Tag: Anusha

  • BBK 11: ಲವ್ ಬರ್ಡ್ಸ್ ಆಗಿದ್ದ ಧರ್ಮ, ಅನುಷಾ ನಡುವೆ ವಾರ್

    BBK 11: ಲವ್ ಬರ್ಡ್ಸ್ ಆಗಿದ್ದ ಧರ್ಮ, ಅನುಷಾ ನಡುವೆ ವಾರ್

    ‘ಬಿಗ್ ಬಾಸ್’ ಮನೆಯಲ್ಲಿ (Bigg Boss Kannada 11) ಲವ್ ಬರ್ಡ್ಸ್ ಆಗಿದ್ದ ಧರ್ಮ ಮತ್ತು ಅನುಷಾ ನಡುವೆ ಕಿರಿಕ್ ಆಗಿದೆ. ಇದೀಗ ದೊಡ್ಮನೆಯಲ್ಲಿ ಕೊಟ್ಟ ಜೋಡಿ ಟಾಸ್ಕ್‌ನಿಂದಲೇ ಇಬ್ಬರ ಸಂಬಂಧಕ್ಕೆ ಹುಳಿ ಹಿಂಡಿದಂತೆ ಆಗಿದೆ. ನಾಮಿನೇಷನ್ ಪ್ರಕ್ರಿಯೆ ವೇಳೆ, ಧರ್ಮನ (Dharma) ವಿರುದ್ಧ ಅನುಷಾ (Anusha Rai) ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ತಾಯಿಯಾಗುವ ಹಂಬಲದಲ್ಲಿ ಸ್ಯಾಮ್- 2ನೇ ಮದುವೆ ಬಗ್ಗೆ ಸುಳಿವು ನೀಡಿದ್ರಾ ನಟಿ?

    ಬಿಗ್ ಬಾಸ್ ನೀಡಿದ ಟಾಸ್ಕ್‌ನಂತೆ ಮನೆಯಲ್ಲಿ ನೇರ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಮೊದಲು ಧನರಾಜ್ ಅವರು, ಗೋಲ್ಡ್ ಸುರೇಶ್ ಹಾಗೂ ಅನುಷಾ ಹೆಸರನ್ನು ತೆಗೆದುಕೊಳ್ತಾರೆ. ಐಶ್ವರ್ಯಾ, ಗೌತಮಿ, ಚೈತ್ರಾ, ಧರ್ಮ, ಮೋಕ್ಷಿತಾ ಸೇರಿದಂತೆ ಬಹುತೇಕ ಸ್ಪರ್ಧಿಗಳು ಅನುಷಾ ಮತ್ತು ಸುರೇಶ್‌ರನ್ನು ನಾಮಿನೇಟ್ ಮಾಡುತ್ತಾರೆ.

    ಇದಕ್ಕೆ ಅನುಷಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ಪ್ರಶ್ನೆಗಳನ್ನು ಕೇಳುತ್ತಾರೆ. ಮೋಕ್ಷಿತಾ ಅವರೇ ನೀವು ಎಷ್ಟು ಮನರಂಜನೆ ನೀಡಿದ್ದೀರಾ ಎಂದು ತರಾಟೆಗೆ ತೆಗೆದುಕೊಳ್ತಾರೆ. ನಂತರ ಧರ್ಮ ವಿಚಾರಕ್ಕೆ ಬರುತ್ತಾರೆ. ಅಗ್ರೇಷನ್ ಕಮ್ಮಿ ಆಯ್ತು ಎಂದು ನನಗೆ ಕೇಳ್ತೀರಿ. ನಿಮಗೆ ಎಷ್ಟು ಅಗ್ರೇಷನ್ ಇದೆ ಧರ್ಮ ನೀವು ಏನೂ ಆಟ ಆಡಿಯೇ ಇಲ್ಲ. ನೀವು ಆಟದಲ್ಲಿ ಎಷ್ಟು ಇನ್ವಾಲ್ ಆಗಿದ್ದೀರಾ ಎಂದು ತೀವ್ರವಾಗಿ ವಾದ ಮಂಡಿಸುತ್ತಾರೆ. ಈ ವೇಳೆ, ಸಮರ್ಥನೆ ಮಾಡಿಕೊಳ್ಳಲು ಹೋದ ಧರ್ಮ ಅವರು ನಾನೇ ಹೇಳ್ತಿದ್ದೀನಲ್ಲ, ಕಳೆದ ಎಪಿಸೋಡ್‌ನಲ್ಲಿ ಎಲ್ಲರೂ ನಾಲಾಯಕ್ ಎಂದು ಕ್ಯಾಕರಿಸಿ ಉಗಿದಿದ್ದಾರಲ್ಲ ಎಂದು ಮಾತನಾಡುತ್ತಾರೆ.

    ಅನುಷಾ ಮತ್ತು ಧರ್ಮ ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಚೆನ್ನಾಗಿಯೇ ಇದ್ದರು. ನಾಮಿನೇಷನ್‌ನಲ್ಲಿ ಧರ್ಮ ಆಡಿದ ಮಾತು ಅನುಷಾಗೆ ನೋವಾಗಿದೆ. ಅವರ ಮುನಿಸಿಗೆ ಕಾರಣವಾಗಿದೆ. ಹಾಗಾಗಿ ಧರ್ಮನ ವಿರುದ್ಧ ಅವರು ತಿರುಗಿ ಬಿದ್ದಿದ್ದಾರೆ. ಚೆನ್ನಾಗಿದ್ದ ಅನುಷಾ- ಧರ್ಮ ಜಗಳ ಅಕ್ಷರಶಃ ಮನೆ ಮಂದಿಗೂ ಶಾಕ್ ಕೊಟ್ಟಿದೆ.

    ಇನ್ನೂ ಅಂತಿಮವಾಗಿ ಸ್ಪರ್ಧಿಗಳ ಬಹುಮತದ ಮೇರೆಗೆ ಈ ವಾರ ಮನೆಯಿಂದ ಹೊರ ಹೋಗಲು ಅನುಷಾ ಮತ್ತು ಗೋಲ್ಡ್ ಸುರೇಶ್ ನೇರವಾಗಿ ನಾಮಿನೇಟ್ ಆಗಿದ್ದಾರೆ.

  • ಅಕ್ಕನ ಮದುವೆಯಲ್ಲಿ ಮಿಂಚಿದ ಚುಟು ಚುಟು ಸುಂದರಿ ಆಶಿಕಾ

    ಅಕ್ಕನ ಮದುವೆಯಲ್ಲಿ ಮಿಂಚಿದ ಚುಟು ಚುಟು ಸುಂದರಿ ಆಶಿಕಾ

    ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ (Ashika Ranganath) ಅವರು ಅಕ್ಕನ ಮದುವೆಯಲ್ಲಿ ಮಿಂಚಿದ್ದಾರೆ. ಜನವರಿ 22ರಂದು ಆಶಿಕಾ ಸಹೋದರಿ ಅನುಷಾ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ಚುಟು ಚುಟು ನಟಿ ಆಶಿಕಾ ಅವರು ಅಕ್ಕನ ಮದುವೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆ ಹುಡುಗಿ ಅನುಷಾ, ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ಲೈಟ್ ಬಣ್ಣದ ಹಾಫ್ ಸೀರೆಯಲ್ಲಿ ಆಶಿಕಾ ಕಂಗೊಳಿಸಿದ್ದಾರೆ. ಅನುಷಾ- ಶ್ರವಣ್ ಮದುವೆ ಜ.22ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಡೆದಿದೆ.

    ಇನ್ನೂ ಅನುಷಾರ ಮದುವೆಯಲ್ಲಿ ನಟಿ ಸುಶ್ಮಿತಾ, ತಪಸ್ವಿನಿ ಪೂಣಚ್ಚ, ಸಿರಿ, ಕಿರುತೆರೆ ನಟಿ ಲಕ್ಷ್ಮಿ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದರು. ಇದನ್ನೂ ಓದಿ:‘ಗೌರಿಶಂಕರ’ ಸೀರಿಯಲ್‌ಗೆ ಗುಡ್‌ ಬೈ ಹೇಳಿದ ಕೌಸ್ತುಭ ಮಣಿ

    ಆಶಿಕಾ ರಂಗನಾಥ್‌ಗೆ ಕನ್ನಡ, ತೆಲುಗಿನಲ್ಲಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆಶಿಕಾ ಅಕ್ಕ ಅನುಷಾ ಅವರು ‘ಗೋಕುಲದಲ್ಲಿ ಸೀತೆ’ (Gokuladali Seethe) ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು.

    ಅನುಷಾ (Anusha) ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ತಂಗಿ ಆಶಿಕಾರಂತೆ ಅವರಿಗೆ ಹೇಳಿಕೊಳ್ಳುವಂತಹ ಅವಕಾಶ ಸಿಕ್ಕಿಲ್ಲ.

  • ಗೆಳತಿಯ ಜೊತೆ ಸಪ್ತಪದಿ ತುಳಿದ ಪುಟ್ಟಗೌರಿ ಮಹೇಶ್

    ಗೆಳತಿಯ ಜೊತೆ ಸಪ್ತಪದಿ ತುಳಿದ ಪುಟ್ಟಗೌರಿ ಮಹೇಶ್

    ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್‍ವುಡ್‍ನಲ್ಲಿ ಕಿರುತೆರೆ ನಟ-ನಟಿಯರು ದಾಂಪತ್ಯ ಜೀನವಕ್ಕೆ ಕಾಲಿಡುತ್ತಿದ್ದಾರೆ. ಇದೀಗ `ಪುಟ್ಟಗೌರಿ ಮದುವೆ’ ಧಾರಾವಾಹಿಯ ಖ್ಯಾತಿಯ ಕಿರುತೆರೆ ನಟ ರಕ್ಷ್ ತಮ್ಮ ಗೆಳತಿಯ ಜೊತೆ ಸಪ್ತಪದಿ ತುಳಿದಿದ್ದಾರೆ.

    ನಟ ರಕ್ಷ್ ತಮ್ಮ ಗೆಳತಿ ಅನುಷಾ ಅವರನ್ನು ಮದುವೆಯಾಗಿದ್ದಾರೆ. ದಿನಾಂಕ 26 ರಂದು ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಲ್‍ನಲ್ಲಿ ರಕ್ಷ್ ಮತ್ತು ಅನುಷಾ ಅವರು ಕುಟುಂಬದವರ ಸಮ್ಮಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಇವರ ಮದುವೆ ಕಾರ್ಯಕ್ರಮಕ್ಕೆ ಕಿರುತೆರೆ ನಟಿ ರಂಜನಿ ರಾಘವನ್, ಅನುಪಮಾ ಗೌಡ ಸೇರಿದಂತೆ ಅನೇಕರು ಬಂದು ನವಜೋಡಿಗೆ ಹಾರೈಸಿದ್ದಾರೆ. ಇದೀಗ ಇವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಇತ್ತೀಗಷ್ಟೆ ರಕ್ಷ್ ತಾನೂ ಮದುವೆಯಾಗುತ್ತಿರುವುದಾಗಿ ಇನ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. “ಹೌದು. ನಾನು ಮದುವೆಯಾಗುತ್ತಿದ್ದೇವೆ. ಇದು ನನ್ನ ಪ್ರೀತಿಯ ಜನರಿಗೆ ಮದುವೆಯ ಆಮಂತ್ರಣ ಪತ್ರಿಕೆಯಾಗಿದೆ. ಇದೇ ತಿಂಗಳ ದಿನಾಂಕ 26ರಂದು ನನ್ನ ವಿವಾಹ ಇದೆ. ನೀವೆಲ್ಲರೂ ಬಂದು ಆಶೀರ್ವಾದಿಸಬೇಕು” ಎಂದು ಬರೆದುಕೊಂಡು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದರು.

    https://www.instagram.com/p/Bx6z2_nHTF9/

    ನಟ ರಕ್ಷ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಮಹೇಶ್ ಪಾತ್ರ ಮಾಡಿದ್ದು, ಪ್ರೇಕ್ಷಕರ ಮನ ಗೆದ್ದಿದ್ದರು. ಕೆಲವು ದಿನಗಳ ಹಿಂದೆ ರಕ್ಷಿತ್ ಎಂಬ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದರು. ಇದೀಗ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ರಕ್ಷ್ ನಟಿಸುತ್ತಿದ್ದಾರೆ.

  • ಕರಾವಳಿಯಲ್ಲಿ ಮತ್ತೆ ಪೊಲೀಸ್ ನೈತಿಕಗಿರಿ – ತಮಿಳು ನಟಿಗೆ ಪೊಲೀಸ್, ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆ

    ಕರಾವಳಿಯಲ್ಲಿ ಮತ್ತೆ ಪೊಲೀಸ್ ನೈತಿಕಗಿರಿ – ತಮಿಳು ನಟಿಗೆ ಪೊಲೀಸ್, ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆ

    ಮಂಗಳೂರು: ತಮಿಳು ಚಿತ್ರನಟಿ ಅನುಷಾ ಜೊತೆಗೆ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಮುಸ್ಲಿಂ ಯುವಕ ಪರ್ವೇಜ್ ಎಂಬಾತನ ಮೇಲೆ ಹಿಂದು ಸಂಘಟನೆ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನೆಪದಲ್ಲಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

    ಡಿ. 21 ರಂದು ಘಟನೆ ನಡೆದಿದ್ದು ಆಬಳಿಕ ಸುಬ್ರಹ್ಮಣ್ಯ ಠಾಣೆ ಪೊಲೀಸರು ಕೂಡ ಪರ್ವೇಜ್ ಮೇಲೆ ಹಲ್ಲೆ ನಡೆಸಿದ್ದಾಗಿ ಚಿತ್ರನಟಿ ಅನುಷಾ ಆರೋಪಿಸಿದ್ದಾರೆ. ಈ ಬಗ್ಗೆ ವಾಟ್ಸಪ್ ಮೆಸೇಜ್ ನಲ್ಲಿ ತನ್ನ ಹೇಳಿಕೆ ಪ್ರಕಟಿಸಿರುವ ಅನುಷಾ, `ತಾನು ಪೂಜೆಗೆಂದು ಸುಬ್ರಹ್ಮಣ್ಯಕ್ಕೆ ಬಂದಿದ್ದೆ. ಪರ್ವೇಜ್ ಕೇವಲ ಫ್ರೆಂಡ್ ಆಗಿದ್ದು, ಬೇರೆ ಯಾವುದೇ ಸಂಬಂಧ ಇಲ್ಲ. ಠಾಣೆಯಲ್ಲಿ ಈ ಬಗ್ಗೆ ಹೇಳಿದ್ದರೂ ಕೇಳದೆ ಪರ್ವೇಜ್ ಮತ್ತು ತನ್ನ ಮೇಲೆ ಹಲ್ಲೆ’ ನಡೆಸಿದ್ದಾಗಿ ಆರೋಪ ಮಾಡಿದ್ದಾರೆ.

    ಇದೀಗ ನಟಿಯ ಹೇಳಿಕೆ ವೈರಲ್ ಆಗಿದ್ದು, ಪೊಲೀಸರು ಲವ್ ಜಿಹಾದ್ ನೆಪದಲ್ಲಿ ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿದೆ.