Tag: Anusha Rai

  • ಅನುಷಾ ಜೊತೆಗಿನ ಮದುವೆ ಪ್ರಪೋಸಲ್‌ಗೆ ಧರ್ಮ ಹೇಳೋದೇನು?

    ಅನುಷಾ ಜೊತೆಗಿನ ಮದುವೆ ಪ್ರಪೋಸಲ್‌ಗೆ ಧರ್ಮ ಹೇಳೋದೇನು?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟದಿಂದ ಧರ್ಮ ಕೀರ್ತಿರಾಜ್ (Dharma Keerthiraj) ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಬಿಗ್ ಬಾಸ್ ಆಟ, ಅನುಷಾ (Anusha Rai) ಒಡನಾಟ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚಾಕ್‌ಲೇಟ್ ಹೀರೋ ಧರ್ಮ ರಿಯಾಕ್ಟ್ ಮಾಡಿದ್ದಾರೆ. ಅನುಷಾ ಕುಟುಂಬದಿಂದ ಮದುವೆ (Wedding) ಪ್ರಪೋಸಲ್ ಬಂದ್ರೆ ನಟನ ಉತ್ತರವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.

    ಧರ್ಮ ಮತ್ತು ಅನುಷಾ (Anusha Rai) ಬಿಗ್ ಬಾಸ್ ಮನೆಯಲ್ಲಿ ಒಡನಾಟ ನೋಡಿ ಅಭಿಮಾನಿಗಳು ಇವರು ರಿಯಲ್ ಲೈಫ್‌ನಲ್ಲೂ ಜೊತೆಯಾದ್ರೆ ಚೆನ್ನಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ಈ ಜೋಡಿಯ ಮೇಲೆ ಫ್ಯಾನ್ಸ್‌ಗೆ ಕ್ರೇಜ್ ಇದೆ. ಹಾಗಾಗಿ ಮದುವೆ ಬಗ್ಗೆ ಧರ್ಮ ಪ್ರತಿಕ್ರಿಯೆ ನೀಡಿದ್ದಾರೆ.

    ಫ್ರೆಂಡ್ಸ್ ಅನ್ನೋದ್ದಕ್ಕೆ ನಾವಿಬ್ಬರು ಉದಾಹರಣೆ. ನನ್ನ ಮತ್ತು ಅನುಷಾ ಸ್ನೇಹ ಚೆನ್ನಾಗಿತ್ತು. ಫ್ಯಾನ್ಸ್ ಹೇಳ್ತಿದ್ದಾರೆ ನಾವು ಲವರ್ಸ್ ಅಂತ ಆದರೆ ಹಾಗೇ ನಮ್ಮೀಬ್ಬರ ನಡುವೆ ಏನು ಇಲ್ಲ. ನಮ್ಮದು ನಿಷ್ಕಲ್ಮಶ ಸ್ನೇಹ, ನಮ್ಮೀಬ್ಬರಿಗೂ ಪ್ರೀತಿ ಅನ್ನೋ ಭಾವನೆ ಇಲ್ಲ. ಸ್ನೇಹಿತರು ಹೇಗಿರಬೇಕು ಹಾಗೇ ಇದ್ದೀವಿ. ಬಿಗ್ ಬಾಸ್‌ನಲ್ಲಿ ಎಮೋಷನಲ್ ಆಗಿ ಬೆಂಬಲ ಬೇಕು. ಆ ರೀತಿಯಲ್ಲಿ ಅನುಷಾ ನನಗೆ ವಂಡಲ್‌ಫುಲ್ ಫ್ರೆಂಡ್ ನನಗೆ. ನೀವು ನಮ್ಮನ್ನ ಸಿನಿಮಾ ಮೂಲಕ ಜೊತೆಯಾಗಿ ನೋಡಬಹುದು. ಸಿನಿಮಾದಲ್ಲಿ ಕಪಲ್ ಆಗಿದ್ದೀವಿ. ಅಲ್ಲಿ ನೋಡಿ ನೀವು ನಮ್ಮನ್ನು ಬೆಂಬಲಿಸಬಹುದು ಎಂದಿದ್ದಾರೆ.

    ಅನುಷಾ ಕಡೆಯಿಂದ ಮದುವೆ ಪ್ರಪೋಸಲ್ ಬರಲ್ಲ. ಅವರ ಮನೆ ಕಡೆಯಿಂದಲೂ ಮದುವೆ ಸಂಬಂಧ ಬರಲ್ಲ. ಏನಾದರೂ ಮದುವೆ ಸಂಬಂಧ ಬಂದರೆ ಕೂಡ ಅದು ಆಗಲ್ಲ. ನಮ್ಮೀಬ್ಬರ ನಡುವೆ ಫ್ರೆಂಡ್‌ಶಿಪ್ ಟ್ಯಾಗ್ ತುಂಬಾ ಚೆನ್ನಾಗಿದೆ. ಅದು ಫ್ರೆಂಡ್ಸ್ ಆಗಿಯೇ ಉಳಿದುಕೊಂಡರೆ ಚೆನ್ನಾಗಿರುತ್ತೆ ಅನಿಸುತ್ತದೆ. ಮದುವೆ ರೂಪದಲ್ಲಿ ಕನೆಕ್ಟ್ ಆಗಲ್ಲ ಎಂದು ಧರ್ಮ ಮಾತನಾಡಿದ್ದಾರೆ.

