು ಏನು ಮಾಡುತ್ತಿದ್ದೀರಿ)’ ಎಂದು ಕೂಗುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಅನುಷ್ಕಾರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

  • 11 ವರ್ಷ ಪ್ರೀತಿ ನೀಡಿದ ಬ್ರುನೊಗೆ ವಿರುಷ್ಕಾ ದಂಪತಿ ಭಾವಪೂರ್ಣ ವಿದಾಯ

    11 ವರ್ಷ ಪ್ರೀತಿ ನೀಡಿದ ಬ್ರುನೊಗೆ ವಿರುಷ್ಕಾ ದಂಪತಿ ಭಾವಪೂರ್ಣ ವಿದಾಯ

    ನವದೆಹಲಿ: ಹಲವರು ಸಾಕು ಪ್ರಾಣಿಗಳನ್ನು ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಳ್ಳುವ ಮೂಲಕ ಕಾಳಜಿ ವಹಿಸಿ ಸಾಕುತ್ತಾರೆ. ಸಮಯ ಸಿಕ್ಕರೆ ಸಾಕು ಯಾವಾಗಲೂ ತಮ್ಮ ಮುದ್ದಿನ ಸಹವರ್ತಿ ಬಗ್ಗೆ ಹೇಳುತ್ತಲೇ ಇರುತ್ತಾರೆ. ಊಟ ಮಾಡಿಸುವುದು, ಅದರೊಂದಿಗೆ ವಾಕಿಂಗ್ ಹೋಗುವುದು ಹೀಗೆ ಎಲ್ಲ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅದೇ ರೀತಿ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಮುದ್ದಿನಿಂದ ಸಾಕಿದ್ದ ಬ್ರುನೊ ಇದೀಗ ಸಾವನ್ನಪ್ಪಿದೆ. ಇದಕ್ಕಾಗಿ ಇಬ್ಬರೂ ಕಂಬನಿ ಮಿಡಿದಿದ್ದಾರೆ.

    ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಇಬ್ಬರೂ ಪೋಸ್ಟ್ ಮಾಡಿದ್ದು, ಭಾವನಾತ್ಮಕ ಸಾಲುಗಳೊಂದಿಗೆ ತಾವು ಸಾಕಿದ ಮುದ್ದಿನ ನಾಯಿ ಬ್ರುನೊಗೆ ವಿದಾಯ ಹೇಳಿದ್ದಾರೆ. ಕೊಹ್ಲಿ ಬ್ರುನೊ ಫೋಟೋ ಪೋಸ್ಟ್ ಮಾಡಿ, ರೆಸ್ಟ್ ಇನ್ ಪೀಸ್ ಮೈ ಬ್ರುನೊ. 11 ವರ್ಷಗಳ ಕಾಲ ನಮ್ಮ ಜೀವನವನ್ನು ಪ್ರೀತಿಯಿಂದ ಅಲಂಕರಿಸಿದೆ. ಈ ಮೂಲಕ ಜೀವಮಾನವಿಡೀ ಸಂಪರ್ಕದಲ್ಲಿರುವಂತೆ ಮಾಡಿದೆ. ಇಂದು ಉತ್ತಮ ಸ್ಥಳಕ್ಕೆ ಹೋಗಿದ್ದೀಯಾ, ದೇವರು ನಿನ್ನ ಆತ್ಮಕ್ಕೆ ಶಾಂತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    ♥️ Bruno ♥️ RIP ♥️

