Tag: Anuradha Rai

  • ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ – ವಿಚಾರಣೆ ಬಳಿಕ ಮುತ್ತಪ್ಪ ರೈ 2ನೇ ಪತ್ನಿ ಪ್ರತಿಕ್ರಿಯೆ

    ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ – ವಿಚಾರಣೆ ಬಳಿಕ ಮುತ್ತಪ್ಪ ರೈ 2ನೇ ಪತ್ನಿ ಪ್ರತಿಕ್ರಿಯೆ

    – ಸತತ 6 ಗಂಟೆ ವಿಚಾರಣೆ ಎದುರಿಸಿದ ಅನುರಾಧ ರೈ

    ರಾಮನಗರ: ರಿಕ್ಕಿ ರೈ (Ricky Rai) ಮೇಲೆ ಫೈರಿಗ್ ಪ್ರಕರಣ ಸಂಬಂಧ ಇಂದು ಪ್ರಕರಣದ ಎ2 ಆರೋಪಿ ಅನುರಾಧ ರೈ (Anuradha Rai) ಬಿಡದಿ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ. ಸತತ 6 ಗಂಟೆಗಳ ಕಾಲ ಬಿಡದಿ ಇನ್ಸ್‌ಪೆಕ್ಟರ್ ಶಂಕರ್ ನಾಯಕ್‌ ಅವರು ಅನುರಾಧ ರೈರನ್ನ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

    ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅನುರಾಧ ಅವರು, ಪೊಲೀಸರು ವಿಚಾರಣೆಗೆ ಕರೆದಿದ್ರು, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೀನಿ. ಪೊಲೀಸರ ಮೇಲೆ ನಂಬಿಕೆ ಇದೆ. ಇದರಲ್ಲಿ ಯಾರಿದ್ದಾರೋ, ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ನಮ್ಮ ಪಾತ್ರ ಇದರಲ್ಲಿ ಏನು ಇಲ್ಲ. ಯಾಕೆ ನನ್ನ ಮೇಲೆ ಕಂಪ್ಲೆಂಟ್ ಕೊಟ್ಟಿದ್ದಾರೊ ಎಂಬುದನ್ನ ಅವರನ್ನೇ ಕೇಳಬೇಕು ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಪಾಕ್‌ನಿಂದ ಆಮದಾಗ್ತಿದ್ದ ಡ್ರೈಫ್ರೂಟ್ಸ್‌ ಪೂರೈಕೆಯಲ್ಲಿ ವ್ಯತ್ಯಯ – ಬೆಲೆ ಏರಿಕೆ ಆತಂಕ!

    ಫೈರಿಂಗ್‌ ಪ್ರಕರಣದಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಜಮೀನು ವ್ಯಾಜ್ಯ ಈ ಹಿಂದೆ ಇತ್ತು, ಅದು ರಾಜೀ ಆಗಿದೆ. ಕೋರ್ಟ್ ನಲ್ಲಿ ಸುಖಾಂತ್ಯವಾಗಿ ಕೇಸ್ ಮುಗಿದಿದೆ. ನಮಗೂ ಅವರಿಗೂ ಯಾವುದೇ ಸಂಬಂಧ ಇಲ್ಲ. ಪೊಲೀಸರು ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ನಂಬಿಕೆ ಇದೆ. ಅಕ್ಟೋಬರ್ ನಲ್ಲಿ ನಾನು ರಿಕ್ಕಿ ರೈ ನೋಡಿದ್ದು. 6 ತಿಂಗಳ ಹಿಂದೆ ಕೋರ್ಟ್‌ನಲ್ಲಿ ಸಹಿ ಮಾಡುವಾಗ ನೋಡಿದ್ದೆ‌. ಅದಾದಮೇಲೆ ನಾನು ನೋಡಿಯೂ ಇಲ್ಲ, ಸಂಪರ್ಕ ಕೂಡ ಇಲ್ಲ. ಪೊಲೀಸರು ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದು ಅನುರಾಧ ರೈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ – ಬೆಂಗಳೂರು ಮೂಲದ ವ್ಯಕ್ತಿ ಸಾವು!

  • ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?

    ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?

    ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ (Muthappa Rai) ಬೆಂಗಳೂರು (Bengaluru), ಬಿಡದಿ, ಕರಾವಳಿ ಪ್ರದೇಶ, ದುಬೈ, ರಷ್ಯಾ ಸೇರಿದಂತೆ ಹಲವು ಕಡೆಗಳಲ್ಲಿ ಸುಮಾರು 2,000 ಕೋಟಿಗೂ ಹೆಚ್ಚು ಆಸ್ತಿ ಮಾಡಿದ್ದಾರೆ ಎಂದು ಕೆಲ ಆಪ್ತ ಮೂಲಗಳು ತಿಳಿಸಿವೆ.

    ಮುತ್ತಪ್ಪ ರೈ ಮೊದಲ ಪತ್ನಿ ರೇಖಾ ರೈ ಸಾವನ್ನಪ್ಪಿದ ನಂತರ ಅನುರಾಧ ರೈ ಅನ್ನೋರನ್ನ 2ನೇ ಮದುವೆ ಮಾಡಿಕೊಂಡಿದ್ರು. ಆದರೆ ಮುತ್ತಪ್ಪ ರೈಗೆ ಅನಾರೋಗ್ಯ ಸಮಸ್ಯೆ ಶುರುವಾಗ್ತಿದ್ದಂತೆ. ಆಸ್ತಿ ಸಂಬಂಧ ಗಲಾಟೆಗಳು ಶುರುವಾಗಿದ್ದವು. ಕೋರ್ಟ್‌ನಲ್ಲಿ ರಾಜೀ ಆಗಿದ್ದರೂ ಮತ್ತೆ ಮತ್ತೆ ವಿವಾದ ನಡೆಯುತ್ತಲೇ ಇತ್ತು.

    ಮುತ್ತಪ್ಪ ರೈ ಅವರು ಸಾಯುವ ಮುನ್ನವೇ ತನ್ನ ಆಸ್ತಿಯ ಬಗ್ಗೆ ವಿಲ್ ಬರೆದು ಇಟ್ಟಿದ್ದರು. ಇದರಲ್ಲಿ ಅವರ ಆಸ್ತಿ ಯಾರಿಗೇ ಸೇರಬೇಕು ಮತ್ತು ಎಷ್ಟು ಸೇರಬೇಕು ಎಂದು ತಿಳಿಸಿದ್ದರು. ಹೀಗಿದ್ದರೂ ಅವರ ಸಾವಿನ ಬಳಿಕ ಅವರ ಎರಡನೇ ಪತ್ನಿ ಅನುರಾಧಾ ಪಾಲು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆಯೇ ಎರಡನೇ ಪತ್ನಿ ಅನುರಾಧಾಗೆ ಚಿನ್ನಾಭರಣ, ಕಾರು, ಕೋಟ್ಯಂತರ ರೂಪಾಯಿ ಹಣದ ಜೊತೆ ಹೆಚ್ ಡಿ ಕೋಟೆ ಆಸ್ತಿ, ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅನುರಾಧಾ ಜೊತೆಗಿದ್ದ ಸಂದರ್ಭದಲ್ಲಿ ಅವರಿಗೆ ಸೇರಬೇಕಾದ ಆಸ್ತಿಯನ್ನು ನೀಡಲಾಗಿದೆ ಎಂದು ವಿಲ್‍ನಲ್ಲಿ ಉಲ್ಲೇಖವಾಗಿದೆ.

    ಆಸ್ತಿ ಎಷ್ಟಿದೆ?
    ವಿಲ್ ಪ್ರಕಾರ ಸುಮಾರು 2 ಸಾವಿರ ಕೋಟಿಗೂ ಅಧಿಕ ಆಸ್ತಿ ರೈ ಹೆಸರಿನಲ್ಲಿದೆ. ದೇವನಹಳ್ಳಿ, ಯಲಹಂಕ, ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ, ಮೈಸೂರು, ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ನೂರಾರು ಎಕರೆ ಜಮೀನು ಮುತ್ತಪ್ಪ ರೈ ಹೆಸರಿನಲ್ಲಿದೆ. ಸಕಲೇಶಪುರದಲ್ಲಿ 200 ಎಕರೆ ಜಮೀನಿದೆ.

    ಹಂಚಿಕೆ ಹೇಗೆ?
    ಒಟ್ಟು 600ಕ್ಕೂ ಅಧಿಕ ಎಕರೆ ಜಮೀನನ್ನು ತನ್ನಿಬ್ಬರು ಮಕ್ಕಳಾದ ರಿಕ್ಕಿ ಹಾಗೂ ರಾಖಿ ರೈಗೆ ಗಿಫ್ಟ್ ಡೀಡ್ ಮಾಡಿದ್ದಾರೆ. ಆಸ್ತಿಗಳ ಪೈಕಿ ಮೈಸೂರು, ಪುತ್ತೂರು, ಬಂಟ್ವಾಳ, ಮಂಗಳೂರು ಜಾಗವನ್ನು ರಾಖಿ ರೈಗೆ ನೀಡಿದ್ದರೆ, ಸಕಲೇಶಪುರ, ಬಿಡದಿ, ಯಲಹಂಕ ಹಾಗೂ ದೇವನಹಳ್ಳಿ ಜಾಗವನ್ನು ಚಿಕ್ಕ ಮಗ ರಿಕ್ಕಿ ರೈಗೆ ಹಂಚಿಕೆ ಮಾಡಿದ್ದಾರೆ. ಆಪ್ತರು, ಸಂಬಂಧಿಕರಿಗೆ ಶೇ.20 ರಷ್ಟು ಆಸ್ತಿ ನೀಡಬೇಕೆಂದು ಸೂಚಿಸಿದ್ದಾರೆ. ಬಿಡದಿ ಹಾಗೂ ಸದಾಶಿವನಗರದ ಎರಡೂ ಮನೆಗಳ ಜವಾಬ್ದಾರಿಯನ್ನು ಚಿಕ್ಕ ಮಗ ರಿಕ್ಕಿ ರೈಗೆ ನೀಡಿದ್ದು ಟ್ರೇಡಿಂಗ್ ವ್ಯವಹಾರ ಕಂಪನಿಯನ್ನು ದೊಡ್ಡ ಮಗ ರಾಖಿ ನೋಡಿಕೊಳ್ಳುವಂತೆ ಸೂಚಿಸಿದ್ದರು.

    ಕೆಲಸಗಾರರಿಗೆ ಸೈಟ್:
    ನಂಬಿಕೆಯಿಂದ 15 ವರ್ಷಗಳ ಕಾಲ ತನ್ನ ಬಳಿ ಕೆಲಸ ಮಾಡಿದ 25 ಕೆಲಸಗಾರರಿಗೆ ಒಂದೊಂದು ಸೈಟ್ ಹಾಗೂ ಕೈಲಾದಷ್ಟು ಹಣ ನೀಡುವಂತೆ ಕಿರಿಯ ಮಗ ರಿಕ್ಕಿ ರೈಗೆ ಸೂಚಿಸಿದ್ದರು. ತಂದೆಯ ಸೂಚನೆಯಂತೆ ರಿಕ್ಕಿ ತಲಾ ಒಬ್ಬೊಬ್ಬರಿಗೆ 3 ಲಕ್ಷ ರೂಪಾಯಿಗಳನ್ನು ಹಂಚಿಕೆ ಮಾಡಿದ್ದರು.