Tag: anushka sharama

  • ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೋನಮ್ ಮಿಂಚಿಂಗ್: ನಟಿಯ ಲುಕ್ಕಿಗೆ ಬಿಟೌನ್‌ ಸ್ಟಾರ್ಸ್‌ ಫಿದಾ

    ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೋನಮ್ ಮಿಂಚಿಂಗ್: ನಟಿಯ ಲುಕ್ಕಿಗೆ ಬಿಟೌನ್‌ ಸ್ಟಾರ್ಸ್‌ ಫಿದಾ

    ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದರು. ಬಳಿಕ ಬೇಬಿ ಬಂಪ್ ಫೋಟೋಶೂಟ್‌ಗಳು ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗಿತ್ತು. ಈಗ ಮತ್ತೆ ಸೋನಮ್ ನ್ಯೂ ಬೇಬಿ ಬಂಪ್ ಫೋಟೋಶೂಟ್‌ಗೆ ಸೆಲೆಬ್ರೆಟಿ ಸ್ನೇಹಿತರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ನಟಿ ಸೋನಮ್‌ ಕಪೂರ್ 2018ರಲ್ಲಿ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೆ ತಾವು ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು. ಡಿಫರೆಂಟ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸುವುದರ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ರು. ಈಗ ನಟಿ ಸೋನಮ್ ಅವರ ನ್ಯೂ ಬೇಬಿ ಬಂಪ್ ಫೋಟೋಶೂಟ್‌ಗೆ ಬಿಟೌನ್ ಸ್ಟಾರ್ ಫಿದಾ ಆಗಿದ್ದಾರೆ.

    ಸದ್ಯ ಸೋನಮ್ ಕಪೂರ್, ಕಪ್ಪು ಕ್ಲಾಸಿ ಕಫ್ತಾನ ಧರಿಸಿರುವ ಬೇಬಿ ಬಂಪ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಕಪ್ಪು ಡ್ರೇಸ್‌ನಲ್ಲಿ ಸಖತ್ ಕ್ಯೂಟ್ ಆಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.ಸೋನಮ್ ಪೋಸ್ಟ್ಗೆ ಅನುಷ್ಕಾ ಶರ್ಮಾ, ಸಮಂತಾ, ಅಥಿಯಾ ಶೆಟ್ಟಿ, ಭೂಮಿ ಪೆಡ್ನೇಕರ್, ಪತಿ ಆನಂದ್ ಸೇರಿದಂತೆ ಹಲವರು ಕಮೆಂಟ್ ಹಾಕಿದ್ದಾರೆ. ಫೋಟೋಸ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ವಿಜಯ್ ರಾಘವೇಂದ್ರ ನಟನೆಯ `ಎಫ್‌ಐಆರ್’ 6 ಟು 6 ಚಿತ್ರಕ್ಕೆ ಪ್ರಿಯಾಂಕ ಉಪೇಂದ್ರ ಕ್ಲ್ಯಾಪ್

     

    View this post on Instagram

     

    A post shared by Sonam Kapoor Ahuja (@sonamkapoor)

    ನೆಚ್ಚಿನ ನಟಿಯ ಹೊಸ ಫೋಟೋಶೂಟ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿರೋದನ್ನ ನೋಡಿ ಫ್ಯಾನ್ಸ್ ಖುಷಿಪಡ್ತಿದ್ದಾರೆ.

  • ಅನುಷ್ಕಾ ಶರ್ಮಾಗೆ ಕಾಡುತ್ತಿದೆ ಕೂದಲುದುರುವ ಸಮಸ್ಯೆ

    ಅನುಷ್ಕಾ ಶರ್ಮಾಗೆ ಕಾಡುತ್ತಿದೆ ಕೂದಲುದುರುವ ಸಮಸ್ಯೆ

    ಮುಂಬೈ: ನಟಿ ಅನುಷ್ಕಾ ಶರ್ಮಾಗೆ ಮಗುವಾದ ನಂತರ ಕೂದಲು ಉದುರುವಿಕೆ ಸಮಸ್ಯೆ ಕಾಡುತ್ತಿದೆ. ಹೀಗಾಗಿ ನಟಿ ಪರಿಹಾರ ಕಂಡುಕೊಂಡಿರುವ ಕುರಿತಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಸರಳವಾಗಿ ಮಾಡಿ ಮಟನ್ ಮಸಾಲಾ

    ಮಗುವಾದ ನಂತರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್‍ಗಳಿಂದಾಗಿ ಆಗುವ ಬದಲಾವಣೆಗಳಿಂದಾಗಿ ಕೂದಲು ಉದುರುವುದು, ದಪ್ಪಗಾಗುವುದು ಹೀಗೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ನಟಿ ಅನುಷ್ಕಾ ಶರ್ಮಾ ಅವರಿಗೂ ಈಗ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆ.

     

    View this post on Instagram

     

    A post shared by AnushkaSharma1588 (@anushkasharma)

    ಮಗುವಾದ ನಂತರ ಅನುಷ್ಕಾ ಶರ್ಮಾ ಅವರಿಗೂ ಕೂದಲು ಉದುರುವ ಸಮಸ್ಯೆ ಎದುರಾಗಿದ್ದು, ಶರ್ಮಾ ಹೊಸ ಹೇರ್ ಕಟ್ ಮೊರೆ ಹೋಗಿದ್ದಾರೆ. ಸೋನಮ್ ಕಪೂರ್ ಅವರ ಬಳಿಯಿಂದ ಸಲಹೆ ಪಡೆದುಕೊಂಡಿದ್ದಾರಂತೆ. ಈ ಕುರಿತಾಗಿ ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೇರ್ ಕಟ್ ಮಾಡಿಸಿಕೊಂಡಿರುವ ಚಿತ್ರಗಳ ಜೊತೆಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

    ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಗೆ ವಾಮಿಕಾ ಎಂಬ ಮಗಳಿರುವುದು ಗೊತ್ತೇ ಇದೆ. ಈ ಸೆಲೆಬ್ರಿಟಿ ಜೋಡಿ ಮಗಳ ಆರೈಕೆ ಮಾಡುತ್ತಾ ಅಪ್ಪ-ಅಮ್ಮನಾಗಿರುವ ಸಮಯವನ್ನು ಸಖತ್ತಾಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ ನಟಿಯಾಗಿರುವ ಕಾರಣಕ್ಕೆ ಅವರ ಸೌಂದರ್ಯ ಹಾಗೂ ಫಿಟ್ನೆಸ್ ಬಗ್ಗೆ ಕಾಳಜಿ ಮಾಡುವುದು ಸಹಜ. ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ನಟಿ ಮಗಳು ಹಾಗೂ ಗಂಡನ ಜೊತೆ ಕಾಲ ಕಳೆಯುತ್ತಿದ್ದಾರೆ.

  • ಈಗ ಅಧಿಕೃತ, ಇಟಲಿಯಲ್ಲಿ ಕೊಹ್ಲಿ- ಅನುಷ್ಕಾ ಮದುವೆ

    ಈಗ ಅಧಿಕೃತ, ಇಟಲಿಯಲ್ಲಿ ಕೊಹ್ಲಿ- ಅನುಷ್ಕಾ ಮದುವೆ

    ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹ ಕುರಿತ ಸುದ್ದಿಗೆ ತೆರೆ ಬಿದ್ದಿದ್ದು, ಡಿಸೆಂಬರ್ ಎರಡನೇ ವಾರದಲ್ಲಿ ಇಬ್ಬರು ಮದುವೆಯಾಗಲಿದ್ದಾರೆ.

    ಇಟಲಿಯಲ್ಲಿ ಕೊಹ್ಲಿ ಮತ್ತು ಅನುಷ್ಕಾ ಮದುವೆಯಾಗಲಿದ್ದು, ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ. ಡಿಸೆಂಬರ್ 9, 10, 11ರಂದು ಮೂರು ದಿನ ಕಾರ್ಯಕ್ರಮ ನಡೆಯಲಿದ್ದು ಮೂರನೇ ದಿನ ಮದುವೆ ನಡೆಯಲಿದೆ. ಶೀಘ್ರದಲ್ಲೇ ಇವರಿಬ್ಬರು ಅಧಿಕೃತವಾಗಿ ಈ ವಿಚಾರವನ್ನು ತಿಳಿಸುವ ಸಾಧ್ಯತೆಯಿದೆ.

    ಅಕ್ಟೋಬರ್ ನಲ್ಲೇ ಸುದ್ದಿ ಬ್ರೇಕ್:
    ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ಎಂದು ಸುದ್ದಿಯೊಂದು ಬಾಲಿವುಡ್ ಮತ್ತು ಕ್ರಿಕೆಟ್ ಅಂಗಳದಲ್ಲಿ ಅಕ್ಟೋಬರ್ ತಿಂಗಳಿನಲ್ಲೇ ಹರಿದಾಡಿತ್ತು. ಆದರೆ ಅನುಷ್ಕಾರ ಟ್ಯಾಲೆಂಟ್ ಏಜೆನ್ಸಿ, ಅವರು ಡಿಸೆಂಬರ್ ನಲ್ಲಿ ಮದುವೆ ಆಗುತ್ತಿಲ್ಲ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿತ್ತು. ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡು, ಮದುವೆಯ ಬಗ್ಗೆ ಮಾತುಗಳನ್ನು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

    ಜಾಹೀರಾತಿನಲ್ಲಿ ಏನಿತ್ತು?:
    ಈ ಜಾಹೀರಾತಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸುವ ಈ ಜೋಡಿ ವಧು-ವರರು ಮಾತನಾಡಿಕೊಳ್ಳುತ್ತಿರುವ ಶೈಲಿಯನ್ನ ಕಾಮಿಕ್ ಆಗಿ ಪ್ರಸ್ತುತಪಡಿಸಿದ್ದರು. ತಿಂಗಳಲ್ಲಿ 15 ದಿನ ವಿರಾಟ್ ಅಡುಗೆ ಮಾಡೋದಾಗಿ ಒಪ್ಪಿಕೊಂಡರೆ ಯಾವುದೇ ಕಂಪ್ಲೇಂಟ್ ಇಲ್ಲದೆ ಅನುಷ್ಕಾ ಸೇವಿಸೋದಾಗಿ ಹೇಳಿದ್ದರು. ಇನ್ನು ವಿರಾಟ್ ಅನುಷ್ಕಾರನ್ನ ಯಾವಾಗಲೂ ಕೈಹಿಡಿದು ಕಾಪಾಡೋದಾಗಿ ಹೇಳಿರುವ ಮಾತು ಇವರಿಬ್ಬರ ಪ್ರೀತಿ ಪ್ರೇಮವನ್ನ ಸಾರಿ ಸಾರಿ ಹೇಳುತ್ತಿತ್ತು.

    ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ಸರಣಿಯಲ್ಲಿ ತಮಗೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಈ ಹಿಂದೆ ಬಿಸಿಸಿಐಗೆ ಕೊಹ್ಲಿ ಮನವಿಯಲ್ಲಿ ತಿಳಿಸಿದ್ದರು. ಜನವರಿಯಿಂದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲಿದ್ದು, ನಿರಂತರ ಕ್ರಿಕೆಟ್ ಆಡುತ್ತೀರೋ ಕೊಹ್ಲಿ ಅದಕ್ಕೂ ಮೊದಲು ಕೊಂಚ ವಿರಾಮ ಬಯಸಿದ್ದರು. ಹೀಗಾಗಿ ಡಿಸೆಂಬರ್ ನಲ್ಲಿ ಅನುಷ್ಕಾ ಜೊತೆ ಮದುವೆ ಮಾಡಲೆಂದೇ ರಜೆಗೆ ಮನವಿ ಮಾಡಿದ್ದರು ಎನ್ನುವ ಸುದ್ದಿ ಬಾಲಿವುಡ್, ಕ್ರಿಕೆಟ್ ವಲಯದಲ್ಲಿ ಹರಿದಾಡುತಿತ್ತು.

    https://www.youtube.com/watch?v=G6xhtjAA7WA

    https://www.instagram.com/p/BaL6GSJgd2r/?taken-by=virushka_slayz

    https://www.instagram.com/p/BaG3kbPAgsM/?taken-by=virushka_slayz

    https://www.instagram.com/p/BaEKoW6APKn/?taken-by=virushka_slayz

    https://www.instagram.com/p/BZ-W1s4AnHO/?taken-by=virushka_slayz

    https://www.instagram.com/p/BZ9LGKDAGDg/?taken-by=virushka_slayz

    https://www.instagram.com/p/BZ1Ht0bguK4/?taken-by=virushka_slayz

    https://www.instagram.com/p/BZrSdyBA8yB/?taken-by=virushka_slayz

    https://www.instagram.com/p/BZqmYwZAKvO/?taken-by=virushka_slayz

    https://www.instagram.com/p/BZqDne_ARAG/?taken-by=virushka_slayz

    https://www.instagram.com/p/BZnyoZWgL__/?taken-by=virushka_slayz

    https://www.instagram.com/p/BZjLyWzAqOH/?taken-by=virushka_slayz

    https://www.instagram.com/p/BZd5m_SAksf/?taken-by=virushka_slayz

    https://www.instagram.com/p/BZfkpf9AQJ9/?taken-by=virushka_slayz

    https://www.instagram.com/p/BZYWWK2gy5U/?taken-by=virushka_slayz

    https://www.instagram.com/p/BZQLfbmgnDr/?taken-by=virushka_slayz

    https://www.instagram.com/p/BZL0jVHApMk/?taken-by=virushka_slayz

    https://www.instagram.com/p/BZH5FqiALw7/?taken-by=virushka_slayz

    https://www.instagram.com/p/BY9fht1AA8z/?taken-by=virushka_slayz

    https://www.instagram.com/p/BY3jv_1gf-B/?taken-by=virushka_slayz

    https://www.instagram.com/p/BY2TmCwgLGz/?taken-by=virushka_slayz

    https://www.instagram.com/p/BY0NcNkADkz/?taken-by=virushka_slayz

    https://www.instagram.com/p/BYsa_MCAQ3R/?taken-by=virushka_slayz