    A post shared by AnushkaSharma1588 (@anushkasharma) on

    ಅನುಷ್ಕಾ ಶರ್ಮಾ ಸಹ ಈ ಕುರಿತು ಪೋಸ್ಟ್ ಮಾಡಿದ್ದು, ಬ್ರುನೊ ಜೊತೆಗೆ ತಾವಿಬ್ಬರೂ ಕ್ಲಿಕ್ಕಿಸಿದ ಫೋಟೋ ಹಾಕಿ ಹಾರ್ಟ್ ಎಮೋಜಿ ಹಾಗೂ ಬ್ರುನೊ ಆರ್‍ಐಪಿ ಎಂದು ಬರೆದುಕೊಂಡಿದ್ದಾರೆ. ಬ್ರುನೊ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ ನಂತರ ವಿರಾಟ್ ಕೊಹ್ಲಿ ಇತ್ತೀಚೆಗೆ 15 ಬೀದಿ ನಾಯಿಗಳನ್ನು ದತ್ತು ಪಡೆದಿದ್ದಾರೆ. ಬೆಂಗಳೂರಿನ ಚಾರ್ಲಿಸ್ ಅನಿಮಲ್ ರೆಸ್ಕ್ಯೂ ಸೆಂಟರ್ ನ ಶೆಲ್ಟರ್ ನಲ್ಲಿನ ನಾಯಿಗಳನ್ನು ದತ್ತು ಪಡೆದಿದ್ದಾರೆ. ಈ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ತಾನು ಹಾಗೂ ಚೇತೇಶ್ವರ ಪೂಜಾರ್ ಫೀಲ್ಡ್‍ನಲ್ಲಿ ಕ್ಯಾಚ್ ಹಿಡಿಯುವ ಫೋಟೋ ಹಾಕಿ, ಲಾಕ್‍ಡೌನ್ ನಂತರ ನಮ್ಮ ಮೊದಲ ಸೆಶನ್ ಹೀಗೆ ಇರುತ್ತದೆ. ಬಾಲ್‍ಗಾಗಿ ನೀನು ಹೋಗುತ್ತೀಯಾ ಎಂದು ನಾನು ನಂಬಿದ್ದೇನೆ ಪುಜ್ಜಿ ಎಂದು ಕೊಹ್ಲಿ ಬರೆದಿದ್ದಾರೆ. ಇದಕ್ಕೆ ಚೇತೇಶ್ವರ್ ಪೂಜಾರ್ ಪ್ರತಿಕ್ರಿಯಿಸಿದ್ದು, ಯೆಸ್ ಕ್ಯಾಪ್ಟನ್, ಎರಡೂ ಕೈಗಳಿಂದ ಬಾಲ್ ಕ್ಯಾಚ್ ಹಿಡಿಯುತ್ತೇನೆ ಎಂದಿದ್ದಾರೆ.

  • ‘ಹೇ ಕೊಹ್ಲಿ, ಚೌಕಾ ಮಾರ್ ನಾ’- ಅನುಷ್ಕಾ ಪ್ರೇರಣೆಗೆ ವಿರಾಟ್ ಸೈಲಂಟ್

    ‘ಹೇ ಕೊಹ್ಲಿ, ಚೌಕಾ ಮಾರ್ ನಾ’- ಅನುಷ್ಕಾ ಪ್ರೇರಣೆಗೆ ವಿರಾಟ್ ಸೈಲಂಟ್

    ನವದೆಹಲಿ: ಲಾಕ್‍ಡೌನ್‍ನಿಂದಾಗಿ ಕ್ರಿಕೆಟ್ ಟೂರ್ನಿಗಳಿಲ್ಲದೆ ಕ್ರಿಕೆಟಿಗರು ಹಾಗೂ ಅಭಿಮಾನಿಗಳ ಮಧ್ಯೆ ಅಂತರ ಉಂಟಾಗಿದೆ. ಕೊರೊನಾ ವೈರಸ್ ಭೀತಿಯಿಂದ ಕ್ರಿಕೆಟಿಗರು ತಮ್ಮ ಮನೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಶುಕ್ರವಾರ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲಾಕ್‍ಡೌನ್ ಮಧ್ಯೆ ಮನೆಯಲ್ಲಿ ಹೇಗೆ ಕಾಲ ಕಳೆಯುತ್ತಿದ್ದಾರೆ ಎಂಬ ಬಗ್ಗೆ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಪ್ರಸ್ತುತ ಸಾಮಾಜಿಕ ಅಂತರ ಹೊಂದಿರುವ ಪತಿ ಕ್ರಿಕೆಟ್ ಪಂದ್ಯಗಳ ವಾತಾವರಣದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಲು ಅನುಷ್ಕಾ ಶರ್ಮಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ, ”ಕೊಹ್ಲಿ ಮೈದಾನದಲ್ಲಿ ಆಡುವುದನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸಿರುವೆ. ಲಕ್ಷಾಂತರ ಅಭಿಮಾನಿಗಳಿಂದ ಅವರು ಪಡೆಯುವ ಪ್ರೀತಿಯ ಜೊತೆಗೆ, ಅವರು ವಿಶೇಷವಾಗಿ ಈ ಒಂದು ನಿರ್ದಿಷ್ಟ ರೀತಿಯ ಅಭಿಮಾನಿಗಳನ್ನು ಸಹ ಕಳೆದುಕೊಂಡಿರಬಹುದು. ಹಾಗಾಗಿ ಅಭಿಮಾನಿಯಾಗಿ ನಾನು ಅವರಿಗೆ ಅನುಭವವನ್ನು ನೀಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

    ಈ ವಿಡಿಯೋದಲ್ಲಿ ಅನುಷ್ಕಾ ಅವರು ಕೊಹ್ಲಿ ಅವರನ್ನು ಕೂಗುತ್ತಾ, ‘ಕೊಹ್ಲಿ, ಹೇ ಕೊಹ್ಲಿ… ಕೊಹ್ಲಿ… ಚೌಕಾ ಮಾರ್ ನಾ, ಚೌಕಾ…. ಕ್ಯಾ ಕರ್ ರಾಹಾ ಹೈ… ಹೇ ಚೌಕಾ ಮಾರ್ (ಹೇ ಕೊಹ್ಲಿ ಬೌಂಡರಿ ಬಾರಿಸಿ. ನೀವು ಏನು ಮಾಡುತ್ತಿದ್ದೀರಿ)’ ಎಂದು ಹೇಳಿದ್ದಾರೆ.

    ಅನುಷ್ಕಾ ಶರ್ಮಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಅನುಷ್ಕಾ ಅವರ ಬುದ್ಧಿವಂತಿಕೆಯ ಬಗ್ಗೆ ಅಭಿಮಾನಿಗಳು ತಮ್ಮದೆ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

    https://www.instagram.com/p/B_EwaTjJL-G/?utm_source=ig_embed&utm_campaign=embed_video_watch_again

    ವಿರಾಟ್ ಮತ್ತು ಅನುಷ್ಕಾ ಜೋಡಿ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಈ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಮೊದಲಿನಿಂದಲೂ ವಿರುಷ್ಕಾ ಜೋಡಿ ಕೋಡಿಡ್-19ನಿಂದ ಸುರಕ್ಷಿತವಾಗಿರಲು ಸಂಬಂಧಿಸಿದಂತೆ ಜಾಗೃತಿ ಸಂದೇಶಗಳನ್ನು ಹಂಚಿಕೊಂಡಿದ್ದರು.

    ಕ್ಯೂಟ್ ಕಪಲ್ ವಿರುಷ್ಕಾ ಈ ಹಿಂದೆ ವಿಡಿಯೋ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದರು. ಈ ಮಧ್ಯೆ ಅನುಷ್ಕಾ ಶರ್ಮಾ ಪತಿ ವಿರಾಟ್ ಅವರ ಹೇರ್ ಕಟಿಂಗ್ ಮಾಡಿದ್ದರು.

  • ಸಂಬಳ, ಊಟ ಕೊಡದೆ ದುಡಿಸಿಕೊಳ್ಳುವವರ ವಿರುದ್ಧ ಅನುಷ್ಕಾ ಬೇಸರ

    ಸಂಬಳ, ಊಟ ಕೊಡದೆ ದುಡಿಸಿಕೊಳ್ಳುವವರ ವಿರುದ್ಧ ಅನುಷ್ಕಾ ಬೇಸರ

    ನವದೆಹಲಿ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ವಾರಂಟೈನ್ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕಳ್ಳುತ್ತಿದ್ದಾರೆ. ಖುಷಿ ವಿಚಾರಗಳ ಜೊತೆಗೆ ಇದೀಗ ಒಂದು ಅಸಮಾಧಾನದ ಸಂಗತಿಯನ್ನು ಸಹ ಅನುಷ್ಕಾ ಹಂಚಿಕೊಂಡು, ಬೇಸರ ವ್ಯಕ್ತಪಡಿಸಿದ್ದಾರೆ.

    ಕುಟುಂಬದೊಂದಿಗೆ ಸಮಯ ಕಳೆಯುವುದರ ಜೊತೆಗೆ ಅಭಿಮಾನಿಗಳನ್ನೂ ಮಾತನಾಡಿಸಲು ಅನುಷ್ಕಾ ಶರ್ಮಾ ಲೈವ್ ವಿಡಿಯೋ ಮಾಡಿದ್ದರು. ಈ ವೇಳೆ ತಮಗಾದ ಬೇಸರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಫೇಸ್ಬುಕ್‍ನಲ್ಲಿ ಈ ಕುರಿತು ಪೋಸ್ಟ್ ಸಹ ಹಾಕಿದ್ದಾರೆ.  ಲಾಕ್‍ಡೌನ್ ಸಮಯದಲ್ಲಿ ಆಹಾರವಿಲ್ಲದೆ ಬಳಲುತ್ತಿರುವವರ ಕಷ್ಟ ತಿಳಿದು ಅನುಷ್ಕಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಸೋಂಕಿನಿಂದಾಗಿ ದಿನನಿತ್ಯ ವೈದ್ಯರು ಮತ್ತು ರೋಗಿಗಳು ಕಷ್ಟ ಪಡುತ್ತಿರುವುದನ್ನು ಕಂಡರೆ ಎಂತಹವರಿಗೂ ಬೇಸರವಾಗುತ್ತಿದೆ. ಕೊರೊನಾ ಸೋಂಕಿತರನ್ನು ತುಂಬಾ ಕೀಳಾಗಿ ನೋಡಲಾಗುತ್ತಿದೆ. ವೈದ್ಯರ ಸ್ಥಿತಿ ಕೂಡ ಕಷ್ಟಕರವಾಗಿದೆ. ಈ ಸುದ್ದಿಗಳನ್ನು ಕೇಳಿ ತುಂಬಾ ನೊಂದಿದ್ದೇನೆ. ಇಂತಹ ಸಂದರ್ಭದಲ್ಲಿ ನಮ್ಮ ಸುರಕ್ಷತೆಯ ಜೊತೆಗೆ ಇತರರ ಸುರಕ್ಷತೆಯ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕಿದೆ. ಅಲ್ಲದೆ ಇದು ಎಲ್ಲರೂ ಒಟ್ಟಾಗಿರುವ ಸಮಯ ಎಂದಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ನಟಿ ಅನುಷ್ಕಾ ಶರ್ಮಾ ನಿಯಮಿತವಾಗಿ ಲೈವ್‍ಗೆ ಬರುತ್ತಿದ್ದು, ಅಭಿಮಾನಿಗಳ ಜೊತೆ ಮಾತನಾಡುತ್ತಾ, ಕೊರೊನಾ ವಿರುದ್ಧ ಹೋರಾಡುವ ಕುರಿತು ಸಲಹೆ ನೀಡುತ್ತಿದ್ದಾರೆ. ಅಲ್ಲದೆ ಎಚ್ಚರಿಕೆಯಿಂದ ಇರುವಂತೆ ಧೈರ್ಯ ತುಂಬುತ್ತಿದ್ದಾರೆ. ಕೆಲವೆಡೆ ಕಾರ್ಮಿಕರಿಗೆ ದಿನಗೂಲಿ ನೀಡದೆ, ಊಟ ಹಾಕದೆ ಹಿಂಸೆ ನೀಡುತ್ತಿರುವುದರ ಕುರಿತು ಅನುಷ್ಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ವಹಿಸುತ್ತಿದ್ದು, ಇದಕ್ಕೆ ಹಲವರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಸಿನಿ ತಾರೆಯರು ಹಾಗೂ ಧನಿಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಇನ್ನೂ ಹಲವರು ವೈದ್ಯ ವೃತ್ತಿ, ನರ್ಸ್ ವೃತ್ತಿ ಮಾಡುವ ಮೂಲಕ ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಸಹ ಇತ್ತೀಚೆಗೆ ಪಿಎಂ ಕೇರ್ಸ್ ಫಂಡ್‍ಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

  • ಅಕ್ಷಯ್ ಬಳಿಕ ಅನುಷ್ಕಾ-ವಿರಾಟ್ ದಂಪತಿಯಿಂದ ಆರ್ಥಿಕ ನೆರವು

    ಅಕ್ಷಯ್ ಬಳಿಕ ಅನುಷ್ಕಾ-ವಿರಾಟ್ ದಂಪತಿಯಿಂದ ಆರ್ಥಿಕ ನೆರವು

    ನವದೆಹಲಿ: ಮಹಾಮಾರಿ ಕೊರೊನಾ ತಡೆಯಲು ಹಲವರು ಸಹಾಯ ಹಸ್ತ ಚಾಚುತ್ತಿದ್ದು, ಬಾಲಿವುಡ್ ನಟ, ನಟಿಯರು ದೊಡ್ಡ ಮಟ್ಟದಲ್ಲಿ ನೆರವು ನೀಡುತ್ತಿದ್ದಾರೆ. ನಟ ಅಕ್ಷಯ್ ಕುಮಾರ್ ಬಳಿಕ ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ- ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಣ ಸಹಾಯ ಮಾಡಿದ್ದಾರೆ. ಇತ್ತ ಸಲ್ಮಾನ್ ಖಾನ್ ಸಹ ಸಿನಿಮಾ ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ.

    ಈ ಕುರಿತು ಇಬ್ಬರೂ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ವಿರಾಟ್ ಹಾಗೂ ನಾನು ಪಿಎಂ-ಕೇರ್ಸ್ ಫಂಡ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡಿದ್ದೇವೆ. ಹಲವು ಜನರು ಬಳಲುತ್ತಿರುವುದನ್ನು ನೋಡಿ ಹೃದಯ ಬಡಿತವೇ ನಿಂತಂತಾಗುತ್ತಿದೆ. ಹೀಗಾಗಿ ನಮ್ಮ ಈ ಕೊಡುಗೆ ಪರಿಹಾರ ಕೆಲಸಕ್ಕೆ ನೆರವಾಗಲಿದೆ ಎಂದು ನಾವು ಭಾವಿಸಿದ್ದೇವೆ. ನಮ್ಮ ಪ್ರೀತಿಯ ಜನರ ನೋವು ನಿವಾರಿಸಲು ಸಹಾಯವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹ್ಯಾಷ್‍ಟ್ಯಾಗ್‍ನೊಂದಿಗೆ ಇಂಡಿಯಾಫೈಟ್ಸ್ ಕೊರೊನಾ ಎಂದು ಪೋಸ್ಟ್ ನಲ್ಲಿ ಹಾಕಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma) on

    ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾ- ವಿರಾಟ್ ದಂಪತಿ ಆ್ಯಕ್ಟಿವ್ ಆಗಿದ್ದು, ಈ ವರೆಗೆ ತಮ್ಮ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದರು. ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಮನವಿ ಮಾಡುತ್ತಿದ್ದರು. ಇದೀಗ ಧನ ಸಹಾಯವನ್ನೂ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇವಲ ಹಣ ನೀಡಿದ್ದೇವೆ ಎಂದು ಮಾತ್ರ ತಿಳಿಸಿದ್ದು, ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿಲ್ಲ.

    ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ತಮ್ಮ ಉಳಿತಾಯದ 25 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿದ್ದರು. ಅಲ್ಲದೆ ಸಲ್ಮಾನ್ ಖಾನ್ ಸಹ 25 ಸಾವಿರ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇದೀಗ ವಿರುಷ್ಕಾ ದಂಪತಿ ಹಣ ನೀಡಿದ್ದಾರೆ. ಹಲವು ಕ್ರಿಕೆಟ್ ಆಟಗಾರರು ಸಹಾಯ ಹಸ್ತ ಚಾಚಿದ್ದು, ಸಚಿನ್ ತೆಂಡೂಲ್ಕರ್ 50 ಲಕ್ಷ ರೂ. ಸುರೇಶ್ ರೈನಾ 52 ಲಕ್ಷ ರೂ. ನೀಡಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧೂ, ಒಲಿಂಪಿಕ್ ಕ್ರೀಡಾಪಟು ಹಿಮಾ ದಾಸ್, ಕುಸ್ತಿ ಪಟು ಭಜರಂಗ್ ಪುನಿಯಾ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆರ್ಥಿಕ ನೆರವು ನೀಡಿದ್ದಾರೆ. ಮಾತ್ರವಲ್ಲದೆ ಬಿಸಿಸಿಐ ಸಹ 51 ಕೋಟಿ ರೂ. ನೀಡಿದೆ.

    ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್‍ನ 25 ಸಾವಿರ ಕಾರ್ಮಿಕರಿಗೆ ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಫೌಂಡೇಶನ್ ನೇರವಾಗಿ ಹಣ ಒದಗಿಸಲಿದೆ. ಈಗಾಗಲೇ ದಿನಗೂಲಿ ಕಾರ್ಮಿಕರ ಹೆಸರು ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಸಲ್ಮಾನ್ ಖಾನ್ ಸಂಸ್ಥೆ ಕೇಳಿದ್ದು, ಶೀಘ್ರದಲ್ಲೇ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಆಗಲಿದೆ ಎಂದು ಎಫ್‍ಡಬ್ಲ್ಯುಐಸಿಇ ಅಧ್ಯಕ್ಷ ಬಿ.ಎನ್.ತಿವಾರಿ ಸ್ಪಷ್ಟಪಡಿಸಿದ್ದಾರೆ.

    ಎಫ್‍ಡಬ್ಲ್ಯುಐಸಿಇ ನಲ್ಲಿ ಒಟ್ಟು 5 ಲಕ್ಷ ಕಾರ್ಮಿಕರಿದ್ದು, ಇದರಲ್ಲಿ 25 ಸಾವಿರ ಕಾರ್ಮಿಕರಿಗೆ ಆರ್ಥಿಕ ನೆರವು ಅಗತ್ಯವಾಗಿದೆ. ಇವರನ್ನು ತಮ್ಮ ಸ್ವಂತ ವೆಚ್ಚದಲ್ಲಿ ನೋಡಿಕೊಳ್ಳುವುದಾಗಿ ಸಲ್ಮಾನ್ ಖಾನ್ ಅವರ ಪೌಂಢೇಷನ್ ಹೇಳಿದೆ ಎಂದು ತಿವಾರಿ ಮಾಹಿತಿ ನೀಡಿದ್ದಾರೆ.