  • ‘ಬಿಗ್ ಬಾಸ್’ ಮನೆಯಿಂದ ಅನುಷಾ ರೈ ಔಟ್‌

    ‘ಬಿಗ್ ಬಾಸ್’ ಮನೆಯಿಂದ ಅನುಷಾ ರೈ ಔಟ್‌

    ಕನ್ನಡ ಬಿಗ್ ಬಾಸ್ 11ರ (Bigg Boss Kannada 11) ಆಟ ರಂಗೇರಿದೆ. ಅಚ್ಚರಿ ಎಂಬಂತೆ ದೊಡ್ಮನೆಯ ಗಟ್ಟಿ ಸ್ಪರ್ಧಿಯಾಗಿರುವ ಅನುಷಾ ರೈ ಬಿಗ್ ಬಾಸ್ ಮನೆಯ ಆಟ‌ದಿಂದ ಔಟ್ ಆಗಿದ್ದಾರೆ.

    ಟಾಸ್ಕ್ ಅಂತ ಬಂದಾಗ ಬೇರೆ ಸ್ಪರ್ಧಿಗಳಿಗೆ ಸೆಡ್ಡು ಹೊಡೆದು ಅನುಷಾ ಆಟ ಆಡುತ್ತಿದ್ದರು. ಅದರೊಂದಿಗೆ ಧರ್ಮ ಅವರ ಜೊತೆಗಿನ ಸ್ನೇಹದ‌ ವಿಚಾರ ನಟಿ ಹೈಲೈಟ್ ಆಗಿದ್ದರು.

    ಮಹಾನುಭಾವರು, ಖಡಕ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಷಾ ನಟಿಸಿದ್ದಾರೆ. ನಟ ಧರ್ಮ ಕೀರ್ತಿರಾಜ್ ಜೊತೆ ಮೂರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

  • BBK 11: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ

    BBK 11: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ

    ಬಿಗ್ ಬಾಸ್ ಮನೆಯ ‌(Bigg Boss Kannada 11) ಆಟ ಶುರುವಾಗಿ 10 ದಿನಗಳು ಕಳೆದಿವೆ. ಮೊದಲ ವಾರವೇ ಯಮುನಾ ಶ್ರೀನಿಧಿ ದೊಡ್ಮನೆಯಿಂದ ಕಿಕ್ ಔಟ್ ಆಗಿದ್ದಾರೆ. ಇದೆಲ್ಲದರ ನಡುವೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಲವ್ವಿ ಡವ್ವಿ ಶುರುವಾಗಿದೆ. ಧರ್ಮ (Dharma Keerthiraj) ಮತ್ತು ಐಶ್ವರ್ಯಾ (Aishwarya) ವಿಚಾರ ಮಾತನಾಡುತ್ತಾ ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ? ಅಂತ ಚೈತ್ರಾಗೆ ಅನುಷಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ ಲವ್ಲಿ ವಿಶ್

    ದೊಡ್ಮನೆಯಲ್ಲಿ ಹೇಗೆ ಇದ್ದರೆ ವರ್ಕೌಟ್ ಆಗುತ್ತದೆ ಎನ್ನುವ ಪ್ರಶ್ನೆ ಚೈತ್ರಾ ಕುಂದಾಪುರ ಹಾಗೂ ನಟಿ ಅನುಷಾ ಮೂಡಿದೆ. ನನ್ನ ಜೊತೆ ಧರ್ಮ ಮಾತನಾಡಲು ಬಂದರೆ ಐಶ್ವರ್ಯಾ ಸಹಿಸಿಕೊಳ್ಳಲ್ಲ. ಐಶ್ವರ್ಯಾ ಮತ್ತು ಧರ್ಮ ಕೀರ್ತಿರಾಜ್ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಧರ್ಮ ಅವರು ಐಶ್ವರ್ಯಾ ವಿಚಾರದಲ್ಲಿ ಪಾಸಿಟಿವ್ ಆಗಿ ಇದ್ದಾರೆ ಎಂದಿನಿಸುತ್ತಿದೆ. ಇಬ್ಬರೂ ಜೊತೆಯಾಗಿ ಅಡುಗೆ ಮಾಡೋದು ಹೀಗೆಯಲ್ಲಾ ನಡೆಯುತ್ತಿದೆ. ಕಂಟೆಂಟ್‌ಗೋಸ್ಕರ ಕೂಡ ಲವ್ ಆಗುತ್ತಾ? ಎಂದು ಅನುಷಾ (Anusha Rai) ಅವರು ಚೈತ್ರಾಗೆ (Chaithra Kundapura) ಪ್ರಶ್ನೆ ಕೇಳಿದ್ದಾರೆ. ಐಶ್ವರ್ಯಾ ಅವರು ಧರ್ಮ ಅವರ ಬಗ್ಗೆ ಆಸಕ್ತಿ ತೋರಿಸುತ್ತಿರುವ ರೀತಿ ನೋಡಿದ್ರೆ, ಇವರಿಬ್ಬರ ನಡುವೆ ಪ್ರೀತಿ ಮೂಡಿತೇ ಎನ್ನುವ ಪ್ರಶ್ನೆ ಅಲ್ಲಿರುವ ಸ್ಪರ್ಧಿಗಳಲ್ಲಿ ಮತ್ತು ಅಭಿಮಾನಿಗಳಲ್ಲಿಯೂ ಮೂಡಿದೆ.

    ಇದೇ ವೇಳೆ, ನಟಿ ಅನುಷಾ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. ನನಗೆ ಹೊರಗೆ ಬಾಯ್‌ಫ್ರೆಂಡ್ ಇಲ್ಲ. ಎಂಗೇಜ್‌ಮೆಂಟ್ ಕೂಡ ಆಗಿಲ್ಲ. ಯಾರಾದರೂ ಪ್ರೀತಿ (Love) ಕೊಡ್ತೀನಿ ಎಂದು ಬಂದರೆ ನಾನು ಅದಕ್ಕೆ ಯೆಸ್ ಎಂದು ಹೇಳುತ್ತೇನೆ. ಸರಿಯಾದ ವ್ಯಕ್ತಿ ಬಂದು ಅವನೇ ಕೇಳಿದರೆ ಯೆಸ್ ಎಂದು ಹೇಳುತ್ತೇನೆ ಎಂದಿದ್ದಾರೆ.

    ಇನ್ನೂ ಕೆಲವರು ಹೈಲೈಟ್ ಆಗಬೇಕು ಎಂಬ ಕಾರಣಕ್ಕೆ ಲವ್ ಮಾಡಿ ಗಿಮಿಕ್ ಮಾಡಿದ್ದು ಇದೆ. ದೊಡ್ಮನೆ ಆಟ ಮುಗಿದ ಮೇಲೆ ಒಬ್ಬರಿಗೊಬ್ಬರು ಗೊತ್ತೇ ಇಲ್ಲ ಎಂದು ಅನ್ನೋ ಹಾಗೆ ಇದ್ದಿದ್ದು ಇದೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಐಶ್ವರ್ಯಾ ಲವ್ ಧರ್ಮ ಲವ್ ಟ್ರ್ಯಾಕ್ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾಯಬೇಕಿದೆ.

  • BBK 11: ಧರ್ಮ ಕೀರ್ತಿರಾಜ್‌ ಮೇಲೆ ಲವ್‌ ಆಯ್ತಾ?- ದೊಡ್ಮನೆಯಲ್ಲಿ ತ್ರಿಕೋನ ಪ್ರೇಮಕಥೆ

    BBK 11: ಧರ್ಮ ಕೀರ್ತಿರಾಜ್‌ ಮೇಲೆ ಲವ್‌ ಆಯ್ತಾ?- ದೊಡ್ಮನೆಯಲ್ಲಿ ತ್ರಿಕೋನ ಪ್ರೇಮಕಥೆ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 11) ಪ್ರೀತಿ ಚಿಗುರಿ ಆ ನಂತರ ಬ್ರೇಕಪ್ ಕಾಮನ್ ಆಗಿದೆ. ಪ್ರತಿ ಸೀಸನ್‌ನಲ್ಲೂ ಕೂಡ ಒಂದಲ್ಲಾ ಒಂದು ಲವ್ ಸ್ಟೋರಿಗಳು ಸದ್ದು ಮಾಡುತ್ತಲೇ ಇರುತ್ತದೆ. ಈ ಬಾರಿ ಒಬ್ಬ ಹುಡುಗನ ಮೇಲೆ ಇಬ್ಬರೂ ಹುಡುಗಿಯರಿಗೆ ಕ್ರಶ್ ಆಗಿದೆ. ಟ್ರಯಾಂಗಲ್ ಲವ್ ಟ್ರ್ಯಾಕ್ ನಡೆಯುತ್ತಿದೆ. ಯಾರು ಅದು ಅಂತೀರಾ? ಅದು ಬೇರೆ ಯಾರೋ ಅಲ್ಲ, ಚಾಕ್‌ಲೇಟ್ ಹೀರೋ ಧರ್ಮ ಕೀರ್ತಿರಾಜ್ (Dharma Keerthiraj) ಲವ್ ಕಹಾನಿ. ಇದನ್ನೂ ಓದಿ:ಆರಾಮ್ ಅರವಿಂದ್ ಸ್ವಾಮಿ: ರೊಮ್ಯಾಂಟಿಕ್ ಹಾಡಿನಲ್ಲಿ ಅನೀಶ್ ತೇಜಶ್ವರ್

    ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ಪ್ರೀತಿ, ಪ್ರೇಮ ಚಿಗುರುವ ಲಕ್ಷಣ ಕಾಣಿಸಿದೆ. ಈ ಮೊದಲು ಕೂಡ ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳ ನಡುವೆ ಲವ್ ಆಗಿತ್ತು. ಈಗ ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ (Aishwarya Shindogi)  ಅವರು ಪರಸ್ಪರ ಆಕರ್ಷಿತರಾಗುತ್ತಿದ್ದಾರೆ. ಅಷ್ಟೇ ಅಲ್ಲದೇ, ಅನುಷಾ ರೈ (Anusha Rai) ಕೂಡ ಇದೇ ಟ್ರ‍್ಯಾಕ್‌ನಲ್ಲಿ ಇದ್ದಾರೆ. ಹಾಗಾಗಿ ದೊಡ್ಮನೆಯಲ್ಲಿ ತ್ರಿಕೋನ ಪ್ರೇಮ ಶುರುವಾಗುವ ಸೂಚನೆ ಸಿಕ್ಕಿದೆ.

    ಆ ಕಡೆ ಅನುಷಾ ಜೊತೆ ಧರ್ಮ ಲವ್ವಿ ಡವ್ವಿ, ಈ ಕಡೆ ಐಶ್ವರ್ಯಾ ಜೊತೆನೂ ಲವ್ವಿ ಡವ್ವಿ. ಟೋಟಲಿ ಬಿಗ್ ಮನೆಯಲ್ಲಿ ಏನು ಆಗ್ತಿದೆ ಅನ್ನೋದು ಮನೆ ಮಂದಿಗೆ ಫುಲ್ ಕನ್‌ಫ್ಯೂಷನ್ ಆಗೋಗಿದೆ. ಧರ್ಮ ಅಂತೂ ಬಿಗ್ ಬಾಸ್ ಮನೆಯಲ್ಲಿ ಕೃಷ್ಣ ಆಗಿರೋದಂತೂ ಗ್ಯಾರಂಟಿ. ಯಾರಿಗೆ ಯಾರು ಸಿಕ್ತಾರೆ ಕೊನೆಯಲ್ಲಿ ಅನ್ನೋದೇ ಸದ್ಯದ ಕುತೂಹಲ.

  • ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟ ಅನುಷಾ ರೈ, ಧರ್ಮ ಕೀರ್ತಿರಾಜ್‌

    ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟ ಅನುಷಾ ರೈ, ಧರ್ಮ ಕೀರ್ತಿರಾಜ್‌

    ಬಿಗ್ ಬಾಸ್ ಕನ್ನಡ 11ಕ್ಕೆ (Bigg Boss Kannada 11) ಅದ್ಧೂರಿಯಾಗಿ ಇಂದು ಚಾಲನೆ ಸಿಕ್ಕಿದೆ. ದೊಡ್ಮನೆಗೆ 5ನೇ ಸ್ವರ್ಧಿಯಾಗಿ ಅನುಷಾ ರೈ (Anusha Rai) ಎಂಟ್ರಿ ಕೊಟ್ಟಿದ್ರೆ, 6ನೇ ಸ್ವರ್ಧಿಯಾಗಿ ಧರ್ಮ ಕೀರ್ತಿರಾಜ್ (Dharma Keerthi Raj) ಎಂಟ್ರಿ ಕೊಟ್ಟಿದ್ದಾರೆ. ಇಬ್ಬರೂ ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ನೇ ಟ್ರೋಲ್ ಮಾಡಿದ್ದ ಧನರಾಜ್ ದೊಡ್ಮನೆ ಸ್ವರ್ಗಕ್ಕೆ ಎಂಟ್ರಿ

    ದೊಡ್ಮನೆಯ ಗ್ರ‍್ಯಾಂಡ್ ಓಪನಿಂಗ್‌ನಲ್ಲಿ ಅನುಷಾ ರೈ ಅವರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಖುಷಿ ಹಾಗೂ ಡಬಲ್ ಶಾಕ್ ಸಿಕ್ಕಿದೆ. ಅನುಷಾ ರೈ ಅವರು ಎಂಟ್ರಿ ಕೊಟ್ಟಾದ ಮೇಲೆ ಕಣ್ಣಿಗೆ ಪಟ್ಟಿ ಕಟ್ಟಿಸಿ 6ನೇ ಕಂಟೆಸ್ಟೆಂಟ್ ಅನ್ನು ಕರೆಸಲಾಗಿದೆ. ಇಲ್ಲೂ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ.

    ‘ಬಿಗ್ ಬಾಸ್ ಸೀಸನ್ 11’ರ 6ನೇ ಸ್ಪರ್ಧಿಯಾಗಿ ‘ನವಗ್ರಹ’ ಖ್ಯಾತಿಯ ನಟ ಧರ್ಮ ಕೀರ್ತಿರಾಜ್ ಅವರು ಎಂಟ್ರಿ ಕೊಟ್ಟಿದ್ದಾರೆ. 5ನೇ ಸ್ಪರ್ಧಿ ಅನುಷಾ ಅವರಿಗೆ ಧರ್ಮ ಅವರ ಹೆಸರನ್ನು ಗೆಸ್ ಮಾಡೋ ಟಾಸ್ಕ್ ನೀಡಲಾಗಿದ್ದು, ಕಿಚ್ಚ ಸುದೀಪ್ ಸುಳಿವು ನೀಡುತ್ತಿದ್ದಂತೆ ಅನುಷಾ ರೈ, ಧರ್ಮ ಅವರ ಹೆಸರು ಸರಿಯಾಗಿ ಗೆಸ್‌ ಮಾಡಿದ್ದಾರೆ.

    ಅನುಷಾ ರೈ ಹಾಗೂ ಧರ್ಮ ಅವರ ಮೊದಲೇ ಸ್ನೇಹಿತರು. ಇದೀಗ ಈ ಬೆಸ್ಟ್ ಫ್ರೆಂಡ್ಸ್ ಬಿಗ್ ಬಾಸ್ ಮನೆಯಲ್ಲಿ ಜೊತೆಯಾಗಿದ್ದಾರೆ. ಈ ಹಿಂದೆ ಇಬ್ಬರೂ ‘ಖಡಕ್’ ಎಂಬ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.

    ಇನ್ನೂ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಟ್ವಿಸ್ಟ್ ನೀಡಲಾಗಿದೆ. ಅನುಷಾ ರೈ ಅವರು ನಾನು ಮೊದಲು ಸ್ವರ್ಗಕ್ಕೆ ಹೋಗಬೇಕು ಎಂದಿದ್ದರು. ಆದರೆ ವಿಶೇಷ ಅಧಿಕಾರ ಹೊಂದಿದ್ದ ಭವ್ಯಾ ಗೌಡ ಹಾಗೂ ಯಮುನಾ ಅವರ ನಿರ್ಧಾರದ ಮೇಲೆ ಅನುಷಾ ರೈ ಅವರು ನರಕಕ್ಕೆ ಹೋಗಿದ್ದಾರೆ. ಧರ್ಮ ಕೀರ್ತಿ ರಾಜ್ ಸ್ವರ್ಗಕ್ಕೆ ಕಾಲಿಟಿದ್ದಾರೆ.

  • ಸದ್ದು ಮಾಡುತ್ತಿದೆ ‘ತೂಫಾನ್’ ಸಿನಿಮಾದ ಫಸ್ಟ್ ಗ್ಲಿಂಪ್ಸ್

    ಸದ್ದು ಮಾಡುತ್ತಿದೆ ‘ತೂಫಾನ್’ ಸಿನಿಮಾದ ಫಸ್ಟ್ ಗ್ಲಿಂಪ್ಸ್

    ‘ತೂಫಾನ್’ (Toofan Film) ಕನ್ನಡ ಮತ್ತು ಹಿಂದಿ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಕಲಾವಿದರ ಸಂಘದಲ್ಲಿ ತುಣುಕುಗಳ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನಡೆಯಿತು. ಎಸ್.ಆರ್.ಮೂವೀಸ್ ಲಾಂಛನದಲ್ಲಿ ಬೆಳಗಾವಿ ಮೂಲದ ಕನ್ನಡ ಅಭಿಮಾನಿ ಷರೀಫ ಬೇಗಂ ನಡಾಫ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವುದು ಆರ್.ಚಂದ್ರಕಾಂತ್. ಹೊಸ ಪ್ರತಿಭೆ ರೋಶನ್ ಕಥೆ ಬರೆದು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಮತ್ತು ಮಿಲಿಟರಿ ನಿವೃತ್ತ ಅಧಿಕಾರಿಗಳು ಆಗಮಿಸಿ ತಂಡದ ಕೆಲಸವನ್ನು ಶ್ಲಾಘಿಸಿದರು. ಇದನ್ನೂ ಓದಿ:ಕಾನೂನಿಗಿಂತ ಯಾರು ಮೇಲಲ್ಲ, ಈ ಕೃತ್ಯ ಮಾಡುವ ವ್ಯಕ್ತಿತ್ವ ದರ್ಶನ್‌ದಲ್ಲ- ಮೌನ ಮುರಿದ ಸುಮಲತಾ


    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಹಿತಿ ಕವಿರಾಜ್, ತಮ್ಮ ಶಿಷ್ಯ ಆರ್.ಚಂದ್ರಕಾಂತ್ ನಿರ್ದೇಶನ ಮಾಡಿರುವುದು ಸಂತಸ ತಂದಿದೆ. ಲೈಟಿಂಗ್, ಮೇಕಿಂಗ್ ಎಲ್ಲವನ್ನು ದೊಡ್ಡ ಪರದೆ ಮೇಲೆ ನೋಡುವುದೇ ಚೆಂದ. ಬೇರೆ ಲೋಕ ಸೃಷ್ಡಿಸುವಂತ ಮಾತು ಕೇಳಿ ಬರುತ್ತಿದೆ. ಅದೇ ರೀತಿ ಇದು ಆಗಲಿ. ನಿರ್ದೇಶಕರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲೆಂದು ಶುಭ ಹಾರೈಸಿದರು. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ‘ಬಿಲ್ಲಾರಿ’ ಸಿನಿಮಾದ ಮುಹೂರ್ತ

    ಈ ಸಂದರ್ಭದಲ್ಲಿ ಮಾತನಾಡಿದ ಆರ್.ಚಂದ್ರಕಾಂತ್‌, ಸಿನಿಮಾವು ನನ್ನದು ಅನ್ನುವುದಕ್ಕಿಂತ ರೋಷನ್ ಕನಸು ಎಂದು ಹೇಳಬೇಕು. ಅವರು ಕಥೆ ಹೇಳಿ ನಾನೇ ನಿರ್ದೇಶನ ಮಾಡಬೇಕೆಂದು ಕೋರಿಕೊಂಡರು. 1994ರಲ್ಲಿ ಮಗ ತಂದೆಗೋಸ್ಕರ ಸೇಡು ತೀರಿಸಿಕೊಳ್ಳುವ ಕಥೆ ಹೊಂದಿದೆ. ಶೇಕಡ 50ರಷ್ಟು ಚಿತ್ರೀಕರಣ ಮುಗಿದಿದೆ. ನಿರ್ಮಾಪಕರ ಒತ್ತಾಯದ ಮೇರೆಗೆ ಗ್ಲಿಂಪ್ಸ್‌ ತೋರಿಸಲಾಗಿದೆ. ಇದು ಟೀಸರ್, ಟ್ರೈಲರ್ ಅಲ್ಲ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾದ ‘ತೂಫಾನ್’ ಸ್ಪಾರ್ಕ್ ಎನ್ನಬಹುದು. ನಮ್ಮ ಚಿತ್ರ ಹೇಗೆ ಬರುತ್ತಿದೆ, ಯಾವ ತರಹದಲ್ಲಿ ಇದೆ ಎಂಬುದನ್ನು ತೋರಿಸಲು ಇದನ್ನು ಸಿದ್ಧಪಡಿಸಲಾಗಿದೆ. ಹಿಂದೆ ‘ಭೈರ್ಯ-07’ ಹೆಸರು ಇತ್ತು. ಭೈರ್ಯ ನಾಯಕನ ಹೆಸರು ಆಗಿದ್ದು, ಬೇರೆ ತಿರುವು ಇರಲಿ ಅಂತ ‘ತೂಫಾನ್’ ಟೈಟಲ್ ಇಡಲಾಗಿದೆ. ಮುಖ್ಯ ಖಳನಾಯಕನಾಗಿ ಭೀಷ್ಮ ರಾಮಯ್ಯ ಉಳಿದಂತೆ ರಂಗಾಯಣ ರಘು, ಅಶ್ವಿನ್ ಹಾಸನ್, ಸೂರ್ಯಪ್ರವೀಣ್, ಅಯ್ಯಪ್ಪ ಶರ್ಮ, ಬಿ.ಸುರೇಶ್, ಉಗ್ರಂ ರವಿ ರೋಲ್‌ನ್ನು ಗೌಪ್ಯವಾಗಿಡಲಾಗಿದೆ. ಮುಂದೆ ಎಲ್ಲವನ್ನು ತಿಳಿಸುತ್ತೇನೆಂದು ಹೇಳಿದರು.

    ನಾಯಕ ರೋಶನ್ ಮಾತನಾಡಿ, ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಕನ್ನಡ ಸಿನಿಮಾಗಳನ್ನು ನೋಡಲು ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲವೆಂಬ ಆಪಾದನೆ ಇದೆ. ಪ್ರತಿಭೆ ಇರುವ ಇಂತಹ ನಿರ್ದೇಶಕರಿಗೆ ಅವಕಾಶ ಕೊಡಬೇಕು. ನಾನು ಯಶ್ ಗರಡಿಯಲ್ಲಿ ಪಳಗಿದವನು. ಅವರು ಸಿನಿಮಾದ ತುಣುಕುಗಳನ್ನು ನೋಡಿಲ್ಲ. ಖಂಡಿತವಾಗಿಯೂ ಅವರಿಗೆ ತೋರಿಸುತ್ತೇನೆ. ಸಿನಿಮಾದ ಒನ್ ಲೈನ್ ಕಥೆ ನನ್ನದಾಗಿದ್ರೂ, ಅದಕ್ಕೆ ಸುಂದರವಾದ ಆಕಾರ ಕೊಡುತ್ತಿರುವುದು ನಿರ್ದೇಶಕರು ಎಂದು ಮಾತನಾಡಿದ್ದಾರೆ.

    ಮುಗ್ಧ ಹುಡುಗಿ, ಯಾರಿಗೂ ಹೆದರದ ಹಾಗೂ ಮಹಾರಾಜನ ಮಗಳು ಯುವರಾಣಿ ಹೀಗೆ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆಂದು ನಾಯಕಿ ಅನುಷಾ ರೈ (Anusha Rai) ಪಾತ್ರದ ಕುರಿತು ಹಂಚಿಕೊಂಡರು.

  • ಸದ್ಯಕ್ಕಿನ್ನು ಆರೋಪಿಯಷ್ಟೇ, ಅಪರಾಧಿಯಾಗಿಲ್ಲ- ಅನುಷಾ ರೈ ರಿಯಾಕ್ಷನ್

    ಸದ್ಯಕ್ಕಿನ್ನು ಆರೋಪಿಯಷ್ಟೇ, ಅಪರಾಧಿಯಾಗಿಲ್ಲ- ಅನುಷಾ ರೈ ರಿಯಾಕ್ಷನ್

    ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣ ಅರೆಸ್ಟ್ ಆಗಿದ್ದಾರೆ. ಕಾನೂನಿನ ಮುಂದೆ ನಾವೆಲ್ಲರೂ ಚಿಕ್ಕವರೆ. ಸದ್ಯಕ್ಕಿನ್ನು ಆರೋಪಿಯಷ್ಟೆ, ಅಪರಾಧಿಯಾಗಿಲ್ಲ ಎಂದು ದರ್ಶನ್ ಪ್ರಕರಣದ ವಿಚಾರವಾಗಿ ನಟಿ ಅನುಷಾ ರೈ (Actress Anusha Rai) ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಸಿನಿಮಾ ರಿಲೀಸ್ ಆಗೋದು ಆಗಸ್ಟ್ ಅಲ್ಲ, ಮತ್ಯಾವಾಗ?

    ದರ್ಶನ್ ಪ್ರಕರಣದ ವಿಚಾರವಾಗಿ ಅನುಷಾ ರೈ ಇನ್ಸ್ಟಾಗ್ರಾಂ ಸುಧೀರ್ಘವಾಗಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ನನಗೆ ವರ್ಷದ 365 ದಿನವೂ ಊಟ ಹಾಕ್ತಾರೆ. ಆದರೆ ನಾನು ಹುಟ್ಟುಹಬ್ಬದ ಒಂದು ದಿನ ಮಾತ್ರ ಅವರಿಗೆ ಊಟ ಹಾಕ್ತೀನಿ ಎಂದವರು ದರ್ಶನ್. ಮೈಮೇಲೆ ಆತರ ನನ್ನ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳಬೇಡಿ ಸಿನಿಮಾ ನೋಡಿ ಸಾಕು, ನಿಮ್ಮ ಅಪ್ಪ ಅಮ್ಮನ ಹೆಸರು ಹಾಕಿಸಿಕೊಳ್ಳಿ ಎನ್ನುತ್ತಾ ತಾವೇ ಎದೆಯ ಮೇಲೆ ನನ್ನ ಸೆಲೆಬ್ರಿಟೀಸ್ ಎಂದು ಹಚ್ಚೆ ಹಾಕಿಸಿಕೊಂಡ ಅಭಿಮಾನಿಗಳ ದಾಸ. ನಾನು ಕಾರಲ್ಲಿ ಸ್ಪೀಡಾಗಿ ಹೋಗೊವಾಗ ಹಿಂದೆ ಬರಬೇಡಿ, ಅಕಸ್ಮಾತ್ ಆಕ್ಸಿಡೆಂಟ್ ಆಗಿ ಹೆಚ್ಚು ಕಮ್ಮಿ ಆದ್ರೆ ನಿಮ್ಮ ಕುಟುಂಬದ ಗತಿ ಏನು ಎಂದು ಅಭಿಮಾನಿಗಳಿಗೆ ಪ್ರೀತಿಯಿಂದ ಕಾಳಜಿಯಿಂದ ಬುದ್ಧಿವಾದ ಹೇಳಿದ್ದ ಈ ಮೈಸೂರಿನ ಆರಡಿಯ ತೂಗುದೀಪ ಎಂದು ಹೇಳಿದ್ದಾರೆ.


    ಇಂತಹ ವ್ಯಕ್ತಿಯಿಂದ ಇಂತಹ ತಪ್ಪಾಯಿತೆಂದರೆ ನಂಬಲಸಾಧ್ಯ. ಅದೇನೆ ಆದರೂ ಕಾನೂನು ಇದೆ ನೋಡಿಕೊಳ್ಳುತ್ತೆ. ತಪ್ಪು ಮಾಡಿಲ್ಲವಾದರೆ ಅವರ ದಾನಧರ್ಮಗಳೇ ಅವರನ್ನ ಕಾಪಾಡುತ್ತೆ. ಕಾನೂನಿನ ಮುಂದೆ ನಾವೆಲ್ಲರೂ ಚಿಕ್ಕವರೆ. ಸದ್ಯಕ್ಕಿನ್ನು ಆರೋಪಿಯಷ್ಟೆ ಅಪರಾಧಿಯಾಗಿಲ್ಲ. ಮುಂದೆ ಕಾದು ನೋಡೋಣ. ಇನ್ನು ಈ ಅನಾಹುತಕ್ಕೆ ಬಲಿಯಾದ ರೇಣುಕಾಸ್ವಾಮಿಗೂ ಅವರ ಕುಟುಂಬಕ್ಕೂ ಆ ದೇವರು ದುಃಖವನ್ನು ಭರಿಸೊ ಶಕ್ತಿ ನೀಡಲಿ. ಅವರು ಮಾಡಿದ್ದು ಸಹ ತಪ್ಪೇ ಆದರೂ ಈರೀತಿಯ ಶಿಕ್ಷೆ ಸರಿಯಲ್ಲ. ಕಾನೂನಿನ ಪ್ರಕಾರವೇ ರೇಣುಕಾಸ್ವಾಮಿಗೆ ಶಿಕ್ಷೆ ಕೊಡಿಸೊ ಬದಲು ಯಾರೋ ಜೀವ ತೆಗೆದಿದ್ದು ಅಕ್ಷಮ್ಯ ಅಪರಾಧ. ತಂದೆಯಾಗುವ ಮೊದಲೇ ಕಣ್ ಮುಚ್ಚಿದ ರೇಣುಕಾಸ್ವಾಮಿ ಮತ್ತೆ ಮಗುವಾಗಿ ಹೆಂಡತಿಯ ಹೊಟ್ಟೆಯಲ್ಲಿ ಹುಟ್ಟಲಿ ಅನ್ನೋದೇ ನಮ್ಮ ಹಾರೈಕೆ. ಕ್ಷಮಿಸಿ ಎಂದು ನಟಿ ಬರೆದುಕೊಂಡಿದ್ದಾರೆ.

    ಈ ಪ್ರಕರಣದಲ್ಲಿ ದರ್ಶನ್ ಕುಟುಂಬಕ್ಕೆ ಶಾಪ ಹಾಕಿದರೆ ಪ್ರಯೋಜನವೇನು. ನನ್ನ ತಂದೆ ಒಬ್ಬ ದೊಡ್ಡ ಸ್ಟಾರ್ ಅನ್ನೋದು ಸಹ ಗೊತ್ತಿಲ್ಲದ ಆ ಹಾಲುಗಲ್ಲದ ಮುದ್ದು ಹುಡುಗ ವಿನೀಶ್ ನೋಡಿದರೆ ಸಂಕಟವಾಗದಿರುವುದೆ ಫಾದರ್ಸ್ ಡೇ ದಿನ ತಂದೆಯನ್ನು ನೆನೆದು ವಿನೀಶ್ ಹಾಕಿದ ಪೋಸ್ಟ್ಗೆ ಮನಕಲಕದೆ ಇರುವುದೇ ಜೊತೆಗೆ ದರ್ಶನ್ ಜೀವನಕ್ಕೆ 22 ವರ್ಷದಿಂದ ವಿಜಯವೂ ಆಗಿ ಲಕ್ಷ್ಮಿಯೂ ಆಗಿರುವ ವಿಜಯಲಕ್ಷ್ಮಿಯವರನ್ನು ತಪ್ಪಿತಸ್ಥರಂತೆ ಕಾಣೋದು ಸರಿಯೇ ಇಂತಹ ಸಂದರ್ಭದಲ್ಲಿ ಅವರಿಬ್ಬರಿಗೂ ಧೈರ್ಯ ಹೇಳಬೇಕೇ ಹೊರತು ಹೀಯಾಳಿಸುವುದು ಬೇಡ ಎಂದು ನಟಿ ಹೇಳಿದ್ದಾರೆ.

    ಅಂದಹಾಗೆ, ಪ್ರಾರ್ಥನ, ಮಹಾನುಭಾವರು, ಖಡಕ್, ಬೆಂಗಳೂರು ಇನ್, ಕರ್ಷಣಂ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಷಾ ರೈ ನಟಿಸಿದ್ದಾರೆ.

  • ಈ ಸಿನಿಮಾದ ಕಥಾನಾಯಕ ಬದುಕಿದ್ದಾರೆ, ಸಿನಿಮಾ ನೋಡೋಕೆ ಬರ್ತಾರೆ

    ಈ ಸಿನಿಮಾದ ಕಥಾನಾಯಕ ಬದುಕಿದ್ದಾರೆ, ಸಿನಿಮಾ ನೋಡೋಕೆ ಬರ್ತಾರೆ

    .ಆರ್.ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿ ಆಕ್ಷನ್ ಕಟ್ ಹೇಳಿರುವ, ವಿನೂತನ ಶೀರ್ಷಿಕೆ ಹೊಂದಿರುವ ’ಧೈರ್ಯಂ ಸರ್ವತ್ರ ಸಾಧನಂ’ (ಡಿಎಸ್‌ಎಸ್) ಚಿತ್ರದ ಟೀಸರ್ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಎ.ಪಿ.ಪ್ರೊಡಕ್ಷನ್ ಅಡಿಯಲ್ಲಿ ಉದ್ಯಮಿ ಆನಂದ್ ಬಾಬು.ಜಿ ನಿರ್ಮಾಣ ಮಾಡಿದ್ದಾರೆ.  ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಇವರುಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಇದಕ್ಕೂ ಮುನ್ನ ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಟ್ರೇಲರ್ ಲೋಕಾರ್ಪಣೆಗೊಳಿಸಿ ಅಭಿನಂದಿಸಿದ ತುಣುಕುಗಳು ಪರದೆ ಮೇಲೆ ಬಿತ್ತರಗೊಂಡಿತು.

    ನಂತರ ಸಿನಿಮಾ ಹುಟ್ಟಿಕೊಂಡ ಬಗೆಯನ್ನು ಅಣುಕು ಪ್ರದರ್ಶನದ ಮೂಲಕ ಕಲಾವಿದರು, ತಂತ್ರಜ್ಞರು ತೋರಿಸಿದ್ದು ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಬಿಡಿ ಭಾಗಗಳು ಕೂಡಿಕೊಂಡು ಗನ್ ಆಗಿದೆ. ಒಬ್ಬೊಬ್ಬರೆ ಸೇರಿಕೊಂಡು ಚಿತ್ರ ಸಿದ್ದಗೊಂಡಿದೆ. ವಿಶೇಷವೆಂದರೆ ಇದೊಂದು ಸತ್ಯ ಘಟನೆಯ ಅಂಶಗಳನ್ನು ಒಳಗೊಂಡಿದೆ. ಯಾರ ಕಥೆ. ಎಲ್ಲಿ ಆಗಿದ್ದು? ಎಂಬುದನ್ನು ಕೊನೆಯಲ್ಲಿ ಆ ವ್ಯಕ್ತಿಗಳ ಭಾವಚಿತ್ರ ಹಾಗೂ ಪೂರ್ಣ ವಿವರವು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಈಗಾಗಲೇ ಅವರುಗಳ ಬಳಿ ಅನುಮತಿ ಪಡೆಯಲಾಗಿದೆ. ಘಟನೆ ನಡೆದಂತ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದಷ್ಟು ಜನರು ಭೂಮಿ ಮೇಲೆ ಇರುವುದಿಲ್ಲ. ನಾಯಕ ಪಾತ್ರಧಾರಿಯು ಬದುಕಿದ್ದು, ಅವರು ಚಿತ್ರ ನೋಡಲು ಬರುತ್ತಾರೆ. ಮಾಧ್ಯಮದವರು ಪ್ರೋತ್ಸಾಹ ನೀಡಬೇಕೆಂದು ಕೋರಿಕೊಂಡರು.

    ನಿರ್ದೇಶಕ ಹಾಗೂ ನಾಯಕನ ಅಮ್ಮನಿಗೆ ಭರವಸೆ ನೀಡಿದಂತೆ ನಿರ್ಮಾಣ ಮಾಡಿರುವುದಾಗಿ ಆನಂದ್‌ಬಾಬು ಹೇಳಿಕೊಂಡರು. ನಾಯಕನಾಗಿ ವಿವಾನ್.ಕೆ.ಕೆ, ನಾಯಕಿಯಾಗಿ ಅನುಷಾ ರೈ. ವಿಶಿಷ್ಟ ಪಾತ್ರಗಳಲ್ಲಿ ಯಶ್‌ ಶೆಟ್ಟಿ, ಬಲರಾಜವಾಡಿ, ಚಕ್ರವರ್ತಿ ಚಂದ್ರಚೂಡ್, ವರ್ಧನ್, ಪ್ರದೀಪ್‌ ಪೂಜಾರಿ ರಾಮ್‌ ಪವನ್. ಉಳಿದಂತೆ ಮೀನಾ, ಪದ್ಮಿನಿ ಶೆಟ್ಟಿ, ಅರ್ಜುನ್‌ ಪಾಳೆಗಾರ, ರಾಮ್‌ ನಾಯಕ್, ಹೊಂಗಿರಣ ಚಂದ್ರು ಮತ್ತು ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

    ಹೃದಯಶಿವ, ಕಿನ್ನಾಳ್‌ ರಾಜ್, ಅರಸು ಅಂತಾರೆ ಸಾಹಿತ್ಯದ ಐದು ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ರವಿಕುಮಾರ್ ಸನಾ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಕುಂಗುಫು ಚಂದ್ರು ಸಾಹಸ, ಕ್ಯಾಪ್ಟನ್ ಕಿಶೋರ್ ನೃತ್ಯ ಇರಲಿದೆ. ತುಮಕೂರು, ಕೊರಟಗೆರೆ, ದೇವರಾಯನದುರ್ಗ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ.